ಅಭಿಪ್ರಾಯ / ಸಲಹೆಗಳು

ಸಂಚಾರಿ ಪೊಲೀಸ್‌ ಠಾಣೆ -2 :- ದಿನಾಂಕ 14/11/2022 ರಂದು ಬೆಳಿಗ್ಗೆ 6:00 ಗಂಟೆಗೆ ಶ್ರೀ. ಮಹಾಂತೇಶ ತಂದೆ ಸುರ್ಯಕಾಂತ ವಯಃ 38 ವರ್ಷ ಜಾತಿಃ ಲಿಂಗಾಯತ ಉಃ ಖಾಸಗಿ ಕೆಲಸ ಸಾಃ ಹಿರಾಪೂರ ಹೀರಾ ನಗರ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಒಂದು ಹೇಳಿಕೆ ಕೊಟ್ಟಿದ್ದು ಸಾರಂಶವೆನೆಂದರೆ, ನಾನು ಮೇಲಿನ ವಿಳಾಸದವನಿದ್ದು, ಖಾಸಗಿ ಕೆಲಸ ಮಾಡಿಕೊಂಡು ಉಪಜೀವನ ಮಾಡಿಕೊಂಡಿರುತ್ತೆನೆ. ಹೀಗಿದ್ದು, ದಿನಾಂಕ 30/10/2022 ರಂದು ನಮ್ಮ ತಂದೆ ಸುರ್ಯಕಾಂತ ಇವರು ನಮ್ಮ ಇವಿಯೆಟರ ಮೋಟರ ಸೈಕಲ ನಂ. ಕೆಎ 32 ಇಪಿ 3544 ನೇದ್ದರ ಮೇಲೆ ಹತಗುಂದಾ ಗ್ರಾಮದಲ್ಲಿ ನಮ್ಮ ಹೊಲಕ್ಕೆ ಹೋಗುವಾಗ ಬೆಳಿಗ್ಗೆ 10:30 ಗಂಟೆ ಸುಮಾರಿಗೆ ಪಟ್ಟಣ ಸೀಮೆಯ ಭದ್ರಾ ಪೆಟ್ರೋಲ ಪಂಪಿನ ಮುಂದುಗಡೆ ಹೋಗುವಾಗ ಹಿಂದುಗಡೆಯಿಂದ ಬಲ್ಕರ ಲಾರಿ ನಂ. ಎಮ್.ಹೆಚ್ 12 ಎಸ್.ಎಕ್ಸ 2758 ನೇದ್ದರ ಚಾಲಕ ಸೈಫನ ತಂದೆ ಮಹಮ್ಮದ ಅಲಿ ದಿವಟೆ ಸಾಃ ಬೋರಗಾಂವ ದೇಶಮುಖ ತಾಃ ಅಕ್ಕಲಕೋಟ ಈತನು ಅಪಘಾತ ಪಡಿಸಿದ್ದರಿಂದ ನಮ್ಮ ತಂದೆಯವರಿಗೆ ತಲೆಯ ಹಿಂಭಾಗಕ್ಕೆ ಭಾರಿಗಾಯವಾಗಿ ಬಲಕಿವಿಯಿಂದ ರಕ್ತ ಬಂದಿದ್ದು & ಅಲ್ಲಲ್ಲಿ ಗಾಯಗಳಾಗಿದ್ದು, ಅದರ ಉಪಚಾರ ಕುರಿತು ಅಂದೆ ಕ್ಯೂಪಿ ಆಸ್ಪತ್ರೆಯಲ್ಲಿ ಸೇರಿಕೆಯಾಗಿದ್ದು, ಈ ವಿಷಯದಲ್ಲಿ ಈ ಮೊದಲು ತಮ್ಮ ಠಾಣೆಯಲ್ಲಿ ಪ್ರಕರಣ ನಂ. 235/2022 ಕಲಂ 279, 338 ಐಪಿಸಿ ಸಂ. 187 ಐ.ಎಮ್.ವಿ ಆಕ್ಟ ನೇದ್ದರ ಪ್ರಕಾರ ಪ್ರಕರಣ ದಾಖಲಾಗಿದ್ದು ಇರುತ್ತದೆ. ಮುಂದೆ ತಂದೆಯವರು ಕ್ಯೂಪಿ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿರುವಾಗ ಅವರ ಪರಸ್ಧಿತಿಯು ಚಿಂತಾಜನಕವಾಗಿರುವುದರಿಂದ ದಿನಾಂಕ 11/11/2022 ರಂದು ಹೆಚ್ಚಿನ ಉಪಚಾರ ಕುರಿತು ಕ್ಯೂಪಿ ಆಸ್ಪತ್ರೆಯಿಂದ ಸರಕಾರಿ ಆಸ್ಪತ್ರೆ ಕಲಬುರಗಿಗೆ ತಂದು ಸೇರಿಕೆ ಮಾಡಿದ್ದು, ಅಲ್ಲಿ ತಂದೆಯವರು ಉಪಚಾರ ಪಡೆಯುತ್ತಿರುವಾಗ ಇಂದು ದಿನಾಂಕ 14/11/2022 ರಂದು ಮಧ್ಯರಾತ್ರಿ 1:45 ಗಂಟೆ ಸುಮಾರಿಗೆ ತಂದೆಯವರಿಗೆ ರಸ್ತೆ ಅಪಘಾತದಲ್ಲಿ ಆದ ಗಾಯವು ಗುಣಮುಖವಾಗದೆ ಮೃತ ಪಟ್ಟಿರುತ್ತಾರೆ ಈ ವಿಷಯದಲ್ಲಿ ಮುಂದಿನ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕೆಂದು ಕೊಟ್ಟ ಹೇಳಿಕೆ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಬ್ರಹ್ಮಪೂರ ಪೊಲೀಸ್ ಠಾಣೆ  :- ದಿನಾಂಕ: 14-11-2022  ರಂದು ೧೦:೩೦ ಎ.ಎಂಕ್ಕೆ ಸರಕಾರಿ ತರ್ಪೇ ಪಿರ್ಯಾದಿದಾರರಾಗಿ  ಶ್ರೀ ಶಿವಪ್ರಕಾಶ ಹೆಚ್.ಸಿ-೧೫೬ ಬ್ರಹ್ಮಪೂರ ಪೊಲೀಸ್ ಠಾಣೆ  ಕಲಬುರಗಿ ರವರು ಠಾಣೆಗೆ ವರದಿ ನೀಡಿದರ ಸಾರಾಂಶವೆನೆಂದರೆ, ದಿನಾಂಕ ೧೪/೧೧/೨೦೨೨ ರಂದು ಬೆಳಿಗ್ಗೆ ೪:೩೦ ಗಂಟೆ ಸುಮಾರಿಗೆ ನಾನು ಮತ್ತು ನಮ್ಮ ಠಾಣೆಯ ಗುಪ್ತ ಮಾಹಿತಿ ಸಂಗ್ರಹಿಸುವ ಶ್ರೀ ಶಿವಶರಣಪ್ಪ ಪಿಸಿ-೪೬೧ ಇಬ್ಬರೂ ಕೂಡಿಕೊಂಡು ಪೆಟ್ರೊಲಿಂಗ್ ಕುರಿತು ಠಾಣೆಯಿಂದ ಹೊರಟು ಪೆಟ್ರೊಲಿಂಗ್ ಮಾಡುತ್ತಾ ಸುಪರ ಮಾರ್ಕೆಟ, ಸರಸ್ವತಿ ಗೋದಾಮು, ಟೇಕಬುರಾನ ದರ್ಗಾ ಮತ್ತು ಅಪ್ಪಾ ಕೆರೆ ಗಾರ್ಡನ್ ಇತರೆ ಕಡೆ ತಿರುಗಾಡುತ್ತಾ ಮಾನ್ಯ ಮುಖ್ಯ ಮಂತ್ರಿಗಳು ಬರುವದರಿಂದ ಮಾಹಿತಿ ಸಂಗ್ರಹಿಸುತ್ತಾ ಅಂದಾಜು ಬೆಳಗ್ಗೆ ೭:೦೦ ಗಂಟೆ ಸುಮಾರಿಗೆ ಕಲಬುರಗಿ ನಗರದ ಗೋವಾ ಹೊಟೇಲ ಹತ್ತಿರ ಹೋದಾಗ ಅಲ್ಲಿ ಯಾರೋ ಅಪರಿಚಿತರು ಗೋವಾ ಹೊಟೇಲ ಮತ್ತು ಅಶೋಕ ಕಾಂಪ್ಲೇಕ್ಸ್ ಮಧ್ಯದದಲ್ಲಿರುವ ಹೈಮಾಸ್ಕ್ ಲೈಟಿನ ಕಂಬದ ಕಟ್ಟೆಗೆ ಮತ್ತು ಅಶೋಕ ಕಾಂಪ್ಲೇಕ್ಸ್ದಲ್ಲಿರುವ ಅಂಗಡಿಗೆ Pay CM 40% Accepted Here Mob:8447704040  ಅಂತ ಪೋಸ್ಟರಗಳನ್ನು ಹಚ್ಚಿದ್ದು ಇರುತ್ತದೆ.  ಸದರಿ ಘಟನೆಯು ದಿನಾಂಕ:೧೩/೧೧/೨೦೨೨ ರಂದು ರಾತ್ರಿ ೧೦:೦೦ ಗಂಟೆಯಿಂದ ಇಂದು ದಿನಾಂಕ: ೧೪/೧೧/೨೦೨೨ ರಂದು ಬೆಳಗಿನ ಜಾವ ೬:೩೦ ಗಂಟೆಯ ಮಧ್ಯದ ಅವಧಿಯಲ್ಲಿ ಜರುಗಿರುತ್ತದೆ. ಸಾರ್ವಜನಿಕ ಸ್ಥಳದಲ್ಲಿ ಅನಧಿಕೃತ ಜಾಹೀರಾತುಗಳ ಮೂಲಕ ವಿಕಾರವನ್ನುಂಟು ಮಾಡಿದ ಅಪರಿಚಿತ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಕೊಟ್ಟ ವರದಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 23-11-2022 04:42 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080