ಅಭಿಪ್ರಾಯ / ಸಲಹೆಗಳು

ಚೌಕ ಪೊಲೀಸ್ ಠಾಣೆ :-  ದಿನಾಂಕ 13-06-2022  ರಂದು ಬೆಳಿಗ್ಗೆ ೧೧-೦೦ ಗಂಟೆಗೆ ಶ್ರೀ  ರಾಮಕಿಶನ ತಂದೆ ಜ್ಞಾನೋಬಾ ಅಟ್ಟರಗೇ ವ:೨೫ ವರ್ಷ ಉ:ಮೆಕ್ಯಾನಿಕ ಕೆಲಸ ಜಾತಿ ಮರಾಠಾ ಸಾ: ಶಿವರಾಮಸಿಂಗ ಇವರ ಮನೆಯಲ್ಲಿ ಬಾಡಿಗೆ  ದತ್ತ ನಗರ ಶಹಾಬಜಾರ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಗಣಕೀಕೃತ ಮಾಡಿದ ಫರ‍್ಯಾದಿ  ದೂರು ಕೊಟ್ಟಿದ್ದರ ಸಾರಾಂಶವೆನೆಂದೆರೆ, ಈ ಹಿಂದೆ ದಿನಾಂಕ ೧೧/೦೯/೨೦೧೮ ರಂದು ಮಧ್ಯಾಹ್ನ ೪-೦೦ ಗಂಟೆ ಸುಮಾರಿಗೆ ನನಗೆ ಪರಿಚಯದ ಉಮೇಶ ತಂದೆ ಯಲ್ಲಪ್ಪ ಮಳಗಿ ಸಾ: ಬಸವಲಿಂಗ ನಗರ ಹರಿಜವಾಡ ಶಹಾಬಜಾರ ಕಲಬುರಗಿ ಮತ್ತು ಅವನ ಗೆಳೆಯರಾದ ಕನ್ನಾ, ಬಾಬ್ಯಾ @ ಬಾಬು, ಆಕಾಶ ಇತರರು ಕೂಡಿಕೊಂಡು ನನಗೆ ಮನೆಯಿಂದ ಮಾತನಾಡುವದಿದೆ ಅಂತಾ ಹೇಳಿ ಮನೆಯಿಂದ ಒತ್ತಾಯದಿಂದ ಗಾಡಿಯ ಮೇಲೆ ಕೂಡಿಸಿಕೊಂಡು ಬಂದು ಉಮೇಶ ಮತ್ತು ಅವನ ಗೆಳೆಯರು ನನಗೆ ಹೊಡೆ ಬಡೆ ಮಾಡಿ ಬಂಗಾರ, ಹಣ, ಮೋಬಾಯಿಲ್ ಕಸಿದುಕೊಂಡು ಮರಣಾಂತಿಕ ಹಲ್ಲೆ ಮಾಡಿದ್ದು ಈ ಬಗ್ಗೆ ಚೌಕ ಪೊಲೀಸ ಠಾಣೆಯಲ್ಲಿ ಗುನ್ನೆ ನಂಬರ ೧೮೯/೨೦೧೮ ಕಲಂ, ೧೪೩, ೧೪೪, ೧೪೭, ೧೪೮, ೩೬೪ (ಏ), ೩೮೭, ೩೯೫, ೩೯೭, ೩೯೮ ಸಂಗಡ ೧೪೯ ಐಪಿಸಿ ಮತ್ತು ೨೫ ಆಮ್ರ‍್ಸ ಎಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿರುತ್ತೇನೆ. ಈ ಕೇಸಿನಲ್ಲಿ ಉಮೇಶ ಮಳಗಿ ಮತ್ತು ಅವನ ಗೆಳೆಯರಿಗೆ ಪೊಲೀಸರು ಅರೆಸ್ಟ್ ಮಾಡಿ ಜೇಲಿಗೆ ಕಳುಹಿಸಿದ್ದು, ಅವರುಗಳು ಜಾಮೀನಿನ ಮೇಲೆ ಹೊರಗಡೆ ಬಂದಿರುತ್ತಾರೆ. ನಾನು ದಾಖಲಿಸಿರುವ ಕೇಸಿನಲ್ಲಿ ಮಾನ್ಯ ನ್ಯಾಯಾಲಯದಿಂದ ಎಸ್.ಸಿ. ನಂಬರ ೬೯/೨೦೧೯ ರಲ್ಲಿ ನನ್ನದು ದಿನಾಂಕ ೧೩/೦೬/೨೦೨೨ ರಂದು ಸಾಕ್ಷಿ ಹಾಜರಾಗುವಂತೆ ಸಮನ್ಸ ಹೊರಡಿಸಿದ್ದು,  ಸದರ ಸಮನ್ಸನ್ನು ಚೌಕ ಠಾಣೆಯ ಪೊಲೀಸರು ಕೂಡಾ ನನಗೆ ದಿನಾಂಕ ೧೩/೦೬/೨೦೨೨ ರಂದು ಮಾನ್ಯ ೩ನೇ ಜಿಲ್ಲಾ ಸತ್ರ ನ್ಯಾಯಾಲಯ ಕಲಬುರಗಿ ಸಾಕ್ಷಿ ಹಾಜರಾಗುವಂತೆ ಸಮನ್ಸ ಜಾರಿ ಮಾಡಿರುತ್ತಾರೆ.   ಇಂದು ದಿನಾಂಕ ೧೩/೦೬/೨೦೨೨ ರಂದು ಬೆಳಿಗ್ಗೆ ೯-೪೫ ಗಂಟೆ ಸುಮಾರಿಗೆ ನಾನು ಮತ್ತು ನನ್ನ ಗೆಳೆಯ ನೀಲೇಶ ಇಬ್ಬರು ಮನೆಯಿಂದ ನನ್ನ ಮೋಟಾರ ಸೈಕಲ ಹಿಂದೆ ನಿಲೇಶನಿಗೆ ಕೂಡಿಕೊಂಡು ಎಸ್.ಸಿ. ನಂಬರ ೬೯/೨೦೧೯ ಕೇಸಿನಲ್ಲಿ ಸಾಕ್ಷಿ ನುಡಿಯುವ ಕುರಿತು ಕೊರ್ಟ ಕಡೆ ಹೊರಟಿದ್ದು, ಬೆಳಗಿನ ೯-೫೮ ಗಂಟೆ ಸುಮಾರಿಗೆ ಶಹಾಬಜಾರ ಮರಗಮ್ಮ ಹತ್ತಿರ ಬಂದಾಗ ನನ್ನ ಮೋಬಾಯಿಲ್ ಸಂಖ್ಯೆ ೯೧೪೮೮೮೮೮೮೩ ನೇದ್ದಕ್ಕೆ  ಪೋನ ಕರೆ ಬಂದಿದ್ದು  ಅದರ ನಂಬರ ನೋಡಲಾಗಿ ೯೦೦೮೪೨೫೮೮೧ ಇದ್ದು ಹಲೋ ಅಂತಾ ಹೇಳಿದಾಗ ನಾನು ಉಮೇಶ ಮಮ್ಮಿ ಶರಣಮ್ಮಾ ಮಾತನಾಡುತ್ತಿದ್ದೆನೆ ನನ್ನ ಮಗ ಉಮೇಶ ಇತನ ವಿರುದ್ಧ ಮಾಡಿದ ಕೇಸಿನಲ್ಲಿ ಇವತ್ತು ನಿಂದು  ಸಾಕ್ಷಿ ಅದಾ ಹೇಳಿದ್ದಾನೆ ಮತ್ತು ಅವನ ವಿರುದ್ಧ ಸಾಕ್ಷಿ ಹೇಳಬೇಡಾ ಅಂತಾ ಕೂಡಾ ಹೇಳಿರುತ್ತಾನೆ. ಆದ್ದರಿಂದ ನೀನು ಇವತ್ತು ಸಾಕ್ಷಿ ಹೇಳಲಾಕ್ಕೆ ಕೋರ್ಟಿಗೆ ಹೋಗಬೇಡಾ ಎಂದು ಹೇಳಿದಳು. ಅದಕ್ಕೆ ನಾನು ಕೋರ್ಟ ದಿನಾಂಕಕ್ಕೆ ಹಾಜರಾಗದೇ ಇದ್ದರೆ ಪೊಲೀಸರು ನನಗೆ ಯಾಕೇ ಬಂದಿಲ್ಲಾ ಅಂತಾ ಕೇಳುತ್ತಾರೆ ಎಂದು ಹೇಳಿದಾಗ ಶರಣಮ್ಮಾ ಇವಳು ನನಗೆ ನೀನು ಕೋರ್ಟ ಗೆ ಪರೇಶನ ಆಗುತ್ತದೆ ನೋಡು ಅಂತಾ ಏರು ಧ್ವನಿ ಧಮಕಿ ಹಾಕಿ ಪೋನ ಕಟ್ಟ ಮಾಡಿದಳು. ಉಮೇಶ ಇತನು ಪರೋಕ್ಷವಾಗಿ ತನ್ನ ತಾಯಿ ಶರಣಮ್ಮಾ ಇವಳ ಕಡೆಯಿಂದ ಪೋನ ಮಾಡಿಸಿ ನನಗೆ ತನ್ನ ವಿರುದ್ಧ ಕೇಸಿನಲ್ಲಿ ಕೋರ್ಟಗೆ ಹೋಗಿ ಸಾಕ್ಷಿ ಹೇಳಿದಂತೆ  ಧಮಕಿ ಹಾಕಿದ್ದರಿಂದ, ಇಂದು ಕೋರ್ಟಗೆ ಸಾಕ್ಷಿ ನುಡಿಯಲು ಹೋಗಿರುವುದಿಲ್ಲಾ.   ನನಗೆ ಶರಣಮ್ಮಾ ಗಂಡ ಯಲ್ಲಪ್ಪ ಮಳಗಿ ಮತ್ತು ಆಕೆಯ ಮಗ ಉಮೇಶ ತಂದೆ ಯಲ್ಲಪ್ಪ ಮಳಗಿ ಸಾ: ಬಸವಲಿಂಗ ನಗರ ಹರಿಜನವಾಡ ಶಹಾಬಜಾರ ಕಲಬುರಗಿ ಇವರಿಬ್ಬರು ನನಗೆ  ಉಮೇಶ ವಿರುದ್ಧ ಕೋರ್ಟ ಗೆ ಹೋಗಿ ಸಾಕ್ಷಿ ಹೇಳಿದಂತೆ ಹೆದರಿಸಿದರಿಂದ ಅವನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಕೋರಿಕೆ ಎಂದು ಕೊಟ್ಟ ಫಿರ್ಯಾದಿ ದೂರಿನ  ಆಧಾರದ ಮೇಲಿಂದ  ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಇತ್ತೀಚಿನ ನವೀಕರಣ​ : 18-06-2022 02:53 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080