ಅಭಿಪ್ರಾಯ / ಸಲಹೆಗಳು

ಸಂಚಾರಿ-೦೨ ಪೊಲೀಸ ಠಾಣೆ :- ಇಂದು ಮಾನ್ಯರವರಲ್ಲಿ ಅರಿಕೆ ಮಾಡಿಕೊಳ್ಳುವುದೆನೆಂದರೆಇಂದು ದಿನಾಂಕ ೧೩/೧೨/೨೦೨೧ ರಂದು ಮಧ್ಯಾಹ್ನ ೨:೩೦ ಪಿ.ಎಮ್ ಕ್ಕೆ ಶ್ರೀ. ವಿನೋದಕುಮಾರ ತಂದೆ ನಾಗಪ್ಪಾ ಚಿಮ್ಮಾ ವಯಃ ೩೫ ರ‍್ಷ ಜಾತಿಃ ಪ.ಜಾತಿ(ಹೊಲೆಯ) ಉಃ ಇಟ್ಟಂಗಿ ಭಟ್ಟಿಯಲ್ಲಿ ಕೆಲಸ ಸಾಃ ನಿಂರ‍್ಗಾ ತಾಃ ಆಳಂದ ಹಾ.ವಃ ಕಾಕಡೆ ಚೌಕ ಕಲಬುರಗಿ ಇವರು ಠಾಣೆಗೆ ಬಂದು ಫರ‍್ಯಾದಿ ಹೇಳಿಕೆ ನೀಡಿದ್ದು ಸಾರಂಶವೆನೆಂದರೆ, ನಾನು ಗುಂಡು ಮಾಲೀಕರ ಇಟ್ಟಂಗಿ ಭಟ್ಟಿಯಲ್ಲಿ ಲೇಬರ ಕೆಲಸ ಮಾಡಿಕೊಂಡಿರುತ್ತೆನೆ. ನನ್ನ ಜೊತೆಯಲ್ಲಿ ನನ್ನ ತಂದೆ ತಾಯಿ ಇರುತ್ತಿರುತ್ತಾರೆ. ನಮ್ಮ ತಾಯಿಯ ತಮ್ಮನ ಮಗನಾದ ಬಾಬು ತಂದೆ ಶ್ರೀಮಂತ ಕವಲಗಿ ವಯಃ ೩೦ ರ‍್ಷ ಸಾಃ ಗುಡುರ ಈತನು ತನ್ನ ಹೆಂಡತಿಗೆ ಬಿಟ್ಟಿದ್ದರಿಂದ ನಮ್ಮ ಹತ್ತೀರವೆ ಉಳಿದುಕೊಂಡು ಇಟ್ಟಂಗಿ ಭಟ್ಟಿಯಲ್ಲಿ ಲೇಬರ ಕೆಲಸ ಮಾಡಿಕೊಂಡಿರುತ್ತಾನೆ.  ನಮ್ಮದೊಂದು ಮೋಟರ ಸೈಕಲ ನಂ. ಎಮ್.ಹೆಚ್ ೨೪ ಎ.ಇ ೫೪೭೪ ನೇದ್ದು ಇರುತ್ತದೆ.  ಹೀಗಿದ್ದು, ಇಂದು ದಿನಾಂಕ ೧೩/೧೨/೨೦೨೧ ರಂದು ಮಾಮನ ಮಗ ಬಾಬು ಕವಲಗಿ ಈತನು ಈ ನಮ್ಮ ಮೋಟರ ಸೈಕಲನ್ನು ತೆಗೆದುಕೊಂಡು ತನ್ನೂರಾದ ಗುಡುರಕ್ಕೆ ಹೋಗುತ್ತೆನೆಂದು ಬೆಳಿಗ್ಗೆ ೯:೦೦ ಗಂಟೆ ನಂತರ ಇಟ್ಟಂಗಿ ಭಟ್ಟಿಯಿಂದ ಹೋದನು. ಮುಂದೆ ೧೨:೦೦ ಗಂಟೆ ನಂತರ ಯಾರೋ ನಮ್ಮ ಮಾಮನ ಮಗ ಬಾಬು ಈತನ ಫೋನಿನಿಂದ ನನಗೆ ಫೋನ್ ಮಾಡಿ ಈ ಫೋನ ಇರುವ ವ್ಯಕ್ತಿಯು ಹಿರಾಪೂರ ಬಬಲಾದ ಸವಳಗಿ ರೋಡಿನ ಸವಳಗಿ ಸೀಮೆಯ ಮುರರ‍್ಜಿ ದೆಸಾಯಿ ವಸತಿ ಶಾಲೆಯ ಹತ್ತೀರ ರೋಡಿನ ತಿರುವಿನಲ್ಲಿ ರೋಡಿನ ಬದಿಯಲ್ಲಿರುವ ಗಟಾರದ ತಗ್ಗಿನಲ್ಲಿ ಮೋಟರ ಸೈಕಲ ನಂ. ಎಮ್.ಹೆಚ್ ೨೪ ಎ.ಇ ೫೪೭೪ ನೇದ್ದರ ಮೇಲೆ ಕಲಬುರಗಿ ಕಡೆಯಿಂದ ತಾನೆ ಒಬ್ಬನೆ ಅತಿವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಮೋಟರ ಸೈಕಲ ನಿಯಂತ್ರಣ ಮಾಡಿಕೊಳ್ಳದೆ ರೋಡಿನ ಕೆಳಗೆ ಕಲ್ಲಿನಲ್ಲಿ ಮೋಟರ ಸೈಕಲ ಸಮೇತ ಹಾರಿ ಬಿದ್ದಿದ್ದರಿಂದ ಆತನ ಮುಖಕ್ಕೆ ಬಾಯಿಗೆ ಮತ್ತು ತಲೆಗೆ ಅಲ್ಲಲ್ಲಿ ಗಾಯಗೊಂಡು ಸ್ಧಳದಲ್ಲಿ ಮೃತ ಪಟ್ಟಿರುತ್ತಾನೆ ಅಂತಾ ಮಾಹಿತಿ ಗೊತ್ತಾಗಿ ಕೂಡಲೆ ನಾನು ಹಾಗು ಆತನ ದೊಡ್ಡಪ್ಪನ ಮಗ ಸಾಯಿಬಣ್ಣ ಇಬ್ಬರೂ ಕೂಡಿ ಸ್ಧಳಕ್ಕೆ ಹೋಗಿ ನೋಡಲಾಗಿ, ನಮ್ಮ ಮಾಮನ ಮಗ ಬಾಬು ತಂದೆ ಶ್ರೀಮಂತ ಕವಲಗಿ ಈತನೆ ಇದ್ದು, ಈತನ ಮುಖಕ್ಕೆ, ತಲೆಗೆ ಹಾಗು ಮೈ ಕೈಗಳಿಗೆ ಭಾರಿ ರಕ್ತಗಾಯಗಳಾಗಿ, ಸ್ಧಳದಲ್ಲಿ ಮೃತ ಪಟ್ಟಿದ್ದು ಇರುತ್ತದೆ. ವಿಚಾರಣೆಯಲ್ಲಿ ವಿಷಯಗೊತ್ತಾಗಿದ್ದೆನೆಂದರೆ, ನಮ್ಮ ಮಾಮನ ಮಗ ಬಾಬು ತಂದೆ ಶ್ರೀಮಂತ ಈತನು ಈ ಮೋಟರ ಸೈಕಲದ ಮೇಲೆ ತನ್ನೂರಿಗೆ ಹೋಗುವ ಕುರಿತು ಹೋಗುವಾಗ ಮೋಟರ ಸೈಕಲದ ನಿಯಂತ್ರಣ ಮಾಡಿಕೊಳ್ಳದೆ ರೋಡಿನ ಬದಿಯ ತಗ್ಗಿನಲ್ಲಿ ಹಾರಿ ಬಿದ್ದಿದ್ದು ಈ ಘಟನೆಯು ಇಂದು ಬೆಳಿಗ್ಗೆ ೧೧:೦೦ ಗಂಟೆ ಸುಮಾರಿಗೆ ಸಂಭವಿಸಿರುವುದಾಗಿ ಮತ್ತು ಕಂಕರ ಮಶೀನದವರು ಯಾರೊ ಘಟನೆ ನೋಡಿರುವುದಾಗಿ ತಿಳಿದು ಬಂದಿದ್ದು, ಈ ವಿಷಯದಲ್ಲಿ ಮುಂದಿನ ಕಾನೂನು ಕ್ರಮ ಕೈಗೊಳ್ಳಬೇಕು ಅಂತಾ ಕೊಟ್ಟ ಫರ‍್ಯಾದಿ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಇತ್ತೀಚಿನ ನವೀಕರಣ​ : 14-12-2021 12:11 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080