ಅಭಿಪ್ರಾಯ / ಸಲಹೆಗಳು

ಸಂಚಾರಿ ಪೊಲೀಸ್‌ ಠಾಣೆ-2  :- ದಿನಾಂಕ 14/09/22 ರಂದು ಬೆಳಿಗ್ಗೆ 10:30 ಎ.ಎಮ ಕ್ಕೆ ಮಾನ್ಯ ಪೊಲೀಸ್ ಆಯುಕ್ತರು ಕಲಬುರಗಿ ರವರ ಜ್ಞಾಪನಾ ಪತ್ರ ಸಂ.4/ಸಿ.ಸಿ.ಆರ್.ಬಿ/ಕ.ವರ್ಗಾವಣೆ/ಕ.ನ/2022/17ದಿ- 12/09/2022 ರ ಪ್ರಕಾರ ಚೌಕ ಪೊಲೀಸ್ ಠಾಣೆ ಕಲಬುರಗಿ ನಗರದ ಗುನ್ನೆ ನಂ. 63/2022 ಕಲಂ 302 ಐಪಿಸಿ ಪ್ರಕರಣದಲ್ಲಿ ಮೃತ ಮಲ್ಲಿಕಾರ್ಜುನ ಈತನು ರಸ್ತೆ ಅಪಘಾತದಿಂದ ಮೃತ ಪಟ್ಟಿರುವುದರಿಂದ ಘಟನಾ ಸ್ಧಳದ ಆಧಾರದ ಮೇಲಿಂದ ಮುಂದಿನ ತನಿಖೆ ಕುರಿತು ಕಡತವನ್ನು ವರ್ಗಾವಣೆ ಮಾಡಿ ಆದೇಶಿಸಿರುವುದರಿಂದ & ಪೊಲೀಸ್ ಐ.ಟಿ ಯಲ್ಲಿ ಕಡತವನ್ನು ನಮಗೆ ವರ್ಗಾವಣೆ ಮಾಡಿರುವುದರಿಂದ ಪ್ರಕರಣದ ಸಾರಂಶವೆನೆಂದರೆ, ಮೃತ ಮಲ್ಲಿಕಾರ್ಜುನ ತಂದೆ ರಾಜಶೇಖರ ಬಿರಾದಾರ ಈತನು ದಿನಾಂಕ 05/05/2022 ರಾತ್ರಿ 9:30 ಪಿ.ಎಮ್. ದಿಂದ ದಿನಾಂಕ 06/05/2022 ರ ಬೆಳಿಗ್ಗೆ 6:00 ಗಂಟೆ ಅವಧಿಯಲ್ಲಿ ಶಹಾಬಜಾರ ನಾಕಾದ ಹತ್ತೀರ ಇರುವ ಡಾ|| ಎಮ್.ಎನ್ ದವಡೆ ಆಸ್ಪತ್ರೆಯ ಹತ್ತೀರ ಸಿಸಿ ರಸ್ತೆಯ ಮೇಲೆ ಯಾರೋ ಅಪರಿಚಿತ ವ್ಯಕ್ತಿಗಳು ಯಾವುದೊ ಕಾರಣಕ್ಕಾಗಿ ಹಾಗು ಯಾವುದೊ ದುರುದ್ದೇಶದಿಂದ ಯಾವುದೊ ವಸ್ತುವಿನಿಂದ ಹೊಡೆದು ಕೊಲೆ ಮಾಡಿರುತ್ತಾರೆ ಅಂತಾ ಫಿರ್ಯಾದಿ ದಾಖಲಾದ ನಂತರ ಪಿ.ಐ ಚೌಕ ರವರ ತನಿಖೆ ಕಾಲಕ್ಕೆ ಮಲ್ಲಿಕಾರ್ಜುನ ಈತನು ರಾತ್ರಿ ವೇಳೆಯಲ್ಲಿ ಡಾ|| ಎಮ್.ಎನ್ ದಡವೆ ಆಸ್ಪತ್ರೆ ಹತ್ತೀರ  ಇರುವ ಸಿಸಿ ರಸ್ತೆಯ ಮೇಲೆ ಮಹಿಂದ್ರ ಥಾರ ವಾಹನ ನಂ. ಕೆಎ 44 ಎ 7777 ನೇದ್ದರ ಚಾಲಕ ಸಮರ್ಥ ಈತನು ವಾಹನವನ್ನು ಅತಿವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿ ಮಲ್ಲಿಕಾರ್ಜುನನಿಗೆ ಅಪಘಾತ ಪಡಿಸಿ ಅದರಿಂದ ಆತನ ತಲೆಯ ಭಾಗಕ್ಕೆ, ಮೆಲಕಿನ ಭಾಗಕ್ಕೆ, ದೇಹದ ಇತರೆ ಕಡೆಗಳಲ್ಲಿ ರಕ್ತಗಾಯ ಮತ್ತು ಭಾರಿಗಾಯಗೊಂಡು ಮೃತ ಪಟ್ಟಿದ್ದು, ವಾಹನದ ಚಾಲಕನು ತನ್ನ ವಾಹನವನ್ನು ಓಡಿಸಿಕೊಂಡು ಹೋಗಿರುವ ಬಗ್ಗೆ ತನಿಖೆಯಲ್ಲಿ ತಿಳಿದು ಬಂದಿರುತ್ತದೆಂದು ಕಡತವನ್ನು ವರ್ಗಾವಣೆ ಮಾಡಿದ್ದು ಅದರ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ. 

 

 

ಸಬ್‌ ಅರ್ಬನ್‌ ಪೊಲೀಸ್‌ ಠಾಣೆ :- ದಿನಾಂಕಃ-13-09-2022 ರಂದುಫರ‍್ಯಾದಿಠಾಣೆಗೆ ಹಾಜರಾಗಿ ನೀಡಿದ ಫರ‍್ಯಾದಿಯೇನೆಂದರೆ ಸದರಿಯವರು ತಮ್ಮ ಬೈಕ್ ನಂ ಎಮ್ ೩೨ ಎ ೮೭೨೨  ನ್ನು ಆಳಂದ ಚೆಕ್ ಪೊಸ್ಟ್ ಹತ್ತಿರ ಒಂದು ಡಾಬಾದ ಬಳಿಯಲ್ಲಿ ನಿಲ್ಲಿಸಿ ಹೋಗಿದ್ದಾಗ  ಯಾರೋ ಕಳ್ಳರು ಕಳುವು ಮಾಡಿದ್ದು ಪತ್ತೆ ಹಚ್ಚಿಕೊಡಬೇಕೆಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ  ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಬ್ರಹ್ಮಪೂರ ಪೊಲೀಸ್‌ ಠಾಣೆ :- ದಿನಾಂಕ: 14-09-2022  ರಂದು ಸಾಯಂಕಾಲ ೦೬:೩೦ ಪಿಎಮ್ ಕ್ಕೆ ಫಿರ್ಯಾದಿದಾರರಾದ ಶ್ರೀ ಹಣಮಂತರಾವ್ ತಂದೆ ನರಸಪ್ಪ ಸನಗುಂದಿಕರ್ ವಯ:೬೨ವರ್ಷ ಜಾ:ಹೊಲೆಯ ಉ:ಒಕ್ಕಲೂತನ ಸಾ//ಪ್ಲಾಟ ನಂ:೦೬ ರಾಘವೇಂದ್ರ ಪೂಜಾ ನಿಲಯ ಸೋನಿಯಾ ಗಾಂಧಿ ಸ್ಕೂಲ್ ಹತ್ತಿರ ಓಲ್ಡ ಜೇವರಗಿ ರೋಡ ಅಂಬಿಕಾ ನಗರ ಕಲಬುರಗಿ ನಗರ. ನನ್ನದೊಂದು ಸ್ವಂತ ಹೊಂಡಾ ಡಿಯೋ ಮೋಟಾರ್ ಸೈಕಲ್ ನಂ ಏಂ-೩೨-ಇಊ-೫೧೮೪ ನೇದ್ದು ಇದ್ದು ಸದರಿ ಮೋಟಾರ್ ಸೈಕಲ್‌ವು ನನ್ನ ಹೆಸರಿನಲ್ಲಿರುತ್ತದೆ. ನನ್ನ ಮಗಳಾದ ಸೌಮ್ಯಾ ತಂದೆ ಹಣಮಂತರಾವ್ ಸನಗುಂದಿಕರ್ ರವರು ಜಿಮ್ಸ್ ಆಸ್ಪತ್ರೆಯಲ್ಲಿ ಡಾಕ್ಟರ ಆಗಿ ಕೆಲಸ ಮಾಡುತಿದ್ದು ಸದರಿ ಮೋಟಾರ್ ಸೈಕಲನ್ನು ದಿನಾಲು ಆಸ್ಪತ್ರಗೆ ತೆಗೆದುಕೊಂಡು ಹೋಗಿಬರುವುದು ಮಾಡುತ್ತಾಳೆ. ಎಂದಿನಂತೆ ದಿನಾಂಕ:೦೮/೦೯/೨೦೨೨ ರಂದು ಮದ್ಯಾಹ್ನ ೦೨:೦೦ ಪಿ.ಎಮ್ ಗಂಟೆಗೆ ಸದರಿ ಮೋಟಾರ್ ಸೈಕಲನ್ನು ತೆಗೆದುಕೊಂಡು ಕಲಬುರಗಿ ನಗರದ ಜಿಮ್ಸ್ ಆಸ್ಪತ್ರೆಗೆ ಹೋಗುತ್ತೇನೆ ಅಂತ ಹೇಳಿ ತೆಗೆದುಕೊಂಡು ಹೋಗಿದ್ದಳು  ನಂತರ ಅವಳು ನನಗೆ ಪೋನ್ ಮಾಡಿ ರಾತ್ರಿ ೦೮:೪೫ ಗಂಟೆ ಸುಮಾರಿಗೆ ತಿಳಿಸಿದ್ದೇನೆಂದರೆ ಸದರಿ ಮೋಟಾರ್ ಸೈಕಲನ್ನು ತೆಗೆದುಕೊಂಡು ಕಲಬುರಗಿ ನಗರದ ಜಿಮ್ಸ್ ಆಸ್ಪತ್ರೆಯ ವಾಹನ ನಿಲ್ಲಿಸುವ ಸ್ಥಳದಲ್ಲಿ ಮದ್ಯಾಹ್ನ ೦೨:೩೦ ಪಿಎಮ್ ಗಂಟೆಗೆ ಮೋಟಾರ್ ಸೈಕಲನ್ನು ನಿಲ್ಲಿಸಿ ಆಸ್ಪತ್ರೆಯ ಒಳಗಡೆ ಕರ್ತವ್ಯಕ್ಕೆ ಹೋಗಿದ್ದು ಕರ್ತವ್ಯ ಮುಗಿಸಿಕೊಂಡು ಮರಳಿ ರಾತ್ರಿ ೦೮:೩೦ ಪಿಎಮ್‌ಕ್ಕೆ ಬಂದು ನೋಡಲಾಗಿ ನಾನು ನಿಲ್ಲಿಸಿದ ಸ್ಥಳದಲ್ಲಿ ಮೋಟಾರ್ ಸೈಕಲ್ ಇರುವುದಿಲ್ಲಾ ಅಂತ ತಿಳಿಸಿದ ಮೇರೆಗೆ ನಾನು ಗಾಬರಿಯಾಗಿ ಆಸ್ಪತ್ರೆಗೆ ಬಂದು ನೋಡಲಾಗಿ ಹಕ್ಕಿಕತ್ತ ನಿಜವಿದ್ದು ನಾನು ಮತ್ತು ನನ್ನ ಮಗಳಾದ ಸೌಮ್ಯಾ ಇಬ್ಬರು ಕೂಡಿ ಎಲ್ಲಾ ಕಡೆ ಹುಡುಕಾಡಲಾಗಿ ಮೋಟಾರ್ ಸೈಕಲ್ ಸಿಕ್ಕಿರುವುದಿಲ್ಲಾ ಆದ ಕಾರಣ ಠಾಣೆಗೆ ಬಂದು ಅರ್ಜಿ ಕೊಡಲು ತಡವಾಗಿರುತ್ತದೆ. ಕಾರಣ ಕಳುವಾದ ನನ್ನ ಮೋಟಾರ್ ಸೈಕಲನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಕೊಟ್ಟ ದೂರು ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಫರಹತಾಬಾದ ಪೊಲೀಸ ಠಾಣೆ :-  ದಿನಾಂಕ:14-09-2022  ರಂದು ೭:೩೦ ಪಿಎಮ್ ಕ್ಕೆ ಶ್ರೀ ಗಡ್ಡೆಪ್ಪ ಹೆಚ್.ಸಿ:೧೬೫ ಫರಹತಾಬಾದ ಪೊಲೀಸ ಠಾಣೆ ರವರು ಠಾಣೆಗೆ ಹಾಜರಾಗಿ ವರದಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ದಿನಾಂಕ: ೧೪-೦೯-೨೦೨೨ ರಂದು ಸಾಯಂಕಾಲ ೪:೦೦ ಗಂಟೆಯ ಸುಮಾರಿಗೆ ನಾನು ಪೊಲೀಸ ಠಾಣೆಯಲ್ಲಿದ್ದಾಗ ಭಾತ್ಮಿ ಬಂದಿದ್ದೇನೆಂದರೆ, ನಮ್ಮ ಠಾಣೆಯ ವ್ಯಾಪ್ತಿಯ ಹೊನ್ನಕಿರಣಗಿ ಗ್ರಾಮದಲ್ಲಿ ವೀರಭದ್ರೇಶ್ವರ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಕುಳಿತು ಸಾರ್ವಜನಿಕರಿಂದ ೧ ರೂಪಾಯಿಗೆ ೮೦ ರೂಪಾಯಿ ಗೆಲ್ಲಿರಿ ಅಂತಾ ಸಾರ್ವಜಿನಿಕರಿಗೆ ಹೇಳಿ ಸಾರ್ವಜನಿಕರಿಂದ ಹಣ ಪಡೆದು ದೈವ ಲೀಲೇಯ ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾನೆ ಅಂತ ಖಚಿತ ಭಾತ್ಮಿ ಬಂದ ಮೇರೆಗೆ ಪಿ.ಐ ಸಾಹೇಬರಿಗೆ ವಿಷಯ ತಿಳಿಸಿ ಅವರ ಮೌಖಿಕ ಆದೇಶದ ಮೇರಗೆ ನಾನು ಠಾಣೆಗೆ ಇಬ್ಬರೂ ಪಂಚರಾದ ೧) ಶರಣು ತಂದೆ ಶಂಕರ ಬಾಳ ವಯ||೩೪ ವರ್ಷ ಉ||ಕೂಲಿ ಕೆಲಸ ಜಾ||ಹೊಲೆಯ ಉ||ಖಾಸಗಿ ಕೆಲಸ ೨) ದೀಪಕ ತಂದೆ ಶ್ರೀಮಂತ ಹರಸೂರ ವಯ|| ೩೫ ವರ್ಷ ಜಾ||ಹರಿಜನÀ ಉ||ಕೂಲಿ ಕೆಲಸ ಸಾ:ಇಬ್ಬರು ಫರಹತಾಬಾದ ತಾಜಿ:ಕಲಬುರಗಿ ಇವರನ್ನು ಬರ ಮಾಡಿಕೊಂಡು ನಮ್ಮ ಠಾಣೆಯ ಸಿಬ್ಬಂದಿ ಜನರಾದ ೧) ರೇವಣಸಿದ್ದ ಸಿಹೆಚ್‌ಸಿ:೧೫೭ ೨) ಶ್ರೀ ಹಣಮಂತ   ಸಿಪಿಸಿ:೯೩ ರವರಿಗೆ ಖಾಸಗಿ ವಾಹನದಲ್ಲಿ ಕರೆದುಕೊಂಡು ಠಾಣೆಯಿಂದ ಸಾಯಂಕಾಲ ೪:೩೦ ಗಂಟೆಗೆ ಹೊರಟು ವಾಹನದಲ್ಲಿದ್ದ ಸಿಬ್ಬಂದಿ ಜನರಿಗೆ ಮತ್ತು ಪಂಚರಿಗೆ ಮಟಕಾ ಜೂಜಾಟದ ಮಾಹಿತಿ ತಿಳಿಸಿ, ಭಾತ್ಮೀ ಸ್ಥಳದ ಹತ್ತಿರ ಸಾಯಂಕಾಲ ೫:೦೦ ಗಂಟೆಗೆ ಹೊನ್ನಕಿರಣಗಿ ಗ್ರಾಮಕ್ಕೆ ಹೋಗಿ ಮನೆಗಳ ಹತ್ತಿರ ಮರೆಯಾಗಿ ನಿಂತು ನೋಡಲು ವೀರಭದ್ರೇಶ್ವರ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕುಳಿತು ಒಬ್ಬ ವ್ಯಕ್ತಿ ಸಾರ್ವಜನಿಕರನ್ನು ಕೂಗಿ ಕರೆದು ೧ ರೂಪಾಯಿ ಗೆ ೮೦ ರೂಪಾಯಿ ಗೆಲ್ಲಿರಿ ಅಂತಾ ಮಟಕಾ ದೈವ ಲೀಲೆಯ ನಂಬರ ಬರೆದುಕೊಳ್ಳುತ್ತಿದ್ದು ಅವನ ಜೊತೆಗೆ ಇತರರು ಇರುವುದನ್ನು ಖಚಿತ ಪಟ್ಟಾಗ ೫:೧೫ ಪಿಎಮ್ ಕ್ಕೆ ಏಕಕಾಲಕ್ಕೆ ದಾಳಿ ಮಾಡಲು ಮಟಕಾ ಬರೆಯಿಸುತ್ತಿದ್ದು ಜನರು ನಮ್ಮನ್ನು ನೋಡಿ ಓಡಿ ಹೋದರು ಮಟಕಾ ನಂಬರ ಬರೆದುಕೊಳ್ಳುತ್ತಿದ್ದ ವ್ಯಕ್ತಿ ಸಿಕ್ಕಿ ಬಿದಿದ್ದು ಆತನ ಹೆಸರು ವಿಳಾಸ ವಿಚಾರಿಸಲು ಬೆಳೆಪ್ಪ ತಂದೆ ಸೈಬಣ್ಣ ತತ್ತಿ ವಯ||೪೭ ವರ್ಷ ಉ||ಕೂಲಿ ಕೆಲಸ ಜಾ||ಕಬ್ಬಲಿಗ ಸಾ||ಹೊನ್ನಕಿರಣಗಿ ತಾಜಿ||ಕಲಬುರಗಿ ಅಂತ ತಿಳಿಸಿದ್ದು ಆತನಿಗೆ ಅಂಗ ಶೋಧನೆ ಮಾಡಲಾಗಿ ೧) ಒಂದು ಮಟಕಾ ನಂಬರ ಚೀಟಿ ಅ.ಕಿ ೦೦=೦೦ ೨) ಒಂದು ಬಾಲ ಪೆನ್ನ ಅ.ಕಿ ೦೦=೦೦ ೩) ನಗದು ಹಣ ೧೪೧೦/- ರೂ ಸಿಕ್ಕಿದ್ದು ಹೀಗೆ ಒಟ್ಟು ನಗದು ಹಣ ೧೪೧೦/- ರೂ ಸಿಕ್ಕಿರುತ್ತದೆ. ಸದರಿಯವನ ಹತ್ತಿರ ಸಿಕ್ಕಿದ್ದ  ಮುದ್ದೆ ಮಾಲನ್ನು ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡು ಜಪ್ತಿ ಪಂಚನಾಮೆಯನ್ನು ಪಂಚರ ಸಮಕ್ಷಮದಲ್ಲಿ ೫:೨೦ ಪಿಎಮ್ ದಿಂದ ೬:೨೦ ಪಿಎಮ್ ದವರೆಗೆ ಕೈಕೊಂಡಿರುತ್ತೇನೆ. ನಂತರ ಜಪ್ತಿ ಪಂಚನಾಮೆ, ಮುದ್ದೆ ಮಾಲು ಮತ್ತು ಒಬ್ಬ ಆರೋಪಿತನೊಂದಿಗೆ ೭:೩೦ ಪಿಎಮ್ ಕ್ಕೆ  ಠಾಣೆಗೆ ಬಂದಿದ್ದು ಸದರಿ ಆರೋಪಿತನ ವಿರುದ್ದ ಕಾನೂನು ಕ್ರಮ ಜರೂಗಿಸಲು ವಿನಂತಿ ಅಂತಾ ಇತ್ಯಾದಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 06-10-2022 11:48 AM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080