ಅಭಿಪ್ರಾಯ / ಸಲಹೆಗಳು

ಚೌಕ ಪೊಲೀಸ್‌ ಠಾಣೆ :- ದಿನಾಂಕ: 14-02-2023 ರಂದು ಬೆಳಿಗ್ಗೆ 11:30 ಎ.ಎಂಕ್ಕೆ ಫಿರ್ಯಾದಿದಾರರಾದ ಶ್ರೀ ಶಿವರಾಮ ನಾಯಕ ತಂದೆ ರಾಮಚಂದ್ರ ನಾಯಕ ವ:45ವರ್ಷ ಉ:ಕೂಲಿ ಕೆಲಸ ಜ್ಯಾ:ಲಂಬಾಣಿ ಸಾ:ಶಹಬಜಾರ ತಾಂಡಾ ಫಿಲ್ಟರಬೆಡ್ ರೋಡ ಕಲಬುರಗಿ ರವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ದೂರು ಸಲ್ಲಿಸಿದನ್ನು ಸ್ವೀಕರಿಸಿಕೊಂಡ ಸದರಿ ಫರ್ಯಾದಿಯ ಸಾರಾಂಶವೇನೆಂದರೆ, ಶಿವರಾಮ ನಾಯಕ ತಂದೆ ರಾಮಚಂದ್ರ ನಾಯಕ ವ:45ವರ್ಷ ಉ:ಕೂಲಿ ಕೆಲಸ ಜ್ಯಾ:ಲಂಬಾಣಿ ಸಾ:ಶಹಬಜಾರ ತಾಂಡಾ ಫಿಲ್ಟರಬೆಡ್ ರೋಡ ಕಲಬುರಗಿ ಆಗಿದ್ದು, ತಮ್ಮಲ್ಲಿ ದೂರು ಸಲ್ಲಿಸುವುದೇನೆಂದರೆ, ನಾನು ಮತ್ತು ಶಂಕರ ಹಾಗೂ ಚಂದ್ರಶೇಕರ 03 ಜನರು ಸೇವಲಾಲ ಗುಡಿಯ ಉಸ್ತುವಾರಿ ನೋಡಿಕೊಂಡು ಹೋಗುತ್ತಿದ್ದು ಇರುತ್ತದೆ. ಶ್ರೀ ಚಂದ್ರು ತಂದೆ ಗಣಪತಿ ಚಿನ್ನಾರಾಠೋಡ ಇವರನ್ನು ಗುಡಿಯ ಸ್ವಚ್ಚತೆಯ ಕೆಲಸಕ್ಕಾಗಿ ಇಟ್ಟಿಕೊಂಡಿದ್ದು ಇರುತ್ತದೆ. ಹೀಗಿದ್ದು,ಇಂದು ದಿನಾಂಕ: 14-02-2023 ರಂದು ಬೆಳಿಗ್ಗೆ 05:00 ಗಂಟೆಗೆ ಶ್ರೀ ಚಂದ್ರು ತಂದೆ ಗಣಪತಿ ಚಿನ್ನಾರಾಠೋಡ ರವರು ಪ್ರತಿದಿವಸದಂತೆ ದೇವಸ್ಥಾನಕ್ಕೆ ಬಂದು ದೇವಸ್ಥಾನದ ಮುಖ್ಯ ಪ್ರವೇಶ ದ್ವಾರದ ಬೀಗವನ್ನು ತೆಗೆದು ಗರ್ಭಗುಡಿ ಹತ್ತಿರ ಬಂದಾಗ ಮರೆಮ್ಮದೇವಿಯ ಗರ್ಭಗುಡಿಯ ಬಾಗಿಲಿನ ಕೀಲಿ ತೆಗೆದಿದ್ದು ಹಾಗೂ ಒಳಗಡೆ ಸಾಮಾನುಗಳು ಚಲ್ಲಾಪಿಲ್ಲಿಯಾಗಿ ಬಿದ್ದಿದ್ದು ಕಂಡು ಗಾಬರಿಗೊಂಡು ದೇವಿ ಮೂರ್ತಿಯನ್ನು ನೋಡಿದಾಗ ದೇವಿಯ ಕೊರಳಿಗೆ ಹಾಕಿದ ಆಭರಗಳು ಕಾಣಿಸಿಲಿಲ್ಲ ಅಂತ  ಸದರಿ ಶ್ರೀ ಚಂದ್ರು ರವರು ನನ್ನ ಮನೆಗೆ ಬಂದು ಕಳ್ಳತನವಾದ ವಿಷಯ ನನಗೆ ಹೇಳಿದ್ದದರಿಂದ ತಕ್ಷಣ ನಾನು ಗುಡಿಯ ಸರಪಂಚರಾದ ಶ್ರೀ ಶಂಕರ ಮತ್ತು ಕಾರಭಾರಿಯವರಾದ ಶ್ರೀ ಚಂದ್ರಶೇಕರ ರವರಿಗೆ ಫೋನ ಮಾಡಿ ತಿಳಿಸಿದ ನಂತರ ನಾವೇಲ್ಲರೂ ಗುಡಿ ಹತ್ತಿರ ಬಂದು ನಾವೆಲ್ಲರೂ ಸೇರಿ ಮರೆಮ್ಮದೇವಿ ಗರ್ಭಗುಡಿಯ ಹತ್ತಿರ ಹೋಗಿ ಮರೆಮ್ಮದೇವಿ ಮೂರ್ತಿಯ ಕೊರಳಿಗೆ ಹಾಕಿದ 1) 30 ಗ್ರಾಂ ಬಂಗಾರದ ಚಪ್ಪಲ ಸರ ಅ.ಕಿ 1,44,000/-ರೂ 2) 35 ಗ್ರಾಂ ಬಂಗಾರದ ಸಿಂಗಾರ  ಮಣಿ ಸರ  ಅ.ಕಿ. 1,68,000/-ರೂ 3) 15 ಗ್ರಾಂ ಬಂಗಾರದ ನೆಕ್ಲೇಸ ಅ.ಕಿ.72,000/-ರೂ 4) 05 ಗ್ರಾಂ ಬಂಗಾರದ ಮೂಗಿನ ನತ್ತು ಅ.ಕಿ.24,000/ರೂ-5) 02 ಗ್ರಾಂ ಬಂಗಾರದ ಸಣ್ಣ ಸಣ್ಣ 04 ಮಂಳಸೂತ್ರ ಮತ್ತು ಗುಂಡುಗಳು ಅ.ಕಿ 9,600/-ರೂ  ಹೀಗೆ ಎಲ್ಲರೂ ಸೇರಿ ಒಟ್ಟು 87 ಗ್ರಾಂ ಬಂಗಾರದ ಆಭರಣಗಳು ಅ.ಕಿ.4,17,600/-ರೂ ನೇದ್ದನ್ನು ದಿನಾಂಕ: 14-02-2023 ರಂದು ಮಧ್ಯರಾತ್ರಿ ಸುಮಾರು 01:00 ಗಂಟೆಯಿಂದ 03:00 ಗಂಟೆಯ ಅವಧಿಯಲ್ಲಿ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋದ ಅಪರಿಚಿತ ಕಳ್ಳರನ್ನು ಪತ್ತೆ ಹಚ್ಚಿ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಅಂತ ಫಿರ್ಯಾದಿ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸಂಚಾರಿ ಪೊಲೀಸ್‌ ಠಾಣೆ-2 :-  ದಿನಾಂಕ: 12/02/2023 ರಂದು  ಸಾಯಂಕಾಲ 5:00 ಗಂಟೆಗೆ ಶ್ರೀ. ಮೆಹೆಬೂಬ ತಂದೆ ಮೈನೊದ್ದಿನ ವಯಃ 38 ವರ್ಷ ಸಾಃ ಖಾನಬೌಡಿ ನಯಾಮೊಹಲ್ಲಾ ಆಳಂದ ಜಿಲ್ಲಾಃ ಕಲಬುರಗಿ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ಫಿರ್ಯಾದಿ ಅರ್ಜಿ ಹಾಜರು ಪಡಿಸಿದ್ದು ಸಾರಂಶವೆನೆಂದರೆ, ಫಿರ್ಯಾದಿ ಮೆಹೆಬೂಬ ಇವರು ದಿನಾಂಕ: 05/02/2023 ರಂದು ರಾತ್ರಿ 7:30 ಗಂಟೆ ಸುಮಾರಿಗೆ ಮುಸ್ಲಿಂ ಸಂಘ ತಾಜ ನಗರ ಕಲಬುರಗಿಯ ತಮ್ಮ ಮಾವನ ಮನೆಗೆ ಹೋಗಿ ಮರಳಿ ಬರುವಾಗ ಮೋಟರ ಸೈಕಲ ನಂ. ಕೆಎ-36 ಯು-7471 ನೇದ್ದರ ಸವಾರನು ವೇಗದಿಂದ ನಡೆಯಿಸಿಕೊಂಡು ಬಂದು ಡಿಕ್ಕಿ ಹೊಡೆದ ಪರಿಣಾಮ ತನ್ನ ಎಡಗೈ ಮುರದಿರುತ್ತದೆ ಮತ್ತು ಬಲಗಾಲಿಗೆ ಗಾಯವಾಗಿರುತ್ತದೆ. ಘಟನೆಯನ್ನು ಖಾಜಾಪಾಷಾ ಎಂಬುವರು ನೋಡಿರುತ್ತಾರೆ. ಅಪಘಾತ ಪಡಿಸಿದ ಸವಾರನು ಆಸ್ಪತ್ರೆಯ ಖರ್ಚು ವೆಚ್ಚ ಕೊಡುವುದಾಗಿ ತಿಳಿಸಿ ನಂತರ ಹಣವನ್ನು ಕೊಡದೆ ಇರುವ ಕಾರಣ ವಿಳಂಬವಾಗಿ ಮುಂದಿನ ಕ್ರಮ ಕೈಗೊಳ್ಳಬೇಕೆಂದು ಫಿರ್ಯಾದಿ ಕೊಟ್ಟ ಅರ್ಜಿಯ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸಂಚಾರಿ ಪೊಲೀಸ್‌ ಠಾಣೆ-2 :- ದಿನಾಂಕ: 14/02/2023 ರಂದು ಸಾಯಂಕಾಲ 6:30 ಗಂಟೆಗೆ ಶ್ರೀ ಮಹೇಶ ರವರು ಠಾಣೆಗೆ ಹಾಜರಾಗಿ ಶ್ರೀಮತಿ ಪ್ರೇಮಾ @ ಪ್ರಮಿಳಾಬಾಯಿ ಗಂಡ ಅರ್ಜುನರಾವ ಸಿಂದೆ ಇವರ ದೂರು ಹಾಜರಪಡಿಸಿದ್ದರ ಸಾರಂಶವೆನೆಂದರೆ ದಿನಾಂಕ: 14-02-2023 ರಂದು ಬೆಳಿಗ್ಗೆ ಹೆಡ್ ಪೊಸ್ಟ ಆಫೀಸನಲ್ಲಿ ನನ್ನ ಕೆಲಸ ಇರುವದರಿಂದ ನಾನು ಅಯ್ಯರವಾಡಿಯಲ್ಲಿರುವ ನಮ್ಮ ಮನೆಯಿಂದ ನಾನು ನಡೆದುಕೊಂಡು ಹುಮನಾಬಾದ ಬೇಸ್ ಮುಖಾಂತರವಾಗಿ ಪ್ರಕಾಶ ಏಷಿಯನ ಮಹಲ್ ಕಡೆಗೆ ಹೋಗುವ ಕುರಿತು ರೋಡ ಎಡಗಡೆಯಿಂದ ನಡೆದುಕೊಂಡು ಹೋಗುತ್ತೀರುವಾಗ ಒಬ್ಬ ಟಂ ಟಂ ಗೂಡ್ಸ ವಾಹನದ ಚಾಲಕನು ಶಹಾಬಾಜಾರ ನಾಕಾ ಕಡೆಯಿಂದ ಹುಮನಾಬಾದ ಬೇಸ ಕಡೆಗೆ ಹೋಗುವ ಕುರಿತು ತನ್ನ ವಾಹನವನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನಗೆ ಎದುರಿನಿಂದ ಡಿಕ್ಕಿಪಡಿಸಿ ಅಪಘಾತ ಮಾಡಿದನು. ನಾನು ಪುಟಿದು ಕೆಳಗಡೆ ಬಿದ್ದಾಗ ಸದರಿ ಘಟನೆ ನೋಡಿದ ಚಿತ್ರಶೇಖರ ತಂದೆ ರೇವಣಸಿದ್ದಪ್ಪ ಮರಗುತ್ತಿ ಹಾಗೂ ಅಭೀಷೇಕ ತಂದೆ ಹಣಮಂತರಾವ ಸುಬೇದಾರ ರವರು ಬಂದು ನನಗೆ ಎಬ್ಬಿಸಿ ಕೂಡಿಸಿದರು. ನಾನು ಅಪಘಾತ ಪಡಿಸಿದ ಟಂ ಟಂ ವಾಹನವನ್ನು ನೋಡಲು ಅದರ ಚಾಲಕ ತನ್ನ ವಾಹನವನ್ನು ರೋಡ ಪಕ್ಕದಲ್ಲಿ ನಿಲ್ಲಿಸಿ ಅದರ ಹತ್ತೀರ ಇದ್ದನ್ನು. ಅದರ ನಂಬರ ಕೆಎ-35 ಬಿ-6152 ಇರುವದನ್ನು ಚಿತ್ರಶೇಖರ ಇತನು ನನಗೆ ಬರೆದುಕೊಟ್ಟನ್ನು. ಸದರ ಘಟನೆ ಜರುಗಿದಾಗ ಬೆಳಿಗ್ಗೆ ಅಂದಾಜು 9:30 ಗಂಟೆ ಸಮಯವಾಗಿತ್ತು. ಸದರಿ ಘಟನೆಯಿಂದ ನನ್ನ ತೆಲೆಗೆ ಭಾರಿ ರಕ್ತಗಾಯ, ಮತ್ತು ಬಾಯಿಗೆ ರಕ್ತಗಾಯವಾಗಿತ್ತು. ಅಪಘಾತ ಪಡಿಸಿದ ಟಂ ಟಂ ಗೂಡ್ಸ ಚಾಲಕನು ತನ್ನ ವಾಹನವನ್ನು ಅಲ್ಲೇ ಬಿಟ್ಟು ಓಡಿ ಹೋದನು. ನನಗೆ ಪೆಟು ಬಿದ್ದು ತ್ರಾಸ ಆಗುತ್ತಿದ್ದರಿಂದ ನನ್ನ ಉಪಚಾರ ಕುರಿತು ಚಿತ್ರಶೇಖರ ಮತ್ತು ಅಭಿಷೇಕ ಇಬ್ಬರೂ ಒಂದು ಆಟೋರಿಕ್ಷಾ ವಾಹನದಲ್ಲಿ ಕೂಡಿಸಿಕೊಂಡು ಬಸವೇಶ್ವರ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತಾರೆ. ಅಪಘಾತ ಪಡಿಸಿದ ಟಂ ಟಂ ಗೂಡ್ಸ ವಾಹನದ ಚಾಲಕನ ಹೆಸರು ಗೋತ್ತಾಗಿರುವದಿಲ್ಲ ಆತನನ್ನು ನೋಡಿದ್ದು ಮುಂದೆ ನೋಡಿದಲ್ಲಿ ಗುರ್ತಿಸುತ್ತೆನೆ. ಕಾರಣ ನಡೆದುಕೊಂಡು ಹೋಗುತ್ತೀರುವ ನನಗೆ ಡಿಕ್ಕಿಪಡಿಸಿ ಅಪಘಾತ ಮಾಡಿದ ಟಂ ಟಂ ಗೂಡ್ಸ ನಂಬರ ಕೆಎ-35 ಬಿ-6152 ನೇದ್ದರ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಫಿರ್ಯಾದಿ ಕೊಟ್ಟ ಅರ್ಜಿಯ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸಂಚಾರಿ ಪೊಲೀಸ್‌ ಠಾಣೆ-2 :- ದಿನಾಂಕ: 14/02/2023 ರಂದು ರಾತ್ರಿ 8:15 ಗಂಟೆಗೆ ಶ್ರೀ ಸಂತೋಷ ತಂದೆ ಶಿವಾಜಿ ರೋಕಡೆ ಇವರು ಠಾಣೆಗೆ ಹಾಜರಾಗಿ ಅವರ ತಮ್ಮ ಶ್ರೀ ಸುಭಾಶ ತಂದೆ ಶಿವಾಜಿ ರೋಕಡೆ ಇವರ ದೂರು ಅರ್ಜಿಯನ್ನು ಹಾಜರಪಡಿಸಿದ್ದರ ಸಾರಂಶವೆನೆಂದರೆ ಇಂದು ದಿನಾಂಕ: 14-02-2023 ರಂದು ಬೆಳಿಗ್ಗೆ ನಾನು ದಿನ ನಿತ್ಯದಂತೆ ಮನೆಯಿಂದ ರಾಜಾಪೂರ ರೋಡಿಗೆ ಬರುವ ಜೆಡ್.ಪಿ ಆಪೀಸಕ್ಕೆ ಬಂದು ನಂತರ ಹಳೆ ಆರ.ಟಿ.ಓ ಆಫೀಸ ಕ್ರಾಸ ಹತ್ತೀರ ಬರುವ ಪೋಸ್ಟ ಆಫೀಸನಲ್ಲಿ ನನ್ನ ಕೆಲಸ ಇರುವದರಿಂದ ನಾನು ನನ್ನ ಮೋಟಾರ ಸೈಕಲ ನಂಬರ ಕೆಎ-32, ಇಡಿ-4182 ನೇದ್ದನ್ನು ಚಲಾಯಿಸಿಕೊಂಡು ಪೋಸ್ಟ ಆಫೀಸಕ್ಕೆ ಬಂದು ಕೆಲಸ ಮುಗಿಸಿಕೊಂಡು ವಾಪಸ್ಸ ರಾಜಾಪೂರ ರೋಡಿಗೆ ಬರುವ ನಮ್ಮ ಆಫೀಸಕ್ಕೆ ಮೋಟಾರ ಸೈಕಲ ಚಲಾಯಿಸಿಕೊಂಡು ರೋಡ ಮೇಲೆ ಹೋಗಿ ಬರುವ ವಾಹನಗಳನ್ನು ನೋಡಿಕೊಂಡು ಹೋಗುವಾಗ ಹಳೆ ಆರ.ಟಿ.ಓ ಕ್ರಾಸ ಹತ್ತೀರ ರೋಡ ಮೇಲೆ ಒಬ್ಬ ಮೋಟಾರ ಸೈಕಲ ಸವಾರನು ಸೇಡಂ ರಿಂಗ ರೋಡ ಕಡೆಯಿಂದ ಜಿ.ಜಿ.ಹೆಚ್ ಸರ್ಕಲ ಕಡೆಗೆ ಹೋಗುವ ಕುರಿತು ತನ್ನ ವಾಹನವನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಮೋಟಾರ ಸೈಕಲಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿದನು. ನಾನು ನನ್ನ ಮೋಟಾರ ಸೈಕಲದೊಂದಿಗೆ ಪುಟಿದು ಕೆಳಗಡೆ ಬಿದ್ದಾಗ ಸದರ ಘಟನೆ ನೋಡಿದ ನನಗೆ ಪರಿಚಯದ ವಾಜೀದ ತಂದೆ ಲೈಕ ಅಲಿ ಇನಾಂದಾರ ಹಾಗೂ ದಸ್ತಗಿರ ತಂದೆ ಖಾಜಾ ಹುಸೇನಿ ರವರು ಬಂದು ನನಗೆ  ಎಬ್ಬಿಸಿ ರೋಡ ಪಕ್ಕದಲ್ಲಿ ಕೂಡಿಸಿದರು. ನಾನು ನನ್ನ ಮೋಟಾರ ಸೈಕಲಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿದ ಮೋಟಾರ ಸೈಕಲ ನಂಬರ ನೋಡಲು ಕೆಎ-32/ಹೆಚ್.ಸಿ-5126 ಇದ್ದಿತ್ತು. ಅದರ ಸವಾರ ತನ್ನ ಮೋಟಾರ ಸೈಕಲದೊಂದಿಗೆ ಜಿ.ಜಿ.ಹೆಚ್ ಸರ್ಕಲ ಕಡೆಗೆ ಓಡಿ ಹೋದನು. ಸದರಿ ಘಟನೆ ಜರುಗಿದಾಗ ಬೆಳಿಗ್ಗೆ ಅಂದಾಜು 9:45 ಗಂಟೆ ಸಮಯವಾಗಿತ್ತು. ಸದರ ಘಟನೆಯಿಂದ ನನ್ನ ಎಡಗಾಲಿನ ಮೊಳಕಾಲಿಗೆ ಭಾರಿ ಗುಪ್ತಪೆಟ್ಟು ಬಿದ್ದಿದ್ದರಿಂದ ವಾಜೀದ ಮತ್ತು ದಸ್ತಗಿರ ಇಬ್ಬರೂ ಸೇರಿಕೊಂಡು ನನ್ನ ಉಪಚಾರ ಕುರಿತು ಪಕ್ಕದ ಎ.ಎಸ.ಎಮ್ ಆಸ್ಪತ್ರೆಗೆ ಕರೆದುಕೊಂಡು ಹೋದರು. ನಾನು ಅಲ್ಲಿಂದ ಖಾಸಗಿ ಮೇಟ್ರೊ ಆಸ್ಪತ್ರೆಗೆ ಉಪಚಾರ ಕುರಿತು ಬಂದು ಸೇರಿಕೆಯಾಗಿರುತ್ತೇನೆ. ನನ್ನ ಮೋಟಾರ ಸೈಕಲಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿದ ಮೋಟಾರ ಸೈಕಲ ಸವಾರನ ಹೆಸರು ಗೋತ್ತಾಗಿರುವದಿಲ್ಲ ಆತನನ್ನು ನೋಡಿದ್ದು ಮುಂದೆ ನೋಡಿದಲ್ಲಿ ಗುರ್ತಿಸುತ್ತೇನೆ. ಕಾರಣ ನನ್ನ ಮೋಟಾರ ಸೈಕಲಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿದ ಮೋಟಾರ ಸೈಕಲ ಸವಾರನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸಂಚಾರಿ ಪೊಲೀಸ್‌ ಠಾಣೆ-1 :-  ದಿನಾಂಕ: 14-02-2023 ರಂದು 07:30 ಪಿ.ಎಂ ಕ್ಕೆ ಆದರ್ಶ ಆಸ್ಪತ್ರೆ ಕಲಬುರಗಿ ಯಿಂದ  ಶರಣಯ್ಯ ತಂದೆ ಗುರುಲಿಂಗಯ್ಯ ಮಠ ವಯ: 42 ವರ್ಷ ರವರ ಆರ್.ಟಿ.ಎ ಎಂ.ಎಲ್.ಸಿ ಮಾಹಿತಿ ಬಂದ ಮೇರೆಗೆ ನಾನು ಆಸ್ಪತ್ರೆಗೆ ಭೇಟಿ ನೀಡಿ ಎಂ.ಎಲ್.ಸಿ ಪತ್ರ ವಸೂಲ ಮಾಡಿಕೊಂಡು ಗಾಯಾಳು ಶರಣಯ್ಯ ಮಠ ಇವರಿಗೆ ನೋಡಿ ವಿಚಾರಿಸಲು ಅವರು ದಿನಾಂಕ: 13-02-2023 ರಂದು ಬೆಳಿಗ್ಗೆ ಕಾಯಿಪಲ್ಯೆ ಬೀಜ ತರುವ ಕುರಿತು ತಮ್ಮ ಊರಿನಿಂದ ಗೋಬ್ಬೂರು ( ಬಿ) ಗೆ ಬಂದು ಅಲ್ಲಿಂದ ಬಸ್ಸಿಗೆ ಕಲಬುರಗಿ ಗೆ ಬಂದು ಬೀಜ ಖರಿದಿ ಮಾಡಿಕೊಂಡು ಮರಳಿ ಊರಿಗೆ ಹೋಗುವ ಕುರಿತು ಸಾಯಾಂಕಾಲ ಗೋಬ್ಬೂರು ( ಬಿ ) ಗೆ ಬಂದು ಫಿರ್ಯಾದಿ ತಮ್ಮ ಊರಿಗೆ ಹೋಗುವ ಕುರಿತು ಯಾವುದೇ ವಾಹನ ಸಿಗದೆ ಇದ್ದುದ್ದರಿಂದ ರಸ್ತೆಯ ಬದಿಯಿಂದ ನಡೆದುಕೊಂಡು ಹೋಗುವಾಗ ರಾತ್ರಿ 8:೦೦ ಗಂಟೆ ಸುಮಾರಿಗೆ ಗೋಬ್ಬೂರು ( ಬಿ) ದಿಂದ ಕಾಡನಾಳ ರಸ್ತೆಯಲ್ಲಿ ಬರುವ ಬಸವಣ್ಣ ಕಟ್ಟಿ ಹತ್ತಿರ ರಸ್ತೆಯ ಮೇಲೆ ಯಾವುದೋ ಒಂದು ಮೋಟಾರ್ ಸೈಕಲ್ ಸವಾರನು ಗೋಬ್ಬೂರು ( ಬಿ ) ಕಡೆಯಿಂದ ಮಾಸನಾಳ ತಾಂಡಾ ಕಡೆಗೆ ಹೋಗುವ ಕುರಿತು ತನ್ನ ಮೋಟಾರ್ ಸೈಕಲ್ ಅನ್ನು  ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಫಿರ್ಯಾದಿಯ ಹಿಂದಿನಿಂದ ಬಂದು ಫಿರ್ಯಾದಿಗೆ ಡಿಕ್ಕಿಪಡಿಸಿ ರಸ್ತೆಯ ಮೇಲೆ ಬಿಳಿಸಿ ಭಾರಿಗಾಯಗೊಳಿಸಿ ತನ್ನ ಮೋಟಾರ್ ಸೈಕಲ್ ಸಮೇತ ಓಡಿ ಹೋಗಿದ್ದು ಆತನ ಮೋಟಾರ್ ಸೈಕಲ್ ನಂಬರ ಹಾಗೂ ಆತನಿಗೆ ನೋಡಲು ಆಗಿರುವುದಿಲ್ಲ ಕಾರಣ ಸದರಿ ಯಾವುದೋ ಒಂದು ಮೋಟಾರ್ ಸೈಕಲ್ ಸವಾರನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ವಿಶ್ವವಿದ್ಯಾಲಯ ಪೊಲೀಸ್‌ ಠಾಣೆ :- ದಿನಾಂಕ: 10-11-2022 ರಂದು 12:00 ಗಂಟೆಯಿಂದ ೧.೩೦ ಗಂಟೆ ಮಧ್ಯದ ಅವಧಿಯಲ್ಲಿ ಸದರಿ ಫಿರ್ಯಾದಿಯ  ಪ್ಲಾಟ ನಂ.27 ಆಜಾದಪೂರ ಸರ್ವೇ ನಂ. 16/7 ಆಜಾದಪೂರ ಗ್ರಾಮ ವ್ಯಾಪ್ತಿ ನೇದ್ದರ ಸದರಿ ಆರೋಪಿತರು ಅತೀಕ್ರಮ ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಪ್ಲಾಟದಲ್ಲಿದ್ದ ರೂಮನ್ನು ಕೆಡವಿ ಹಾನಿ ಪಡಿಸಿ ಜೀವ ಬೇದರಿಕೆ ಹಾಕಿರುತ್ತಾರೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸಬ್‌-ಅರ್ಬನ್‌ ಪೊಲೀಸ್‌ ಠಾಣೆ :-ದಿನಾಂಕ: 05-02-2023 ರಂದು ಸಂಜೆ 07:00 ಗಂಟೆಗೆ ಫಿರ್ಯಾದಿಯು ಉದನೂರ ಗ್ರಮದ್ಲ ಜೋಡ ಬಸವೇಶ್ವರ ಜಾತ್ರೆಗೆ ತನ್ನ ಮೋಟಾರು ಸೈಕ್ಲ ಹೀರೊ ಹೊಂಡಾ ಸ್ಪ್ಲೇಂಡರ್ ಸೈಕಲ್ KA 32 ER 1977 ನಲ್ಲಿ ಹೋಗಿದ್ದು ಅದನ್ನು ದೇವಸ್ಥಾನದ ಮುಂದೆ ನಿಲ್ಲಿಸಿ ದೇವರ ದರ್ಷನ ಪಡೆದು ಸಂಜೆ 7:20 ಗಂಟೆಗೆ ಬಂದು ನೋಡಲು ನಾನು ನಿಲ್ಲಿಸಿದ ಜಾಗದಲಿ ಇರಲಿಲ್ಲ ಯಾರೋ ಕಳ್ಳರು ಕಳುವು ಮಾಡಿರುತ್ತಾರೆ ಎಂದು ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಅಶೋಕ ನಗರ ಪೊಲೀಸ್‌ ಠಾಣೆ :- ದಿನಾಂಕ: 14-02-2023 ರಂದು 03:00 ಪಿ.ಎಂಕ್ಕೆ ಫಿರ್ಯಾದಿದಾರರಾದ ಶ್ರೀಮತಿ ಜ್ಯೋತಿ ಗಂಡ ದಿ:ಗಂಗಾಧರ ಇಟಗಾ ವಯ: 40 ವರ್ಷ ಉ: ಟೇಲರ ಕೆಲಸ ಜಾ:ಎಸ್.ಸಿ(ಹೊಲೆಯ) ಸಾ|| ಹೈಕೊರ್ಟ ರೋಡ ಅಕ್ಕಮಹಾದೇವಿ ಕಾಲೋನಿ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಕನ್ನಡ ಭಾಷೆಯಲ್ಲಿ ಗಣಕಿಕೃತ ಮಾಡಿಕೊಂಡು ಬಂದ ಒಂದು ಫಿರ್ಯಾದಿ ಅರ್ಜಿಯನ್ನು ಸಲ್ಲಿಸಿದ್ದು ಸದರಿ ಅರ್ಜಿಯ ಸಾರಾಂಶವೆನೆಂದರೆ, ಈ ಹಿಂದೆ 2021 ರಲ್ಲಿ ನಮ್ಮ ಪತಿ ಹೋಮ ಗಾರ್ಡ ಕೆಲಸ ಮಾಡುವ ಸಂದರ್ಭದಲ್ಲಿ ದೀಪಕ್ ಮಿಶ್ರಾ ಎಂಬ ವ್ಯಕ್ತಿ ನಾವು ಇದ್ದ ಅಪಾರ್ಟಮೆಂಟಲ್ಲಿ ವಾಸವಾಗಿದ್ದು, ನಮಗೆ ಪರಿಚಯವಾದ ಕಾರಣ ಅವರು ಕೆ.ವಿ.ಆರ ಶುಗರ ಫ್ಯಾಕ್ಟರಿಯಲ್ಲಿ ಚಿಣಮಗೇರಿ ಹತ್ತಿರ ಇರುವ ಮ್ಯಾನೇಜರ ಆಗಿ ಕೆಲಸ ಮಾಡುತ್ತೇನೆ ಅಂತಾ ತಿಳಿಸಿದ್ದು ಸ್ವಲ್ಪ ದಿನ ಕಳೆದ ನಂತರ ನನ್ನ ಪತಿಗೆ ಶುಗರ ಫ್ಯಾಕ್ಟರಿಯಲ್ಲಿ ಮ್ಯಾನೇಜರ ಕೆಲಸ ಹಚ್ಚುತ್ತೇನೆ ಅಂತ ನಮ್ಮಿಂದ 2021 ರಿಂದ 2022 ಮೇ ತನಕ ಅವರು ಕೇಳಿದಾಗ ಹಣ ದೀಪಕ ಮಿಶ್ರಾ ಮೊಬೈಲ್ ನಂ.9454652495 ನೇದ್ದಕ್ಕೆ ಫೋನ ಪೇ, ಗೂಗಲ್ ಪೇ, ಪೇ ಟಿಎಂ ಮೂಲಕ ಹಣ ಹಾಕಿದ್ದು ಒಟ್ಟು ಇಲ್ಲಿಯವರೆಗೆ 11,00,000/- ಹಣ ಹಾಕಿದ್ದು ನೌಕರಿ ಕೊಡದೆ ಹಣನೂ ಕೊಡದೆ ಮನೆ ಖಾಲಿ ಮಾಡಿಕೊಂಡು ಹೋಗಿರುತ್ತಾನೆ. ನನ್ನ ಪತಿ ಸಪ್ಟೆಂಬರ 01-2022 ರಂದು ಅನಾರೋಗ್ಯದಿಂದ ಮರಣ ಹೊಂದಿದ್ದು ಸದ್ಯ ನನಗೆ ಹಿಂದೆ ಮುಂದೆ ಯಾರು ಇರುವುದಿಲ್ಲಾ. ಮನೆ ಬಾಡಿಗೆ ಹಾಗೂ ಮಕ್ಕಳ ಶಾಲಾ ಶುಲ್ಕ ಕಟ್ಟುವುದಕ್ಕಾಗಿ ತೊಂದರೆಯಾಗುತ್ತಿದ್ದು ಮಾನ್ಯರವರು ನನಗೆ ಮೋಸ ಮಾಡಿದ ವ್ಯಕ್ತಿಯನ್ನು ಪತ್ತೆ ಹಚ್ಚಿ ನನ್ನ ಹಣ ನನಗೆ ವಾಪಸ ಕೊಡಿಸಬೇಕೆಂದು ಅಂತ ಇತ್ಯಾದಿಯಾಗಿ ಸಲ್ಲಿಸಿದ ಫಿರ್ಯಾದಿ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 16-02-2023 12:34 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080