ಅಭಿಪ್ರಾಯ / ಸಲಹೆಗಳು

ಬ್ರಹ್ಮಪೂರ ಪೊಲೀಸ ಠಾಣೆ :-  ದಿನಾಂಕ:15-03-2023  ರಂದು ಮಧ್ಯಾಹ್ನ ೧:೩೫ ಗಂಟೆಗೆ ಫಿರ್ಯಾದಿದಾರರಾದ ಶ್ರೀ ಗೈಬಿಲಾಲ್ ತಂದೆ ಗುಡುಸಾಬ್ ಮಾಶಿಲ್ದಾರ್ ವಯ:೨೮ವರ್ಷ ಜಾ:ಮುಸ್ಲಿಂ ಉ:ಖಾಸಗಿ ಕೆಲಸ ಸಾ//ಹಿತ್ತಲಶಿರೂರ ಗ್ರಾಮ ಆಳಂದ ತಾಲ್ಲೂಕ ಕಲಬುರಗಿ ಜಿಲ್ಲೆ ರವರು ಠಾಣೆಗೆ ಹಾಜರಾಗಿ ಪಿರ್ಯಾದಿ ನೀಡಿದರ ಸಾರಾಂಶವೆನೆAದರೆ, ನನ್ನದೊಂದು ಸ್ವಂತ ಹಿರೋ ಸ್ಪ್ಲೇಂಡರ್ ಪ್ಲಸ್ ಮೋಟಾರ್ ಸೈಕಲ್ ನಂ ಏಂ-೩೨-ಇಕಿ-೯೪೪೮ ನೇದ್ದು ಇದ್ದು ಸದರಿ ಮೋಟಾರ್ ಸೈಕಲ್ ನನ್ನ ಹೆಸರಿನಲ್ಲಿರುತ್ತದೆ. ಸದರಿ ಮೋಟಾರ್ ಸೈಕಲನ್ನು ದಿನಾಂಕ:೧೪/೦೩/೨೦೨೩ ರಂದು ಸಾಯಂಕಾಲ ೬:೩೦ ಗಂಟೆ ಸುಮಾರಿಗೆ ಕಲಬುರಗಿ ನಗರದ ಸಪ್ತಗಿರಿ ಆರೆಂಜ್ ಹೊಟೇಲ್ ಮುಂದುಗಡೆ ನಿಲ್ಲಿಸಿ ಜಾತ್ರ ಮೈದಾನದ ಒಳಗಡೆ ಹೋಗಿ ಜಾತ್ರೆ ನೋಡಿಕೊಂಡು ಮರಳಿ ಸಾಯಂಕಾಲ ೭:೦೦ ಗಂಟೆಗೆ ಬಂದು ನಾನು ನಿಲ್ಲಿಸಿದ ಸ್ಥಳದಲ್ಲಿ ಬಂದು ನೋಡಲಾಗಿ ನನ್ನ ಮೋಟಾರ್ ಸೈಕಲ್ ಇರಲಿಲ್ಲಾ, ಕಾರಣ ಕಳುವಾದ ನನ್ನ ಮೋಟಾರ್ ಸೈಕಲನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಕೊಟ್ಟ ದೂರು ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಬ್ರಹ್ಮಪೂರ ಪೊಲೀಸ ಠಾಣೆ :- ದಿನಾಂಕ:15-03-2023  ರಂದು ಸಾಯಂಕಾಲ ೭:೧೫  ಗಂಟೆಗೆ ಫಿರ್ಯಾದಿದಾರರಾದ ಶ್ರೀ ಸುನೀಲಕುಮಾರ್ ತಂದೆ ಹರಿಶ್ಚಂದ್ರ ಚೌವ್ಹಾಣ ವಯ:೨೫ವರ್ಷ ಜಾ:ಲಂಭಾಣಿ ಉ:ವ್ಯಾಪಾರ ಸಾ//ಭೊಜಲಿಂಗೇಶ್ವರ ದೇವಸ್ಥಾನದ ರೋಡ ಹತ್ತಿರ ರೇವುನಾಯಕ ತಾಂಡಾ ಸ್ಟೇಷನ್ ನಾಲವಾರ ಗ್ರಾಮ, ಚಿತ್ತಪೂರ ತಾಲ್ಲೂಕು ಕಲಬುರಗಿ ಜಿಲ್ಲೆ ರವರು ಠಾಣೆಗೆ ಹಾಜರಾಗಿ ಪಿರ್ಯಾದಿ ನೀಡಿದರ ಸಾರಾಂಶವೆನೆAದರೆ, ನನ್ನ ಅಣ್ಣನಾದ ವಿಜಯಕುಮಾರ್ ತಂದೆ ಹರಿಶ್ಚಂದ್ರ ಚೌವ್ಹಾಣ ಇವರ ಹೆಸರಿನಲ್ಲಿ ಒಂದು ಹೊಂಡಾ ಶೈನ್ ಮೋಟಾರ್ ಸೈಕಲ್ ನಂ ಏಂ-೩೩-W-೩೦೯೧ ನೇದ್ದು ಇದ್ದು ಅದನ್ನು ನಾನು ನೆಡೆಸಿಕೊಂಡು ಹೋಗುತ್ತೇನೆ. ಸದರಿ ಮೋಟಾರ್ ಸೈಕಲನ್ನು ತೆಗೆದುಕೊಂಡು ನನ್ನ ಮದುವೆ ಇರುವ ಪ್ರಯುಕ್ತ ಬಟ್ಟೆಗಳನ್ನು ಖರಿದಿಮಾಡುವ ಸಲುವಾಗಿ ದಿನಾಂಕ:೨೫/೦೪/೨೦೨೨ ರಂದು ಬೆಳಿಗ್ಗೆ ಕಲಬುರಗಿ ನಗರಕ್ಕೆ ಬಟ್ಟೆಗಳನ್ನು ಖರಿದಿ ಮಾಡಿಕೊಂಡು ನಂತರ ಊಟ ಮಾಡಬೇಕೆಂದು ಮಧ್ಯಾಹ್ನ ೧:೦೦ ಗಂಟೆ ಸುಮಾರಿಗೆ ಕಲಬುರಗಿ ನಗರ ಜಯದೇವ ಆಸ್ಪತ್ರೆಯ ಹೊಸ ಕಟ್ಟದ ಮುಂದುಗಡೆ ಇರುವ ಸೆಂಟರ್ ಕಾಮತ್ ಹೊಟೇಲಗೆ ಬಂದು ಮೋಟಾರ್ ಸೈಕಲನ್ನು ಹೊಟೇಲ್ ಎದರುಗಡೆ ನಿಲ್ಲಿಸಿ ಒಳಗಡೆ ಹೋಗಿ ಊಟ ಮುಗಿಸಿಕೊಂಡು ಮರಳಿ ಅದೇ ದಿನ ಮಧ್ಯಾಹ್ನ ೧:೪೫ ಗಂಟೆ ಸುಮಾರಿಗೆ ನಾನು ನಿಲ್ಲಿಸಿದ ಸ್ಥಳದಲ್ಲಿ ಬಂದು ನೋಡಲಾಗಿ ಮೋಟಾರ್ ಸೈಕಲ್ ಇರಲಿಲ್ಲಾ, ಮೋಟಾರ್ ಸೈಕಲ್ ಪತ್ತೆ ಕುರಿತು ಎಲ್ಲಾ ಕಡೆ ಹುಡುಕಾಡಿ ಸಿಗದ ಕಾರಣ ಮತ್ತು ನನ್ನ ಮತ್ತು ನನ್ನ ತಮ್ಮನ ಮದುವೆ ಇರುವ ಸಲುವಾಗಿ ಠಾಣೆಗೆ ಬಂದು ಫಿರ್ಯಾದಿ ಕೊಡಲು ತಡವಾಗಿರುತ್ತದೆ. ಕಾರಣ ಕಳುವಾದ ನಮ್ಮ ಮೋಟಾರ್ ಸೈಕಲನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಕೊಟ್ಟ ದೂರು ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸ್ಟೇಷನ್‌ ಬಜಾರ ಪೊಲೀಸ ಠಾಣೆ :-  ದಿನಾಂಕ 15/03/2023 ರಂದು ಸಂಜೆ 07:30 ಗಂಟೆಗೆ ಫಿರ್ಯಾದಿ ಶ್ರೀಮತಿ ಪ್ರಿಯಾಂಕಾ ಗಂಡ ಜೈಭೀಮ ರಾಗಿ ವಯ:22 ವರ್ಷ ಉ: ಮನೆಕೆಲಸ ಜಾ:ಎಸ್ ಸಿ (ಹೊಲೆಯ) ಸಾ: ಕಾಳಮಂದರಗಿ ತಾ: ಕಮಾಲಪುರ ಹಾ.ವ: ಸಂಜೀವ ನಗರ ಕಲಬುರಗಿರವರು ಠಾಣೆಗೆ ಹಾಜರಾಗಿ ನೀಡಿದ ದೂರು ಅರ್ಜಿಯ ಸಾರಾಂಶವೇನೆಂದರೆ ತಮ್ಮ ತಂದೆ ತಾಯಿಯವರು ನನಗೆ 2017 ನೇ ಸಾಲಿನಲ್ಲಿ ಡೊಂಗುಗಾಂವ ಗ್ರಾಮದ ಜೈಭೀಮ ತಂದೆ ಹಣಮಂತಪ್ಪ ರಾಗಿ ವಯ: 40ವರ್ಷ ಉ: ಕಾರ್ಮಿಕ ಸಾ: ಡೊಂಗರಗಾಂವ ಎಂಬುವವರೊಂದಿಗೆ ಮದುವೆ ಮಾಡಿಕೊಟ್ಟಿದ್ದು ನನಗು ಮತ್ತು ನನ್ನ ಗಂಡನಿಗು ಕೌಂಟಿಂಬಿಕ ಹಿನ್ನಲೆಯಲ್ಲಿ ತಂಟೆ ತಕರಾರು ಆಗಿದ್ದರಿಂದ ನಾನು ಮತ್ತು ನನ್ನ ಗಂಡನಾದ ಜೈಭೀಮ ರಾಗಿ ಇಬ್ಬರು ಸ್ವ ಇಚ್ಚೆಯಿಂದ ವಿಚ್ಛೇದನೆ ಮಾಡಿಕೊಳ್ಳಲು ಮಾನ್ಯ ಜಿಲ್ಲಾ ಕುಟುಂಬ ನ್ಯಾಯಾಲಯದಲ್ಲಿ  ವಿಚ್ಚೆದನೆ ಅರ್ಜಿ ಸಲ್ಲಿಸಿದ್ದು ಕೇಸ್ ಸಂಖ್ಯೆ ಎಮ್ ಸಿ 227/2022 ವಿಚಾರಣೆ ಹಂತದಲ್ಲಿ ಇರುತ್ತದೆ.  ದಿನಾಂಕ:15/03/2023 ರಂದು ಮದ್ಯಾಹ್ನ 03:00 ಗಂಟೆಗೆ ನಾನು ನನ್ನ ಕೇಸಿಗೆ ಹಾಜಾರಾಗಿ ನ್ಯಾಯಾಲಯದ ಗೇಟ್ ಹೊರಗಡೆ ಬರುತ್ತಿರುವಾಗ ನ್ಯಾಯಲಯದ ಎದುರಿನ ರಸ್ತೆ ಮೇಲೆ ಜೈಭೀಮ ಇತನು ಬಂದು  ವಿನಾಃ ಕಾರಣ ನನ್ನ ಮೇಲೆ ಜಗಳಕ್ಕೆ ಬಿದ್ದು ಅವಾಚ್ಯ ಶಬ್ಧಗಳಿಂದ ರಂಡಿ ಬೋಸುಡಿ ನೀನು ಯಾರು ಜೊತೆಯಲ್ಲಿ ಓಡಿ ಹೋಗಿದ್ದಿ ನಿನಗೆ ಜೀವ ಸಹಿತ ಬಿಡುವುದಿಲ್ಲ ಅಂತ  ಹೇಳಿ ನನಗೆ ಕೂದಲು ಹಿಡಿದು ನೆಲಕ್ಕೆ ರಸ್ತೆ ಮೇಲೆ ಹಾಕಿ ಜೋರಾಗಿ ತನ್ನ ಬಲಗಾಲಿನಿಂದ ನನ್ನ ಎಡ ಹೆಗಲಿಗೆ ತುಳಿದು ಗಂಭೀರವಾದ ಒಳಪೆಟ್ಟು ಮಾಡಿರುತ್ತಾನೆ ನೆಲಕ್ಕೆ ಬೀಳೀಸಿದಾಗ ನನ್ನ ತಲೆಗೆ ಗುಪ್ತ ಪೆಟ್ಟಾಗಿದ್ದು ಇರುತ್ತದೆ ಹಾಗು ಕೈಯಿಂದ ನನ್ನ ಎಡ ಕಪಾಳದ ಮೇಲೆ ಹೊಡೆದಿರುತ್ತಾನೆ  ಆಗ ನಾನು ಎದ್ದು ಭಯಭೀತಳಾಗಿ ನ್ಯಾಯಲಯದ ಗೇಟಿನತ್ತ ಓಡಿಹೋಗುಲು ಯತ್ನಿಸಿದಾಗ ಜೈಭೀಮ ಇತನು ಪುನಃ ಓಡಿ ಬಂದು ನನ್ನನ್ನು ಮುಂದೆ ಹೋಗದಂತೆ ತಡೆದು ನಿಲ್ಲಿಸಿ ಪುನಃ ಕೈಯಿಂದ ಹೊಡೆಯುತ್ತಿದ್ದನು ಆಗ ನಾನು ಚೀರಾಡುವದನ್ನು ಕೇಳಿ ಅಲ್ಲಿಯೆ ಇದ್ದ ಜೈರಾಜ ಪಿಳ್ಳೆ, ವಕೀಲರು ಹಾಗು ಸುನಿತಾ ಗಂಡ ಮೋಹನ ರಾಠೋಡ ಬಂದು ಜಗಳ ಬಿಡಿಸಿರುತ್ತಾರೆ. ಒಂದು ವೇಳೆ ಇವರು ಜಗಳ ಬಿಡಿಸದೇ ಇದ್ದಿದ್ದರೆ ನನ್ನ ಗಂಡ ಜೈ ಭೀಮ ಇತನು ನನಗೆ ಇನ್ನು ಹೊಡೆಯುತ್ತಿದ್ದನು, ನಂತರ ಜೈಭೀಮ ಇತನು ಅಲ್ಲಿಂದ ಹೋಗುವಾಗ ನಿನಗೆ ಇವತ್ತು ಜೀವಂತ ಬಿಟ್ಟಿದ್ದೇನೆ ಇನ್ನೊಮ್ಮೆ ನನ್ನ ತಂಟೆಗೆ ಬಂದರೆ ನಿನಗೆ ಜೀವ ಸಹಿತ ಬಿಡುವುದಿಲ್ಲ ಅಂತ ಹೇಳಿ ಜೀವದ ಬೆದರಿಕೆ ಹಾಕಿ ಹೋಗಿರುತ್ತಾನೆ. ಕಾರಣ ನನ್ನೊಂದಿಗೆ ಜಗಳಕ್ಕೆ ಬಿದ್ದು ಹೊಡೆ ಬಡೆ ಮಾಡಿ ಜೀವದ ಬೆದರಿಕೆ ಹಾಕಿದ ನನ್ನ ಗಂಡ  ಜೈಭೀಮ ತಂದೆ ಹಣಮಂತಪ್ಪಾ ರಾಗಿ ಇವರ ವಿರುದ್ದ ಕಾನೂನು ಕ್ರಮ ಜರುಗಿಸ ಬೇಕೆಂದು ತಮ್ಮಲ್ಲಿ ವಿನಂತಿ. ಅಂತ ನೀಡಿದ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸಂಚಾರಿ ಪೊಲೀಸ ಠಾಣೆ-2 :-  ದಿನಾಂಕ 15/03/2023 ರಂದು ರಾತ್ರಿ 08-30 ಗಂಟೆಗೆ ಶ್ರೀ ನಿತೇಶ ಇವರು ಠಾಣೆಗೆ ಹಾಜರಾಗಿ ಅವರ ತಂದೆಯಾದ ಬಾಬುರಾವ ಇವರ ದೂರು ಅರ್ಜಿಯನ್ನು ಹಾಜರಪಡಿಸಿದ್ದರ ಸಾರಂಶವೆನೆಂದರೆ ದಿನಾಂಕ : 14-03-2023 ರಂದು ಮದ್ಯಾಹ್ನದ ಸಮಯದಲ್ಲಿ ರಾಮ ಮಂದಿರ ಹತ್ತೀರ ನನ್ನ ಕೆಲಸ ಇರುದರಿಂದ ನಮ್ಮ ಮನೆಯ ಮೋಟಾರ ಸೈಕಲ ನಂಬರ ಕೆಎ-32/ಇಕೆ-4206 ನೇದ್ದನ್ನು ಚಲಾಯಿಸಿಕೊಂಡು ನಾಗನಹಳ್ಳಿ ಕ್ರಾಸ ಮುಖಾಂತರ ರಾಮ ಮಂದಿರ ಸರ್ಕಲ ಕಡೆಗೆ ಸರ್ವಿಸ ರೋಡ ಮುಖಾಂತರ ಹೋಗುತ್ತೀರುವಾಗ ದಾರಿ ಮದ್ಯ ಖಾಸಗಿ ಕಾಲೇಜುಗಳ ಶಿಕ್ಷಕರ ಸಂಘದ ಅಫೀಸ ಹಿಂದುಗಡೆ ರೋಡ ಮೇಲೆ ಹಿಂದಿನಿಂದ ಒಬ್ಬ ಕಾರ ಚಾಲಕನು ತನ್ನ ಕಾರನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಮೋಟಾರ ಸೈಕಲಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿದಾಗ ನಾನು ನನ್ನ ಮೋಟಾರ ಸೈಕಲದೊಂದಿಗೆ ಕೆಳಗಡೆ ಬಿದ್ದಾಗ ಸದರಿ ಘಟನೆ ನೋಡಿದ ನನ್ನ ಮಗನ ಗೆಳಯರಾದ ಚೇತನ ತಂದೆ ಬಸಣ್ಣಾ ಸಿಂಘೆ ಹಾಗೂ ಸಿದ್ದಾರ್ಥ ತಂದೆ ದೇವಿಂದ್ರ ಚಿಂಚೊಳಿ ರವರು ಬಂದು ನನಗೆ ಎಬ್ಬಿಸಿ ರೋಡ ಪಕ್ಕದಲ್ಲಿ ಕೂಡಿಸಿದಾಗ  ನಾನು ಅಪಘಾತ ಪಡಿಸಿದ ಕಾರ ನಂಬರ ನೋಡಲು ಕೆಎ-32/ಪಿ-7094 ನೇದ್ದು ಇದ್ದಿತ್ತು. ಅದರ ಚಾಲಕ ಕಾರಿನಿಂದ ಇಳಿದು ನನ್ನ ಹತ್ತೀರ ಬಂದು ಉಪಚಾರ ಕುರಿತು ಪಕ್ಕದ ಧನ್ವಂತರಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತೇನೆ ಅಂತಾ ನನ್ನನ್ನು ಕಾರಿನಲ್ಲಿ ಕೂಡಿಸಿಕೊಂಡನು. ನನ್ನ ಜೊತೆಯಲ್ಲಿ ಚೇತನ ಮತ್ತು ಸಿದ್ದಾರ್ಥ ರವರು ಧನ್ವಂತರಿ ಆಸ್ಪತ್ರೆಗೆ ಬಂದರು. ನನಗೆ ಆಸ್ಪತ್ರೆ ಒಳಗೆ ಸೇರಿಕೆ ಮಾಡುತ್ತೀರುವಾಗ ಅಪಘಾತ ಪಡಿಸಿದ ಕಾರ ಚಾಲಕ ಆಸ್ಪತ್ರಯಿಂದ ನನಗೆ ಹೇಳದೆ ಕೇಳದೆ ಓಡಿ ಹೋದನು. ನನ್ನ ಮನೆಯವರು ಧನ್ವಂತರಿ ಆಸ್ಪತ್ರಗೆ ಬಂದು ನನ್ನ ಹೆಚ್ಚಿನ ಉಪಚಾರ ಕುರಿತು ಖಾಸಗಿ ದರ್ಶ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿರುತ್ತಾರೆ. ನನಗೆ ಅಪಘಾತ ಪಡಿಸಿದ ಕಾರ ಚಾಲಕನ ಹೆಸರು ಗೋತ್ತಾಗಿರುವದಿಲ್ಲ, ಆತನನ್ನು ನೋಡಿದ್ದು ಮುಂದೆ ನೋಡಿದಲ್ಲಿ ಗುರ್ತಿಸುತ್ತೆನೆ. ಸದರ ಘಟನೆ ಜರುಗಿದಾಗ ಮದ್ಯಾಹ್ನ 2-30 ಗಂಟೆ ಸಮಯವಾಗಿತ್ತು.       ಕಾರ ನಂಬರ ಕೆಎ-32/ಪಿ-7094 ನೇದ್ದರ ಚಾಲಕನು ತನ್ನ ಕಾರನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಾನು ಚಲಾಯಿಸಿಕೊಂಡು ಹೋಗುತ್ತೀರುವ ಮೋಟಾರ ಸೈಕಲ ನಂಬರ ಕೆಎ-32/ಇಕೆ-4206 ನೇದ್ದಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿ ನನಗೆ ಭಾರಿಗಾಯಗೊಳಿಸಿ ತನ್ನ ಕಾರ ಸಮೇತ ಓಡಿ ಹೋಗಿದ್ದು ಆತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಕೊಟ್ಟ ಫಿರ್ಯಾದಿ ದೂರು ಅರ್ಜಿ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸಂಚಾರಿ ಪೊಲೀಸ ಠಾಣೆ-1 :-  ದಿನಾಂಕ 15-03-2022 ರಂದು ಮದ್ಯಹ್ನಾ 12-30 ಸುಮೀತ ತಂದೆ ಶ್ರೀಧರ ಉಪಾಧ್ಯಾಯ  ಸಾ: ಬಾಪು ನಗರ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಗಣಕಿಕೃತ ಮಾಡಿದ ದೂರು ಅರ್ಜಿಯನ್ನು ಹಾಜರಪಡಿಸಿದ್ದರ ಸಾರಂಶವೆನೆಂದೆರೆ ದಿನಾಂಕ 03-03-2023 ರಂದು ಸಾಯಂಕಾಲ 4-30 ಗಂಟೆಗೆ ಸುಮಾರಿಗೆ ಫಿರ್ಯಾದಿ ತನ್ನ ಗೆಳೆಯನಾದ ಕೃಷ್ಣಾ ತಂದೆ ರಮೇಶ ಕಾಂಬಳೆ ಇತನ ಜೋತೆಗೆ ಮೋಟಾರ ಸೈಕಲ್ ನಂಬರ ಕೆ.ಎ-32/ಇಯಕ್ಸ-1013 ನೇದ್ದರ ಮೇಲೆ ಹಿಂದೆ ಕೂಳಿತುಕೊಂಡು ನಬ ಜೀವನ ಬ್ಲಡ್ ಬ್ಯಾಂಕ್ ದಿಂದ ಪಾಬು ನಗರ ಕಡೆಗೆ ಹೋಗುವಾಗ ಹೇಳೇ ಆರ್.ಟಿ.ಓ ಕ್ರಾಸ್ ಹತ್ತಿರ ರಸ್ತೆಯ ಮೇಲೆ ಅಂಬುಲೆನ್ಸ ವಾಹನ ನಂಭರ ಕೆ.ಎ-32/ಜಿ-0844ನೇದ್ದರ ಚಾಲಕನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಕಟ್ ಹೋಡೆಯುವ ಭರದಲ್ಲಿ ಫಿರ್ಯಾದಿ ಕೂಳಿತ ಹೋರಟ ಮೋಟಾರ ಸೈಕಲಕ್ಕೆ ಡಿಕ್ಕಿ ಹೋಡಿಸಿದ ಪರಿಣಾಮ ಫಿರ್ಯಾದಿ ಎಡ ಕೈಗೆ ಪೆಟ್ಟಾಗಿ, ಎಲುಬು ಬಿಟ್ಟು ಮುರಿದಿದ್ದು ಫಿರ್ಯಾದಿ ಚಿಕಿತ್ಸೆ ಪಡೆದುಕೊಂಡು ಮನೆಯವರೊಂದಿಗೆ ವಿಚಾರ ಮಾಡಿ ದೂರು ನೀಡಲು ತಡವಾಗಿರುತ್ತದೆ. ಸದರಿ ಅಂಬುಲೆನ್ಸ ವಾಹನ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಕೋಟ್ಟ ಫಿರ್ಯಾದಿ ಅರ್ಜಿ ಕೊಟ್ಟ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

 

ವಿಶ್ವವಿದ್ಯಾಲಯ ಪೊಲೀಸ ಠಾಣೆ :- ದಿನಾಂಕ 19-02-2023  ರಂದು ಸರಕಾರಿ ಮಹಾವಿದ್ಯಾಲಯದ ಕೊಣೆಗಳಲ್ಲಿದ್ದ ಯುಪಿಎಸ್ ಮತ್ತು ಬ್ಯಾಟರಿಗಳನ್ನು ಯಾರೋ ಕಳ್ಳರು ಒಟ್ಟಾರೆ ಒಂದು UPS C.Q  ಅ.ಕಿ-೧೭೦೦೦/-ರೂ, ೨) Exide ೨೧ ಬ್ಯಾಟರಿಗಳು ಅ.ಕಿ-೭೬೮೧೮/- ರೂ ಹೀಗೇ ಒಟ್ಟು ೯೩೮೧೮/-ರೂ ಮೊತ್ತದ ಸಾಮಾನುಗಳು ಸದರಿ ಕಳ್ಳತನವಾಗಿದು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 16-03-2023 06:35 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080