ಅಭಿಪ್ರಾಯ / ಸಲಹೆಗಳು

ಸಂಚಾರಿ ಪೊಲೀಸ್‌ ಠಾಣೆ -2 :- ಮಾನ್ಯರವರಲ್ಲಿ ಅರಿಕೆ ಮಾಡಿಕೊಳ್ಳುವುದೆನೆಂದರೆ, ಇಂದು ದಿನಾಂಕ 13/11/2022 ರಂದು ಬೆಳಿಗ್ಗೆ 06:00 ಗಂಟೆಗೆ ಶ್ರೀ. ಈಶ್ವರ ತಂದೆ ಶರಣಪ್ಪಾ ಇಟಿಕಾರ ವ; 22 ವರ್ಷ ಜಾ; ಕುರುಬ ಉ; ವ್ಯಾಪಾರ ಸಾ; ಮುದ್ದಡಗಾ ತಾ; ಕಮಲಾಪುರ ಜಿ; ಕಲಬುರಗಿ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಹೇಳಿಕೆ ಫಿರ್ಯಾದಿಯನ್ನು ನೀಡಿದ್ದು ಸಾರಂಶವೆನೆಂದರೆ, ನಿನ್ನೆ ದಿನಾಂಕ 12/11/2022 ರಂದು ತಮ್ಮ ಸೈಬಣ್ಣ ಈತನು ಈ ಮೋಟಾರ ಸೈಕಲ ತೆಗೆದುಕೊಂಡು ನಮ್ಮೂರಾದ ಮುದ್ದಡಗಿಯಿಂದ ಕಲಬುರಗಿಗೆ ತನ್ನ ವ್ಯಾಪಾರದ ಕೆಲಸಕ್ಕಾಗಿ ಕಲಬುರಗಿಗೆ ಹೋಗುವುದಾಗಿ ಬಂದಿದ್ದು ನಂತರ ಬೆಳಿಗ್ಗೆ 11:15 ಗಂಟೆ ಸುಮಾರಿಗೆ ನಮ್ಮೂರಿನವರಾದ ಸಿದ್ರಾಮಪ್ಪಾ ಪೊಲೀಸ್ ಪಾಟೀಲ. ಹಸನ ಮುಲ್ಲಾ ಮತ್ತು ಮಹಾಂತೇಶ ಕಂಬಾರ ಇವರು ನನಗೆ ಪೋನ್ ಮಾಡಿ ಮಾಹಿತಿ ತಿಳಿಸಿದೆನೆಂದರೆ. ಈಗ ಬೆಳಿಗ್ಗೆ 11:00 ಗಂಟೆ ಸುಮಾರಿಗೆ ಹುಮನಾಬಾದ ಕಲಬುರಗಿ ರೋಡಿನ ತಾವರಗೇರಾ ಕ್ರಾಸಿನ ಮೇಲೆ ಈತನು ಹುಮನಾಬಾದ ಕಡೆಯಿಂದ ಕಲಬುರಗಿ ಕಡೆಗೆ ಮೋಟಾರ ಸೈಕಲ ನಂ ಕೆಎ-32 ಇ.ಯು-1757 ನೇದ್ದರ ಮೇಲೆ ಬರುತ್ತಿರುವಾಗ ನಾವು ಹಿಂದೆ ಬಸ್ಸಿನಲ್ಲಿ ಬರುತ್ತಿದ್ದೇವು ಇದೆ ವೇಳೆಗೆ ತಾವರಗೇರಾ ಗ್ರಾಮದ ರೋಡಿನ ಕಡೆಯಿಂದ ಒಂದು ಹೀರೋ ಸ್ಪೇಲಂಡರ್ ಮೋಟಾರ ಸೈಕಲ ನಂ ಕೆಎ-32 ಇ.ಝಡ್-8611 ನೇದ್ದರ ಮೇಲೆ ಅದರ ಸವಾರನು ಇನ್ನೋಬನನ್ನು ಕೂಡಿಸಿಕೊಂಡು ಅತಿವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದವನೇ ಸೈಬಣ್ಣನಿಗೆ ಜೋರಿನಿಂದ ಡಿಕ್ಕಿ ಹೊಡೆದ ಪರಿಣಾಮ ಎಲ್ಲರೂ ಮೋಟಾರ ಸೈಕಲದ ಮೇಲೆ ಬಿದಿದ್ದು ಇವರಿಂದ ಸೈಬಣ್ಣನಿಗೆ ಮುಖದ ಭಾಗಕ್ಕೆ ಭಾರಿ ರಕ್ತಗಾಯವಾಗಿದ್ದು ಮತ್ತು ಎಡಗೈ ಮುರಿದಿದ್ದು ಅಲ್ಲಲ್ಲಿ ಗಾಯಗಳಾಗಿರುತ್ತವೆ, ಹಾಗೂ ಅಪಘಾತ ಪಡಿಸಿದವರಿಗೂ ಕೂಡಾ ಸಣ್ಣಪುಟ್ಟ ಗಾಯಗಳಾಗಿದ್ದು ಅವರ ಹೆಸರು ವಿಚಾರಣೆಯಲ್ಲಿ ಸುರಜ ಮತ್ತು ರವಿರಂಬಾ ಅಂತಾ ಗೋತ್ತಾಗಿರುತ್ತದೆ. ಇವರೆಲ್ಲರನ್ನು 108 ಅಂಬುಲೈನ್ಸದಲ್ಲಿ ಹಾಕಿಕೊಂಡು ಕಲಬುರಗಿ ಕಡೆಗೆ ಬರುತ್ತೇವೆ ಅಂತಾ ತಿಳಿಸಿದಕ್ಕೆ ನಾನು ಗಾಬರಿಗೊಂಡು ವಿಷಯ ತಿಳಿದುಕೊಂಡು ಬಸವೇಶ್ವರ ಆಸ್ಪತ್ರೆಗೆ ಹೋಗಿ ತಮ್ಮ ಸೈಬಣ್ಣನಿಗೆ ನೋಡಲಾಗಿ ಮತ್ತು ಮಾತನಾಡಿಸಿದ್ದು ಈ ಮೇಲಿನ ವಿಷಯವನೆ ತಿಳಿಸಿದನು. ವಿಚಾರಣೆಯಲ್ಲಿ ಮೋಟಾರ ಸೈಕಲ ಸವಾರರಾದ ಸುರಜ ಮತ್ತು ರವಿರಂಬಾ ಉಪಚಾರಕ್ಕಾಗಿ ಸರಕಾರಿ ಆಸ್ಪತ್ರೆಗೆ ಹೋಗಿರುವುದಾಗಿ ಗೋತ್ತಾಯತ್ತು ಮುಂದೆ ತಮ್ಮನು ಒಳರೋಗಿಯಾಗಿ ಉಪಚಾರ ಪಡೆಯುತ್ತಿರುವಾಗ ರಾತ್ರಿ 09:10 ಗಂಟೆ ಸುಮಾರಿಗೆ ರಸ್ತೆ ಅಪಘಾತದಲ್ಲಿ ಆದ ಗಾಯದಿಂದ ಗುಣಮುಖವಾಗದೆ ತಮ್ಮನು ಬಸವೇಶ್ವರ ಆಸ್ಪತ್ರೆಯಲ್ಲಿ ಮೃತ ಪಟ್ಟಿರುತ್ತಾನೆ. ಕಾರಣ ಮೋಟಾರ ಸೈಕಲ ನಂ ಕೆಎ-32 ಇ.ಝಡ್-8611 ನೇದ್ದರ ಸವಾರನ ವಿರುದ್ದ ಕಾನೂನು ಪ್ರಕಾರ ಕ್ರಮ  ಕೈಗೊಳ್ಳಬೇಕು ಅಂತಾ ಕೊಟ್ಟ ಫಿರ್ಯಾದಿ ಹೇಳಿಕೆ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 23-11-2022 04:37 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080