ಅಭಿಪ್ರಾಯ / ಸಲಹೆಗಳು

ಸಂಚಾರಿ ಪೊಲೀಸ್‌ ಠಾಣೆ-2:- ದಿನಾಂಕ: 14/12/2022 ರಂದು ಬೆಳಿಗ್ಗೆ 06:30 ಗಂಟೆಗೆ ಶ್ರೀಮತಿ. ಮಿನಾಕ್ಷಿ ಗಂಡ ರಾಜು ರಾಠೋಡ ವ; 30 ವರ್ಷ ಜಾ; ಲಂಬಾಣಿ ಉ; ಕೂಲಿ ಕೆಲಸ ಸಾ; ಕಾಳನೂರ ಹಾ; ವ; ಮಡ್ಡಿ ತಾಂಡಾ ಫಿಲ್ಟರ್ ಬೇಡ ಕಲಬುರಗಿ, ಇವರು ಠಾಣೆಗೆ ಹಾಜರಾಗಿ ಒಂದು ಹೇಳಿಕೆ ಕೊಟ್ಟಿದ್ದು ಸಾರಂಶವೆನೆಂದರೆ, ದಿನಾಂಕ 12/12/2022 ರಂದು ನನ್ನ ಗಂಡ ರಾಜು ರಾಠೋಡ ಹಾಗೂ ಅವರ ಮಾವನ ಮಗನಾದ ಪ್ರಕಾಶ ತಂದೆ ವಿಠಲ ಚವ್ಹಾಣ ಇಬ್ಬರೂ ಕಾಳನೂರಿಗೆ ಹೋಗಿ ತನ್ನ ತಂದೆ ತಾಯಿಗೆ ಮಾತನಾಡಿ ಬರುತ್ತೇನೆ ಅಂತಾ ಮದ್ಯಾಹ್ನ 3-00 ಗಂಟೆಗೆ ಕಾಳನೂರಿಗೆ ಹೋಗಿದ್ದರು ರಾತ್ರಿ ನನ್ನ ಗಂಡನ ದಾರಿ ಕಾಯುತ್ತಾ ಮನೆಯಲ್ಲಿ ಇರುವಾಗ ಪ್ರಕಾಶ ಚವ್ಹಾಣ ಇವರು ನನಗೆ ಪೋನ್ ಮಾಡಿ ನಾನು ಮತ್ತು ರಾಜು ರಾಠೋಡ ಇಬ್ಬರೂ ಕಾಳನೂರಿಗೆ ಹೋಗಿ ನಿಮ್ಮ ಮಾವನವರಿಗೆ ಮಾತನಾಡಿಸಿ ಮರಳಿ ಕಲಬುರಗಿಗೆ ಬರುವ ಕುರಿತು ಕಾಳನೂರ ಕ್ರಾಸಿಗೆ ಬಂದು ವಿಶ್ವ ದಾಬಾ ಹತ್ತಿರ ಬಸ್ಸಿಗಾಗಿ ನಾವಿಬ್ಬರೂ ದಾರಿ ಕಾಯುತ್ತಿರುವಾಗ ರಾತ್ರಿ 9-00 ಗಂಟೆ ಸುಮಾರಿಗೆ ಮೋಟಾರ ಸೈಕಲ ನಂ ಕೆಎ-32 ಜಿ 0587 ನೇದ್ದರ ಸವಾರನು ಸೇಡಂ ಕಡೆಯಿಂದ ಕಲಬುರಗಿ ಕಡೆಗೆ ಹೋಗುವ ಕುರಿತು ತನ್ನ ಮೋಟಾರ ಸೈಕಲನ್ನು ಅತಿವೇಗದಿಂದ ಮತ್ತು ಅಲಕ್ಷತನದಿಂದ ಬಂದು ರಸ್ತೆಯ ಬದಿಯಲ್ಲಿ ನಿಂತ್ತಿದ್ದ ನಿಮ್ಮ ಗಂಡ ರಾಜು ರಾಠೋಡ ಈತನಿಗೆ ಡಿಕ್ಕಿ ಪಡಿಸಿ ಆತನು ಕೂಡಾ ಮುಂದೆ ಹೋಗಿ ಮೋಟಾರ ಸೈಕಲ ಸಮೇತ ಬಿದಿದ್ದು ಸದರ ಘಟನೆಯಿಂದ ನಿನ್ನ ಗಂಡನಿಗೆ ಎಬ್ಬಿಸಿ ನೋಡಲು ತೆಲೆಗೆ ಜೋರಾಗಿ ಪೆಟ್ಟು ಬಿದಿದ್ದು ಎರಡು ಕಿವಿಯಿಂದ ಹಾಗೂ ಮೂಗಿನಿಂದ ರಕ್ತ ಸ್ರಾವವಾಗುತ್ತಿದ್ದು ಮತ್ತು ಬಲ ತೊಡೆ ಮುರಿದಂತೆ ಆಗಿದ್ದು ಆತನು ಮಾತನಾಡುವ ಸ್ಥಿತಿಯಲ್ಲಿ ಇಲ್ಲಾ ಅಂಬುಲೈನ್ಸ ವಾಹನ ಬಂದಿದ್ದು ನಾನು ನಿನ್ನ ಗಂಡ ರಾಜು ರಾಠೋಡನಿಗೆ ಸದರ ಅಂಬುಲೈನ್ಸನಲ್ಲಿ ಹಾಕಿಕೊಂಡು ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುತ್ತೇನೆ ನೀವು ಬರಬೇಕೆಂದು ತಿಳಿಸಿದ ಮೇರೆಗೆ ನಾನು ಜಿಲ್ಲಾ ಸರಕಾರಿ ಆಸ್ಪತ್ರೆಗೆ ಹೋಗಿ ನನ್ನ ಗಂಡನಿಗೆ ನೋಡಲು ಪ್ರಕಾಶ ಚವ್ಹಾಣ ಇವರು ಮೇಲೆ ತಿಳಿಸಿದಂತೆ ಗಾಯಗಳಾಗಿ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲಾ ಸದರಿ ಅಪಘಾತಕ್ಕೆ ಸಂಭಂದ ಪಟ್ಟಂತೆ ನಿನ್ನೆ ದಿನಾಂಕ-13/12/2022 ರಂದು 6-30 ಪಿ.ಎಮ್ ಕ್ಕೆ ಪ್ರಕಾಶ ತಂದೆ ವಿಠಲ ಚವ್ಹಾಣ ಇವರು ನಿಮ್ಮ ಕಡೆಗೆ ಒಂದು ಕನ್ನಡದಲ್ಲಿ ಟೈಪ ಮಾಡಿದ ಫಿರ್ಯಾಧಿಯನ್ನು ಸಲ್ಲಿಸಿದ್ದು ಅದರ ಮೇಲಿಂದ ಗುನ್ನೆ ನಂ 265/2022 ಕಲಂ 279.337,338 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಾಗಿದ್ದು ಇರುತ್ತದೆ, ಈಗ ಮುಂದು ವರೆದು ಹೇಳುವುದೆನೆಂದರೆ ದಿನಾಂಕ-12/12/2022 ರಂದು ನನ್ನ ಗಂಡ ರಾಜು ರಾಠೋಡ ಈತನಿಗೆ ಕಾಳನೂರ ಕ್ರಾಸ ವಿಶ್ವ ದಾಬಾ ಹತ್ತಿರ ಮೋಟಾರ ಸೈಕಲ ನಂ ಕೆಎ-32 ಜಿ 0587 ನೇದ್ದರ ಸವಾರನು ಅತಿವೇಗದಿಂದ ಮತ್ತು ಅಲಕ್ಷತನದಿಂದ ಬಂದು ಅಪಘಾತ ಪಡಿಸಿದ ನಂತರ ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿಯಲ್ಲಿ ಉಪಚಾರಕ್ಕಾಗಿ ಸೇರಿಕೆ ಮಾಡಿದ್ದು ನನ್ನ ಗಂಡ ರಾಜು ರಾಠೋಡ ಈತನ ಪರಸ್ಥಿತಿಯು ಚಿಂತಾಜನಕವಾಗಿರುವುದರಿಂದ ನಿನ್ನೆ ದಿನಾಂಕ-13/12/2022 ರಂದು ರಾತ್ರಿ 11-35 ಗಂಟೆ ಸುಮಾರಿಗೆ ಆಸ್ಪತ್ರೆಯಲ್ಲಿ ಗುಣಮುಖವಾಗದೆ ಮೃತ ಪಟ್ಟಿರುತ್ತಾರೆ. ಈ ವಿಷಯದಲ್ಲಿ ಮುಂದಿನ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಅಂತಾ ಕೊಟ್ಟ ಹೇಳಿಕೆ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸ್ಟೇಷನ್‌ ಬಜಾರ ಪೊಲೀಸ್‌ ಠಾಣೆ :- ದಿನಾಂಕ: 14-12-2022 ರಂದು ಬೆಳಿಗ್ಗೆ ೧೦-೩೦ ಗಂಟೆಗೆ ಫಿರ್ಯಾಧಿದಾರರಾದ.ಶ್ರೀ. ಜಗದೀಶ ತಂದೆ ಗುರುಭೀಮ ದುದನಿ ವಯಸ್ಸು ೩೭ ವರ್ಷ ಜಾತಿ ಲಿಂಗಾಯತ, ಉ: ಕಿರಾಣಾ ಅಂಗಡಿ ವ್ಯಾಪಾರ. ಸಾ; ಮನೆ ನಂ, ೭೭ ವಿದ್ಯಾನಗರ ಕಲಬುರಗಿ ನಗರ ಎಂಬುವರು ಪೊಲೀಸ್ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ನಾನು ವಿದ್ಯಾನಗರದಲ್ಲಿ ಕಿರಾಣಾ ಅಂಗಡಿ ಇಟ್ಟುಕೊಂಡು ಜೀವನ ಮಾಡಿಕೊಂಡಿರುತ್ತೇನೆ. ನನ್ನ ಅಜ್ಜ ದಿವಂಗತ ದೂಳಪ್ಪ ತಂದೆ ಸೈದಪ್ಪ ದುದನಿ ರವರ ಹೆಸರಿನಲ್ಲಿ ಕಲಬುರಗಿ ನಗರದ ವಿದ್ಯಾನಗರದಲ್ಲಿನ ಮನೆ ನಂ:೭೭ ೧೧-೧೫೦೬/ಎ ಮನೆ ಇರುತ್ತದೆ. ನನ್ನ ಅಜ್ಜ ಧೂಳಪ್ಪ ರವರು ದಿನಾಂಕ:೨೫-೧೧-೨೦೦೪ ರಂದು ಮೃತ ಪಟ್ಟಿರುತ್ತಾರೆ. ನಂತರ ದಿನಾಂಕ:೩೧-೦೮-೨೦೧೯ ರಂದು ಮಹಾನಗರ ಪಾಲಿಕೆಯಲ್ಲಿ ಶಂಕರ ತಂದೆ ಗುರುಶರಣ ದುದನಿ ಮತ್ತು ಆತನ ಹೆಂಡತಿ ಸಂಗೀತಾ ಗಂಡ ಶಂಕರ ದುದನಿ ಸಾ: ವಿಧ್ಯಾನಗರ ಇಬ್ಬರು ಕೂಡಿಕೊಂಡು ಸುಳ್ಳು ದಾಖಲಾತಿಗಳನ್ನು ಸೃಷ್ಟಿಸಿಕೊಂಡು ನನ್ನ ಅಜ್ಜ ದಿವಂಗತ ಧೂಳಪ್ಪ ತಂದೆ ಸೈದಪ್ಪ ದುದನಿ ರವರ ಹೆಸರಿನಲ್ಲಿರುವ ಮನೆ ನಂ: ೭೭, ೧೧-೧೫೦೬/ಎ ಮನೆಯನ್ನು ಗುರುಶರಣ ತಂದೆ ದೂಳಪ್ಪ ದುದನಿ ಇವರ ಹೆಸರಿಗೆ ಮಾಡಿಸಿ, ನಂತರ ದಿನಾಂಕ;೦೪/೦೧/೨೦೨೦ ರಂದು ಕಲಬುರಗಿ ಇಎಸ್‌ಐ ಆಸ್ಪತ್ರೆ ಎದುರುಗಡೆ ಇರುವ ಡಿಸಿಬಿ ಬ್ಯಾಂಕ್ ಕೂಸನೂರ ಶಾಖೆಯಿಂದ 13,೦೦,೦೦೦/-ರೂ ಶಂಕರ ತಂದೆ ಗುರುಶರಣ ರವರು ಸಾಲ ಪಡೆದುಕೊಂಡಿರುತ್ತಾನೆ. ನಂತರ ಮಹಾನಗರ ಪಾಲಿಕೆಯಲ್ಲಿ ಇದ್ದ ಸುಳ್ಳು ದಾಖಲಾತಿಗಳನ್ನು ಪಡೆದುಕೊಂಡು ದಿನಾಂಕ:೦೭/೦೧/೨೦೨೦ ರಂದು ಮಾನ್ಯ ಜಿಲ್ಲಾಧಿಕಾರಿಗಳ ಕಛೇರಿ ಕೆಳಗಡೆ ಇರುವ ಹೆಚ್ಚುವರಿ ಉಪ ನೊಂದಣಿ ಅಧಿಕಾರಿಗಳ ಕಛೇರಿಯಲ್ಲಿ ಗುರುಶರಣ ತಂದೆ ದೂಳಪ್ಪ ರವರ ಹೆಸರಿನಲ್ಲಿರುವ ಮನೆ ನಂ:೭೭ ೧೧-೧೫೦೬/ಎ ಮನೆಯನ್ನು ಶಂಕರ ತಂದೆ ಗುರುಶರಣ ತನ್ನ ಹೆಸರಿಗೆ ಗಿಪ್ಟೇಡ್ ಮಾಡಿಕೊಂಡಿರುತ್ತಾನೆ. ದಿನಾಂಕ:೧೬-೧೦-೨೦೨೨ ರಂದು ಡಿಸಿಬಿ ಬ್ಯಾಂಕ್ ಸಾಲ ವಸೂಲಿಗೆ ಬಂದಾಗ ನನಗೆ ಗೋತ್ತಾದ ನಂತರ ನಮ್ಮ ಮನೆಯಲ್ಲಿ ಹಿರಿಯರೊಂದಿಗೆ ವಿಚಾರಿಸಿಕೊಂಡು ತಡವಾಗಿ ಠಾಣೆಗೆ ಬಂದು ದೂರು ನೀಡಿರುತ್ತೇನೆ. ಆದ್ದರಿಂದ ಸುಳ್ಳು ದಾಖಲಾತಿಗಳನ್ನು ಸೃಷ್ಠಿಸಿ ದಿವಂಗತ ದೂಳಪ್ಪ ದುದನಿ ರವರ ಹೆರಿಸನಲ್ಲಿರುವ ಆಸ್ತಿಯನ್ನು ತನ್ನ ತಂದೆ ಗುರುಶರಣ ರವರ ಹೆಸರಿಗೆ ಮಾಡಿಕೊಂಡು ಬ್ಯಾಂಕನಿಂದ ಸಾಲ ಪಡೆದುಕೊಂಡು ನಂತರ ತನ್ನ ಹೆಸರಿಗೆ ಮನೆ ನಂ: ೭೭, ೧೧-೧೫೦೬/ಎ ಅನ್ನು ಗಿಪ್ಟೇಡ್ ಮಾಡಿಕೊಂಡು ಮೋಸ ಮಾಡಿದವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಬ್ರಹ್ಮಪೂರ ಪೊಲೀಸ್‌ ಠಾಣೆ :- ದಿನಾಂಕ: 14-12-2022 ರಂದು ಮದ್ಯಾಹ್ನ ೧:೪೫ ಗಂಟೆಗೆ ಫಿರ್ಯಾದಿದಾರರಾದ ಶ್ರೀ ಭಾಗೇಶ ತಂದೆ ಕಲ್ಯಾಣಿ ವಾಲಿ ವಯ:೨೧ವರ್ಷ ಜಾ:ಲಿಂಗಾಯತ ಉ:ವಿದ್ಯಾರ್ಥಿ ಸಾ//ಬಸವಣ್ಣ ದೇವಸ್ಥಾನದ ಹತ್ತಿರ ಮಹಾದೇವನಗರ ರೋಡ ಸಂಜಯ ಗಾಂಧಿ ನಗರ ಕಲಬುರಗಿ ನಗರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ನನ್ನದೊಂದು ಸ್ವಂತ ಹೊಂಡಾ ಡಿಯೋ ಮೋಟಾರ್ ಸೈಕಲ್ ನಂ KA-32-EX-0658 ನೇದ್ದು ಇದ್ದು ಸದರಿ ಮೋಟಾರ್ ಸೈಕಲ್ ನನ್ನ ಹೆಸರಿನಲ್ಲಿರುತ್ತದೆ. ಸದರಿ ಮೋಟಾರ್ ಸೈಕಲವು ದಿನಾಂಕ:೧೪/೧೦/೨೦೨೨ ರಂದು ಸಾಯಂಕಾಲ ೬:೦೦ ಗಂಟೆಗೆ ಕಲಬುರಗಿ ನಗರದ ಸೂಪರ್ ಮಾರ್ಕೆಟದ ಶ್ರೀ ಲಕ್ಷ್ಮೀ ಸಿಲ್ಕಹೌಸ್ ಹತ್ತಿರ ಇರುವ ಚೌಪಟ್ಟಿ ಮುಂದೆ ನಿಲ್ಲಿಸಿ ಮಾರ್ಕೆಟ್ ಒಳಗಡೆ ಹೋಗಿ ತರಕಾರಿ ತೆಗೆದುಕೊಂಡು ಮರಳಿ ಅದೇ ದಿನ ಸಾಯಂಕಾಲ ೭:೦೦ ಗಂಟೆಗೆ ನಾನು ನಿಲ್ಲಿಸಿದ ಸ್ಥಳದಲ್ಲಿ ಬಂದು ಮೋಟಾರ್ ಸೈಕಲ್ ನೋಡಲಾಗಿ ನನ್ನ ಮೋಟಾರ್ ಸೈಕಲ್ ಇರಲಿಲ್ಲಾ. ಕಾರಣ ಕಳುವಾದ ನನ್ನ ಮೋಟಾರ್ ಸೈಕಲನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಎಂದು ಕೊಟ್ಟ ದೂರು ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಅಶೋಕ ನಗರ ಪೊಲೀಸ್‌ ಠಾಣೆ :- ದಿನಾಂಕ : 14.12.2022 ರಂದು 06:00 ಪಿ.ಎಂ.ಕ್ಕೆ  ಫಿರ್ಯಾದಿ ಶ್ರೀ  ಮಹಾವೀರ ತಂದೆ ಶ್ರೀಕಾಂತ ಹೆಗ್ರೆ ವಯ: 39 ವರ್ಷ ಜಾ: (ಎಸ್.ಸಿ) ಹೊಲೆಯ ಉ: ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕ ಸಾ|| ವೀರ ತಪಸ್ವಿ ಶಾಲೆ ಹತ್ತಿರ ಬಿದ್ದಾಪೂರ ಕಾಲೋನಿ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿ ದೂರು ಸಲ್ಲಿಸಿದ್ದರ ಸಾರಾಂಶವೆನೆಂದರೆ, ನಾನು ನನ್ನ ದಿನ ನಿತ್ಯದ ಕೆಲಸಕ್ಕೆ ಓಡಾಡುವ ಸಲುವಾಗಿ 2012 ನೇ ಸಾಲಿನಲ್ಲಿ ಒಂದು ನೀಲಿ ಬಣ್ಣದ ಹಿರೊ ಹೊಂಡಾ ಸ್ಪ್ಲೆಂಡರ ಪ್ರೋ ಮೋಟಾರ ಸೈಕಲ್ ನಂ ಕೆ.ಎ-23 ಇ.ಸಿ-7993  ಚೆಸ್ಸಿ ನಂ MBLHA10ADCHC08694 ಇಂಜಿನ್ ನಂ HA10EHCHC09400   ಅ. ಕಿ. 35000/-  ರೂಪಾಯಿ ನೇದ್ದು  ನನ್ನ ಹೆಸರಿನಿಂದ ಖರೀದಿಸಿದ್ದು ಇರುತ್ತದೆ. ನಾನು ಶಹಾಪೂರ ತಾಲೂಕಿನ ಮದ್ದರಕಿ ವಲಯದ ಸಂಪನ್ಮೂಲ ವ್ಯಕ್ತಿ ಅಂತ ಕರ್ತವ್ಯ ನಿರ್ವಹಿಸುತ್ತಿದ್ದು ದಿನಾಲು ಕಲಬುರಗಿಯಿಂದ ಹೋಗಿ ಬರುತ್ತೇನೆ. ನಾನು ದಿನಾಲು ನನ್ನ ದ್ವಿ-ಚಕ್ರ ವಾಹನವನ್ನು ಕರುಣೇಶ್ವರ ನಗರ ರಾಮ ಮಂದಿರ ಹತ್ತಿರ ಇರುವ ಅಪ್ಪುಗೌಡ ಕಾಂಪ್ಲೇಕ್ಸ ಎದರುಗಡೆ ನನ್ನ ವಾಹನವನ್ನು ಬೆಳಿಗ್ಗೆ 08:30  ಗಂಟೆಗೆ ನಿಲ್ಲಿಸಿ ನಂತರ ಸಾಯಂಕಾಲ 05:00 ಗಂಟೆಗೆ ಬಂದು ತೆಗೆದುಕೊಂಡು ಹೋಗುತ್ತೇನೆ. ಹೀಗಿದ್ದು ದಿನಾಂಕ:09.12.2022 ರಂದು ಬೆಳಿಗ್ಗೆ 08:30 ಗಂಟೆಗೆ ನನ್ನ ದ್ವಿ-ಚಕ್ರ ವಾಹನವನ್ನು ಎಂದಿನಂತೆ ರಾಮಮಂದಿರ ಹತ್ತಿರ ಇರುವ ಅಪ್ಪುಗೌಡ ಕಾಂಪ್ಲೇಕ್ಸ ಹತ್ತಿರ ನಿಲ್ಲಿಸಿ ನನ್ನ ಕರ್ತವ್ಯಕ್ಕೆ ಹೋಗಿರುತ್ತೇನೆ. ನಂತರ ನನ್ನ ಕರ್ತವ್ಯ ಮುಗಿಸಿಕೊಂಡು ಮರಳಿ 5:00 ಗಂಟೆಗೆ ಬಂದು ನೋಡಲಾಗಿ ನಾನು ಬೆಳಿಗ್ಗೆ ನಿಲ್ಲಿಸಿದ್ದ ಸ್ಥಳದಲ್ಲಿ ನನ್ನ ದ್ವಿ-ಚಕ್ರ ವಾಹನ ಇದ್ದಿರುವುದಿಲ್ಲ.. ಇಲ್ಲಿಯವರಗೆ ನಾನು ಕಲಬುರಗಿ ನಗರದಲ್ಲಿ ಎಲ್ಲಾ ಕಡೆಯಲ್ಲಿ ತಿರುಗಾಡಿ ಕಳ್ಳತನವಾದ ನನ್ನ ವಾಹನ ಹುಡುಕಾಡಿ ಇಂದು ತಡವಾಗಿ ಠಾಣೆಗೆ ಬಂದು ದೂರು ಸಲ್ಲಿಸುತ್ತಿದ್ದು, ಕಳವುವಾದ ನನ್ನ ಮೋಟಾರ ಸೈಕಲನ್ನು ಪತ್ತೆ ಮಾಡಿ ಕಳ್ಳತನ ಮಾಡಿದವರ ವಿರುದ್ದ ಕಾನೂನು ರೀತಿ ಕ್ರಮ ಜರುಗಿಸಿ ನನ್ನ ವಾಹನ ನನಗೆ ದೊರಕಿಸಿ ಕೊಡಲು ವಿನಂತಿ ಅಂತ ವಗೈರೆಯಾಗಿ ಇದ್ದ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ರೋಜಾ ಪೊಲೀಸ್‌ ಠಾಣೆ :- ದಿನಾಂಕ : 14.12.2022 ರಂದು  02:00 ಪಿ ಎಮ್ ಕ್ಕೆ  ನೂರಭಾಗ ಕ್ರಾಸ್ ದ್ವೇಷವಿಟ್ಟುಕೊಂಡು ಮೇರಾ ಕ್ಲಾಸ್ ಮೆಟ್ ಲಡಕೀಕೆ ಸಾಥ್ ಬಹುತ್ ಬಾತ್ ಕರತೇ ಸಾಲೆ ತೂ ಅಂತಾ ಮುಜಾಮೀಲ್ ಖುರೇಶಿ ಈತನೂ ಪಿರ್ಯಾದಿಗೆ  ಅವಾಚ್ಯ ಶಬ್ದಗಳಿಂದ ಬೈದು ಕಪಾಳಕ್ಕೆ ಹೊಡೆದು ಕೊಲೆ ಮಾಡುವ ಉದ್ದೇಶದಿಂದ  ತನ್ನ ಬಳಿ ಇದ್ದ ಹರಿತವಾದ ಚಾಕುವಿನಿಂದ ಪೀರ್ಯಾದಿಗೆ ಸೊಂಟದ ಎಡ ಭಾಗಕ್ಕೆ ಜೋರಾಗಿ ಚುಚ್ಚಿ ಬಾರಿ ರಕ್ತ ಗಾಯ ಪಡಿಸಿ ಓಡಿ ಹೋಗಿರುತ್ತಾನೆ. ಆಗ ಪಿರ್ಯಾದಿಯ  ಜೊತೆಯಲ್ಲಿ ಇದ್ದ ಅತಾವುಲ್ಲಾ  ಮತ್ತು ಮಹ್ಮದ್ ಉಜೇರ್ ಅಲಿ ಇವರು ಪರಿಚಯದವರ ದ್ವಿಚಕ್ರ ವಾಹನ ತೆಗೆದುಕೊಂಡು ಉಪಚಾರ ಕುರಿತು ಬಹುಮನಿ ಆಸ್ಪತ್ರೆಗೆ ತಂದಿದ್ದು, ಆದರೆ ಆಸ್ಪತ್ರೆಯವರು ಮಣೂರು ಆಸ್ಪತ್ರೆಗೆ ಹೋಗಲು ತಿಳಿಸಿದ್ದರಿಂದ ಮಣೂರು ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತಾರೆ. ಕಾರಣ ಮುಜಾಮಿಲ್ ಖುರೇಶಿ ಈತನ ಕ್ಲಾಸಮೇಟ್ ಹುಡುಗಿಯ ಜೋತೆಗೆ ಮಾತನಾಡುತ್ತೀ ಅನ್ನುವ ದ್ವೇಷ ಇಟ್ಟುಕೊಂಡು ನನಗೆ ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ಹೊಡೆದು ಕೊಲೆ ಮಾಡಲು ಪ್ರಯತ್ನಿಸಿದ ಮುಜಾಮಿಲ್ ಖುರೇಶಿ ಈತನ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಇತ್ತೀಚಿನ ನವೀಕರಣ​ : 15-12-2022 02:00 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080