ಅಭಿಪ್ರಾಯ / ಸಲಹೆಗಳು

      ಅಶೋಕ ನಗರ ಪೊಲೀಸ್ ಠಾಣೆ :-  ಇಂದು ದಿನಾಂಕ: ೧೪.೦೯.೨೦೨೧ ರಂದು ೧೦:೦೦ ಎ.ಎಂ. ಕ್ಕೆ ಫಿರ್ಯಾದಿ ಶ್ರೀ ಭೀಮಣ್ಣಾ ತಂದೆ ಶಿವಲಿಂಗಪ್ಪಾ ಶಾಂತಪೂರ ವಯ: ೪೫ ವರ್ಷ ಜಾ: ಕುರುಬ ಉ: ಅಂಬುಲನ್ಸ ಚಾಲಕ ಸಾ|| ಕುಂಬಾರಪೇಟೆ ತಾ|| ಸುರಪೂರ ಜಿ|| ಯಾದಗೀರ ಹಾ|| ವ|| ಕನಕ ನಗರ ಸಮತಾ ಕಾಲೋನಿ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಕೊಟ್ಟ ಫರ‍್ಯಾದಿ ಅರ್ಜಿಯ ಸಾರಾಂಶವೆನೆಂದರೆ. ನಾನು ನನ್ನ ದಿನ ನಿತ್ಯದ ಕೆಲಸಕ್ಕೆ ಓಡಾಡುವ ಸಲುವಾಗಿ ಕಳೆದ ೩ ತಿಂಗಳುಗಳ  ಹಿಂದೆ  ಒಂದು ಪಲ್ಸರ -೨೨೦  ದ್ವಿ-ಚಕ್ರ  ವಾಹನ ನೇದ್ದು ಖರೀದಿಸಿದ್ದು ಇರುತ್ತದೆ.  ಅದರ ತಾತ್ಕಾಲಿಕ ನೊಂದಣಿ  ಸಂಖ್ಯೆ  T0721K2953AH ಇದ್ದು  ಕೆಂಪು  ಮತ್ತು  ಕಪ್ಪು ಬಣ್ಣದ್ದು  ಇದ್ದು  ಅದರ ಚೆಸ್ಸಿ ನಂ MD2A13EX6MCM15542 ಇಂಜಿನ್ ನಂ DKXCMM68901 ಅ.ಕಿ.೧,೨೧,೪೧೧/-  ರೂಪಾಯಿ ನೇದ್ದು ಖರೀದಿಸಿದ್ದು ಇರುತ್ತದೆ. ಸದರಿ  ವಾಹನವನ್ನು ಆಗಾಗ ನನ್ನ ಮಗ  ಶಿವಲಿಂಗಪ್ಪ ಇತನು ಉಪಯೋಗಿಸುತ್ತಿರುತ್ತಾನೆ. ನನ್ನ ಮಗ ಶಿವುಕುಮಾರ  ಇತನು ಕಲಬುರಗಿ ನಗರದ  ಲೀಟಲ್  ಸ್ಟಾರ ಮಕ್ಕಳ  ಆಸ್ಪತ್ರೆಯಲ್ಲಿ ಕೆಲಸ ಮಾಡಿಕೊಂಡು  ಇರುತ್ತಾನೆ. ಹೀಗಿದ್ದು ದಿನಾಂಕ:.೨೫.೦೮.೨೦೨೧ ರಂದು ರಾತ್ರಿ ೦೯:೦೦ ಗಂಟೆ ಸುಮಾರಿಗೆ ನನ್ನ ಮಗ ಶಿವಲಿಂಗಪ್ಪ ಇತನು ನನ್ನ  ಪಲ್ಸರ  ವಾಹನವನ್ನು ತೆಗೆದುಕೊಂಡು ರಾತ್ರಿ ಕೆಲಸಕ್ಕಾಗಿ ಆಸ್ಪತ್ರೆಗೆ  ಹೋಗಿರುತ್ತಾನೆ. ಅವನು ಸದರಿ ವಾಹನವನ್ನು  ರಾತ್ರಿ  ೦೯:೩೦ ಗಂಟೆಗೆ  ಆಸ್ಪತ್ರೆ ಎದರುಗಡೆ ನಿಲ್ಲಿಸಿ  ಒಳಗಡೆ  ಹೋಗಿದ್ದು  ಇರುತ್ತದೆ.  ಮರುದಿವಸ  ದಿನಾಂಕ:೨೬.೦೮.೨೦೨೧ ರಂದು ನನ್ನ ಮಗ  ಬೆಳಿಗ್ಗೆ  ೦೯:೦೦  ಗಂಟೆ ಸುಮಾರಿಗೆ  ಆಸ್ಪತ್ರೆಯಿಂದ  ಹೊರಗಡೆ  ಬಂದು ನೋಡಲು ಅವನು ನಿಲ್ಲಿಸಿದ್ದ  ಸ್ಥಳದಲ್ಲಿ ನಮ್ಮ ವಾಹನ ಇದ್ದಿರುವುದಿಲ್ಲ. ಯಾರೋ ಕಳ್ಳರು ನಮ್ಮ  ದ್ವಿ-ಚಕ್ರ  ವಾಹನವನ್ನು  ಕಳ್ಳತನ  ಮಾಡಿಕೊಂಡು  ಹೋಗಿರುತ್ತಾರೆ. ನಂತರ ನಮ್ಮ ಮಗನು  ಮನೆಗೆ ಬಂದು ಈ ವಿಷಯವನ್ನು  ತಿಳಿಸಿದಾಗ  ನಾನು  ಮತ್ತು  ನನ್ನ  ಮಗ   ಇಬ್ಬರೂ ಕೂಡಿಕೊಂಡು  ಕಲಬುರಗಿ  ನಗರದಲ್ಲಿ  ಎಲ್ಲಾ ಕಡೆಗಳಲ್ಲಿ  ಕಳುವಾದ  ನಮ್ಮ ವಾಹನವನ್ನು  ಹುಡುಕಾಡಿದರು  ಸಿಕ್ಕಿರುವುದಿಲ್ಲ.  ಈ  ವಿಷಯದ  ಬಗ್ಗೆ  ಮನೆಯಲ್ಲಿ  ವಿಚಾರಿಸಿ ಇಂದು  ತಡವಾಗಿ ಠಾಣೆಗೆ ಬಂದು ದೂರು ಸಲ್ಲಿಸುತ್ತಿದ್ದು, ಕಳವುವಾದ ನನ್ನ ಮೋಟಾರ ಸೈಕಲನ್ನು ಪತ್ತೆ ಮಾಡಿ ಕಳ್ಳತನ ಮಾಡಿದವರ ವಿರುದ್ದ ಕಾನೂನು ರೀತಿ ಕ್ರಮ ಜರುಗಿಸಿ ನನ್ನ ವಾಹನ ನನಗೆ ದೊರಕಿಸಿ ಕೊಡಲು ವಿನಂತಿ  ಅಂತ ಇತ್ಯಾದಿ ಇದ್ದ ಫಿರ್ಯಾದಿಯ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಅಶೋಕ ನಗರ ಪೊಲೀಸ್ ಠಾಣೆ :- ಇಂದು ದಿನಾಂಕ: ೧೪.೦೯.೨೦೨೧ ರಂದು ೧೧:೦೦ ಎ.ಎಂ. ಕ್ಕೆ ಫಿರ್ಯಾದಿ ಶ್ರೀ ರಾಜಶೇಖರ ತಂದೆ ಬಸಪ್ಪ  ಬೇವಿನಮರ  ವಯ: ೬೦  ವರ್ಷ  ಜಾ: ಲಿಂಗಾಯತ  ಉ:  ಖಾಸಗಿ  ಕೆಲಸ ಸಾ|| ಮ.ನಂ. ೫೪/ಸಿ-೧ ಶಾಂತಿ ನಗರ ಕಲಬುರಗಿ  ಇವರು ಠಾಣೆಗೆ ಹಾಜರಾಗಿ ಕೊಟ್ಟ ಫಿರ್ಯಾದಿ ಅರ್ಜಿಯ ಸಾರಾಂಶವೆನೆಂದರೆ. ನಾನು ಖಾಸಗಿ  ಕೆಲಸ  ಮಾಡಿಕೊಂಡು  ಕುಟುಂಬದೊಂದಿಗೆ ವಾಸವಾಗಿರುತ್ತೇನೆ.  ನನಗೆ  ಸುಮಿತ್ರಾ ಅಂತ  ಹೆಂಡತಿ  ಇದ್ದು  ಅವಳು  ಮನೆ ಕೆಲಸ ಮಾಡಿಕೊಂಡು  ಇರುತ್ತಾಳೆ. ನಮಗೆ ಒಂದು ಗಂಡು  ಮತ್ತು  ಒಂದು  ಹೆಣ್ಣು ಮಗಳು  ಇರುತ್ತಾಳೆ . ನಮ್ಮ  ಎರಡು ಮಕ್ಕಳು ಅಂಗವೀಕಲ ಇರುತ್ತಾರೆ.  ನನ್ನ ಹೆಂಡತಿ ಮಕ್ಕಳು  ಕಳೆದ  ಎರಡು ರ‍್ಷಗಳಿಂದ  ನಮ್ಮ ಸ್ವಂತ ಊರಾದ  ಮೊಟೆಬೆನ್ನೂರು  ತಾ|| ಬ್ಯಾಡಗಿ  ಜಿ||  ಹಾವೇರಿ  ಯಲ್ಲಿ  ಇರುತ್ತಾರೆ.  ನಾನು  ಕೆಲಸ ನಿಮಿತ್ಯ  ಕಲಬುರಗಿಯಲ್ಲಿ  ನಮ್ಮ ಅಣ್ಣನ  ಮನೆಯಲ್ಲಿ  ಇರುತ್ತೇನೆ. ನಮ್ಮ  ಅಣ್ಣ  ಚನ್ನಬಸಪ್ಪ ಇವರು  ತಮ್ಮ  ಮಕ್ಕಳೊಂದಿಗೆ  ಬೆಂಗಳೂರಿನಲ್ಲಿ  ಇರುತ್ತಾರೆ.

       ಹೀಗಿದ್ದು    ದಿನಾಂಕ:೨೫.೦೮.೨೦೨೧ ರಂದು  ನಾನು  ನಮ್ಮ  ಊರಿನಲ್ಲಿ   ಕಾರ್ಯಕ್ರಮ ಇದ್ದ ಪ್ರಯುಕ್ತ  ಕಲಬುರಗಿ ನಗರದ  ನಮ್ಮ ಅಣ್ಣನ  ಮನೆಗೆ ಬೀಗ  ಹಾಕಿಕೊಂಡು  ನಮ್ಮ  ಸ್ವಂತ  ಊರಿಗೆ   ಹೋಗಿರುತ್ತೇನೆ.   ಕಾರ್ಯಕ್ರಮ  ಮತ್ತು   ಗಣೇಶ ಹಬ್ಬ  ಮುಗಿಸಿಕೊಂಡು   ಇಂದು  ದಿನಾಂಕ:೧೪.೦೯.೨೦೨೧ ರಂದು  ಬೆಳಿಗ್ಗೆ  ೦೬:೦೦  ಗಂಟೆಗೆ   ನಾನು ಕಲಬುರಗಿಗೆ ನಮ್ಮ  ಮನೆಗೆ  ಬಂದು  ನೋಡಲಾಗಿ  ನಮ್ಮ  ಮನೆಯ ಬೀಗ  ಮುರಿದ್ದು ನೋಡಿ ಗಾಬರಿಯಾಗಿ  ಒಳಗೆ  ಹೋಗಿ  ನೋಡಲಾಗಿ  ಮನೆಯಲ್ಲಿಯ ವಸ್ತುಗಳು  ಚೆಲ್ಲಾಪಿಲ್ಲಿಯಾಗಿ  ಬಿದ್ದಿರುತ್ತವೆ. ನಾನು ಬೆಡರೂಮಗಳಲ್ಲಿ  ಹೋಗಿ  ನೋಡಲು ಬೆಡರೂಮನಲ್ಲಿ  ಇಟ್ಟಿದ್ದ  ೩ ಅಲ್ಮಾರಿಗಳ  ಬೀಗ  ಮುರಿದು ತೆರೆದಿದ್ದು  ಅವುಗಳಲ್ಲಿ  ಇದ್ದ ಬಟ್ಟೆ ಬರೆಗಳು ಮತ್ತು   ಇತರೆ ವಸ್ತುಗಳು  ಚೆಲ್ಲಾಪಿಲ್ಲಿಯಾಗಿ  ಬಿದ್ದಿರುತ್ತವೆ. ಅದರಲ್ಲಿ  ಯಾವ  ವಸ್ತುಗಳು ಕಳ್ಳತನ ಆಗಿರುತ್ತವೆ ಅಥವಾ ಇಲ್ಲ  ಅಂತ  ನನಗೆ  ಗೊತ್ತಿಲ್ಲ.   ನಮ್ಮ  ಅಣ್ಣ   ಚೆನ್ನಬಸಪ್ಪ   ಬೆಂಗಳೂರಿನಿಂದ  ಬಂದ  ನಂತರ  ಕಳ್ಳತನ  ಆಗಿರುವ   ವಸ್ತುಗಳ  ಬಗ್ಗೆ ಗೊತ್ತಾಗುತ್ತದೆ.  ಕಾರಣ  ನಿನ್ನೆ  ದಿನಾಂಕ:೧೩.೦೯.೨೦೨೧  ರಂದು   ಅಂದಾಜು  ರಾತ್ರಿ  ೧೧:೦೦  ಗಂಟೆಯಿಂದ   ಇಂದು  ದಿನಾಂಕ:೧೪.೦೯.೨೦೨೧  ರಂದು  ಬೆಳಿಗ್ಗೆ  ೦೬:೦೦  ಗಂಟೆಯ  ಅವಧಿಯಲ್ಲಿ   ಯಾರೋ  ಕಳ್ಳರು  ನಮ್ಮ ಅಣ್ಣನ  ಮನೆಯ  ಬೀಗ ಮುರಿದು ಮನೆಯಲ್ಲಿದ್ದ   ಸಾಮಾನುಗಳನ್ನು  ಕಳ್ಳತನ  ಮಾಡಲು ಪ್ರಯತ್ನಿಸಿದ ಕಳ್ಳರನ್ನು  ಪತ್ತೆಮಾಡಿ ಅವರ ವಿರುದ್ಧ  ಕಾನೂನು  ಕ್ರಮ  ಜರುಗಿಸಬೇಕು ಅಂತ  ವಿನಂತಿ ಅಂತ ಇತ್ಯಾದಿ ಇದ್ದ ಫಿರ್ಯಾದಿ  ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ

ವಿಶ್ವವಿದ್ಯಾಲಯ ಪೊಲೀಸ ಠಾಣೆ :-ಇಂದು ದಿನಾಂಕ: ೧೪-೦೯-೨೦೨೧ ರಂದು ೭:೦೦ ಪಿ.ಎಮ್ ಕ್ಕೆ ಫೀರ್ಯಾದಿದಾರರಾದ ಶ್ರೀ. ಸಂತೋಷ ತಂದೆ ಬೀಮಶ್ಯಾ ಸರಡಗಿ ವಯ: ೨೫ ವರ್ಷ ಉ: ಗೌಂಡಿ ಕೆಲಸ ಜಾತಿ: ವಡ್ಡರ ಸಾ: ರಾಜಾಪೂರ ಕಲಬುರಗಿ ಠಾಣೆಗೆ ಹಾಜರಾಗಿ ಫಿರ್ಯಾದಿ ಹೇಳಿಕೆ ನೀಡಿದರ ಸಾರಾಂಶ ಏನಂದರೆ ನಾನು ಗೌಂಡಿ ಕೆಲಸ ಮಾಡಿಕೊಂಡು ಕುಟುಂಬ ಸಮೇತ ವಾಸವಾಗಿರುತ್ತೇನೆ. ನಮ್ಮ ಏರಿಯಾದ ಕೊಳ್ಳಪ್ಪ ತಂದೆ ಶಿವರಾಮ ನಂದೂರ ಮತ್ತು ಪುಟ್ಟು @ ಅಂಬರೀಶ ತಂದೆ ಶ್ರೀಮಂತ ವಾಲಿಕರ ಇವರು ಯಲ್ಲಾಲಿಂಗ ತೀರ್ಥ ಇವರ ಹತ್ತಿರ ಕೈಗಡ ಸಾಲ ಮಾಡಿಕೊಂಡಿರುತ್ತಾನೆ. ಆ ಹಣ ಕೊಡುವ ವಿಷಯದಲ್ಲಿ ಈ ಮೊದಲು ಪುಟ್ಟು ಮತ್ತು ಕೊಳ್ಳಪ್ಪನ ಸಂಗಡ ಯಲ್ಲಾಲಿಂಗನು ತಕರಾರು ಮಾಡುತ್ತಾ ಬಂದಿರುತ್ತಾನೆ.ನಿನ್ನೆ ದಿನಾಂಕ: ೧೩-೦೯-೨೦೨೧ ರಂದು ರಾತ್ರಿ ೮:೦೦ ಗಂಟೆಗೆ ಹಣದ ವಿಷಯ ಚರ್ಚಿಸಲು ಯಲ್ಲಾಲಿಂಗನು ಪುಟ್ಟು ಮತ್ತು ಕೊಳ್ಳಪ್ಪನ ಸಂಗಡ ರಾಜಾಪೂರದ ಹನುಮಾನ ಗುಡಿಯ ಹತ್ತಿರ ತಕರಾರು ಮಾಡುತ್ತಿದ್ದಾಗ, ವಿಷಯ ಗೊತ್ತಾಗಿ ನಾನು ಮತ್ತು ಸಾಗರ ಇಬ್ಬರು ಅಲ್ಲಿಗೆ ಹೋಗಿ ಸಮಸ್ಯ ಬಗೆಹರಿಸಿ ಪುಟ್ಟುನಿಂದ ಸದ್ಯ ಒಂದು ಸಾವಿರ ರೂಪಾಯಿ ಯಲ್ಲಾಲಿಂಗನಿಗೆ ಕೊಡಿಸಿದ್ದೇವು. ಕೊಳ್ಳಪ್ಪನಿಂದ ಆ ನಂತರ ಹಣ ಕೊಡಿಸುವದಾಗಿ ಹೇಳಿ ನಾನು ಮತ್ತು ಸಾಗರ, ಕೊಳ್ಳಪ್ಪಾ ಮೂರು ಜನರು ಕೂಡಿ ರಾಜಾಪೂರದಲ್ಲಿರುವ ಪ್ರೀಯದರ್ಶಿ ಐಟಿಐ ಕಾಲೇಜಿನ ಹತ್ತಿರ ಬಂದು ನಾವು ಸರಾಯಿ ಕುಡಿಯುತ್ತಾ  ಕುಳಿತಿದ್ದೇವು. ಅಲ್ಲಿಯೇ ನಮ್ಮ ಮುಂದೆ ೧) ಯಲ್ಲಾಲಿಂಗ ತಂದೆ ಅಮೃತ ತೀರ್ಥ ಜಾತಿ: ಕಬ್ಬಲಿಗ, ೨) ಪವನ @ ಪ್ರಭುಲಿಂಗ ತಂದೆ ಮಲ್ಲಣ್ಣಾ ಕಿರಣಿಗಿ ಜಾತಿ ಕಬ್ಬಲಿಗ ೩) ಚಂದ್ರು ತಂದೆ ಸಿದ್ರಾಮ ಕಡಗಂಚಿ ಜಾತಿ: ಲಿಂಗಾಯತ ೪) ಸಂಗಮೇಶ ತಂದೆ ಚನ್ನಪ್ಪಾ ದಾಮಾ ಜಾತಿ: ಲಿಂಗಾಯತ ಇವರು ನಿಂತಿದ್ದರು. ಆಗ ಅಂದಾಜು ರಾತ್ರಿ ೯:೧೫ ಗಂಟೆ ಆಗಿರಬಹುದು ಆ ವೇಳೆಗೆ ನಾಲ್ಕು ಜನರು ಕೂಡಿ ನಮ್ಮ ಹತ್ತಿರ ಬಂದು ಯಲ್ಲಾಲಿಂಗನು ಏ ರಂಡಿ ಮಕ್ಕಳೆ ವಡ್ಡರೆ ನಿಮದು ಬಹಳ ಸೊಕ್ಕು ಆಗ್ಯಾದ ಅಂತಾ ಬೈದನು ಪವನ ಇವನು ರಂಡಿ ಮಕ್ಕಳೆ ಅಂತಾ ಬೈದನು ಚಂದ್ರು ಇವನು ಏ ಸೋಳೆ ಮಕ್ಕಳೆ ನಿಮದ ಬಹಳ ಆಗ್ಯಾದ ಅಂತ ಬೈದನು ಸಂಗಮೇಶ ಈತನಿ ಏ ಬೊಸಡಿ ಮಕ್ಕಳೆ ನೀವು ನ್ಯಾಯ ಪಂಚಾಯತಿ ಮಾಡುತಿರಿ ಅಂತ ಬೈದನು. ಯಲ್ಲಾಲಿಂಗನು ಏಕ ಏಕಿ ಯಲ್ಲಾಲಿಂಗನು ನೀವು ನನ್ನ ಹತ್ತಿರ ಹಣ ತಗೆದುಕೊಂಡು ಹಣ ಕೇಳಿದರೆ ನನಗೆ ಅಂಜಿಸುತ್ತಿರಿ ? ಮತು ನನಗೆ ನೀನು ಎಲ್ಲದರಲ್ಲಿ ಮುಂದೆ ಬರುತ್ತಿ ಅಂತಾ ಬೈಯುತ್ತಿದ್ದನು. ನಾವು ನಿನಗೆ ಇವತ್ ಪುಟ್ಟುನಿಂದ ಒಂದು ಸಾವಿರ ಹಣ ಕೊಡಿಸಿರುತಿವಿ ಕೊಳ್ಳಪ್ಪನಿಂದ ಆಮೇಲೆ ಹಣ ಕೊಡುವದಾಗಿ ಹೇಳಿರುತ್ತೇವೆ ಆದರು ನೀವು ಮತ್ತೆ ಇಲ್ಲಿ ಬಂದು ನಮ್ಮ ಸಂಗಡ ಜಗಳ ಮಾಡುತ್ತಿದ್ದಿರಿ ಅಂತ ನಾನು ಕೆೆÃಳಿದಾಗ ಯಲ್ಲಾಲಿಂಗನು  ನಿಮಗೆ ಬಹಳ ಸೊಕ್ಕು ಆಗ್ಯಾದ ಅಂತ ಅಂದವನೆ ತನ್ನ ಹತ್ತಿರ ಇದ್ದ ಚಾಕು ತಗೆದು ಚಾಕುವಿನಿಂದ ನನ್ನ ಎದೆಗೆ ಚುಚ್ಚಿ ರಕ್ತಗಾಯ ಮಾಡಿದನು. ನನಗೆ ಹೊಡೆಯುವದು ಬಿಡಿಸಲು ಬಂದ ಸಾಗರನಿಗೆ ಕುತ್ತಿಗೆ ಹತ್ತಿರ ಎಡ ಮಗ್ಗಲಿಗೆ ಚಾಕುವಿನಂದ ಚುಚ್ಚಿ ರಕ್ತ ಗಾಯ ಮಾಡಿದನು. ಕೊಳ್ಳಪ್ಪಗೆ ಪವನ @ ಪ್ರಭುಲಿಂಗ ಇವನು ಕೈಯಿಂದ ಹೊಟ್ಟೆಗೆ ಹೋಡೆದಿರುತ್ತಾನೆ. ಅಲ್ಲಿಯೇ ಇದ್ದ ನಮಗೆ ಪರಿಚಯದ ರಾಜು ತಂದೆ ಕಾಶಿರಾಮ. ಸಾಗರ ತಂದೆ ದೂಳಪ್ಪ ಸಾ: ಇಬ್ಬರು ರಾಜಾಪೂರ ಇವರು ಜಗಳ ನೋಡಿ ಬಿಡಿಸಿರುತ್ತಾರೆ. ಸಂಗಮೇಶ ಮತ್ತು ಚಂದ್ರು ಇವರು ಕೈಯಿಂದ ನನ್ನ ಬೆನ್ನ ಮೇಲೆ ಹೊಡೆದಿರುತ್ತಾರೆ. ನಂತರ ಯಲ್ಲಾಲಿಂಗನು ರಂಡಿ ಮಗನೆ ಇವತ್ ಉಳಿದಿ ಇನ್ನೊಮ್ಮೆ ಹಣದ ವಿಷಯದಲ್ಲಿ ನೀವು ಬಂದರೆ ನಿಮಗೆ ಖಲಾಸ ಮಾಡಿಯೇ ಬಿಡುತ್ತೇನೆ ಅಂತಾ ಜೀವ ಭಯ ಹಾಕಿದರು. ನಂತರ ವಿಷಯ ಗೊತ್ತಾಗಿ ಸ್ಥಳಕ್ಕೆ ಬಂದ ನನ್ನ ಅಣ್ಣ ನಾಗರಾಜ, ರಾಜು ಸಾಗರ ಇವರು ಕೂಡಿ ನಮಗೆ ಅವರ ಮೊಟಾರ ಸೈಕಲ ಮೇಲೆ ಕೂಡಿಸಿಕೊಂಡು ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೆರಿಕೆ ಮಾಡಿರುತ್ತಾರೆ. ನಂತರ ನಾವು ಆಸ್ಪತ್ರೆಯಿಂದ ಬಿಡುಗಡೆ ಹೊಂದಿ ಮನೆಯಲ್ಲಿ ವಿಚಾರ ಮಾಡಿಕೊಂಡು ಇಂದು ತಡವಾಗಿ ಠಾಣೆಗೆ ಬಂದು ನನ್ನ ದೂರು ಹೇಳಿಕೆ ಕೊಟ್ಟಿರುತ್ತೇನೆ. ಕಾರಣ ಮೇಲೆ ನಮೂದಿಸಿದ ೧) ಯಲ್ಲಾಲಿಂಗ ತಂದೆ ಅಮೃತ ತೀರ್ಥ ಜಾತಿ: ಕಬ್ಬಲಿಗ, ೨) ಪವನ ತಂದೆ ಮಲ್ಲಣ್ಣಾ ಕಿರಣಿಗಿ ೩) ಚಂದ್ರು ಕಡಗಂಚಿ ೪) ಸಂಗಮೇಶ ದಾಮಾ ಈ ನಾಲ್ಕು ಜನರು ಕೂಡಿ ಬಂದು ನಮಗೆ ಅವಾಚ್ಯ ಶಬ್ಧಗಳಿಂದ ಬೈದು ಜಾತಿ ನಿಂದನೆ ಮಾಡಿ ಯಲ್ಲಾಲಂಗ ತೀರ್ಥ ಇವನು ನನಗೆ ಮತ್ತು ಸಾಗರನಿಗೆ ಚಾಕುವಿನಿಂದ ಚುಚ್ಚಿ ರಕ್ತ ಗಾಯ ಮಾಡಿ ಜೀವ ಭಯ ಹಾಕಿ ಜಾತಿ ಎತ್ತಿ ಬೈದಿರುತ್ತಾರೆ. ಕಾರಣ ಅವರ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಹೇಳಿ ಲಾಪಟಾಪದಲ್ಲಿ ಟೈಪ ಮಾಡಿದ ನಂತರ ಪ್ರಿಂಟ ತಗೆದು ಓದಿ ಹೇಳಿದ ನಂತರ ನಾನು ಸಹಿ ಮಾಡಿರುತ್ತೇನೆ. ಅಂತಾ ಇತ್ಯಾದಿ ಫಿರ್ಯಾದಿ ಹೇಳೀಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಇತ್ತೀಚಿನ ನವೀಕರಣ​ : 22-09-2021 01:27 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080