Feedback / Suggestions

ಚೌಕ  ಪೊಲೀಸ್ ಠಾಣೆ :- ದಿನಾಂಕ:14-03-2022 ರಂದು ಸಾಯಂಕಾಲ ೧೬.೩೦ ಗಂಟೆಗೆ ಫಿರ್ಯಾದುದಾರಳಾದ ಶ್ರೀಮತಿ ಅನಿತಾ ಗಂಡ ಭೀಮು ರಾಠೋಡ ವ:೫೦ ವರ್ಷ ಉ:ಮನೆಗೆಲಸ ಜಾ:ಲಂಬಾಣಿ ಸಾ:ಪ್ಲಾಟ ನಂ.೨೪ ಗೋಕುಲ ನಗರ ಬಸವ ಕಾನ್ವೇಂಟ ಸ್ಕೂಲ್ ಹತ್ತಿರ ಜಿಡಿಎ ಕಾಲೋನಿ ಶಾಹಬಜಾರ ಕಲಬುರಗಿ ರವರು ಠಾಣೆಗೆ ಹಾಜರಾಗಿ ದೂರು ಸಲ್ಲಿಸುವುದೇನೆಂದರೆ, ನಾನು ಸುಮಾರು ೨೦೧೧ರಲ್ಲಿ ಗೋಕುಲ ನಗರ ಜಿಡಿಎ ಕಾಲೋನಿ ಶಹಾಬಜಾರ ಕಲಬುರಗಿಯಲ್ಲಿ ಸ್ವಂತ ಮನೆ ಮಾಡಿಕೊಂಡು ಮಕ್ಕಳೊಂದಿಗೆ ವಾಸವಾಗಿರುತ್ತೇನೆ. ನನ್ನ ಗಂಡ ಸುಮಾರು ೬ ವರ್ಷಗಳ ಹಿಂದೆ ಮೃತಪಟ್ಟಿದ್ದು ನನಗೆ ಒಟ್ಟು ೪ ಜನ ಮಕ್ಕಳಿದ್ದು ಅವರಲ್ಲಿ ೨ ಗಂಡು ಮಕ್ಕಳು ೨ ಹೆಣ್ಣು ಮಕ್ಕಳು ಇರುತ್ತಾರೆ. ಮೊದಲನೆ ಮಗನಾದ ಸಂಜೀವ ಇತನು ತನ್ನ ಹೆಂಡತಿಯೊಂದಿಗೆ ಮುಂಬೈಯಲ್ಲಿ ವಾಸವಾಗಿರುತ್ತಾನೆ, ೨ನೇ ಮಗನಾದ ಸಚಿನ ಇತನು ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡಿಕೊಂಡಿರುತ್ತಾನೆ. ಮತ್ತು ನನ್ನ ಇಬ್ಬರೂ ಹೆಣ್ಣು ಮಕ್ಕಳಾದ ಕು.ಜ್ಯೋತಿ ಮತ್ತು ಕು.ರೇಖಾ ರವರು ನನ್ನ ಜೊತೆಗೆ ವಾಸವಾಗಿರುತ್ತಾರೆ.  ಹೀಗಿದ್ದು ದಿನಾಂಕ:14-03-2022 ರಂದು ಬೆಳಿಗ್ಗೆ ೯.೪೦ ಎಎಂಕ್ಕೆ ನನ್ನ ಹಿರಿಯ ಮಗಳಾದ ಕು.ಜ್ಯೋತಿ ಇವಳು ಜೈಭವಾನಿ ಇಂಟರನೆಟ್ ಸೆಂಟರ ಗಂಜ ಕಲಬುರಗಿಯಲ್ಲಿ ಕೆಲಸಕ್ಕೆ ಹೋಗಿರುತ್ತಾಳೆ. ನಂತರ ನನಗೆ ನಿನ್ನೆಯಿಂದ ಹಲ್ಲು ನೋವು ಆಗುತ್ತಿರುವುದರಿಂದ ಆಸ್ಪತ್ರೆಗೆ ತೋರಿಸಲೆಂದು ಬೆಳಿಗ್ಗೆ ೧೦.೩೦ ಗಂಟೆಗೆ ನನ್ನ ಮನೆ ಕೀಲಿ ಹಾಕಿಕೊಂಡು ನನ್ನ ಕಿರಿಯ ಮಗಳಾದ ಕು.ರೇಖಾ ಇವಳಿಗೆ ಜೊತೆಯಲ್ಲಿ ಕರೆದುಕೊಂಡು ಬಂಬುಬಜಾರಕ್ಕೆ ಹೋಗಿ ಬಂಬುಬಜಾರದಲ್ಲಿರುವ ಬಸವ ಕ್ಲಿನಿಕ್ ನಲ್ಲಿ ಹಲ್ಲು ನೋವಿಗೆ ತೋರಿಸಿಕೊಂಡು ವಾಪಸ ಮಧ್ಯಾಹ್ನ ೧.೦೦ ಗಂಟೆಗೆ ಮನೆಗೆ ಬಂದು ಗೇಟ ಕೀಲಿ ತೆಗೆದು ನೋಡಿದಾಗ ಮನೆಯ ೨ ಬಾಗಿಲುಗಳು ತೆರೆದಿದ್ದು, ಮನೆಯಲ್ಲಿದ್ದ ಸಾಮಾನುಗಳು ಚಲ್ಲಾಪಿಲ್ಲಿಯಾಗಿದ್ದು ಹಾಗೂ ಅಲಮಾರಿಯ ಲಾಕರ ಮುರಿದಿದ್ದನ್ನು ಕಂಡು ಗಾಭರಿಯಾಗಿ ನನ್ನ ಹಿರಿಯ ಮಗಳಾದ ಕು:ಜ್ಯೋತಿಗೆ ಫೋನ ಮಾಡಿ ತಿಳಿಸಿದ್ದರಿಂದ ಅವಳು ಮತ್ತು ನನ್ನ ತಮ್ಮನಾದ ಸಂತೋಷ ತಂದೆ ಸೋಮು ಚವ್ಹಾಣ ಇಬ್ಬರೂ ಬಂದಿದ್ದು ನಂತರ ನಾವೆಲ್ಲರೂ ನಮ್ಮ ಮನೆಯ ಒಳಗಡೆ ಹೋಗಿ ನೋಡಲಾಗಿ ಅಲಮಾರಿಯಲ್ಲಿಟ್ಟಿದ್ದ ೧) ೪ ತೊಲಾ ಬಂಗಾರದ ಮಾಂಗಲ್ಯ ಸರ ಅ.ಕಿ.೧,೮೪,೦೦೦/-ರೂ ೨) ೧ ತೊಲಾ ಬಂಗಾರದ ಚೈನ ಅ.ಕಿ.೪೬,೦೦೦/-ರೂ ೩) ೧ ತೊಲೆ ೬ ಗ್ರಾಂ ಬಂಗಾರದ ಚೈನ ಅ.ಕಿ.೭೩,೦೦೦/-ರೂ ೪) ಳಿ ತೊಲೆಯ ಬಂಗಾರದ ೩ ಸುತ್ತುಂಗುರಗಳು ಅ.ಕಿ ೭೫,೦೦೦/-ರೂ ೫) ೩ ಗ್ರಾಂ ಬಂಗಾರದ ಝುಮ್ಮುಕಿ ಅ.ಕಿ ೧೫,೮೦೦/-ರೂ ಮತ್ತು ೬) ೧೫ ತೊಲೆ ಬೆಳ್ಳಿ ಕಾಲು ಚೈನು ಅ.ಕಿ ೭೫೦೦/-ರೂ ಹಾಗೂ ನಗದು ಹಣ ೫೦೦೦/- ಒಟ್ಟು ಹೀಗೆ 04,06,300/- ಕಿಮ್ಮತ್ತಿನ ಬಂಗಾರದ, ಬೆಳ್ಳಿಯ ಆಭರಣಗಳು ಹಾಗೂ ನಗದು ಹಣವನ್ನು ಯಾರೋ ಕಳ್ಳರು ನನ್ನ ಮನೆಯ ಬಾಗಿಲಿಗೆ ಹಾಕಿದ ಕೀಲಿಯನ್ನು ದಿನಾಂಕ ೧೪.೦೩.೨೦೨೨ ರಂದು ಬೆಳಿಗ್ಗೆ ೧೦.೩೦ ಗಂಟೆಯಿಂದ ಮಧ್ಯಾಹ್ನ ೧.೦೦ ಗಂಟೆಯ ಮಧ್ಯದ ಅವಧಿಯಲ್ಲಿ ಮುರಿದು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕೊಟ್ಟ ದೂರಿನ ಆಧಾರದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಚೌಕ  ಪೊಲೀಸ್ ಠಾಣೆ :- ದಿನಾಂಕ:14-03-2022 ರಂದು ರಾತ್ರಿ ೨೦.೦೦ ಗಂಟೆಗೆ ಫರ‍್ಯಾದಿದಾರನಾದ ಶ್ರೀ ಜೈಕುಮಾರ ತಂದೆ ಅಖಿಲೇಶ ಗುಪ್ತಾ ವ:೨೮ ವರ್ಷ ಉ:ಖಾಸಗಿ ಕೆಲಸ ಜಾತಿ:ಮಾಥೂರವೇಶ್ ಸಾ:ಮ.ನಂ.೧೭ ಗುಪ್ತಾ ನಿವಾಸ ವಿಶ್ವರಾಧ್ಯ ಕಾಲೋನಿ ಶೆಟ್ಟಿ ಟಾಕೀಸ ಹತ್ತಿರ ಕಲಬುರಗಿ  ರವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕೀಕೃತ ಮಾಡಿಸಿದ ಫರ‍್ಯಾದಿ ದೂರು ಅರ್ಜಿ ಸಲ್ಲಿಸಿದ್ದು ಸದರಿ ಫರ‍್ಯಾದಿ ಅರ್ಜಿಯ ಸಾರಾಂಶ ಈ ಕೆಳಗಿನಂತಿರುತ್ತದೆ.              ನಾನು ನನ್ನ ವೈಯಕ್ತಿಕ ಕೆಲಸದ ನಿಮಿತ್ಯ ಓಡಾಡಲು ೨೦೧೨ನೇ ಸಾಲಿನಲ್ಲಿ ನನ್ನ ಹೆಸರಿನಲ್ಲಿ Honda Dio KA 32 EC 3339 ಮೋಟರ ಸೈಕಲ ನೇದ್ದು ಖರೀದಿಸಿರುತ್ತೇನೆ. ದಿನಾಂಕ: ೨೧.೦೨.೨೦೨೨  ರಂದು  ಬೆಳಿಗ್ಗೆ ೮.೩೦ ಗಂಟೆ ಸುಮಾರಿಗೆ  ಮನೆಯಿಂದ ನನ್ನ Honda Dio KA 32 EC 3339 ಮೋಟರ ಸೈಕಲ  ನೇದ್ದರ ಮೇಲೆ ಫರ್ನಿಚರ ಕೆಲಸ ಕುರಿತು ಕಲಬುರಗಿ ನಗರದ ಆಳಂದ ನಾಕಾ ಹತ್ತಿರ ಇರುವ ಸಾಮಿಲ್ ಅಂಗಡಿಗೆ ಹೋಗಿ ಅಂಗಡಿಯ ಎದುರುಗಡೆ ಬೆಳಿಗ್ಗೆ ೯.೦೦ ಗಂಟೆಗೆ ಮೋಟಾರ ಸೈಕಲನ್ನು ನಿಲ್ಲಿಸಿ ಸದರಿ ಅಂಗಡಿಯ ಒಳಗಡೆ ಹೋಗಿ ಕೆಲಸ ಮುಗಿಸಿಕೊಂಡು ಮರಳಿ ೯.೩೦ ಗಂಟೆ ಸುಮಾರಿಗೆ ಬಂದು ನಾನು ನಿಲ್ಲಿಸಿದ ಸ್ಥಳದಲ್ಲಿ ನನ್ನ ಮೋಟರ ಸೈಕಲ Honda Dio KA 32 EC 3339 ನೇದ್ದನ್ನು ಬಂದು ನೋಡಲಾಗಿ ನನ್ನ ಮೋಟರ ಸೈಕಲ ಕಾಣಿಸಲಿಲ್ಲಾ. ಆಗ ನಾನು ಗಾಭರಿಗೊಂಡು ಈ ವಿಷಯವನ್ನು ನನ್ನ ಗೆಳೆಯನಾದ ಕೃಷ್ಣಕಾಂತ ತಂದೆ ವಿಜಯಕುಮಾರ ಗೌಳಿ ಇವರಿಗೆ ಫೋನ ಮಾಡಿ ತಿಳಿಸಿದ್ದು ವಿಷಯ ತಿಳಿದು ಗೆಳೆಯ ಕೃಷ್ಣಕಾಂತ ಗೌಳಿ ಇತನು ಸ್ಥಳಕ್ಕೆ ಬಂದು ನಂತರ ನಾವಿಬ್ಬರೂ ಕೂಡಿಕೊಂಡು ನಾನು ನನ್ನ ಮೋಟರ ಸೈಕಲ ನಿಲ್ಲಿಸಿದ ಸ್ಥಳದ ಸುತ್ತ ಮುತ್ತಲು ನನ್ನ ಮೋಟಾರ ಸೈಕಲ ಹುಡುಕಾಡಿದರೂ ನನ್ನ ಮೋಟರ ಸೈಕಲ ಸಿಗಲಿಲ್ಲಾ.  ಯಾರೋ ಕಳ್ಳರು ನನ್ನ Honda Dio KA 32 EC 3339 ನೇದ್ದನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ದಿನಾಂಕ:೨೧.೦೨.೨೦೨೨ ರಂದು ಕಳ್ಳತನವಾದ ದಿನದಿಂದ ಇಂದಿನವರೆಗೆ ಕಲಬುರಗಿ ನಗರದ ಮತ್ತು ಹೊರ ವಲಯದಲ್ಲಿ ಎಲ್ಲಾ ಕಡೆಗಳಲ್ಲಿ ತಿರುಗಾಡಿ ಕಳ್ಳತನವಾದ ನನ್ನ ಮೋಟರ ಸೈಕಲ ಸಿಗದ ಕಾರಣ ಇಂದು ತಡಮಾಡಿ ಠಾಣೆಗೆ ಬಂದು ದೂರು ಸಲ್ಲಿಸಿರುತ್ತೇನೆ. ಕಳ್ಳತನವಾದ ನನ್ನ ಮೋಟಾರ ಸೈಕಲ ವಿವರ ಈ ಕೆಳಗಿನಂತೆ ಇರುತ್ತದೆ

೦೧.ಮೋಟಾರ ಸೈಕಲ ಮಾದರಿ ಮತ್ತು ನಂಬರ ;  Honda Dio KA 32 EC 3339

೦೨.ಇಂಜನ ನಂಬರ :   JF39E0085554, ೦೩.       ಚೆಸ್ಸಿ ನಂಬರ : ME4JF391KC8085497

೦೪. ಮಾಡಲ್ : ೨೦೧೨, ೦೫. ಬಣ್ಣ : GRAY, ೦೬.ಬೆಲೆ 15,000/- ರೂ

        ಕಾರಣ ಮಾನ್ಯರವರು Honda Dio KA 32 EC 3339 ನೇದ್ದು ಕಳ್ಳತನ ಮಾಡಿದ ಕಳ್ಳರನ್ನು ಪತ್ತೆ ಹಚ್ಚಿ ಅವರ ಮೇಲೆ ಕಾನೂನು ಕ್ರಮ ಜರುಗಿಸಿ ನನ್ನ ಮೋಟರ ಸೈಕಲ ನನಗೆ ದೊರಕಿಸಿಕೊಡಬೇಂದು ವಿನಂತಿ  ಅಂತಾ ಕೊಟ್ಟ ಫರ‍್ಯಾದಿ ಅರ್ಜಿಯ  ಸಾರಾಂಶದ ಮೇಲಿಂದ  ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 ಸಂಚಾರಿ ಪೊಲೀಸ್ ಠಾಣೆ-೦೧ :- ದಿನಾಂಕ 14-03-2022 ರಂದು ಬೆಳಿಗ್ಗೆ ೧೦-೧೫ ಗಂಟೆಗೆ ಮೃತ ಸುದರ್ಶನ ಇತನು ಭೂಪಾಲ ತೆಗನೂರ ಗ್ರಾಮದಿಂದ ಕಲಬುರಗಿ ಮುಖಾಂತರ ಸೆಂಟ್ರಲ ಜೈಲ ಹತ್ತೀರ ಬರುವ ಈಕೊ ಗಾರ್ಡನಕ್ಕೆ ಹೋಗುವ ಕುರಿತು ರಾಷ್ಟಿçÃಯ ಹೆದ್ದಾರಿ-೫೦ ರ ಮೇಲೆ ತಾನು ಚಲಾಯಿಸುತ್ತೀರುವ ಮೋಟಾರ ಸೈಕಲ ನಂಬರ ಕೆಎ-33/ಹೆಚ್-7397 ನೇದ್ದರ ಹಿಂದುಗಡೆ ತನಗೆ ಪರಿಚಯದ ಶೃತಿ ಇವಳನ್ನು ಕೂಡಿಸಿಕೊಂಡು  ಮೋಟಾರ ಸೈಕಲ ಚಲಾಯಿಸಿಕೊಂಡು ಈಕೊ ಗಾರ್ಡನ ಹತ್ತೀರ ಹೋಗಿ ರೋಡ ಮೇಲೆ ಹೋಗಿ ಬರುವ ವಾಹನಗಳನ್ನು ನೋಡಿಕೊಂಡು ಈಕೊ ಗಾರ್ಡನ ಕಡೆಗೆ ಮೋಟಾರ ಸೈಕಲ ಚಲಾಯಿಸಿಕೊಂಡು ಹೋಗುತ್ತೀರುವಾಗ ಈಕೊ ಗಾರ್ಡನ ಎದುರುಗಡೆ ರೋಡ ಮೇಲೆ ಜೇವರ್ಗಿ ಕಡೆಯಿಂದ ಕಲಬುರಗಿ ಕಡೆಗೆ ಹೋಗುವ ಕುರಿತು ಟ್ಯಾಂಕರ ಲಾರಿ ನಂಬರ ಕೆಎ-38/ಎ-3706 ನೇದ್ದರ ಚಾಲಕನು ತನ್ನ ವಾಹನವನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಸುದರ್ಶನ ಇವರ ಮೋಟಾರ ಸೈಕಲಕ್ಕೆ ಡಿಕ್ಕಿಪಡಿಸಿ ಅಪಘತ ಮಾಡಿ ತನ್ನ ವಾಹನ ಅಲ್ಲೇ ಬಿಟ್ಟು ಓಡಿ ಹೋಗಿದ್ದು ಸುದರ್ಶನ ಮತ್ತು ಶೃತಿ ಇಬ್ಬರೂ ಭಾರಿಗಾಯ ಹೊಂದಿ ಸುದರ್ಶನ ಇತನು ಅಪಘಾತ ಸ್ಥಳದಲ್ಲಿ ಮೃತಪಟ್ಟಿದ್ದು ಇರುತ್ತದೆ.

 

 

 

Last Updated: 24-03-2022 01:16 PM Updated By: ADMIN


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : Kalaburagi City Police
Designed, Developed and Hosted by: Center for e-Governance - Web Portal, Government of Karnataka © 2024, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080