Feedback / Suggestions

ಸಂಚಾರಿ-೦೨ ಪೊಲೀಸ ಠಾಣೆ :- ಇಂದು ಮಾನ್ಯರವರಲ್ಲಿ ಅರಿಕೆ ಮಾಡಿಕೊಳ್ಳುವುದೆನೆಂದರೆ,  ಇಂದು ದಿನಾಂಕ ೧೩/೧೨/೨೦೨೧ ರಂದು ಮಧ್ಯಾಹ್ನ ೨:೩೦ ಪಿ.ಎಮ್ ಕ್ಕೆ ಶ್ರೀ. ವಿನೋದಕುಮಾರ ತಂದೆ ನಾಗಪ್ಪಾ ಚಿಮ್ಮಾ ವಯಃ ೩೫ ರ‍್ಷ ಜಾತಿಃ ಪ.ಜಾತಿ(ಹೊಲೆಯ) ಉಃ ಇಟ್ಟಂಗಿ ಭಟ್ಟಿಯಲ್ಲಿ ಕೆಲಸ ಸಾಃ ನಿಂರ‍್ಗಾ ತಾಃ ಆಳಂದ ಹಾ.ವಃ ಕಾಕಡೆ ಚೌಕ ಕಲಬುರಗಿ ಇವರು ಠಾಣೆಗೆ ಬಂದು ಫರ‍್ಯಾದಿ ಹೇಳಿಕೆ ನೀಡಿದ್ದು ಸಾರಂಶವೆನೆಂದರೆನಾನು ಗುಂಡು ಮಾಲೀಕರ ಇಟ್ಟಂಗಿ ಭಟ್ಟಿಯಲ್ಲಿ ಲೇಬರ ಕೆಲಸ ಮಾಡಿಕೊಂಡಿರುತ್ತೆನೆ. ನನ್ನ ಜೊತೆಯಲ್ಲಿ ನನ್ನ ತಂದೆ ತಾಯಿ ಇರುತ್ತಿರುತ್ತಾರೆ. ನಮ್ಮ ತಾಯಿಯ ತಮ್ಮನ ಮಗನಾದ ಬಾಬು ತಂದೆ ಶ್ರೀಮಂತ ಕವಲಗಿ ವಯಃ ೩೦ ರ‍್ಷ ಸಾಃ ಗುಡುರ ಈತನು ತನ್ನ ಹೆಂಡತಿಗೆ ಬಿಟ್ಟಿದ್ದರಿಂದ ನಮ್ಮ ಹತ್ತೀರವೆ ಉಳಿದುಕೊಂಡು ಇಟ್ಟಂಗಿ ಭಟ್ಟಿಯಲ್ಲಿ ಲೇಬರ ಕೆಲಸ ಮಾಡಿಕೊಂಡಿರುತ್ತಾನೆ.  ನಮ್ಮದೊಂದು ಮೋಟರ ಸೈಕಲ ನಂ. ಎಮ್.ಹೆಚ್ ೨೪ ಎ.ಇ ೫೪೭೪ ನೇದ್ದು ಇರುತ್ತದೆ.  ಹೀಗಿದ್ದುಇಂದು ದಿನಾಂಕ ೧೩/೧೨/೨೦೨೧ ರಂದು ಮಾಮನ ಮಗ ಬಾಬು ಕವಲಗಿ ಈತನು ಈ ನಮ್ಮ ಮೋಟರ ಸೈಕಲನ್ನು ತೆಗೆದುಕೊಂಡು ತನ್ನೂರಾದ ಗುಡುರಕ್ಕೆ ಹೋಗುತ್ತೆನೆಂದು ಬೆಳಿಗ್ಗೆ ೯:೦೦ ಗಂಟೆ ನಂತರ ಇಟ್ಟಂಗಿ ಭಟ್ಟಿಯಿಂದ ಹೋದನು. ಮುಂದೆ ೧೨:೦೦ ಗಂಟೆ ನಂತರ ಯಾರೋ ನಮ್ಮ ಮಾಮನ ಮಗ ಬಾಬು ಈತನ ಫೋನಿನಿಂದ ನನಗೆ ಫೋನ್ ಮಾಡಿ ಈ ಫೋನ ಇರುವ ವ್ಯಕ್ತಿಯು ಹಿರಾಪೂರ ಬಬಲಾದ ಸವಳಗಿ ರೋಡಿನ ಸವಳಗಿ ಸೀಮೆಯ ಮುರರ‍್ಜಿ ದೆಸಾಯಿ ವಸತಿ ಶಾಲೆಯ ಹತ್ತೀರ ರೋಡಿನ ತಿರುವಿನಲ್ಲಿ ರೋಡಿನ ಬದಿಯಲ್ಲಿರುವ ಗಟಾರದ ತಗ್ಗಿನಲ್ಲಿ ಮೋಟರ ಸೈಕಲ ನಂ. ಎಮ್.ಹೆಚ್ ೨೪ ಎ.ಇ ೫೪೭೪ ನೇದ್ದರ ಮೇಲೆ ಕಲಬುರಗಿ ಕಡೆಯಿಂದ ತಾನೆ ಒಬ್ಬನೆ ಅತಿವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಮೋಟರ ಸೈಕಲ ನಿಯಂತ್ರಣ ಮಾಡಿಕೊಳ್ಳದೆ ರೋಡಿನ ಕೆಳಗೆ ಕಲ್ಲಿನಲ್ಲಿ ಮೋಟರ ಸೈಕಲ ಸಮೇತ ಹಾರಿ ಬಿದ್ದಿದ್ದರಿಂದ ಆತನ ಮುಖಕ್ಕೆ ಬಾಯಿಗೆ ಮತ್ತು ತಲೆಗೆ ಅಲ್ಲಲ್ಲಿ ಗಾಯಗೊಂಡು ಸ್ಧಳದಲ್ಲಿ ಮೃತ ಪಟ್ಟಿರುತ್ತಾನೆ ಅಂತಾ ಮಾಹಿತಿ ಗೊತ್ತಾಗಿ ಕೂಡಲೆ ನಾನು ಹಾಗು ಆತನ ದೊಡ್ಡಪ್ಪನ ಮಗ ಸಾಯಿಬಣ್ಣ ಇಬ್ಬರೂ ಕೂಡಿ ಸ್ಧಳಕ್ಕೆ ಹೋಗಿ ನೋಡಲಾಗಿನಮ್ಮ ಮಾಮನ ಮಗ ಬಾಬು ತಂದೆ ಶ್ರೀಮಂತ ಕವಲಗಿ ಈತನೆ ಇದ್ದುಈತನ ಮುಖಕ್ಕೆತಲೆಗೆ ಹಾಗು ಮೈ ಕೈಗಳಿಗೆ ಭಾರಿ ರಕ್ತಗಾಯಗಳಾಗಿಸ್ಧಳದಲ್ಲಿ ಮೃತ ಪಟ್ಟಿದ್ದು ಇರುತ್ತದೆ. ವಿಚಾರಣೆಯಲ್ಲಿ ವಿಷಯಗೊತ್ತಾಗಿದ್ದೆನೆಂದರೆನಮ್ಮ ಮಾಮನ ಮಗ ಬಾಬು ತಂದೆ ಶ್ರೀಮಂತ ಈತನು ಈ ಮೋಟರ ಸೈಕಲದ ಮೇಲೆ ತನ್ನೂರಿಗೆ ಹೋಗುವ ಕುರಿತು ಹೋಗುವಾಗ ಮೋಟರ ಸೈಕಲದ ನಿಯಂತ್ರಣ ಮಾಡಿಕೊಳ್ಳದೆ ರೋಡಿನ ಬದಿಯ ತಗ್ಗಿನಲ್ಲಿ ಹಾರಿ ಬಿದ್ದಿದ್ದು ಈ ಘಟನೆಯು ಇಂದು ಬೆಳಿಗ್ಗೆ ೧೧:೦೦ ಗಂಟೆ ಸುಮಾರಿಗೆ ಸಂಭವಿಸಿರುವುದಾಗಿ ಮತ್ತು ಕಂಕರ ಮಶೀನದವರು ಯಾರೊ ಘಟನೆ ನೋಡಿರುವುದಾಗಿ ತಿಳಿದು ಬಂದಿದ್ದುಈ ವಿಷಯದಲ್ಲಿ ಮುಂದಿನ ಕಾನೂನು ಕ್ರಮ ಕೈಗೊಳ್ಳಬೇಕು ಅಂತಾ ಕೊಟ್ಟ ಫರ‍್ಯಾದಿ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

Last Updated: 14-12-2021 12:11 PM Updated By: ADMIN


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : Kalaburagi City Police
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080