ಅಭಿಪ್ರಾಯ / ಸಲಹೆಗಳು

ಅಶೋಕ ನಗರ ಪೊಲೀಸ ಠಾಣೆ :-  ದಿನಾಂಕ:13.02.2023 ರಂದು  01:00 ಪಿ.ಎಂ.ಕ್ಕೆ ಫಿರ್ಯಾದಿ ಶ್ರೀ ಸಂತೋಷ ತಂದೆ ಶಿವಪುತ್ರಪ್ಪ ಪಾಟೀಲ್ ವಯ: 42 ವರ್ಷ ಜಾ: ಲಿಂಗಾಯತ ಉ:ಖಾಸಗಿ ಕೆಲಸ ಸಾ|| ಮನೆ ನಂ 11-1400/67/1 ಶಿವ ನಗರ ಬಿದ್ದಾಪೂರ ಕಾಲೋನಿ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿ ಅರ್ಜಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ನಾನು ಬಿದರನಲ್ಲಿ ಖಾಸಗಿ ಕೆಲಸ ಮಾಡಿಕೊಂಡು ಇರುತ್ತೇನೆ ನಮ್ಮದೊಂದು ಮನೆ ಕಲಬುರಗಿ ನಗರದ ಬಿದ್ದಾಪೂರ ಕಾಲೋನಿಯಲ್ಲಿ ಇರುತ್ತದೆ. ನಮ್ಮ ತಾಯಿ ಸರಸ್ವತಿ, ತಂಗಿ ಗೀತಾ, ತಮ್ಮ ವಿಜಯಕುಮಾರ, ಮತ್ತು ಸೊಸೆ ಶಿವರಂಜನಿ ಇರುತ್ತಾರೆ. ಹೀಗಿದ್ದು ದಿನಾಂಕ:17.01.2023 ರಂದು ಎಂದಿನಂತೆ ನಮ್ಮ ಸೊಸೆ ಶಿವರಂಜಿನಿ ಇವಳು ಕಾಲೇಜಿಗೆ ಹೋಗಿದ್ದು, ತಮ್ಮ ವಿಜಯಕುಮಾರ ಇತನು ತನ್ನ ಕೆಲಸ ನಿಮಿತ್ಯ ಹೊರಗೆ ಹೋಗಿರುತ್ತಾನೆ. ನಂತರ ಬೆಳಿಗ್ಗೆ ಸುಮಾರು 11:20 ಗಂಟೆಗೆ ನಮ್ಮ ತಾಯಿ ಮತ್ತು ತಂಗಿ ಇಬ್ಬರು ಮನೆಗೆ ಬೀಗ ಹಾಕಿಕೊಂಡು ಹೋಗಿದ್ದು ಮರಳಿ ಮದ್ಯಾನ್ಹ 01:00 ಗಂಟೆಗೆ ಬಂದು ನೋಡಲಾಗಿ ಯಾರೋ ಕಳ್ಳರು ಯಾವುದೋ ರೀತಿಯಿಂದ ಬೀಗದಿಂದ ನಮ್ಮ ಮನೆಯ ಬೀಗ ತೆಗೆದು ಮನೆಯಲ್ಲಿದ್ದ ಬಂಗಾರದ 1) ಬಂಗಾರದ 5 ತೊಲೆ ಮಂಗಳ ಸೂತ್ರ ಅ.ಕಿ 1,50,000/- 2) ಬಂಗಾರದ 4 ತೊಲೆ ಪಾಟ್ಲಿ  ಅ.ಕಿ. 1,20,000/- 3) ಬಂಗಾರದ 1 ತೊಲೆ ಸುತ್ತುಂಗುಂರ ಅ.ಕಿ. 30,000/- 4) ತಲಾ 3 ಗ್ರಾಂನ  ಒಟ್ಟು 6 ಗ್ರಾಂ  ಕಿವಿ ಒಲೆಗಳು ಅ.ಕಿ. 15,000/- ಹೀಗೆ ಎಲ್ಲಾ ಸೇರಿ ಒಟ್ಟು 106 ಗ್ರಾಂ ಬಂಗಾರದ ಆಭರಣಗಳು ಅ.ಕಿ. 3,15,000/- ಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.  ಈ ಬಗ್ಗೆ ನಾವು ಎಲ್ಲಾ ಕಡೆಗಳಲ್ಲಿ ಹುಡುಕಾಡಿ ಮನೆಯಲ್ಲಿ ವಿಚಾರಮಾಡಿ ಇಂದು ತಡಮಾಡಿ ಠಾಣೆಗೆ ಬಂದು ದೂರು ಸಲ್ಲಿಸುತ್ತಿದ್ದು ನಮ್ಮ ಮನೆಯಲ್ಲಿ ಕಳ್ಳತನ ಮಾಡಿದ ಕಳ್ಳರನ್ನು ಪತ್ತೆಮಾಡಿ ನಮ್ಮ ಬಂಗಾರದ ಆಭರಣಗಳನ್ನು ನಮಗೆ ದೊರಕಿಸಿ ಕೊಡಲು ವಿನಂತಿ. ಅಂತ ವಗೈರೆಯಾಗಿದ್ದ ಅರ್ಜಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಅಶೋಕ ನಗರ ಪೊಲೀಸ ಠಾಣೆ :-ದಿನಾಂಕ:13.02.2023 ರಂದು  11:00 ಎ.ಎಂಕ್ಕೆ ಫಿರ್ಯಾದಿ ಶ್ರೀ ಮೋಹನ ತಂದೆ ಶಂಕರ ಮಿಟ್ಟಿ ವಯ: 43 ವರ್ಷ ಜಾ: ಕಬ್ಬಲೀಗ ಉ: ಕೆ.ಎಸ್.ಆರ್.ಟಿ.ಸಿ ಯಲ್ಲಿ ಕಿರಿಯ ಸಹಾಯಕ ಚಿತಾಪೂರ ಘಟಕ ಸಾ|| ಮ.ನಂ. 11-421/07/241 ಖಣಿ ಏರಿಯಾ ಸಮತಾ ಕಾಲೋನಿ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಕೊಟ್ಟ ಫಿರ್ಯಾದಿ ಅರ್ಜಿಯ ಸಾರಾಂಶವೆನೆಂದರೆ. ನಾನು ನನ್ನ ದಿನ ನಿತ್ಯದ ಕೆಲಸಕ್ಕೆ ಓಡಾಡುವ ಸಲುವಾಗಿ 2015ನೇ ಸಾಲಿನಲ್ಲಿ ಒಂದು ಹೀರೊ ಹೆಚ್.ಎಫ್ ಡಿಲಕ್ಸ ಮೋಟಾರ ಸೈಕಲ್ ನಂ. ಕೆ.ಎ-32 ಇ.ಕೆ-5933  ಸೀಲ್ವರ  ಬಣ್ಣದ್ದು ಇಂಜನ್ ನಂಬರ್  HA11EJF4H05902  ಚೆಸ್ಸಿ ನಂಬರ್ MBLHA11ATF4H05940 ಅ.ಕಿ.25,000/-ರೂ ನೇದ್ದು ಖರೀದಿಸಿದ್ದು ಇರುತ್ತದೆ.ಹೀಗಿದ್ದು ದಿನಾಂಕ:31.01.2023 ರಂದು ಬೆಳಿಗ್ಗೆ 08:00 ಎ.ಎಂ.ಕ್ಕೆ ನಾನು ಎಂದಿನಂತೆ ನನ್ನ ದ್ವಿ-ಚಕ್ರ ವಾಹನವನ್ನು ಕೇಂದ್ರ ಬಸ್ ನಿಲ್ದಾಣದ ಆವರಣದಲ್ಲಿ ನಿಲ್ಲಿಸಿ ಚಿತಾಪೂರ ಘಟಕಕ್ಕೆ ಹೋಗಿ ಮರಳಿ ರಾತ್ರಿ 09:00 ಗಂಟೆಗೆ ಬಂದು ನೋಡಲಾಗಿ ನನ್ನ ವಾಹನ ಇದ್ದಿರುವುದಿಲ್ಲ. ನಾನು ಇಲ್ಲಿಯ ವರೆಗೆ ಕಲಬುರಗಿ ನಗರದಲ್ಲಿ ಮತ್ತು ಹೊರ ವಲಯಗಳಲ್ಲಿ ಎಲ್ಲಾ ಕಡೆಗಳಲ್ಲಿ ಹುಡುಕಾಡಿದರು ನನ್ನ ವಾಹನ ನನಗೆ ಸಿಕ್ಕಿರುವುದಿಲ್ಲ. ಈ ಬಗ್ಗೆ ಮನೆಯಲ್ಲಿ ವಿಚಾರಿಸಿ ಇಂದು ತಡವಾಗಿ ಠಾಣೆಗೆ ಬಂದು ದೂರು ಸಲ್ಲಿಸುತ್ತಿದ್ದು, ಕಳವುವಾದ ನನ್ನ ಮೋಟಾರ ಸೈಕಲನ್ನು ಪತ್ತೆ ಮಾಡಿ ಕಳ್ಳತನ ಮಾಡಿದವರ ವಿರುದ್ದ ಕಾನೂನು ರೀತಿ ಕ್ರಮ ಜರುಗಿಸಿ ನನ್ನ ವಾಹನ ನನಗೆ ದೊರಕಿಸಿ ಕೊಡಲು ವಿನಂತಿ. ಅಂತ ಇತ್ಯಾದಿಯಾಗಿದ್ದ ಫಿರ್ಯಾದಿಯ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸಬ್‌ ಅರ್ಬನ್‌ ಪೊಲೀಸ ಠಾಣೆ :-  ದಿನಾಂಕಃ- 13-02-2023  ರಂದು ಸರಕಾರಿ ತರಫೆ ಫಿರ್ಯಾದಿಯು ಏರಿಯದಲ್ಲಿ ಪೆಟ್ರೋಲಿಂಗ್ ಕರ್ತವ್ಯದಲಿದ್ದಾಗ ಸದರಿ ಆರೋಪಿತನು ಸುಲ್ತಾನಪುರ ಕ್ರಾಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕುಳಿತು ೧ ರೂಪಾಯಿ ೮೦ ರೂ ಗೆಲ್ಲಿರಿ ಎಂದು ಮಟಕಾ ಬರೆದುಕೊಳ್ಳುತ್ತಿದ್ದಾನೆಂದು ಖಚಿತ ಬಾತ್ಮಿ ಬಂದ ಮೇರೆಗೆ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಲಾಗಿ ಸದರಿ ಆರೋಪಿತ ಮತ್ತು ಮುದ್ದೆ ಮಾಲು ನಗದು ಹಣ ೫೨೦/- ವಶಕ್ಕೆ ಪಡೆದು ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸಬ್‌ ಅರ್ಬನ್‌ ಪೊಲೀಸ ಠಾಣೆ :-  ಫಿರ್ಯಾದಿಯು ಆಳಂದ ರೋಡಿಗೆ ಇರುವ ಶಿವಶರಣಪ್ಪ ಬೆಣ್ಣೂರ ಪೆಟ್ರೋಲ್ ಬಂಕ್ ಹತ್ತಿರ ಹೈಟೆಕ್ ಪ್ರೆಶರ್ ವಾಟರ್ ಜೆಮ್ಸ ಮಷಿನ್ ಇಟ್ಟುಕೊಂಡು ಭಾರಿ ವಾಹನಗಳಿಗೆ ವಾಟರ್ ಸರ್ವಿಸ್ ಮಾಡಿಕೊಂಡಿದ್ದು ದಿನಾಂಕಃ-೨೦/೧೨/೨೦೨೨ ರಂದು ರಾತ್ರಿ ೯.೦೦ ಗಂಟೆU ಕೆಲಸ ಮುಗಿಸಿಕೊಂಡು ಬಾಗಿಲು ಮುಚ್ಚಿ ಮನೆಗೆ ಹೋಗಿದ್ದು ಬೆಳಗ್ಗೆ ದಿನಾಂಕಃ-೨೧/೧೨/೨೦೨೨ ೧೦.೦೦ ಗಂಟೆಗೆ ಅಂಗಡಿ ತೆಗೆಯಲು ಹೋದಾಗ ಅಂಗಡಿಯ ಎದುರುಗಡೆ ಪಿಟ್ ಮಾಡಿದ್ದ ಸುಮಾರು ಅ.ಕಿ.೧,೩೦,೦೦೦ ರೂ ಮೌಲ್ಯದ ಬೆಲೆ ಬಾಳುವ ವಸ್ತುಗಳು ಕಳುವು ಆಗಿರುತ್ತದೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 14-02-2023 06:08 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080