ಅಭಿಪ್ರಾಯ / ಸಲಹೆಗಳು

ಸಬ್‌ ಅರ್ಬನ್‌ ಪೊಲೀಸ್‌ ಠಾಣೆ :- ದಿನಾಂಕ :- 13-09-2022  ಸರಕಾರಿ ತರಫೆ ಫಿರ್ಯಾದಿಯು ಸಲ್ಲಿಸಿದ ಫಿರ್ಯಾದಿಯೇನೆಂದರೆ ಖಚಿತ ಬಾತ್ಮಿ ಬಂದ ಮೇರೆಗೆ ದಾಳಿ ಮಾಡಲಾಗಿ ಸದರಿ ಆರೋಪಿತನು ಅಮಿತ್ ಪಾಟೇಲ್ ಶಾಲೆಯ ಹತ್ತಿರ ಅಕ್ರಮವಾಗಿ ಗಾಂಜಾ ಎಂಬ ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದಾಗ ಸದರಿಯವನನ್ನು ಇಬ್ಬರು ಪಂಚರ ಸಮಕ್ಷಮದಲ್ಲಿ ವಶಪಡಿಸಿಕೊಂಡು ಅವರ ವಿರುದ್ದ ಪ್ರಕರಣವನ್ನು ದಾಖಲಿಸಿಕೊಂಡು ಇರುತ್ತದೆ.

 

 

ಸಂಚಾರಿ ಪೊಲೀಸ್‌ ಠಾಣೆ -1 :- ದಿನಾಂಕ 13.09.2022 ರಂದು ಬೆಳಿಗ್ಗೆ 5-00 ಗಂಟೆಗೆ ಸರ್ಕಾರಿ ಆಸ್ಪತ್ರೆಯ ಓಪಿ ಸಿಬ್ಬಂದಿಯವರು ಠಾಣೆಗೆ ಪೋನ ಮಾಡಿ ಎಮ್.ಡಿ.ಆರೀಫ ಪಟೇಲ ಇವರು ರಸ್ತೆ ಅಪಘಾತ ಹೊಂದಿ ಉಪಚಾರ ಕುರಿತು ಬಂದು ಸೇರಿಕೆಯಾಗಿರುತ್ತಾರೆ ಅಂತಾ ತಿಳಿಸಿದ್ದರಿಂದ ನಾನು ಆಸ್ಪತ್ರೆಗೆ ಭೆಟಿಕೊಟ್ಟು ಗಾಯಾಳು ಶ್ರೀ ಮಹ್ಮದ ಆರಿಫ ಪಟೇಲ ಇವರನ್ನು ವಿಚಾರಿಸಲು ಅವರು ಕೊಟ್ಟ ಹೇಳಿಕೆ ಸಾರಂಶವೆನೆಂದರೆ ದಿನಾಂಕ 12-09-2022 ರಂದು ರಾತ್ರಿ ಅಂದಾಜು 11-30 ಗಂಟೆ ಸುಮಾರಿಗೆ ನಾನು ರೈಲ್ವೆ ಸ್ಟೇಶನ ಕಡಗೆ ನನಗೆ ಪರಿಚಯದವರನ್ನು ಬೆಟಿಯಾಗಲು ಹೋಗಿ ವಾಪಸ್ಸ ನಡೆದುಕೊಂಡು ಬ್ರಹ್ಮಪೂರ ಬಡವಾಣೆಯಲ್ಲಿರುವ ನನ್ನ ಬಾಡಿಗೆ ಮನೆಗೆ ಹೋಗಬೆಕು ಅಂತಾ ನಡೆದುಕೊಂಡು ಹೋಗುತ್ತೀರುವಾಗ ರೈಲ್ಬೆ ಸ್ಟೇಷನ ಮತ್ತು ಎಸ.ವಿ.ಪಿ ಸರ್ಕಲ ಮದ್ಯದಲ್ಲಿ ಬರುವ ಮಜೀದ ಸಮೀಪ ರೋಡ ಮೇಲೆ ಯಾವುದೋ ಒಂದು ಮೋಟಾರ ಸೈಕಲ ಸವಾರನು ತನ್ನ ಮೋಟಾರ ಸೈಕಲ ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ನನಗೆ ಭಾರಿಗಾಯಗೊಳಿಸಿ ತನ್ನ ವಾಹನ ಸಮೇತ ಓಡಿ ಹೋಗಿದ್ದು ಆತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಫಿರ್ಯಾದಿ ಹೇಳಿಕೆ ಸಾರಂಶ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 ಫರಹತಾಬಾದ ಪೊಲೀಸ ಠಾಣೆ :-  ನಾನು ಅಂದರೆ ಗುರುರಾಜ ಎಸ್ ತಂದೆ ದಿ. ಶ್ರೀನಿವಾಸರಾವ  ವಯಸ್ಸು: 59 ವರ್ಷ ಉದ್ಯೋಗ: ಪ್ರಾದೇಶಿಕ ವ್ಯವಸ್ಥಾಪಕರು ಕರ್ನಾಟಕ ಗ್ರಾಮೀಣ ಬ್ಯಾಂಕ್, ಪ್ರಾದೇಶಿಕ ಕಛೇರಿ, ರಾಜಾಪೂರ ರಸ್ತೆ, ಕಲಬುರಗಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ನಮ್ಮ ಪ್ರಾದೇಶಿಕ ಕಛೇರಿಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕನರ್ಾಟಕ ಗ್ರಾಮೀಣ ಬ್ಯಾಂಕ ಹಾಗರಗುಂಡಗಿ ಶಾಖೆಯಲ್ಲಿ ನಡೆದ ಹಣಕಾಸಿನ ಅವ್ಯವಹಾರದ ಕುರಿತು ದೂರು ಸಲ್ಲಿಸಲು ನಮ್ಮ ಹಿರಿಯ ಅಧಿಕಾರಿಗಳಿಂದ ನಿರ್ದೇಶಿತನಾಗಿದ್ದೇನೆ. ಹಾಗರಗುಂಡಗಿ ಶಾಖೆಯಲ್ಲಿ ಕಛೇರಿ ಸಹಾಯಕ/ಕ್ಯಾಶಿಯರ ಆದ ಶ್ರೀ ಅಭಿಷೇಕ ಕುಲಕರ್ಣಿಯ ವಿರುದ್ಧ ಈ ದೂರು ಸಲ್ಲಿಸಲಾಗುತ್ತಿದೆ. ಸದರಿ ಅಭಿಶೇಕ ಕುಲಕರ್ಣಿ ನಮ್ಮ ಬ್ಯಾಂಕಿನ ಗ್ರಾಹಕರಿಂದ ಉಳಿತಾಯ/ ಸಾಲದ ಖಾತೆಗೆ ಜಮೆ ಮಾಡಲು ಗ್ರಾಹಕರು ಪಾವತಿಸಿದ ಹಣವನ್ನು ಅವರ ಸಂಭಂಧಪಟ್ಟ ಖಾತೆಗೆ ಜಮೆ ಮಾಡದೆ ತನ್ನ ಸ್ವಂತಕ್ಕಾಗಿ ಬಳಸಿಕೊಂಡಿದ್ದು ನಮ್ಮ ಅಂತರಿಕ ತಪಾಸಣೆಯಲ್ಲಿ ದೃಡೀಕೃತವಾಗಿರುತ್ತದೆ. ಈ ಅವ್ಯವಹಾರದ ಕುರಿತು ಸದರಿ ಶಾಖೆಯ ಶಾಖಾ ವ್ಯವಸ್ಥಾಪಕರು ದಿನಾಂಕ:15-06-2021ರಂದು ಬ್ಯಾಂಕಿನ ಒಬ್ಬ ಗ್ರಾಹಕರಾದ ಶ್ರೀ ರೇವಣಸಿದ್ದಪ್ಪ ಕಾಂತರವರಿಂದ ದೂರಿನ ಮಾಹಿತಿಯನ್ನು ಪ್ರಾದೇಶಿಕ ಕಛೇರಿಗೆ ಸಲ್ಲಿಸಿರುತ್ತಾರೆ.  ಅದರಂತೆ ಸದರಿ ವಿಷಯವನ್ನು ತನಿಖೆ ಮಾಡಲು ಬ್ಯಾಂಕಿನ ಹಿರಿಯ ವ್ಯವಸ್ಥಾಪಕರಾದ ಶ್ರೀ ಬಂದೇನವಾಜ್ ಮುಲ್ಲಾರವರನ್ನು ನೇಮಿಸಿ ಅವರಿಂದ ಸಲ್ಲಿಸಲ್ಪಟ್ಟ ತನಿಖಾ ವರದಿಯನ್ನು ಈ ಫಿರ್ಯಾದಿಯೊಂದಿಗೆ ಲಗತ್ತಿಸುತ್ತಿದ್ದೇನೆ. ದುರುಪಯೋಗವಾದ ಹಣದ ವಿವರ ಕೆಳಗಿನಂತಿರುತ್ತದೆ.

 ಕ್ರ.ಸಂ.           ಖಾತೆ ಸಂಖ್ಯೆ                       ಹೆಸರು              ಮೊತ್ತ ರೂ.            

1                                                             

2              11110100002647               ಅನಸುಬಾಯಿ                 20000.00             

3              11110131010059               ನಾಗವೇಣಿ ಅರ್.ಕಾಂತಾ      3000.00

4              11110131006700               ರೇವಣಸಿದ್ದಪ್ಪ ಕಾಂತಾ         3000.00

5              11110100000073               ಮಲ್ಲಮ್ಮ                     20000.00             

6              11110100002838               ಉಸಮಾನಸಾಬ            60000.00             

7              11110100001993               ಇಮಾಮಸಾಬ ಫಕೀರ      29000.00             

8              11110101025705               ಯಮುನಾಬಾಯಿ           43000.00             

9              11110100007947               ಭಾಗ್ಯಶ್ರೀ                  30000.00             

10           11110101009114               ದಾನೇಶ್ವರಿ ಎಸ್.ಹೆಚ್.ಜಿ.  3600.00

11           11110101005145               ಅಕಬರಸಾ                  5000.00

12           11110100000745               ಗುರುಬಾಯಿ                30000.00             

13           11110101007435               ನಿಜಗುಣಾ    ಅಂಬಿಗರಾ   1975.00

14           41110114041619               ಚೌಡಯ್ಯಾ ಎಸ್.ಹೆಚ್.ಜಿ.  5000.00

15           11015114009318               ಭಾಗ್ಯಶ್ರೀ ಎಸ್.ಹೆಚ್.ಜಿ.   10000.00             

                                     ಒಟ್ಟು ರೂಪಾಯಿ                                 273575.00           

 

     ಶ್ರೀ ಅಭಿಷೇಕ ಕುಲಕಣರ್ಿಯವರು ದಿ:06-07-2021 ರಂದು ಬ್ಯಾಂಕ ಶಾಖೆಯ ಹಾಜರಿ ಪುಸ್ತಕದ ಪ್ರಕಾರ ಗೈರು ಹಾಜರಾಗಿದ್ದರೂ ಆ ದಿನ ಅವರು ಹಾಗರಗುಂಡಗಿ ಶಾಖೆಗೆ ಬಂದು ಕೆಳಕಂಡ ಗ್ರಾಹಕರ ಖಾತೆಗೆ ಈ ಕೆಳಗಿನಂತೆ ?? ಜಮೆ ಮಾಡಿರುತ್ತಾರೆ. 

 ಕ್ರ.ಸಂ.    ಖಾತೆ ಸಂಖ್ಯೆ                               ಹೆಸರು                         ಮೊತ್ತ ರೂ.            

1              11110100001993               ಇಮಾಮಸಾಬ ಫಕೀರ          29000.00             

2              11110101025705               ಯಮುನಾಬಾಯಿ               43000.00             

3              11110100007947               ಭಾಗ್ಯಶ್ರೀ                       30000.00             

4              11110101014046               ರುಕಮಣಿ                      10000.00             

5              11110101009114               ಧಾನೇಶ್ವರಿ ಎಸ್.ಹೆಚ್.ಜಿ.     3600.00

6              11110101005145               ಅಕಬರಸಾ                     5000.00

7              11110100000745               ಗುರುಬಾಯಿ                   30000.00             

8              11110101007435               ನಿಜಗಾಂವ                   1975.00

9              41110114041619    ಅಂಬಿಗರಾ ಚೌಡಯ್ಯಾ ಎಸ್.ಹೆಚ್.ಜಿ   5000.00

10           11110100002838               ಉಸಮಾನ ಸಾಬ            60000.00             

11           11015114009318               ಭಾಗ್ಯಶ್ರೀ ಎಸ್.ಹೆಚ್.ಜಿ.     10000.00             

                 ಒಟ್ಟು ರೂಪಾಯಿ                                                        227575.00           

               

  ಹಾಗೂ ಸದರಿ ಶ್ರೀ ಅಭಿಷೇಕ ಕುಲಕರ್ಣಿ ಅವರು ಈ ಕೆಳಗಿನ ಗ್ರಾಹಕರ ದೂರಪಯೋಗ ಪಡಿಸಲ್ಪಟ್ಟ ಹಣವನ್ನು ಸದರಿಯವರ ಖಾತೆಗೆ ಈ ರೀತಿಯಲ್ಲಿ ಪಾವತಿಸಿರುತ್ತಾ??.

 ಕ್ರ.ಸಂ.           ಖಾತೆ ಸಂಖ್ಯೆ                  ಹೆಸರು           ದಿನಾಂಕ             ಮೊತ್ತ ರೂ.            

1              11110100002647       ಅನಸುಬಾಯಿ   08-06-2021   20000.00            

2              11110100000073      ಮಲ್ಲಮ್ಮ      19-08-2021   20000.00             

3              11110131010059    ನಾಗವೇಣಿ ಅರ್.ಕಾಂತಾ 19-08-2021   3000.00

4              11110131006700   ರೇವಣಸಿದ್ದಪ್ಪ ಕಾಂತಾ  19-08-2021   3000.00

                  ಒಟ್ಟು ರೂಪಾಯಿ                                                            46000.00             

    ಹೀಗಾಗಿ ನಮ್ಮ ಹಾಗರಗುಂಡಗಿ ಶಾಖೆಯ ಕ್ಯಾಶಿಯರಾದ ಶ್ರೀ ಅಭಿಷೇಕ ಕುಲಕರ್ಣಿ ಅವರು ಒಟ್ಟು ರೂ.2,73,575/- ಹಣವನ್ನು ದುರ್ಬಳಕ್ಕೆ ಮಾಡಿಕೊಂಡಿದ್ದು ರುಜುವಾತಾಗಿರುತ್ತದೆ. ಈ ವಿಷಯವು ಬ್ಯಾಂಕಿನ ಆಂತರಿಕ ವಿಚಾರವಾಗಿದರಿಂದ ಸಾರ್ವಜನಿಕವಾಗಿ ಪ್ರಚಾರ ಮಾಡದೇ ಇದ್ದು , ಶ್ರೀ ಅಬಿಷೇಕ ಕುಲಕರ್ಣಿ ರವರು ಇನ್ನು ಬೇರೆಯವರ ಅಕೌಂಟಗಳ ದುರುಪಯೋಗ ಮಾಡಿಕೊಂಡಿದ್ದಾನೆ ಹೇಗೆ ಎಂಬುವುದನ್ನು ತಿಳಿದುಕೊಂಡು ಈಗ ಒಂದು ವರ್ಷವಾದರೂ ಸಾರ್ವಜನಿಕರಿಂದ ಯಾವುದೇ ದೂರು ಬಾರದೇ ಇದ್ದಿದ್ದರಿಂದ ತಡವಾಗಿ ಬಂದು ದೂರು ಸಲ್ಲಿಸಲಾಗುತ್ತಿದೆ. ಶ್ರೀ ಅಭಿಷೇಕ ಕುಲಕರ್ಣಿರವರು ಹಾಗರಗುಂಡಗಿ ಶಾಖೆಯಲ್ಲಿ ದಿನಾಂಕ:20.04.2021 ರಿಂದ 19.05.2021 ರ ಮಧ್ಯೆದ ಅವಧಿಯಲ್ಲಿ ಘಟನೆ ಜರುಗಿರುತ್ತದೆ. ಈ ಫಿರ್ಯಾದಿಯನ್ನು ಸ್ವೀಕರಿಸಿ ಸದರಿ ಆರೋಪಿಯಾದ ಶ್ರೀ ಅಭಿಷೇಕ ಕುಲಕರ್ಣಿ ಅವರ ಮೇಲೆ ಕಾನೂನ ಕ್ರಮಕೈಗೊಳ್ಳಲು ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ ಅಂತಾ ಇತ್ಯಾದಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ. 

ಇತ್ತೀಚಿನ ನವೀಕರಣ​ : 22-09-2022 03:21 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080