ಅಭಿಪ್ರಾಯ / ಸಲಹೆಗಳು

ಎಂ.ಬಿ.ನಗರ ಪೊಲೀಸ್‌ ಠಾಣೆ :-  ದಿನಾಂಕ-14-10-2022 ರಂದು ರಾತ್ರಿ ೦೩:೦೦ ಗಂಟೆಯ ಸುಮಾರಿಗೆ ಖಚಿತ ಬಾತ್ಮಿ ಮೇರೆಗೆ ದರೋಡೆ ಮಾಡಲು ಪ್ರಯತ್ನದಲ್ಲಿದ್ದ ಗುಂಪಿನ ಮೇಲೆ ದಾಳಿಮಾಡಿದಾಗ ಗುಂಪಿನಲ್ಲಿದ್ದ ೦೩ ಜನ ಸಿಕ್ಕಿದ್ದು  ಮತ್ತು ಅವರಲ್ಲಿದ್ದ ಮಾರಕಾಸ್ತçಗಳನ್ನು ಪಂಚರ ಸಮಕ್ಷಮದಲ್ಲಿ ವಶಪಡೆಸಿಕೊಂಡು, ಮುದ್ದೆ ಮಾಲು ಮತ್ತು ಆರೋಪಿತರನ್ನು ಠಾಣೆಗೆ ತಂದು ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸಬ್‌ ಅರ್ಬನ್‌ ಪೊಲೀಸ್‌ ಠಾಣೆ :- ದಿನಾಂಕಃ-13-10-2022  ರಂದು ಫಿರ್ಯಾದಿಯು ೧೨:೦೫ ಎಎಮ್ ಸುಮಾರಿಗೆ ಪ್ರತಿನಿತ್ಯದಂತೆ ಜಾನುವಾರುಗಳಿಗೆ ಮೇವು ಹಾಕಿ ಮಲಗಿಕೊಂಡಿದ್ದು ೦೨:೦೦ ಎಎಮ್ ಕ್ಕೆ ಎದ್ದು ನೋಡಲು ಶೆಡ್ಡಿನಲ್ಲಿ ಇದ್ದ ಎರಡೂ ಎತ್ತುಗಳು ಇರಲಿಲ್ಲ, ಸ್ಮತ್ತಮುತ್ತ ಹುಡುಕಾಡಿದರು ಎರಡೂ ಎತ್ತುಗಳು ಸಿಕ್ಕಿರುವುದಿಲ್ಲ ,ಒಂದು ಎತ್ತು ಬಿಳಿ ಬಣ್ಣದ್ದು ಮತ್ತು ಇನ್ನೊಂದು ಕಪ್ಪು ಬಣ್ಣದ್ದು ತಲಾ ೪೦೦೦೦/-ಅ ಕಿಮ್ಮತ್ತಿನ ಎತ್ತುಗಳಿದ್ದು  ಯಾರೋ ಕಳ್ಳರು ಕಳ್ಳರು ಬಿಚ್ಚಿಕೊಂಡು ಹೋಗಿದ್ದು ಇರುತ್ತದೆ. ಸುತ್ತಮುತ್ತ ಸಂತೆಯಲ್ಲಿ ಹುಡುಕಾಡಿದರು ಸಿಕ್ಕಿರುವುದಿಲ್ಲ ಅಂತಾ ಫಿರ್ಯಾದಿ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸಂಚಾರಿ ಪೊಲೀಸ ಠಾಣೆ -1 :- ದಿನಾಂಕ 14.10.2022 ರಂದು ಸಾಯಂಕಾಲ 4-00 ಗಂಟೆಗೆ ಖಾಸಗಿ ಕುರಾಳ ಆಸ್ಪತ್ರೆಯ ಸಿಬ್ಬಂದಿಯವರು ಠಾಣೆಗೆ ಪೋನ ಮಾಡಿ ನಿತೀನ ಇವರು ರಸ್ತೆ ಅಪಘಾತ ಹೊಂದಿ ಉಪಚಾರ ಕುರಿತು ಬಂದು ಸೇರಿಕೆಯಾಗಿರುತ್ತಾರೆ ಅಂತಾ ತಿಳಿಸಿದ್ದರಿಂದ ನಾನು ಕುರಾಳ ಆಸ್ಪತ್ರೆಗೆ ಬೆಟಿಕೊಟ್ಟು ಗಾಯಾಳು ನಿತೀನ ಇವರನ್ನು ವಿಚಾರಿಸಲು ಅವರು ಕೊಟ್ಟ ಹೇಳಿಕೆ ಸಾರಂಶವೆನೆಂದರೆ ದಿನಾಂಕ 14-10-2022 ರಂದು ಮದ್ಯಾಹ್ನ 3-30 ಗಂಟೆ ಸುಮಾರಿಗೆ ನಾನು ಮನೆಯಿಂದ ಸುಪರ ಮಾರ್ಕೆಟಕ್ಕೆ ಹೋಗಿ ಕೆಲಸ ಮುಗಿಸಿಕೊಂಡು ಐವಾನ-ಈ-ಷಾಹಿ ಎರಿಯಾದಲ್ಲಿ ಇರುವ ಬಿ.ಇ.ಓ ಆಫೀಸನಲ್ಲಿ ನನ್ನ ಕೆಲಸ ಇರುವದರಿಂದ ನಾನು ಸುಪರ ಮಾರ್ಕೆಟದಿಂದ ಬಿ.ಇ.ಓ ಆಫೀಸಕ್ಕೆ ಹೋಗುವ ಕುರಿತು ಮೋಟಾರ ಸೈಕಲ ನಂಬರ ಕೆಎ-32/ಇಎಬ್ಲೂ-5923 ನೇದ್ದು ಚಲಾಯಿಸಿಕೊಂಡು ಜಗತ ಸರ್ಕಲ ಲಾಹೋಟಿ ಕ್ರಾಸ ಮುಖಾಂತರವಾಗಿ ಯಾವನ-ಈ-ಷಾಹಿ ಕಡೆಗೆ ಹೋಗುತ್ತೀರುವಾಗ ದಾರಿ ಮದ್ಯ ವಿಜಯ ವಿದ್ಯಾಲಯ ಕಾಲೇಜ್ ಎದುರಿನ ರೋಡ ಮೇಲೆ ಕಾರ ನಂಬರ ಕೆಎ-32/ಡಿ-3162 ನೇದ್ದರ ಚಾಲಕ ನನ್ನ ಮೋಟಾರ ಸೈಕಲ ಹಿಂದಿನಿಂದ ಕಾರನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಮೋಟಾರ ಸೈಕಲಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿ ನನಗೆ ಭಾರಿಗಾಯಗೊಳಿಸಿ ಉಪಚರ ಮಾಡಿಸುವದಾಗಿ ಹೇಳಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿ ಹೋಗಿದ್ದು ಆತನ ಮೇಲೆ ಕಾನೂನಿನ ಕ್ರಮ ಜರುಗಿಸಬೇಕು ಅಂತಾ ಫಿರ್ಯಾದಿ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 09-11-2022 04:39 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080