ಅಭಿಪ್ರಾಯ / ಸಲಹೆಗಳು

ಚೌಕ ಪೊಲೀಸ್ ಠಾಣೆ:-  ದಿನಾಂಕ 14-06-2022  ರಂದು ಮಧ್ಯರಾತ್ರಿ ೧೨-೩೦ ಗಂಟೆಗೆ ಶ್ರೀ ಅಮರೇಶ ತಂದೆ ಹಣಮಂತರಾಯ ಕಲ್ಲಮನಿ ವ:೩೪ ವರ್ಷ ಉ: ಆಹಾರ ನಿರೀಕ್ಷಕರು ಪಡಿತರ ಪ್ರದೇಶ ಕಲಬುರಗಿ ಇವರು ಠಾಣೆಗೆ ಹಾಜರಾಗಿ ತಮ್ಮದೊಂದು ಕನ್ನಡದಲ್ಲಿ ಕಂಪ್ಯೂಟರನಲ್ಲಿ ಟೈಪ ಮಾಡಿದ ದೂರು ಮತ್ತು ಕೈ ಬರಹದಿಂದ ಬರೆದ ಜಪ್ತಿ ಪಂಚನಾಮೆ ಒಬ್ಬ ಆರೋಪಿ ಮುದ್ದೆ ಮಾಲು ಹಾಜರಪಡಿಸಿದ್ದು  ಸದರಿ ದೂರಿನ ಸಾರಾಂಶವೆನೆಂದೆರೆ, ಈ ಮೂಲಕ ತಮಗೆ ದೂರು ಕೋಡುವುದೆನೆಂದೆರೆ,  ದಿನಾಂಕ  ೧೩/೦೬/೨೦೨೨ ರಂದು ರಾತ್ರಿ ೦೯-೦೦ ಗಂಟೆ ಸುಮಾರು ಬಂದಿರುವ ಬಾತ್ಮಿ ಮೇರೆಗೆ  ನಾನು, ಮತ್ತು  ಶ್ರೀ ಶ್ರೀನಿವಾಸ ಆಹಾರ ನಿರೀಕ್ಷಕರು ಪಡಿತರ ಪ್ರದೇಶ ಕಲಬುರಗಿ ಚೌಕ ಪೊಲೀಸ ಠಾಣೆಯ ಸಬ್ ಇನ್ಸಪೆಕ್ಟರ್ ಹಾಗೂ  ಪಂಚರಾದ ೧)ಶ್ರೀ ಮುಸಾ ಪಟೇಲ್ ತಂದೆ ಮಹ್ಮದ ಪಟೇಲ್ ಸಾ: ಖಾದ್ರಿ ಚೌಕ ಕಲಬುರಗಿ ೨)ಶ್ರೀ ಸೋಹೇಲ್  ತಂದೆ  ಹೈದರ ಅಲಿ ಸಾ: ಮಹೆಬೂಬ ನಗರ ಕಲಬುರಗಿ  ಎಲ್ಲರೂ ಕಲಬುರಗಿ ನಗರದ ಸೈಯ್ಯದ ಚಿಂಚೋಳಿ ಕ್ರಾಸ ಹತ್ತಿರ  ಇರುವ ತುಳಜಾ ಭವಾನಿ ಪೆಟ್ರೋಲ್ ಪಂಪ್ ಹತ್ತಿರ ಬಂದು ಹಾಜರಾದೇವು. ಸದರಿ ಪೆಟ್ರೋಲ್ ಪಂಪ್ ಹತ್ತಿರ  ಬಾತ್ಮಿ ವಾಹನ ಸಂಖ್ಯೆ ಕೆಎ ೩೨ ಸಿ ೫೦೭೫ ನೇದ್ದು ಬರಲು ಅದಕ್ಕೆ ತಡೆದು ನಿಲ್ಲಿಸಿ, ಅದರ ಹಿಂದುಗಡೆಯಲ್ಲಿ ಲೇಬಲ್ ಇರುವ ೫೦ ಕೆ.ಜಿಯ ಗೋಣಿ ಚೀಲಗಳಿದ್ದು ಅವುಗಳನ್ನು ಪರಿಶೀಲಿಸಲಾಗಿ ಸದರಿ ಲೇಬಲ್ ಇರುವ ಗೋಣಿ ಚೀಲಗಳಲ್ಲಿ  ಪಡಿತರ ಅಕ್ಕಿ ಮತ್ತು ರ‍್ಕಾರದ ಇತರೇ ಯೋಜನೆಗಳಿಗೆ ಬಿಡುಗಡೆಯಾದ  ಅಕ್ಕಿ ಇರುವುದು ಕಂಡು ಬಂತು .  ಸದರಿ ವಾಹನ ಚಾಲಕನ ಹೆಸರು ವಿಳಾಸ ವಿಚಾರಿಸಿದಾಗ  ಅವನು ತನ್ನ ಹೆಸರು ಮಂಜುನಾಥ ತಂದೆ ಮೈಲಪ್ಪ ಜಮಾದಾರ ವ:೨೨ ವರ್ಷ ಉ: ಚಾಲಕ ಜಾತಿ ಕಬ್ಬಲಿಗ ಸಾ: ಅವರಾದ (ಬಿ ) ಗ್ರಾಮ ತಾ:ಜಿ: ಕಲಬುರಗಿ ಅಂತಾ ತಿಳಿಸಿದನು. ಸದರಿ ಆಹಾರ ಧಾನ್ಯಗಳ ಬಗ್ಗೆ ದಾಖಲಾತಿ ಕೇಳಲಾಗಿ ಅವನು ಯಾವುದೇ ದಾಖಲಾತಿ  ಇರುವುದಿಲ್ಲಾ ಅಂತಾ ತಿಳಿಸಿದನು. ತದನಂತರ ಚಾಲಕನಿಗೆ ಅಕ್ಕಿ ಮಾಲೀಕ ಮತ್ತು ವಾಹನ ಮಾಲೀಕರ ಬಗ್ಗೆ ವಿಚಾರಿಸಲಾಗಿ ಅವನು ವಾಹನ ಮಾಲೀಕ ಮತ್ತು ಅಕ್ಕಿ ಮಾಲೀಕ ಹೆಸರು ಮಹ್ಮದ ಗೌಸ ಸಾ;ತಾರಫೈಲ್ ಕಲಬುರಗಿ ಇವರು ಇರುತ್ತಾರೆ ಎಂದು ತಿಳಿಸಿದನು.  ಸದರಿ ವಾಹನದಲ್ಲಿ ಪಡಿತರ ಅಕ್ಕಿ ಮತ್ತು ಸರ್ಕಾರದ ಇತರೇ ಯೋಜನೆಗಳಿಗೆ ಬಿಡುಗಡೆಯಾದ  ಅಕ್ಕಿ ಇರುವುದನ್ನು ಪಂಚರ ಸಮಕ್ಷಮದಲ್ಲಿ ಪರಿಶೀಲಿಸಿ ಎಣಿಕೆ ಮಾಡಿದಾಗ ಲೇಬಲ್ ಇರುವ ಅಂದಾಜು ೫೦ ಕೆ.ಜಿ. ತೂಕವುಳ್ಳ  ೫೨ ಲೇಬಲ ಇರುವ ಗೋಣಿ ಚೀಲಗಳಿದ್ದು, ಅವುಗಳ ಒಟ್ಟು ತೂಕ ಅಂದಾಜ ೨೫ ಕ್ವಿಂಟಾಲ್ ಅಕ್ಕಿಗಳು ಇದ್ದು, ಅದರ ಅಂದಾಜ ಕಿಮ್ಮತ್ತು ಅ:ಕಿ: ೬೨,೦೦೦/- ರೂ. ಮತ್ತು  ಜಪ್ತಿ ಪಡಿಸಿಕೊಂಡ ವಾಹನ ಸಂಖ್ಯೆ ಕೆಎ ೩೨ ಸಿ ೫೦೭೫ ಅ:ಕಿ: ೮೦,೦೦೦/- ರೂ. ಆಗಬಹುದು. ಹೀಗೆ ಜಪ್ತಿ ಪಡಿಸಿಕೊಂಡ ಆಹಾರ ಧ್ಯಾನ ಮತ್ತು ವಾಹನ ಸೇರಿ ಒಟ್ಟು ಅಂದಾಜ ರೂ. ೧,೪೨,೦೦೦/- ಆಗುತ್ತದೆ.  ಸದರ ವಾಹನದಲ್ಲಿ ಅಕ್ರಮವಾಗಿ  ಹೆಚ್ಚಿನ ಬೆಲೆಗೆ ಕಾಳಸಂತೆಯಲ್ಲಿ  ಮಾರಾಟ ಮಾಡುವ ಉದ್ದೇಶದಿಂದ ಸಾಗಾಣಿಕೆ ಮಾಡುತ್ತಿರುವುದು  ಸ್ಪಷ್ಟವಾಗಿರುತ್ತದೆ.  ಸದರಿ ವಾಹನ, ವಾಹನ ಚಾಲಕ ಮಂಜುನಾಥ ಮತ್ತು ಪಡಿತರ ಅಕ್ಕಿಯನ್ನು ಪಂಚರ ಸಮಕ್ಷಮದಲ್ಲಿ ಆಹಾರ  ಇಲಾಖೆಯ ತಾಬಾಕ್ಕೆ ತೆಗೆದುಕೊಳ್ಳಲಾಯಿತು. ಇದರ ಬಗ್ಗೆ ಪಂಚನಾಮೆ ಕೂಡಾ ಕೈ ಕೊಳ್ಳಲಾಯಿತು.    ವಾಹನ ಸಂಖ್ಯೆ ಕೆಎ ೩೨ ಸಿ ೫೦೭೫ ರಲ್ಲಿ ಜಪ್ತ ಪಡಿಸಿಕೊಂಡ ಲೇಬಲ್ ಇರುವ ಅಂದಾಜು ೫೦ ಕೆ.ಜಿ. ತೂಕವುಳ್ಳ  ೫೨ ಲೇಬಲ್ ಪಡಿತರ ಅಕ್ಕಿ ಇರುವ ಚೀಲಗಳು ಆಹಾರ ಸುರಕ್ಷತಾ ಹಿತದೃಷ್ಟಿಯಿಂದ ಕೆ.ಎಫ್.ಸಿ.ಎಸ್.ಸಿ. ಪಡಿತರ ಪ್ರದೇಶದ ಗೋದಾಮಿನಲ್ಲಿ ಜಮಾ ಮಾಡುವ ಕುರಿತು ವಾಹನ ಚಾಲಕರ ಅನಾನಾಕೂಲವಾಗಿರುವುದರಿಂದ ನಾನೇ ಸ್ವತಹ ಸದರಿ ವಾಹನವನ್ನು  ಚಾಲನೆ ಮಾಡಿಕೊಂಡು ಚೌಕ ಪೊಲೀಸ ಠಾಣೆಯ ಶ್ರೀ ಅಶೋಕ ಸಿಪಿಸಿ ೧೦ ರವರ ಬೆಂಗಾವಲಿನಲ್ಲಿ ಕೆ.ಎಫ್.ಸಿ.ಎಸ್.ಸಿ. ಪಡಿತರ ಪ್ರದೇಶ ಗೋದಾಮುನಲ್ಲಿ ಹಮಾಲಿಗಳಾದ ಶ್ರೀ ಲಿಂಗರಾಜ, ಸಿದ್ಧು, ಮೌಲಾನಾ ಇವರ ಮುಖಾಂತರ ಅನಲೋಡ ಮಾಡಿ ಗೋದಾಮಿನಲ್ಲಿ ಜಮಾ ಮಾಡಲಾಯಿತು. ಮತ್ತು ವಾಹನ ಸಂಖ್ಯೆ ಕೆಎ ೩೨ ಸಿ ೫೦೭೫ ನೇದ್ದು ಪೊಲೀಸ ತಾಬಾಕ್ಕೆ ಕೊಡಲಾಯಿತು.  ಈ  ಹಿನ್ನೆಲೆಯಲ್ಲಿ  ಅಗತ್ಯ ವಸ್ತುಗಳ ಕಾಯಿದೆ ೧೯೯೫ ರಡಿ ಸೆಕ್ಷನ ೩ ಮತ್ತು ೭ ರ ಅಡಿಯಲ್ಲಿ ವಾಹನ ಸಂಖ್ಯೆ ಕೆಎ ೩೨ ಸಿ ೫೦೭೫ ರ ಚಾಲಕನಾದ ಮಂಜುನಾಥ ತಂದೆ ಮೈಲಪ್ಪ ಜಮಾದಾರ ವ:೨೨ ವರ್ಷ ಉ: ಚಾಲಕ ಜಾತಿ ಕಬ್ಬಲಿಗ ಸಾ: ಅವರಾದ (ಬಿ ) ಗ್ರಾಮ ತಾ:ಜಿ: ಕಲಬುರಗಿ ಮತ್ತು ಅಕ್ಕಿ ಮಾಲೀಕ ಮತ್ತು ವಾಹನ ಮಾಲೀಕ ಮಹ್ಮದ ಗೌಸ ಸಾ: ತಾರಫೈಲ್ ಕಲಬುರಗಿ , ಇವರುಗಳ ವಿರುದ್ಧ  ಪ್ರಕರಣ ದಾಖಲಿಸಿಕೊಳ್ಳಲು ಮಾನ್ಯರಲ್ಲಿ ಪ್ರಾರ್ಥನೆ . ವಾಹನ ಸಂಖ್ಯೆ ಕೆಎ ೩೨ ಸಿ ೫೦೭೫ ರ ಚಾಲಕನಾದ ಮಂಜುನಾಥ ತಂದೆ ಮೈಲಪ್ಪ ಜಮಾದಾರ ವ:೨೨ ವರ್ಷ ಉ: ಚಾಲಕ ಜಾತಿ ಕಬ್ಬಲಿಗ ಸಾ: ಅವರಾದ   (ಬಿ)ಗ್ರಾಮ ತಾ:ಜಿ: ಕಲಬುರಗಿ ಇತನಿಗೆ ಮುಂದಿನ ಕಾನೂನು ಕ್ರಮಕ್ಕಾಗಿ ತಮ್ಮಲ್ಲಿ ಹಾಜರಪಡಿಸಿರುತ್ತೇನೆ. ಎಂದು ಕೊಟ್ಟ ದೂರಿನ ಮತ್ತು ಜಪ್ತಿ ಪಂಚನಾಮೆ ಆಧಾರದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 ಚೌಕ ಪೊಲೀಸ್ ಠಾಣೆ:-   ದಿನಾಂಕ 14-06-2022 ರಂದು ೦೨.೩೦ ಪಿ.ಎಂ ಕ್ಕೆ ಫಿರ್ಯಾದಿದಾರರು ಠಾಣೆಗೆ ಹಾಜರಾಗಿ ತಮ್ಮದೊಂದು ಗಣಕೀಕೃತ ಮಾಡಿದ ದೂರು ಸಾರಾಂಶವೇನೆಂದರೆ, ನಾನು ಇಮ್ರಾನ ತಂದೆ ರಫೀ ವ:೨೦ ಉ:ಡ್ರೈವರ್ ಜ್ಯಾ:ಮುಸ್ಲಿಂ ಸಾ:ಬಡಿ ದರ್ಗಾ ಚಿಂಚೋಳಿ ತಾ:ಚಿಂಚೋಳಿ ಜಿಲ್ಲಾ:ಕಲಬುರಗಿ ಆಗಿದ್ದು ತಮ್ಮಲ್ಲಿ ದೂರು ಸಲ್ಲಿಸುವುದೇನೆಂದರೆ, ನಾನು ಡ್ರೈವರ ಕೆಲಸ ಮಾಡಿಕೊಂಡು ನನ್ನ ತಾಯಿಯೊಂದಿಗೆ ವಾಸವಾಗಿರುತ್ತೇನೆ. ಈಗ ನಾನು  ಸುಮಾರು ೨ ರ‍್ಷಗಳಿಂದ ಬಡಿ ರ‍್ಗಾ ಚಿಂಚೋಳಿಯ ಸಾಹೇಬರಾದ ಶ್ರೀ ಪೀರ ಸಯ್ಯದ ಅಕ್ಬರ ಹಸೇನಿ ಅಲ್ ಹುಸೇನ ಸಾಹೇಬ ರವರ ಹತ್ತಿರ ಕಾರ ಡ್ರೈವರ್ ಆಗಿ ಕೆಲಸ ಮಾಡಿಕೊಂಡಿರುತ್ತೇನೆ.      ಹೀಗಿದ್ದು ಮೊನ್ನೆ ದಿನಾಂಕ:೧೨/೦೬/೨೦೨೨ ರಂದು ಶ್ರೀ ಪೀರ ಸಯ್ಯದ ಅಕ್ಬರ ಹಸೇನಿ ಅಲ್ ಹುಸೇನ ಸಾಹೇಬರವರು ಕಲಬುರಗಿ ನಗರದಲ್ಲಿಯ ಅವರ ಶಿಷ್ಯಂದಿರ ಮಕ್ಕಳ ಮದುವೆ ನಿಶ್ವಿತರ‍್ಥ ಕರ‍್ಯಕ್ರಮ ಇದ್ದುದ್ದರಿಂದ ನನಗೆ ಮತ್ತು ಅವರ ಶಿಷ್ಯಂದಿರಾದ ಮಹಿಬೂಬ ತಂದೆ ಖಾಜಾ ಹಾಗೂ ಖಾಲೀದ ತಂದೆ ಶಹಬೋದ್ದೀನ ರವರನ್ನು ಜೊತೆಯಲ್ಲಿ ಕಾರ್ ನಂ. AP29AM3718  ನೇದ್ದರಲ್ಲಿ ಕರೆದುಕೊಂಡು ರಾತ್ರಿ ೦೮.೦೦ ಗಂಟೆಗೆ ಚಿಂಚೋಳಿ ಬಿಟ್ಟು ರಾತ್ರಿ ೦೯.೦೦ ಗಂಟೆಗೆ ಕಲಬುರಗಿ ನಗರದ ಮಿಲತ್ ನಗರನ ಬಾಂಬೆ ಫಂಕ್ಶನ ಹಾಲಗೆ ಬಂದು ಕರ‍್ಯಕ್ರಮಕ್ಕೆ ಹಾಜರಾಗಿ ಕರ‍್ಯಕ್ರಮ ಮುಗಿಸಿಕೊಂಡು ಕೆ.ಎನ್.ಝಡ್ ಫಂಕ್ಶನ ಹಾಲ್ ಹತ್ತಿರ ಇರುವ ಸಾಹೇಬರ ಶಿಷ್ಯಂದಿರಾದ ಶ್ರೀ ಖಾಲೀದ ಪಟೇಲ ಇವರ ಮನೆಯಲ್ಲಿಯೇ ರಾತ್ರಿ ಉಳಿದುಕೊಂಡಿರುತ್ತೇವೆ.  ನಂತರ ನಿನ್ನೆ ದಿನಾಂಕ:೧೩/೦೬/೨೦೨೨ ರಂದು ಶ್ರೀ ಪೀರ ಸಯ್ಯದ ಅಕ್ಬರ ಹಸೇನಿ ಅಲ್ ಹುಸೇನ ಸಾಹೇಬರ ಕಾರ್ ಲೈಸನ್ಸ ಕುರಿತು ಆರ್.ಟಿ.ಓ ಆಫೀಸಗೆ ಬೆಳಿಗ್ಗೆ ೧೨.೦೦ ಗಂಟೆಗೆ ಹೋಗಿ ಕೆಲಸ ಮುಗಿಸಿಕೊಂಡು ನಂತರ ವಕ್ಫ ಬೊರ್ಡನಲ್ಲಿ ಮಿಟಿಂಗ ಸಲುವಾಗಿ ಮಧ್ಯಾಹ್ನ ೩.೩೦ ಗಂಟೆಗೆ ಮಿಟಿಂಗ್ ಗೆ ಹಾಜರಾಗಿ ಸಾಯಂಕಾಲ ೬.೦೦ ಗಂಟೆಗೆ ವರೆಗೆ  ಮಿಟಿಂಗ್ ಮುಗಿಸಿಕೊಂಡು,ಕಲಬುರಗಿ ನಗರದ ಜವಳಿ ಕಾಂಪ್ಲೇಕ್ಸನಲ್ಲಿರುವ ಸ್ಯಾಮಸಂಗ ಕಂಪನಿಯ ಅಂಗಡಿಗೆ ೦೭.೨೦ ಗಂಟೆಗೆ ಬಂದು ಮೋಬೈಲ್ ಖರೀದಿ ಮಾಡಿಕೊಂಡು ನಂತರ ಮರಳಿ ಚಿಂಚೋಳಿಗೆ ಹೋಗುವ ಕುರಿತು ಸೂಪರ ಮಾರ್ಕೇಟ ಮುಖಾಂತರ ಗಂಜ ಗಡೆಗೆ  ಕಾರನ ಟೈಯರ್ ಖರೀದಿ ಮಾಡುವದಕ್ಕಾಗಿ ಗಂಜ ಎಪಿಎಂಸಿ ಗೇಟ ಹತ್ತಿರ ಇರುವ ವಿಜಯ ಲಕ್ಷ್ಮೀ ಮತ್ತು ರಾಮಲಿಂಗೇಶ್ವರ ಇಂಜಿನೀಯರ್ ವರ್ಕ್ರಸ್ ಅಂಗಡಿಗಳ ಮುಂದೆ ರಾತ್ರಿ ೦೮.೨೦ ಗಂಟೆಗೆ ಕಾರು ನಿಲ್ಲಿಸಿ ನಾನು ಮತ್ತು ಮಹಿಬೂಬ ಟೈಯರ್ ಕೇಳಲಿಕ್ಕೆ ಹೋಗಿದ್ದು ಮತ್ತು ಖಾಲೀದ ಇತನು ತನಗೆ ಹಸಿವೆ ಆಗಿರುವುದರಿಂದ ಸೇಂಗಾ ಕಾಳು ತರಲಿಕ್ಕೆ ಹೋಗಿರುತ್ತಾನೆ. ಆ ವೇಳೆಯಲ್ಲಿ ಗಾಡಿಯಲ್ಲಿ  ಸಾಹೇಬರು ಒಬ್ಬರೇ ಇದ್ದರು ಮತ್ತು ಸಾಹೇಬರಿಗೆ ಸಂಬಂಧಪಟ್ಟ ಹಣ , ದಾಖಲಾತಿಗಳು ಮತ್ತು ಇತರೆ ಬೆಲೆ ಬಾಳುವ ಸಾಮಾನು ಇರುವ ಬ್ಯಾಗ ಗಾಡಿಯಲ್ಲಿಯೇ ಇಟ್ಟು ಹೋಗಿರುತ್ತೇನೆ. ನಮ್ಮ ಸಾಹೇಬರು ಗಾಳಿ ಆಡುವ ಸಲುವಾಗಿ ಕಾರ ಡೋರ ತೆಗೆದು ಕಾರಿನಲ್ಲಿ ಕುಳಿತಿದ್ದು ಆ ಸಮಯದಲ್ಲಿ ಯಾರೋ ಒಬ್ಬ ಅಪರಿಚಿತ ವ್ಯಕ್ತಿ ಕಾರ ಹತ್ತಿರ ಬಂದು ಸಾಹೇಬರ ದೇಹವನ್ನು ಮುಟ್ಟಿ ಕೆಳಗಡೆ ಏನೋ ಬಿದ್ದಿದೆ ನೋಡಿ ಅಂತ ಹೇಳಿದ್ದರಿಂದ ಅವರು ಯಾರೋ ಭೀಕ್ಷಕರು ಇದ್ದಿರಬೇಕು ಅಂತ ಆ ವ್ಯಕ್ತಿಗೆ ಬೆದರಿಸಿ ಕಳಹಿಸಿರತ್ತಾರೆ. ಆ ವ್ಯಕ್ತಿ ಹೋದ ಸ್ವಲ್ಪ ಸಮಯದಲ್ಲಿ ಇನ್ನೋಬ್ಬ ವ್ಯಕ್ತಿ ಬಂದು ಸಾಹೇಬರು ಕುಳಿತ ಕಾರ ಹತ್ತಿರ ಬಂದು ಅವರ ದೇಹವನ್ನು ಮುಟ್ಟಿ ಕೆಳಗಡೆ ಏನೋ ಬಿದ್ದಿದೆ ಹೇಳಿದ್ದರಿಂದ ಕೆಳಗಿ ಅವರು ಕಾರಿನಿಂದ ಕೆಳಗಡೆ ಇಳಿದು ತಮ್ಮ ಮೋಬೈಲ್ ಟಾರ್ಚ ಹಾಕಿ ನೋಡಿದಾಗ ೧೦/-ರೂ ಮತ್ತು ೨೦/-ರೋ ನೋಟಗಳು ಸಾಲಾಗಿ ಹಾಕಿದ್ದನ್ನು ನೋಡಿ ಸ್ವಲ್ಪ ಮುಂದೆ ಹೋಗಿ ಒಂದೆರೆಡು ಹೆಜ್ಜೆ ನಡೆದು ಪುನ: ತಮ್ಮ ಕಾರನಲ್ಲಿ ಬಂದು ಕುಳಿತು ಕೊಂಡಿರುತ್ತಾರೆ. ನಂತರ ನಾವೆಲ್ಲರೂ ಕಾರ ಹತ್ತಿರ ವಾಪಸ್ ಬಂದು ಕಾರ ಚಾಲು ಮಾಡಿಕೊಂಡು ಮರಳಿ ಗಂಜನ ಬಲ ಬದಿಯಲ್ಲಿರುವ ಕರ್ನಾಟಕ ಎಟಿಎಂ ಹತ್ತರಿ ಇರುವ ಗುಲಾಮ ಅಲಿ ಟೈಯರ್ ಅಂಗಡಿಯಗೆ ಬಂದು ಟೈಯರ್ ಖರೀದಿಮಾಡಿ ಅಲ್ಲಿಯೇ ನಿಂತು ಹೊಸ ಟೈಯರಗಳನ್ನು ನಮ್ಮ ಕಾರಗೆ ಹಾಕಿಕೊಂಡಿದ್ದು,ಸದರಿ ಟೈಯರ್ ಖರೀದಿ ಮಾಡಿದ ಹಣ ಕೊಡುವ ಸಲುವಾಗಿ ನಮ್ಮ ಸಾಹೇಬ ಗಾಡಿಯಲ್ಲಿಟ್ಟಿದ ಬ್ಯಾಗ ತೆಗೆದುಕೊಂಡು ಬಾ ಅಂತ ನಮಗೆ ಹೇಳಿದ್ದರಿಂದ ನಾನು ಕಾರಿನಲ್ಲಿಟ್ಟಿದ್ದ ನಮ್ಮ ಸಾಹೇಬರ ಬ್ಯಾಗ ಕಾರಿನಲ್ಲಿ ಇರಲಿಲ್ಲ.ಆಗ ನಾವೇಲ್ಲರೂ ಗಾಬರಿಗೊಂಡು ಕಾರಿನ ಮುಂದೆ ಹಿಂದೆ ಹುಡಕಾಡಿದರೂ ಕಾರಿನಲ್ಲಿಟ್ಟ ಬ್ಯಾಗ ಕಾಣಿಸಲಿಲ್ಲ ಹಾಗೂ ನಾನು ನಿಲ್ಲಿಸಿದ ಸ್ಥಳದ ಸುತ್ತ ಮುತ್ತ ಕಡೆಗೆ ಹುಡಕಾಡಿದರೂ  ಸಹ ಬ್ಯಾಗ ಸಿಕ್ಕಿರುವುದಿಲ್ಲ . ನಾವು ದಿನಾಂಕ:೧೩/೦೬/೨೦೨೨ ರಂದು ರಾತ್ರಿ ೦೮.೨೦ಗಂಟೆಗೆ ವಿಜಯ ಲಕ್ಷ್ಮೀ ಮತ್ತು ರಾಮಲಿಂಗೇಶ್ವರ ಇಂಜಿನೀಯರ್ ವರ್ಕಸ್ ಅಂಗಡಿಗಳ ಮುಂದೆ  ಕಾರು ನಿಲ್ಲಿಸಿ ಕಾರಿನಲ್ಲಿ ಸಾಹೇಬರಿಗೆ ಒಬ್ಬರಿಗೆ ಬಿಟ್ಟು ಟೈಯರ್ ಖರೀದಿ ಮಾಡುವ ಕುರಿತು ಹೋದ ವೇಳೆಯಲ್ಲಿಯೇ ಯಾರೋ ಅಪರಿಚಿತರು ನಮ್ಮ ಸಾಹೇಬರಿಗೆ ಕೆಳಗಡೆ ಏನೋ ಬಿದ್ದಿರುತ್ತದೆ ಅಂತ ಕೈ ಮಾಡಿ ತೋರಿಸಿ ಅವರ ಗಮನ ಬೇರೆ ಕಡೆಗೆ ಸೆಳೆದು ಅವರು ಕಾರಿನಿಂದ ಕೆಳಗಡೆ ಇಳಿದು ನೋಡುವ ಸಮಯದಲ್ಲಿ ಗಾಡಿಯಲ್ಲಿಟ್ಟಿದ್ದ ಅವರ ಬ್ಯಾಗನಲ್ಲಿದ್ದ ೧.‌ ೪೦೦೦ ಅಮೆರಿಕನ್ ಡಾಲರ್ ೨.  ಡಿಬಿಟ್ ಕಾರ್ಡ ೩. ಡ್ರೈವಿಂಗ್ ಲೈಸನ್ಸ ೪.ಆಧಾರ ಕಾರ್ಡ ೫.ಪ್ಯಾನ ಕಾರ್ಡ  ೬.ಫ್ಯಾಮಿಲಿ ಫೋಟೋ ೭.ಇಯರ್  ಫೋನ ವೈಯರ್ ೮.ಮೋಬೈಲ್ ಚಾರ್ಜರ ೯. ೫ ಬ್ಯಾಂಕ ಚೆಕ್ ೧೦.ಕೆನರಾ ಬ್ಯಾಂಕ ಕ್ರೆಡಿಟ್ ಕಾರ್ಡ   ಮತ್ತು ನಗದು ಹಣ ೨೦,೦೦೦/-ರೂ ನೇದ್ದವುಳು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ರಾತ್ರಿಯಾಗಿರುವುದರಿಂದ ಇಂದು ಠಾಣೆಗೆ ಬಂದು ದೂರು ಕೊಡಲು ತಡವಾಗಿರುತ್ತದೆ. ಕಾರಣ ನಮ್ಮ ಇನ್ನೋವಾ  ಕಾರ್ ನಂ. AP29AM3718  ನೇದ್ದರಲ್ಲಿನ ಬ್ಯಾಗನಲ್ಲಿಟ್ಟಿದ ನಗದು ಹಣ,ಡಾಲರ್, ಮತ್ತು ಇತರೆ ದಾಖಲಾತಿಗಳು ಹಾಗೂ  ಮೋಬೈಲನ ಇತರೆ ಸಾಮಾನುಗಳ ಇರುವ ಬ್ಯಾಗ ಯಾರೋ ಕಳ್ಳರು ಕಳ್ಳತನ ಮಾಡಿ ಕೊಂಡು ಹೋದ ಕಳ್ಳರ ವಿರುದ್ದ ಸೂಕ್ತ ಕಾನೂನು ಕ್ರಮ ಜರೂಗಿಸಿ ಕಳ್ಳತನವಾದ ನಗದು ಹಣವನ್ನು  ಮತ್ತು ದಾಖಲಾತಿಗಳು ಮತ್ತು ಇತರೆ ಮೋಬೈಲ್ ಸಾಮಾನುಗಳು  ಪತ್ತೆ ಹಚ್ಚಿ ಮರಳಿ ನನಗೆ ಕೊಡಲು ತಮ್ಮಲ್ಲಿ ವಿನಂತಿ ಅಂತ ಕೊಟ್ಟ ಫಿರ್ಯಾದಿಯ ಅರ್ಜಿಯ ಆಧಾರದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ರೋಜಾ ಪೊಲೀಸ ಠಾಣೆ :- ದಿನಾಂಕ: ೧೩/೦೬/೨೦೨೨ ರಂದು ೨೦.೦೦ ಪಿ.ಎಮಕ್ಕೆ ಸದರಿ ಆರೋಪಿತರು ಕ್ರೀಸ್ಟಲ್ ಶಾಲೆಯ ಹತ್ತಿರ ಖಮರ ಕಾಲೋನಿ ರೋಜಾದಲ್ಲಿ ಮಟಕಾ ಬರೆದುಕೊಳ್ಳುತ್ತಿರುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದುಕೊಂಡು ಸದರಿಯವರಿಂದ ೧೧೬೦೦/- ರೂ , ಮೂರು ಮಟಕಾ ಚೀಟಿ ಹಾಗೂ ಮೂರು ಬಾಲ್ ಪೆನ್ ಹಾಗೂ ೩ ಮೊಬೈಲ್ ಅ.ಕಿ: ೭೦೦ ರೂ ನೇದ್ದವುಗಳನ್ನು ಜಪ್ತುಪಡಿಸಿಕೊಂಡು ಕಾನೂನು ಕ್ರಮ ಜರುಗಿಸಿದ್ದು ಇರುತ್ತದೆ.

 

 

ಇತ್ತೀಚಿನ ನವೀಕರಣ​ : 18-06-2022 03:10 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080