ಅಭಿಪ್ರಾಯ / ಸಲಹೆಗಳು

ಸಂಚಾರಿ ಪೊಲೀಸ ಠಾಣೆ-02 :-  ದಿನಾಂಕ: 14/03/2023 ರಂದು ಮಧ್ಯಾಹ್ನ 2:15 ಗಂಟೆಗೆ ಸರ್ಕಾರಿ ಆಸ್ಪತ್ರೆಯ OP  ಸಿಬ್ಬಂದಿಯವರು ಠಾಣೆಗೆ ಫೋನ ಮಾಡಿ Md  ಸಲಿಮೋದ್ದಿನ ಇವರು ರಸ್ತೆ ಅಪಘಾತ ಹೊಂದಿ ಉಪಚಾರ ಕುರಿತು ಬಮಸು ಸೇರಿಕೆಯಾಗಿರುತ್ತಾರೆ ಅಂತಾ ತಿಳಿಸಿದ್ದರಿಂದ ನಾನು ಆಸ್ಪತ್ರೆಗೆ ಭೆಟಿ ಕೊಟ್ಟು ಗಾಯಾಳು Md  ಸಲಿಮೋದ್ದಿನ ಇವರು ಕನ್ನಡದಲ್ಲಿ ಗಣಿಕಿಕೃತ ಮಾಡಿದ ದೂರು ಅರ್ಜಿಯನ್ನು ಹಾಜರುಪಡಿಸಿದ್ದು ದೂರಿನ ಸಾರಾಂಶವೆನಂದರೆ, ದಿನಾಂಕ: 13-03-2023 ರಂದು ನನಗೆ ಲೋಕಸಭಾ ಸದಸ್ಯರಾದ ಶ್ರೀ ಉಮೇಶ.ಜಾಧವ ಸಾಹೇಬರ ಎಸ್ಕಾರ್ಟ ಆಫೀಸರ್ ಅಂತಾ ಕರ್ತವ್ಯಕ್ಕೆ ನೇಮಿಸಿದ್ದರು ಬುಲೇರೋ ಜೀಪ ನಂಬರ ಕೆಎ-32/ಜಿ-0965 ನೇದ್ದರ ಚಾಲಕ ಮಾಳಪ್ಪಾ ತಂದೆ ಹಣಮಂತ ಸಾಲೋಟಗಿ ಇವರಿಗೂ ಕೂಡಾ ಎಸ್ಕಾರ್ಟ ಕರ್ತವ್ಯಕ್ಕೆ ನೇಮಿಸಿದ್ದರು. ನಾನು ಸದರ ಬುಲೇರೊ ಜೀಪನಲ್ಲಿ ಲೋಕಸಭಾ ಸದಸ್ಯರ ಎಸ್ಕಾರ್ಟ ಕರ್ತವ್ಯ ನಿರ್ವಹಿಸುತ್ತಿದ್ದೆವು ಲೋಕಸಭಾ ಸದಸ್ಯರ ಗನ್‌ ಮ್ಯಾನ ಕರ್ತವ್ಯದ ಮೇಲೆ ಹಣಮಂತ ಎಪಿಸಿ ರವರು ಇದ್ದರು. ರಾತ್ರಿ ಲೋಕಸಭಾ ಸದಸ್ಯರು ಚಿಂಚೋಳಿ ಪಟ್ಟಣ್ಣಕ್ಕೆ ಹೋಗುತ್ತಿದ್ದರಿಂದ ನಾನು ಮತ್ತು ಮಾಳಪ್ಪಾ ನಗರದ ಸರಹದ್ದಿನವರೆಗೆ ಎಸ್ಕಾರ್ಟ ಕರ್ತವ್ಯ ನಿರ್ವಹಿಸುತ್ತಾ ಸೇಡಂ ರಿಂಗ ರೋಡ ಮುಖಾಂತರವಾಗಿ ಸಣ್ಣೂರ ಸಿಮಾಂತರವರೆಗೆ ಹೋಗುತ್ತೀರುವಾಗ ಮಾಳಪ್ಪಾ ಇತನು ಜೀಪನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿ ಮೇಹತಾ ಸ್ಕೂಲ್ ಸಮೀಪ ಬರುವ ದಾಲಮಿಲ ಹತ್ತೀರ ಬರುವ ರೋಡ ಹಂಪ್ಸ ಮೇಲೆ ಒಮ್ಮಲೇ ಚಲಾಯಿಸಿ ಜೀಪ ನಿಯಂತ್ರಣ ಮಾಡದೆ ಜೀಪನ್ನು ಪಲ್ಟಿ ಮಾಡಿ ಅಪಘಾತ ಮಾಡಿದನು. ಆಗ ಸದರಿ ಘಟನೆ ನೋಡಿದ ನಮ್ಮ ಹಿಂದಿನಿಂದ ಬರುತ್ತೀರುವ ಲೋಕಸಭಾ ಸದಸ್ಯರು ಹಾಗೂ ಅವರ ಗನ್ ಮ್ಯಾನ ಹಣಮಂತ ಹಾಗೂ ಲೋಕಸಭಾ ಸದಸ್ಯರ ಕಾರ ಚಾಲಕ ಮಂಜು ರವರು ಬಂದು ನನಗೆ ಮತ್ತು ಮಾಳಪ್ಪಾ ರವರಿಗೆ ಜೀಪನಿಂದ ಹೊರಗಡೆ ತಂದು ರೋಡ ಪಕ್ಕದಲ್ಲಿ ಕೂಡಿಸಿದರು. ಸದರಿ ಘಟನೆ ಜರುಗಿದಾಗ ರಾತ್ರಿ ಅಂದಾಜು 9:30 ಗಂಟೆ ಸಮಯವಾಗಿತ್ತು. ಸದರಿ ಘಟನೆಯಿಂದ ನನ್ನ ಎಡಗೈ ಮುಂಗೈ ಹತ್ತೀರ ರಕ್ತಗಾಯ ಮಾಳಪ್ಪಾ ಇವರ ಎಡ ಭುಜಕ್ಕೆ ಎಡ ಕುತ್ತಿಗೆಗೆ ಎಡ ತೊಡೆಗೆ ಎಡ ಟೊಂಕಿಗೆ ತಲೆಗೆ ಗುಪ್ತಪೆಟ್ಟು ಬಿದ್ದಿತ್ತು. ಅಪಘಾತ ಸ್ಥಳಕ್ಕೆ ಅಂಬುಲೇನ್ಸ ವಾಹನ ಬಂದಾಗ ಹಣಮಂತ ಇವರು ನನಗೆ ಮತ್ತು ಮಾಳಪ್ಪಾ ರವರನ್ನು ಕೂಡಿಸಿಕೊಂಡು ಕಲಬುರಗಿ ಸರ್ಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತಾರೆ ಎಂದು ಫಿರ್ಯಾದಿ ಕೊಟ್ಟ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಎಂ.ಬಿ.ನಗರ ಪೊಲೀಸ ಠಾಣೆ :- ದಿನಾಂಕ: 14-03-2023 ರಂದು ಫಿರ್ಯಾದಿ ನೀಡಿದ ಸಾರಾಂಶವೆನೆಂದರೆ ಫಿರ್ಯಾದಿದಾರರು ಅವರ ಸೋದರ ಮಾವನಿಗೆ ಪ್ಲಾಟ ವಿಷಯವಾಗಿ ಎರೆಡು ಕಂತುಗಳಲ್ಲಿ ಒಟ್ಟು 11,00,000/- ರೂ ನಿಡಿದ್ದು, ಪ್ಲಾಟ್ ನಿಡದೆ ಇದ್ದಾಗ ಹಣ ಮರಳಿ ಕೇಳಿದಾಗ ಇವತ್ತು ನಾಳೆ ಅಂತಾ ಸತಾಯಿಸುತ್ತಾ ಬಂದಿದ್ದು ಮತ್ತು ಮೊಬೈಲ್ ನಂಬರ್ ಬ್ಲಾಕ್ ಮಾಡಿದ್ದರಿಂದ ಮೊನ್ನೆ ದಿನಾಂಕ: 10-03-2023 ರಂದು ಅವರ ಮನೇಗೆ ಹೋಗಿ ಕೇಳಿದಾಗ ಮಹೇಶ ಮತ್ತು ಶೀಲಾ ಆರೋಪಿತರು ಸೇರಿಕೊಂಡು ಫಿರ್ಯಾದಿದಾರರಿಗೆ ಕಲ್ಲಿನಿಂದ ಹೊಡೆದು ಗುಪ್ತಗಾಯ ಪಡಿಸಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿದ್ದಾರೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಬ್ರಹ್ಮಪೂರ ಪೊಲೀಸ ಠಾಣೆ :- ದಿನಾಂಕ: 14-03-2023 ರಂದು ಮಧ್ಯಾಹ್ನ ಗಂಟೆಗೆ ಫಿರ್ಯಾದಿದಾರರಾದ ಅನೀಲ ಕುಮಾರ್ ತಂದೆ ಶ್ರೀಶೈಲ್ ಮಡ್ಡೆ ವಯ:೩೦ ವರ್ಷ ಉ:ಖಾಸಗಿ ಕೆಲಸ ಸಾ||ಚೌಡೇಶ್ವರಿ ದೇವಸ್ಥಾನದ ಮೇನ್ ರೋಡ ಸರಸಂಬಾ ಗ್ರಾಮ ಆಳಂದ ತಾಲ್ಲೂಕು ಕಲಬುರಗಿ ಜಿಲ್ಲೆ. ಹಾಲಿವಾಸ:-ವೀರಭದ್ರೇಶ್ವರ ದೇವಸ್ಥಾನದ ಹಿಂದುಗಡೆ ಜೆ ಆರ್ ನಗರ ಸಂತೋಷ ಕಾಲೋನಿ ಕಲಬುರಗಿ ನಗರ. ರವರು ಠಾಣೆಗೆ ಹಾಜರಾಗಿ ಫಿರ್ಯಾದಿ ನೀಡಿದರ ಸಾರಾಂಶವೆನೆಂದರೆ, ನನ್ನದೊಂದು ಸ್ವಂತ ಹೊಂಡಾ ಶೈನ್ ಮೋಟಾರ್ ಸೈಕಲ್ ನಂ MH-12-QQ-1365 ನೇದ್ದು ಇದ್ದು ಸದರಿ ಮೋಟಾರ್ ಸೈಕಲ್ ನನ್ನ ಹೆಸರಿನಲ್ಲಿರುತ್ತದೆ. ಸದರಿ ಮೋಟಾರ್ ಸೈಕಲನ್ನು ದಿನಾಂಕ: 05-03-2023 ರಂದು ಮಧ್ಯಾಹ್ನ 01:00 ಗಂಟೆ ಸುಮಾರಿಗೆ ಕಲಬುರಗಿ ನಗರದ ನೂಲಾ ಆಸ್ಪತ್ರೆ ಮುಂದುಗಡೆ ನಿಲ್ಲಿಸಿ ಚೈನಾ ಕಾಂಪ್ಲೇಕ್ಸ ಒಳಗಡೆ ಹೋಗಿ ಸಾಮಾನುಗಳನ್ನು ಖರಿದಿ ಮಾಡಿಕೊಂಡು ಮಧ್ಯಾಹ್ನ 02:30 ಗಂಟೆಗೆ ಬಂದು ನಾನು ನಿಲ್ಲಿಸಿದ ಸ್ಥಳದಲ್ಲಿ ಬಂದು ನೋಡಲಾಗಿ ನನ್ನ ಮೋಟಾರ್ ಸೈಕಲ್ ಇರಲಿಲ್ಲಾ, ಕಾರಣ ಕಳುವಾದ ನನ್ನ ಮೋಟಾರ್ ಸೈಕಲನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ರಾಘವೇಂದ್ರ ನಗರ ಪೊಲೀಸ ಠಾಣೆ :- ದಿನಾಂಕ: 14-03-2023 ರಂದು 7:00 ಪಿ.ಎಮ್ ಕ್ಕೆ ಶ್ರೀ ಪ್ರಶಾಂತ ತಂದೆ ಶ್ರೀಶೈಲ ಅಷ್ಟಗಿ ವಯ: 38 ವರ್ಷ, ಉ: ಡ್ರೈವರ್, ಸಾ: ದೇವಿ ನಗರ ಆಳಂದ ರೋಡ ಕಲಬುರಗಿ ರವರು ಇ.ಎಫ.ಆರ್ ದಲ್ಲಿ ದೂರು ದಾಖಲಿಸಿ ಠಾಣೆಗೆ ಹಾಜರಾಗಿದ್ದರ ಸಾರಾಂಶವೆನೆಂದರೆ ಮಾನ್ಯರವರಲ್ಲಿ ಮೇಲ್ಕಂಡ ವಿಷಯದಲ್ಲಿ ಅರಿಕೆ ಮಾಡಿಕೊಳ್ಳುವದೆನೆಂದರೆ ನಾನು ಹೀರೋ ಹೋಂಡಾ ಸ್ಪ್ಲೆಂಡರ ಪ್ಲಸ್  ಮೋಟಾರ ಸೈಕಲ್ ನಂ ಕೆಎ-32 ವಾಯ್ -4488 ನೇದ್ದನ್ನು ನಾನು ಪ್ರತಿದಿನ ಉಪಯೋಗ ಮಾಡುತ್ತಾ ಬಂದಿರುತ್ತಾನೆ. ಹೀಗೆ ಇರುವಾಗ ದಿನಾಂಕ: 11-02-2023 ರಂದು ಮಧ್ಯಾಹ್ನ 2.00 ಗಂಟೆ ಸುಮಾರಿಗೆ ನನ್ನ ಹೀರೋ ಹೋಂಡಾ ಸ್ಪ್ಲೆಂಡರ ಪ್ಲಸ್  ಮೋಟಾರ ಸೈಕಲ್ ನಂ ಕೆಎ-32 ವಾಯ್ -4488 ಅ. ಕಿ;25000/-ರೂ ನೇದ್ದನ್ನು ನನ್ನ ಸ್ನೇಹಿತ ವಾಸವಾಗಿರುವ ರಾಘವೇಂದ್ರ ಕಾಲೋನಿಯ ಮನೆಯ ಮುಂದೆ ನಿಲ್ಲಿಸಿದ್ದು ನಂತರ ಬೆಳಿಗ್ಗೆ 6:00 ಗಂಟೆಗೆ ನಾನು ಮೋಟರ ಸೈಕಲ ತೆಗೆದುಕೊಂಡು ಹೋಗಬೇಕು ಅಂತ ನನ್ನ ಸ್ನೇಹಿತನ ಮನೆಯ ಹೊರಗೆ ಬಂದು ನೋಡಿದಾಗ ಆತನ ಮನೆಯ ಮುಂದೆ ನಿಲ್ಲಿಸಿದ ಮೊಟರ್‌ ಸೈಕಲ್‌ ಇರಲಿಲ್ಲಾ.

ಸದರಿ ಮೋಟಾರ ಸೈಕಲ್ ವಿವರ ಈ ಕೆಳಗಿನಂತೆ ಇರುತ್ತದೆ.

1)      ಮೋಟಾರ ಸೈಕಲ್ ವಿಧ ಹೀರೋ ಹೋಂಡಾ ಸ್ಪ್ಲೆಂಡರ ಪ್ಲಸ್ 

2)      ಮೋಟಾರ ಸೈಕಲ್ ನಂ: KA-32 Y-4488

3)      ಚಸ್ಸಿ ನಂ.           : MBLHA10EZB9D07466

4)      ಇಂಜಿನ ನಂ.       : HA10EFB9D10392

5)      ಮಾಡಲ್ ನಂ.      : 2011

6)      ಬಣ್ಣ                 : ಸಿಲ್ವರ್ ಬಣ್ಣ

7)      ಅಂ.ಕಿ.              : 25000/-ರೂ

           ಈ ಮೇಲ್ಕಾಣಿಸಿದ ನನ್ನ ಮೋಟಾರ ಸೈಕಲ್ ಕಳ್ಳತನವಾಗಿದ್ದು ಮಾನ್ಯರವರು ಕಳೆದು ಹೋದ ನನ್ನ ಮೋಟಾರ ಸೈಕಲನ್ನು ಪತ್ತೆಮಾಡಿ ಕೊಡಬೇಕೆಂದು ಫಿರ್ಯಾದಿ ಕೊಟ್ಟ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಇತ್ತೀಚಿನ ನವೀಕರಣ​ : 15-03-2023 11:10 AM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080