ಅಭಿಪ್ರಾಯ / ಸಲಹೆಗಳು

ಬ್ರಹ್ಮಪೂರ ಪೊಲೀಸ್‌ ಠಾಣೆ :-  ದಿನಾಂಕ: 13/01/2023 ರಂದು ಸಾಯಂಕಾಲ 7:20 ಕ್ಕೆ ಫಿರ್ಯಾದಿದಾರರಾದ ಶ್ರೀ ಪ್ರದೀಪ್ ತಂದೆ ನತಮಲ ಕಲಂತ್ರಿ ವಯ:43ವರ್ಷ ಜಾ:ಮಾರವಾಡಿ ಉ:ವ್ಯಾಪಾರ ಸಾ||ಮನೆ ನಂ 7-1101/46 ನೇಹರು ಗಂಜ್ ಬ್ಯಾಂಕ್ ಕಾಲೋನಿ ಕಲಬುರಗಿ ನಗರ. ರವರು ಠಾಣೆಗೆ ಹಾಜರಾಗಿ ಫಿರ್ಯಾದಿ ನೀಡಿದರ ಸಾರಾಂಶವೆನೆAದರೆ ನಮ್ಮ ಅಣ್ಣನ ಹೆಂಡತಿಯಾದ ರೂಪಾಲಿ ಗಂಡ ಪ್ರವೀಣ ಕಲಂತ್ರಿ ಸಾ// ಮನೆ ನಂ ೭-೧೧೦೧/೪೬ ನೇಹರು ಗಂಜ್ ಬ್ಯಾಂಕ್ ಕಾಲೋನಿ ಕಲಬುರಗಿ ನಗರ. ಇವರ ಹೆಸರಿನಲ್ಲಿ ಹೊಂಡಾ ಡಿಯೋ ಸ್ಕೂಟರ್ ನಂ. KA-32-EP-3445 ನೇದ್ದು ಇದ್ದು ಸದರಿ ಸ್ಕೂಟರನ್ನು ನಾನೇ ನಡೆಸುತ್ತಿರುತ್ತೇನೆ. ನಾನು ದಿನಾಂಕ:೦೮/೦೧/೨೦೨೩ ರಂದು ಮದ್ಯಾಹ್ನ ೧೨:೦೦ ಗಂಟೆ ಸುಮಾರಿಗೆ ಕಲಬುರಗಿ ನಗರದ ಎನ್.ವಿ ಮೈದಾನದಲ್ಲಿ ನೇಡೆಯುತ್ತಿರುವ ಕ್ರಿಕೇಟ್ ಪಂದ್ಯಾವಳಿಯನ್ನು ನೋಡಬೇಕೆಂದು ಬಂದು ಸದರಿ ಮೈದಾನದಲ್ಲಿ ನನ್ನ ಸ್ಕೂಟರನ್ನು ನಿಲ್ಲಿಸಿ ಕ್ರಿಕೇಟ್ ಪಂದ್ಯಾವಳಿಯನ್ನು ನೋಡಿಕೊಂಡು ಮರಳಿ ಅದೆ ದಿನ ಸಾಯಂಕಾಲ ೬:೦೦ ಗಂಟೆ ಸುಮಾರಿಗೆ ನಾನು ನಿಲ್ಲಿಸಿದ ಸ್ಥಳದಲ್ಲಿ ಬಂದು ಸ್ಕೂಟರನ್ನು ನೋಡಲಾಗಿ ಸ್ಕೂಟರ ಇರಲಿಲ್ಲಾ, ಸ್ಕೂಟರ ಪತ್ತೆ ಕುರಿತು ಎಲ್ಲಾ ಕಡೆ ಹುಡುಕಾಡಿದರೂ ಸ್ಕೂಟರ ಸಿಕ್ಕಿರುವುದಿಲ್ಲಾ ಆದರಿಂದ ಠಾಣೆಗೆ ಬಂದು ಅರ್ಜಿ ಕೊಡಲು ತಡವಾಗಿರುತ್ತದೆ. ಕಾರಣ ಕಳುವಾದ ನನ್ನ ಸ್ಕೂಟರನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಕೊಟ್ಟ ದೂರು ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ವಿಶ್ವವಿದ್ಯಾಲಯ ಪೊಲೀಸ ಠಾಣೆ :- ದಿನಾಂಕ 13-01-2023 ರಂದು ೦೦:೦೦ ಗಂಟೆಯಿಂದ ೦೩:೦೦ ಗಂಟೆಯ ಮಧ್ಯದ ಅವಧಿಯಲ್ಲಿ ಫಿರ್ಯಾದಿ ಮನೆಯ ಬೆಡ್ ರೂಮಿನ ಅಲಮಾರಿಯಲ್ಲಿಟ್ಟಿದ್ದ ಬಂಗಾರದ ಸಾಮಾನುಗಳಾದ ೧) ೩೦ ಗ್ರಾಂ ಬಂಗಾರದ ನಕ್ಲೇಸ್ ಅ.ಕಿ- 15,000/-ರೂ, ೨) ೩೦ ಗ್ರಾಂ ಬಂಗಾರದ ಕೈ ಬಳೆ ಅ.ಕಿ-15,000/-ರೂ, ೩) ಮದುವೆಯ ಸಮಯದಲ್ಲಿ ಖರೀದಿ ಮಾಡಿದ್ದ ೨೫೦ ಗ್ರಾಂ ಬೆಳ್ಳಿ ಕಾಲ ಚೈನ್ ಅ.ಕಿ-5000/-ರೂ, ೪) ೧೦ ವರ್ಷದ ಹಿಂದೆ ಖರೀದಿಸಿದ್ದ ೨೦ ಗ್ರಾಂ ಬಂಗಾರದ ಚೈನ್ ಅ.ಕಿ-20,000/-ರೂ, ೫) ೨೦೨೧ ನೇ ಸಾಲಿನಲ್ಲಿ ಖರೀದಿಸಿದ್ದ ೭ ಗ್ರಾಂ ಬಂಗಾರದ ಉಂಗುರ ಅ.ಕಿ-24,000/-ರೂ, ೬) ೨೦೨೧ ನೇ ಸಾಲಿನಲ್ಲಿ ಖರೀದಿಸಿದ್ದ ೨೦೦ ಗ್ರಾಂ ಬೆಳ್ಳಿ ಕಾಲ ಚೈನ್ ಅ.ಕಿ-10,000/-ರೂ, ೭) ನಗದು ಹಣ 60,000/-ರೂ  ಹೀಗೇ ಒಟ್ಟು ಅಂದಾಜು ಕಿಮ್ಮತ್ತು 1,49,000/-ರೂ ಕಿಮ್ಮತ್ತಿನ ಬಂಗಾರ, ಬೆಳ್ಳಿ ಸಾಮಾನುಗಳು, ಹಣ ನೇದ್ದವುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸಂಚಾರಿ ಪೊಲೀಸ್‌ ಠಾಣೆ -1 :- ದಿನಾಂಕ 13-01-2023 ರಂದು ಬೆಳಿಗ್ಗೆ 5-00 ಗಂಟೆಗೆ ಇ.ಎಸ.ಐ ಆಸ್ಪತ್ರೆಯ ಓ.ಪಿ ಪಿಸಿ ರವರು ಠಾಣೆಗೆ ಪೋನ ಮಾಡಿ ನಾಗಣ್ಣಾ ಇವರು ರಸ್ತೆ ಅಪಘಾತ ಹೊಂದಿ ಉಪಚಾರ ಕುರಿತು ಬಂದು ಸೇರಿಕೆಯಾಗಿರುತ್ತಾರೆ ಅಂತಾ ತಿಳಿಸಿದ್ದರಿಂದ ನಾನು ಆಸ್ಪತ್ರೆಗೆ ಬೇಟಿಕೊಟ್ಟು ಗಾಯಾಳು ನಾಗಣ್ಣಾ ಇವರನ್ನು ವಿಚಾರಿಸಲು ಅವರು ಕೊಟ್ಟ ಹೇಳಿಕೆ ಸಾರಂಶವೆನೆಂದರೆ ದಿನಾಂಕ: 11-01-2023 ರಂದು ರಾತ್ರಿ ಸಮಯದಲ್ಲಿ ದೀಲಿಪ ಪಾಟೀಲ ಇವರ ಹತ್ತೀರ ನನ್ನ ಕೆಲಸದ ಸಂಬಂದ ಜೇವರ್ಗಿ ರೋಡಿಗೆ ಬರುವ ಅವರ ಮನೆಗೆ ಅವರನ್ನು ಬೇಟಿಯಾಗುವ ಸಂಬಂದ ಮೋಟಾರ ಸೈಕಲ ನಂಬರ ಕೆಎ-32/ಇಎಮ್-2090 ನೇದ್ದನ್ನು ಚಲಾಯಿಸಿಕೊಂಡು ಹೊಸ ಜೇವರ್ಗಿ ರೋಡ ರಾಮ ಮಂದಿರ ಸರ್ಕಲ ಮುಖಾಂತರವಾಗಿ ನಾನು ಮೋಟಾರ ಸೈಕಲ ಚಲಾಯಿಸಿಕೊಂಡು ಹೋಸ ಜೇವರ್ಗಿ ರೋಡ ರಾಮ ಮಂದಿರ ಸರ್ಕಲ ಮುಖಾಂತರವಾಗಿ ನಾನು ಮೋಟಾರ ಸೈಕಲ ಚಲಾಯಿಸಿಕೊಂಡು ಹೋಗುತ್ತೀರುವಾಗ ರಾತ್ರಿ ಅಂದಾಜು 11-00 ಗಂಟೆ ಸುಮಾರಿಗೆ ದಾರಿ ಮದ್ಯದ ಹೊಸ ಜೇವರ್ಗಿ ರೋಡ ಭಾಗ್ಯವಂತಿ ನಗರ ಕ್ರಾಸ ಹತ್ತೀರ ನನ್ನ ಮೊಬೈಲ ಪೋನಗೆ ಕರೆ ಬಂದಿದ್ದರಿಂದ ನಾನು ನನ್ನ ಮೋಟಾರ ಸೈಕಲ ರೋಡ ಪಕ್ಕದಲ್ಲಿ ನಿಲ್ಲಿಸಿ ಮೋಟಾರ ಸೈಕಲ ಮೇಲೆ ಕುಳಿತು ಮಾತನಾಡುತ್ತೀರುವಾಗ ಮೋಟಾರ ಸೈಕಲ ನಂಬರ ಕೆಎ-32/ಹೆಚ್,ಸಿ-2151 ನೇದ್ದರ ಸವಾರನು ಆರ.ಪಿ ಸರ್ಕಲ ಕಡೆಯಿಂದ ರಾಮ ಮಂದಿರ ರಿಂಗ ರೋಡಕಡೆಗೆ ಹೋಗುವ ಕುರಿತು ತನ್ನ ಮೋಟಾರ ಸೈಕಲ ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಮೋಟಾರ ಸೈಕಲಕ್ಕೆ ಜೋರಾಗಿ ಡಿಕ್ಕಿಪಡಿಸಿ ಅಪಘಾತ ಮಾಡಿ ನನಗೆ ಭಾರಿಗಾಯಗೊಳಿಸಿ ತನ್ನ ವಾಹನ ಸಮೇತ ಓಡಿ ಹೋಗಿದ್ದು ಆತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಫಿರ್ಯಾದಿ ದೂರು ಹೇಳಿಕೆ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸಂಚಾರಿ ಪೊಲೀಸ್‌ ಠಾಣೆ -1 :- ದಿನಾಂಕ 13-01-2023 ರಂದು ಸಾಯಂಕಾಲ 5-30 ಗಂಟೆಗೆ ಖಾಸಗಿ ಕಾಮರೆಡ್ಡಿ ಆಸ್ಪತ್ರೆಯ ಸಿಬ್ಬಂದಿಯವರು  ರವರು ಠಾಣೆಗೆ ಪೋನ ಮಾಡಿ ನವೀನಕುಮಾರ ಇವರು ರಸ್ತೆ ಅಪಘಾತ ಹೊಂದಿ ಉಪಚಾರ ಕುರಿತು ಬಂದು ಸೇರಿಕೆಯಾಗಿರುತ್ತಾರೆ ಅಂತಾ ತಿಳಿಸಿದ್ದರಿಂದ ನಾನು ಆಸ್ಪತ್ರೆಗೆ ಬೇಟಿಕೊಟ್ಟು ಗಾಯಾಳು ನವೀನಕುಮಾರ ಇವರನ್ನು ವಿಚಾರಿಸಲು ಅವರು ಕೊಟ್ಟ ಹೇಳಿಕೆ ಸಾರಂಶವೆನೆಂದರೆ ದಿನಾಂಕ: 13-01-2023 ರಂದು ಮದ್ಯಾಹ್ನ 12-20 ಗಂಟೆ ಸುಮಾರಿಗೆ ಕೇಂದ್ರ ಬಸ್ಸ ನಿಲ್ದಾಣ ಹತ್ತೀರ ನನ್ನ ಕೆಲಸ ಸಂಬಂದ ನಾನು ಸುಪರ ಮಾರ್ಕೆಟ ಮುಖಾಂತರವಾಗಿ ಬೈಸಿಕಲ ಚಲಾಯಿಸಿಕೊಂಡು ಜಗತ ಸರ್ಕಲ ಲಾಹೋಟಿ ಪೆಟ್ರೊಲ ಪಂಪ ಮುಖಾಂತರವಾಗಿ ಬಂದು ಕೊರ್ಟ ಕ್ರಾಸ ರೋಡ ಕಡೆಗೆ ಹೋಗುವ ಕುರಿತು ಎಡ ರೋಡಿನಿಂದ ಬಲ ರೋಡಿಗೆ ಬೈಸಿಕಲ ಚಲಾಯಿಸಿಕೊಂಡು ಹೋಗುತ್ತೀರುವಾಗ ಪಂಜಾಬ ಪುಟವೆರ್ ಅಂಗಡಿ ಹತ್ತೀರ ರೋಡ ಮೇಲೆ ಕೆ.ಕೆ.ಆರ.ಟಿ.ಸಿ ಕಾರ ನಂಬರ ಕೆಎ-33/ಎಫ್-0333 ನೇದ್ದರ ಚಾಲಕ ಶ್ರೀಶೈಲ ಇತನು ಜಗತ ಸರ್ಕಲ ಕಡೆಯಿಂದ ಎಸವಿಪಿ ಸರ್ಕಲ ಕಡೆಗೆ ಹೋಗುವ ಕುರಿತು ತನ್ನ ಕಾರನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಬೈಸಿಕಲಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿ ನನಗೆ ಭಾರಿಗಾಯಗೊಳಿಸಿದ್ದು ಕಾರ ಚಾಲಕ ಶ್ರೀಶೈಲ ಇತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಫಿರ್ಯಾದಿ ದೂರು ಹೇಳಿಕೆ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ರಾಘವೇಂದ್ರ ನಗರ ಪೊಲೀಸ ಠಾಣೆ :- ದಿನಾಂಕ: 13/01/2023 ರಂದು 6.30 ಪಿ.ಎಮ್ಕ್ಕೆ ಶ್ರೀಮತಿ ಬಾಗ್ಯಶ್ರೀ ಗಂಡ ಭೀಮರಾವ ಜಮಖಂಡಿ ವಯಃ 24  ವರ್ಷ ಜಾಃಲಿಂಗಾಯತ ಉಃಮನೆಕೆಲಸ ಸಾಃಶಾಹಬಜಾರ ಜಿಡಿಎ ಕಾಲೋನಿ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ಮಾಡಿಸಿದ ದೂರು ಹಾಜರಪಡಿಸಿದ್ದರ ಸಾರಾಂಶವೇನೆಂದರೆ ನಾನು ಈ ಮೇಲ್ಕಂಡ ವಿಳಾಸದ ನಿವಾಸಿತಳಿದ್ದು ಗಂಡ ಮಕ್ಕಳೊಂದಿಗೆ ವಾಸವಾಗಿರುತ್ತೇನೆ. ನನ್ನ ತವರು ಮನೆ ಪಟ್ಟಣ ಗ್ರಾಮ ಇರುತ್ತದೆ. ಸಂಕ್ರಾಂತಿ ಹಬ್ಬ ಇರುವ ಪ್ರಯುಕ್ತ ಹಬ್ಬಕ್ಕೆ ತವರು ಮನೆಗೆ ಕರೆದುಕೊಂಡು ಹೋಗುವದಕ್ಕೋಸ್ಕರ ನನ್ನ ತಮ್ಮನಾದ ಹಣಮಂತರಾಯ ಈತನು ನನ್ನ ಮನೆಗೆ ಬಂದಿದ್ದು,  ನಾನು ಮತ್ತು ನನ್ನ ತಮ್ಮ ಕೂಡಿಕೊಂಡು ದಿನಾಂಕ; 12/01/2023 ರಂದು ಸಾಯಂಕಾಲ 4.00 ಗಂಟೆಯ ಸುಮಾರಿಗೆ ನನ್ನ ತವರು ಮನೆಗೆ ಹೋಗುವ ಸಂಬಂಧ ಶಾಹಬಜಾರ ನಾಕಾದ ಹತ್ತಿರ ನಿಂತಿರುವ ಸರಕಾರಿ ಬಸ್ಸಿನಲ್ಲಿ ಹೋಗುತ್ತಿರುವಾಗ ನನ್ನ ಪಕ್ಕದಲ್ಲಿ ಇಬ್ಬರು ಹೆಣ್ಣುಮಕ್ಕಳು ಹಾಗೂ ಇಬ್ಬರು ಚಿಕ್ಕ ಮಕ್ಕಳು ಕುಳಿತಿದ್ದು ನನ್ನ ಹತ್ತಿರ ಒಂದು ವ್ಯಾನಿಟಿಬ್ಯಾಗ ಮತ್ತು ನನ್ನ ಹತ್ತಿರ 2 ವರ್ಷದ ಮಗು ಇರುವ ಪ್ರಯುಕ್ತ ನಾನು ನನ್ನ ಮಗುವನ್ನು ನೋಡಿಕೊಳ್ಳುತ್ತಿರುವ ಸಮಯದಲ್ಲಿ ನನ್ನ ವ್ಯಾನಿಟಿ ಬ್ಯಾಗನೊಳಗಿರುವ 2.5 ತೊಲೆ ಬಂಗಾರದ ನಾನ್ನನ್ನ ವ್ಯಾನಿಟಿಬ್ಯಾಗಿನಲ್ಲಿಟ್ಟಿದ್ದು ನನ್ನ ಪಕ್ಕದಲ್ಲಿ ಕುಳಿತಿರುವ ಆ ಇಬ್ಬರು ಹೆಣ್ಣುಮಕ್ಕಳು ಮತ್ತು ಇಬ್ಬರು ಚಿಕ್ಕ ಮಕ್ಕಳು ಕೂಡಿಕೊಂಡು ಶಾಹಬಜಾರ ನಾಕಾದಿಂದ ಖಾದ್ರಿ ಚೌಕದ ಮದ್ಯದಲ್ಲಿ ಬಸ್ಸಿನೊಳಗೆ ನನ್ನ ವ್ಯಾನಿಟಿ ಬ್ಯಾಗಿನೊಳಗಿರುವ 2.5 ತೊಲೆಬಂಗಾರದನಾನ್ಅ.ಕಿ. 132500/- ಬೆಲೆಬಾಳುವ ಬಂಗಾರದ ನಾನ್ಕನ್ನ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ನಂತರ ಕಳ್ಳತನವಾಗಿರುವ ಮಾಹಿತಿಯನ್ನು ನನ್ನ ಗಂಡನಿಗೆ ತಿಳಿಸಿದ್ದು ನಾನು ಪಟ್ಟಣ ಗ್ರಾಮಕ್ಕೆ ಹೋಗುವದನ್ನು ಬಿಟ್ಟು ದೇವಿ ನಗರದ ಹತ್ತಿರ ಇಳಿದು ಕೊಂಡಿರುತ್ತೇನೆ. ನನ್ನ ಹತ್ತಿರ ಇರುವ ಬಂಗಾರದ ನಾನನ್ನ ಕಳ್ಳತನ ಮಾಡಿದವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಿ ನನಗೆ ನ್ಯಾಯ ಒದಗಿಸಿಕೊಡಲುವಿನಂತಿ. ಅಂತಾ ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ರಾಘವೇಂದ್ರ ನಗರ ಪೊಲೀಸ ಠಾಣೆ :- ದಿನಾಂಕಃ13.01.2023 ರಂದು8:15ಪಿ.ಎಮಕ್ಕೆ ಶ್ರೀಸುರೇಶ ತಂದೆ ಗೋವಿಂದರಾವ ಯಾದವ ವಯ-40ವರ್ಷ ಜಾ||ಯಾದವ ಉ|| ಬೇಕರಿವ್ಯಾಪಾರ ಸಾ||ಹೊಡ್ಡಿನಮನಿ ಲೇಔಟ ಕಲಬುರಗಿರವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಗಣಕೀಕೃತ ಮಾಡಿಸಿದ ದೂರು ನೀಡಿದರ ಸಾರಾಂಶವೆನೆಂದರೆ ನಾನು ಯಂಕವ್ವಾ ಮಾರ್ಕೇಟದಲ್ಲಿ ಒಂದು ಬೇಕರಿ ಇಟ್ಟುಕೊಂಡು ಇದ್ದು ಹೊಡ್ಡಿನಮನಿ ಲೇಔಟದಲ್ಲಿ ಮನೆ ಮಾಡಿಕೊಂಡು ಹೆಂಡತಿ ಮಕ್ಕಳೊಂದಿಗೆ ವಾಸವಾಗಿ ಇರುತ್ತೇನೆ. ಹೀಗೆ ಇರುವಾಗ ದಿನಾಂಕ:09.01.2023ರಂದು ಸಾಯಂಕಾಲ5:30 ಗಂಟೆ ಸುಮಾರಿಗೆ ನಮ್ಮ ಮನೆಗೆ ನಾನು ಸರಿಯಾಗಿ ಕೀಲಿ ಹಾಕಿಕೊಂಡು ನಾನು ಮತ್ತು ನನ್ನ ಹೆಂಡತಿಯಾದ ಶ್ರೀಮತಿ ಸಂದ್ಯಾರಾಣಿ ಮಗಳು ಶಿವಾನಿ ಮತ್ತು ಶಾಂಭವಿ ಎಲ್ಲ್ಲರೂ ಕೂಡಿಕೊಂಡು ತಿರುಪತಿ ತಿಮ್ಮಪ್ಪನ ದರ್ಶನಕ್ಕಾಗಿ ಹೋಗಿ ಮರಳಿ ದಿನಾಂಕ:13.01.2023ರಂದು ಬೆಳಿಗ್ಗೆ ಬಂದು ನೋಡಲಾಗಿ ನಮ್ಮ ಮನೆಯ ಬಾಗಿಲ ಕೀಲಿ ಮುರಿದಿದ್ದನ್ನು ನೋಡಿ ಗಾಬರಿಗೊಂಡು ಮನೆಯೊಳಗೆ ಹೋಗಿ ನೋಡಿದ್ದಾಗ ನಮ್ಮ ಮನೆಯಲ್ಲಿರುವ ಆಲ್ಮಾರಿಯ ಕೀಲಿ ಮೂರಿದಿದ್ದು ಆಲ್ಮಾರಿಯಲ್ಲಿಟ್ಟಿರುವ 1) 10ಗ್ರಾಂಬಂಗಾರದ ನೆಕ್ಲೆಸ್ ಅ||ಕಿ||30000/- 2) 20ಗ್ರಾಂ ಬಂಗಾರದ ನೆಕ್ಲೆಸ್ ಅ||ಕಿ||50000/-   3) 20ಗ್ರಾಂ ಬೆಳ್ಳಿಯ ಎರಡು ಗ್ಲಾಸಗಳ ಅ||ಕಿ||800/-4) 20ಗ್ರಾಂ ಬೆಳ್ಳಿ ಬಟ್ಟಲ್ಗಳು ಅ||ಕಿ||800/- 5) 50ಗ್ರಾಂ ಬೆಳ್ಳಿಯ ಕ್ಯ್ವಾಯಿನ್ಸ ಅ||ಕಿ|| 2000/-  6) 60ಗ್ರಾಂನ ಮೂರು ಕಾಲ್ಚೈನಗಳು ಅ||ಕಿ|| 3000/- 7) 40ಗ್ರಾಂನ 4ಬೆಳ್ಳಿ ಕಡಗ ಅ||ಕಿ||1500/- 8) ನಗದು ಹಣ 50000/-ರೂ ನೇದ್ದವುಗಳು ಇರಲಿಲ್ಲಾ. ಹೀಗೆ ಒಟ್ಟು143400/-ರೂ ಬೆಲೆ ಬಾಳುವ ಬಂಗಾರ ಮತ್ತು ಬೆಳ್ಳಿಯ ಆಭರಣಗಳು ಹಾಗೂ ನಗದು ಹಣವನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ನಮ್ಮ ಮನೆಯಲ್ಲಿ ಎಲ್ಲಾ ಸಾಮಾನಗಳು ಹಾಗೂ ಸಲಕರಣೆಗಳು ಹುಡಕಾಡಿ ಮತ್ತು ಮನೆಯಲ್ಲಿ ಚರ್ಚೆ ಮಾಡಿಕೊಂಡು ಬಂದು ದೂರು ನೀಡುವದಕ್ಕೆ ತಡವಾಗಿರುತ್ತದೆ. ಕಾರಣ ದಿನಾಂಕಃ09.01.2023 ರಿಂದ ದಿನಾಂಕ:13.01.2023 ರ ಮದ್ಯದ ಅವಧಿಯಲ್ಲಿ ನಮ್ಮ ಮನೆಯ ಬಾಗಿಲ ಕೀಲಿ ಮುರಿದು ಮನೆಯಲ್ಲಿಟ್ಟಿರುವ 148400/-ರೂ ಬೆಲೆ ಬಾಳುವ ಬಂಗಾರ ಮತ್ತು ಬೆಳ್ಳಿಯ ಆಭರಣಗಳು ಮತ್ತು ನಗದು ಹಣ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋದವರ ವಿರುದ್ಧ ಕಾನೂನು ಕ್ರಮ ಜರಗಿಸಿ ಕಳೆದು ಹೋದ ನಮ್ಮ ಬಂಗಾರ ಮತ್ತು ಬೆಳ್ಳಿಯ ಆಭರಣಗಳು ಹಾಗೂ ನಗದು ಹಣ ಪತ್ತೆ ಮಾಡಿಕೊಡಲು ಮಾನ್ಯರವರಲ್ಲಿ ವಿನಂತಿ ಅಂತಾ ಇತ್ಯಾಧಿಯಾಗಿ ದೂರು ನೀಡಿದರ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ವರದಿ.

 

 

 

ಸಬ್‌ ಅರ್ಬನ್‌ ಪೊಲೀಸ್‌ ಠಾಣೆ :- ಫಿರ್ಯಾದಿಯು ದಿನಾಂಕಃ11-01-2023 ರಂದು ಆಳಂದ ಚೆಕ್ ಪೋಸ್ಟ್ ಹತ್ತಿರ ಕರ್ತವ್ಯದಲ್ಲಿದ್ದಾಗ ಸದರಿ ಆರೋಪಿತರು ಕರ್ತವ್ಯಕ್ಕೆ ಅಡೆತಡೆ ಉಂಟುಮಾಡಿ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಅಸಭೈವಾಗಿ ವರ್ತಿಸಿದ ನೀನು ಏನು ಕೆಲಸ ಮಾಡುತ್ತಿ ನಿಂದು ಏನು ಕರ್ತವ್ಯವಿದೆ ಎಂದು ಬೈದು ಕರ್ತವ್ಯಕ್ಕೆ ಅಡ್ಡಿಯುಂಟು ಮಾಡಿದ್ದಾರೆ ಎಂದು ಫಿರ್ಯಾದಿ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸಬ್‌ ಅರ್ಬನ್‌ ಪೊಲೀಸ್‌ ಠಾಣೆ :-  ದಿನಾಂಕಃ-13-01-2023 ರಂದು ಸದರಿ ಸರಕಾರಿ ತರಫೆ ಫಿರ್ಯಾದಿದಾರರಾಗಿ ಸುಲ್ತಾನಪುರ ಕ್ರಾಸ್ ಹತ್ತಿರ ಸಾರ್ವಜನಿಕ ವಿತರಣಾ ವ್ಯವಸ್ಥೆಗೆ ಸೇರಿದ ಅಕ್ಕಿಯನ್ನು ಕಡಿಮೆ ಬೆಲೆಗೆ ಕೊಂಡು ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಒಂದು ಪಿಕಪ್ ವಾಹನದಲ್ಲಿ  ಸಾಗಿಸುತ್ತಿದ್ದಾರೆಂದು ಖಚಿತ ಬಾತ್ಮಿ ಬಂದ ಮೇರೆಗೆ ದಾಳಿ ಮಾಡಲಾಗಿ 15 ಕ್ವಿಂಟಾಲ್ 60 ಕೆಜಿ ತೂಕವುಳ್ಳ ಅ.ಕಿ.37,500/- ರೂ ಮೌಲ್ಯದ ಮುದ್ದೆ ಮಾಲನ್ನು ವಶಕ್ಕೆ ಪಡೆದು ಸದರಿ ಆರೋಪಿತರ ವಿರುದ್ದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

 

ಸಬ್‌ ಅರ್ಬನ್‌ ಪೊಲೀಸ್‌ ಠಾಣೆ :-  ಫಿರ್ಯಾದಿಯು ದಿನಾಂಕಃ-13-01-2023 ರಂದು ತನ್ನ ತವರು ಊರಿಗೆ ಹೋಗಲು ಆಳಂದ ಚೆಕ್ ಪೋಸ್ಟ್ ಹತ್ತಿರ ಇದ್ದಾಗ ಬಸ್ ಹತ್ತುತ್ತಿದ್ದಾಗ ನನ್ನ ವ್ಯಾನಿಟಿ ಬ್ಯಾಗಿನಲ್ಲಿ 45 ಗ್ರಾಂ ಬಂಗಾರದ ತಾಳಿ ಮತ್ತು 10 ಗ್ರಾಂ ಬಂಗಾರದ ಉಂಗುರ ಅ.ಕಿ. 2,36,500 ಇದ್ದು ನಾನು ಟಿಕೆಟಿಗೆ ದುಡ್ಡು ಕೊಡಲು ವ್ಯಾನಿಟಿ ಬ್ಯಾಗನ್ನು ತೆಗೆದು ನೊಡಲು ನನ್ನ ಬ್ಯಾಗಿನಲ್ಲಿದ್ದ ಬಂಗಾರದ ತಾಳಿ ಮತ್ತು ಬಂಗಾರದ ಉಂಗುರವನ್ನು ಯಾರೋ ಕಳುವು ಮಾಡಿಕೊಂಡು ಹೋಗಿರುತ್ತಾರೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 14-01-2023 01:56 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080