ಅಭಿಪ್ರಾಯ / ಸಲಹೆಗಳು

ಚೌಕ ಪೊಲೀಸ್ ಠಾಣೆ :-  ದಿನಾಂಕ 14-05-2022  ರಂದು ೧೨.೧೫ ಗಂಟೆಗೆ ಫರ‍್ಯಾದಿದಾರರು ಠಾಣೆಗೆ ಹಾಜರಾಗಿ ತಮ್ಮದೊಂದು ಗಣಕೀಕೃತ ಮಾಡಿದ ದೂರು ಸಾರಾಂಶವೇನೆಂದರೆ, ನಾನು ಮಹ್ಮದ ವಾಜೀದ  ತಂದೆ ಮಹ್ಮದ  ಅಯ್ಯೂಬ ವ:೨೭ ವರ್ಷ  ಉ:ಖಾಸಗಿ ಕೆಸಲ ಜ್ಯಾ:ಮುಸ್ಲಿಂ ಸಾ:ಮನೆ.ನಂ.೫/೨೫೯೬ ಮಹಿಬೂಬ ನಗರ ರಿಂಗ್ ರೋಡ ಕಲಬುರಗಿ ಆಗಿದ್ದು,ತರಕಾರಿ ಮಾರಾಟ ಮಾಡಿಕೊಂಡು ಕುಟುಂಬದೊಂದಿಗೆ ವಾಸವಾಗಿರುತ್ತೇನೆ. ನನ್ನ ವೈಯಕ್ತಿಕ ಕೆಲಸ ನಿಮಿತ್ಯ ಓಡಾಡಲು ೨೦೧೮ನೇ ಸಾಲಿನಲ್ಲಿ ನನ್ನ ಹೆಸರಿನಲ್ಲಿ ಬಜಾಜ ಪಲ್ಸರ್ ಎನ್.ಎಸ್ KA32EU9952 ನೇದ್ದು ಖರೀದಿಸಿರುತ್ತೇನೆ. ಹೀಗಿದ್ದು ದಿನಾಂಕ: ೦೧/೦೫/೨೦೨೨ ರಂದು ರಮ್ಜಾನ ಹಬ್ಬದ ಪ್ರಯುಕ್ತ ಹಬ್ಬದ ಸಮಾನುಗಳನ್ನು ಖರೀದಿ  ಮಾಡುವ ಸಲುವಾಗಿ ನಾನು  ಮತ್ತು ಮಹ್ಮದ ಮುಜಾಫರ ಅಲಿಯೊಂದಿಗೆ ಸಾಯಂಕಾಲ ೦೭.೧೫ ಗಂಟೆಗೆ ಸೂಪರ್ ಮಾರ್ಕೇಟಗೆ  ಬಂದು ಕಿರಣ ಬಜಾರನ ವಿ.ಪಿ ಜಾಜಿ ಅಂಗಡಿ ಎದುರುಗಡೆ ರೋಡಿನ ಮೇಲೆ ನಿಲ್ಲಿಸಿ ಅಷ್ಟರಲ್ಲಿಯೇ ನಮಾಜ ಮಾಡುವ ಸಮಯ ಆಗಿದ್ದರಿಂದ ಮಾರ್ಕೇಟನಲ್ಲಿರುವ ಖಲರಾ ಮಜೀದನಲ್ಲಿ ನಮಾಜ ಮಾಡಿ ಮತ್ತು ಹಬ್ಬದ ಸಮಾನುಗಳನ್ನು ಖರೀದಿ ಮಾಡಿ ಮರಳಿ  ೦೮.೦೦ ಗಂಟೆಗೆ  ನಾನು ನಿಲ್ಲಿಸಿದ ಸ್ಥಳದಲ್ಲಿ ಬಂದು ನೋಡಲಾಗಿ ನನ್ನ ಬಜಾಜ ಪಲ್ಸರ್ ಎನ್.ಎಸ್ KA32EU9952 ಮೋಟಾರ ಸೈಕಲ್ ಕಾಣಲಿಲ್ಲ. ನಾನು ಮತ್ತು ಮಹ್ಮದ ಮುಜಾಫರ ಇಬ್ಬರೂ ಕೂಡಿಕೊಂಡು ಮೋಟಾರ ಸೈಕಲ್ ನಿಲ್ಲಿಸಿದ ಸ್ಥಳದ ಸುತ್ತಮುತ್ತಲು,ಚಪ್ಪಲ ಬಜಾರ, ಸಿಟಿ ಬಸ್ ಸ್ಟ್ಯಾಂಡ್, ಗಂಜ ಏರಿಯಾ ಗಳಲ್ಲಿ ಹುಡುಕಾಡಿದರೂ ನನ್ನ ಮೋಟಾರ ಸೈಕಲ ಸಿಕ್ಕಿರುವುದಿಲ್ಲ. ಅಂದಿನಿಂದ ಇಂದಿನವರೆಗೆ ಎಲ್ಲಿಯಾದರೂ ಮೋಟಾರ ಸೈಕಲ್ ಸಿಗಬಹುದೆಂದು ಕಲಬುರಗಿ ನಗರ ಎಂ.ಎಸ್.ಕೆ ಮಿಲ್ಲ, ರೆಹಮತ ನಗರ,ತಾರಫೈಲ್ ಹಾಗೂ ಕಲಬುರಗಿ ನಗರ ಹೊರವಲಯದಲ್ಲಿ ಎಲ್ಲಾ ಕಡೆಗಳಲ್ಲಿ ತಿರುಗಾಡಿ ಹುಡುಕಾಡಿದರೂ ನನ್ನ ಮೋಟಾರ ಸೈಕಲ ಸಿಗದ ಕಾರಣ ಇಂದು ಠಾಣೆಗೆ ಬಂದು ದೂರು ಕೊಡಲು ತಡವಾಗಿರುತ್ತದೆ. ಕಳ್ಳತನವಾದ ನನ್ನ ಮೋಟಾರ ಸೈಕಲ ವಿವರ ಈ ಕೆಳಗಿನಂತೆ ಇರುತ್ತದೆ.

೦೧.ಮೋಟಾರಸೈಕಲಮಾದರಿ&ನಂಬರ  : BAJAJ PULSAR NS 200 KA32EU9952

೦೨. ಇಂಜನ್ ನಂಬರ                                 : JLYCF03331

೦೩. ಚೆಸ್ಸಿನಂಬರ                          :  MD2A36FY9JCF61841

೦೪. ಮಾಡಲ್                                      :   09/2018

೦೫.ಬಣ್ಣ                                                 :   PEARL METALLIC ಕಲರ್

೦೬.ಬೆಲೆ                                       :   ೫೯,೬೩೯/- ರೂ.ಕಾರಣ ಮಾನ್ಯರವರು ಬಜಾಜ ಪಲ್ಸರ್ ಎನ್.ಎಸ್ KA32EU9952 ನೇದ್ದು ಮೋಟಾರ ಸೈಕಲ್ ಕಳ್ಳತನ ಮಾಡಿಕೊಂಡ ಹೋದ ಯಾರೋ ಅಪರಿಚಿತ ಕಳ್ಳರನ್ನು ಪತ್ತೆ ಹಚ್ಚಿ ಅವರ ಮೇಲೆ ಕಾನೂನುಕ್ರಮ ಜರುಗಿಸಿ ನನ್ನ ಮೋಟಾರ ಸೈಕಲ್ ದೊರಕಿಸಿ ಕೊಡಬೇಕೆಂದು ತಮ್ಮಲ್ಲಿ ವಿನಂತಿ ಅಂತ ಕೊಟ್ಟ ಫರ‍್ಯಾದಿಯ ರ‍್ಜಿ ಆಧಾರದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 24-05-2022 02:55 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080