ಅಭಿಪ್ರಾಯ / ಸಲಹೆಗಳು

ಸಬ್‌ ಅರ್ಬನ್‌ ಪೊಲೀಸ ಠಾಣೆ :- ದಿನಾಂಕಃ-14-08-2022  ರಂದು ಫಿರ್ಯಾದಿದಾರರು ನೀಡಿದ ಫಿರ್ಯಾದಿಯೇನೆಂದರೆ ನನಗೆ ಮೂರು ಜನ ಗಂಡು ಮಕ್ಕಳು ಮತ್ತು ಎರಡು ಜನ ಹೆಣ್ಣು ಮಕ್ಕಳು ಇದ್ದು ಅವರಲ್ಲಿ ಮೂರನೆಯವನಾದ ಸಚಿನ ಈತನಿಗೆ ಯಾರೋ ಯಾವುದೋ ಉದ್ದೇಶದಿಂದ ದಿನಾಂಕಃ- ೧೩/೦೮/೨೦೨೨ ರಂದು ಮುಂಜಾನೆ ಸಮಯದಲ್ಲಿ ರಾಣೇಶ್ಪೀರ್ ದರ್ಗಾದ ಹತ್ತಿರ ತಲೆಗೆ ಭಾರಿ ಗಾಯ ಮಾಡಿ ಹೊಡೆಬಡೆ ಮಾಡಿ ಕೊಲೆ ಮಾಡಿದ್ದು ಸದರಿ ಆರೋಪಿತರನ್ನು ಪತ್ತೆ ಹಚ್ಚಿ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ದೂರು ನೀಡಿದ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಸಬ್‌ ಅರ್ಬನ್‌ ಪೊಲೀಸ ಠಾಣೆ :- ದಿನಾಂಕಃ- 13-08-2022  ರಂದು ಫಿರ್ಯಾದಿದಾರರು ನೀಡಿದ ಫಿರ್ಯಾದಿಯೇನೆಂದರೆ ತಮ್ಮ ಮಗಳನ್ನು ಶಾಲೆಗೆ ಬಿಡಲು ಹೋಗಿದ್ದಾಗ ಶಾಲೆಯ ಆರಂಭದ ಸಮಯ ಮುಗಿದು ಸ್ವಲ್ಪ ಹೊತ್ತು ಆಗಿದ್ದರಿಂದ  ಅಲ್ಲಿಯ ಶಾಲೆಯ ಅಧ್ಯಕ್ಷರು ಮತ್ತು ಸದರಿ ಆರೋಪಿತನು ಆದಂತಹ ಸೈಯದ್ ಗೌಸ್ ಈತನು ನನ್ನನ್ನು ತಡೆದು ನಮ್ಮ ಮಗಳನ್ನು ಶಾಲೆಯ ಒಳಗೆ ಬಿಡಲು ನಿರಾಕರಿಸಿ ಏನಲೆ ನಿಂದು, ಇಲ್ಲಿಂದ ಹೊರಡು ಎಂದು ಬೈದು ಕಣ್ಣಿನ ಮೇಲೆ ಹೊಡೆದು ಮತ್ತು ಎದೆಗೆ ಹೊಟ್ಟೆಗೆ ಒಡೆ ಬಡೆ ಮಾಡಿದ್ದರಿಂದ ಫಿರ್ಯಾದಿ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಚೌಕ ಪೊಲೀಸ ಠಾಣೆ :- ದಿನಾಂಕ 14-08-2022  ರಂದು ಸಂಜೆ ೫-೨೦ ಗಂಟೆ ಸುಮಾರಿಗೆ ಕಲಬುರಗಿ ನಗರ ಲಾರಿ ತಂಗುದಾಣ ಆಟೋ ನಗರ ಗುಮ್ಮಜ ಖುಲ್ಲಾ ಜಾಗೆಯಲ್ಲಿ ಗುರುನಾಥ ತಂದೆ ಹಣಮಂತ ಬೆನಕನ ಸಂಗಡ ೮ ಜನರು ದೈವ ಲೀಲೆಯ ಇಸ್ಪೇಟ ಜೂಜಾಟವನ್ನು ಹಣವನ್ನು ಪಣಕ್ಕೆ ಹಚ್ಚಿ ಆಡುತ್ತಿದ್ದಾರೆ ಎಂದು ಖಚಿತ ಮಾಹಿತಿ ಮೇರೆಗೆ  ಫಿರ್ಯಾದಿದಾರ ಪಿ.ಐ. ಚೌಕ ಇಬ್ಬರು  ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಹಿಡಿದು ಇಸ್ಪೇಟ ಜೂಜಾಟದಲ್ಲಿ ತೊಡಗಿದ ೦೯ ಜನರನ್ನು ಹಿಡಿದು ಅವರಿಂದ ಇಸ್ಪೇಟ ಜೂಜಾಟಕ್ಕೆ ಸಂಬಂಧಿಸಿದ ನಗದು ಹಣ ೩೦.೮೧೦/- ರೂ. ಮತ್ತು ೫೨ ಇಸ್ಪೇಟ ಎಲೆಗಳು ಜಪ್ತ ಪಡಿಸಿಕೊಂಡು ಗುನ್ನೆ ದಾಖಲಿಸಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 29-08-2022 06:20 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080