ಅಭಿಪ್ರಾಯ / ಸಲಹೆಗಳು

ಸಬ್‌ ಅರ್ಬನ್‌ ಪೊಲೀಸ ಠಾಣೆ :- ದಿನಾಂಕಃ- 13-08-2022  ರಂದು ಫಿರ್ಯಾದಿದಾರರು ಫಿರ್ಯಾದಿ ನೀಡಿದ್ದೇನೆಂದರೆ ಸಬ್ ಅರ್ಬನ್ ಪೊಲೀಸ್ ಠಾಣೆಯ ಸಿಬ್ಬಂದಿ ಜನರು ಖಚಿತ ಬಾತ್ಮಿ ಬಂದ ಮೇರೆಗೆ ಕೆಎ ೨೫ ಸಿ ೧೯೫೦ ರ ನಂಬರಿನ ಈಚರ್ ವಾಹನವದಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ತೆಗೆ ಸೇರಿದ ಅಕ್ಕಿಯನ್ನು ಸಾಗಿಸುತ್ತಿದ್ದಾರೆಂದು ಖಚಿತ ಬಾತ್ಮಿಬಂದ ಮೇರೆಗೆ ದಾಳೀ ಮಾಡಲಾಗಿ ಸದರಿ ವಾಹನವನ್ನು ಚೆಕ್ ಮಾಡಲಾಗಿದ್ದು ಸದರಿ ವಾಹನದಲ್ಲಿ ಅಕ್ಕಿಯನ್ನು ಸಾಗಿಸುತ್ತಿದ್ದು ಕಾಗದ ಪತ್ರಗಳನ್ನು ಕೇಳಲಾಗಿ ಅವರ ಬಳಿಯಲ್ಲಿ ಕಾಗದ ಇರುವುದಿಲ್ಲ ಸದರಿ ವಾಹನ ಮತ್ತು ಮುದ್ದೆಮಾಲನ್ನು ವಶಕ್ಕೆ ಪಡೆದು ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಅಶೋಕ ನಗರ ಪೋಲೀಸ್‌ ಠಾಣೆ :-  ದಿನಾಂಕ: 13-08-2022 ರಂದು ೦೬:೦೦ ಪಿ.ಎಂ. ಕ್ಕೆ ಫಿರ್ಯಾದಿ ಶ್ರೀ ಮಹ್ಮದ್ ಸಾದೀಕ್ ತಂದೆ ಅಬ್ದುಲ್ ಸಲಾಮ ಖಸಾಬ ವಯ: ೩೬ ವರ್ಷ ಜಾ: ಮುಸ್ಲಿಂ ಉ: ಚಿಕನ್ ವ್ಯಾಪಾರ ಸಾ|| ಮನೆ ನಂ. ೭-೨೭೫ ಖುರೇಷಿ ಮಜೀದ್ ಹತ್ತಿರ, ಮೋಮಿನಪುರ, ಕಲಬುರಗಿ ಇವರು ಠಾಣೆಗೆ ಹಾಜರಾಗಿ ಕೊಟ್ಟ ಫಿರ್ಯಾದಿ ಅರ್ಜಿಯ ಸಾರಾಂಶವೆನೆಂದರೆ, ನಾನು ನನ್ನ ದಿನ ನಿತ್ಯದ ಕೆಲಸಕ್ಕೆ ಓಡಾಡುವ ಸಲುವಾಗಿ ೨೦೧೭ ನೇ ಸಾಲಿನಲ್ಲಿ ಒಂದು ಹಿರೋ ಸ್ಪ್ಲೇಂಡರ್ ಪ್ಲಸ್  ಮೋಟಾರ ಸೈಕಲ್ ನಂ ಕೆ.ಎ-೩೨ ಇ.ಕ್ಯೂ- ೬೭೨೮ ಸಿಲ್ವರ್ ಕಲರ್ ನೇದ್ದರ ಚೆಸ್ಸಿ ನಂ MBLHAR078HHG15011 ಇಂಜಿನ್ ನಂ HA10AGHHG16306  ಅ.ಕಿ.೩೮,೦೦೦ /-  ರೂಪಾಯಿ ನೇದ್ದು ಖರೀದಿಸಿದ್ದು ಇರುತ್ತದೆ.    ಹೀಗಿದ್ದು ದಿನಾಂಕ: ೦೮.೦೪.೨೦೨೨ ರಂದು ೦೯:೦೦ ಪಿ.ಎಮ್.ಕ್ಕೆ ಕೇಂದ್ರ ಬಸ್ ನಿಲ್ದಾಣದ ಎದುರುಗಡೆ ನಿಲ್ಲಿಸಿ ಒಳಗಡೆ ಹೋಗಿ ಮರಳಿ ೦೯:೪೫ ಪಿ.ಎಮ್. ಸುಮಾರಿಗೆ  ನಾನು ಹೊರಗಡೆ ಬಂದು ನೋಡಲಾಗಿ ನನ್ನ ದ್ವಿಚಕ್ರ ವಾಹನ ಇದ್ದಿರುವುದಿಲ್ಲ. ನಾನು ಗಾಬರಿಯಾಗಿ ಎಲ್ಲಾ ಕಡೆ ಹುಡುಕಾಡಲಾಗಿ ನನ್ನ ವಾಹನ ಸಿಕ್ಕಿರುವುದಿಲ್ಲ. ನಂತರ ಈ ಘಟನೆ ಬಗ್ಗೆ ಮನೆಯಲ್ಲಿ ತಿಳಿಸಿ ಕಲಬುರಗಿ ನಗರದಲ್ಲಿ ಮತ್ತು ಹೊರವಲಯಗಳಲ್ಲಿ ಎಲ್ಲಾ ಕಡೆಗಳಲ್ಲಿ  ಇಲ್ಲಿಯವರೆಗೆ  ಹುಡಿಕಾಡಿದರು ಸಹ ನನ್ನ  ವಾಹನ ಸಿಕ್ಕಿರುವುದಿಲ್ಲ. ಕಾರಣ ಇಂದು ತಡವಾಗಿ ಠಾಣೆಗೆ ಬಂದು ದೂರು ಸಲ್ಲಿಸಿತ್ತಿದ್ದು ಕಳವುವಾದ ನನ್ನ ಮೋಟಾರ ಸೈಕಲನ್ನು ಪತ್ತೆ ಮಾಡಿ ಕಳ್ಳತನ ಮಾಡಿದವರ ವಿರುದ್ದ ಕಾನೂನು ರೀತಿ ಕ್ರಮ ಜರುಗಿಸಿ ನನ್ನ ವಾಹನ ನನಗೆ ದೊರಕಿಸಿ ಕೊಡಲು ವಿನಂತಿ ಅಂತಾ ಇತ್ಯಾದಿ ಇದ್ದ ಫಿರ್ಯಾದಿಯ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಸಿ.ಇ.ಎನ್‌ ಪೊಲೀಸ್‌ ಠಾಣೆ :-  ದಿನಾಂಕ: 13/08/2022 ರಂದು 18:00 ಗಂಟೆಗೆ ಪಿರ್ಯಾದಿ ದೇವಿಂದ್ರಪ್ಪಾ ತಂದೆ ಗುಂಡಪ್ಪಾ ಮುಳಕೇರಿ ವಯ: 49 ವರ್ಷ ಜಾತಿ: ಲಿಂಗಾಯತ ಉ: ಮುಖ್ಯ ಪೇದೆ ನಂ-21ಸಾ: ಸೈಬರ್ ಆರ್ಥಿಕ  ಮತ್ತು ಮಾದಕ ವಸ್ತುಗಳ ಅಪರಾಧ ಪೊಲೀಸ್ ಠಾಣೆ ಕಲಬುರಗಿ ನಗರ. ಮೊ.ನಂ. 9900573944 ಕೊಡುವ ಸ್ವಯಂ ಪ್ರೇರಿತ ಸ||ತ|| ಫಿರ್ಯಾಧಿ ರವರು ನೀಡಿದ ದೂರಿನ ಸಾರಾಂಶವೆನೆಂದರೆ, ಇಂದು ದಿನಾಂಕ: 13/08/2022 ರಂದು ಮಾನ್ಯ ಪೊಲೀಸ್ ಮಹಾನಿರ್ದೇಶಕರ  ಕಛೇರಿ ಸಿ,ಐ,ಡಿ ವಿಶೇಷ ಘಟಕಗಳು ಮತ್ತು ಆರ್ಥಿಕ ಅಪರಾಧಗಳು, ವಿಭಾಗ ರವರ ಪತ್ರ ಸಂಖ್ಯೆ:01/ಸೈಬರ್ಟಿಪ್ಲೈನ್/ಸಿಸಿಪಿಡಬ್ಯ್ಲೂಸಿ/ಸಿಐಡಿ/2019 ದಿನಾಂಕ: 06/08/2022 ಇದ್ದು ಅಂಚೆಯ ಮೂಲಕ ಒಂದು ಪತ್ರ ಮತ್ತು ಸಿ,ಡಿ ವಸೂಲಾಗಿದ್ದು ಮಾನ್ಯ ಪೊಲೀಸ್ ಉಪಾ-ಅಧೀಕ್ಷಕರು ಸಿ,ಟಿ,ಮತ್ತುಆರ್ ವಿಭಾಗ ಸಿ,ಐ,ಡಿ ಬೆಂಗಳೂರು ರವರ ಪತ್ರದ ಸಾರಾಂಶವೆನೆಂದರೆ, ಕೇಂದ್ರ ಸರಕಾರವು ಕಾಣೆಯಾದ ಮತ್ತು ಶೋಷಿತ ಮಕ್ಕಳ ಕೇಂದ್ರವನ್ನು National center for missing and exploited children  ದಿನಾಂಕ: 26/04/2019 ರಂದು ಸ್ಥಾಪಿಸಿರುತ್ತದೆ. ಈ ಶೋಷಿತ ಮಕ್ಕಳ ಬಗ್ಗೆ ಮಾಹಿತಿ ಒಳಗೊಂಡಿರುವ Cyber Tip Line Report  ಸಿ,ಡಿಯನ್ನು ಎನ್,ಸಿ,ಆರ್,ಬಿ ರವರು ಅಂಚೆಯ ಮೂಲಕ ಪಡೆದುಕೊಂಡಿದ್ದು ಸದರಿ ಸೈಬರ್ ಟೀಪ್ ಲೈನಲ್ಲಿ ನೋಂದಣಿಯಾಗಿರುವ ದೂರುಗಳನ್ನು ಪರಿಶಿಲಿಸಿ ವಿಚಾರಣೆ ಕೈಗೊಂಡು ದೂರನ್ನು ಸಂಭಂದಪಟ್ಟ ಸರಹದ್ದಿನ ಪೊಲೀಸ್ ಅಧಿಕಾರಿಗಳು ದಾಖಲಿಸಿಕೊಂಡು ತನಿಖೆ/ವಿಚಾರಣೆ ಕೈಗೊಳ್ಳುವ ಪ್ರಕ್ರೀಯ ಚಾಲತಿಯಲ್ಲಿರುತ್ತದೆ. ಅದರಂತೆ Cyber Tip Line  ನಲ್ಲಿ ಕರ್ನಾಟಕ ರಾಜ್ಯಕ್ಕೆ ಸಂಭಂದಿಸಿದ ದೂರುಗಳನ್ನು ಸಿ,ಡಿಯಲ್ಲಿ ನೀಡಿದ್ದು ಅವುಗಳನ್ನು ಪರಿಶೀಲಿಸಿ ವಿಲೆವಾರಿ ಮಾಡುವ ಬಗ್ಗೆ ಹಾಗೂ ಸೂಕ್ತ ಕ್ರಮ ಕೈಗೊಳ್ಳವ ಬಗ್ಗೆ ಎಸ್,ಪಿ, ಸಿ,ಟಿ, ಮತ್ತು ಆರ್ ವಿಭಾಗ ಸಿ,ಐ,ಡಿ ಬೆಂಗಳೂರವರನ್ನು ನೊಡಲ್ ಅಧಿಕಾರಿಯನ್ನಾಗಿ ನೇಮಕ ಮಾಡಲಾಗಿರುತ್ತದೆ. ಅದರಂತೆ Cyber Tip Line Report ನಂ: 90077726 ದೂರನ್ನು ಸ್ವೀಕರಿಸಿದ್ದು ಸದರಿ ದೂರಿನ ಪ್ರಾಥಮಿಕ ವಿಚಾರಣೆಯನ್ನು ಕೈಗೊಂಡಿದ್ದು ಆರೋಪಿತನ ವಿಳಾಸವು  ಈ ಕೆಳಕಂಡ ವಿಳಾಸದಲ್ಲಿ ಪತ್ತೆಯಾಗಿದ್ದು ಸದರಿ ವಿಳಾಸ ತಮ್ಮ ಸದರಹದ್ದಿಯ ವ್ಯಾಪ್ತಿಗೆ ಒಳಪಡುವುದಾಗಿ ಮಾಹಿತಿ ಲಭ್ಯವಾಗಿರುತ್ತದೆ. Name: Sachinkumar B Alur s/o Babappa  Address: H NO:1-889/26/C1, Mahadevi Nilaya New Jewargi Road, Mahaveer Nagar, Gulbarga. Behind Kothari Bhavan Gulbarag-585102. Phone No:-9949925944 ಅಂತಾ ಇದ್ದು. ಆದರಿಂದ ಮೇಲ್ಕಂಡ ದೂರಿನ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಸಲುವಾಗಿ ವಗರ್ಾಯಿಸಲಾಗುತ್ತಿದ್ದು ತಾವುಗಳು ಕೂಡಲೇ, ತಮ್ಮ ವ್ಯಾಪ್ತಿಯಲ್ಲಿ ಪ್ರಕರಣ (ಎಫ್,ಐ,ಆರ್) ದಾಖಲಿಸಿ ತನಿಖೆ ಕೈಗೊಳ್ಳಲು ಸೂಚಿಸಲಾಗಿರುತ್ತದೆ. ಅದರಂತೆ ಇಂದು ದಿನಾಂಕ: 13/08/2022 ರಂದು ಮಾನ್ಯ ಪೊಲೀಸ್ ಅಧೀಕ್ಷಕರು ಸಿ,ಟಿ,ಮತ್ತುಆರ್ ವಿಭಾಗ ಸಿ,ಐ,ಡಿ ಬೆಂಗಳೂರು ರವರಿಂದ ಸ್ವೀಕರಿಸಿದ Cyber Tip Line  ಸಿ,ಡಿ-22 ಯನ್ನು Cyber Tip Line Report  ನಂ: 90077726ನೇದ್ದನ್ನು ಪರಿಶಿಲಿಸಿ ನೋಡಲಾಗಿ (ದಿನಾಂಕ: 05/12/2021ರಂದು 22:29:42UTC) ದಿನಾಂಕ: 05/12/2021 ರಂದು 03:59 ಬೆಳಿಗಿನ ಜಾವ(UÀAmÉUÉIST) 1) ಒಬ್ಬ ಬಾಲಕಿ ಮತ್ತು ಅಪ್ರಾಪ್ತ ಬಾಲಕ ಇಬ್ಬರು ಕೂಡಿಕೊಂಡು ಲೈಂಗಿಕ ಕ್ರೀಯೆಯಲ್ಲಿ ತೊಡಗಿದ 51 ಸೆಕೆಂಡಿನ ವಿಡಿಯೋ ಇದ್ದು ಮತ್ತು 2) ಇಬ್ಬರು ಅಪ್ರಾಪ್ತ ಬಾಲಕರು ಕೂಡಿಕೊಂಡು ಲೈಂಗಿಕ ಕ್ರೀಯೆಯಲ್ಲಿ ತೊಡಗಿದ್ದ ಒಟ್ಟು 4 ನಿಮೀಷದ 57 ಸೆಕೆಂಡಗಳ ವಿಡಿಯೋ ಇರುತ್ತದೆ. ಸದರಿ ಪ್ರಕರಣದ ಆರೋಪಿಯ ಐ,ಪಿ, ವಿಳಾಸ ಇತರೆ ಮಾಹಿತಿ ಒಳಗೊಂಡಿದ್ದು ಇರುತ್ತದೆ. ಸದರಿ ದೂರಿನ ಬಗ್ಗೆ ಇಂದು ದಿನಾಂಕ: 13/08/2022 ರಂದು ಸಿ,ಡಿಯಲ್ಲಿ ಮಾಹಿತಿಯನ್ನು ದೃಡ ಪಡಿಸಿಕೊಂಡುದ್ದು  ಕಾರಣ ಆರೋಪಿತನಾದ Name: Sachinkumar B Alur s/o Babappa  Address: H NO:1-889/26/C1, Mahadevi Nilaya New Jewargi Road, Mahaveer Nagar, Gulbarga. Behind Kothari Bhavan Gulbarag-585102. Phone No:-9949925944 ಇತನ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ವಿನಂತಿ. ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಸಂಚಾರಿ ಪೊಲೀಸ್‌ ಠಾಣೆ -2 :-  ದಿನಾಂಕ 13/08/2022 ರಂದು 7:30 ಪಿ.ಎಮ್ ಕ್ಕೆ ಆಕಾಶ ತಂದೆ ಪ್ರಕಾಶ ಪವಾರ ವಯಃ 20 ವರ್ಷ ಜಾತಿಃ ಲಂಬಾಣಿ  ಮುಕ್ಕಾಃ ನಂದೂರ ಇಂಡಸ್ಟ್ರಿಯಲ ಏರಿಯಾ ಕಲಬುರಗಿ ಇವರು ಸಹಿ ಮಾಡಿದ ಫಿರ್ಯಾದಿ ಅರ್ಜಿಯನ್ನು  ಪ್ರಕಾಶ ಪವಾರ ಇವರು ಠಾಣೆಗೆ ಹಾಜರಾಗಿ ದೂರು ಅರ್ಜಿ ನೀಡಿದ್ದು ಸದರಿ ದೂರಿನ ಸಾರಂಶವೆನೆಂದರೆ, ನಿನ್ನೆ ದಿನಾಂಕ 12/08/2022 ರಂದು ನಾನು ಬೆಳಿಗ್ಗೆಯಿಂದ ನಂದೂರ ಇಂಡಸ್ಟ್ರಿಯಲ ಏರಿಯಾದಲ್ಲಿರುವ ನಂದಿನ ಪಾರ್ಲರ ಬೇಕರಿಯಲ್ಲಿ ಕೆಲಸ ಮಾಡಿ ಬೇಕರಿಗೆ ಬೇಕಾಗುವ ಸಾಮಾನುಗಳನ್ನು ತರುವ ಕುರಿತು ನಮ್ಮ ಸಂಬಂಧಿಕರ ಡಿಯೊ ಮೋಟರ ಸೈಕಲ ನಂ. ಕೆಎ 32 ಇ.ಎಮ್ 7053 ನೇದ್ದು ತೆಗೆದುಕೊಂಡು ಕಲಬುರಗಿಗೆ ಬಂದು ಸಾಮಾನುಗಳನ್ನು ಖರೀದಿ ಮಾಡಿಕೊಂಡು ಮರಳಿ ಹೋಗುವಾಗ ನೃಪತುಂಗ ಕಾಲೋನಿ ಹತ್ತೀರ ಇಟ್ಟಂಗಿ ಭಟ್ಟಿ ಹತ್ತೀರ ನಮ್ಮ ಸಂಬಂಧಿಕರಾದ ಸುನೀತಾ ತಂದೆ ಕಿಶನ ಚವ್ಹಾಣ ಮತ್ತು ಅವರ ತೆಂಗಿ ಅಂಜಲಿ ತಂದೆ ಕಿಶನ ಚವ್ಹಾಣ ಇವರು ತಮ್ಮ ಮನೆಗೆ ಹೋಗುವ ಕುರಿತು ರೋಡಿಗೆ ನಿಂತಿದ್ದು, ಅವರು ಕೈ ಮಾಡಿದಾಗ ಅವರನ್ನು ಕೂಡಿಸಿಕೊಂಡು ಶಹಾಬಾದ ರೋಡಿನ ಕಡೆಗೆ ಸ್ವಲ್ಪ ಅಂತರದಲ್ಲಿ ನೃಪತುಂಗ ಕಾಲೋನಿಯ ಗೇಟಿನ ಹತ್ತೀರ ಹೋಗುತ್ತಿದ್ದಾಗ 07:40 ಪಿ.ಎಮ್ ಕ್ಕೆ ನಮ್ಮ ಹಿಂದಿನಿಂದ ಒಂದು ಬುಲೇರೊ ಪಿಕಪ ವಾಹನ ನಂ. ಕೆಎ 32 ಎಎ 1134 ಇದರ ಚಾಲಕನು ವೇಗವಾಗಿ ಮತ್ತು ನಿರ್ಲಕ್ಷತನದಿಂದ ಬಂದವನೆ ರೋಡಿನ ಬಲಕ್ಕೆ ಯುಟರ್ನ ತೆಗೆದುಕೊಳ್ಳುವಾಗ ಯಾವುದೆ ಇಂಡಿಕೇಟರಗಳನ್ನು ಹಾಕದೆ ಒಮ್ಮೇಲೆ ಬಲಕ್ಕೆ ತೆಗೆದುಕೊಂಡಿದಕ್ಕೆ ವಾಹನಕ್ಕೆ ಟಚ್ ಆಗಿ ನಾವು ಮೂವರು ಬಿದ್ದಿದ್ದು, ಇದರಿಂದ ಬಲಗೈ ಮುಂಗೈ ಹತ್ತೀರ ಕೈ ಮುರದಿದ್ದು, ತುಟಿಗೆ ರಕ್ತಗಾಯವಾಗಿದ್ದು ಹಾಗು ಅಲ್ಲಲ್ಲಿ ತರಚಿದಗಾಯವಾಗಿದ್ದು, ಸುನೀತಾಳಿಗೆ ಎರಡು ಮೊಳಕಾಲಿಗೆ ಹಾಗು ಅಲ್ಲಲ್ಲಿ ರಕ್ತಗಾಯ, ಅಂಜಲಿ ಇವಳಿಗೆ ಎಡಗಾಲಿನ ತೊಡೆಗೆ ಭಾರಿ ಪ್ರಮಾಣದ ಗಾಯವಾಗಿ ಎಲುಬು ಮುರದಿರುತ್ತದೆ. ಬುಲೇರೊ ವಾಹನದ ಚಾಲಕನು ವಾಹನವನ್ನು ಅಲ್ಲಿಯೇ ನಿಲ್ಲಿಸಿ ಓಡಿ ಹೊಗಿದ್ದು, ಆತನಿಗೆ ನಾವು ಚೀರಾಡಿ ನಿಲ್ಲಲು ಹೇಳಿದರು ಹಾಗೆ ಓಡಿ ಹೋಗಿರುತ್ತಾನೆ. ಆತನಿಗೆ ನೋಡಿರುತ್ತೆವೆ. ಮುಂದೆ ನಾನು ಬಸವೇಶ್ವರ ಆಸ್ಪತ್ರೆಗೆ, ಸುನೀತಾ ಮತ್ತು ಅಂಜಲಿ ಇವರು ಸರಕಾರಿ ಆಸ್ಪತ್ರೆ ಕಲಬುರಗಿಗೆ ಉಪಚಾರ ಕುರಿತು ಸೇರಿಕೆಯಾಗಿ, ನಂತರ ಸುನೀತಾ ಮತ್ತು ಅಂಜಲಿ ಇವರು ಪಿ.ಜಿ ಶಹಾ ಆಸ್ಪತ್ರೆಯಲ್ಲಿ ತೊರಿಸಿಕೊಂಡಿರುತ್ತಾರೆ. ನಾನು ಮನೆಯಲ್ಲಿ ವಿಚಾರಿಸಿಕೊಂಡು, ಬುಲೇರೊ ಪಿಕಪ ವಾಹನ ನಂ. ಕೆಎ 32 ಎಎ 1134 ನೇದ್ದರ ಚಾಲಕನ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಅಂತಾ ಕೊಟ್ಟ ಫಿರ್ಯಾಧಿ ಅರ್ಜಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸಂಚಾರಿ ಪೊಲೀಸ್‌ ಠಾಣೆ -2 :-   ದಿನಾಂಕ 13/08/2022 ರಂದು 6.30 ಪಿ.ಎಮ್ ಕ್ಕೆ ಶ್ರೀ ವಿಜಯಕುಮಾರ ತಂದೆ ಬಸಣ್ಣ ಹಡಪದ ವಯಃ 35 ವರ್ಷ ಜಾತಿಃ ಹಡಪದ ಉಃ ಟೇಲರ ಕೆಲಸ ಸಾಃ ಫರಹತಾಬಾದ ತಾ.ಜಿಃ ಕಲಬುರಗಿ ಇವರು ಸಹಿ ಮಾಡಿದ ಫಿರ್ಯಾದಿ ಅರ್ಜಿಯನ್ನು ಶಿವಪುತ್ರ ತಂದೆ ಬಸಣ್ಣ ಹಡಪದ ಇವರು ಠಾಣೆಗೆ ಹಾಜರಾಗಿ ದೂರು ಅರ್ಜಿ ನೀಡಿದ್ದು ಸದರಿ ದೂರಿನ ಸಾರಂಶವೆನೆಂದರೆ, ನಿನ್ನೆ ದಿನಾಂಕ 12/08/2022  ರಂದು ನಾನು ನನ್ನ ಕೆಲಸಕ್ಕಾಗಿ ಕಲಬುರಗಿಗೆ ಬಂದಾಗ ನಮ್ಮೂರಿನ ಶರಣಗೌಡ ತಂದೆ ಭೀಮರಾಯ ರಾಸಣಗಿ ಈತನು ತನ್ನ ಅಟೋ ನಂ. ಕೆಎ 32 ಡಿ 1463 ನೇದ್ದರಲ್ಲಿ ಬಂದಿದ್ದು ಇಬ್ಬರು ಮಾತನಾಡಿ ಜೇವರ್ಗಿ ರೋಡಿನ ಸೆಂಟ್ರಲ್ ಜೇಲಿನ ಹತ್ತೀರ ಕೆಲಸ ಇರುವುದರಿಂದ ಇಬ್ಬರೂ ಕೂಡಿ ಕಲಬುರಗಿಯಿಂದ ಸೆಂಟ್ರಲ್ ಜೇಲ್ ಕಡೆಗೆ ಹೋಗುವಾಗ ಇಬ್ಬರೂ ಯಾರೋ ಪ್ರಯಾಣಿಕರು ಕೂಡಾ ಅಟೋದಲ್ಲಿ ಕುಳತಿದ್ದು ರಾತ್ರಿ 8:30 ಗಂಟೆ ಸುಮಾರಿಗೆ ಜೇವರ್ಗಿ ರೋಡ ದಿಶಾ ಕಾಲೇಜ ಹತ್ತೀರ ಹೋಗುತ್ತಿದ್ದಾಗ ಒಳಗಡೆ ರೋಡಿನಿಂದ ಒಂದು ಅಟೋದ ಚಾಲಕನು ಅತಿವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಒಮ್ಮೇಲೆ ಮುಖ್ಯ ರಸ್ತೆಗೆ ಬಂದವನೆ ನಾನು ಹೋಗುತ್ತಿರುವ ಅಟೋಕ್ಕೆ ಡಿಕ್ಕಿ ಹೊಡೆದ ಪರಿಣಾಮ ಎರಡು ಅಟೋಗಳು ಪಲ್ಟಿಯಾಗಿದ್ದು ನಾವು ಕೆಳಗೆ ಬಿದ್ದಾಗ ನನಗೆ ತಲೆಗೆ ಗುಪ್ತಗಾಯ & ಹೆಡಕಿಗೆ ಭಾರಿ ಗುಪ್ತಗಾಯವಾಗಿದ್ದು ಅಲ್ಲಲ್ಲಿ ತರಚಿದಗಾಯಗಳಾಗಿದ್ದು ಅಟೋ ಚಾಲಕ ಶರಣಗೌಡನಿಗೆ ಬಲ ಎದೆಯ ಭಾಗಕ್ಕೆ ಒಳಪೆಟ್ಟು, ಒಲಗಾಲಿನ ಮೊಳಕಾಲಿಗೆ ಒಳಪೆಟ್ಟು & ಟೊಂಕಕ್ಕೆ ಗುಪ್ತಗಾಯವಾಗಿದ್ದು, ನಮಗೆ ಡಿಕ್ಕಿ ಪಡಿಸಿದ ಅಟೋ ಅಲ್ಲಿಯೇ ಬಿಟ್ಟು ಓಡಿ ಹೋದನು. ನಮ್ಮ ಅಟೋದಲ್ಲಿದ್ದ ಇಬ್ಬರಿಗೆ ಗಾಯ ಆದ ಬಗ್ಗೆ ಗೊತ್ತಾಗಲಿಲ್ಲಾ ಹಾಗು ಅವರ್ಯಾರು ಎಂಬುವುದು ಗೊತ್ತಿಲ್ಲಾ. ಡಿಕ್ಕಿ ಪಡಿಸಿದ ಅಟೋ ನಂಬರ ನೋಡಲಾಗಿ ಕೆಎ 32-94 ಇದ್ದು ಇನ್ನು ಎರಡು ನಂಬರ ಅಳುಕಿಸಿದ್ದು ಅದರ ಇಂಜೀನ ನಂ. AEMBJM06293 ಇತ್ತು. ಮುಂದೆ ನಾನು ಉಪಚಾರ ಕುರಿತು ಮಣ್ಣೂರ ಆಸ್ಪತ್ರೆಗೆ ಬಂದು ಸೇರಿಕೆಯಾಗಿದ್ದು, ನಮ್ಮ ಅಟೋ ಡ್ರೈವರ ಶರಣಗೌಡ ಈತನು ಬಸವೇಶ್ವರ ಆಸ್ಪತ್ರೆಗೆ ಹೋಗಿ ಸೇರಿಕೆಯಾಗಿರುತ್ತಾನೆ. ನಮಗೆ ಡಿಕ್ಕಿ ಪಡಿಸಿದ ಅಟೋ ಚಾಲಕನ್ನು ನೋಡಿದ್ದು, ಮತ್ತೆ ನೋಡಿದಲ್ಲಿ ಗುರ್ತಿಸುತ್ತೆವೆ. ನನಗೆ ಭಾರಿಗಾಯ ಆಗಿದ್ದರಿಂದ ಈ ವಿಷಯದಲ್ಲಿ ನಾನು & ಶರಣಗೌಡ ಇಬ್ಬರು ವಿಚಾರಣೆ ಮಾಡಿಕೊಂಡು ಈ ಫಿರ್ಯಾದಿಯನ್ನು ಸಲ್ಲಿಸುತ್ತಿದ್ದು, ಡಿಕ್ಕಿ ಹೊಡೆದ ಈ ಮೇಲಿನ ಅಟೋ ಚಾಲಕನ್ನು ಪತ್ತೆ ಮಾಡಿ ಕ್ರಮ ಕೈಗೊಳ್ಳಬೇಕು ಅಂತಾ ಕೊಟ್ಟ ಫಿರ್ಯಾಧಿ ಅರ್ಜಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಇತ್ತೀಚಿನ ನವೀಕರಣ​ : 29-08-2022 05:54 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080