ಅಭಿಪ್ರಾಯ / ಸಲಹೆಗಳು

ಸಂಚಾರಿ ಪೊಲೀಸ್‌ ಠಾಣೆ – 01 :- ದಿನಾಂಕ 13-12-2022 ರಂದು ರಾತ್ರಿ 9-45 ಗಂಟೆಗೆ ಶ್ರೀ ಮಲ್ಲಿಕಾರ್ಜುನ ತಂದೆ ಲಕ್ಕಪ್ಪಾ ಹಾಲು ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಗಣಕಿಕೃತ ಮಾಡಿದ ದೂರು ಅರ್ಜಿಯನ್ನು ಹಾಜರಪಡಿಸಿದ್ದರ ಸಾರಂಶವೆನೆಂದರೆ ನನ್ನ ತಂದೆ ತಾಯಿಯವರೆಗೆ ನಾವು ಮೂರು ಜನ ಗಂಡು ಮಕ್ಕಳಿದ್ದು ನನ್ನ ಹಿರಿಯ ಅಣ್ಣ ಪರಶುರಾಮ ಈಗ ಮೂರು ತಿಂಗಳಿನಿಂದ ಬೆಂಗಳೂರಿನಿಂದ ನಮ್ಮೂರಿಗೆ ಬಂದು ಕಲಬುರಗಿಯಲ್ಲಿ ಪೆಟಿಂಗ ಕೆಲಸ ಮಾಡಿಕೊಂಡು ಇದ್ದು ದಿನಾಲು ಬಸ್ಸ ಮೂಲಕ ಕಲಬುರಗಿಗೆ ಬಂದು ಹೋಗುವದು ಮಾಡುತ್ತಿದ್ದನ್ನು. ನನ್ನ ಅತ್ತಿಗೆ ಅನೀತಾ ಇವರು ಬೆಂಗಳೂರಿನಲ್ಲಿ ವಾಸವಿರುತ್ತಾರೆ.  ದಿನಾಂಕ 13.12.2022 ರಂದು ಬೆಳಿಗ್ಗೆ ನಾನು ಮತ್ತ ನನ್ನ ತಮ್ಮ ಪೀರಪ್ಪಾ ಇಬ್ಬರೂ ಮನೆಯಲ್ಲಿರುವಾಗ ನನ್ನ ಅಣ್ಣ ಪರಶುರಾಮ ಇವರು ದಿನನಿತ್ಯದಂತೆ ಪೆಟಿಂಗ ಕೆಲಸ ಕುರಿತು ಕಲಬುರಗಿಗೆ ಹೋಗಿ ಬರುತ್ತೇನೆ ಅಂತಾ ಮನೆಯಿಂದ ಹೋದನು. ರಾತ್ರಿ ನಾನು ಮನೆಯಲ್ಲಿರುವಾಗ ನಮ್ಮ ಓಣಿಯ ರಮೇಶ ತಂದೆ ಮರೇಪ್ಪಾ ಅಕ್ಕಿ ಇವರು ನನಗೆ ಪೋನ ಮಾಡಿ ತಿಳಿಸಿದ್ದೆನೆಂದರೆ ನಾನು ಪೆಟಿಂಗ ಕೆಲಸ ಕುರಿತು ಕಲಬುರಗಿಗೆ ಬಂದು ವಾಪಸ್ಸ ಪೇಠ ಫಿರೋಜಾಬಾದ ಗ್ರಾಮಕ್ಕೆ ಬರುವ ಕುರಿತು ಬಸ್ಸಿನಲ್ಲಿ ಕುಳಿತಿದ್ದೆ ನಿಮ್ಮ ಅಣ್ಣ ಪರಶುರಾಮ ಇವರು ಕೂಡಾ ಅದೇ ಬಸ್ಸಿನಲ್ಲಿ ಕುಳಿತು ಇಬ್ಬರೂ ಫಿರೋಜಾಬಾದ ದರ್ಗಾಕ್ರಾಸಗೆ ಬಸ್ಸಿನಿಂದ ಇಬ್ಬರೂ ಇಳಿದೆವು. ಫೀರೋಜಾಬಾದ ದರ್ಗಾ ಕ್ರಾಸ ಹತ್ತೀರ ನನಗೆ ಪರಿಚಯದವರು ಸಿಕಿದ್ದರಿಂದ ಅವರೊಂದಿಗೆ ನಾನು ಮಾತನಾಡುತ್ತಾ ಇರುವಾಗ ನಿಮ್ಮ ಅಣ್ಣ ಊರ ಕಡೆಗೆ ನಮ್ಮ ಮುಂದಿನಿಂದ ಹೋಗುತ್ತಿದ್ದನ್ನು. ಅವರ ಹಿಂದಿನಿಂದ ನಾನು ನಡೆದುಕೊಂಡು ರಾಷ್ಟ್ರೀಯ ಹೆದ್ದಾರಿ-50 ರ ಮೇಲೆ ಪೇಠ ಫೀರೋಜಾಬಾದ ಗ್ರಾಮದ ಕಡೆಗೆ ಬರುವಾಗ ಫಿರೋಜಾಬಾದ ಸಿಮಾಂತರದ ರೆಹಮಾನ ಪಟೇಲ ಇವರ ಹೊಲದ ಹತ್ತೀರ ನನ್ನ ಮುಂದುಗಡೆ ಹೋಗುತ್ತೀರುವ ನಿಮ್ಮ ಅಣ್ಣನಿಗೆ ಯಾವುದೋ ಒಂದು ಕಾರು ಡಿಕ್ಕಿಪಡಿಸಿ ಅಪಘಾತ ಮಾಡಿದ್ದರಿಂದ ನಿಮ್ಮ ಅಣ್ಣ ಕೆಳಗಡೆ ಬಿದ್ದಾಗ ನಾನು ಓಡಿ ಹೋಗಿ ನೋಡಲು ನಿಮ್ಮ ಅಣ್ಣನಿಗೆ ಭಾರಿ ಪೆಟ್ಟು ಬಿದ್ದು ರಕ್ತ ಸ್ರಾವವಾಗಿ ಅಪಘಾತ ಸ್ಥಳದಲ್ಲಿ ಮೃತಪಟ್ಟಿದ್ದ. ಆತನಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿದ ಕಾರ ವಾಹನ ಯಾವ ಕಡೆಯಿಂದ ಬಂದು ಯಾವ ಕಡೆಗೆ ಹೋದ ಬಗ್ಗೆ ಮತ್ತು ಅದರ ನಂಬರ ನನಗೆ ಗೋತ್ತಾಗಿರುವದಿಲ್ಲ. ಸದರಿ ಘಟನೆ ಜರುಗಿದಾಗ ಸಾಯಂಕಾಲ ಅಂದಾಜು 7-30 ಗಂಟೆ ಸಮಯವಾಗಿತ್ತು. ಅಂತಾ ತಿಳಿಸಿದ್ದರಿಂದ ನಾನು ಮತ್ತು ನಮ್ಮೂರಿನವರು ಅಪಘಾತ ಸ್ಥಳಕ್ಕೆ ಬಂದು ನನ್ನ ಅಣ್ಣ ಪರಶುರಾಮ ಇವರಿಗೆ ನೋಡಲು ಅವರ ಎಡ ಹುಬ್ಬಿನ ಹತ್ತೀರ ಭಾರಿ ರಕ್ತಗಾಯ ತೆಲೆಯ ಹಿಂದುಗಡೆ ಭಾರಿ ರಕ್ತಗಾಯ, ಎಡಗೈ ಮುಂಗೈ ಹತ್ತೀರ ಭಾರಿ ರಕ್ತಗಾಯ, ಬಲಗೈ ಬುಜಕ್ಕೆ ಭಾರಿ ಒಳಪೆಟ್ಟು ಬಲಗಾಲು ರಿಸ್ಟ ಹತ್ತಿರ ಭಾರಿ ಗುಪ್ತಪೆಟ್ಟು ಎಡಗಾಲು ಹಿಮ್ಮಡಿಗೆ ರಕ್ತಗಾಯವಾಗಿತ್ತು. ಹೈ ವೇ ಪೆಟ್ರೊಲಿಂಗ ಪೊಲೀಸನವರು ಅಪಘಾತ ಸ್ಥಳಕ್ಕೆ ಬಂದು ನೋಡಿ ಅಂಬುಲೇನ್ಸ ವಾಹನ ಬಂದಾಗ ನನ್ನ ಅಣ್ಣನ ಶವದ ಸುರಕ್ಷತೆಗಾಗಿ ಕಲಬುರಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ತಗೆದುಕೊಂಡು ಹೋಗಲು ತಿಳಿಸಿದ್ದರಿಂದ ನಾನು ನನ್ನ ಅಣ್ಣನ ಶವವನ್ನು ಸರ್ಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿರುತ್ತೆನೆ. ನನ್ನ ಅಣ್ಣನಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿದ ಕಾರ ನಂಬರ ಮತ್ತು ಅದರ ಚಾಲಕನ ಹೆಸರು ವಿಳಾಸ ಗೋತ್ತಾಗಿರುವದಿಲ್ಲ. ಯಾವುದೋ ಒಂದು ಕಾರ ಚಾಲಕನು ತನ್ನ ಕಾರನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು ಹೋಗುತ್ತೀರುವ ನನ್ನ ಅಣ್ಣ ಪರಶುರಾಮ ಇವರಿಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಅವರಿಗೆ ಭಾರಿಗಾಯಗೊಳಿಸಿ ತನ್ನ ಕಾರ ಸಮೇತ ಓಡಿ ಹೋಗಿದ್ದು ನನ್ನ ಅಣ್ಣ ಪರಶುರಾಮ ಇತನು ಭಾರಿಗಾಯದಿಂದ ಅಪಘಾತ ಸ್ಥಳದಲ್ಲಿ ಮೃತ ಪಟ್ಟಿದ್ದು ಯಾವುದೋ ಒಂದು ಕಾರ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಫಿರ್ಯಾದಿ ಕೊಟ್ಟ ಹೇಳಿಕೆ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸಂಚಾರಿ ಪೊಲೀಸ್‌ ಠಾಣೆ – 01 :- ದಿನಾಂಕ 13-12-2022 ರಂದು ಬೆಳಿಗ್ಗೆ 10-15 ಗಂಟೆಗೆ ಖಾಸಗಿ ಧನ್ವಂತ್ರಿ  ಆಸ್ಪತ್ರೆಯ ಸಿಬ್ಬಂದಿಯವರು ಠಾಣೆಗೆ ಪೋನ ಮಾಡಿ ಸ್ನೇಹಾ ಇವರು ರಸ್ತೆ ಅಪಘಾತ ಹೊಂದಿ ಉಪಚಾರ ಕುರಿತು ಬಂದು ಸೇರಿಕೆಯಾಗಿರುತ್ತಾರೆ ಅಂತಾ ತಿಳಿಸಿದ್ದರಿಂದ ನಾನು ಆಸ್ಪತ್ರೆಗೆ ಭೆಟಿಕೊಟ್ಟು ಗಾಯಾಳು ಕು. ಸ್ನೇಹಾ ಇವರನ್ನು ವಿಚಾರಿಸಲು ಅವರು ಕೊಟ್ಟ ದೂರು ಅರ್ಜಸಾರಂಶವೆನೆಂದರೆ ದಿನಾಂಕ 09-12-2022 ರಂದು ನಾನು ಮತ್ತು ನನ್ನ ಕಾಲೇಜಿನ ಗೆಳೆಯ ಗೆಳೆತಿಯರಾದ 1) ಅಮರ ತಂದೆ ರಾಜಶೇಖರ ಬಿರಾದಾರ, 2) ರಮ್ಯ ತಂದೆ ದಸ್ತಯ್ಯ ಗುತ್ತೆದಾರ, 3) ಸೌಮ್ಯ ತಂದೆ ಬಾಬು ಪೂಜಾರಿ 4) ಸುಧರ್ಶನ್ ತಂದೆ ಗುಂಡಪ್ಪ ರಾಮನ್ 5) ಗಣೇಶ ತಂದೆ ವಾಮನ್ ಪವಾರ್ 6) ದಿವ್ಯ ತಂದೆ ಚಂದ್ರಶೇಖರ ಹರಸೂರ 7) ದಿವ್ಯಾ ತಂದೆ ರಾಘವೇಂದ್ರ ಹರಸೂರ 8) ವಿದ್ಯಾಶ್ರೀ ತಂದೆ ದತ್ತಾತ್ರೇಯ ಕಲಶೇಟ್ಟಿ 9) ಶಿವಾನಿ ತಂದೆ ರೇವಣಸಿದ್ದ ಅಣಕಲ್ 10) ಆಕಾಶ ತಂದೆ ಜಗದೇವಪ್ಪ ಗೋಣಿ ಹಾಗೂ 11) ಗಂಗಾಧರ ತಂದೆ ಶ್ರೀಶೈಲ್ ರವರು ಕೂಡಿಕೊಂಡು ಗೋಕರ್ಣ, ಮುರುಡೇಶ್ವರ, ಹೋನ್ನಾವರ ಹಾಗೂ ಜೋಗಪಾಲ್ಸ್ ಪ್ರವಾಸ ಕುರಿತು ನಾಗನಾಥ ಇತನು ಚಲಾಯಿಸುತ್ತಿರುವ ಟೆಂಪೋ ಟ್ರಾವೇಲ್ಸ್ ವಾಹನದಲ್ಲಿ ನಾವೇಲ್ಲರೂ ಕುಳಿತು ರಾತ್ರಿ 9:00 ಗಂಟೆಗೆ ಕಲಬುರಗಿ ಶ್ರೀ ಶರಣಬಸವೇಶ್ವರ ದೇವಸ್ಥಾನದಿಂದ ಹೋಗಿರುತ್ತೇವೆ.      ದಿನಾಂಕ 13.12.2022 ರಂದು ಮೇಲೆ ಕಾಣಿಸಿದ ನಾವೇಲ್ಲರೂ ಪ್ರವಾಸ ಮುಗಿಸಿಕೊಂಡು ನಾಗನಾಥ ಇತನು ಚಲಾಯಿಸುತ್ತಿರುವ ಟೆಂಪೋ ಟ್ರಾವೇಲ್ಸ್ ನಂ ಕೆಎ-01/ಎ.ಸಿ-5991 ನೇದ್ದರಲ್ಲಿ ಕುಳಿತು ಜೇವಗರ್ಿ ಮುಖಾಂತರವಾಗಿ ಕಲಬುರಗಿ ಕಡೆಗೆ ಬೆಳಿಗಿನ ಜಾವ ಬರುತ್ತಿರುವಾಗ ರಾಷ್ಟ್ರೀಯ ಹೆದ್ದಾರಿ 50ರ ಮೇಲೆ ಬರುವ ಕಟ್ಟಿ ಸಂಗಾವಿ ಬ್ರೀಡ್ಜ್ ದಾಟಿದ ನಂತರ ನಾಗನಾಥ ಇತನು ಟೆಂಪೋ ಟ್ರಾವೇಲ್ಸ್ ವಾಹನವನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗುತ್ತಿದ್ದನು ನಾವೇಲ್ಲರೂ ಆತನಿಗೆ ನಿಧಾನವಾಗಿ ಚಲಾಯಿಸು ಅಂತ ತಿಳಿಸಿದರು ಕೂಡ ಚಲಾಯಿಸಿಕೊಂಡು ಕಲಬುರಗಿ ಕಡೆಗೆ ಬರುವಾಗ ಫರಹತಾಬಾದ್ ಸೀಮಾಂತರದ ಕೆಸರಿ ಬೆಟ್ಟ ಸಮೀಪ ರೋಡ್ ಮೇಲೆ ಒಬ್ಬ ಟಿಪ್ಪರ್ ವಾಹನದ ಚಾಲಕನು ಯಾವುದೇ ಮುನ್ನೆಚ್ಚರಿಕೆ ವಹಿಸದೆ ಕತ್ತಲೆಯಲ್ಲಿ ರೋಡ್ ಮೇಲೆ ನಿಲ್ಲಿಸಿದ ಟಿಪ್ಪರ್ ವಾಹನದ ಹಿಂದುಗಡೆ ಜೋರಾಗಿ ಡಿಕ್ಕಿಪಡಿಸಿ ಅಪಘಾತ ಮಾಡಿ ತನ್ನ ವಾಹನವನ್ನು ಬಂದ ಮಾಡಿ ನಿಲ್ಲಿಸಿದಾಗ ನಾವೆಲ್ಲರೂ ಟೆಂಪೋ ಟ್ರಾವೇಲ್ಸ್ ವಾಹನದಿಂದ ಕೆಳಗಡೆ ಇಳಿದು ರೋಡ್ ಮೇಲೆ ನಿಲ್ಲಿಸಿದ ಟಿಪ್ಪರ್ ನಂಬರ ನೋಡಲು ಕೆ.ಎ-33/ಬಿ-2682 ಇದ್ದಿತ್ತು. ಅದರ ಚಾಲಕ ನಮ್ಮ ಕಡೆಗೆ ನೋಡುತ್ತ ಅಲ್ಲಿಂದ ಹೋದನು ಸದರ ಘಟನೆ ಜರುಗಿದಾಗ ಬೆಳಗಿನ ಜಾವ ಅಂದಾಜು 5:30 ಗಂಟೆ ಸಮಯ ವಾಗಿತ್ತು. ಸದರಿ ಘಟನೆಯಿಂದ ನನ್ನ ಎಡ ಕಪಾಳ ಮೇಲೆ ಭಾರಿ ಒಳಪೆಟ್ಟು ಬಿದ್ದಿತ್ತು ಅಮರ ಇತನ ಎಡ ಹಣೆಯ ಮೇಲೆ ರಕ್ತ ಗಾಯ ಸೌಮ್ಯ ರವರ ತಲೆಗೆ ರಕ್ತಗಾಯ ಗಣೇಶ ಇತನ ಎಡಭುಜಕ್ಕೆ ಗುಪ್ತ ಪೆಟ್ಟು ಧಿವ್ಯ ಇವರ ಎಡಗಲ್ಲದ ಮೇಲೆ ತರಚಿದ ಗಾಯ ದಿವ್ಯ ಮುಗಳಿಕರ ಇವರ ಎಡ ಹಣೆಯ ಮೇಲೆ ರಕ್ತಗಾಯವಾಗಿತ್ತು. ಉಳಿದವರಿಗೆ ಯಾವುದೇ ಗಾಯ ಆಗಿರಲಿಲ್ಲ. ನಾವು ಕುಳಿತು ಬಂದಿದ್ದ ಟೆಂಪೋ ಟ್ರಾವೇಲ್ಸ್ ನೋಡಲು ಡ್ಯಾಮೇಜ್ ಆಗಿತ್ತು ಸದರಿ ಘಟನೆ ಬಗ್ಗೆ ಮಾಹಿತಿ ಗೋತ್ತಾಗಿ ಹೈ ವೇ ಪೆಟ್ರೋಲಿಂಗ್ ಪೊಲೀಸ್ ನವರು ಸ್ಥಳಕ್ಕೆ ಬಂದು ಅಂಬ್ಯೂಲನ್ಸ್ ವಾಹನ ಬಂದಾಗ ನಮ್ಮ ಉಪಚಾರ ಕುರಿತು ಕಳುಹಿಸಿದ್ದರಿಂದ ನಾವು ಕಲಬುರಗಿ ಖಾಸಗಿ ಧನ್ವಂತ್ರಿ ಆಸ್ಪತ್ರಗೆ ಬಂದು ಉಪಚಾರ ಪಡೆಯುತ್ತಿದ್ದೇವೆ. ಟಿಪ್ಪರ್ ಚಾಲಕನ ಹೆಸರು ಗೋತ್ತಾಗಿರುವುದಿಲ್ಲ ಆತನನ್ನು ನೋಡಿದ್ದು ಮುಂದೆ ನೋಡಿದ್ದಲ್ಲಿ ಗುರುತ್ತಿಸುತ್ತೇನೆ. ಟಿಪ್ಪರ್ ನಂಬರ ಕೆ.ಎ-33/ಬಿ-2682 ನೇದ್ದರ ಚಾಲಕ ಯಾವುದೇ ಮುನ್ನೆಚ್ಚರಿಕೆ ವಹಿಸದೇ ಇಂಡಿಕೆಟರ್ ಹಾಕದೇ ದೀಪದ ವ್ಯವಸ್ಥೆ ಮಾಡದೇ ರೋಡ್ ಮೇಲೆ ನಿಲ್ಲಿಸಿದ ಟಿಪ್ಪರ್ ವಾಹನಕ್ಕೆ ಟೆಂಪೋ ಟ್ರಾವೇಲ್ಸ್ ನಂಬರ ಕೆ.ಎ-01/ಎ.ಸಿ-5991 ನೇದ್ದರ ಚಾಲಕ ನಾಗನಾಥ ಇತನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ರೋಡ್ ಮೇಲೆ ನಿಲ್ಲಿಸಿದ ಟಿಪ್ಪರ್ ವಾಹನಕ್ಕೆ ಡಿಕ್ಕಿಪಡಿಸಿ ನಮಗೆ ಗಾಯಗೊಳಿಸಿದ್ದು ಸದರಿ ಘಟನೆ ಎರಡು ಜನರ ತಪ್ಪಿನಿಂದ ಜರುಗಿದ್ದು ಎರಡು ವಾಹನದ ಚಾಲಕರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಪಿರ್ಯಾದಿ ಕೊಟ್ಟ ಅರ್ಜಿ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

  

 

ಸಂಚಾರಿ ಪೊಲೀಸ್‌ ಠಾಣೆ – 01 :- ದಿನಾಂಕ 13.12.2022 ರಂದು ಸಾಯಂಕಾಲ 7-15 ಗಂಟೆಗೆ ಶ್ರೀ ಸುಭಾಷ ತಂದೆ ಶರಣಪ್ಪ ಪಪ್ಪಾ ಇವರ ದೂರು ಅರ್ಜಿಯನ್ನು ಠಾಣೆಗೆ ಹಾಜರಪಡಿಸಿದ್ದರ ಸಾರಂಶವೆನೆಂದರೆ ದಿನಾಂಕ 13.12.2022 ರಂದು ಬೆಳಿಗ್ಗೆ ನಾನು ಬೇಲೂರು ಕ್ರಾಸ್ ಹತ್ತಿರ ಬರುವ ನಮ್ಮ ಉತ್ತರ ವಲಯದ ಕಾರ್ಯಾಲಯಕ್ಕೆ ಕರ್ತವ್ಯ ಕುರಿತು ಹೋಗಿ ಕರ್ತವ್ಯ ನಿರ್ವಹಿಸಿ ಕಲಬುರಗಿ ನಗರದಲ್ಲಿ ಬರುವ ಹಳೆ ಜೇವರ್ಗಿ ರೋಡ್ ಪಕ್ಕದಲ್ಲಿ ಇರುವ ಡಿವಿಜನಲ್ ಸ್ಟೋರ್ ನಲ್ಲಿ ಕೆಲಸವಿರುವುದರಿಂದ ನಾನು ಬೇಲೂರು ಕ್ರಾಸ್ ದಿಂದ ನನ್ನ  ಮೋಟಾರ್ ಸೈಕಲ್ ನಂ ಕೆ.ಎ-32/ಇ.ಯು-2379 ನೇದ್ದನ್ನು ಚಲಾಯಿಸಿಕೊಂಡು ಕಲಬುರಗಿ ನಗರ ಜಗತ್ ಸರ್ಕಲ್, ಎಸ್.ವಿ.ಪಿ ಸರ್ಕಲ್, ಮೋಹನ್ ಲಾಡ್ಜ್ ಕ್ರಾಸ್ ಮುಖಾಂತರವಾಗಿ ನಮ್ಮ ಡಿವಿಜನಲ್ ಸ್ಟೋರ್ ಗೆ ಹೋಗುತ್ತಿರುವಾಗ ಹಳೆ ಜೇವರ್ಗಿ ರೋಡ್ ಪಂಚಶೀಲ ನಗರ ಹತ್ತಿರ ಬರುವ ರೋಡ್ ಹಂಪ್ಸ್ ಮೇಲೆ  ಹಿಂದಿನಿಂದ ಬೋಲೆರೊ ಜೀಪ್ ವಾಹನದ ಚಾಲಕನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಮೋಟಾರ್ ಸೈಕಲ್ ಹಿಂದುಗಡೆ ಜೋರಾಗಿ ಡಿಕ್ಕಿಪಡಿಸಿ ಅಪಘಾತ ಮಾಡಿದ್ದರಿಂದ ನನ್ನ ಮೋಟಾರ್ ಸೈಕಲ್ ಮುಂದುಗಡೆ ಹೋಗುತ್ತಿರುವ ಒಂದು ಆಟೋ ರಿಕ್ಷಾ ವಾಹನಕ್ಕೆ ತಾಗಿದ್ದರಿಂದ ನನ್ನ ಮೋಟಾರ್ ಸೈಕಲ್ ಸಹಿತ ಕೆಳಗಡೆ ಬಿದ್ದಾಗ ಸದರಿ ಘಟನೆ ನೋಡಿದ ಜೇಸ್ಕಾಂ ಸಿಬ್ಬಂದಿಗಳಾದ ರಾಜಕುಮಾರ ತಂದೆ ಶ್ರೀಮಂತರಾವ ಕಲಶೇಟ್ಟಿ ಹಾಗೂ ನಾಗಣ್ಣ ತಂದೆ ಅಪ್ಪಾರಾವ ಹುಲಿಮನಿ ರವರು  ಬಂದು ನನಗೆ ಎಬ್ಬಿಸಿ ಕೂಡಿಸಿದಾಗ ನನಗೆ ಡಿಕ್ಕಿಪಡಿಸಿ ಅಪಘಾತ ಮಾಡಿದ ಬೋಲೆರೊ ಜೀಪ್ ನಂಬರ ನೋಡಲು ಕೆಎ-17/ಎನ್-4259 ಇದ್ದಿತ್ತು. ಆಟೋ ರಿಕ್ಷಾ ನಂಬರ ನೋಡಲು ಕೆ.ಎ-32/ಎ-3840 ಇದ್ದಿತ್ತು. ಸದರಿ ಘಟನೆ ಜರುಗಿದಾಗ ಸಾಯಾಂಕಾಲ 4:50 ಗಂಟೆ ಸಮಯವಾಗಿತ್ತು ಸದರಿ ಘಟನೆಯಿಂದ ಎಡಗಾಲು ಮೋಳಕಾಲು ಕೆಳಗಡೆ ರಕ್ತಗಾಯ ಗುಪ್ತಗಾಯ ಹಾಗೂ ಬಲಗಾಲು ಮೋಳಕಾಲು ಕೆಳಗೆ ಗುಪ್ತಗಾಯ ವಾಗಿತ್ತು. ಬೋಲೆರೊ ಜೀಪ್ ಚಾಲಕನು ನಮ್ಮ ಹತ್ತಿರ ಬಂದು ನಿಂತವನೇ ಹಾಗೆಯೆ ತನ್ನ ಜೀಪ್ ಚಲಾಯಿಸಿಕೊಂಡು ರಾಮಮಂದಿರ ಕಡೆಗೆ ಹೋದನು ಹಾಗೂ ಆಟೋ ರಿಕ್ಷಾ ಚಾಲಕನು ಸಹ ತನ್ನ ವಾಹನದೊಂದಿಗೆ ಹೋದನು ಆತನಿಗೆ ಯಾವುದೇ ಪೆಟ್ಟು ಬಿದ್ದಿರಲಿಲ್ಲ, ನನಗೆ ತ್ರಾಸ್ ಆಗುತ್ತಿದ್ದರಿಂದ ಒಂದು ಖಾಸಗಿ ಆಸ್ಪತ್ರೆಗೆ ಹೋಗಿ ಉಪಚಾರ ಮಾಡಿಕೊಂಡು ಠಾಣೆಗೆ ಬಂದಿರುತ್ತೇನೆ. ಬೋಲೆರೋ ಜೀಪ್ ಚಾಲಕನ ಮತ್ತು ಆಟೋ ರಿಕ್ಷಾ ಚಾಲಕನ ಹೆಸರು ಗೋತ್ತಾಗಿರುವುದಿಲ್ಲ ಅವರನ್ನು ನೋಡಿದ್ದು ಮುಂದೆ ನೋಡಿದ್ದಲ್ಲಿ ಗುರುತಿಸುತ್ತೇನೆ. ಬೋಲೆರೊ ಜೀಪ್  ಕೆಎ-17/ಎನ್-4259  ನೇದ್ದರ ಚಾಲಕನು ತನ್ನ ವಾಹನವನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಾನು ಚಲಾಯಿಸಿಕೊಂಡು ಹೋಗುತ್ತಿರುವ ನನ್ನ ಮೋಟಾರ್ ಸೈಕಲ್ ನಂಬರ ಕೆ.ಎ-32/ಇ.ಯು-2379 ನೇದ್ದಕ್ಕೆ ಹಾಗೂ ಆಟೋ ರಿಕ್ಷಾ ನಂಬರ ಕೆ.ಎ-32/ಎ-3840 ನೇದ್ದವುಗಳಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ನನಗೆ ಗಾಯಗೊಳಿಸಿ ತನ್ನ ವಾಹನ ಸಮೇತ ಓಡಿಹೋಗಿದ್ದು ಆತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಪಿರ್ಯಾದಿ ಕೊಟ್ಟ ಅರ್ಜಿ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

  

 

ಸಂಚಾರಿ ಪೊಲೀಸ್‌ ಠಾಣೆ – 2 :- ದಿನಾಂಕ 13/12/2022 ರಂದು 06:30 ಪಿ,ಎಮ್ ಕ್ಕೆ ಶ್ರೀ ಪ್ರಕಾಶ ತಂದೆ ವಿಠಲ ಚವ್ಹಾಣ ಸಾ; ಲಕ್ಷ್ಮಿ ನಗರ ಕಲಬುರಗಿ, ಇವರು ಖುದ್ದಾಗಿ ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಟೈಪ್ ಮಾಡಿದ ಫಿರ್ಯಾದಿ ಅರ್ಜಿ ಹಾಜರು ಪಡಿಸಿದ್ದು ಸದರಿ ಅರ್ಜಿಯ ಸಾರಂಶವೆನೆಂದರೆ, ಫಿರ್ಯಾಧಿ ಹಾಗೂ ಅವರ ಮಾವನ ಮಗನಾದ ರಾಜು ತಂದೆ ಥಾರು ರಾಠೋಡ ನಿನ್ನೆ ದಿನಾಂಕ 12/12/2022 ರಂದು ಮದ್ಯಾಹ್ನ 03-00 ಗಂಟೆ ಸುಮಾರಿಗೆ ಫಿರ್ಯಾಧಿ ಹಾಗೂ ರಾಜು ರಾಠೋಡ ಇಬ್ಬರೂ ರಾಜು ರಾಠೋಡ ಇತನ ಸ್ವಂತ ಊರಾದ ಕಾಳನೂರಕ್ಕೆ ಹೋಗಿ ಅವರ ತಂದೆ-ತಾಯಿಗೆ ಭೇಟಿ ಆಗಿ ಮರಳಿ ಕಲಬುರಗಿಗೆ ಬರುವ ಕುರಿತು ವಿಶ್ವ ದಾಬಾ ಹತ್ತಿರ ರಾತ್ರಿ 9-00 ಗಂಟೆ ಸುಮಾರಿಗೆ ರೋಡಿನ ಮೇಲೆ ಬಸ್ಸಿಗಾಗಿ ನಿಂತ್ತಿರುವಾಗ ಒಂದು ಬಜಾಜ ಪಲ್ಸರ್ ಮೋಟಾರ ಸೈಕಲ ನಂ ಕೆಎ-32 ಜಿ-0587 ನೇದ್ದರ ಸವಾರನು ಸೇಡಂ ಕಡೆಯಿಂದ ಕಲಬುರಗಿ ಕಡೆಗೆ ಹೋಗುವ ಕುರಿತು ತನ್ನ ಮೋಟಾರ ಸೈಕಲನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಮತ್ತು ಅಜಾಗುರುಕತೆಯಿಂದ ಚಲಾಯಿಸಿಕೊಂಡು ಬಂದು  ರೋಡಿನ ಪಕ್ಕಕ್ಕೆ ನಿಂತ್ತಿರುವ ರಾಜು ರಾಠೋಡ ಈತನಿಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಆತನು ಕೂಡಾ ಮುಂದೆ ಹೋಗಿ ಮೋಟಾರ ಸೈಕಲ ಸಮೇತ ಬಿದ್ದಿ ಗಾಯ ಹೊಂದಿದ್ದು ಈ ಘಟನೆಯಿಂದ ರಾಜು ರಾಠೋಡ ಈತನು ಭಾರಿಗಾಯ ಹೊಂದಿದ್ದು ಮಾತನಾಡುವ ಸ್ಥಿತಿಯಲ್ಲಿ ಇರುವುದಿಲ್ಲಾ ನಾನು ಆತನಿಗೆ ಅಂಬುಲೈನ್ಸ್ ನಲ್ಲಿ ಹಾಕಿಕೊಂಡು ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಸದರಿ ಮೋಟಾರ ಸೈಕಲ ಸವಾರನ ಹೆಸರು ಗೋತ್ತಾಗಿರುವುದಿಲ್ಲಾ ಆತನಿಗೆ ನೋಡಿದರೆ ಗುರ್ತಿಸುತ್ತೇನೆ,   ಕಾರಣ ಸದರಿ ಮೋಟರ ಸೈಕಲ ಸವಾರನ ಮೇಲೆ ಕಾನೂನು ಪ್ರಕಾರ ಕ್ರಮ ಕೈಕೊಳ್ಳಬೇಕೆಂದು ಅಂತಾ ಇತ್ಯಾದಿ ಕೊಟ್ಟ ಫಿರ್ಯಾಧಿ ಅರ್ಜಿ ಸಾರಂಶದ ಮೇಲಿಂದ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಬ್ರಹ್ಮಪೂರ ಪೊಲೀಸ್‌ ಠಾಣೆ :-  ದಿನಾಂಕ: 13-12-2022 ರಂದು ಮದ್ಯಾಹ್ನ ೧:೧೪ ಗಂಟೆಗೆ ಫಿರ್ಯಾದಿದಾರರಾದ ಶಿವಪುತ್ರ ತಂದೆ ಸಿದ್ರಾಮ ಮಾವಿನ ವಯ:೪೩ವರ್ಷ ಜಾ:ಹೊಲೆಯ ಉ:ಅರೆಕಾಲಿಕ ಉಪನ್ಯಾಸಕ ಸಾ//ಭೀಮ ನಗರ ಮರತೂರ ಗ್ರಾಮ ತಾ//ಶಹಬಾದ ಜಿ//ಕಲಬುರಗಿ ನನ್ನದೊಂದು ಸ್ವಂತ ಹಿರೋ ಹೊಂಡಾ ಸ್ಪ್ಲೇಂಡರ್ ಪ್ಲಸ್ ಮೋಟಾರ್ ಸೈಕಲ್ ನಂ KA-32  EA-4451 ನೇದ್ದು ಇದ್ದು ಸದರಿ ಮೋಟಾರ್ ಸೈಕಲ್ ನನ್ನ ಹೆಸರಿನಲ್ಲಿರುತ್ತದೆ. ಸದರಿ ಮೋಟಾರ್ ಸೈಕಲವು ದಿನಾಂಕ:೧೦/೧೨/೨೦೨೨ ರಂದು ಮದ್ಯಾಹ್ನ ೨:೪೫ ಗಂಟೆಗೆ ಕಲಬುರಗಿ ನಗರದ ಶರಣನಗರದ ಗಣೇಶನ ದೇವಸ್ಥಾನದ ಪಕ್ಕದಲ್ಲಿರುವ ರಾಜೇಂದ್ರ ಅಂದ್ರಾಳ ಇವರ ಮನೆಯ ಮುಂದೆ ನಿಲ್ಲಿಸಿ ಎನ್.ವಿ ಗ್ರೌಂಡನಲ್ಲಿ ನೆಡೆಯುತ್ತಿರುವ ಕಲ್ಯಾಣ ಕ್ರಾಂತಿ ಸಮಾವೇಶಕ್ಕೆ ಹೋಗಿ ಸಮಾವೇಶ ಮುಗಿಸಿಕೊಂಡು ಮರಳಿ ಅದೇ ದಿನ ಸಾಯಂಕಾಲ ೬:೦೦ ಗಂಟೆಗೆ ನಾನು ನಿಲ್ಲಿಸಿದ ಸ್ಥಳದಲ್ಲಿ ಬಂದು ಮೋಟಾರ್ ಸೈಕಲ್ ನೋಡಲಾಗಿ ನನ್ನ ಮೋಟಾರ್ ಸೈಕಲ್ ಇರಲಿಲ್ಲಾ. ಮೋಟಾರ್ ಸೈಕಲ್ ಪತ್ತೆ ಕುರಿತು ಎಲ್ಲಾ ಕಡೆ ಹುಡುಕಾಡಿದರೂ ಮೋಟಾರ್ ಸೈಕಲ್ ಸಿಕ್ಕಿರುವುದಿಲ್ಲಾ. ಆದರಿಂದ ಠಾಣೆಗೆ ಬಂದು ಅರ್ಜಿ ಕೊಡಲು ತಡವಾಗಿರುತ್ತದೆ. ಕಾರಣ ಕಳುವಾದ ನನ್ನ ಮೋಟಾರ್ ಸೈಕಲನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಕೊಟ್ಟ ದೂರು ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಬ್ರಹ್ಮಪೂರ ಪೊಲೀಸ್‌ ಠಾಣೆ :-ದಿನಾಂಕ: 13-12-2022 ರಂದು ಸಾಯಂಕಾಲ ೦೬:೫೧ ಗಂಟೆಗೆ ಫಿರ್ಯಾದಿದಾರರಾದ ರಾಘವೇಂದ್ರ ತಂದೆ ವಿಠ್ಠಲ್‌ರಾವ ಕುಲಕರ್ಣಿ ವಯ:೪೭ವರ್ಷ ಜಾ:ಬ್ರಾಹ್ಮಿಣ ಉ:ವ್ಯಾಪಾರ ಸಾ//ಮೋರೆ ಕಾಂಪ್ಲೇಕ್ಸ್ ಹತ್ತಿರ ನ್ಯೂ ರಾಘವೇಂದ್ರ ಕಾಲೋನಿ ಕಲಬುರಗಿ ನಗರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ನನ್ನದೊಂದು ಸ್ವಂತ ಹಿರೋ ಸ್ಪ್ಲೇಂಡರ್ ಪ್ರೋ ಮೋಟಾರ್ ಸೈಕಲ್ ನಂ ಏಂ-೩೨-ಇಈ-೦೭೪೬ ನೇದ್ದು ಇದ್ದು ಸದರಿ ಮೋಟಾರ್ ಸೈಕಲ್ ನನ್ನ ಹೆಸರಿನಲ್ಲಿರುತ್ತದೆ. ಸದರಿ ಮೋಟಾರ್ ಸೈಕಲವು ದಿನಾಂಕ:೨೩/೧೦/೨೦೨೨ ರಂದು ರಾತ್ರಿ ೮:೦೦ ಗಂಟೆಗೆ ಕಲಬುರಗಿ ನಗರದ ಸುಪರ್ ಮಾರ್ಕೆಟ್‌ದ ರಾಜಮಹಲ್ ಹೊಟೇಲ್ ಪಕ್ಕದಲ್ಲಿರುವ ಆರ್ಶಿವಾದ ಹೊಟೇಲ್ ಮುಂದೆ ನಿಲ್ಲಿಸಿ ತರಕಾರಿ ತೆಗೆದುಕೊಂಡು ಬರಲು ಮಾರ್ಕೆಟ್ ಒಳಗಡೆ ಹೋಗಿ ತರಕಾರಿ ತೆಗೆದುಕೊಂಡು ಮರಳಿ ಅದೇ ದಿನ ರಾತ್ರಿ ೮:೩೦ ಗಂಟೆಗೆ ನಾನು ನಿಲ್ಲಿಸಿದ ಸ್ಥಳದಲ್ಲಿ ಬಂದು ಮೋಟಾರ್ ಸೈಕಲ್ ನೋಡಲಾಗಿ ನನ್ನ ಮೋಟಾರ್ ಸೈಕಲ್ ಇರಲಿಲ್ಲಾ, ಮೋಟಾರ್ ಸೈಕಲ್ ಪತ್ತೆ ಕುರಿತು ಎಲ್ಲಾ ಕಡೆ ಹುಡುಕಾಡಿದರೂ ಮೋಟಾರ್ ಸೈಕಲ್ ಸಿಕ್ಕಿರುವುದಿಲ್ಲಾ. ಆದ್ದರಿಂದ ಠಾಣೆಗೆ ಬಂದು ಅರ್ಜಿ ಕೊಡಲು ತಡವಾಗಿರುತ್ತದೆ. ಕಾರಣ ಕಳುವಾದ ನನ್ನ ಮೋಟಾರ್ ಸೈಕಲನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಕೊಟ್ಟ ದೂರು ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸಬ್‌ ಅರ್ಬನ್‌ ಪೊಲೀಸ ಠಾಣೆ :-  ದಿನಾಂಕಃ-13-12-2022 ರಂದು ಫಿರ್ಯಾದಿಯು ಠಾಣೆಗೆ ಹಾಜರಾಗಿ ನೀಡಿದ ಫಿರ್ಯಾದಿಯೇನೆಂದರೆ ತಮ್ಮದೊಂದು ಸುಪ್ರಿಮ ವರ್ಕ ಶಾಪ್ ಇದ್ದು ದಿನಾಂಕಃ-೧೨/೧೨/೨೦೨೨ ರಂದು ರಾತ್ರಿ ೮.೩೦ ಗಂಟೆಗೆ ಬಾಗಿಲು ಹಾಕಿಕೊಂಡು ಮನೆಗ ಹೋಗಿದ್ದು ನಾನು ಎಂದಿನಂತೆ ದಿನಾಂಕಃ-೧೩/೧೨/೨೦೨೨ ರಂದು ಬೆಳಗ್ಗೆ ೯.೦೦ ಗಂಟೆಗೆ ವರ್ಕ್ ಶಾಪ್ ತೆಗೆದು ನೋಡಲು ಯಾರೋ ನಮ್ಮ ವರ್ಕ್ ಶಾಪ್ ಬಾಗಿಲು ಮುರಿದಿದ್ದು ಅದರಲ್ಲಿ ಮೊಬೈಲ್ ,ಹಾರ್ಡ್ ಡಿಸ್ಕ್ ಮತ್ತು ನಗದು ಹಣ ಸೇರಿ ಒಟ್ಟು ೩೨,೦೦೦/- ರೂ ಮೌಲ್ಯದ ವಸ್ತಗಳನ್ನು ಕಳುವು ಮಾಡಿರುತ್ತಾರೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ವಿಶ್ವವಿದ್ಯಾಲಯ ಪೊಲೀಸ ಠಾಣೆ:- ದಿನಾಂಕ: 12-12-2022 ರಂದು ೧:೩೦ ಪಿ.ಎಮ್ ಸುಮಾರಿಗೆ ಸದರಿ ಆರೋಪಿತರಾದ ೧] ಸರಸ್ವತಿ ಗಂಡ ಅಣವೀರಪ್ಪಾ ವಿಶ್ವಕರ್ಮಾ ೨] ಓಂಕಾರ ತಂದೆ ಅಣವೀರಪ್ಪಾ ವಿಶ್ವಕರ್ಮಾ ಸಾ;ಎಲ್ಲರೂ ವೆಂಕಟೆಬೇನೂರ ತಾ;ಜಿ;ಕಲಬುರಗಿ ಇವರು ಕೈಯಲ್ಲಿ ಪ್ಲ್ಯಾಸ್ಟಿಕ್ ಡಬ್ಬಾದಲ್ಲಿ ಪೆಟ್ರೊಲ್ ತೆಗೆದುಕೊಂಡು ಬಂದವರೆ ನಮ್ಮ ಛತ್ತಿನ ಸೆಂಟ್ರಿಗ ಕಟ್ಟಿಗೆಗಳಿಗೆ ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿದ್ದು ಮತ್ತು ಬಿಡಿಸಲು ಬಂದ ನನ್ನ ಮಗಳು ಭಾಗ್ಯಶ್ರೀ ಇವಳು ಬೆಂಕಿ ಹಚ್ಚ ಬೇಡಿರಿ ಅಂತಾ ಹೇಳಲು ಹೋದಾಗ ಅವಳನ್ನು ಕೊಲೆ ಮಾಡುವ ಉದ್ದೇಶದಿಂದ ಪೆಟ್ರೋಲ್‌ನಮ್ಮನ್ನು ಕೊಲೆ ಮಾಡುವ ಉದ್ದೇಶದಿಂದ ಛತ್ತಿನ ಕಟ್ಟಿಗೆ ಮತ್ತು ಫಿರ್ಯಾದಿಯ ಮಗಳ ಮೈಮೇಲೆ ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿ ಕೊಲೆ ಮಾಡಲು ಪ್ರಯತ್ನಿಸಿದ್ದ ಹಗೂ ಅವಾಚ್ಯವಾಗಿ ಬೈದು ಕೊಲೆಗೆ ಪ್ರಯತ್ನ ಮಾಡಿರುತ್ತಾರೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 14-12-2022 01:57 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080