Feedback / Suggestions

ಫರಹತಾಬಾದ ಪೊಲೀಸ ಠಾಣೆ :- ದಿನಾಂಕ: ೧೩.೦೨.೨೦೨೨ ರಂದು ಸಾಯಂಕಾಲ ೬ ಗಂಟೆಗೆ ನಮ್ಮ ಠಾಣೆಯ ರಾಮಣ್ಣಾ ಸಿಹೆಚ್ಸಿ ೨೧೯ ರವರು ಠಾಣೆಗೆ ಹಾಜರಾಗಿ ಮುದ್ದೆಮಾಲು, ಜಪ್ತಿ ಪಂಚನಾಮೆ, ೨ ಜನ ಆರೋಪಿತರೊಂದಿಗೆ ಮುಂದಿನ ಕ್ರಮಕ್ಕಾಗಿ ವರದಿ ಹಾಜರಪಡಿಸಿದರ ಸಾರಾಂಶವೇನೆಂದರೆ, ದಿನಾಂಕ:೧೩.೦೨.೨೦೨೨ ರಂದು ಮದ್ಯಾಹ್ನ ೩.೩೦ ಗಂಟೆಯ ಸುಮಾರಿಗೆ ನಾನು ಪೊಲೀಸ್ ಠಾಣೆಯಲ್ಲಿದ್ದಾಗ ಭಾತ್ಮಿ ಬಂದಿದ್ದೇನೆಂದರೆ, ನಮ್ಮ ಠಾಣೆಯ ವ್ಯಾಪ್ತಿಯ ಖಣದಾಳ ತಾಂಡಾದ ಗುಂಪಾ ಹತ್ತಿರ ಸಾರ್ವಜನಿಕ ಸ್ಥಳದ ಖುಲ್ಲಾ ಜಾಗೆಯಲ್ಲಿ ಕೆಲವು ಜನರು ಇಸ್ಪೀಟ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ನಮ್ಮ ಠಾಣಾ ಸಿಬ್ಬಂದಿ ಜನರಾದ ಮಂಜುನಾಥ ಸಿಪಿಸಿ, ತಿರುಪತಿ ಸಿಪಿಸಿ, ಆನಂದ ಸಿಪಿಸಿ, ಮಹಿಬೂಬ ಸಿಪಿಸಿ ರವರಿಗೆ ಜೂಜಾಟದ ಬಗ್ಗೆ ಮಾಹಿತಿ ತಿಳಿಸಿ ನಂತರ ನಮ್ಮ ಪಿಐ ಸಾಹೇಬರಿಗೆ ಹಾಗೂ ಮಾನ್ಯ ಎಸಿಪಿ ಸಾಹೇಬರು ಸಬ್ ಅರ್ಬನ್ ಉಪ ವಿಭಾಗ ಕಲಬುರಗಿ ರವರಿಗೆ ಮಾಹಿತಿ ತಿಳಿಸಿ ಅವರ ಮಾರ್ಗದರ್ಶನದಲ್ಲಿ ಸಿಬ್ಬಂದಿ ಜನರಿಗೆ ಖಾಸಗಿ ವಾಹನದಲ್ಲಿ ಕರೆದುಕೊಂಡು ಠಾಣೆಯಿಂದ ಮದ್ಯಾಹ್ನ ೩.೪೫ ಗಂಟೆಗೆ ಹೊರಟ್ಟು, ಭಾತ್ಮಿ ಸ್ಥಳಕ್ಕೆ ಹೊರಡುವಾಗ ಮಾರ್ಗಮಧ್ಯೆ ದಾರಿ ಹೊಕ್ಕ ಇಬ್ಬರೂ ಪಂಚರನ್ನು ಬರಮಾಡಿಕೊಂಡು ಅವರಿಗೂ ಭಾತ್ಮಿ ಬಂದ ವಿಷಯ ತಿಳಿಸಿ ಅವರು ನಮ್ಮೊಂದಿಗೆ ದಾಳಿ ಕಾಲಕ್ಕೆ ಹಾಜರಿರಲು ಒಪ್ಪಿದ ಮೇರೆಗೆ ಅವರನ್ನು ನಮ್ಮೊಂದಿಗೆ ಖಾಸಗಿ ವಾಹನದಲ್ಲಿ ಕರೆದುಕೊಂಡು ಹೊರಟು ಭಾತ್ಮೀ ಸ್ಥಳದ ಹತ್ತಿರ ಸಾಯಂಕಾಲ ೪ ಗಂಟೆಗೆ ಮನೆಗಳ ಮರೆಯಲ್ಲಿ ನಿಂತು ನೋಡಲು ಸಾರ್ವಜನಿಕ ಸ್ಥಳದಲ್ಲಿ ಕುಳಿತು ಕೆಲವು ಜನರು ದುಂಡಾಗಿ ಇಸ್ಪೇಟ ಎಲೆಗಳ ಸಹಾಯದಿಂದ ಅಂದರ ಬಾಹರ ಜೂಜಾಟ ಆಡುತ್ತಿರುವದನ್ನು ನೋಡಿ ಖಚಿತ ಪಡಿಸಿಕೊಂಡು ಸಾಯಂಕಾಲ ೪.೦೫ ಗಂಟೆಗೆ ಏಕಕಾಲಕ್ಕೆ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಲಾಗಿ ಜೂಜಾಟದಲ್ಲಿ ತೊಡಗಿದ ಕೆಲವು ಜನರು ಓಡಿ ಹೋಗಿದ್ದು ಇನ್ನು ಕೆಲವು ಜನರಿಗೆ ಸಿಕ್ಕಿದ್ದು ಸಿಕ್ಕಿದ ಜನರಿಗೆ ಹಿಡಿದು ಅವರಿಗೆ ಅಂಗಶೋಧ ಮಾಡಿ ಹೆಸರು ವಿಳಾಸ ಕೇಳಲು ೧) ಮೋಹನ ತಂದೆ ಬಾಬುಸಿಂಗ್ ರಾಠೋಡ ವಯ:೩೦ ವರ್ಷ ಉ:ಒಕ್ಕಲುತನ ಜಾತಿ: ಲಂಬಾಣಿ ಸಾ:ಖಣದಾಳ ತಾಂಡಾ ೨) ಪ್ರದೀಪ ತಂದೆ ಪಾಂಡು ರಾಠೋಡ ವಯ: ೨೮ ವರ್ಷ ಉ:ಕೂಲಿಕೆಲಸ ಜಾತಿ: ಲಂಬಾಣಿ ಸಾ:ಖಣದಾಳ ತಾಂಡಾ ೩) ಅರ್ಜುನ ತಂದೆ ಶಿವರಾಮ ರಾಠೋಡ ವಯ:೨೭ ವರ್ಷ ಉ:ಕೂಲಿಕೆಲಸ ಜಾತಿ: ಲಂಬಾಣಿ ಸಾ:ಖಣದಾಳ ತಾಂಡಾ ೪) ರಾಮು ತಂದೆ ಮೋತಿರಾಮ ಚಹ್ವಾಣ ವಯ:೩೪ ವರ್ಷ ಉ:ಕೂಲಿಕೆಲಸ ಜಾತಿ:ಲಂಬಾಣಿ ಸಾ:ಖಣದಾಳ ೫) ಸಂತೋಷ ತಂದೆ ಗೋಪಿನಾಥ ರಾಠೋಡ ವಯ:೩೦ ವರ್ಷ ಉ:ಕೂಲಿಕೆಲಸ ಜಾತಿ:ಲಂಬಾಣಿ  ಸಾ:ಖಣದಾಳ ತಾಂಡಾ ಅಂತಾ ತಿಳಿಸಿದ್ದು, ಸದರಿ ಸ್ಥಳದಲ್ಲಿ ೫೨ ಇಸ್ಪೇಟ ಎಲೆಗಳು ಹಾಗೂ ನಗದು ಹಣ ೫೧೦೦/-ರೂ. ಸಿಕ್ಕಿದ್ದು ಇವುಗಳನ್ನು ಪಂಚರ ಸಮಕ್ಷಮದಲ್ಲಿ ೪.೦೫ ಪಿಎಮ್ ಗಂಟೆಯಿಂದ ೫.೦೫ ಪಿಎಮ್ ಗಂಟೆಯವರೆಗೆ ಗುನ್ನೆ ಸ್ಥಳದಲ್ಲಿ ಕುಳಿತು ಜಪ್ತಿ ಪಂಚನಾಮೆ ಬರೆದು ಮುಗಿಸಲಾಯಿತು. ನಂತರ ಮುದ್ದೇಮಾಲು ಮತ್ತು ಆರೋಪಿತರೊಂದಿಗೆ ೬ ಪಿಎಮ್ ಗಂಟೆಗೆ ಠಾಣೆಗೆ ಬಂದಿದ್ದು, ಸದರಿ ಆರೋಪಿತರ ವಿರುದ್ದ ಕಾನೂನು ಕ್ರಮ ಜರುಗಿಸಲು ಕೊರಲಾಗಿದೆ ಅಂತಾ ಇತ್ಯಾದಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

Last Updated: 15-02-2022 01:12 PM Updated By: ADMIN


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : Kalaburagi City Police
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080