Feedback / Suggestions

ಸಬ್‌ ಅರ್ಬನ್‌ ಪೊಲೀಸ ಠಾಣೆ :- ದಿನಾಂಕಃ-14-08-2022  ರಂದು ಫಿರ್ಯಾದಿದಾರರು ನೀಡಿದ ಫಿರ್ಯಾದಿಯೇನೆಂದರೆ ನನಗೆ ಮೂರು ಜನ ಗಂಡು ಮಕ್ಕಳು ಮತ್ತು ಎರಡು ಜನ ಹೆಣ್ಣು ಮಕ್ಕಳು ಇದ್ದು ಅವರಲ್ಲಿ ಮೂರನೆಯವನಾದ ಸಚಿನ ಈತನಿಗೆ ಯಾರೋ ಯಾವುದೋ ಉದ್ದೇಶದಿಂದ ದಿನಾಂಕಃ- ೧೩/೦೮/೨೦೨೨ ರಂದು ಮುಂಜಾನೆ ಸಮಯದಲ್ಲಿ ರಾಣೇಶ್ಪೀರ್ ದರ್ಗಾದ ಹತ್ತಿರ ತಲೆಗೆ ಭಾರಿ ಗಾಯ ಮಾಡಿ ಹೊಡೆಬಡೆ ಮಾಡಿ ಕೊಲೆ ಮಾಡಿದ್ದು ಸದರಿ ಆರೋಪಿತರನ್ನು ಪತ್ತೆ ಹಚ್ಚಿ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ದೂರು ನೀಡಿದ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಸಬ್‌ ಅರ್ಬನ್‌ ಪೊಲೀಸ ಠಾಣೆ :- ದಿನಾಂಕಃ- 13-08-2022  ರಂದು ಫಿರ್ಯಾದಿದಾರರು ನೀಡಿದ ಫಿರ್ಯಾದಿಯೇನೆಂದರೆ ತಮ್ಮ ಮಗಳನ್ನು ಶಾಲೆಗೆ ಬಿಡಲು ಹೋಗಿದ್ದಾಗ ಶಾಲೆಯ ಆರಂಭದ ಸಮಯ ಮುಗಿದು ಸ್ವಲ್ಪ ಹೊತ್ತು ಆಗಿದ್ದರಿಂದ  ಅಲ್ಲಿಯ ಶಾಲೆಯ ಅಧ್ಯಕ್ಷರು ಮತ್ತು ಸದರಿ ಆರೋಪಿತನು ಆದಂತಹ ಸೈಯದ್ ಗೌಸ್ ಈತನು ನನ್ನನ್ನು ತಡೆದು ನಮ್ಮ ಮಗಳನ್ನು ಶಾಲೆಯ ಒಳಗೆ ಬಿಡಲು ನಿರಾಕರಿಸಿ ಏನಲೆ ನಿಂದು, ಇಲ್ಲಿಂದ ಹೊರಡು ಎಂದು ಬೈದು ಕಣ್ಣಿನ ಮೇಲೆ ಹೊಡೆದು ಮತ್ತು ಎದೆಗೆ ಹೊಟ್ಟೆಗೆ ಒಡೆ ಬಡೆ ಮಾಡಿದ್ದರಿಂದ ಫಿರ್ಯಾದಿ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಚೌಕ ಪೊಲೀಸ ಠಾಣೆ :- ದಿನಾಂಕ 14-08-2022  ರಂದು ಸಂಜೆ ೫-೨೦ ಗಂಟೆ ಸುಮಾರಿಗೆ ಕಲಬುರಗಿ ನಗರ ಲಾರಿ ತಂಗುದಾಣ ಆಟೋ ನಗರ ಗುಮ್ಮಜ ಖುಲ್ಲಾ ಜಾಗೆಯಲ್ಲಿ ಗುರುನಾಥ ತಂದೆ ಹಣಮಂತ ಬೆನಕನ ಸಂಗಡ ೮ ಜನರು ದೈವ ಲೀಲೆಯ ಇಸ್ಪೇಟ ಜೂಜಾಟವನ್ನು ಹಣವನ್ನು ಪಣಕ್ಕೆ ಹಚ್ಚಿ ಆಡುತ್ತಿದ್ದಾರೆ ಎಂದು ಖಚಿತ ಮಾಹಿತಿ ಮೇರೆಗೆ  ಫಿರ್ಯಾದಿದಾರ ಪಿ.ಐ. ಚೌಕ ಇಬ್ಬರು  ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಹಿಡಿದು ಇಸ್ಪೇಟ ಜೂಜಾಟದಲ್ಲಿ ತೊಡಗಿದ ೦೯ ಜನರನ್ನು ಹಿಡಿದು ಅವರಿಂದ ಇಸ್ಪೇಟ ಜೂಜಾಟಕ್ಕೆ ಸಂಬಂಧಿಸಿದ ನಗದು ಹಣ ೩೦.೮೧೦/- ರೂ. ಮತ್ತು ೫೨ ಇಸ್ಪೇಟ ಎಲೆಗಳು ಜಪ್ತ ಪಡಿಸಿಕೊಂಡು ಗುನ್ನೆ ದಾಖಲಿಸಿಕೊಂಡ ಬಗ್ಗೆ ವರದಿ.

Last Updated: 29-08-2022 06:20 PM Updated By: ADMIN


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : Kalaburagi City Police
Designed, Developed and Hosted by: Center for e-Governance - Web Portal, Government of Karnataka © 2024, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080