ಅಭಿಪ್ರಾಯ / ಸಲಹೆಗಳು

  ಸಬ್ ಅರ್ಬನ್ ಪೊಲೀಸ್ ಠಾಣೆ :-  ಇಂದು ದಿನಾಂಕ ೧೪/೧೨/೨೦೨೧ ರಂದು ಪಿರ್ಯಾದಿಯಾದ ಮನಿಷಾ ತಂದೆ ಕಿಮ್ಮನಾಯಕ ಚೆವ್ಹಾಣ ವಯಾ; ೩೨ ವರ್ಷ ಜಾ:ಲಂಬಾಣಿ ಉ: ವ್ಯಾಪಾರ ಸಾ; ಲಂಗರ ಹನುಮಾನ ನಗರ ಕಲಬುರಗಿ ಇವರು ಆಸ್ಪತ್ರೆಯಲ್ಲಿ ದೂರು ಸಲ್ಲಿಸಿದೆನೆಂದರೆ ನಾನು ಮನಿಷಾ ತಂದೆ ಕಿಮ್ಮನಾಯಕ ಚೆವ್ಹಾಣ ವಯಾ; ೩೨ ವರ್ಷ ಜಾ:ಲಂಬಾಣಿ ಉ: ವ್ಯಾಪಾರ ಸಾ; ಲಂಗರ ಹನುಮಾನ ನಗರ ಕಲಬುರಗಿ ಇದ್ದು ಈ ಅರ್ಜಿ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳೂವದೆನೆAದರೆ ನನ್ನದೊಂದು ಲಂಗರ ಹನಮಾನ ನಗರದಲ್ಲಿ ಮನೆ ಇದ್ದು ನಾನು ನಮ್ಮ ಸಮುದಾಯದ (ಮಂಗಳ ಮುಖಿ) ಸ್ನೇಹಾ ಸೋಸೈಟಿಯಲ್ಲಿ  ಎಮ್‌ಎಸ್‌ಎಮ್ ಟಿಐ ಕಾರ್ಯಕ್ರಮ ನಿರ್ದೆಶಕರಾಗಿ ೬ ವರ್ಷದಿಂದ ಕೆಲಸ ಮಾಡುತ್ತಾ ಬಂದಿದ್ದು ಇರುತ್ತದೆ. ನಮ್ಮ ಮತ್ತು ನಮ್ಮ ಸಮುದಾಯದಲ್ಲೆ ಎರಡು ಗುಂಪು ಮಾಡಿಕೊಂಡು ಸುಮ್ಮನೆ ನನಗೆ ಲೆಕ್ಕಾ ಕೊಡುವಂತೆ ಚಿಡಾಯಿಸುತ್ತಾ ಬಂದಿದ್ದು ಇರುತ್ತದೆ.   ಹೀಗಿದ್ದು ದಿನಾಂಕ ೧೨/೧೨/೨೦೨೧ ರಂದು ಬೆಳಿಗ್ಗೆ ೧೦;೩೦ ಗಂಟೆಗೆ ನಮ್ಮ ಮನೆಯಲ್ಲಿ ನಾನು ಮತ್ತು ಆಲಿಯಾಖಾನ ಚವ್ಹಾಣ, ಆಶ್ವರ್ಯ ಸುಭಾಸ ಹಾಗು ನಮ್ಮ ಮನೆಯಲ್ಲಿ ಕೆಲಸಕ್ಕೆ ಬಂದ ಆಶಾಬೀ ಗಂಡ ರಸೂಲಸಾಬ ಪಟೇಲ ಎಲ್ಲರೂ ಇದ್ದಾಗ ನಮ್ಮ ಮನೆಗೆ ೧) ಬೆಬಿ ೨) ಪೀರಪ್ಪ ೩) ಸನಾ ೪) ಸಂತೋಷಿ  ೫) ಶೀಲಾ @ ವಿಜಯಕುಮಾರ ೬) ಬಸವರಾಜ ಪಾಟೀಲ ೭) ಭೀಮರಾವ ೮) ಯಶ್ವಂತ ಇವರು ಎಲ್ಲರೂ ಅಕ್ರಮ ಕೂಟ ಮಾಡಿಕೊಂಡು ನಮ್ಮ ಮನೆಗೆ ಬಂದು ಏ ರಂಡಿ ನಮ್ಮ ಸೋಸೈಟಿದು ಲೆಕ್ಕಾ ಕೊಡಲು ಬಾ ಅಂದರೆ ಬರಲ್ಲಾ ಅಂತಿ ಎಂದು ಅವಾಚ್ಯವಾಗಿ ಬೈಯುವಾಗ ಅದರಲ್ಲಿ ಲಿಂಗಾಯತ ಸಮುದಾಯಕ್ಕೆ ಸೇರಿದ ಬಸವರಾಜ ಪಾಟೀಲ ಹಾಗು ಭೀಮರಾವ ಇವರು ಏ ಕೆಳಜಾತಿಯ ಲಂಬಾಣಿ ಜನಾಂಗದವಳೇ ಎಂದು ಜಾತಿ ನಿಂದನೆ ಮಾಡುತ್ತಿದ್ದಾಗ ಬೆಬಿ  ಮತ್ತು ಸನಾ ನನಗೆ ಒತ್ತಿ ಹಿಡಿದಾಗ ಪೀರಪ್ಪ ಇತನು ಕೈ ಹಿಡಿದು ಎಳೆದಾಡಿದ್ದು ನಂತರ ಸಂತೋಷಿ ಇವಳು ಅಲ್ಲೆ ಬಿದ್ದ ಬಡಿಗೆ ತೆಗೆದುಕೊಂಡು ನನ್ನ ತಲೆಗೆ ಹೊಡೆದು ಗಾಯಗೊಳಿಸಿದ್ದು ನಂತರ ಶೀಲಾ ಇವಳು ಹೋಡ್ರಿ ರಂಡಿ ಅನ್ನುತಿದ್ದಳು ನಂತರ ನಮ್ಮ ಅದ್ಯಕ್ಷರಾದ ಯಶ್ವಂತ ಇವರು ಸಹ ರಂಡಿ ಇವತ್ತು ಒಬ್ಬಳೆ ಸಿಕ್ಕಾಳ ಇವಳಿಗೆ ಇವತ್ತು ಖಲಾಷ ಮಾಡಿಯೇ ಬಿಡೋಣಾ ಅಂತಾ ಅನ್ನುತ್ತಿರು. ನಂತರ ನಮ್ಮೊಂದಿಗೆ ಇದ್ದ ಆಲಿಯಖಾನ, ಆಶ್ವರ್ಯ ಹಾಗು ಆಶಾಬೀ ಇವರು ಜಗಳ ಬಿಡಿಸದೇ ಇದ್ದರೆ ನನಗೆ ಕೊಲೆ ಮಾಡಿಯೇ ಬಿಡುತ್ತಿದ್ದರು .ನಂತರ ನಾನು ಬೇಹೋಷವಾಗಿ ಬಿದ್ದಾಗ ನನಗೆ ಸರಕಾರಿ ಆಸ್ಪತ್ರೆ ತಂದು ಸೇರಿಕೆ ಮಾಡಿದ್ದು ಇರುತ್ತದೆ. ಜಗಳದ ಸಮಯದಲ್ಲಿ ನಮ್ಮ ಮನೆಯಲ್ಲಿ ಹಣ ,ಬಂಗಾರ .ಮೋಬೈಲಗಳು  ಜಗಳದಲ್ಲಿ ಬಿದ್ದಿರುತ್ತವೆ ನಂತರ ನನಗೆ ಹೊಡೆದವರು ಮಂಗಳ ಮುಖಿಯವರು ಆಗಿರುವುದರಿಂದ ಸ್ವಲ್ಪ ವಿಚಾರಿಸಿ ಇಂದು ದೂರು ನೀಡುತ್ತಿದ್ದೇನೆ. ಕಾರಣ ನನಗೆ ಹೊಡೆಬಡೆ ಮಾಡಿ ಮಾರಣಾಂತಿಕ ಹಲ್ಲೆ ಮಾಡಿ ನನಗೆ ಕೊಲೆ ಮಾಡಲು ಪ್ರಯತ್ನ ಮಾಡಿದ ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸಿ ನನಗೆ ನ್ಯಾಯ ಒದಗಿಸಿಕೊಡಬೇಕು ಅಂತಾ ದೂರಿನ ಸಾರಾಂಶದ ಮೇಲಿಂದ  ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

  ಸಬ್ ಅರ್ಬನ್ ಪೊಲೀಸ್ ಠಾಣೆ :-    ಇಂದು ದಿನಾಂಕ ೧೪/೧೨/೨೦೨೧ ರಂದು ಪಿರ್ಯಾದಿಯಾದ ಜ್ಯೋತಿ ತಂದೆ ಕಲ್ಯಾಣಿ ಮಾತಂಗಿ ವಯಾ: ೨೩ ವರ್ಷ ಜಾ: ಮಾದಿಗ ಸಾ: ಪಂಚಶೀಲ ನಗರ ಕಲಬುರಗಿ ಇವರು ಠಾಣೆಗೆ ಹಾಜರಾಗಿ ದೂರು ಸಲ್ಲಿಸಿದೆನೆಂದರೆ ನಾನು ಜ್ಯೋತಿ ತಂದೆ ಕಲ್ಯಾಣಿ ಮಾತಂಗಿ ವಯಾ: ೨೩ ವರ್ಷ ಜಾ: ಮಾದಿಗ ಸಾ: ಪಂಚಶೀಲ ನಗರ ಕಲಬುರಗಿ ಇದ್ದು ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುವದೆನೆAದರೆ ನಾನು ಪುಣಾದಲ್ಲಿಯು ಕೆಲಸ ಮಾಡುತ್ತಾ ಬಂದಿದ್ದು ಅಲ್ಲದೇ ಆಗಾಗ ಇಲ್ಲಿಯು ಬಂದು ಕೆಲಸ ಮಾಡುತ್ತಾ ಬಂದಿದ್ದು ಇರುತ್ತದೆ. ನಮ್ಮ ಸಮುದಾಯದ ಹೆಸರಿನಲ್ಲಿ ಒಂದು ಸ್ನೇಹ ಸೋಸೈಟಿ ಇದ್ದು ಅದಕ್ಕೆ ಯಶ್ವಂತ ಅದ್ಯಕ್ಷರಿದ್ದು ಇದಕ್ಕೆ ಪಿಡಿ ಅಂತಾ ಮನಿಷಾ ಚವ್ಹಾಣ ಇದ್ದಿರುತ್ತಾಳೆ. ಇವಳು ೬ ವರ್ಷದಿಂದ ಲೆಕ್ಕ ಪತ್ರ ನೋಡಿಕೊಳ್ಳುತ್ತಿದ್ದು ಇದಕ್ಕೆ ನಾವು ಎಲ್ಲರು ಸೇರಿ ಅವಳಗಿ ಲೆಕ್ಕಾ ಕೆಳಲು ನಾನು ,ಬೇಬಿ, ಪೀರಪ್ಪ , ಸನಾ . ಸಂತೋಷಿ ,ಶಿಲಾ , ಬಸವರಾಜ ಪಾಟೀಲ. ಬೀಮರಾಯ . ಯಶ್ವಂತ ಎಲ್ಲರೂ ಹಾಗು ಇತರರು ಕೂಡಿ ಮನಷಾ ಇವಳ ಮನೆಯಾದ ಲಂಗರ ಹನುಮಾನ ನಗರದಲ್ಲಿ ಇರುವ ಮನೆಗೆ ದಿನಾಂಕ ೧೨-೧೨-೨೦೨೧ ರಂದು ಬೆಳಿಗ್ಗೆ ೧೦:೩೦ ಗಂಟೆಗೆ ಹೋದಾಗ ಅಲ್ಲಿ ೧) ಮನೀಷಾ ಚವ್ಹಾಣ ೨) ಆಲಿಯಾಖಾನ (ಬೇಬಿ) ೩) ಸಂಗಿತಾ ೪) ಭಾನು ೫) ಐಶ್ವೆöರ್ಯ (ಸುನೀಲ) ೬) ಮೌನೇಶ ೭) ನೀಲು ೮) ಕೃಷ್ಣವೇಣಿ ೯) ಬೀರಲಿಂಗ ಪೂಜಾರಿ ಎಲ್ಲರೂ ಇದ್ದರೂ ಆಗ ನಾವು ಮನಿಷಾ ಇವಳಿಗೆ ನಮ್ಮ ಸ್ನೇಹಾ ಸೋಸೈಟಿಯ ಲೆಕ್ಕದ ಬಗ್ಗೆ ಮಾತನಾಡುವುದು ಇದೆ ಬಾ ಅಂತಾ ಕರೆದಾಗ ಏಕೆ ಬಂದಿಲ್ಲಾ ಅಂತಾ ಕೇಳಿದಾಗ ನಾನು ಯ್ಯಾಕೆ ಬರಬೇಕು ನೀವು ಏನು ಕೇಳುವುದು ಇದೆ ಕಾಗದ ಬರೆದು ಹೋಗಿ ಅಂತಾ ಹೇಳಿದಾಗ ಏ ಮಕ್ಕಳೆ ನೀವು ನಮ್ಮ ಮನೆಯ ವರೆಗೆ ಬರತ್ತೀರಿ ಅಂತಾ ಅವಾಚ್ಯವಾಗಿ ಮನಿಷಾ ಬೈಯುತ್ತಿದ್ದಾಗ ಮುಸ್ಲಿಂ ಜನಾಂಗಕ್ಕೆ ಸೇರಿದ ಆಲಿಯಾಖಾನ ಹಾಗು ಬೀರಲಿಂಗ ಪೂಜಾರಿ ಇವರು ನನಗೆ ಮಾದಿಗ ಜಾತಿಯವಳೆ ಎಂದು ಜಾತಿ ನಿಂದನೆ ಮಾಡಿ ಅವಾಚ್ಯವಾಗಿ ಬೈದಿರುತ್ತಾನೆ. ಮತ್ತು ಸಂಗಿತಾ , ಬಾನು ಇವರು ತಡೆದು ಪೀರಪ್ಪ ಇವರಿಗೆ ಹೊಡೆಬಡೆ ಮಾಡಿದ್ದು , ಸಂತೊಷಿ , ಶಿಲಾ ಇವಳಿಗೆ ಭಾನು, ಐಶ್ವರ್ಯ ಇವರು ಹೊಡೆಬಡೆ ಮಾಡಿದ್ದು ಇರುತ್ತದೆ. ಮತ್ತು ಮೌನೇಶ ಹಾಗು ನೀಲು ಇವರು ಬಸವರಾಜ ಪಾಟೀಲ , ಬೀಮರಾವ ಇವರಿಗೆ ಅವಾಚ್ಯವಾಗಿ ಬೈದಿದ್ದು ಇರುತ್ತದೆ. ಯಶ್ವಂತ ಇವರಿಗೆ ಮನಿಷಾ ಇವಳು ಇನ್ನೊಮ್ಮೆ ಸ್ನೇಹ ಸೋಸೈಟಿ ಬಗ್ಗೆ ಕೇಳಿದರೆ ನಿನಗೆ ಖಲಾಷ ಮಾಡಿಯೇ ಬಿಡುತ್ತೇವೆ ಅಂತಾ ಜೀವದ ಬಯ ಹಾಕಿರುತ್ತಾಳೆ. ಜಗಳದಲ್ಲಿ ನನಗೆ , ಮಲ್ಲಿ, ಚೆನ್ನು, ವಿದ್ಯಾ ,ಸಹೋಲ .ಶಾಂತಲ ಇವರಿಗೂ ಸಹ ಸಂಗಿತಾ, ಭಾನು ಐಶ್ವರ್ಯ ಇವರು ಹೊಡೆಬಡೆ ಮಾಡಿರುವುದರಿಂದ ನಮಗೆ ಗಾಯವಾಗಿರುವುದರಿಂದ ನಾವು ಸರಕಾರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದು ನಮ್ಮ ಸಮುದಾಯದ ಮಂಗಳಮೂಖಿಯರಿಗೆ ಮಾಹಿತಿ ನೀಡಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿ ಠಾಣೆಗೆ ಬಂದು ದೂರು ನೀಡುತ್ತಿದ್ದೆನೆ .  ಕಾರಣ ನಮಗೆ ಅವಾಚ್ಯವಾಗಿ ಬೈದು ಜಾತಿ ನಿಂದನೆ ಮಾಡಿ ಹೊಡೆಬಡೆ ಮಾಡಿ ಜೀವದ ಭಯ ಹಾಕಿದವರ ಮೇಲೆ ಕಾನೂನು ಕ್ರಮ ಜರುಗಿಸಿ ನನಗೆ ನ್ಯಾಯ ಒದಗಿಸಿಕೊಡಬೇಕು ಅಂತಾ ಈ ಅರ್ಜಿ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳಲಾಗಿದೆ. ಕೊಟ್ಟ ದೂರಿನ ಸಾರಾಂಶದ ಮೇಲಿಂದ  ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಇತ್ತೀಚಿನ ನವೀಕರಣ​ : 15-12-2021 04:42 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080