ಅಭಿಪ್ರಾಯ / ಸಲಹೆಗಳು

ಬ್ರಹ್ಮಪೂರ ಪೊಲೀಸ್‌ ಠಾಣೆ :-    ಮಾನ್ಯ ನ್ಯಾಯಾಲಯದಿಂದ ಖಾಸಗಿ ದೂರು ಸಂಖ್ಯೆ ೨೬/೨೦೨೨ ನೇದ್ದನ್ನು ಕೋರ್ಟ ಪಿ.ಸಿ ಶ್ರೀ ಆಂಜನೇಯ ಪಿ.ಸಿ.-೨೬೭ ರವರು ಠಾಣೆಗೆ ತಂದು ಹಾಜರಪಡಿಸಿದ್ದು, ಸದರಿ ಖಾಸಗಿ ದೂರಿನ ಸಾರಾಂಶವೆನೆಂದರೆ, ಪಿರ್ಯಾದಿದಾರರಾದ ಶ್ರೀಮತಿ ಆಶಾ ಗಂಡ ವೆಂಕಟೇಶ ಪಿಲ್ಲೈ ವಯ:೬೬ ವರ್ಷ ಉ:ಮನೆಕೆಲಸ ಸಾ: ಫ್ಲ್ಯಾಟ್ ಸಂ.ಟಿ-೭ ಆರ್.ಗಿ.ಮಾಲು ಎನಕ್ಲೇವ, ಕೈಗಾರಿಕಾ ವಸಾಹತು ,ಎಂ.ಎಸ್.ಕೆ.ಮಿಲ್ ರಸ್ತೆ ಕಲಬುರಗಿ-೫೮೫೧೦೨ ಇವರು ೨೦೧೨.೧೩ ನೇ ಸಾಲಿನಲ್ಲಿ ಕಲಬುರಗಿ ತಾ: ಜಿ: ಯ ಕೊಟನೂರ (ಡಿ) ಗ್ರಾಮದ ಸರ್ವೇ ನಂ ೫೦ ಕೃಷಿ ಭೂಮಿ ಜಮೀನನ್ನು ಅಕ್ರಮವಾಗಿ ದಿನಾಂಕ :೧೦/೧೧/೨೦೦೫ರ ನಂತರದ ಸೇಲ್ ಡೀಡ್ ದಾಖಲೆಯ ಪ್ರಕಾರ ಶ್ರೀಮತಿ ಸರೋಜಿನಿ ಮತ್ತು ಆಕೆಯ ದಿವಂಗ ಪತಿ ತಿಮ್ಮಪ್ಪನ ಹೆಸರಿನಲ್ಲಿ ಜಂಟಿಯಾಗಿ ಮೋಸದಿಂದ ಶ್ರೀಮತಿ ಆಶಾ ಗಂಡ ವೆಂಕಟೇಶ ಪಿಲ್ಲೈ ಇವರ ಹೆಸರನ್ನು ಹೋಡೆದುಹಾಕಿ ಎಮ್.ಆರ್.ಸಂ.ಹೆಚ್.೨೨/೨೦೧೨.೧೩ ದಿನಾಂಕ ೨೯.೧೦.೨೦೧೨ರಲ್ಲಿ ಬದಲಾಯಿಸಿರುತ್ತಾರೆ ಮತ್ತು ನಕಲಿ/ಸುಳ್ಳು ದಾಖಲಾತಿಗಳಾದ ಪಹಣಿಯನ್ನು ನಕಲು ಮಾಡಿರುತ್ತಾರೆ. ಕೊಟನೂರ (ಡಿ) ಗ್ರಾಮದ ಸರ್ವೇ ನಂ ೫೦ ಕೃಷಿ ಭೂಮಿಯನ್ನು ಆರೋಪಿತರಾದ ೧)ಮಹೇಶ ತಂದೆ ಗುಂಡಪ್ಪ ೨) ಶ್ರೀಮತಿ ಸರೋಜಿನಿ ಗಂಡ ತಿಮ್ಮಪ್ಪ ೩)ರಾಹುಲ್ ಕಂಪ್ಯೂಟರ್ ಕ್ಲರ್ಕ, , ೪)ದೇವೆಂದ್ರಪ್ಪ ನಾಡಿಗೇರ  ಶಿರಸ್ತೆದಾರ ೫) ರಾಜಶೇಖರ ಭಂಡೆ ಕಂದಾಯ ನಿರೀಕ್ಷಕರು, ರವರೆಲ್ಲರೂ ಶಾಮಿಲಾಗಿ ಅಕ್ರಮವಾಗಿ ಶ್ರೀಮತಿ ಆಶಾರವರಿಗೆ ಸೇರಬೇಕಾದ ಕೃಷಿ ಭೂಮಿಯನ್ನು  ಮೋಸ ವಂಚನೆ, ನಂಬಿಕೆ ದ್ರೋಹ ಮತ್ತು ಒಳ ಸಂಚು ರೂಪಿಸಿ ನಂಬಿಕೆ ದ್ರೋಹ ಮೋಸ ವಂಚನೆ ಮಾಡಿರುತ್ತಾರೆ ಈ ಬಗ್ಗೆ ಆರೋಪಿತರ ವಿರುದ್ದ ಕಾನೂನು ಕ್ರಮ ಕೈಕೊಳ್ಳಬೇಕು ಎಂದು ವಗೈರೆ ಪಿರ್ಯಾದಿ ಸಾರಂಶ ಮೇಲಿಂದ ಗುನ್ನೆದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಸಬ್‌ ಅರ್ಬನ್‌ ಪೊಲೀಸ್‌ ಠಾಣೆ :- ದಿನಾಂಕ 14-07-2022 ರಂದು ಫರ‍್ಯಾದುದಾರನಾದ ನೀಡಿದ್ದೇನೆಂದರೆ ನನಗೆ ಒಂದು ಕಿರಣಿ ಅಂಗಡಿಯಿದ್ದು ದಿನಾಂಕ ೧೩/೦೭/೨೦೨೨ ರಂದು ನಾನು ರಾತ್ರಿ ೧೦.೩೦ ಗಂಟೆ ಸುಮಾರಿಗೆ ಅಂಗಡಿಯ ಚಾವಿ ಹಾಕಿಕೊಂಡು ಹೋಗಿದ್ದು ದಿನಾಂಕ ೧೪/೦೭/೨೦೨೨ ರಂದು ಬೆಳಗ್ಗೆ ೭.೦೦ ಗಂಟೆಗೆ ಬಂದು ನೋಡಲು ಕಿರಣೆ ಅಂಗಡಿಯಲ್ಲಿ ಬಿಸ್ಕೆಟ್‌ಗಳು, ಎಣ್ಣೆ ಡಬ್ಬಿಗಳು ಒಟ್ಟು ೮೭೦೦ ರೂ  ಮೌಲ್ಯದ ವಸ್ತುಗಳನ್ನು ಯಾರೋ ಕಳ್ಳರು ಕದ್ದಿದ್ದಾಗಿ ದೂರು ನೀಡಿದ್ದರ ಸಾರಂಶ ಮೇಲಿಂದ ಗುನ್ನೆದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಸಬ್‌ ಅರ್ಬನ್‌ ಪೊಲೀಸ್‌ ಠಾಣೆ :- ದಿನಾಂಕ 14-07-2022 ರಂದು ಸದರಿ ಸರಕಾರಿ ತರಪೆ  ಫಿರ್ಯಾಧಿದಾರರು ಏರಿಯಾದಲಿ ಪೆಟ್ರೋಲಿಂಗ್ರ ಕರ್ತವ್ಯದಲ್ಲಿದ್ದಾಗ ಬಂದ ಬಾತ್ಮಿಯ ಮೇರೆಗೆ ಸಿಬ್ಬಂದಿ ಜನರೊಂದಿಗೆ ಹೋಗಿ ನೋಡಲು ಕೆಲವು ಜನರು ಸೈಯದ್ದ ಚಿಂಚೋಳಿ ಕ್ರಾಸ್ ಹತ್ತಿರ ದುಂಡಾಗಿ ಕುಳಿತು ಅಂದರ್ ಬಾಹರ್ ಎಂಬ ದೈವಾಲೀಲೆಯ ಆಟವನ್ನು ಹಣವನ್ನು ಪಣಕ್ಕೆ ಹಚ್ಚಿ ಆಡುತ್ತಿದ್ದಾಗ ದೂರದಲ್ಲಿ ನಿಂತು ಗಮನಿಸಿ ಅವರ ಮೇಲೆ ದಳಿ ಮಾಡಿ ಸದರಿ ಆರೋಪಿತರು ಮತ್ತು ಮುದ್ದೆ ಮಾಲನ್ನು ವಶಕ್ಕೆ ಪಡೆದು ಅವರ ವಿರುದ್ದ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ.

 

ಇತ್ತೀಚಿನ ನವೀಕರಣ​ : 17-07-2022 08:28 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080