ಅಭಿಪ್ರಾಯ / ಸಲಹೆಗಳು

ಅಶೋಕ ನಗರ ಪೊಲೀಸ್‌ ಠಾಣೆ :-  ದಿನಾಂಕ:15.07.2022 ರಂದು 04:30 ಪಿ.ಎಂ.ಕ್ಕೆ ಫಿರ್ಯಾದಿ ಶ್ರೀಮತಿ ಸುಜಾತಾ ಗಂಡ ಜಗನ್ನಾಥ ಸಿದ್ದಗೊಂಡ ವಯ: 45 ವರ್ಷ ಜಾ: ಎಸ್.ಟಿ (ಗೊಂಡ) ಉ: ಮನೆ ಕೆಲಸ ಸಾ|| ಶೆಡೋಳ ತಾ|| ಹುಮನಾಬಾದ ಹಾ|| ವ|| ಡಿ.ಎ.ಆರ್ ಹೆಡ್ ಕ್ವಾಟರ್ಸ ಬೀದರ ಇವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿ ಸಲ್ಲಿಸಿದ್ದರ ಸಾರಾಂಶವೆನೆಂದರೆ,  ನನ್ನ ಗಂಡ ಜಗನ್ನಾಥ ಇವರು ಬೀದರನಲ್ಲಿ ಡಿ.ಎ.ಆರ್. ಪೊಲೀಸ್ ಹೆಡ್ ಕಾಸ್ಟೇಬಲ್ ಎ.ಹೆಚ್.ಸಿ-54 ಅಂತ ಕರ್ತವ್ಯ ನಿರ್ವಹಿಸಿಕೊಂಡು ಇದ್ದರು. ನಮಗೆ ಒಬ್ಬಳು ಹೆಣ್ಣು ಮಗಳು ಮತ್ತು 2 ಜನ ಗಂಡು ಮಕ್ಕಳು ಇರುತ್ತಾರೆ. 3 ಜನರು ವಿದ್ಯಾಭ್ಯಾಸ ಮಾಡಿಕೊಂಡು ಇರುತ್ತಾರೆ.  ಹೀಗಿದ್ದು ನಿನ್ನೆ ದಿನಾಂಕ:14.07.2022 ರಂದು ಬೆಳಿಗ್ಗೆ 08:30 ಗಂಟೆಗೆ ನನ್ನ ಗಂಡ ಜಗನ್ನಾಥ ಇವರು ಕಲಬುರಗಿ ಜಿಲ್ಲೆಗೆ ಟಪಾಲ್ ಕರ್ತವ್ಯಕ್ಕೆ ಹೋಗುತ್ತೇನೆ ಅಂತ ಹೇಳಿ ಮನೆಯಿಂದ ಹೋಗಿರುತ್ತಾರೆ. ನಂತರ ನಿನ್ನೆ ರಾತ್ರಿ 08:30 ಗಂಟೆಗೆ ಮನೆಗೆ ಫೋನಮಾಡಿ ಇಂದು ಕೆಲಸ ಆಗಿಲ್ಲ ನಾಳೆ ಬೆಳಿಗ್ಗೆ ಬರುತ್ತೇನೆ ಅಂತ ಹೇಳಿ ಕಲಬುರಗಿ ನಗರದಲ್ಲಿಯೇ ಉಳಿದುಕೊಂಡಿರುವುದಾಗಿ ತಿಳಿಸಿರುತ್ತಾರೆ. ನಂತರ ಇಂದು ದಿನಾಂಕ:15.07.2022 ರಂದು ಬೆಳಿಗ್ಗೆ 11;30 ಗಂಟೆ ಸುಮಾರಿಗೆ ನಮ್ಮ ಮಗನಾದ ಮಹಾಂತೇಶ ಇತನ ಮೊಬೈಲಗೆ ಫೋನಮಾಡಿ ತಿಳಿಸಿದ್ದೆನೆಂದರೆ, ನಿಮ್ಮ ತಂದೆ ಕಲಬುರಗಿ ನಗರದ ಕೇಂದ್ರ ಬಸ್ ನಿಲ್ದಾಣದ ಹತ್ತಿರ ಇರುವ ಗುರು ಲಾಡ್ಜನಲ್ಲಿ ತೀರಿಕೊಂಡಿರುತ್ತಾರೆ ನೀವು ಬೇಗ ಬರಬೇಕು ಅಂತ ಹೇಳಿರುವ ವಿಷಯವನ್ನು ನನ್ನ ಮಗ ನಮಗೆ ತಿಳಿಸಿದಾಗ ನಾವು ಗಾಬರಿಗೊಂಡು ನಾನು ಮತ್ತು ಮಗ ಆದೇಶ ಹಾಗೂ ಮಗಳು ಲಕ್ಷ್ಮೀ ಎಲ್ಲರೂ ಕೂಡಿಕೊಂಡು ಕಲಬುರಗಿಗೆ ಬಂದಿರುತ್ತೇವೆ. ಇಲ್ಲಿ ಬಂದ ನಂತರ ಕಲಬುರಗಿ ನಗರದ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಹೋಗಿ ಶವಾಗಾರ ಕೋಣೆಯಲ್ಲಿ ಇಟ್ಟಿದ್ದ ನನ್ನ ಗಂಡನ ಶವವನ್ನು ನೋಡಿ ನಾನು ಗುರ್ತಿಸಿದ್ದು ಇರುತ್ತದೆ. ನನ್ನ ಗಂಡ ಜಗನ್ನಾಥ ಇವರು ನಿನ್ನೆ ದಿನಾಂಕ:14.07.2022 ರಂದು ಟಪಾಲ ಕರ್ತವ್ಯ ಕುರಿತು ಕಲಬುರಗಿ ನಗರಕ್ಕೆ ಬಂದು ರಾತ್ರಿ ಗುರು ಲಾಡ್ಜಗೆ ಬಂದು 07:00 ಪಿ.ಎಂ.ಕ್ಕೆ ಉಳಿದಿಕೊಂಡಿದ್ದು ಇಂದು ದಿನಾಂಕ:15.07.2022 ರಂದು 02:30 ಎ.ಎಂ. ಸುಮಾರಿಗೆ ಆಕಸ್ಮಿಕವಾಗಿ ಮೃತಪಟ್ಟಿದ್ದು ನನ್ನ ಗಂಡನ ಮರಣದಲ್ಲಿ ನನಗೆ ಯಾರ ಮೇಲೆಯೂ ಯಾವುದೇ ರೀತಿಯ ಸಂಶಯ ಫಿರ್ಯಾದಿ ಇರುವುದಿಲ್ಲ ಕಾರಣ  ಈ ಬಗ್ಗೆ ಮುಂದಿನ ಕ್ರಮ ಜರುಗಿಸಿ ಧಾರ್ಮಿಕ ಶವ ಸಂಸ್ಕಾರಕ್ಕಾಗಿ ನನ್ನ ಗಂಡನ ಶವವನ್ನು ನನಗೆ ನೀಡಲು ವಿನಂತಿ ಅಂತ ಇತ್ಯಾದಿಯಾಗಿ ಇದ್ದ ಅರ್ಜಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 ರೋಜಾ ಪೊಲೀಸ್‌ ಠಾಣೆ :-  ದಿನಾಂಕ: 15/07/22 ರಂದು ಮಧ್ಯರಾತ್ರಿ ಕೆ.ಬಿ.ಎನ್ ದರ್ಗಾದ ಹಿಂದುಗಡೆ ಖುಲ್ಲಾ ಜಾಗದಲ್ಲಿ ಇಸ್ಪೇಟ್ ಜೂಜಾಟ ಆಡುತ್ತಿರುವವರನ್ನು ಹಿಡಿದು 4 ಜನ ಆರೋಪಿತರಿಗೆ 16.800/- ರೂ 52 ಇಸ್ಪೇಟ್ ಎಲೆಗಳು ಜಪ್ತಿಪಡಿಸಿಕೊಂಡಿರುತ್ತಾರೆ. 4 ಜನ ಆರೋಪಿತರು  ಓಡಿಹೋಗಿರುತ್ತಾರೆ ಅಂತಾ ವರದಿ ಸಾರಾಂಶದ ಆಧಾರದ ಮೇಲಿಂದ ಕಾನೂನು ಕ್ರಮ ಜರುಗಿಸಿದ್ದು ಇರುತ್ತದೆ.

.

ವಿಶ್ವವಿದ್ಯಾಲಯ ಪೊಲೀಸ್‌ ಠಾಣೆ :- ದಿನಾಂಕ ೦೯-೦೭-೨೦೨೨ ರಂದು ಮಧ್ಯಹ್ನ ೧:೩೦ ಪಿ.ಎಮ್ ದಿಂದ ೧:೩೫ ಪಿ.ಎಮ್ಮ ಮಧ್ಯದ ಅವಧಿಯಲ್ಲಿ ಶಹಾಬಾದ ರೋಡ ಎನ್.ಪಿ.ಎಸ್. ಶಾಲೆಯು ಸ್ವಲ್ಪ ಮುಂದುಗಡೆ ಇರುವಾಗಲೆ ನನಗೆ ಬಹಿರ್ದೆಸೆ ಬಂದಾಗ ನಾವು ಕಾರ ರೋಡಿಗೆ ಸೈಡಿಗೆ ನಿಲ್ಲಿಸಿದೆವು ಯರೋ ಇಬ್ಬರು ಅಪರಿಚಿತ ವ್ಯಕ್ತಗಳು ಬಂದು ಫಿರ್ಯಾದಿ ಹತ್ತಿರ ಇದ್ದ ಪರ್ಸದಲ್ಲಿ ಇದ್ದ ೨೫೦೦/- ರೂಪಾಯಿ ನಗದು ಹಣ

೨) ೧೦ ಗ್ರಾಂ ಬಂಗಾರದ ಒಂದು ಉಂಗುರು ಅ.ಕಿ. ೪೫,೦೦೦/- ರೂ

 ೩) ೧೦ ಗ್ರಾಂ ಬಂಗಾರದ ಲಾಕೇಟ ಅ.ಕಿ. ೪೫,೦೦೦/- ರೂ

೪) ೪೦.೭೫೦  ಗ್ರಾಂ ೪.೪೩  ಕ್ಯಾರೇಟ್  ಡೈಮಂಡ ಸರ ಅ.ಕಿ. 5‌,85,000/- ರೂ ಹಿಗೆ ಒಟ್ಟು ಒಟ್ಟು 6,77,500/- ನೇದ್ದವುಗಳನ್ನು ದೋಚಿಕೊಂಢು ಹೋದ ಬಗ್ಗೆ ದೂರು ಇರುತ್ತದೆ.

ಇತ್ತೀಚಿನ ನವೀಕರಣ​ : 17-07-2022 08:36 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080