ಅಭಿಪ್ರಾಯ / ಸಲಹೆಗಳು

ಸಂಚಾರಿ ಪೊಲೀಸ್‌ ಠಾಣೆ-2 :- ದಿನಾಂಕ: 14/01/2023 ರಂದು ಬೆಳಿಗ್ಗೆ 06:30 ಗಂಟೆಗೆ ಶ್ರೀಮತಿ. ಶೋಭಾವತಿ ಗಂಡ ನರಸಪ್ಪಾ ಮೇತ್ರೆ ವಯ: 55 ವರ್ಷ ಜಾ: ಕುರುಬ ಉ: ಕೂಲಿಕೆಲಸ ಸಾ: ಉಜನಿ, ತಾ: ಔರಾಧ[ಬಿ], ಜಿ: ಬೀದರ ಇವರು ಠಾಣೆಗೆ ಹಾಜರಾಗಿ ಒಂದು ಹೇಳಿಕೆ ಫಿರ್ಯಾಧಿ ನೀಡಿದ್ದು ಸಾರಂಶವೆನೆಂದರೆ, ನಿನ್ನೆ ದಿನಾಂಕ-13/01/2023 ರಂದು ರಾತ್ರಿ 08:30 ಗಂಟೆ ನಂತರ ನಮ್ಮೋರಿನ ಈರೇಶ ತಂದೆ ಗಾಳೆಪ್ಪಾ ಕುಂಬಾರ ಮತ್ತು ಮುಕ್ಕದಮನಾದ ಸುರೇಶ ತಂದೆ ಕಾಶಿನಾಥ ಚವ್ಹಾಣ ಇವರು ನನಗೆ ಮತ್ತು ನಮ್ಮ ತಮ್ಮ ಗಣಪತಿ ಮೇತ್ರೆ ಇವರಿಗೆ ಪೋನ್ ಮಾಡಿ ತಿಳಿಸಿದೆನೆಂದರೆ ಅವರಾಧ[ಬಿ] ಸಿಮೇಯ ಅಳ್ಳಿಹಳ್ಳದ ಹತ್ತಿರ ಕಬ್ಬು ಕಡೆಯುವ ಕೆಲಸ ಮುಗಿಸಿಕೊಂಡು ಮರಳಿ ಜೋಪಡಿ ಕಡೆಗೆ ತೋಗರಿ ನಾಡು ಬೋರ್ಡ ಹತ್ತಿರ ತಾವು ಮತ್ತು ನರಸಪ್ಪಾ ಎಲ್ಲರೂ ರೋಡ ದಾಟುವಾಗ ಸಾಯಂಕಾಲ 06:45 ಗಂಟೆ ಆಗಿರಬಹುದು ಇದೆ ವೇಳೆಗೆ ಹುಮನಾಬಾದ ರೋಡಿನ ಕಡೆಯಿಂದ ಒಂದು ಕಿಯಾ ಕಾರ ನಂ ಕೆಎ-22 ಎಮ್.ಸಿ-2394 ನೇದ್ದರ ಚಾಲಕನು ಭಾರಿ ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದವನೆ ಆಕಡೆ ಈಕಡೆ ಮಾಡುತ್ತಾ ತನ್ನ ಮುಂದೆ ಹೋಗುವ ಯಾವುದೋ ಒಂದು ವಾಹನಕ್ಕೆ ಓವರ ಟೆಕೆ ಮಾಡಿ ಬಂದವನೆ ನರಸಪ್ಪಾನಿಗೆ [ನನ್ನ ಗಂಡನಿಗೆ] ಡಿಕ್ಕಿ ಹೊಡೆದ ಪರಿಣಾಮ ಮುಂದಕ್ಕೆ ಎಳದುಕೊಂಡು ಹೋಗಿ ಬಿದಿದ್ದರಿಂದ ತೆಲೆಯ ಮೇಲೆ ರಕ್ತಗಾಯ, ಮುಖಕ್ಕೆ.ಮೂಗಿಗೆ.ಎಡಭುಜಕ್ಕೆ. ಎಡಗೈ ಮತ್ತು ಬಲಭುಜಕ್ಕೆ ಹಾಗೂ ಎಡಗಾಲಿನ ಹಿಂಬಡಿಯ ಮೇಲ್ಬಾಗದಲ್ಲಿ ರಕ್ತಗಾಯ ಮತ್ತು ಭಾರಿಗಾಯವಾಗಿ ರಕ್ತ ಸ್ರಾವವಾಗಿದ್ದು ಕಾರ ಚಾಲಕನಿಗೆ ಹಿಡಿದು ವಿಚಾರಿಸಿದ್ದು ಅಶೋಕ ತಂದೆ ಚಂದು ನಾಯಕ ಮು: ಬಸವ ಕುಡಚಿ ಬೆಳಗಾಂವ್ ಅಂತಾ ತಿಳಿಸಿದ್ದು ಇದೆ ಕಾರಿನಲ್ಲಿ ಕಲಬುರಗಿ ಸರಕಾರಿ ಆಸ್ಪತ್ರೆಗೆ ತರುವಾಗ ಆಸ್ಪತ್ರೆಯ ಹತ್ತಿರ ಈಗ ರಾತ್ರಿ 07:20 ಗಂಟೆ ಸುಮಾರಿಗೆ ಮೃತ ಪಟ್ಟಿರುತ್ತಾರೆ ಅಂತಾ ತಿಳಿಸಿದಕ್ಕೆ ನಾನು ಮತ್ತು ನನ್ನ ತಮ್ಮ ಗಣಪತಿ ಮೇತ್ರೆ ಇಬ್ಬರೂ ಊರಿನಿಂದ ಕಲಬುರಗಿ ಸರಕಾರಿ ಆಸ್ಪತ್ರೆಗೆ ಮದ್ಯ ರಾತ್ರಿ 02:00 ಗಂಟೆ ಸುಮಾರಿಗೆ ಬಂದು ಆಸ್ಪತ್ರೆಯಲ್ಲಿರುವ ಗಂಡನಿಗೆ ನೋಡಲಾಗಿ ಈ ಮೇಲಿನಂತೆ ಗಾಯಗಳಾಗಿ ಮೃತ ಪಟ್ಟಿದ್ದು ಅಲ್ಲೆ ಇರುವ ಗಂಡನ ಜೋತೆ ಕೆಲಸ ಮಾಡುವ ಈರೇಶ ಕುಂಬಾರ ಹಾಗೂ ಮುಕ್ಕದಮ ಸುರೇಶ ಚವ್ಹಾಣ, ರಾಮಣ್ಣಾ ಪೆದೆ, ಸಂಜೀವ ನರಲೆ ಇವರೆಲ್ಲರಿಗೂ ವಿಚಾರಿಸಲು ಈ ಮೇಲಿನ ವಿಷಯವನ್ನು ತಿಳಿಸಿರುತ್ತಾರೆ, ಮತ್ತು ಆಸ್ಪತ್ರೆಯ ಹತ್ತಿರದಿಂದ ಕಾರ ಚಾಲಕ ಅಶೋಕ ನಾಯಕ ಈತನು ತಪ್ಪಿಸಿಕೊಂಡು ಓಡಿ ಹೋಗಿರುತ್ತಾನೆ ಈತನ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕೆಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸಂಚಾರಿ ಪೊಲೀಸ್‌ ಠಾಣೆ-2 :-  ದಿನಾಂಕ: 14/01/2023 ರಂದು ಮದ್ಯಾಹ್ನ 12:30 ಗಂಟೆಗೆ ಶ್ರೀ.  ರಾಜಕುಮಾರ ತಂದೆ ಗುರುನಾಥ ಸನ್ನಧ ಸಾಃ ಮಾದನಹಿಪ್ಪರಗಾ ಇವರು ಠಾಣೆಗೆ ಹಾಜರಾಗಿ ಶ್ರೀಕಾಂತ ತಂದೆ ಲಿಂಗಪ್ಪಾ ಇವರ ಒಂದು ಕನ್ನಡದಲ್ಲಿ ಟೈಪ್ ಮಾಡಿಸಿ ಸಹಿ ಮಾಡಿದ ಫಿರ್ಯಾದಿ ಅರ್ಜಿಯನ್ನು ತಂದು ಹಾಜರು ಪಡಿಸಿದ್ದು ಸದರಿ ಫಿರ್ಯಾದಿಯ ಸಾರಂಶವೆನೆಂದರೆ, ಫಿರ್ಯಾದಿ ಹಾಗು ಸಂಜೀವ ತಂದೆ ಬಾಸು ಚವ್ಹಾಣ ಇಬ್ಬರು ಸುಪರವೈಜರ ಕೆಲಸಕ್ಕೆ ಮೋಟರ ಸೈಕಲ ನಂ. ಕೆಎ-33 ಕ್ಯೂ-0333 ನೇದ್ದರ ಮೇಲೆ ಕಲಬುರಗಿ ಕಡೆಯಿಂದ ಆಲಗೂಡ ಗ್ರಾಮಕ್ಕೆ ಹೋಗುವಾಗ ಬೆಳಿಗ್ಗೆ 10:45 ಗಂಟೆ ಸುಮಾರಿಗೆ ಆಲಗೂಡ ಕ್ರಾಸ ಹತ್ತೀರ ಒಂದು ಪಲ್ಸರ ಮೋಟರ ಸೈಕಲ ನಂ. ಕೆಎ 02 ಕೆ.ಸಿ 4547 ನೇದ್ದರ ಚಾಲಕನು ಮಹಾಗಾಂವ ಕ್ರಾಸ ಕಡೆಯಿಂದ ಅವರಾದ(ಬಿ) ಕಡೆಗೆ ಹೋಗುವ ಕುರಿತು ತನ್ನ ಮೋಟರ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಎದುರಿನಿಂದ ಬಂದು ಫಿರ್ಯಾದಿ ಮೋಟರ ಸೈಕಲಗೆ ಡಿಕ್ಕಿ ಪಡಿಸಿ ಫಿರ್ಯಾದಿಗೆ ಭಾರಿಗಾಯಗೊಳಿಸಿ ಹಿಂದೆ ಕುಳಿತ ಸಂಜು ಚವ್ಹಾಣ ಇವರಿಗು ಸಹ ಗಾಯಗೊಳಿಸಿ ತನ್ನ ಮೋಟರ ಸೈಕಲ ಸಮೇತ ಓಡಿ ಹೋಗಿದ್ದು, ಕಾರಣ ಸದರಿ ಸವಾರನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಫಿರ್ಯಾದಿ ಕೊಟ್ಟ ಅರ್ಜಿಯ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸಂಚಾರಿ ಪೊಲೀಸ್‌ ಠಾಣೆ-1 :-  ದಿನಾಂಕ: 14-01-2023 ರಂದು ಬೆಳಿಗ್ಗೆ 4:45 ಗಂಟೆಗೆ ಖಾಸಗಿ ಕಾಮರೆಡ್ಡಿ ಆಸ್ಪತ್ರೆಯ ಸಿಬ್ಬಂದಿಯವರು ರವರು ಠಾಣೆಗೆ ಪೋನ ಮಾಡಿ ಮುದಾಶೀರ ಯಾಸೀನ ಇವರು ರಸ್ತೆ ಅಪಘಾತ ಹೊಂದಿ ಉಪಚಾರ ಕುರಿತು ಬಂದು ಸೇರಿಕೆಯಾಗಿರುತ್ತಾರೆ ಅಂತಾ ತಿಳಿಸಿದ್ದರಿಂದ ನಾನು ಆಸ್ಪತ್ರೆಗೆ ಬೇಟಿಕೊಟ್ಟು ಗಾಯಾಳು ಮುದಾಶೀರ ಯಾಸೀನ ಇವರನ್ನು ವಿಚಾರಿಸಲು ಅವರು ಕೊಟ್ಟ ಹೇಳಿಕೆ ಸಾರಂಶವೆನೆಂದರೆ ದಿನಾಂಕ: 13-01-2023 ರಂದು ರಾತ್ರಿ ಅಂದಾಜು 8:30 ಗಂಟೆ ಸುಮಾರಿಗೆ ಎಸ್.ವಿ.ಪಿ ಸರ್ಕಲ ಹತ್ತೀರ ನನ್ನ ಮತ್ತು ನನ್ನ ಗೆಳೆಯ ಸೈಯದ ಉಮರ ತಂದೆ ಸೈಯದ ಇಬ್ರಾಹಿಂ ಚಿತ್ತಾಪೂರಿ ಇಬ್ಬರ ಕೆಲಸ ಇರುವದರಿಂದ ನಾನು ಚಲಾಯಿಸುತ್ತೀರುವ ಮೋಟಾರ ಸೈಕಲ ನಂಬರ ಕೆಎ-32/ಹೆಚ್.ಎ-9904 ನೇದ್ದರ ಮೇಲೆ ಹೋಗಿ ನಮ್ಮ ಕೆಲಸ ಮುಗಿಸಿಕೊಂಡು ವಾಪಸ್ಸ ನಮ್ಮ ಮನೆಯ ಕಡೆಗೆ ಮೋಟಾರ ಸೈಕಲ ಚಲಾಯಿಸಿಕೊಂಡು ಎಸ್.ವಿ.ಪಿ ಸರ್ಕಲದಿಂದ ಜಗತ ಸರ್ಕಲ ಮುಖಾಂತರವಾಗಿ ಸುಪರ ಮಾರ್ಕೆಟ ಕಡೆಗೆ ಹೋಗುತ್ತೀರುವಾಗ ದಾರಿ ಮದ್ಯ ಸಿಟಿ ಸೆಂಟರ ಮಹಲ್ ಎದುರಿನ ರೋಡ ಮೇಲೆ ಹಿಂದಿನಿಂದ ಆಟೋರಿಕ್ಷಾ ನಂಬರ ಕೆಎ-32, ಎಎ-3515 ನೇದ್ದರ ಚಾಲಕನು ತನ್ನ ಆಟೋರಿಕ್ಷಾ ವಾಹನವನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಮೋಟಾರ ಸೈಕಲಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿ ನನಗೆ ಭಾರಿಗಾಯಗೊಳಿಸಿ ಓಡಿ ಹೋಗಿದ್ದು ಆತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ವಿಶ್ವವಿದ್ಯಾಲಯ ಪೊಲೀಸ್‌ ಠಾಣೆ :- ದಿನಾಂಕ: 14/01/2023 ರಂದು ಬೆಳಗಿನ ಜಾವ 03:05 ಗಂಟೆಯಿಂದ 05:25 ಗಂಟೆಯ ಅವದಿಯಲ್ಲಿ ಫಿರ್ಯಾದಿಯಲ್ಲಿ ಎನ.ಪಿ.ಎಸ್. ಶಾಲೆಯ ಬಾಗಿಲು ಮತ್ತು ಕಿಟಕಿ ಮುರಿದು ಒಳಗೆ ಪ್ರವೇಶ ಅಲಮಾರದಲ್ಲಿದ್ದ ನಗದು ಹಣ 10,000/-ರೂ ಮಾಡಿ ಕಳ್ಳತನ ಮಾಡಿಕೊಂಡು ಹೋಗಿದ್ದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಫಿರ್ಯಾದಿ ಕೊಟ್ಟ ಹೇಳಿಕೆ ಫಿರ್ಯಾದಿ ಕೊಟ್ಟ ಹೇಳಿಕೆ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಫರಹತಾಬಾದ ಪೊಲೀಸ್‌ ಠಾಣೆ :- ದಿನಾಂಕ:14:01:2023 ರಂದು ಸಾಯಂಕಾಲ 5:30 ಪಿ.ಎಮ್ ಕ್ಕೆ ಬಿ.ಎಮ್. ಕೊಟ್ರೇಶ್ ಮುಖ್ಯ ಅಧೀಕ್ಷಕರು (ಪ್ರಭಾರ) ಕೇಂದ್ರ ಕಾರಾಗೃಹ ಕಲಬುರಗಿ ರವರು ತಮ್ಮ ಕಾರಾಗೃಹದ ಸಿಬ್ಬಂದಿಯಾದ ಶ್ರೀ ಪುಂಡಲಿಕ ಹಳ್ಳೂರ ವಾರ್ಡರ ರವರು ಮೂಲಕ ಕಳುಹಿಸಿದ ದೂರು ಸಲ್ಲಿಸಿದ್ದರ ಸಾರಾಂಶವೇನೆಂರೆ, ದಿನಾಂಕ: 14-01-2023 ರಂದು ಬೆಳಿಗ್ಗೆ 07:45 ಗಂಟೆಗೆ ಕಾರಾಗೃಹದ ಮುಂಭಾಗದಿಂದ ಕೆಲ ಪಟ್ಟಭದ್ರ ಹಿತಾಶಕ್ತಿಗಳು ಪ್ಲಾಸ್ಟಿಕ್ನಿಂದ ಭದ್ರವಾಗಿ ಸುತ್ತಿದ 2 ಸಂಖ್ಯೆ ಪ್ಯಾಕೆಟ್ಗಳನ್ನು ಕಾರಾಗೃಹದ ಒಳಗೆ ಎಸೆದಿದ್ದು, ಸದರಿ ಪ್ಯಾಕೆಟಗಳನ್ನು ಕರ್ತವ್ಯ ನಿರತ ಸಿಬ್ಬಂದಿಗಳು ವಶಪಡಿಸಿಕೊಂಡು ವರದಿ ನೀಡಿರುತ್ತಾರೆ. ಕೂಡಲೇ ಸಿಸಿಟಿವಿ ಫೂಟೇಜ್ ಅನ್ನು ಪರಿಶೀಲಿಸಲಾಗಿ, ಇಬ್ಬರೂ ಅನಾಮಿಕರು ಬೈಕ್ ಮೇಲೆ ಬಂದು ಕಾರಾಗೃಹದ ಮುಂಭಾಗದಲ್ಲಿ (ಮುಖ್ಯ ದ್ವಾರದ ಎಡಬದಿಯಲ್ಲಿ) ಬೈಕ್ ನಿಲ್ಲಿಸಿ ಎರಡು ಬಾರಿ ಸದರಿ ಪ್ಯಾಕೆಟ್ಗಳನ್ನು ಕಾರಾಗೃಹದ ಒಳಗಡೆ ಎಸೆದಿರುವ ಬಗ್ಗೆ ಸಿಸಿಟಿವಿ ದೃಶ್ಯಾವಳಿಯಲ್ಲಿ ಕಂಡು ಬಂದಿರುತ್ತದೆ. ಸದರಿ ಪ್ಯಾಕೇಟ್ಗಳನ್ನು ಪರಿಶೀಲಿಸಲಾಗಿ ಈ ಕೆಳಕಂಡ ನಿಷೇಧಿತ ವಸ್ತುಗಳು ದೊರೆತಿರುತ್ತವೆ. ಕಾರಾಗೃಹದ ಒಳಗೆ ದೊರೆತ್ತಿರುವ 02 ಸಂಖ್ಯೆ ಪ್ಲಾಸ್ಟಿಕ್ ಸುತ್ತಿರುವ ಕವರಲ್ಲಿರುವ ನಿಷೇಧಿತ ವಸ್ತುಗಳು ಈ ಕೆಳಗಿನಂತಿದೆ.

1)      1 ಸಂಖ್ಯೆ ನೋಕಿಯಾ ಬೇಸಿಕ್ ಸೆಟ್ ಮೊಬೈಲ್ ವಿಥ್ ಬ್ಯಾಟರಿ

   ME  No. 1) 353155119835127

2)      2 ಸಂಖ್ಯೆ  ಕಂಪನಿಯ ಮೊಬೈಲ್ ಬ್ಯಾಟರಿಗಳು

3)      04 ಸಂಖ್ಯೆ ಚಾರ್ಜಿಂಗ ಕೇಬಲ್ಗಳು

4)      01 ಸಂಖ್ಯೆ ಏರ್ಟೆಲ್ ಸಿಮ್ ಕಾರ್ಡ

No. 0922 D 899100090782 3180466 ಗೆ ಮುಂದುವರೆದು, ಕರ್ನಾಟಕ ಕಾರಾಗೃಹಗಳ (ತಿದ್ದುಪಡಿ) ಅಧಿನಿಯಮ-2022 ರ ಕಲಂ 42 ರ ಪ್ರಕಾರ ಇವುಗಳು ನಿಷೇಧಿತ ವಸ್ತುಗಳಾಗಿದ್ದು, ದಿನಾಂಕ: 14-01-2023 ರಂದು ಸಮಯ 07:45 ರಲ್ಲಿ ಇಬ್ಬರೂ ಅನಾಮಿಕರು ಬೈಕ್ನಲ್ಲಿ ಬಂದು ಕಾರಾಗೃಹದ ಮುಂಭಾಗದಿಂದ ಈ ಮೇಲ್ಕಂಡ ನಿಷೇಧಿತ ವಸ್ತುಗಳನ್ನು ಕಾರಾಗೃಹದ ಒಳಗೆ ಎಸೆದಿರುವ ಬಗ್ಗೆ ಪ್ರಕರಣವನ್ನು ದಾಖಲಿಸಿಕೊಂಡು ಬೈಕಲ್ಲಿ ಬಂದ ವ್ಯಕ್ತಿಗಳ ಬಗ್ಗೆ, ಬೈಕ್ ರೆಜಿಸ್ಟ್ರೇಷನ್ ಸಂಖ್ಯೆ ಬಗ್ಗೆ, ನಿಷೇಧಿತ ವಸ್ತುಗಳಾದ ಮೊಬೈಲ್ ಫೋನ್ & ಸಿಮ್ ಕಾರ್ಡಗಳು ಯಾರ ಹೆಸರಿನಲ್ಲಿವೆ ಎಂಬುದರ ಬಗ್ಗೆ ತನಿಖೆಯನ್ನು ನಡೆಸಿ, ತಪ್ಪತಸ್ಥರ ವಿರುದ್ಧ ಕರ್ನಾಟಕ ಕಾರಾಗೃಹಗಳ (ತಿದ್ದುಪಡಿ) ಅಧಿನಿಯಮ 2022 ರ ಕಲಂ 42 ಹಾಗೂ ಭಾ.ದಂ.ಸಂ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಬೇಕೆಂದು ಸಲ್ಲಿಸಿದ ದೂರಿನ ಮೇಲಿಂದ ಗನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

  

 

ಸಬ್-ಅರ್ಬನ್‌ ಪೊಲೀಸ್‌ ಠಾಣೆ :- ದಿನಾಂಕಃ 14/01/2023 ರಂದು ಪಿಐ ಸಾಹೇಬರ ಆದೇಶದಂತೆ ಏರಿಯಾದಲ್ಲಿ ಪೆಟ್ರೋಲಿಂಗ್ ಕರ್ತವ್ಯದಲ್ಲಿದ್ದಾಗ ಯಾರೋ ಒಬ್ಬರು ಹೈಕೋರ್ಟ ಹಿಂದುಗಡೆ ಉದನೂರು ಸಿಮಾಂತರದಲ್ಲಿ ಕೊಟನೂರು  ರೋಡಿಗೆ ಒಂದು ಏರ್ ಪಿಸ್ತೂಲ್ ಬಿಟ್ಟಿದ್ದಾರೆಂದು ತಿಳಿಸಿದಾಗ ಹೋಗಿ ನೋಡಿ ಖಚಿತ ಪಡಿಸಿಕೊಂಡು ಅದನ್ನ ಪಂಚರ ಸಮಕ್ಷಮದಲ್ಲಿ ವಶಪಡಿಸಿಕೊಂಡು ದೂರು ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 16-01-2023 01:51 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080