ಅಭಿಪ್ರಾಯ / ಸಲಹೆಗಳು

ಅಶೋಕ ನಗರ ಪೊಲೀಸ  ಠಾಣೆ :-  ದಿನಾಂಕ:12.12.2022 ರಂದು 1:15 ಪಿ.ಎಂ.ಕ್ಕೆ  ಫಿರ್ಯಾದಿ ಶ್ರೀ ತಿಪ್ಪಣ್ಣಾ ತಂದೆ ಲಾಲು ಜಾಧಾವ ವಯ: 29 ವರ್ಷ ಜಾ: ಲಂಬಾಣಿ ಉ: ಕೂಲಿ ಕೆಲಸ ಸಾ|| ರವನೂರ ತಾ|| ಜೇವರ್ಗಿ ಜಿ|| ಕಲಬುರಗಿ ಇವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿ ದೂರು ಸಲ್ಲಿಸಿದ್ದರ ಸಾರಾಂಶವೆನೆಂದರೆ, ನಾನು ನನ್ನ ದಿನ ನಿತ್ಯದ ಕೆಲಸಕ್ಕೆ ಓಡಾಡುವ ಸಲುವಾಗಿ 2017 ನೇ ಸಾಲಿನಲ್ಲಿ ಒಂದು ಕಪ್ಪು ಬಣ್ಣದ ಹಿರೋ ಸ್ಪ್ಲೆಂಡರ್ ಪ್ಸಸ್ ಮೋಟಾರ ಸೈಕಲ್ ನಂ ಕೆ.ಎ-32 ಇ.ಪಿ.-5437 ಚೆಸ್ಸಿ ನಂ MBLHAR088HHD60207 ಇಂಜಿನ್ ನಂ HA10AGHHDF7334 ಅ. ಕಿ. 24,750/-  ರೂಪಾಯಿ ನೇದ್ದು  ನಮ್ಮ ತಂದೆಯ ಹೆಸರಿನಿಂದ ಖರೀದಿಸಿದ್ದು ಇರುತ್ತದೆ. ಹೀಗಿದ್ದು ದಿನಾಂಕ:04.11.2022 ರಂದು ಮದ್ಯಾಹ್ನ 3:00 ಗಂಟೆ ಸುಮಾರಿಗೆ ನಾನು ನಮ್ಮ ವಾಹನವನ್ನು ಕೇಂದ್ರ ಬಸ್ ನಿಲ್ದಾಣದ ಏದರುಗಡೆ ಇರುವ ಕುರಾಳ ಆಸ್ಪತ್ರೆಯ ಏದುರುಗಡೆ ನಿಲ್ಲಿಸಿ ಮರಳಿ ಮರು ದಿವಸ ದಿನಾಂಕ:05.11.2022 ರಂದು ಬೆಳಿಗ್ಗೆ 06:00 ಗಂಟೆಗೆ ಬಂದು ನೋಡಲು ನಮ್ಮ ವಾಹನ ನಾನು ನಿಲ್ಲಿಸಿದ ಸ್ಥಳದಲ್ಲಿ ಇದ್ದಿರುವುದಿಲ್ಲ. ಯಾರೋ ಕಳ್ಳರು ನಮ್ಮ ಮೋಟರ್ ಸೈಕಲ್ ಕಳುವು ಮಾಡಿಕೊಂಡು ಹೋಗಿರುತ್ತಾರೆ ಕಾರಣ ನಾನು ಮತ್ತು ನಮ್ಮ ತಂದೆಯವರು ಇಬ್ಬರೂ ಕೂಡಿ ಕಲಬುರಗಿ ನಗರದಲ್ಲಿ ಎಲ್ಲಾ ಕಡೆಯಲ್ಲಿ ತಿರುಗಾಡಿ ಕಳ್ಳತನವಾದ ನಮ್ಮ ವಾಹನ ಹುಡುಕಾಡಿ ಇಂದು ತಡವಾಗಿ ಠಾಣೆಗೆ ಬಂದು ದೂರು ಸಲ್ಲಿಸುತ್ತಿದ್ದು, ಕಳವುವಾದ ನಮ್ಮ ಮೋಟಾರ ಸೈಕಲನ್ನು ಪತ್ತೆ ಮಾಡಿ ಕಳ್ಳತನ ಮಾಡಿದವರ ವಿರುದ್ದ ಕಾನೂನು ರೀತಿ ಕ್ರಮ ಜರುಗಿಸಿ ನನ್ನ ವಾಹನ ನನಗೆ ದೊರಕಿಸಿ ಕೊಡಲು ವಿನಂತಿ  ಅಂತ ವಗೈರೆಯಾಗಿ ಇದ್ದ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸಬ್‌ ಅರ್ಬನ್‌ ಪೊಲೀಸ್‌ ಠಾಣೆ :- ದಿನಾಂಕಃ-12-12-2022  ರಂದು ಫಿರ್ಯಾದಿಯು ಆಸ್ಪತ್ರೆಯಲ್ಲಿ ನೀಡಿದ  ಹೇಳಿಕೆಯೇನೆಂದರೆ ದಿನಾಂಕಃ-12-12-2022  ರಂದು ರಾತ್ರಿ ೧೨:೩೦ ಗಂಟೆಗೆ ನನ್ನ ಗೆಳಯರನ್ನು ಭೇಟಿಯಾಗಿ ಮನೆಗೆ ಬರುತ್ತಿರುವಾಗ ಪೀರ್ ಬಂಗಾಲಿ ದರ್ಗಾದ ಹತ್ತಿರ ಸದರಿ ಆರೋಪಿತನು ನನ್ನನ್ನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಮತ್ತು ಅವನ ಸಂಗಡ ಇಬ್ಬರು ಕೂಡಿಕೊಂಡು ನನಗೆ ಖಲಾಸ್ ಮಾಡು ಅವನನ್ನ ಎಂದು  ಹೇಳುತ್ತಾ ಫಿರ್ಯಾದಿಗೆ ಹೊಡೆದಿರುತ್ತಾರೆ. ಮತ್ತು ಆರೋಪಿತ ಎ೧ ಈತನು ಫಿರ್ಯಾದಿಗೆ ಚೂಪಾದ ಕಲ್ಲಿನಿಂದ ಹೊಡೆದು ಬೆನ್ನಿಗೆ ಹೊಡೆದು ಗಾಯ ಮಾಡಿರುತ್ತಾನೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸಬ್‌ ಅರ್ಬನ್‌ ಪೊಲೀಸ್‌ ಠಾಣೆ :- ದಿನಾಂಕಃ-12-12-2022  ರಂದು  ಸಂಜೆ ೪.೩೦ ಗಂಟೆಗೆ ಸರಕಾರಿ    ಫಿರ್ಯಾದಿಯು ಠಾಣೆಗೆ ಹಾಜರಾಗಿ ನೀಡಿದ ಫಿರ್ಯಾದಿ ಯೇನೆಂದರೆ ಸದರಿಯವರು ಏರಿಯಾದಲ್ಲಿ ಪೆಟ್ರೋಲಿಂಗ್ ಕರ್ತವ್ಯದಲ್ಲಿದ್ದಾಗ ಖಚಿತ ಬಾತ್ಮಿ ಬಂದಿದ್ದೆನೆಂದರೆ  ಕೆರಿಭೋಸಗಾ ಗ್ರಾಮದಲ್ಲಿ ಸದರಿ ಆರೋಪಿತನು ೧ ರೂ ೮೦ ರೂ ಗೆಲ್ಲಿರಿ ಎಂದು ಸಾರ್ವಜನಿಕ ಸ್ಥಳದಲ್ಲಿ ಮಟಕಾ ಬರೆದುಕೊಳ್ಳುತ್ತಿದ್ದಾನೆಂದು ಮಾಹಿತಿ ಬಂದ ಮೇರೆಗೆ ದಾಳಿ ಮಾಡಲಾಗಿ ಸದರಿ ಆರೋಪಿತನು ಮತ್ತು ಮುದ್ದೆ ಮಾಲನ್ನು ವಶಕ್ಕೆ ಪಡೆದು ಸದರಿ ಆರೋಪಿತನ ವಿರುದ್ದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸಬ್‌ ಅರ್ಬನ್‌ ಪೊಲೀಸ್‌ ಠಾಣೆ :- ದಿನಾಂಕಃ-12-12-2022  ರಂದು ಸರಕಾರಿ ಫಿರ್ಯಾದಿಯು ಠಾಣೆಗೆ ಹಾಜರಾಗಿ ನೀಡಿದ ಫಿರ್ಯಾದಿಯೇನೆಂದರೆ ಇಂದು ದಿನಾಂಕಃ-೧೨/೧೨/೨೦೨೨ ಸದರಿಯವರು ಏರಿಯಾದಲ್ಲಿ ಪೆಟ್ರೋಲಿಂಗ್ ಕರ್ತವ್ಯದಲ್ಲಿದ್ದಾಗ ಖಚಿತ ಬಾತ್ಮಿ ಬಂದಿದ್ದೆನೆಂದರೆ  ಸ್ವರ್ಗೆಟ್ ನಗರದಲ್ಲಿ ಕೆಲವು ವ್ಯಕ್ತಿಗಳು ದುಂಡಾಗಿ ಕುಳಿತು ಅಂದರ್ ಬಾಹರ್ ಎಂಬ ದೈವಾಲೀಲೆಯ ಆಟವನ್ನು ಆಡುತ್ತಾ ಕುಳಿತಿದ್ದಾರೆಂದು ಮಾಹಿತಿ ಬಂದ ಮೇರೆಗೆ ದೂರದಲ್ಲಿ ನಿಂತಿ ವೀಕ್ಷಿಸಿ  ಖಚಿತ ಪಡಿಸಿಕೊಂಡು ದಾಳಿ ಮಾಡಲಾಗಿ ಸದರಿ ಆರೋಪಿತನು ಮತ್ತು ಮುದ್ದೆ ಮಾಲನ್ನು ವಶಕ್ಕೆ ಪಡೆದು ಸದರಿ ಆರೋಪಿತನ ವಿರುದ್ದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಎಂ.ಬಿ.ನಗರ ಪೊಲೀಸ್‌ ಠಾಣೆ :-  ದಿನಾಂಕ: 20-11-2022 ರಂದು ೭-೪೫ ಪಿಎಂ ಆರೋಪಿತನು ಫಿರ್ಯಾದಿ ಮನೆಯ ಮುಂದೆ ಹಣ ಕೊಡುವ ವಿಷಯದಲ್ಲಿ ಜೀವ ಭಯ ಹಾಕಿರುತ್ತಾರೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಇತ್ತೀಚಿನ ನವೀಕರಣ​ : 13-12-2022 05:41 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080