ಅಭಿಪ್ರಾಯ / ಸಲಹೆಗಳು

ವಿಶ್ವವಿದ್ಯಾಲಯ ಪೊಲೀಸ ಠಾಣೆ :- ದಿನಾಂಕ 16-06-2022  ರಂದು ರಾತ್ರಿ ೮:೦೦ ಗಂಟೆ ಸುಮಾರಿಗೆ ನಾನು ನನ್ನ ಕಾರ ನಂ. ಕೆಎ ೩೨ ಝಡ್ ೧೯೭೦ ನೇದ್ದು ತೆಗೆದುಕೊಂಡು ಕಲಬುರಗಿಯ ಸಿದ್ದಿಪ್ರೀಯ ಹೋಟೆಲ್ ಹತ್ತಿರ ಬಂದು ನಾನು ಹೋಟಲದೊಳಗೆ ಹೋಗಿ ಚಹಾ ಕುಡಿದು ರಾತ್ರಿ ೮:೩೦ ಗಂಟೆ ಸುಮಾರಿಗೆ ಹೊರಗಡೆ ಬಂದಾಗ ನಾನು ನಿಲ್ಲಿಸಿದ ನನ್ನ ಕಾರ ಕಾಣಲಿಲ್ಲ. ನಂತರ ನಾನು ಎಲ್ಲಾ ಕಡೆ ಹುಡುಕಾಡಿದರೂ ಸಿಕ್ಕಿರುವುದಿಲ್ಲ. ನಂತರ ನಾನು ನನ್ನ ಅಳಿಯ ಸುನೀಲ ಈತನಿಗೆ ಕರೆಯಿಸಿ ವಿಚಾರಿಸಿದ್ದು, ನನ್ನ ಅಳಿಯ ಸುನೀಲ ಈತನ ಗೆಳೆಯ ಕಾಶಿ ಈತನು ಆಗಾಗ ನಮ್ಮ ಕಾರ ತೆಗೆದುಕೊಂಡು ಹೋಗುತ್ತಿದ್ದನು. ಅವನೇನಾದರೂ ನನ್ನ ಕಾರ ತೆಗೆದುಕೊಂಡು ಹೋಗಿದ್ದಾನೋ ಅಂತಾ ನಾನು ನನ್ನ ಅಳಿಯ ಸುನೀಲ ಈತನಿಗೆ ಕಾಶಿ ಈತನಿಗೆ ಫೊನ್ ಮಾಡಿ ಕೇಳು ಅಂತಾ ನಾನು ನನ್ನ ಅಳಿಯನಿಗೆ ಹೇಳಿದಾಗ ನನ್ನ ಅಳಿಯ ಕಾಶಿ ಈತನಿಗೆ ಫೋನ್ ಮಾಡಿದಾಗ ಅವನು ಫೋನ್ ಕರೆಯನ್ನು ಸ್ವೀಕರಿಸಿರುವುದಿಲ್ಲ. ನಂತರ ಪುನಃ ಅವನಿಗೆ ಫೋನ್ ಮಾಡಿ ಕಾರಿನ ಬಗ್ಗೆ ವಿಚಾರಿಸಲಾಗಿ ಅವನು ಸರಿಯಾಗಿ ಮಾತನಾಡದೇ ಇದ್ದುದ್ದರಿಂದ ನಮಗೆ ಅವನ ಮೇಲೆ ಸಂಶಯ ಬಂದಿದ್ದರಿAದ ನಾವು ಅವನ ಮನೆಯಾದ ಸಿ.ಐ.ಬಿ ಕಾಲೋನಿ ಮತ್ತು ಸೂರ್ಯ ನಗರದಲ್ಲಿಯೂ ಕೂಡಾ ಹೋಗಿ ವಿಚಾರಿಸಲು ಅವನು ಬಂದಿರುವುದಿಲ್ಲ ಅಂತಾ ತಿಳಿಸಿದ್ದು ಇರುತ್ತದೆ. ನಂತರ ನಾವು ನಮ್ಮ ಕಾರಿನ ಬಗ್ಗೆ ಎಲ್ಲಾ ಕಡೆ ಹುಡಕಾಡಲಾಗಿ ಸಿಕ್ಕಿರುವುದಿಲ್ಲ. ಸದರಿ ನನ್ನ ಕಾರ ನಂ. ಕೆಎ ೩೨ ಝಡ್ ೧೯೭೦ ನೇದ್ದನ್ನು ಕಾಶಿ ಈತನೇ ಕಳ್ಳತನ ಮಾಡಿಕೊಂಡು ಹೋಗಿರಬಹುದು ಅಂತಾ ಸಂಶಯ ಇದ್ದು,  ಸದರಿ ನನ್ನ ಕಾರ ನಂ. ಕೆಎ ೩೨ ಝಡ್ ೧೯೭೦ ಅ.ಕಿ-೭,೦೦,೦೦೦/-ರೂ ನೇದ್ದು ಪತ್ತೆ ಮಾಡಿ, ಕಳ್ಳತನ ಮಾಢಿದ ಕಾಶಿ ಈತನ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಇಂದು ತಡಮಾಡಿ ಠಾಣೆಗೆ ಬಂದು ದೂರು ನೀಡಿದ್ದು ಇರುತ್ತದೆ. ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ವಿಶ್ವವಿದ್ಯಾಲಯ ಪೊಲೀಸ ಠಾಣೆ :- ದಿನಾಂಕ 10-11-2022  ರಂದು ಬೆಳಿಗ್ಗೆ ೮.೩೦ ಎ.ಎಮ ದಿಂದ ೧೫.೩೦ ಪಿ.ಎಮ ಅವಧಿಯಲ್ಲಿ ಫಿರ್ಯಾದಿಯೂ ಹೊರಗಡೆ ಹೋಗಿದ್ದಾಗ ಯಾರೋ ಕಳ್ಳರು ಮನೆಯ ಬಾಗಿಲು ಕೀಲಿ ಮುರಿದು ಒಳಗಡೆ ಹೋಗಿ ಮನೆಯ ಟೇಬಲ್ ಮೇಲಿಟ್ಟ ನಗದು ಹಣ, ಕಿವಿ ಓಲೆಗಳು, ಕಿ ಪ್ಯಾಡ್ ಮೋಬೈಲ್ ಅಕಿ ೪೭೦೦೦/- ಕಿಮ್ಮತ್ತಿನ ವಸ್ತುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ರೋಜಾ ಪೊಲೀಸ್‌ ಠಾಣೆ :- ಎ.ವಾಜೀದ ಪಟೇಲ, ಪಿ.ಐ., ಸಿ.ಸಿ.ಬಿ. ಘಟಕ ಕಲಬುರಗಿ ನಗರ ವರದಿ ಸಲ್ಲಿಸುವುದೇನಂದರೆ, ಇಂದು ದಿನಾಂಕ:12/11/ ಕಲಬುರಗಿ ನಗರದ ಹುಮನಾಬಾದ ರಿಂಗರೋಡ ಹತ್ತಿರ ಇರುವ ಶ್ರೀ ಶರಣಬಸವೇಶ್ವರ ಹೊಟೇಲ ಮತ್ತು ಭೋಜನಾಲಯ ಮೇಲಗಡೆ ಒಂದು ರೂಮಿನಲ್ಲಿ ಅಕ್ರಮವಾಗಿ ಅಂದರ ಬಾಹರ ಜೂಜಾಟ ನಡೆದಿದೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ  , ಪಂಚರು, ಮತ್ತು ಶ್ರೀ ಸದಾಶಿವ ಅ.ಸೋನವನೆ ಪಿ.ಐ. ರೋಜಾ ಪೊಲೀಸ್ ಠಾಣೆ ಹಾಗೂ ಸಿ.ಸಿ.ಬಿ. ಘಟಕದಸಿಬ್ಬಂದಿ ಜೋತೆಗೆ ಸಾಯಂಕಾಲ 5-00 ಸದರಿ ಶ್ರೀ ಶರಣಬಸವೇಶ್ವರ ಹೊಟೇಲ ಮತ್ತು ಭೋಜನಾಲಯ ಮೇಲಗಡೆ ಒಂದು ರೂಮಿನಲ್ಲಿ ಹೋಗಿ ಪರಿಶೀಲಿಸಿದಾಗ ಸದರಿ ರೂಮ್ನಲ್ಲಿ 05 ಜನರು ದುಂಡಾಗಿ ಕೆಳಗಡೆ ನೆಲದ ಮೇಲೆ ಕುಳಿತುಕೊಂಡು ಅಂದರ್ 500 ರೂ ಮತ್ತು ಬಾಹರ್ 500 ರೂಪಾಯಿಯಂತೆ ಅಂದರ ಬಾಹರ ಎನ್ನುವ ಇಸ್ಪೀಟ್ ಜೂಜಾಟ ಆಡುವುದನ್ನು ಪಂಚರ ಸಮಕ್ಷಮ ಖಚಿತಪಡಿಸಿಕೊಂಡು ಸಿಬ್ಬಂದಿಗಳೊಂದಿಗೆ ದಾಳಿ ಮಾಡಿ ಆಪಾದಿತರನ್ನು ಹಿಡಿದು ನಂತರ ಠಾಣಗೆ ಬಂದ   ಹೀಗೆ ಒಟ್ಟು ನಗದು ಹಣ 41,400/- ರೂ. ಗಳು ಮತ್ತು 52 ಇಸ್ಪಿಟ್ ಎಲೆಗಳು ದೊರಕಿರುತ್ತವೆ.  ಈ ಬಗ್ಗೆ ಜಪ್ತಿ ಪಂಚನಾಮೆಯನ್ನು ಇಂದು ದಿನಾಂಕ:12/11/2022 ರಂದು ಸಾಯಂಕಾಲ 5-00 ಗಂಟೆಯಿಂದ 6-00 ಗಂಟೆಯವರೆಗೆ ಜಪ್ತಿ ಮಾಡಿದ ಮುದ್ದೇಮಾಲುಗಳನ್ನು         05 ಆಪಾದಿತರನ್ನು ರೋಜಾ ಪೊಲೀಸ್ ಠಾಣೆಗೆ ಬಂದು ಜಪ್ತಿ ಪಂಚನಾಮೆ ಮತ್ತು ಮುದ್ದೆಮಾಲಿನೊಂದಿಗೆ ತಂದು ಹಾಜರುಪಡಿಸಿದ್ದರ ಮೇರೆಗೆ ಗುನ್ನೆ ದಾಖಲಿಸಿಕೊಂಡ ಬಗ್ಗೆ ವರದಿ.

 

 

ರೋಜಾ ಪೊಲೀಸ್‌ ಠಾಣೆ :-  ದಿನಾಂಕ : 11/11/2022 ರಂದು ಮುಂಜಾನೆ 11:00 ಗಂಟೆ ಸುಮಾರಿಗೆ ನಮ್ಮ ಆಟೋಮಾಲಿಕ ಅನ್ನುಷಾ ಆಟೋವಾಲ ಸಾಃ ಜಲಾಲವಾಡಿ ಮತ್ತು ಅವನ ಗೇಳೆಯ ಸೋಹೆಲ್ ಟಾಕಿ ಸಾಃ ಮಿಜಗುರಿ ಇವರು ಇಬ್ಬರೂ ನನಗೆ ಮೀಜಗುರಿ ಇಂದ ಮಾತಾಡುವುದು ಇದೆ ಅಂತಾ ನಯಾಮೋಹಲ್ಲಾದ ಖಬರಸ್ಥಾನ್ ಹತ್ತಿರ ನನ್ನನ್ನು ಕರೆದುಕೊಂಡು ಹೋಗಿ ಅವರಲ್ಲಿಯ ಅನ್ನುಷಾ ಇತನು ನನಗೆ ಆಟೋಮೆ ಮೋಟಾರ್ ಸೈಕಲ ಡಾಲತೆ ಕ್ಯಾ ಮಾದರಚೊದ್ ಆಟೋ ಟುಟ್ ಜಾತಾ ಹೈ ಅಂತಾ ಅಂದು,  ತುಜೆ ಚೊಡತೆ ನಹಿ ರಾಂಡಕೆ ಅಂತಾ ಅವಾಶ್ಚ ಶಬ್ದಗಳಿಂದ ಬೈದು ಅಲ್ಲೆ ಬಿದ್ದಿರುವ ಬಡಿಗೆಯಿಂದ ನನಗೆ ಬಲಗೈ ಮುಂಗೈ ಹತ್ತಿರ ಹೋಡೆದು  ಗುಪ್ತಗಾಯ ಮಾಡಿದ್ದು ಅಲ್ಲದೆ  ಅದೆ ಬಡಿಗೆಯಿಂದ ನನ್ನ ಎರಡು ಮೋಳಕಾಲಿಗೆ ಮತ್ಮು ಎಡಮುಂಗೈಗೆ ಹಾಗೂ ನನ್ನ ಬುಜಗಳಿಗೆ ಹೋಡೆದು ಗುಪ್ತ ಮತ್ತು ರಕ್ತಗಾಯ ಮಾಡಿರುತ್ತಾನೆ, ಅಲ್ಲದೆ ಸೋಹೆಲ್ ಟಾಕಿ ಇತನು ನನಗೆ ಹಲ್ಕಟ್ ಕಾಮಾ ಕರತೆ ಸಾಲೆ ಅಂತಾ ಬೈದು ನೇಲಕ್ಕೆ ಹಾಕಿ ಕಾಲಿನಿಂದ ಬೆನ್ನಿಗೆ ಹಾಗೂ ಹೋಟ್ಟೆಗೆ ಒದ್ದಿರುತ್ತಾನೆ. ಹಾಗ ಜಾನ್ ಸೇ ಖಲಾಸ್ ಕರ್ ಅಂತಾ ಅನ್ನುಷಾ ಇತನು ಜೀವದ ಭಯ ಹಾಕಿರುತ್ತಾನೆ ಈ ಘಟನೆಯು ಮುಂಜಾನೆ 11:30 ಗಂಟೆಗೆ ನಡೆದಿರುತ್ತದೆ. ಸ್ಥಳದಲ್ಲಿ ನೇರೆದ ಜನರು ನೋಡಿದ್ದು ಇರುತ್ತದೆ. ಅವರು ನನಗೆ ಬಿಟ್ಟ ನಂತರ ಮನಗೆ ಬಂದು ಸದರಿ ವಿಷಯವನ್ನು ನನ್ನ ಹೆಂಡತಿಯಾದ ನಸೀಮಾ ಬೇಗಂ ಗೆ ಇವಳಿಗೆ ತಿಳಿಸಿದ್ದು ನಮ್ಮ  ಹಿರಿಯರಿಗೆ ವಿಚಾರಿಸಿ ತಡವಾಗಿ ಪೊಲೀಸ ಠಾಣೆಗೆ ಬಂದು ದೂರು ಸಲ್ಲಿಸಿರುತ್ತೇನೆ ನನಗೆ ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕಳಿಹಿಸಿಕೋಟ್ಟು ನನಗೆ ಅವಾಶ್ಚವಾಗಿ ಬೈದು ಬಡಿಗೆಯಿಂದ ಹೋಡೆದು ರಕ್ತಗಾಯ ಮತ್ತು ಗುಪ್ತಗಾಯ ಮಾಡಿ ಜೀವ ಬೇದರಿಕೆ ಹಾಕಿದವರ ಮೇಲೆ ಕಾನೂನಿನ ಕ್ರಮ ಜರುಗಿಸಬೆಕೆಂದು ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲಿಸಿಕೊಂಡ ಬಗ್ಗೆ ವರದಿ.

.

ಇತ್ತೀಚಿನ ನವೀಕರಣ​ : 23-11-2022 04:32 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080