ಅಭಿಪ್ರಾಯ / ಸಲಹೆಗಳು

ಸಬ್ ಅರ್ಬನ್‌ ಪೊಲೀಸ್‌ ಠಾಣೆ :- ದಿನಾಂಕಃ 14/01/2023 ರಂದು ಸಂಜೆ 7:೦೦ ಪಿ.ಎಮ್ ಕ್ಕೆ ಫಿರ್ಯಾದಿದಾರರ ಮನೆಯ ಹತ್ತಿರ ಮಲ್ಲಿಕಾರ್ಜುನ ದೇವಸ್ಥಾನವಿದ್ದು ಅದರ ಕಟ್ಟೆಯ ಮೇಲ್ಲೆ ಸದರಿ ಆರೋಪಿತರು ಕುಳಿತು ಕೊಂಡು ಫಿರ್ಯಾದಿಗೆ ಚುಡಾಯಿಸುತ್ತಿದ್ದಾಗ ಫಿರ್ಯಾದಿಯು ಇಲ್ಲಿ ಏಕೆ ಕುಳಿತಿದ್ದಿರಿ ಎಂದು ಕೇಳಿದಾಗ ಸದರಿ ಆರೋಪಿತರು ಕೈಯಿಂದ ಮತ್ತು ಬಡಿಗೆಯಿಂದ ಹೊಡೆ ಬಡೆ ಮಾಡಿರುತ್ತಾರೆ ಮತ್ತು ಫಿರ್ಯಾದಿಗೆ ಫಿರ್ಯಾದಿಗೆ ಏ ರಂಡಿ ಮಗನೆ ನಾವು ಎಲ್ಲಿಕೂತರೆ ನಿನಗೇನೋ ಇನ್ನು ಮುಂದೆ ನಮ್ಮ ತಂಟೆಗೆ  ಬರಬೇಡ ಎಂದು ಬೈದ ಬಗ್ಗೆ ಫಿರ್ಯಾದಿಯು ಆಸ್ಪತ್ರೆಯಲ್ಲಿ ಹೇಳಿಕೆಯನ್ನು ನೀಡಿದರ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

  

ಸಂಚಾರಿ ಪೊಲೀಸ್‌ ಠಾಣೆ :- ದಿನಾಂಕ: 15-01-2023 ರಂದು ಬೆಳಿಗಿನ ಜಾವ 4-30 ಗಂಟೆಗೆ ಖಾಸಗಿ ಮಣೂರ ಆಸ್ಪತ್ರೆಯ ಸಿಬ್ಬಂದಿಯವರು ರವರು ಠಾಣೆಗೆ ಪೋನ ಮಾಡಿ ಮಹ್ಮದ ಮಸೂದ ಇವರು ರಸ್ತೆ ಅಪಘಾತ ಹೊಂದಿ ಉಪಚಾರ ಕುರಿತು ಬಂದು ಸೇರಿಕೆಯಾಗಿರುತ್ತಾರೆ ಅಂತಾ ತಿಳಿಸಿದ್ದರಿಂದ ನಾನು ಆಸ್ಪತ್ರೆಗೆ ಬೇಟಿಕೊಟ್ಟು ಗಾಯಾಳು ಮಹ್ಮದ ಮಸೂದ ಇವರನ್ನು ವಿಚಾರಿಸಲು ಅವರು ಮಾತನಾಡಿ ಹೇಳಿಕೆ ನೀಡುವ ಸ್ಥಿತಿಯಲ್ಲಿ ಇರದ ಕಾರಣ ಅವರ ಜೊತೆಯಲ್ಲಿದ್ದ ಅವರ ಹೆಂಡತಿ ಆಸೀಯಾ ಪರವೀನ ಇವರನ್ನು ವಿವಾರಿಸಲು ಅವರು ಕೊಟ್ಟ ಹೇಳಿಕೆ ಸಾರಂಶವೆನೆಂದರೆ ದಿನಾಂಕ: 14-01-2023 ರಂದು ರಾತ್ರಿ 10-30 ಗಂಟೆ ಸುಮಾರಿಗೆ ನನ್ನ ಗಂಡ ಮಹ್ಮದ ಮಸೂದ ಇತನು ಕಿರಾಣಿ ಅಂಗಡಿಯಿಂದ ಹಾಲು ಮತ್ತು ಬಿಸ್ಕಿಟ್ ತರುವ ಕುರಿತು ಮಹ್ಮದ ರಪೀಕ ಚೌಕ ಮತ್ತು ಬಿಬಿ ರೋಜಾ ಕಾಲೇಜ್ ರೋಡ ಮದ್ಯದಲ್ಲಿ ಬರುವ ಕಿರಾಣಿ ಅಂಗಡಿಗೆ ಹಾಲು ಮತ್ತು ಬಿಸ್ಕಿಟ್ ತಗೆದುಕೊಂಡು ವಾಪಸ್ಸ ಮನೆಯ ಕಡೆಗೆ ಹೋಗುವ ಕುರಿತು ನಡೆದುಕೊಂಡು ಬರುತ್ತೀರುವಾಗ ಕಿರಾಣಿ ಅಂಗಡಿ ಎದುರಿನ ರೋಡ ಮೇಲೆ ಮೋಟಾರ ಸೈಕಲ ನಂಬರ ಕೆಎ-32 ಇಯು-6751 ನೇದ್ದರ ಸವಾರನು ಬೀಬಿ ರೋಜಾ ಕಾಲೇಜ ಕಡೆಯಿಂದ ಎಮ್.ಡಿ.ರಫೀಕ ಚೌಕ ಕಡೆಗೆ ಹೋಗುವ ಕುರಿತು ತನ್ನ ಮೋಟಾರ ಸೈಕಲನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಗಂಡನಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ಆತನಿಗೆ ಭಾರಿಗಾಯಗೊಳಿಸಿ ತನ್ನ ವಾಹನ ಸಮೇತ ಓಡಿ ಹೋಗಿದ್ದು ಆತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಬಹ್ಮಪೂರ ಪೊಲೀಸ್‌ ಠಾಣೆ :- ದಿನಾಂಕ: 15/01/2023 ರಂದು ರಾತ್ರಿ  7:44  ಕ್ಕೆ ಫಿರ್ಯಾದಿದಾರರಾದ ಶ್ರೀ ಸುನೀಲ ತಂದೆ ಸುಭಾಷ ಬನಸೋಡೆ ವಯ:27ವರ್ಷ ಜಾ:ಹೋಲೆಯ ಉ:ಡೇಲಿವರಿ ಬಾಯ್ ಕೆಲಸ ಸಾ||ಮರಗಮ್ಮಾ ದೇವಸ್ಥಾನದ ಹತ್ತಿರ ಫಿಲ್ಟರ್ ಬೆಡ್ ಕಲಬುರಗಿ ನಗರ ರವರು ಠಾಣೆಗೆ ಹಾಜರಾಗಿ ಪಿರ್ಯಾದಿ ನೀಡಿದರ ಸಾರಾಂಶವೆನೆಂದರೆ ನನ್ನದೊಂದು ಸ್ವಂತ ಹಿರೋ ಸ್ಪ್ಲೇಂಡರ್ ಪ್ಲಸ್ ಮೋಟರ್ ಸೈಕಲ್ ನಂ: KA-32-EL-3471 ನೇದ್ದು ಇದ್ದು ಸದರಿ ಮೋಟಾರ್ ಸೈಕಲ್‌ವು ನನ್ನ ಹೆಸರಿನಲ್ಲಿರುತ್ತದೆ. ಸದರಿ ಮೋಟಾರ್ ಸೈಕಲವು ದಿನಾಂಕ: 09/02/2022 ರಂದು ಸಾಯಂಕಾಲ 4:00 ಗಂಟೆಗೆ ಕಲಬುರಗಿ ನಗರದ ಆರ್ಚಿಡ್ ಮಾಲ್ ಮುಂದುಗಡೆ ನಿಲ್ಲಿಸಿ ಒಳಗಡೆ ಜಿಯೋ ಮಾರ್ಟಗೆ ಹೋಗಿ ಹಣವನ್ನು ಕಟ್ಟಿ ಮರಳಿ ಅದೇ ದಿನ ಸಾಯಂಕಾಲ 5:00 ಗಂಟೆಗೆ ಬಂದು ನಾನು ನಿಲ್ಲಿಸಿದ ಸ್ಥಳದಲ್ಲಿ ಮೋಟಾರ್ ಸೈಕಲ್ ನೋಡಲಾಗಿ ನನ್ನ ಮೋಟಾರ್ ಸೈಕಲ್ ಇರಲಿಲ್ಲಾ, ಮೋಟಾರ್ ಸೈಕಲ್ ಪತ್ತೆ ಕುರಿತು ಎಲ್ಲಾ ಕಡೆ ಹುಡುಕಾಡಿ ಸಿಗದ ಕಾರಣ ಮತ್ತು ನಾನು ಕೆಲಸಕ್ಕೆ ಎಂದು ಬೆಂಗಳೂರು ನಗರಕ್ಕೆ ಹೋಗಿದ್ದು. ಕೆಲಸ ಮಾಡಿಕೊಂಡು ಅಲ್ಲೆ ಉಳಿದಿದ್ದು ಈಗ ಎರಡು ದಿವಸಗಳ ಹಿಂದೆ ಕಲಬುರಗಿ ನಗರಕ್ಕೆ ಬಂದಿರುತ್ತೇನೆ. ಆದ ಕಾರಣ ಠಾಣೆಗೆ ಬಂದು ಫಿರ್ಯಾದಿ ಕೊಡಲು ತಡವಾಗಿರುತ್ತದೆ. ಕಾರಣ ಕಳುವಾದ ನನ್ನ ಮೋಟಾರ್ ಸೈಕಲನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಎಂದು ಫಿರ್ಯಾದಿ ಕೊಟ್ಟ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಬಹ್ಮಪೂರ ಪೊಲೀಸ್‌ ಠಾಣೆ :- ದಿನಾಂಕ: 15/01/2023 ರಂದು 6:00 ಪಿ.ಎಂಕ್ಕೆ ಠಾಣೆಯಲ್ಲಿದ್ದಾಗ ಎ.ಎಸ್,ಎಂ ಆಸ್ಪತ್ರೆಯಿಂದ ಎಮ್.ಎಲ್.ಸಿ ಇರುತ್ತದೆ ಅಂತಾ ಮಾಹಿತಿ ಬಂದ ಮೇರೆಗೆ ನಾನು 6:30 ಪಿ.ಎಂಕ್ಕೆ ಎ.ಎಸ್.ಎಂ ಆಸ್ಪತ್ರೆಗೆ ಭೇಟಿಕೊಟ್ಟು ಗಾಯಾಳು ಮರೆಪ್ಪಾ ತಂದೆ ಬಂದಗೆಪ್ಪಾ ತಳಕೇರಿ ವಯಸ್ಸು ೪೮ ವರ್ಷ ಜಾತಿ; ಎಸ್.ಸಿ (ಹರಿಜನ) ಉ; ಕೂಲಿಕೆಲಸ (ಗೌಂಡಿ ಕೆಲಸ) ಸಾ; ಸಣ್ಣೂರ ತಾ;ಜಿ; ಕಲಬುರಗಿ ಇವರಿಗೆ ವಿಚಾರಿಸಲಾಗಿ ಹೇಳಿಕೆ ಪಿರ್ಯಾದಿ ಸಲ್ಲಿಸಿದ ಸಾರಾಂಶವೆನೆಂದರೆ, ನನ್ನ ಹೆಂಡತಿ ಶಾಂತಾಬಾಯಿ ಇವಳ ತಂಗಿ ರೇಣುಕಾ ಹುಗ್ಗಿ ರವರ ಮಗನಾದ ಶರಣು @ ಗೌತಮ ಈತನು ಸುಮಾರು ೧ ವಾರದ ಹಿಂದೆ ಮೋಟಾರ್ ಸೈಕಲ್ ಮೇಲಿಂದ ಬಿದ್ದು, ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಸೇರಿಕೆಯಾಗಿ ಉಪಚಾರ ಪಡೆಯುತ್ತಿದ್ದನು. ಇಂದು ದಿನಾಂಕ ೧೫/೦೧/೨೦೨೩ ರಂದು ಮದ್ಯಾಹ್ನ ೩-೦೦ ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಹೆಂಡತಿ ಶಾಂತಾಬಾಯಿ ಕೂಡಿಕೊಂಡು ನಮ್ಮ ಸಂಬಂದಿ ಶರಣು @ ಗೌತಮ ಈತನಿಗೆ ಮಾತನಾಡಿಸಿಕೊಂಡು ಬರಲು ಅಂತಾ ನಮ್ಮ ಊರಿನಿಂದ ಹೋರಟು ಕಲಬುರಗಿಯ ಜಿಲ್ಲಾ ಸರಕಾರಿ ಜೀಮ್ಸ್ ದವಾಖಾನೆಯ ಎದುರುಗಡೆ ಬಂದು ಅಲ್ಲಿ ಎಳನೀರು ತೆಗೆದುಕೊಂಡು ಹೋಗಬೇಕು ಅಂತಾ ಆಸ್ಪತ್ರೆ ಎದುರುಗಡೆ ಇದ್ದ ಒಂದು ಎಳನೀರು ಅಂಗಡಿಗೆ ಹೋಗಿ ನಾನು ಒಂದು ಎಳನೀರು ಎಷ್ಟು ರೂಪಾಯಿಗೆ ಅಂತಾ ಕೇಳಿದಾಗ ಅಂಗಡಿಯಲ್ಲಿದ್ದ ಒಬ್ಬನು 50/- ರೂ ಗೆ ಒಂದು ಅಂತಾ ಹೇಳಿದನು. ನಾನು ಅವನಿಗೆ 40/- ರೂಪಾಯಿ ಮಾಡಿ ಒಂದು ಏಳನೀರು ಕೊಡು ಅಂತಾ ಹೇಳಿದಾಗ ಅವನು 40/- ರೂಪಾಯಿಗೆ ಕೊಡು ಅಂತಾ ಕೇಳುತ್ತಿ ರಂಡಿ ಮಗನೇ ಅಂತಾ ಬೈದು ಅಲ್ಲೇ ಇದ್ದ ಎಳನೀರು ಕತ್ತಿರುಸುವ ಮಚ್ಚು ತೆಗೆದುಕೊಂಡು ನನ್ನ ಎಡಗೈ ಉಂಗುರ ಬೆರಳಿಗೆ ಹೊಡೆದು ತೀವ್ರ ಭಾರಿ ರಕ್ತಗಾಯ ಪಡಿಸಿ ಬೆರಳು ಕತ್ತಿರಿಸಿದಾಗ  ಅವನು ನನಗೆ ಅಲ್ಲೇ ಅಂಗಡಿಯಲ್ಲಿ ಎಳೆದುಕೊಂಡು ಹೋಗುತ್ತಿದ್ದಾಗ ನಾನು ಬಿಡಿಸಿಕೊಂಡು ಓಡಿ ಬಂದೆನು. ನನಗೆ ಹೊಡೆಯುವುದನ್ನು ಅಲ್ಲೇ ಇದ್ದ ಜನರು ನೋಡಿರುತ್ತಾರೆ. ನನಗೆ ಬೈದು ಹೊಡೆದು ಭಾರಿ ರಕ್ತಗಾಯ ಪಡಿಸಿದವನಿಗೆ ನೋಡಿದಲ್ಲಿ ಗುರುತಿಸುತ್ತೇನೆ. ಈ ಘಟನೆಯು ಇಂದು ಮದ್ಯಾಹ್ನ ೪-೦೦ ಗಂಟೆ ಸುಮಾರಿಗೆ ಜರುಗಿರುತ್ತದೆ. ನಂತರ ನಾನು ಮತ್ತು ನನ್ನ ಹೆಂಡತಿ ಕೂಡಿಕೊಂಡು ಉಪಚಾರ ಕುರಿತು ಎ.ಎಸ್.ಎಂ ಆಸ್ಪತ್ರೆಗೆ ಬಂದು ಸೇರಿಕೆ ಆಗಿರುತ್ತೇವೆ. ಆಸ್ಪತ್ರೆ ಎದುರುಗಡೆ ಇರುವ ಎಳನೀರು ಅಂಗಡಿಯಲಿ ಕುಳಿತುಕೊಂಡವನು ೪-೦೦ ಪಿ.ಎಂ ಸುಮಾರಿಗೆ ನನಗೆ ಬೋಸಡಿ ಮಗನೇ, ರಂಡಿ ಮಗನೇ, ಅಂತಾ ಬೈದು ಎಳನೀರು ಕತ್ತಿರಿಸುವ ಮಚ್ಚಿನಿಂದ ನನ್ನ ಎಡಗೈ ಉಂಗುರ ಬೆರಳಿಗೆ ಹೊಡೆದು ಭಾರಿ ತೀವ್ರ ಸ್ವೂರಪದ ರಕ್ತಗಾಯ ಪಡಿಸಿದವನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಫಿರ್ಯಾದಿ ಕೊಟ್ಟ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

  

ರೋಜಾ ಪೊಲೀಸ್‌ ಠಾಣೆ :- ದಿನಾಂಕ: 15/01/2023 ರಂದು ಬೇಳಿಗ್ಗೆ ಜಲಾಲವಾಡಿಯಲ್ಲಿರುವ ದಾರ್ಲೂಮ್  ಅತಾಯೆ ಬಂದೆನವಾಜ ಮದರಸ ಶಾಲೆಯಲ್ಲಿ ಸ್ಟಚ್ಛಗೋಳಿಸುತ್ತಿರುವಾಗ ಆಕಸ್ಮೀಕವಾಗಿ   ಸದರಿ ಮದರಸ ಶಾಲೆಯ ಸರ್ವೀಸ್ ವಾಯರ್ ತಗುಲಿ ಸಮಯ 02:30 ಪಿಎಮ್ ಕ್ಕೆ ಮಹ್ಮದ ಜೀಲಾನಿ ಮೃತ ಹೊಂದಿದ್ದು ಇರುತ್ತದೆ.

ಇತ್ತೀಚಿನ ನವೀಕರಣ​ : 16-01-2023 01:56 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080