ಅಭಿಪ್ರಾಯ / ಸಲಹೆಗಳು

ಸ್ಟೇಷನ್‌ ಬಜಾರ ಪೊಲೀಸ್‌ ಠಾಣೆ :-  ದಿನಾಂಕ: 13/03/2023 ರಂದು 21:30 ಗಂಟೆಗೆ ಫಿರ್ಯಾದಿ ಶ್ರೀ ಜೊಸೆಫ್ ತಂದೆ ಬಾಳಪ್ಪಾ ದೊಡ್ಡಮನಿ ವಯ:51 ವರ್ಷ ಜಾ:ಎಸ್.ಸಿ (ಮಾದಿಗ) ಉ:ಖಾಸಗಿ ಕೆಲಸ ಸಾ:ಪಿಡಬ್ಲ್ಯಡಿ ಕ್ವಾಟರ್ಸ ಕಲಬುರಗಿ ಇವರು ಪೊಲೀಸ್ ಠಾಣೆಗೆ ಬಂದು ನೀಡಿದ ದೂರು ಅರ್ಜಿಯ ಸಾರಾಂಶದನಂದರೆ, ನಾನು ಖಾಸಗಿ ಕೆಲಸ ಮಾಡಿಕೊಂಡು ಹೆಂಡತಿ ಮಕ್ಕಳೊಂದಿಗೆ ವಾಸವಾಗಿರುತ್ತೆನೆ. ನನ್ನ ಹೆಂಡತಿ ನಾಗಮ್ಮಾ ಅಂತ ಇದ್ದು ಅವಳು ಜಿಮ್ಸ್ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ ಅಂತ ಕೆಲಸ ಮಾಡಿಕೊಂಡಿರುತ್ತಾಳೆ. ನನಗೆ ಭಾವನಾ ಮತ್ತು ಜ್ಯೊತಿರಾಣಿ ಅಂತ ಇಬ್ಬರು ಹೆಣ್ಣು ಮಕ್ಕಳು ಇರುತ್ತಾರೆ.2023 ನೇ ಸಾಲಿನ ಜನೇವರಿ ತಿಂಗಳ 03 ನೇ ತಾರಿಖಿನಂದು ಬೆಳಗ್ಗೆ 11:00 ಗಂಟೆ ಸುಮಾರಿಗೆ ನಾನು ಪಿಡಬ್ಲ್ಯುಡಿ ಕ್ವಾಟರ್ಸನಲ್ಲಿರು ನಮ್ಮ ಮನೆಯಲ್ಲಿ ಇರುವಾಗ ನಾನು ಬಳಕೆ ಮಾಡುವ ಮೊಬೈಲ್ ಫೊನ್ನಲ್ಲಿ ಫೆಸ್ಬುಕ್ ನೋಡುತ್ತಿದ್ದಾಗ, ಕ್ರೈಂ ಇನವೆಸ್ಟಿಗೇಶನ್ ಬ್ಯೂರೊ ಕೈತಾಳ ಹರಿಯಾಣ ಅಂತ ಬಂದಿದ್ದು, ಅದರಲ್ಲಿ ಯಾರಾದರು ಸಮಾಜ ಸೇವೆ ಮಾಡಲು ಇಚ್ಚೆಯುಳ್ಳವರಾಗಿದ್ದರೆ ನಿಮ್ಮ ವಾಟ್ಸಪ್ ನಂಬರ ಕಳಿಸಬೇಕು ಅಂತ ಮಾಹಿತಿ ಇದ್ದಿದ್ದು ಇರುತ್ತದೆ. ನಾನು ಸಮಾಜ ಸೇವೆ ಮಾಡಲು ಇಚ್ಛೆಯುಳ್ಳವನಾಗಿರುವದರಿಂದ ಅವರು ನಮೂದು ಮಾಡಿದ ಮೊಬೈಲ್ ನಂ. 9700399000 ನೇದ್ದಕ್ಕೆ ನನ್ನ ಮೊಬೈಲ್ ನಂ. 7204623776 ನ್ನು ಕಳಿಸಿದ್ದು ಇರುತ್ತದೆ.ದಿನಾಂಕ:12/01/2023 ರಂದು ಹರಿಯಾಣದಿಂದ ನನ್ನ ಮೊಬೈಲ್ ನಂಬರ 7204623776 ಕ್ಕೆ ಮೊಬೈಲ್ ನಂ. 9700399000 ರಿಂದ ENROLLMENT FORM PDF. ಮೇಸೆಜ್ ಕಳುಹಿಸಿ ಫೊನ್ ಮಾಡಿ ಅರ್ಜಿಯನ್ನು ಭರ್ತಿ  ಮಾಡಿ ಅದರೊಂದಿಗೆ ನಿಮ್ಮ ಆಧಾರ ಕಾರ್ಡ ಮತ್ತು ಫೊಟೊಗಳನ್ನು  ಕಆಈ  ಕಳುಹಿಸಲು ತಿಳಿಸಿ ಅದರೊಂದಿಗೆ 5100 ರೂಪಾಯಿಗಳನ್ನು ಕಳಿಸಬೇಕು ಅಂತ ಅಂದಾಗ ನಾನು ದುಡ್ಡು ಯಾಕೆ ಅಂತ ಕೇಳಲು ಇಲ್ಲ ನೀವು ಸದಸ್ಯರಾಗಬೇಕಾದರೆ ಹಣ ಬೇಕಾಗುತ್ತದೆ ಅಂತ ತಿಳಿಸಿದ್ದು ಇರುತ್ತದೆ.   ನಂತರ ದಿನಾಂಕ:31/01/2023 ರಂದು ನನ್ನ ಮೊಬೈಲ್ ನಂಬರಿಗೆ ನೇಮಕಾತಿ ಪತ್ರ (Letter of Appointment)  ವನ್ನು PDF ಮುಖಾಂತರ ಕಳಿಸಿದ್ದು ಇರುತ್ತದೆ. ನನಗೆ ನೇಮಕಾತಿ ಪತ್ರವನ್ನು ಬಂದಿದ್ದರಿಂದ ನಾನು ದಿನಾಂಕ:01/02/2023 ರಂದು ಅವರು ಕಳಿಸಿದ ಅರ್ಜಿಯನ್ನು ಭರ್ತಿ ಮಾಡಿ ಅದರೊಂದಿಗೆ ನನ್ನ ಆಧಾರ ಕಾರ್ಡ ಮತ್ತು ಫೊಟೊಗಳನ್ನು ಅವರು ತಿಳಿಸಿದ A Head office CIB House Udyog Marg, Old By pass Kaithal (HR)-136027 Moble NO.91970039900, 919700299000 ನೇದ್ದಕ್ಕೆ ರಜೀಸ್ಟರ್ ಪೊಸ್ಟ್ ಮುಖಾಂತರ ಕಳುಹಿಸಿದ್ದು ಇರುತ್ತದೆ. ನಂತರ ದಿನಾಂಕ:08/02/2023 ರಂದು ನಾನು ಕಲಬುರಗಿಯ ಎಸ್.ಬಿ.ಐ ಮಿನಿ ಬ್ಯಾಂಕ್  ಮುಖಾಂತರ ಅಕೌಂಟ ನಂ. 41042385521 ಮೆನ್ ಬ್ರ್ಯಾಂಚ ಕೈಥಾಳ ಹರಿಯಾಣಕ್ಕೆ  5100 ರೂಗಳನ್ನು ಕಳಿಸಿದ್ದು ಇರುತ್ತದೆ. ನಂತರ ದಿನಾಂಕ:26/02/2023 ರಂದು ನನ್ನ ಮೊಬೈಲ್ ನಂ. 7204623776 ಕ್ಕೆ ಅವರ ಮೊಬೈಲ್ ನಂ. 9700399000 ರಿಂದ ಐಡಿ  ಕಾರ್ಡ ಕಳಿಸಿದ್ದು ಇರುತ್ತದೆ. ನಂತರ ನಾನು ಐಡಿ ಕಾರ್ಡನ್ನು ನನ್ನ ತಮ್ಮನಾದ ಜಾನ್ ಜಾರ್ಜ ನಂದಗಾಂವ ಇವನಿಗೆ ತೊರಿಸಲು ಇವೆಲ್ಲ ಫೇಕ್ ಇರುತ್ತವೆ ಈ ಬಗ್ಗೆ ನೀನು ಯೊಚಿಸಿ ಉಪಯೋಗಿಸು ಅಂತ ತಿಳಿಸಲು ನಾನು ಪುನಃ ಅವರಿಗೆ ಫೊನ್ ಮಾಡಿ ವಿಚಾರಿಸಿದಾಗ ಅವರಿಂದ ನನಗೆ ಯಾವುದೆ ಸಮಂಜಸವಾದ ಮಾಹಿತಿ ನೀಡುತ್ತಿಲ್ಲ.ಆರ್.ಕೆ ಕೌಶಿಕ್ ಡೈರೆಕ್ಟರ್ ಜನರಲ್, ಕ್ರೈಂ ಇನವೆಸ್ಟಿಗೇಶನ್ ಬ್ಯೂರೊ ಕೈತಾಳ ಹರಿಯಾಣ ಎಂಬ ಹೆಸರಿನವರು ಮೊಸ ಮಾಡುವ ಉದೇಶದಿಂದ ನನ್ನಿಂದ 5100/- ರೂ ಹಣ ಪಡೆದುಕೊಂಡು ಮೊಸ ಮಾಡಿರುತ್ತಾರೆ.ಅದರಂತೆ ಆರ್.ಕೆ ಮಿನಾ ಕ್ರೈಂ ಇನವೆಸ್ಟಗೇಶನ್ ಬೊರ್ಡ ದೆಹಲಿ ಇವರು ಕೂಡಾ ನನ್ನಿಂದ ಅರ್ಜಿಯನ್ನು ಪಡೆದುಕೊಂಡು ಮುನೇಂದ್ರಸಿಂಗ್ ಚೌದರಿ ಸರಸ್ವತಿ ಅಪಾರ್ಟಮೆಂಟ್ ಲೋಕಮಾನ ನಗರ ನಂ.-2 ಥಾಣೆ (ಪಶ್ಚಿಮ) ಇವರ ಮುಖಾಂತರ ಐಡಿ ಮತ್ತು ನೇಮಕಾತಿ ಪತ್ರ ಕಳುಹಿಸಿದ್ದು ಅವುಗಳ ಮೇಲೆ ರಾಷ್ಟ್ರ ಲಾಂಛನಕ್ಕೆ ಹೊಲುವಂತ ನಕಲಿ ಲಾಂಛನದ ಚಿಹ್ನೆಯುಳ್ಳ ಐಡಿ ಕಾರ್ಡ ಮತ್ತು ನೇಮಕಾತಿ ಪತ್ರದ ಮೇಲೆ ಮತ್ತು ಇತರೆ ದಾಖಲಾತಿಗಳ ಮೇಲೆ ಬಳಕೆ ಮಾಡಿ ಮೊಸ ಮಾಡಿರುತ್ತಾರೆ.ಕಾರಣ ಆರ್.ಕೆ ಕೌಶಿಕ್ ಡೈರೆಕ್ಟರ್ ಜನರಲ್, ಕ್ರೈಂ ಇನವೆಸ್ಟಿಗೇಶನ್ ಬ್ಯೂರೊ ಕೈತಾಳ ಹರಿಯಾಣ ಮತ್ತು ಆರ್.ಕೆ ಮಿನಾ ಕ್ರೈಂ ಇನವೆಸ್ಟಗೇಶನ್ ಬೊರ್ಡ ದೆಹಲಿ ಹಾಗೂ ಮುನೇಂದ್ರಸಿಂಗ್ ಚೌದರಿ ಇವರುಗಳ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತ ನೀಡಿದ ದೂರು ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸಂಚಾರಿ ಪೊಲೀಸ ಠಾಣೆ-1 :-  ದಿನಾಂಕ 13-03-2023 ರಂದು ರಾತ್ರಿ 9:00 ಗಂಟೆಗೆ ಶ್ರೀ. ಬಸವರಾಜ ಪಿಸಿ-392 ರವರು ಠಾಣೆಗೆ ಬಂದು ಕನ್ನಡದಲ್ಲಿ ಗಣಕಿಕೃತ ಮಾಡಿದ ದೂರು ಅರ್ಜಿ ಹಾಜರುಪಡಿಸಿದ್ದರ ಸಾರಾಂಶವೆನೆಂದರೆ ನಾನು ಬಸವರಾಜ ಸಿಪಿಸಿ-392 ವಯ:35 ವರ್ಷ ಜಾ: ಪ.ಜಾ ಉ: ಪೊಲೀಸ್ ಅಧಿಕಾರಿ ಸಾ: ಸಂಚಾರ ಪೊಲೀಸ್ ಠಾಣೆ-01, ಕಲಬುರಗಿ ನಗರ, ಈ ಮೂಲಕ ನಾನು ಸರಕಾರ ತರಫೆ ದೂರು ಸಲ್ಲಿಸುವದೇನೆಂದರೆ ದಿನಾಂಕ 13-03-2023 ರಂದು ಬೆಳಿಗ್ಗೆ 8:00 ಗಂಟೆಗೆ ಕರ್ತವ್ಯ ಕುರಿತು ಠಾಣೆಗೆ ಹಾಜರಾಗಿದ್ದು ನನಗೆ ಎಸ್.ಹೆಚ್.ಓ ರವರು ಬೆಳಿಗ್ಗೆ 9:00 ಗಂಟೆಯಿಂದ ರಾತ್ರಿ 9:00 ಗಂಟೆಯವರೆಗೆ ಟೊವಿಂಗ್ ವಾಹನ ಸಂಖ್ಯೆ ಕೆ.ಎ-32/ಜಿ-1109 ನೇದ್ದರಲ್ಲಿ ಚಾಲಕ ನವೀನ್ ಎ.ಪಿ.ಸಿ-72 ಇವರ ಜೋತೆಗೆ ಟೊವಿಂಗ್ ವೆಹಿಕಲ್ ಪೆಟ್ರೋಲಿಂಗ್ ಕರ್ತವ್ಯಕ್ಕೆ ನೇಮಕ ಮಾಡಿ ಕಳುಹಿಸಿದ್ದು ಇರುತ್ತದೆ. ನಾನು ಕರ್ತವ್ಯದ ಮೇಲೆ ಇರುವಾಗ ಸಾಯಂಕಾಲ 8:00 ಗಂಟೆ ಸುಮಾರಿಗೆ ಗುಲಾಬವಾಡಿ ಕ್ರಾಸ್ ದಿಂದ ಓಲ್ಡ್ ಡಿ.ಪಿ.ಒ ಕಡೆಗೆ ಹೋಗುವ ರಸ್ತೆಯಲ್ಲಿರುವ ಏಷಿಯನ್ ಮಾಲ್ ಎದುರಿಗೆ ಇನ್ನೋವಾ ಕಾರ್ ನಂಬರ ಕೆ.ಎ-38 ಎಂ-8960 ನೇದ್ದರ ಚಾಲಕನು ಸಾರ್ವಜನಿಕ ಸಂಚಾರಕ್ಕೆ ಅಡೆತಡೆಯಾಗುವ ರೀತಿಯಲ್ಲಿ ರಸ್ತೆಯ ಮೇಲೆ ನಿಷ್ಕಾಳಜಿತನದಿಂದ ತನ್ನ ವಾಹನ ನಿಲ್ಲಿಸಿದ್ದರಿಂದ ಹೋಗುವ ಬರುವ ವಾಹನಗಳಿಗೆ ತೊಂದರೆ ಆಗುತ್ತಿದ್ದಿದ್ದು ಇರುತ್ತದೆ. ವಾಹನ ತೆಗೆಯುಂತೆ ಹಲವು ಬಾರಿ ಮೈಕ್ನಲ್ಲಿ ಅನೌನ್ಸ್ಮೆಂಟ್ ಮಾಡಿದರು ಸಹ ಯಾರು ಬರದೆ ಇದ್ದ ಕಾರಣ ಎಷಿಯನ್ ಮಾಲ್ ನ ಹಲವು ಅಂಗಡಿಗಳಲ್ಲಿ ವಿಚಾರಿಸಲಾಗಿ ವಾಹನ ತಮ್ಮದಲ್ಲ ಎಂದು ತಿಳಿಸಿರುತ್ತಾರೆ. ಕಾರಣ ವಾಹನ & ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಸದರಿ ವಾಹನವನ್ನು ಠಾಣೆಗೆ ತಂದು ನಿಲ್ಲಿಸಿರುತ್ತೇವೆ.  ಕಾರಣ ಸಾರ್ವಜನಿಕ ಸಂಚಾರಕ್ಕೆ ಅಡೆತಡೆಯಾಗುವ ರೀತಿಯಲ್ಲಿ ರಸ್ತೆಯ ಮೇಲೆ ನಿಷ್ಕಾಳಜಿತನದಿಂದ ತನ್ನ ವಾಹನ ನಿಲ್ಲಿಸಿದ ಇನ್ನೋವಾ ಕಾರ್ ನಂಬರ ಕೆ.ಎ-38 ಎಂ-8960 ನೇದ್ದರ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಅಂತಾ ಫಿರ್ಯಾದಿ ಕೊಟ್ಟ ಅರ್ಜಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಎಂ.ಬಿ.ನಗರ ಪೊಲೀಸ್‌ ಠಾಣೆ :- ಫಿರ್ಯಾದಿದಾರರ ಅಳಿಯ ರೂಪಸಾಗರ ಈತನು ಫಿರ್ಯಾದಿ ಹತ್ತಿರ ೨ ಲಕ್ಷ್ ರೂಪಾಯಿ ಕೈಗಡ ರೂಪಾಯಿ ತೆಗೆದುಕೊಂಡು ಮರಳಿ ಕೇಳಿದರೆ ಕೊಡೆದೇ ಸತಾಯಿಸುತ್ತಾ ಬಂದಿದ್ದು ದಿನಾಂಕ: ೧೦/೦೩/೨೦೨೩ ರಂದು ಸಾಯಂಕಾಲ ೬-೪೫ ಗಂಟೆ ಸುಮರಿಗೆ ಆರೋಪಿತ ಮನೆಗೆ ಬಂದು ಜಗಳ ತೆಗೆದು ಹೊಡೆ ಬಡೆ ಮಾಡಿರುತ್ತಾರೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 14-03-2023 01:23 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080