Feedback / Suggestions

ಸಂಚಾರಿ ಪೊಲೀಸ್‌ ಠಾಣೆ :- ದಿನಾಂಕ: 15-02-2023 ರಂದು 12:15 ಗಂಟೆಗೆ ಶ್ರೀ ಪ್ರಕಾಶ ತಂದೆ ಬಂಡಪ್ಪ ರವರು ಖುದ್ದಾಗಿ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಅರ್ಜಿ ತಂದು ಹಾಜರುಪಡಿಸಿದ್ದು ಅದರ ಸಾರಾಂಶವೇನೆಂದರೆ  ನಾನು ಪ್ರಕಾಶ ತಂದೆ ಬಂಡಪ್ಪ ಕುಂಬಾರ ವಯ: 29 ವರ್ಷ ಉ: ಆಟೋ ರಿಕ್ಷಾ ಚಾಲಕ  ಜಾ: ಹಿಂದು ಕುಂಬಾರ ಸಾ: ಸೀತನೂರ ತಾ: ಜಿ: ಕಲಬುರಗಿ ಈ ಮೂಲಕ ನಾನು ದೂರು ಸಲ್ಲಿಸುವದೇನೆಂದರೆ. ದಿನಾಂಕ 15-02-2023 ರಂದು ಬೆಳಿಗಿನ ಜಾವಾ ನಾನು ಕೆಲಸದ ಕುರಿತು ನನ್ನ ಆಟೋ ರಿಕ್ಷಾ ತೆಗೆದುಕೊಂಡು ನಮ್ಮ ಊರಿನಿಂದ ಕಲಬುರಗಿ ಕಡೆಗೆ ಬರುವಾಗ ನಸುಕಿನ ಜಾವ ಒಂದು ಐಚರ್ ವಾಹನ  ಚಾಲಕನು ಜೇವರ್ಗಿ ಕಡೆಯಿಂದ ಕಲಬುರಗಿ ಕಡೆಗೆ ಹೋಗುವ ಕುರಿತು ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದ ನನ್ನ ಆಟೋ ರಿಕ್ಷಾಗೆ ಓವರಟೇಕ್ ಮಾಡಿ ಮುಂದೆ ಹೋಗಿ ನಸುಕಿನ ಜಾವಾ 5:15 ಗಂಟೆ ಸುಮಾರಿಗೆ ನಂದಿಕೂರ ಕ್ರಾಸ್ ಬಸ್ ನಿಲ್ದಾಣ ಹತ್ತಿರ ರಸ್ತೆಯ ಮೇಲೆ ರಸ್ತೆಯ ಬದಿಯಿಂದ ನಡೆದುಕೊಂಡು ಹೋಗುತ್ತಿದ್ದ ಒಬ್ಬ ವ್ಯಕ್ತಿಗೆ ಡಿಕ್ಕಿಪಡಿಸಿದನು ಆಗ ಸದರಿ ವ್ಯಕ್ತಿಯು ಪುಟಿದು ರಸ್ತೆಯ ಮೇಲೆ ಬಿದ್ದನು ಆಗ ನಾನು ನನ್ನ ಆಟೋ ರಿಕ್ಷಾ ನಿಲ್ಲಿಸಿ ಸದರಿ ವ್ಯಕ್ತಿಯ ಹತ್ತಿರ ಹೋಗಿದ್ದು ಹಾಗೂ ಅಲ್ಲಿಯೇ ಹೋಗುತ್ತಿದ್ದ  ಜನರು ಬಂದು ನೋಡಲು ಸದರಿ ಅಪಘಾತದಿಂದ ಆತನ ತಲೆಯ ಹಿಂದುಗಡೆ ಭಾರಿ ರಕ್ತಗಾಯ, ಎಡಕಿವಿಯಿಂದ ರಕ್ತಸ್ರಾವ ಮತ್ತು ಎಡಗೈಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿ ಮೃತಪಟ್ಟಿದ್ದು ಇರುತ್ತದೆ. ಆತನ ಹೆಸರು ವಿಳಾಸ ಗೋತ್ತಿರುವುದಿಲ್ಲ ಆತನು ಅಂದಾಜು 45-50 ವರ್ಷದವನಿರುತ್ತಾನೆ, ಆತನ ಮೈಮೇಲೆ ಒಂದು ಬಿಳಿಬಣ್ಣದ ಬನಿಯನ್ ಮತ್ತು ಒಂದು ಬಿಳಿ ಬಣ್ಣದ ಗೆರೆಯುಳ್ಳ ಶರ್ಟ್, ಆ ಶರ್ಟನ ಕಾಲರಿಗೆ ಆಲವೇಲ್ ಟೇಲರ್ ಶಹಾಪೂರ ಅಂತ ಇದ್ದು ಮತ್ತು ಆತನು ಒಂದು ಅರಶೀಣ ಬಣ್ಣದ ಒಳಉಡುಪು ಮತ್ತು ಗಾಡ ನೀಲಿ ಗೇರೆಯುಳ್ಳ ನೀಲಿ ಬಣ್ಣದ ಲುಂಗಿ ಧರಿಸಿದ್ದು ಕೊರಳಲ್ಲಿ ಕೇಸರಿ ಬಣ್ಣದ ದಾರ ಕಟ್ಟಿಕೊಂಡಿದ್ದು ಇರುತ್ತದೆ. ಆತನಿಗೆ ಡಿಕ್ಕಿಪಡಿಸಿದ ವಾಹನ ನೋಡಲು ಐಚರ್ ಲಾರಿ ವಾಹನವಿದ್ದು ಅದರ ಚಾಲಕನು ತನ್ನ ವಾಹನವನ್ನು ಅದೆ ವೇಗದಲ್ಲಿ ಚಲಾಯಿಸಿ ಕಲಬುರಗಿ ಕಡೆಗೆ ತನ್ನ ವಾಹನದ ಸಮೇತ ಓಡಿಹೋಗಿರುತ್ತಾನೆ. ವಾಹನದ ನಂಬರ ಮತ್ತು ಚಾಲಕನಿಗೆ ನೋಡಲು ಆಗಿರುವುದಿಲ್ಲ. ಸದರ ವಿಷಯ ಗೊತ್ತಾಗಿ ಸ್ಥಳಕ್ಕೆ ಹೈ ವೇ ಪೆಟ್ರೋಲಿಂಗ್ ಪೊಲೀಸರು ಬಂದಿದ್ದು ಒಂದು ಅಂಬ್ಯೂಲೆನ್ಸ್ ಅನ್ನು ಕರೆಯಿಸಿ ಅದರಲ್ಲಿ ಸದರಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಶವವನ್ನು ಹಾಕಿಕೊಂಡು ಜಿಲ್ಲಾ ಸರಕಾರಿ ಆಸ್ಪತ್ರೆಗೆ ಶವಗಾರಕ್ಕೆ ತೆಗೆದುಕೊಂಡು ಹೋಗಿದ್ದು ಇರುತ್ತದೆ. ಕಾರಣ ಯಾವುದೋ ಒಂದು ಐಚರ್ ಲಾರಿ ಚಾಲಕನು ಜೇವರ್ಗಿ ಕಡೆಯಿಂದ ಕಲಬುರಗಿ ಕಡೆ ಹೋಗುವ ಕುರಿತು ತನ್ನ ಐಚರ್ ಲಾರಿಯನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ರಸ್ತೆಯ ಬದಿಯಿಂದ ನಡೆದುಕೊಂಡು ಹೋಗುತ್ತಿದ್ದ ಒಂದು 45-50 ವರ್ಷದ ಅಪರಿಚಿತ ವ್ಯಕ್ತಿಗೆ ಡಿಕ್ಕಿಪಡಿಸಿ ಆತನು ರಸ್ತೆಯ ಮೇಲೆ ಬಿದ್ದು ಭಾರಿಗಾಯಹೊಂದಿ ಸ್ಥಳದಲ್ಲಿಯೆ ಮೃತಪಟ್ಟಿದ್ದು ಕಾರಣ ಸದರಿ ಯಾವುದೋ ಒಂದು ಐಚರ್ ಲಾರಿ ಚಾಲಕನ ಮೇಲೆ ಕಾನೂನು ಕ್ರಮ ಕೈಗೊಳ್ಳಬೆಕೆಂದು ವಿನಂತಿ ಅಂತ  ಪಿರ್ಯಾದಿ ಕೊಟ್ಟ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಬ್ರಹ್ಮಪೂರ ಪೋಲೀಸ್‌ ಠಾಣೆ :- ದಿನಾಂಕ:15-02-2023 ರಂದು 07:45 ಪಿ.ಎಂಕ್ಕೆ ಫಿರ್ಯಾಧಿದಾರರಾದ ಶ್ರೀಮತಿ ರೇಣುಕಾ ಗಂಡ ಭಾಗಣ್ಣ ಸಿನ್ನೂರಕರ ವಯ:35 ವರ್ಷ ಜಾ:ಕುರುಬ ಉ:ವೀರ ಟಿವಿಎಸ್ ಆಟೋಮೊಟಿವ್ಸ್ ಶೋರೂಮ್‌ದಲ್ಲಿ ಕಂಪ್ಯೂಟರ್ ಆಪರೇಟ್‌ರ್ ಸಾ|| ಅಯ್ಯರವಾಡಿ ಅಂಬಾಭವಾನಿ ಗುಡಿ ಹತ್ತಿರ ಕಲಬುರಗಿ ನಗರ. ಇವರು ಠಾಣೆಗೆ ಹಾಜರಾಗಿ ತಮ್ಮದೊಂದು ಲಿಖಿತ ಫಿರ್ಯಾಧಿ ಅರ್ಜಿ ನೀಡಿದ್ದರ ಸಾರಾಂಶವೇನೆಂದರೆ, ಇಂದು ದಿನಾಂಕ: 15-02-2023 ರಂದು ಸಾಯಂಕಾಲ 06:42 ಗಂಟೆ ಸುಮಾರಿಗೆ ಕೆಲಸ ಮಾಡುವ ಶೋರುಮ್‌ದಿಂದ ಕೆಲಸ ಮುಗಿಸಿ ಮನೆಗೆ ಹೋಗಬೇಕೆಂದು ಮೋಬೈಲ್‌ನಲ್ಲಿ ಮಾತನಾಡುತ್ತಾ ಅನ್ನಪೂರ್ಣಕ್ರಾಸ್ ಕಡೆಗೆ ನೆಡೆದುಕೊಂಡು ಬರುವಾಗ ಶಾಂತಗಿರಿ ಮನೆಯ ಮುಂದೆ ಬಂದಾಗ ಹಿಂದಿನಿಂದ ಯಾರೋ ಇಬ್ಬರು ಅಪರಿಚಿತ ವ್ಯಕ್ತಿಗಳು ಅಂದಾಜು 20 ರಿಂದ 25 ವಯಸ್ಸಿನವರು ಮೋಟಾರ್ ಸೈಕಲ್ ಮೇಲೆ ಬಂದು ನನ್ನ ಹತ್ತಿರವಿದ್ದ ಒಂದು ರೆಡ್ಮಿ ಮೋಬೈಲ್ ಸಿಮ್ ನಂ- 9741830038 ಅಂದಾಜು ಕಿಮ್ಮತ್ತು 9,000/-ರೂಪಾಯಿ ಹಾಗೂ ಮೋಬೈಲ್ ಕವರ್‌ನಲ್ಲಿದ್ದ 2,000/-ರೂಪಾಯಿ ನಗದು ಹಣವನ್ನು ಜಬರದಸ್ತಿಯಿಂದ ಕಸಿದುಕೊಂಡು ಅನ್ನಪೂರ್ಣಕ್ರಾಸ್ ದಿಂದ ತಿಮ್ಮಾಪೂರ ಚೌಕ್ ಕಡೆಗೆ ಓಡಿ ಹೋದರು. ನಾನು ಮತ್ತು ಅಲ್ಲೇ ಇದ್ದ ಶ್ರೀಕಾಂತ ದಂಡೋತಿ ಸಾ||ವಿದ್ಯಾನಗರ ಕಲಬುರಗಿ ನಗರ ಇಬ್ಬರು ಬೇನ್ನುಹತ್ತಿದಾಗ ಸಿಗಲಿಲ್ಲಾ. ಆ ಇಬ್ಬರು ವ್ಯಕ್ತಿಗಳನ್ನು ನೋಡಿದಲ್ಲಿ ಗುರುತಿಸುತ್ತೇನೆ. ಕಾರಣ ಅವರನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ವಗೈರೆಯಾಗಿ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಫರಹತಾಬಾದ ಪೊಲೀಸ್‌ ಠಾಣೆ :- ದಿನಾಂಕ: 15-02-2023 ರಂದು 20:15 ಗಂಟೆಗೆ ಡಾ: ಪಿ.ರಂಗನಾಥ ಮುಖ್ಯ ಅಧೀಕ್ಷಕರು ಕೇಂದ್ರ ಕಾರಾಗೃಹ ಕಲಬುರಗಿರವರು ತಮ್ಮ ಸಿಬ್ಬಂದಿಯಾದ ವಿಜಯಕುಮಾರ ಕುದುರೆ ವಾರ್ಡರರವರ ಮುಖಾಂತರ ಫಿರ್ಯಾದು ದೂರು ಕಳಿಸಿದ್ದು ಸದರಿ ಸಿಬ್ಬಂದಿಯವರು ಸೂಕ್ತ ಬೆಂಗಾವಲಿನೊಂದಿಗೆ ಇಬ್ಬರು ಆರೋಪಿತರನ್ನು, ಮುದ್ದೇಮಾಲಿನೊಂದಿಗೆ ಮುಂದಿನ ಕ್ರಮಕ್ಕಾಗಿ ದೂರು ಹಾಜರಪಡಿಸಿದರ ಸಾರಾಂಶವೇನೆಂದರೆ, ಆರಕ್ಷಕರ ನಿರೀಕ್ಷಕರು, ಕೆ.ಎಸ್.ಐ.ಎಸ್.ಎಫ್, ಕೇಂದ್ರ ಕಾರಾಗೃಹ ಕಲಬುರಗಿರವರು ಸಲ್ಲಿಸಿರುವ ವರದಿಯಂತೆ ದಿನಾಂಕ: 15-02-2023 ರಂದು ಸುಮಾರು 3-30 ಗಂಟೆಗೆ ಅಪರಿಚಿತ ವ್ಯಕ್ತಿಗಳ ವಾಹನ ಸಂಖ್ಯೆ ಕೆಎ-32 ಡಿ-5373   ಆಟೋ ರೀಕ್ಷಾ ಮೂಲಕ ಹೊರ ಗೋಡೆಯ ಮೂಲಕ 2 ಸಂಖ್ಯೆ ಪ್ಯಾಕೇಟ್ (ಹಳದಿ ಮತ್ತು ಕೆಂಪು ಬಣ್ಣದ) ನಿಷೇಧಿತ ವಸ್ತುಗಳನ್ನು ಕಾರಾಗೃಹದ ಒಳಗಡೆ ಎಸೆದು ಪರಾರಿಯಾಗುತ್ತಿರುವ ಸಂದರ್ಭದಲ್ಲಿ ಕರ್ತವ್ಯ ನಿರತ ಪಾಳೆ ಅಧಿಕಾರಿ/ಸಿಬ್ಬಂದಿ ವರ್ಗದವರು ಸದರಿ ಅಪರಿಚಿತ ವ್ಯಕ್ತಿಗಳ ಬೆನ್ನುಹತ್ತಿ ಇಬ್ಬರು ವ್ಯಕ್ತಿಗಳನ್ನು ಸೆರೆ ಹಿಡಿದಿದ್ದು, ಒಬ್ಬರು ಪರಾರಿಯಾಗಿದ್ದು, ಪರಾರಿಯಾದ ವ್ಯಕ್ತಿಯ ಮೊಬೈಲ್ ಅನ್ನು ಹಾಗೂ ಇಬ್ಬರು ವ್ಯಕ್ತಿಗಳನ್ನು ಮತ್ತು ಒಂದು ಸಂಖ್ಯೆ ಮೊಬೈಲ್ ಅನ್ನು ವಶಕ್ಕೆ ಪಡೆದು ನಂತರ ಮುಖ್ಯ ದ್ವಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಾರಾಗೃಹದ ಅಧಿಕಾರಿ/ಸಿಬ್ಬಂದಿಯವರಿಗೆ ನಿಷೇಧಿತ ವಸ್ತುಗಳನ್ನು (ಹಳದಿ ಮತ್ತು ಕೆಂಪು ಬಣ್ಣದ) ಎಸೆದಿರುವ ಬಗ್ಗೆ ಮಾಹಿತಿ ತಿಳಿಸಿ, ಮುಂದಿನ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ವರದಿಯನ್ನು ಸಲ್ಲಿಸಿರುತ್ತಾರೆ. (ಕೆ.ಎಸ್.ಐ.ಎಸ್.ಎಫ್ ಅಧಿಕಾರಿಯವರ ವರದಿ ಪ್ರತಿ ಲಗತ್ತಿಸಿದೆ) ಮುಂದುವರೆದು 1 ಸಂಖ್ಯೆ ಹಳದಿ ಮತ್ತು 1 ಸಂಖ್ಯೆ ಕೆಂಪು ಬಣ್ಣದ 2 ಸಂಖ್ಯೆ ಪ್ಯಾಕೇಟ್ಗಳನ್ನು ಕಾರಾಗೃಹದ ಒಳಗೆ ಎಸೆದಿದ್ದು, ಕಾರಾಗೃಹದ ಒಳಭಾಗದ ಸೆಲ್ ವಿಭಾಗದಲ್ಲಿ ವಿಶೇಷ ಭದ್ರತಾ ಕರ್ತವ್ಯ ನಿರತ ಸಿಬ್ಬಂದಿಯಾದ ಶ್ರೀ ಮಂಜುನಾಥ್ ಕಟಗಿ, ವಾರ್ಡರ್ ಇವರು ವಶಪಡಿಸಿಕೊಂಡು ಮುಖ್ಯ ದ್ವಾರಪಾಲಕರಾದ ಶ್ರೀ ಮೊಹನ್ ಮಾರನೂರ್, ಹೆಡ್ ವಾರ್ಡರ್ ಇವರಿಗೆ ವರದಿ ನೀಡಿರುತ್ತಾರೆ. ನಂತರ ಮುಖ್ಯ ದ್ವಾರಪಾಲಕರಾದ ಶ್ರೀ ಮೊಹನ್ ಮಾರನೂರ್, ಹೆಡ್ ವಾರ್ಡರ್ ಇವರು ಕಾರ್ಯನಿರ್ವಾಹಕ ಜೈಲರಾದ ಶ್ರೀ ಅಶೋಕ ಹೊಸಮನಿ ಇವರಿಗೆ ನಿಷೇಧಿತ ವಸ್ತುಗಳ ಪ್ಯಾಕೇಟ್ಗಳನ್ನು ನೀಡಿ ವರದಿ ಒಪ್ಪಿಸಿರುತ್ತಾರೆ. ಸದರಿ ಜೈಲರ್ ಇವರು ಸದರಿ 2 ಸಂಖ್ಯೆ ಪ್ಯಾಕೇಟ್ಗಳನ್ನು ಪರಿಶೀಲಿಸಲಾಗಿ ಈ ಕೆಳಕಂಡ ನಿಷೇಧಿತ ವಸ್ತುಗಳು ದೊರೆತಿರುತ್ತವೆ ಹಾಗೂ ಕಾರಾಗೃಹದಲ್ಲಿ ಅಳವಡಿಸಿರುವ ಸಿಸಿಟಿವಿ ಫೂಟೇಜ್ ಅನ್ನು ಪರಿಶೀಲಿಸಲಾಗಿ, ಕಾರಾಗೃಹದ ಮುಂಭಾಗದಲ್ಲಿ ಆಟೋವನ್ನು ನಿಲ್ಲಿಸಿ 2 ಸಂಖ್ಯೆ ಪ್ಯಾಕೆಟ್ಗಳನ್ನು ಕಾರಾಗೃಹದ ಒಳಗಡೆ ಎಸೆದಿರುವ ಬಗ್ಗೆ ಸಿಸಿಟಿವಿ ದೃಶ್ಯಾವಳಿಯಲ್ಲಿ ಕಂಡು ಬಂದಿರುತ್ತದೆ.

ಕಾರಾಗೃಹದ ಒಳಗೆ ದೊರೆತ್ತಿರುವ 02 ಸಂಖ್ಯೆ ಪ್ಲಾಸ್ಟಿಕ್ ಸುತ್ತಿರುವ ಕವರ್ನಲ್ಲಿರುವ ನಿಷೇಧಿತ ವಸ್ತುಗಳು ಈ ಕೆಳಗಿನಂತಿವೆ.

 • 1 ಸಂಖ್ಯೆ TEL ಬೇಸಿಕ್ ಸೆಟ್ ಮೊಬೈಲ್ ವಿಥ್ ಬ್ಯಾಟರಿ

ME -1 -1 No. 352047498782189 2)  ME -2 No. 352047498782197

2)      1 ಸಂಖ್ಯೆ NOKA ಕಂಪನಿಯ ಮೊಬೈಲ್ ವಿಥ್ ಬ್ಯಾಟರಿಗಳು ಮತ್ತು 1 ಸಂಖ್ಯೆ RELANCE ಸಿಮ್ ಕಾರ್ಡ ME  No. 1) 352889107881351,  RM Card No. RECRUÀC055886503 OMH

3)      01 ಸಂಖ್ಯೆ KREX K3310 ಕಂಪನಿಯ ಮೊಬೈಲ್ ವಿಥ್ ಬ್ಯಾಟರಿಗಳು ಮತ್ತು 1 ಸಂಖ್ಯೆ ಏರ್ಟೆಲ್ ಸಿಮ್ ಕಾರ್ಡ

1)      ME  No. 351940093231670,           2)  ME -2 No. 351940093231688

      RM Card No. 89919  40912  987381503ಗ ಊ1

 

 ಮುಂದುರೆದು ತಪ್ಪಿಸಿಕೊಂಡು ಹೋಗಿರುವ ವ್ಯಕ್ತಿಯ 1 ಸಂಖ್ಯೆ NARZÀO DdgÀndd bÀy Rdalld ಮೊಬೈಲ್ ವಿಥ್ ಬ್ಯಾಟರಿ, 2 ಸಂಖ್ಯೆ ಏರ್ಟೆಲ್ ಸಿಮ್ ಕಾರ್ಡ & ಮೊಮೋರಿ ಕಾರ್ಡ ವಿವರ ಈ ಕೆಳಗಿನಂತಿರುತ್ತದೆ.

1)      1 ಸಂಖ್ಯೆ ಏರ್ಟೆಲ್  RM Card No. 0721EC A991000906 081129637ಗ

2)      1 ಸಂಖ್ಯೆ ಏರ್ಟೆಲ್  RM Card No. H10821EC 8991450900 6193825337

3)      1 ಸಂಖ್ಯೆ 4 ಜಿ.ಬಿ ಮೊಮೋರಿ ಕಾರ್ಡ 

 ಕರ್ನಾಟಕ ಕಾರಾಗೃಹಗಳ (ತಿದ್ದುಪಡಿ) ಅಧಿನಿಯಮ-2022 ರ ಕಲಂ 42 ರ ಪ್ರಕಾರ ಇವುಗಳು ನಿಷೇಧಿತ ವಸ್ತುಗಳಾಗಿದ್ದು, ದಿನಾಂಕ 15-02-2023 ರಂದು ಸಮಯ 15:30 ರಲ್ಲಿ ಆಟೋದಿಂದ 3 ಜನ ಬಂದು ಕಾರಾಗೃಹದ ಮುಂಭಾಗದಿಂದ ಈ ಮೇಲ್ಕಂಡ ನಿಷೇಧಿತ ವಸ್ತುಗಳನ್ನು ಕಾರಾಗೃಹದ ಒಳಗೆ ಎಸೆದಿರುವ ಬಗ್ಗೆ ಪ್ರಕರಣವನ್ನು ದಾಖಲಿಸಿಕೊಂಡು ಆಟೋದಲ್ಲಿ ಬಂದ ವ್ಯಕ್ತಿಗಳ ಬಗ್ಗೆ, ಆಟೋ ರೆಜಿಸ್ಟ್ರೇಷನ್ ಸಂಖ್ಯೆ ಬಗ್ಗೆ, ನಿಷೇಧಿತ ವಸ್ತುಗಳಾದ 03 ಮೊಬೈಲ್ ಫೋನ್ ವಿಥ್ ಬ್ಯಾಟರಿಗಳು & 2 ಸಂಖ್ಯೆ ಸಿಮ್ ಕಾರ್ಡಗಳು ಯಾರ ಹೆಸರಿನಲ್ಲಿವೆ ಎಂಬುದರ ಬಗ್ಗೆ ತನಿಖೆಯನ್ನು ನಡೆಸಿ, ತಪ್ಪಿತಸ್ಥರ ವಿರುದ್ಧ ಕರ್ನಾಟಕ ಕಾರಾಗೃಹಗಳ (ತಿದ್ದುಪಡಿ) ಅಧಿನಿಯಮ 2022 ರ ಕಲಂ 42 ಹಾಗೂ ಭಾ.ದಂ.ಸಂ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸಿ, ಸಂಬಂಧಿಸಿದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕಾಗಿ ಕೋರುತ್ತಾ, 1. ಶಿವಕುಮಾರ ತಂದೆ ಈಶ್ವರ ತಮಗೊಂಡ ಮತ್ತು 2. ವಿಶಾಲ್ ತಂದೆ ವಿಜಯಕುಮಾರ ರಾಠೋಡ್ ಇವರನ್ನು ಮತ್ತು ಆಟೋ ವಾಹನ ಸಂಖ್ಯೆ ಕೆಎ-32 ಡಿ-5373 ಅನ್ನು ತಮ್ಮ ವಶಕ್ಕೆ ನೀಡಿ ಸಿಸಿಟಿವಿಯಲ್ಲಿ ಸೆರೆಯಾಗಿರುವ ದೃಶ್ಯಾವಳಿಯ ಸಿಡಿಯನ್ನು ಈ ಪತ್ರದೊಂದಿಗೆ ಲಗತ್ತಿಸಿ ಈ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀ ವಿಜಯಕುಮಾರ ಕುದರೆ, ವಾರ್ಡರ್ ಇವರ ಮುಖಾಂತರ ಮುಂದಿನ ಕಾನೂನು ಕ್ರಮಕ್ಕಾಗಿ ಕಳುಹಿಸಿದೆ ಅಂತಾ ಇತ್ಯಾದಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸಬ್‌-ಅರ್ಬನ ಪೊಲೀಸ್‌ ಠಾಣೆ :- ದಿನಾಂಕ: 14-02-2023 ರಂದು ಫಿರ್ಯಾದಿಯು ಅಪ್ಪಾ ಪೀರ ದರ್ಗಾಕ್ಕೆ ಹೋಗಿ ಮರಳಿ ಸಂಜೆ 8:30 ಗಂಟೆಗೆ ಪಟ್ಟಣ ಗ್ರಾಮದಲ್ಲಿರುವ ಬಸವಣ್ಣ ಮೂರ್ತಿಯ ಮುಂದೆ ಹೋಗುತ್ತಿರುವಾಗ 2-3 ರಿಂದ ಮೂರು ಜನರು ನಾವು ಹೋಗುತ್ತಿದ್ದ ರಸ್ತೆಗೆ ಎದುರು ನಿಂತಿದ್ದು ನಾವು ರಸ್ತೆಯನ್ನು ಬಿಡಲು ಕೇಳಿದಾಗ ಆಪಾದಿತರಿಗೂ ಫಿರ್ಯಾದಿಗೂ ಜಗಳ ನೆಡೆದಿದ್ದು ಸದರಿ ಆರೋಪಿತರು ಫಿರ್ಯಾದಿಗೆ ಬಡಿಗೆಯಿಂದ ಹೊಡೆ ಬಡೆ ಮಾಡಿದ್ದಾರೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಚೌಕ ಪೊಲೀಸ್‌ ಠಾಣೆ :- ದಿನಾಂಕ: 15/02/2023 ರಂದು ಮಧ್ಯಾಹ್ನ 2:30 ಗಂಟೆಗೆ ಶ್ರೀ ಹುಸೇನಬಾಷಾ ಎ.ಎಸ್.ಐ. ಚೌಕ ಪೊಲೀಸ ಠಾಣೆ  ಕಲಬುರಗಿ ನಗರ ರವರು ಇಸ್ಪೇಟ ಜೂಜಾಟ  ದಾಳಿ ಜಪ್ತಿ ಪಂಚನಾಮೆ ಮತ್ತು ಮತ್ತು ದಸ್ತಗಿರಿ ಮಾಡಿದ  ಆರು  ಜನ ಆರೋಪಿತರು ಮತ್ತು ಮುದ್ದೆಮಾಲುನೊಂದಿಗೆ ಠಾಣೆಗೆ ಹಾಜರಾಗಿ ಸರ್ಕಾರಿ ತರ್ಫೇ ದೂರು ಕೊಟ್ಟಿದ್ದರ ಸಾರಾಂಶವೆನೆಂದೆರೆ, ನಾನು ಹುಸೇನಬಾಷಾ ಎ.ಎಸ್.ಐ. ಚೌಕ ಪೊಲೀಸ ಠಾಣೆ ಕಲಬುರಗಿ ನಗರ, ಸರ್ಕಾರಿ ತರ್ಫೇ ಫಿರ್ಯಾದಿ ಸಲ್ಲಿಸುವುದೇನೆಂದರೆ, ಇಂದು ದಿನಾಂಕ 15/02/2023  ರಂದು ಬೆಳಿಗ್ಗೆ 11-00 ಗಂಟೆಗೆ ಚೌಕ ಪೊಲೀಸ ಠಾಣೆಯಲ್ಲಿ ನನಗೆ ಬಾತ್ಮಿ ಬಂದಿದ್ದೇನೆಂದರೆ,  ಕಲಬುರಗಿ ನಗರದ ಆಟೋ ನಗರ ಲಾರಿ ತಂಗುದಾಣದಲ್ಲಿ ಇರುವ ಹನುಮಾನ ದೇವಸ್ಥಾನ ಹಿಂಭಾಗದಲ್ಲಿ ಖುಲ್ಲಾ ಜಾಗೆಯಲ್ಲಿ ಕೆಲವು ಜನರು ಕಾನೂನು ಬಾಹಿರ ಅಂದರ ಬಾಹರ ಎಂಬ ದೈವಲೀಲೆಯ ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ, ಇಬ್ಬರು ಪಂಚರಾದ 1)ಶ್ರೀ ಮಲ್ಲಿಕಾರ್ಜುನ ತಂದೆ ಶಿವಶರಣಪ್ಪ ಕಿಳ್ಳಿ ಸಾ:ಜೇವರ್ಗಿ ಕಾಲನಿ ಕಲಬುರಗಿ 2)ಶ್ರೀ ಚೇತನ ತಂದೆ ಅಂಬಾರಾಯ ಸಾಗರ ಸಾ: ಅಂಬೇಡ್ಕರ ಆಶ್ರಯ ಕಾಲನಿ ಕಲಬುರಗಿ ಇವರನ್ನು ಮತ್ತು ನಮ್ಮ ಠಾಣಾ ಸಿಬ್ಬಂದಿಯವರಾದ ಸಿಹೆಚಸಿ 222 ಸಿದ್ರಾಮಯ್ಯ, ಸಿಪಿಸಿ 130 ಸುರೇಶ, ಸಿಪಿಸಿ 06 ಅಶೋಕ ಇವರುಗಳನ್ನು ಪಂಚರಿಗೆ ಪರಿಚಯಿಸಿ ತಿಳಿಸಿದ್ದೆನೆಂದೆರೆ, ನಮ್ಮ ಪೊಲೀಸ ಠಾಣೆ ವ್ಯಾಪ್ತಿಯಲ್ಲಿ ಬರುವ ಕಲಬುರಗಿ ನಗರದ ಆಟೋ ನಗರ ಲಾರಿ ತಂಗುದಾಣದಲ್ಲಿ ಇರುವ ಹನುಮಾನ ದೇವಸ್ಥಾನ ಹಿಂಭಾಗದಲ್ಲಿ ಇರುವ ಖುಲ್ಲಾ ಜಾಗೆಯಲ್ಲಿ ಕೆಲವು ಜನರು ದುಂಡಾಗಿ ಕುಳಿತುಕೊಂಡು ಇಸ್ಪೇಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ದೈವ ಲೀಲೆಯ ಇಸ್ಪೇಟ ಜೂಜಾಟದಲ್ಲಿ ತೊಡಗಿದ್ದಾರೆ  ಬಾತ್ಮಿ ಬಂದಿದೆ. ನಾವು ಮಾಡುವ ದಾಳಿ ಜಪ್ತಿ ಪಂಚನಾಮೆಯ, ಪಂಚರಾಗಿ ಜಪ್ತಿ ಪಂಚನಾಮೆ ಬರೆಯಿಸಿಕೊಡಲು ಕೇಳಿಕೊಂಡ ಮೇರೆಗೆ ಅದಕ್ಕೆ ಒಪ್ಪಿಕೊಂಡೇವು. ಮತ್ತು ನಾನು ನಮ್ಮ ಈ ಮೇಲಿನ  ಸಿಬ್ಬಂದಿಯವರಿಗೆ ನನ್ನ ಜೊತೆಯಲ್ಲಿ ದಾಳಿಗೆ ಬರಲು ಸೂಚಿಸಿದಾಗ ಅವರು ಅದಕ್ಕೆ ಒಪ್ಪಿಕೊಂಡರು. ಆಗ ನಾನು ದಾಳಿ ಕುರಿತು ಮತ್ತು ಸಿಬ್ಬಂದಿಯವರು ತಮ್ಮ ತಮ್ಮ ಮೋಟಾರ ಸೈಕಲಗಳ ಮೇಲೆ ಕುಳಿತುಕೊಂಡೇವು. ಪಂಚರು ಕೂಡಾ ನಮ್ಮ ಒಂದು ಮೋಟಾರ ಸೈಕಲ ಮೇಲೆ ಕುಳಿತುಕೊಂಡರು.  ನಂತರ ನಾನು ಮತ್ತು ಪಂಚರು ಹಾಗೂ ಈ ಮೇಲಿನ ಸಿಬ್ಬಂದಿಯವರು ತಮ್ಮ ಮೇಲಾಧಿಕಾರಿಯವರ ಮಾರ್ಗದರ್ಶನದಲ್ಲಿ ದಾಳಿ ಕುರಿತು ಠಾಣೆಯಿಂದ ಬೆಳಿಗ್ಗೆ 11-30 ಗಂಟೆಗೆ ಹೊರಟಿದ್ದು, ಬಾತ್ಮಿ ಸ್ಥಳವಾದ ಕಲಬುರಗಿ ನಗರದ ಆಟೋ ನಗರ ಲಾರಿ ತಂಗುದಾಣದಲ್ಲಿ ಇರುವ ಹನುಮಾನ ದೇವಸ್ಥಾನ ಹಿಂಭಾಗದಲ್ಲಿ ಇರುವ ಖುಲ್ಲಾ ಜಾಗೆ ಇನ್ನೂ ಸ್ವಲ್ಪ ಮುಂದೆ ಇರುವಂತೆ ತಮ್ಮ ತಮ್ಮ ಮೋಟಾರ ಸೈಕಲಗಳು ಮತ್ತು ಪಂಚರು ನಮ್ಮ ಮೋಟಾರ ಸೈಕಲ ನಿಲ್ಲಿಸಿದಾಗ ಎಲ್ಲರೂ ಮೋಟಾರ ಸೈಕಲಗಳಿಂದ ಇಳಿದು ಹನುಮಾನ ಗುಡಿಯ ಮರೆಯಲ್ಲಿ ನಾನು ಮತ್ತು ಪಂಚರು ಹಾಗೂ ಈ ಮೇಲಿನ ಸಿಬ್ಬಂದಿಯವರು ನಿಂತು ನೋಡಲಾಗಿ 06 ಜನರು ಕಲಬುರಗಿ ನಗರದ ಆಟೋ ನಗರ ಲಾರಿ ತಂಗುದಾಣದಲ್ಲಿ ಇರುವ ಹನುಮಾನ ದೇವಸ್ಥಾನ ಹಿಂಭಾಗದಲ್ಲಿ ಇರುವ ಖುಲ್ಲಾ ಜಾಗೆಯಲ್ಲಿ ದುಂಡಾಗಿ ಕುಳಿತುಕೊಂಡು  ಇಸ್ಪೇಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಎಂಬ ದೈವ ಲೀಲೆಯ ಇಸ್ಪೇಟ ಜೂಜಾಟ ಆಡುತ್ತಿದ್ದು, ಅವರಲ್ಲಿ ಒಬ್ಬನು ಎಲೆಗಳು ಪೀಸ ಮಾಡಲು ಮತ್ತೊಬ್ಬನು ಅರ್ಧ ಕಟ್ ಮಾಡಿ ಒಂದು ರಾಣಿ ಎಲೆ ಅಂಗಾಂತವಾಗಿಡಲು ಕೈಯಲ್ಲಿ ಎಲೆ ಹಿಡಿದವನು ಎಲೆಗಳು ಅಂದರ ಬಾಹರ ಅನ್ನುತ್ತಾ ಅಂಗಾಂತವಾಗಿ ಒಗೆಯುತ್ತಿದ್ದನು. ಉಳಿದವರೆಲ್ಲರೂ ಅಂದರಕ್ಕೆ- ಬಾಹರಕ್ಕೆ ಅಂತಾ ಹಣವನ್ನು ಪಣಕ್ಕೆ ಹಚ್ಚುತ್ತಿದ್ದರು. ಸದರಿಯವರು ಅಂದರ ಬಾಹರ ಇಸ್ಪೇಟ ಜೂಜಾಟ ಆಡುತ್ತಿದ್ದನ್ನು ಖಚಿತಪಡಿಸಿಕೊಂಡು, ಪಂಚರ ಸಮಕ್ಷಮದಲ್ಲಿ  ನಾನು ಮತ್ತು ಈ ಮೇಲಿನ ಸಿಬ್ಬಂದಿಯವರು ಮಧ್ಯಾಹ್ನ 12-00 ಗಂಟೆಗೆ ದಾಳಿ ಮಾಡಿ  ಇಸ್ಪೇಟ ಜೂಜಾಟ ಆಡುತ್ತಿರುವ 06 ಜನರನ್ನು ಹಿಡಿದಿದ್ದು, ಅವರ ಹೆಸರು ವಿಳಾಸ ವಿಚಾರಿಸಲೂ ಅವರಲ್ಲಿ ಒಬ್ಬನು ತನ್ನ ಹೆಸರು 1)ರಾಹುಲ್ ತಂದೆ ಸುಭಾಷ ಕಿಳ್ಳಿ ವ:23 ವರ್ಷ ಉ:ಖಾಸಗಿ ಕೆಲಸ ಜಾತಿ ಪ.ಜಾತಿ (ಹೊಲೆಯ) ಸಾ: ಅಂಬೇಡ್ಕರ ಆಶ್ರಯ ಕಾಲನಿ ಕಲಬುರಗಿ ಅಂತಾ ತಿಳಿಸಿದನು. ಇತನ ಎದುರುಗಡೆ 2300/- ರೂ. ದೊರೆತವು 2)ಕರತರಸಿಂಗ ತಂದೆ ಅಮರಸಿಂಗ ಸಿಖ್ ವ:33 ವರ್ಷ ಉ: ವೇಲ್ಡಂಗ ಕೆಲಸ ಜಾತಿ ಸಿಖ್  ಸಾ: ಅಂಬೇಡ್ಕರ ಆಶ್ರಯ ಕಾಲನಿ ಕಲಬುರಗಿ ಅಂತಾ ತಿಳಿಸಿದನು. ಇತನ ಎದುರುಗಡೆ 1030/- ರೂ. ದೊರೆತವು 3)ಲಖನ್ ತಂದೆ  ಜಯರಾಮ ರಾಠೋಡ ವ:25 ವರ್ಷ ಉ:ಗೌಂಡಿ ಕೆಲಸ ಜಾತಿ ಲಂಬಾಣಿ ಸಾ: ಶಹಾಬಜಾರ ತಾಂಡಾ ಕಲಬುರಗಿ ಅಂತಾ ತಿಳಿಸಿದನು.  ಇತನ ಎದುರುಗಡೆ 800/- ರೂ. ದೊರೆತವು. 4)ಪ್ರವೀಣ ತಂದೆ ಗೋವಿಂದರಾವ ರಾಠೋಡವ:22 ವರ್ಷ ಉ: ಕಾರ ಚಾಲಕ ಜಾತಿ ಲಂಬಾಣಿ ಸಾ: ಅಂಬೇಡ್ಕರ ಆಶ್ರಯ ಕಾಲನಿ ಕಲಬುರಗಿ ಅಂತಾ ತಿಳಿಸಿದನು. ಇತನ ಎದುರುಗಡೆ 1200/- ರೂ. ದೊರೆತವು.5)ಕಲ್ಯಾಣಪ್ಪ ತಂದೆ ಶಿವರುದ್ರಪ್ಪ ಸಂಗೋಳಗಿ ವ:42 ವರ್ಷ ಉ:ಖಾಸಗಿ ಕೆಲಸ ಜಾತಿ ಲಿಂಗಾಯತ ಸಾ: ಸೈಯ್ಯದ ಚಿಂಚೋಳಿ ತಾ:ಜಿ: ಕಲಬುರಗಿ ಅಂತಾ ತಿಳಿಸಿದನು. ಇತನ ಎದುರುಗಡೆ 1600/- ರೂ. ದೊರೆತವು. 6)ಅನಿಲ್ ತಂದೆ ಗೋವಿಂದ ರಾಠೋಡ ವ:25 ವರ್ಷ ಉ:ಆಟೋ ಚಾಲಕ ಜಾತಿ ಲಂಬಾಣಿ ಸಾ: ಶಹಾಬಜಾರ ತಾಂಡಾ ಕಲಬುರಗಿ ಅಂತಾ ತಿಳಿಸಿದನು. ಇತನ ಎದುರುಗಡೆ 1100/- ರೂ. ದೊರೆತವು. ಮತ್ತು ಜೂಜಾಟ ತೊಡಗಿಸಿದ ಗುನ್ನೆ ಸ್ಥಳದಲ್ಲಿ ಕೆಳಗಡೆ ಇದ್ದ ನಗದು ಹಣ 17900/-ರೂ. ಇದ್ದವು. ಮೊದಲು ಎಲ್ಲಾ ಇಸ್ಪೇಟ ಎಲೆಗಳು ಎಣಿಕೆ ಮಾಡಲಾಗಿ ಒಟ್ಟು ನಗದು ಹಣ 25930/-ರೂ. ಇದ್ದವು. ಅದರಂತೆ ಎಲ್ಲಾ ಇಸ್ಪೇಟ ಎಲೆಗಳು ಎಣಿಕೆ ಮಾಡಲಾಗಿ 52 ಇಸ್ಪೇಟ ಎಲೆಗಳಿದ್ದವು. ಆಗ  ನಾನು ಕೇಸಿನ ಪುರಾವೆಗೋಸ್ಕರ ನಗದು ಹಣ ಮತ್ತು ಇಸ್ಪೇಟ ಎಲೆಗಳು ಒಂದು ದಸ್ತಿಯಲ್ಲಿ ಹಾಕಿ ಅದಕ್ಕೆ ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ ತಮ್ಮ ವಶಕ್ಕೆ ತೆಗೆದುಕೊಂಡು ಜಪ್ತ ಪಡಿಸಿಕೊಂಡೆನು. ಮತ್ತು ಈ ಮೇಲಿನ 06 ಜನರು ಅಂದರ ಬಾಹರ ಇಸ್ಪೇಟ ಜೂಜಾಟದಲ್ಲಿ ನಿರತರಾಗಿದ್ದು, ಖಚಿತಪಟ್ಟಿದ್ದರಿಂದ ಸ್ಥಳದಲ್ಲಿ ಸಿಕ್ಕಿ ಬಿದ್ದ  ಈ ಮೇಲಿನ 06 ಜನರನ್ನು  ನಾನು ಮತ್ತು ಈ ಮೇಲಿನ  ಸಿಬ್ಬಂದಿಯವರು ವಶಕ್ಕೆ ತೆಗೆದುಕೊಂಡೇವು. ಸದರಿಯವರ ವಿರುದ್ದ ಕಾನೂನು ಕ್ರಮ ಜರುಗಿಸಲು ಎಸ್.ಎಚ.ಓ. ರವರಿಗೆ ಸೂಚಿಸಿದ್ದರ ಮೇರೆಗೆ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ರಾಘವೇಂದ್ರ ನಗರ ಪೊಲೀಸ್‌ ಠಾಣೆ :- ದಿನಾಂಕ: 15/02/2023 ರಂದು 6:30 ಪಿಎಮಕ್ಕೆ ಮಾನ್ಯ ಪಿಐ ಸಾಹೇಬರು ಠಾಣೆಗೆ ಹಾಜರಾಗಿ ವರದಿ ನೀಡಿದ್ದರ ಸಾರಾಂಸದ ಮೇಲಿದ ಮಾನ್ಯ ನ್ಯಾಯಾಲಯದ ಪರವಾನಿಗಿ 6:45 ಪಿಎಮಕ್ಕೆ ಪಡೆದುಕೊಂಡು ಸದರಿ ವರದಿ ಸಾರಾಂಶವೇನೆಂದರೆ, ಇಂದು ದಿನಾಂಕ: 15-02-2023 ರಂದು ಸಾಯಾಂಕಾಲ 4.00 ಗಂಟೆಯ ಸುಮಾರಿಗೆ ನಾನು ಮತ್ತು ನಮ್ಮ ಠಾಣೆಯ ಸಿಬ್ಬಂದಿಯವರಾದ ಶ್ರೀ ಸಿಕ್ರೇಶ್ವರ ಹೆಚ್ಸಿ-124 ,ಶ್ರೀ ರಮೇಶ ಸಿಪಿಸಿ-445, ಶ್ರೀ ಮುಜಾಹಿದ ಸಿಪಿಸಿ-154, ಶ್ರೀ ಉಮೇಶ ಸಿಪಿಸಿ-109 , ಹಾಗೂ ಸಹಾಯಕ ಆಯುಕ್ತರು 'ದಕ್ಷಿಣ' ಉಪ ವಿಭಾಗ ಕಾರ್ಯಾಲದ ಸಿಬ್ಬಂದಿಯಾದ ಶ್ರೀ ಚಂದ್ರಕಾಂತ ಹೆಚ್.ಸಿ ರವರು ಕೂಡಿಕೊಂಡು ಠಾಣಾ ವ್ಯಾಪ್ತಿಯಲ್ಲಿ ಪೆಟ್ರೋಲಿಂಗ್ ಕರ್ತವ್ಯದಲ್ಲಿ ಇರುವಾಗ ಖಚಿತ ಬಾತ್ಮಿ ಬಂದಿದ್ದೆನೆಂದರೆ, ಠಾಣಾ ವ್ಯಾಪ್ತಿಯ ಡಬರಾಬಾದ ಕ್ರಾಸ ಹತ್ತಿರ ಇರುವ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ಕುಳಿತುಕೊಂಡು ರಸ್ತೆಯ ಮೇಲೆ ಹೋಗಿ ಬರುವ ಜನರಿಂದ ಇದು ಬಾಂಬೆ ಮಟಕಾ ಇದೆ 1 ರೂಪಾಯಿಗೆ 80 ರೂಪಾಯಿ ಬರುತ್ತದೆ ಅಂತ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಬರೆದು ಕೊಡುತ್ತಿದ್ದಾನೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಸದರಿ ಮಾಹಿತಿಯನ್ನು ಮಾನ್ಯ ಭೂತೆಗೌಡ ವಿ.ಎಸ್. ಎ.ಸಿ.ಪಿ ದಕ್ಷಿಣ ಉಪವಿಬಾಗ ಕಲಬುರಗಿ ನಗರವರಿಗೆ ತಿಳಿಸಿ ಮಾನ್ಯ ಎಸಿಪಿ ಸಾಹೇಬರ ಮಾರ್ಗದರ್ಶನದಲ್ಲಿ ಖಚಿತವಾದ ಬಾತ್ಮಿಯಂತೆ ಸದರಿಯವರ ಮೇಲೆ ದಾಳಿ ಮಾಡಿ ಕ್ರಮ ಕೈಕೊಳ್ಳುವ ಕುರಿತು ಇಬ್ಬರು ಪಂಚರನ್ನು ಶ್ರೀ ರಮೇಶ ಸಿಪಿಸಿ-445 ರವರ ಮುಖಾಂತರ ಬರಮಾಡಿಕೊಂಡು ಅವರಿಗೆ ತಿಳಿ ಹೇಳಿ ನಂತರ ನಾನು ಹಾಗೂ ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ಸರಕಾರಿ ಜೀಪನಲ್ಲಿ ಕರೆದುಕೊಂಡು ಸಾಯಾಂಕಾಲ 4.15 ಗಂಟೆಗೆ ಹೊರಟು 4.30 ಗಂಟೆಗೆ ಸ್ಥಳಕ್ಕೆ ತಲುಪಿ ಮರೆಯಾಗಿ ನಿಂತುಕೊಂಡು ನೋಡಲಾಗಿ ಒಬ್ಬ ವ್ಯಕ್ತಿ ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ  ಕುಳಿತು ಕೊಂಡು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಬಾಂಬೆ ಕಲ್ಯಾಣ ಮಟಕಾ ಇದೆ 1 ರೂಪಾಯಿಗೆ 80 ರೂಪಾಯಿ ಬರುತ್ತದೆ ಅಂತ ಅವರಿಂದ ಹಣ ಪಡೆದುಕೊಂಡು ಸಾರ್ವಜನಿಕರಿಗೆ ಮಟಕಾ ಚೀಟಿ ಬರೆದು ಕೂಡುತ್ತಿರುವದನ್ನು ಖಚಿತ ಪಡಿಸಿಕೊಂಡು ನಾನು ಮತ್ತು ಸಿಬ್ಬಂದಿಯವರು ಕೂಡಿಕೊಂಡು ಪಂಚರ ಸಮಕ್ಷಮ ಸದರಿ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದ ವ್ಯಕ್ತಿ ಮೇಲೆ ದಾಳಿ ಮಾಡಲು, ಮಟಕಾ ಬರೆಯಿಸಲು ಬಂದವರು ಓಡಿ ಹೋಗಿದ್ದು, ಮಟಕಾ ಚೀಟಿಯನ್ನು ಬರೆದುಕೊಳ್ಳುತ್ತಿದ್ದವನಿಗೆ ಸಿಬ್ಬಂದಿಯವರ ಸಹಾಯದಿಂದ ಹಿಡಿದಿದ್ದು ಅವನ ಹೆಸರು ವಿಳಾಸ ವಿಚಾರಿಸಲು ತನ್ನ ಹೆಸರು ಬಾಬು ತಂದೆ ಶ್ಯಾಮರಾಯ ಕೌಲಗಿ ವಯ-38 ವರ್ಷ ಜಾ||ಕಬ್ಬಲಿಗ ಉ||ಜ್ಯೂಸ ಸೆಂಟರ ಸಾ||ಗಂಗಾ ನಗರ ಕಲಬುರಗಿ ಅಂತಾ ತಿಳಿಸಿದ್ದು ಸದರಿಯವನ  ಅಂಗ ಶೋದನೆ ಮಾಡಲು ಅವನ ಹತ್ತಿರ ನಗದು ಹಣ 5200/-ರೂ ಸಿಕ್ಕಿದ್ದು ಮತ್ತು ಒಂದು ಬಾಲ ಪೆನ ಅಃಕಿಃ 00, ಒಂದು ಮಟಕಾ ಚೀಟಿ, ದೊರೆತಿದ್ದು, ಸದರಿ ಮಟಕಾ ಜೂಜಾಟಕ್ಕೆ ಸಂಬಂಧಪಟ್ಟ 5200/- ರೂಗಳು, ಬೆಲೆ ಬಾಳುವದನ್ನು ಸದರಿಯವನಿಂದ ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಪಂಚರು ಸಹಿ ಮಾಡಿದ ಚೀಟಿಯನ್ನು ಅಂಟಿಸಿಕೊಂಡು ಮುಂದಿನ ಪುರಾವೆಗಾಗಿ ಸದರಿ ವ್ಯಕ್ತಿಯನ್ನು ನನ್ನ ತಾಬಾಕ್ಕೆ ತೆಗೆದುಕೊಂಡು 4:45 ಗಂಟೆಯಿಂದ 6:00 ಗಂಟೆಯವರೆಗೆ ಜಪ್ತಿ ಪಂಚನಾಮೆಯನ್ನು ಕೈಕೊಂಡು ಜಪ್ತಿ ಮಾಡಿಕೊಂಡ ಮುದ್ದೆ ಮಾಲು ಮತ್ತು ಆರೋಪಿತನೊಂದಿಗೆ ಮರಳಿ ಸಾಯಂಕಾಲ 7:45 ಗಂಟೆಗೆ ಠಾಣೆಗೆ ಬಂದು ಸದರಿಯವನ ವಿರುಧ್ದ ಕಲಂ:78(3) ಕೆ.ಪಿ.ಆ್ಯಕ್ಟ ಅಡಿಯಲ್ಲಿ ಕಾನೂನು ಕ್ರಮ ಕೈಕೊಳ್ಳಲು ಸೂಚಿಸಿದಸ ಮೇರೆಗೆ  ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸಂಚಾರಿ ಪೊಲೀಸ್‌ ಠಾಣೆ-2 :- ದಿನಾಂಕ: 15/02/2023 ರಂದು 11:50 ಎ.ಎಮ್ ಕ್ಕೆ ಬಸವೇಶ್ವರ ಆಸ್ಪತ್ರೆಯಿಂದ OP PC ರವರು ಪೋನ್ ಮಾಡಿ   ವಿಶ್ವರಾಧ್ಯ ತಂದೆ ವೀರಪಾಕ್ಷಯ್ಯಾ ಎಂಬುವರ RTA MLC ವಸೂಲಾಗಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಕೊಡಲೇ ಬಸವೇಶ್ವರ ಆಸ್ಪತ್ರೆಗೆ ಹೋಗಿ ಗಾಯಾಳು ವಿಶ್ವರಾಧ್ಯ ತಂದೆ ವೀರಪಾಕ್ಷಯ್ಯಾ ರವರಿಗೆ ವಿಚಾರಿಸಲು ಅವರು ಸರಿಯಾಗಿ ಮಾತನಾಡದೆ ವಿರುವ ಬಗ್ಗೆ ತಿಳಿದುಕೊಂಡು ಈ ಬಗ್ಗೆ ವೈದ್ಯಾಧಿಕಾರಿಗಳಿಂದ ಅಭಿಪ್ರಾಯ ತಿಳಿದುಕೊಂಡು ಗಾಯಾಳು ಜೋತೆಯಲ್ಲಿರುವ ವೀರಯ್ಯ ತಂದೆ ಶಿವಲಿಂಗಪ್ಪಾ ಹಿರೆಮಠ ರವರು ಕನ್ನಡದಲ್ಲಿ ಟೈಪ ಮಾಡಿರುವ  ಫೀರ್ಯಾದಿ ಅರ್ಜಿ ಸಲ್ಲಿಸಿದ್ದು ಮರಳಿ ಠಾಣೆಗೆ 01:15 ಪಿ.ಎಮ್ ಕ್ಕೆ ಬಂದ ಸಾರಾಂಶವೆನೆಂದರೆ, ಇಂದು ದಿನಾಂಕ 15/02/2023 ನಮಗೆ ಸಂಬಂಧಪಟ್ಟ ಟಂಟಂ ಗೂಡ್ಸ ವಾಹನ ನಂ. ಕೆಎ-32 ಡಿ-7532 ಇದನ್ನು ತೆಗೆದುಕೊಂಡು ಟೋಲ ನಾಕಾಕ್ಕೆ ಹೋಗಿ ಬರುತ್ತೆನೆಂದು ಬೆಳಿಗ್ಗೆ 9:00 ಗಂಟೆ ಸುಮಾರಿಗೆ ಪಟ್ಟಣ ಗ್ರಾಮದಿಂದ ಹೋದನು. ಮುಂದೆ 10:00 ಗಂಟೆ ಸುಮಾರಿಗೆ ನಮ್ಮೂರಿನ ಶ್ರವಣಕುಮಾರ ತಂದೆ ಹಣಮಂತ್ರಾಯ ಪರಸ್ಧಿ ಹಾಗು ದತ್ತು ತಂದೆ ಶರಣಪ್ಪಾ ದೇಗೊಂಡ ಇವರು ಫೋನ್ ಮಾಡಿ ಮಾಹಿತಿ ತಿಳಿಸಿದ್ದೆನೆಂದರೆ, ಈಗ 9:45 ಗಂಟೆ ಕಾಲಕ್ಕೆ ಟೋಲ ನಾಕಾ ದಾಟಿ ಯಶಸ್ವಿನಿ ಲೇಔಟದ ಮುಂದೆ ಬರುತ್ತಿರುವಾಗ ಅದೆ ವೇಳೆಗೆ ಕಲಬುರಗಿ ಕಡೆಗೆ ಒಂದು ಲಾರಿ ನಂ. ಎಪಿ-26 ಟಿ.ಎಫ್-5634 ನೇದ್ದರ ಚಾಲಕನು ಅತಿವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಟಂಟಂ ವಾಹನಕ್ಕೆ ಎದುರುಗಡೆಯಿಂದ ಅಪಘಾತ ಪಡಿಸಿದಕ್ಕೆ ಆತನು ಭಾರಿಗಾಯಗೊಂಡು ಬಿದ್ದಿರುತ್ತಾನೆ ಅಂತಾ ತಿಳಿಸಿದಕ್ಕೆ, ನಾನು ಗಾಬರಿಗೊಂಡು ಕೂಡಲೇ ಸ್ಧಳಕ್ಕೆ ಹೋಗಿ ನೋಡಲಾಗಿ ನನ್ನ ಅಕ್ಕಳ ಮಗ ವಿಶ್ವರಾಧ್ಯ ಈತನು ತುಟಿಗೆ ಹರಿದಗಾಯ, ಗಟಬಾಯಿಗೆ ರಕ್ತಗಾಯ, ಎರಡು ಕಾಲುಗಳ ತೊಡೆಯ ಭಾಗ ಮತ್ತು ಮೊಳಕಾಲಿನ ಕೆಳಭಾಗಕ್ಕೆ ಕಾಲು ಮುರದಿದ್ದು, ಎರಡು ಕೈಗಳ ರಟ್ಟೆಯ ಭಾಗಕ್ಕೆ ಮತ್ತು ಮುಂಗೈ ಹತ್ತೀರ ಕೈ ಮುರದಿದ್ದು, ಚೀತಾಜನಕ ಪರಸ್ಧಿತಿಯಲ್ಲಿ ಬಿದ್ದಿದ್ದು, ಟಂಟಂ ಅಟೋ ನೋಡಲಾಗಿ ಮುಂದಿನ ಭಾಗ ಪೂರ್ತಿಯಾಗಿ ಜಖಂಗೊಂಡು ಅಪ್ಪಚ್ಚಿಯಾಗಿದ್ದು, ಅಪಘಾತ ಪಡಿಸಿದ ಲಾರಿ ಅಲ್ಲಿಯೇ ನಿಂತಿದ್ದು, ಅದರ ನಂಬರ ಎಪಿ-26 ಟಿ.ಎಫ್-5634 ನೇದ್ದು ಇತ್ತು. ಅದರ ಮುಂದಿನ ಭಾಗ ಜಖಂಗೊಂಡಿತ್ತು. ಅಲ್ಲಿಯೇ ಅದರ ಚಾಲಕನಿಗೆ ವಿಚಾರಿಸಲು ಸೈಯದ ಸುಬಾನಿ ತಂದೆ ಸೈಯದ ಖಾಜಾರಾಮ ಸಾಃ ನೆಲ್ಲೂರ ಅಂತಾ ತಿಳಿಸಿದನು. ಅಲ್ಲಿಯೇ ಇರುವ ಶ್ರವಣ ಕುಮಾರ ಮತ್ತು ದತ್ತು ಇವರಿಗೆ ವಿಚಾರಿಸಲು ಮೇಲೆ ಕಂಡಂತೆ ವಿಷಯ ತಿಳಿಸಿದ್ದು, ಕೂಡಲೆ ಯಾವುದೋ ಖಾಸಗಿ ಅಂಬುಲೇನ್ಸದಲ್ಲಿ ಹಾಕಿಕೊಂಡು ನೇರವಾಗಿ ಬಸವೇಶ್ವರ ಆಸ್ಪತ್ರೆಗೆ ಗಾಯಾಳು ವಿಶ್ವರಾದ್ಯನಿಗೆ ತಂದು ಉಪಚಾರಕ್ಕಾಗಿ ಸೇರಿಕೆ ಮಾಡಿರುತ್ತೆನೆ. ಆತನ ಎರಡು ಕೈಗಳು ಮತ್ತು ಎರಡು ಕಾಲುಗಳು ಮುರಿದು ಭಾರಿ ಪ್ರಮಾಣದ ಗಂಭೀರ ಸ್ವರೂಪದ ಗಾಯಹೊಂದಿದ್ದು, ಈ ಘಟನೆಗೆ ಕಾರಣನಾದ ಲಾರಿ ಚಾಲಕ ಸೈಯದ ಸುಬಾನಿ ತಂದೆ ಸೈಯದ ಖಾಜಾರಾಮ ಈತನ ವಿರುದ್ಧ ಕಾನೂನು ಪ್ರಕಾರ ಉಗ್ರವಾದ ಕ್ರಮ ಕೈಗೊಳ್ಳಬೇಕೆಂದು ಅಂತಾ ಫಿರ್ಯಾದಿ ಕೊಟ್ಟ ಅರ್ಜಿಯ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಬ್ರಹ್ಮಪೂರ ಪೊಲೀಸ್‌ ಠಾಣೆ :- ದಿನಾಂಕ: 15-02-2023 ರಂದು 09:30 ಪಿ.ಎಂಕ್ಕೆ ಸರಕಾರಿ ತರ್ಪೇ ಪಿರ್ಯಾದಿದಾರರಾಗಿ ಶ್ರೀ ಮಹೆಬೂಬಸಾಬ್ ಎ.ಎಸ್.ಐ   ರವರು ವರದಿ ಮತ್ತು ಜಪ್ತಿ ಪಂಚನಾಮೆ ಆರೋಪಿ ಹಾಗೂ ಮುದ್ದೇಮಾಲಿನೊಂದಿಗೆ ಠಾಣೆಗೆ ಬಂದು ಫಿರ್ಯಾದಿ ಸಲ್ಲಿಸಿದ ಸಾರಾಂಶವೆನೆಂದರೆ, ಇಂದು ದಿನಾಂಕ: 15-02-2023 ರಂದು ಸಾಯಂಕಾಲ 07:15 ಗಂಟೆಯ ಸುಮಾರಿಗೆ ನಾನು ಠಾಣೆಯಲ್ಲಿದ್ದಾಗ ಖಚಿತ ಬಾತ್ಮೀ ಬಂದಿದ್ದೇನೆಂದರೆ, ಬಾಪು ನಗರದ ವಿಠಲ್ ಮಂದಿರದ  ಆವರಣದ ಗೋಡೆಯ ಪಕ್ಕದ ಸಾರ್ವಜನಿಕರ ಸ್ಥಳದಲ್ಲಿ ಲೈಟಿನ ಬೆಳಕಿನಲ್ಲಿ 7-8   ಜನರು ದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಎಂಬ ಇಸ್ಪೇಟ್ ಜೂಜಾಟ ಆಡುತ್ತಿದ್ದಾರೆ. ಅಂತಾ ಖಚಿತವಾದ ಬಾತ್ಮಿ ಬಂದ ಮೇರೆಗೆ ಪಂಚರಾದ ೧) ಶ್ರೀ. ಮುರಳೀಧರ ತಂದೆ ಫನ್ನಾಲಾಲ ಉಪಾದ್ಯ ವಯಸ್ಸು 45 ವರ್ಷ ಉ; ಕಿರಾಣಿ ಅಂಗಡಿ ಜಾತಿ; ಮಾಂಗರವಾಡಿ ಸಾ; ಬಾಪು ನಗರ ಕಲಬುರಗಿ ೨) ಶ್ರೀ. ಜಿತೇಂದರ್ ತಂದೆ ಮೋತಿಲಾಲ ಪಾಟೀಲ ವಯಸ್ಸು 40 ವರ್ಷ ಜಾತಿ; ಮಾಂಗರವಾಡಿ ಉ; ಖಾಸಗಿ ಕೆಲಸ ಸಾ; ಬಾಪು ನಗರ ಕಲಬುರಗಿ   ಇವರಿಗೆ ಬರಮಾಡಿಕೊಂಡು ಪಂಚರಿಗೆ ವಿಷಯ ತಿಳಿಸಿ  ನಾನು ಮತ್ತು ಸಿಬ್ಬಂದಿಯವರಾದ ಅಶೋಕ ಹೆಚ್.ಸಿ 165,  ಶಿವಶರಣಪ್ಪ ಪಿ.ಸಿ 460, ಸಂತೋಷ ಪಿ.ಸಿ 112,  ನವೀನ ಕುಮಾರ ಪಿ.ಸಿ 538, ಬಸವರಾಜ ಪಿ.ಸಿ 461  ಗಂಭೀರಾನಂದ   ಪಿ.ಸಿ 505   ರವರು ಮತ್ತು ಬಸವರಾಜ ಪಿ.ಸಿ 249 ರವರೊಂದಿಗೆ 7:45 ಗಂಟೆಗೆ ಠಾಣೆಯಿಂದ ಸರಕಾರಿ ಜೀಪನಲ್ಲಿ ಹೊರಟು ಮತ್ತು ಸಿಬ್ಬಂದಿಯವರು ಅವರವರ ಮೋಟಾರ್ ಸೈಕಲ್ ಮೇಲೆ ಹೊರಟು  ವಿಠಲ್ ಮಂದಿರ  ಹತ್ತಿರ 8:00 ಪಿ.ಎಂಕ್ಕೆ ಹೋಗಿ ಅಲ್ಲಿ ಗೋಡೆ ಪಕ್ಕ ಮರೆಯಾಗಿ ನಿಂತು ನೋಡಲು ವಿಠಲ್ ಮಂದಿರದ ಆವರಣ ಗೋಡೆಯ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ 7-8 ಜನರು ದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ ಎಲೆಗಳ ಸಹಾಯದಿಂದ ಅಂದರ 100 ರೂಪಾಯಿ ಬಾಹರ 100 ರೂಪಾಯಿ ಅಂತಾ ಇಸ್ಪೇಟ ಜೂಜಾಟ ಆಡುತ್ತಿರುವದನ್ನು ನೋಡಿ ಖಾತ್ರಿ ಪಡಿಸಿಕೊಂಡು ಸಿಬ್ಬಂದಿಯವರ ಸಹಾಯದಿಂದ ಪಂಚರ ಸಮಕ್ಷಮದಲ್ಲಿ ಅವರ ಮೇಲೆ ದಾಳಿ ಮಾಡಿ ಇಸ್ಪೀಟ ಜೂಜಾಟ ಆಡುತ್ತಿದ್ದ 8 ಜನರನ್ನು ಹಿಡಿದುಕೊಂಡಿದ್ದು  ಸಿಕ್ಕಿ ಬಿದ್ದವರ  ಹೆಸರು ವಿಳಾಸ ವಿಚಾರಿಸಿ ಅವರ ಅಂಗ ಜಡ್ತಿ ಮಾಡಲು ಅವರು ತಮ್ಮ ಹೆಸರುಗಳು 1) ಸಮೀರ್ ತಂದೆ ಮಹೆಬೂಬಸಾಬ ಶೇಖ್ ವಯಸ್ಸು 47 ವರ್ಷ ಜಾತಿ; ಮುಸ್ಲಿಂ ಉ; ಗೌಂಡಿ ಕೆಲಸ ಸಾ;ಹುದಾ ಮಜೀದ್ ಹತ್ತಿರ  ರೇಹಮತ ನಗರ ಕಲಬುರಗಿ ಇತನ ಅಂಗಶೋಧನೆ ಮಾಡಲಾಗಿ ನಗದು ಹಣ 1600/-ರೂಪಾಯಿ 17 ಇಸ್ಪೇಟ್ ಎಲೆಗಳು  2) ಅಬ್ದುಲ ರಸೀದ್ ತಂದೆ ಅಬ್ದುಲ ರಜಾಕ್ ವಯಸ್ಸು 60 ವರ್ಷ ಜಾತಿ; ಮುಸ್ಲಿಂ ಉ; ಆಟೋ ಚಾಲಕ ಸಾ; ರಾಘವೇಂದ್ರ ಪೊಲೀಸ್ ಠಾಣೆ ಹತ್ತಿರ ಗಾಲಿಬ್ ಕಾಲನಿ ಕಲಬುರಗಿ  ಇತನ ಅಂಗಶೋಧನೆ ಮಾಡಲಾಗಿ ನಗದು ಹಣ 920/- ರೂಪಾಯಿ 10 ಇಸ್ಪೇಟ್ ಎಲೆಗಳು 3) ಕುಂದನ ತಂದೆ ವಿಜಯಕುಮಾರ ಕಾಳೆ ವಯಸ್ಸು 55 ವರ್ಷ ಜಾತಿ; ಮಾಂಗರವಾಡಿ ಉ; ಕಿರಾಣಿ ಅಂಗಡಿ ಸಾ; ಬಾಪು ನಗರ ಕಲಬುರಗಿ  ಇತನ ಅಂಗಶೋಧನೆ ಮಾಡಲಾಗಿ ನಗದು ಹಣ 1050/- ರೂಪಾಯಿ  4) ಶರತ್ ತಂದೆ ನವರಸ್ ಉಪಾದ್ಯ ವಯಸ್ಸು 54 ವರ್ಷ ಜಾತಿ; ಮಾಂಗರವಾಡಿ ಉ; ಕಿರಾಣಿ ಅಂಗಡಿ  ಸಾ; ಬಾಪು ನಗರ ಕಲಬುರಗಿ  ಇತನ ಅಂಗಶೋಧನೆ ಮಾಡಲಾಗಿ ನಗದು ಹಣ 1650/- ರೂಪಾಯಿ 5) ರಮೇಶ ತಂದೆ ಮಲ್ಲಪ್ಪ ದೊಡ್ಡಮನಿ ವಯಸ್ಸು 38 ವರ್ಷ ಜಾತಿ; ಹೊಲೆಯ ಉ; ಆಟೋ ಚಾಲಕ ಸಾ: ಬಾಪಣ್ಣ ಬಂಡಾರಿ ಇವರ ಮನೆಯಲ್ಲಿ ಬಾಡಿಗೆ ಇಂದಿರಾ ನಗರ ಕಲಬುರಗಿ ಇತನ ಅಂಗಶೋಧನೆ ಮಾಡಲಾಗಿ ನಗದು ಹಣ 1500/- ರೂಪಾಯಿ 6) ಸೈಯ್ಯದ್ ಅಬ್ದುಲ್ ತಂದೆ ಅಬ್ದುಲ್ ಗಫರ್  ವಯಸ್ಸು 39 ವರ್ಷ ಜಾತಿ; ಮುಸ್ಲಿಂ ಉ: ಕಾರ್  ಚಾಲಕ ಸಾ: ಅಬ್ದುಲ ರವುಫ್ ಖಾನ್ ಇವರ ಮನೆಯಲ್ಲಿ ಬಾಡಿಗೆ ನಯಾ ಮೊಹಲ್ಲಾ ಮಿಜಗುರಿ ಕಲಬುರಗಿ  ಇತನ ಅಂಗಶೋಧನೆ ಮಾಡಲಾಗಿ ನಗದು ಹಣ 830/- ರೂಪಾಯಿ 7) ಮಹ್ಮದ ಆಜ್ಜಮ ತಂದೆ ಮಹ್ಮದ ಖಾಜಾ ವಯಸ್ಸು 40 ವರ್ಷ ಜಾತಿ: ಮುಸ್ಲಿಂ ಉ: ಆಟೋ ಚಾಲಕ ಸಾ: ಖದೀರ್ ಚೌಕ ಹತ್ತಿರ ಎಂ.ಎಸ್.ಕೆ.ಮಿಲ್ ಹತ್ತಿರ ಕಲಬುರಗಿ  ಇತನ ಅಂಗಶೋಧನೆ ಮಾಡಲಾಗಿ  ನಗದು ಹಣ 2500/- ರೂಪಾಯಿ 8) ಶೇಖ್ ದಾವೂದ್ ತಂದೆ ಮಹೆತಾಬ್ ಶೇಖ್ ವಯಸ್ಸು 43 ವರ್ಷ ಜಾತಿ; ಮುಸ್ಲಿಂ ಉ; ಎಲೆಕ್ಟ್ರಿಷಿಯನ್ ಸಾ: ಬಾಬು ರೇಷನ್ ಅಂಗಡಿ ಹತ್ತಿರ ಗಾಲಿಬ್ ಕಾಲನಿ ಕಲಬುರಗಿ  ದೊರೆತಿದ್ದು ಇರುತ್ತದೆ. ಸ್ಥಳದಲ್ಲಿ 25 ಇಸ್ಪೆಟ್ ಎಲೆಗಳು ಹೀಗೆ ಒಟ್ಟು 12,900/-ರೂ ನಗದು ಹಣ 52 ಇಸ್ಪೇಟ್ ಎಲೆಗಳು ದೊರೆತವು. ಅವುಗಳನ್ನು ಕೇಸಿನ ಮುಂದಿನ ಪುರಾವೆಗಾಗಿ  ಒಂದು ಕಾಗದ ಲಕೋಟೆಯಲ್ಲಿ ಹಾಕಿ ಪಂಚರು ಸಹಿ ಮಾಡಿದ ಚೀಟಿಯನ್ನು ಅಂಟಿಸಿ ಜಪ್ತಿ ಮಾಡಿಕೊಂಡು ಪಂಚರ ಸಮಕ್ಷಮ ಪಂಚನಾಮೆಯನ್ನು ಟೈಪ್ ಮಾಡಿದ್ದು,  ಪಂಚನಾಮೆ, ಮುದ್ದೆಮಾಲು ಹಾಗೂ 8  ಜನ ಆರೋಪಿತರನ್ನು ಈ ವರದಿಯೊಂದಿಗೆ ಹಾಜರು ಪಡಿಸಿದ್ದು ಮುಂದಿನ ಕಾನೂನು ಕ್ರಮ  ಕೈಕೊಳ್ಳಬೇಕು ಅಂತಾ ಕೊಟ್ಟ ಪಿರ್ಯಾದಿ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

Last Updated: 16-02-2023 12:53 PM Updated By: ADMIN


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : Kalaburagi City Police
Designed, Developed and Hosted by: Center for e-Governance - Web Portal, Government of Karnataka © 2024, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080