Feedback / Suggestions

ಅಶೋಕ ನಗರ ಪೊಲೀಸ್‌ ಠಾಣೆ :-  ದಿನಾಂಕ:13.10.2022 ರಂದು ಬೆಳಿಗ್ಗೆ 10:30 ಗಂಟೆ ಸುಮಾರಿಗೆ ಶ್ರೀ ಪ್ರಜ್ವಲ ತಂದೆ ಬಸವರಾಜ ಬಿರಾದಾರ ವಯ|| 19 ವರ್ಷ. || ವಿಧ್ಯಾರ್ಥಿ ಜ್ಯಾತಿ|| ಲಿಂಗಾಯತ ಸಾ|| ಮಣ್ಣೂರ ತಾ|| ಅಫಜಲಪೂರ ಹಾ||ವ||  ಸಾಯಿ ಮಂದಿರ ಹತ್ತಿರ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಕೊಟ್ಟ ಫಿರ್ಯಾದಿ ಅರ್ಜಿಯ ಸಾರಾಂಶವೆನೆಂದರೆ, ನಾನು ಬಿ.ಕಾಂ ವಿಧ್ಯಾಭ್ಯಾಸ ಮಾಡಿಕೊಂಡು ತಂದೆ ತಾಯಿಯೊಂದಿಗೆ ವಾಸವಾಗಿರುತ್ತೇನೆ. ನಮ್ಮ ತಂದೆ ತಾಯಿಗೆ ನಾನೊಬ್ಬನೆ ಮಗನಿರುತ್ತೇನೆ. ನಮ್ಮ ಸ್ವಂತ ಊರು ಅಫಜಲಪೂರ ತಾಲೂಕಿನ ಮಣ್ಣೂರ ಗ್ರಾಮವಿದ್ದು ನಾನು ವಿಧ್ಯಾಭ್ಯಾಸದ ಸಲುವಾಗಿ ಕಳೆದ 4 ವರ್ಷಗಳಿಂದ ಕಲಬುರಗಿ ನಗರದ ಸಾಯಿ ಮಂದಿರ ಹತ್ತಿರ ಒಂದು ಬಾಡಿಗೆ ರೂಮ ಪಡೆದುಕೊಂಡು ವಾಸವಾಗಿರುತ್ತೇನೆ.ನಮ್ಮ ತಂದೆ ಮತ್ತು ನಮ್ಮ ತಾಯಿ ಇಬ್ಬರೂ ಮಣ್ಣೂರ ಗ್ರಾಮದಲ್ಲಿ ವಾಸವಾಗಿರುತ್ತಾರೆ. ನಾನು ಆಗಾಗ ನಮ್ಮ ತಂದೆ-ತಾಯಿಯ ಹತ್ತಿರ ಹೋಗಿ ಬಂದು ಮಾಡುತ್ತಿರುತ್ತೇನೆ.  ಹೀಗಿದ್ದು ನಿನ್ನೆ ದಿನಾಂಕ 12.10.2022 ರಂದು 7:30 ಪಿ.ಎಂ.ಕ್ಕೆ ನಾನು ವಿಧ್ಯಾನಗರದಲ್ಲಿರುವ ನನ್ನ ಗೆಳೆಯನಾದ ರಾಹುಲ ಇತನಿಗೆ ಬೇಟಿಯಾಗುವ ಸಲುವಾಗಿ  ವಿಧ್ಯಾನಗರದಲ್ಲಿರುವ ಕಮೀಟಿ ಹಾಲ ಹತ್ತಿರ ಹೋಗಿ ನನ್ನ ಗೆಳೆಯ ರಾಹುಲ ಇತನಿಗೆ ಭೇಟಿಯಾಗಿ ಮಾತಾಡುತ್ತಾ ನಿಂತಿರುವಾಗ ಇದೆ ವೇಳೆಗೆ ವಿಧ್ಯಾನಗರ ಬಡಾವಣೆಯವನಾದ ಸಾಗರ ತಳವಾರ ಇತನು ಬಂದು ನನಗೆ ಮಧ್ಯ ಸೇವನೆ ಮಾಡಲು ಹಣ ಕೊಡು ಅಂತಾ ಕೇಳಿದನು. ಆಗ ನಾನು ನಾನೇಕೆ ನಿನಗೆ ಹಣ ಕೊಡಲಿ ನಾನು ನಿನಗೆ ಹಣ ಕೊಡುವದಿಲ್ಲಾ ಅಂತಾ ಅಂದಿದ್ದಕ್ಕೆ  ಸಾಗರ ಇತನು ನನ್ನೊಂದಿಗೆ ಜಗಳಕ್ಕೆ ಬಿದ್ದು ಅವಾಚ್ಛ ಶಬ್ದಗಳಿಂದ ಬೈಯುತ್ತಾ ಭೊಸಡಿ ಮಗನಾ ಎದುರು ಮಾತಾಡುತ್ತಿ ನಾನು ಯಾರು ಇದ್ದೇನೆ ನಿನಗೆ ಗೊತ್ತಿಲ್ಲಾ  ನಾನು ಈ ಏರಿಯಾದ ರೌಡಿ ಇದ್ದೇನೆ ನನಗೆ ರೊಕ್ಕ ಕೊಡಲ್ಲಾ ಅಂತಾ ಅನ್ನುತ್ತಾ ನನ್ನ ಎದೆಯ ಮೇಲಿನ ಅಂಗಿ ಹಿಡಿದು ಕೈಯಿಂದ ನನ್ನ ಎಡಗಡೆ ಕಪಾಳದ ಮೇಲೆ ಹೊಡೆದು ನೂಕಿದ್ದರಿಂದ ನಾನು ಕೆಳಗೆ ಬಿದ್ದಿದ್ದು ಆಗ ತನ್ನ ಸೊಂಟದಲ್ಲಿದ್ದ ಚಾಕು ಹೊರಗೆ ತಗೆದು ನಿನಗೆ ಇವತ್ತು ಕೊಲೆ ಮಾಡಿಯೆ ಬಿಡುತ್ತೇನೆ ಅಂತಾ ಅನ್ನತ್ತಾ ತನ್ನ ಕೈಯಲ್ಲಿದ್ದ ಚಾಕುವಿನಂದ ನನ್ನ ತಲೆಗೆ ಹೊಡೆದನು.ಇದರಿಂದ ನನ್ನ ತಲೆಗೆ ರಕ್ತಗಾಯವಾಗಿದ್ದು ಇರುತ್ತದೆ.ಆಗ ಅದೆ ಚಾಕುವಿನಿಂದ ಪುನಃ ನನ್ನ ಹೊಟ್ಟೆಗೆ ಹೊಡೆಯಲು ಬಂದಾಗ ನಾನು ಅವನಿಂದ ತಪ್ಪಿಸಿಕೊಂಡಿದ್ದು ಇರುತ್ತದೆ ಇಲ್ಲದಿದ್ದರೆ ಸಾಗರ ಇತನು ನನಗೆ ಕೊಲೆ ಮಾಡಿಯೆ ಬಿಡುತ್ತಿದ್ದನು. ಆಗ ನಾನು ಚಿರಾಡುವದನ್ನು ನೋಡಿ ನನ್ನ ಗೆಳೆಯ ರಾಹುಲ್ ಇತನು ಜಗಳ ಬಿಡಿಸಿದ್ದು ಇರುತ್ತದೆ. ನಂತರ ಸಾಗರ ಇತನು ಅಲ್ಲಿಂದ ಹೋಗುವಾಗ ನನಗೆ ಅವಾಚ್ಛ ಶಬ್ದಗಳಿಂದ ಬೈಯುತ್ತಾ ಭೊಸಡಿ ಮಗನಾ ಇವತ್ತು ನಿನಗೆ ಜೀವಂತ ಬಿಟ್ಟಿದ್ದೇನೆ ಇನ್ನೊಮ್ಮೆ ನಾನು ಕೇಳಿದಾಗ ನನಗೆ ಹಣ ಕೊಡದೆ ಇದ್ದರೆ ನಿನಗೆ ಜೀವಸಹಿತ ಬಿಡುವದಿಲ್ಲಾ ಅಂತಾ ಜೀವದ ಬೇದರಿಕೆ ಹಾಕಿ ಹೋಗಿರುತ್ತಾನೆ. ಅವನು ಹೋದ ನಂತರ ನಾನು ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆಗೆ ಹೋಗಿ ಪ್ರಥಮ ಚಿಕಿತ್ಸೆ ಮಾಡಿಸಿಕೊಂಡು ಈ ಘಟನೇಯ ಬಗ್ಗೆ ನನ್ನ ಗೆಳೆಯ ರಾಹುಲ ಇತನೊಂದಿಗೆ ವಿಚಾರಿಸಿ ಇಂದು ಠಾಣೆಗೆ ಬಂದು ದೂರು ಸಲ್ಲಿಸಿದ್ದು ಇರುತ್ತದೆ.  ಕಾರಣ ನಿನ್ನೆ ದಿನಾಂಕ 12.10.2022 ರಂದು 7:30 ಪಿ.ಎಂ.ಕ್ಕೆ ನನ್ನೊಂದಿಗೆ ಜಗಳಕ್ಕೆ ಬಿದ್ದು ನನಗೆ ಹೊಡೆ ಬಡೆ ಮಾಡಿ ಕೊಲೆ ಮಾಡಲು ಪ್ರಯತ್ನಿಸಿದ ಸಾಗರ ತಳವಾರ  ಇತನ ವಿರುದ್ದ ಕಾನೂನು ರೀತಿ ಕ್ರಮ ಕೈಕೊಳ್ಳಲು ವಿನಂತಿ. ಅಂತ ಇತ್ಯಾದಿಯಾಗಿ ಇದ್ದ ಫಿರ್ಯಾದಿ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

Last Updated: 09-11-2022 04:33 PM Updated By: ADMIN


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : Kalaburagi City Police
Designed, Developed and Hosted by: Center for e-Governance - Web Portal, Government of Karnataka © 2024, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080