Feedback / Suggestions

ಫರಹತಾಬಾದ ಪೊಲೀಸ ಠಾಣೆ :-  ದಿನಾಂಕ:12.09.2022 ರಂದು ಬೆಳಗ್ಗೆ 11.15 ಗಂಟೆಗೆ ಸ:ತ: ಫಿರ್ಯಾದಿ ಶ್ರೀ ಶಾಂತಿನಾಥ ಬಿಪಿ ಪೊಲೀಸ ನಿರೀಕ್ಷಕರು ಸಂಚಾರ ಪೊಲೀಸ ಠಾಣೆ 01 ಕಲಬುರಗಿ ರವರು ಠಾಣೆಗೆ ಹಾಜರಾಗಿ ದೂರು ಸಲ್ಲಿಸಿದ್ದರ ಸಾರಾಂಶವೇನೆಂದರೆ, ದಿನಾಂಕ 01-06-2022 ರಂದು ರಾತ್ರಿ 11-15 ಗಂಟೆಗೆ ಶ್ರೀ ಸಂತೋಷ ತಂದೆ ಹಯ್ಯಾಳಿ ಕೊರಬಾ ಸಾ: ಹಾವನೂರ ಗ್ರಾಮ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಗಣಕಿಕೃತ ಮಾಡಿದ ದೂರು ಅರ್ಜಿಯನ್ನು ಹಾಜರಪಡಿಸಿದ್ದರ ಸಾರಂಶವೆನೆಂದರೆ ದಿನಾಂಕ: 01-06-2022 ರಂದು ಆಳಂದ ತಾಲ್ಲೂಕಿನ ರುದ್ರವಾಡಿ ಗ್ರಾಮದಲ್ಲಿ ನಮ್ಮೂರಿನ ಶರಣಪ್ಪಾ ಇವರ ಮಗಳ ಮದುವೆ ಕಾರ್ಯಕ್ರಮ ಇರುವದರಿಂದ ಶರಣಪ್ಪಾ ಇವರ ಮನೆಯವರು ಹಾಗೂ ನಾನು ಮತ್ತು ನನ್ನ ದೊಡ್ಡಪ್ಪನ ಮಗ ಶಿವಪ್ಪಾ ತಂದೆ ಶಿವಶರಣಪ್ಪಾ, ಸಿದ್ದಮ್ಮಾ ಗಂಡ ಸಿದ್ದಪ್ಪ ಕೊರಬಾ, ದೇವಕಿ ಗಂಡ ಯಶ್ವಂತ ತಳವಾರ, ಸಂಗಮ್ಮಾ ಗಂಡ ಗುರನಾಥ ತಳವಾರ, ಜಗದೇವಿ ಗಂಡ ಸೈದಪ್ಪಾ ತಳವಾರ, ಬಸವರಾಜ ತಂದೆ ಶರಣಪ್ಪಾ ಕಂಬಾರ, ರೇಖಾ ಗಂಡ ಸಾಯಬಣ್ಣಾ ಕೌಲಗಿ, ಗಿರಮ್ಮಾ ಗಂಡ ಶಿವಶರಣಪ್ಪಾ ಜಮಾದಾರ, ವೈಶಾಲಿ ಗಂಡ ಮಹಾಂತಪ್ಪಾ ಕೊರಬಾ, ಗುಂಡಪ್ಪಾ ತಂದೆ ಶಿವಶರಣಪ್ಪಾ ಜಮಾದಾರ, ಮಹಾದೇವಿ ಗಂಡ ಚಂದ್ರಶಾ ಕೊರಬಾ, ಶಿವಾ ತಂದೆ ಚಂದ್ರಕಾಂತ ಜಮಾದಾರ, ರಂಜೀತಾ ತಂದೆ ದೇವಪ್ಪಾ ಜಮಾದಾರ, ಲಕ್ಷ್ಮಿಬಾಯಿ ಗಂಡ ಗುಂಡಪ್ಪಾ ಕೊರಬಾ. ಕಸ್ತೂರಿಬಾಯಿ ಗಂಡ ಚಂದ್ರಕಾಂತ ಜಮಾದಾರ, ರೂಪಾ ಗಂಡ ಬಸವರಾಜ ಕೊರಬಾ, ರೋಹೀತ ತಂದೆ ಸಿದ್ದಣ್ಣಾ ಜಮಾದಾರ, ದೇವಿಂದ್ರ ತಂದೆ ಮೈಲಾರಿ ಹುನಗುಂಟಿ, ಬಸಮ್ಮಾ ಗಂಡ ದೇವಿಂದ್ರ ಹುನಗುಂಟಿ, ಮೀನಾಕ್ಷಿ ತಂದೆ ಹಯ್ಯಾಳಿ ಕೊರಬಾ ಹಾಗೂ ಇತರ ನಮ್ಮೂರಿನ ಹೆಣ್ಣು ಮಕ್ಕಳು ಹಾಗೂ ಗಂಡು ಮಕ್ಕಳು ಸೇರಿಕೊಂಡು ಖಾಸಗಿ ಎಮ್.ಆರ ಬಸ್ಸ  ನಂಬರ ಕೆಎ-32/ಎ-9910 ನೇದ್ದರಲ್ಲಿ ಕುಳಿತು ಹಾವನೂರ ಗ್ರಾಮದಿಂದ ರುದ್ರವಾಡಿ ಗ್ರಾಮಕ್ಕೆ ಹೋಗಿ ಶರಣಪ್ಪಾ ಜಮಾದಾರ ಇವರ ಮಗಳ ಮದುವೆ ಕಾರ್ಯಕ್ರಮ ಮುಗಿಸಿಕೊಂಡು ವಾಪಸ್ಸ ರುದ್ರವಾಡಿ ಗ್ರಾಮದಿಂದ ಕಲಬುರಗಿ ಮುಖಾಂತರ ಹಾವನೂರ ಗ್ರಾಮಕ್ಕೆ  ಹೋಗುವಾಗ ಬಸ್ಸ ಚಾಲಕ ಹಡಗಿಲ ಹಾರುತಿ ಗ್ರಾಮದ ಕ್ರಾಸ ದಾಟಿದ ನಂತರ  ಬಸ್ಸನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗುತ್ತಿದ್ದನ್ನು ಬಸ್ಸಿನಲ್ಲಿದ್ದ ನಾವೆಲ್ಲರೂ ಬಸ್ಸ ಚಾಲಕನಿಗೆ ಬಸ್ಸನ್ನು ನಿಧಾನವಾಗಿ ಚಲಾಯಿಸು ಅಂತಾ ತಿಳಿಸಿದರೂ ಕೂಡಾ ಆತನು ನಮ್ಮ ಮಾತು ಕೇಳದೆ ಹಾಗೇ ಬಸ್ಸ ರೋಡ ಎಡ ಬಲ ತಿರುಗಿಸುತ್ತಾ ಹೋಗಿ ಕಣ್ಣಿ  ಗ್ರಾಮದ ಸಿಮಾಂತರದಲ್ಲಿ ಬರುವ ಬಸವನ ತಾಂಡಾ ಹತ್ತೀರ ಬರುವ ಸೇವಲಾಲ ಗುಡಿ ಹತ್ತೀರ ರೋಡ ಮೇಲಿಂದ ಬಸ್ಸನ್ನು ಒಮ್ಮಲೇ ರೋಡ ಎಡಕ್ಕೆ ತಿರುಗಿಸಿ ರೋಡ ತೆಗ್ಗಿನಲ್ಲಿ ಬಸ್ಸನ್ನು ಪಲ್ಟಿ ಮಾಡಿ ಅಪಘಾತ ಮಾಡಿದನು. ನಾನು ಮತ್ತು ದೇವಿಂದ್ರ, ಬಸಮ್ಮಾ ಹಾಗೂ ಮೀನಾಕ್ಷಿ ರವರೆಲ್ಲರೂ ಸೇರಿಕೊಂಡು ಬಸ್ಸಿನಲ್ಲಿದ್ದ ನನ್ನ ದೊಡ್ಡಪ್ಪನ ಮಗ ಶಿವಪ್ಪಾ,  ಸಿದ್ದಮ್ಮಾ , ದೇವಕಿ, ಸಂಗಮ್ಮಾ, ಜಗದೇವಿ, ಬಸವರಾಜ, ರೇಖಾ, ಗಿರೆಮ್ಮಾ, ವೈಶಾಲಿ, ಗುಂಡಪ್ಪಾ, ಮಹಾದೇವಿ, ಶಿವಾ, ರಂಜೀತಾ, ಲಕ್ಷ್ಮಿಬಾಯಿ, ಕಸ್ತೂರಿಬಾಯಿ, ರೂಪಾ ಹಾಗೂ ರೋಹೀತ ರವರನ್ನು ಬಸ್ಸಿನಿಂದ ಕೆಳಗೆ ತಂದು ಕೂಡಿಸಿದೆವು ಮತ್ತು ಶಿವಪ್ಪಾ ಮತ್ತು ಸಿದ್ದಮ್ಮಾ ರವರಿಗೆ ಮಲಗಿಸಿ ನೋಡಲಾಗಿ ನನ್ನ ದೊಡ್ಡಪ್ಪನ ಮಗ ಶಿವಪ್ಪಾ ಇತನ ತೆಲೆಗೆ ಭಾರಿ ಗುಪ್ತಪೆಟ್ಟು ಬಲ ಎದೆಗೆ ಭರಿ ಒಳಪೆಟ್ಟು ಹಾಗೂ ಎಡಗಾಲು ರಿಸ್ಟ ಹತ್ತೀರ ಭಾರಿ ರಕ್ತಗಾಯವಾಗಿ ಆತನ ಉಸಿರಾಟ ನಿಂತು ಮೃತಪಟ್ಟಿದ್ದ. ಸಿದ್ದಮ್ಮಾ ಇವರ ತೆಲೆಗೆ ಭಾರಿ ಪೆಟ್ಟು ಮತ್ತು ರಕ್ತಗಾಯ ಎಡ ಕಣ್ಣಿನ ಕೆಳಗಡೆ ತರಚಿದಗಾಯ, ಎಡ ಹುಬ್ಬಿಗೆ ರಕ್ತಗಾಯ, ಎಡಗೈ ಮುಂಗೈ ಹತ್ತೀರ ರಿಸ್ಟ ಹತ್ತೀರ ತರಚಿದಗಾಯ, ಎದೆಯ ಮೇಲೆ ಮತ್ತು ಹೊಟ್ಟೆಯ ಮೇಲೆ ಭಾರಿ ಗುಪ್ತಗಾಯ ಮತ್ತು ತರಚಿದಗಾಯವಾಗಿತ್ತು, ದೇವಕಿ, ಸಂಗಮ್ಮಾ, ಜಗದೇವಿ, ಬಸವರಾಜ, ರೇಖಾ, ಗಿರೆಮ್ಮಾ, ವೈಶಾಲಿ, ಗುಂಡಪ್ಪಾ, ಮಹಾದೇವಿ, ಶಿವಾ, ರಂಜೀತಾ, ಲಕ್ಷ್ಮಿಬಾಯಿ, ಕಸ್ತೂರಿಬಾಯಿ, ರೂಪಾ ಹಾಗೂ ರೋಹೀತ ರವರಿಗೂ ಕೂಡಾ ಪೆಟ್ಟು ಬಿದ್ದಿತ್ತು. ಸದರಿ ಘಟನೆ ಜರುಗಿದಾಗ ಸಾಯಂಕಾಲ ಅಂದಾಜು 7-15 ಗಂಟೆ ಸಮಯವಾಗಿತ್ತು. ಬಸ್ಸ ಚಾಲಕನು ಬಸ್ಸಿನ ಹತ್ತೀರ ನಿಂತಂತೆ ಮಾಡಿ ಅಲ್ಲಿಂದ ಓಡಿ ಹೋದನು. ಸದರಿ ಘಟನೆ ನೋಡಿದವರು ಅಂಬುಲೇನ್ಸ ವಾಹನಕ್ಕೆ ಪೋನ ಮಾಡಿದಾಗ ಘಟನೆ ಸ್ಥಳಕ್ಕೆ ಅಂಬುಲೇನ್ಸ ವಾಹನಗಳು ಬಂದು ದೆವಕ್ಕಿ, ಸಂಗಮ್ಮಾ, ಜಗದೇವಿ, ಬಸವರಾಜ, ರೇಖಾ, ಗೀರೆಮ್ಮಾ, ವೈಶಾಲಿ, ಗುಂಡಪ್ಪ ಹಾಗೂ ಮಹಾದೇವಿ ರವರಿಗೆ ಸಕರ್ಾರಿ ಆಸ್ಪತ್ರೆಗೆ ತಗೆದುಕೊಂಡು ಹೋದರು, ರೋಹೀತ ಇತನಿಗೆ ಖಾಸಗಿ ಎ.ಎಸ.ಎಮ್ ಆಸ್ಪತ್ರೆಗೆ ತಗೆದುಕೊಂಡು ಹೋದರು. ನನ್ನ ದೊಡ್ಡಪ್ಪನ ಮಗ ಶಿವಪ್ಪಾ ಇತನ ಶವವನ್ನು ಅಂಬುಲೇನ್ಸ ವಾಹನದಲ್ಲಿ ಸರಕಾರಿ ಅಸ್ಪತ್ರೆಗೆ ಕಳುಹಿಸಿ ನಾನು ಶಿವಾ, ರಂಜೀತಾ, ಲಕ್ಷ್ಮಿಬಾಯಿ, ಕಸ್ತೂರಿಬಾಯಿ, ರೂಪಾ ಹಾಗೂ ಸಿದ್ದಮ್ಮಾ ರವರನ್ನು ಒಂದು ಅಂಬುಲೇನ್ಸ ವಾಹನಲ್ಲಿ ಅವರ ಉಪಚಾರ ಕುರಿತು ಖಾಸಗಿ ಧನ್ವಂತರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಲು ರಾತ್ರಿ 8-15 ಗಂಟೆಗೆ ಸಿದ್ದಮ್ಮಾ ಇವರಿಗೆ ವೈದ್ಯರು ನೋಡಿ ಆಸ್ಪತ್ರೆಗೆ ಬರುವಕ್ಕಿಂತ ಮುಂಚೆ ಮೃತಪಟ್ಟಿರುತ್ತಾರೆ ಅಂತಾ ತಿಳಿಸಿದರು. ಅಪಘಾತ ಪಡಿಸಿದ ಬಸ್ಸ ಚಾಲಕನ ಹೆಸರು ನನಗೆ ಗೋತ್ತಾಗಿರುವದಿಲ್ಲ ಆತನನ್ನು ನೋಡಿದ್ದ ಮುಂದೆ ನೋಡಿದಲ್ಲಿ ಗುರಿತ್ತಿಸುತ್ತೇನೆ. ನನಗೆ ಮತ್ತು ದೇವಿಂದ್ರ, ಬಸಮ್ಮಾ, ಮೀನಾಕ್ಷಿ ರವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಯಾವುದೇ ಆಸ್ಪತ್ರೆಯಲ್ಲಿ ಉಪಚಾರ ಮಾಡಿಕೊಂಡಿರುವದಿಲ್ಲ. ಖಾಸಗಿ ಎಮ್.ಆರ ಬಸ್ಸ ನಂಬರ ಕೆಎ-32/ಎ-9910 ನೇದ್ದರ ಚಾಲಕನು ಬಸ್ಸನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ರೋಡ ಎಡ ಬಲ ತಿರುಗಿಸುತ್ತಾ ಚಲಾಯಿಸಿಕೊಂಡು ಹೋಗಿ ಬಸ್ಸ ಪಲ್ಟಿ ಮಾಡಿ ಅಪಘಾತ ಮಾಡಿ ಸಿದ್ದಮ್ಮಾ ಹಾಗೂ ಶಿವಪ್ಪಾ ರವರಿಗೆ ಭಾರಿಗಾಯ ಹಾಗೂ ಮೇಲೆ ತೊರಿಸಿದವರಿಗೂ ಗಾಯಗೊಳಿಸಿ ತನ್ನ ಬಸ್ಸ ಅಲ್ಲೆ ಬಿಟ್ಟು ಓಡಿ ಹೊಗಿದ್ದು ಶಿವಪ್ಪಾ ಮತ್ತು ಸಿದ್ದಮ್ಮಾ ರವರಿಗೆ ಭಾರಿಗಾಯವಾಗಿದ್ದರಿಂದ ಇಬ್ಬರೂ ಮೃತಪಟ್ಟಿದ್ದು ಬಸ್ಸ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಕೊಟ್ಟ ದೂರು ಅರ್ಜಿ ಸಾರಂಶದ ಮೇಲಿಂದ ಸಂಚಾರ ಪೊಲೀಸ ಠಾಣೆ ಗುನ್ನೆ ನಂ: 66/2022 ಕಲಂ 279, 337, 338, 304(ಎ) ಐಪಿಸಿ ಸಂ 187 ಐಎಮವಿ ಆಕ್ಟ ಅಡಿಯಲ್ಲಿ ಶ್ರೀಮತಿ ಭಾರತಿಬಾಯಿ ಪಿ.ಎಸ.ಐ ರವರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಿರ್ವಹಿಸಿದ್ದು ನಾನು ದಿನಾಂಕ 02-06-2022 ರಂದು  ನಾನು ಸದರ ಕೇಸಿನ ಮುಂದಿನ ತನಿಖೆ ಕುರಿತು ಅಪಘಾತ ಸ್ಥಳಕ್ಕೆ ಬೇಟಿಕೊಟ್ಟು ಪಂಚರ ಸಮಕ್ಷಮ ಅಪಘಾತ ಸ್ಥಳದ ಪಂಚನಾಮೆ ನಿರ್ವಹಿಸಿ ಅಪಘಾತದಲ್ಲಿ ಬಾಗಿ ಇರುವ  ಖಾಸಗಿ ಎಮ್.ಆರ. ಬಸ್ಸ ನಂಬರ ಕೆಎ-32/ಎ-9910 ನೇದ್ದನ್ನು ಎಮವಿಐ ರವರ ನಿರೀಕ್ಷಣೆ ಕುರಿತು ವಶಕ್ಕೆ ತಗೆದುಕೊಂಡು ಠಾಣಾ ಆವರಣದಲ್ಲಿ ತಂದು ನಿಲ್ಲಿಸಿ ಸದರಿ ವಾಹನದ ನಿರೀಕ್ಷಣೆ ಕುರಿತು ಕಲಬುರಗಿ ಆರ.ಟಿ.ಸಿ ಕಾರ್ಯಾಲಯಕ್ಕೆ ಪತ್ರ ಬರೆಯಿಸಿದ್ದು ಮತ್ತು ಸದರಿ ಬಸ್ಸಿನ ನೊಂದಣಿ ಸಂಖ್ಯೆ ಹಾಗೂ ಇಂಜಿನ ನಂಬರ ಮತ್ತು ಚೆಸ್ಸಿ ನಂಬರ ಒಂದಕ್ಕೊಂದು ಹೊಂದಾಣಿಕೆ ಇರುವ ಬಗ್ಗೆ ಪರಿಶೀಲನೆ ಮಾಡಿ ಮಾಹಿತಿ ನೀಡಲು ಆರ.ಟಿ.ಓ ಕಾರ್ಯಾಲಯಕ್ಕೆ ದಿನಾಂಕ 02-06-2022 ರಂದು ಪತ್ರ ಬರೆದಿದ್ದು ಕಲಬುರಗಿ ಆರ.ಟಿ.ಓ ಕಾರ್ಯಾಲಯದಿಂದ ದಿನಾಂಕ: 12-08-2022 ರಂದು ಶ್ರೀ ಈರಣ್ಣಾ ಸಿ. ಹಿರಿಯ ಮೋಟಾರ ವಾಹನ ನಿರೀಕ್ಷಕರು ಆರ.ಟಿ.ಓ ಕಾರ್ಯಾಲಯ ಕಲಬುರಗಿ ರವರು ಖಾಸಗಿ ಎಮ್.ಆರ. ಬಸ್ಸ ನಂಬರ ಕೆಎ-32/ಎ-9910 ನೇದ್ದರ ವಾಹನದ ಚೆಸ್ಸಿ ನಂಬರ ಮತ್ತು ಇಂಜಿನ ನಂಬರಗಳು ನೊಂದಣಿಯಂತೆ ತಾಳೆಯಾಗುತ್ತಿಲ್ಲ ಇಂದೊಂದು ಬೊಗಸ ವಾಹನದಂತೆ ಕಂಡು ಬರುತ್ತದೆ, ಇದರ ಮಾಲಿಕರು ಯಾವ ಸಮಯದಿಂದ ವಾಹನವನ್ನು ರಸ್ತೆಯ ಮೇಲೆ ಉಪಯೋಗಿಸುತ್ತಿದ್ದಾರೆ ರೆಂಬುವದನ್ನು ಖಚಿತ ಪಡಿಸಿಕೊಳ್ಳಬೇಕಾದ ಅವಶ್ಯಕತೆ ಇರುತ್ತದೆ ವಾಹನ ತೆರಿಗೆಯು ಕೆ.ಎಮ್,ವಿ.ಟಿ ಆಕ್ಟ 1957 ರ ಪ್ರಾವಿಜನಗಳ ಅವಶ್ಯಕತೆಯಂತೆ ಸಂದಾಯವಾಗಿದೆಯೊ ಅಥವಾ ಇಲ್ಲವೋ ಎಂಬುವದರ ಬಗ್ಗೆ ಖಾತ್ರಿ ಪಡಿಸಿಕೊಳ್ಳುವದು ಅವಶ್ಯಕತೆ ಇರುತ್ತದೆ.ಅಂತಾ ಪ್ರಮಾಣ ಪತ್ರ ನೀಡಿದ್ದು ಇರುತ್ತದೆ. ಬಸ್ಸ ಮಾಲಿಕ ಎಮ್.ಇಜಾಜ ಇತನು ತನ್ನ ಖಾಸಗಿ ಎಮ್.ಆರ ಬಸ್ಸ ನೊಂದಣಿ ಸಂಖ್ಯೆಗೆ ದುರುದ್ದೇಶದಿಂದ ಖೊಟ್ಟಿ ಚೆಸ್ಸಿ ನಂಬರ ಮತ್ತು ಇಂಜಿನ ನಂಬರಗಳನ್ನು ಅಳವಡಿಸಿ ವಾಹನ ಬಳಕೆ ಮಾಡಿ ಸರಕಾರಕ್ಕೆ ಮೋಸ ಮಾಡಿದ್ದು ಸದರಿ ಬಸ್ಸ ಮಾಲಿಕನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಫಿರ್ಯಾದಿ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸ್ಟೇಷನ್‌ ಬಜಾರ ಪೊಲೀಸ ಠಾಣೆ :-  ದಿನಾಂಕ: 12/09/2022 ರಂದು ಸಾಯಂಕಾಲ 5:30 ಗಂಟೆ ಸುಮಾರಿಗೆ ಫಿರ್ಯಾದಿ ಶ್ರೀಮತಿ ವಂದನಾ ಪಿ ಎಸ್ ಐ (ಕಾ&ಸು)ರವರು ಠಾಣೆಗೆ ಹಾಜರಾಗಿ ಮುದ್ದೆಮಾಲು, ಜಪ್ತಿ ಪಂಚನಾಮೆಯೊಂದಿಗೆ ಜ್ಞಾಪನ ಪತ್ರ ಕೊಟ್ಟಿದ್ದರ ಸಾರಾಂಶವೇನೆಂದರೆ ಇಂದು ದಿನಾಂಕ: 12/09/2022 ರಂದು ಮದ್ಯಾಹ್ನ 3:30   ಗಂಟೆ ಸುಮಾರಿಗೆ ಠಾಣೆಯಲ್ಲಿದ್ದಾಗ ಮಾಹಿತಿ ತಿಳಿದು ಬಂದಿದ್ದೆನಂದರೆ, ಠಾಣಾ ವ್ಯಾಪ್ತಿಯ ಸ್ಟೇಷನ ಏರಿಯಾದ ಮೊಹನ ಬಾರ್ ಹತ್ತಿರ ಗಲ್ಲಿಯಲ್ಲಿ ನವರಂಗ ಹೊಟಲ್ ಮುಂದೆ ಸಾರ್ವಜನಿಕ  ಸ್ಥಳದಲ್ಲಿ ಯಾರೋ ಒಬ್ಬ ವ್ಯಕ್ತಿ ರಸ್ತೆಯ ಮೇಲೆ ಹೋಗಿ ಬರುವ ಸಾರ್ವಜನಿಕರಿಗೆ ಒಂದು ರೂಪಾಯಿಗೆ 80 ರೂಪಾಯಿ ಕೊಡುವದಾಗಿ ಹೇಳುತ್ತಾ ಹಣವನ್ನು ಪಡೆದುಕೊಂಡು ದೈವ ಲೀಲೆಯ ಮಟಕಾ ನಂಬರಗಳನ್ನು ಬರೆದುಕೊಂಡು ಚೀಟಿ ಕೊಡುತ್ತಿದ್ದಾನೆ ಅಂತ ಮಾಹಿತಿ ತಿಳಿದು ಬಂದ ಮೇರೆಗೆ ಮಾನ್ಯ ಸಹಾಯಕ ಪೊಲೀಸ್ ಆಯುಕ್ತರು ದಕ್ಷಿಣ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ ನಾನು ಠಾಣೆಯ ಸಿಬ್ಬಂದಿಯಾದ ಶಿವಾನಂದ ಹೆಚ್.ಸಿ 229, ಮೊಶೀನ ಸಿಪಿಸಿ 92 ರವರಿಗೆ ವಿಷಯ ತಿಳಿಸಿ ಮತ್ತು ಇಬ್ಬರು ಪಂಚರಾದ 1] ಶ್ರೀ  ಖಾಜಾ ಮೈನೊದ್ದಿನ್ ತಂದೆ ಶಹಾಬುದ್ದಿನ್  ವಯ|| 28 ವರ್ಷ ಉ|| ಕೂಲಿ ಜಾ|| ಮುಸ್ಲಿಂ ಸಾ|| ಹಮಾಲವಾಡಿ ಸ್ಟೇಷನ್ ಏರಿಯಾ ಕಲಬುರಗಿ. 2] ಶ್ರೀ ಜಾಫರ್ ಖಾನ ತಂದೆ ಅಮಿರಖಾನ ವಯ|| 28 ವರ್ಷ ಜಾ|| ಮುಸ್ಲಿಂ ಉ|| ಕೂಲಿ ಕೆಲಸ ಸಾ||ಹಮಾಲವಾಡಿ ಕಲಬುರಗಿ ಇವರನ್ನು ಕರೆಯಿಸಿ ದಾಳಿ ಬಗ್ಗೆ ತಿಳಿಸಿ ನಂತರ ಸಾಯಂಕಾಲ 4:00 ಗಂಟೆ ಸುಮಾರಿಗೆ ಠಾಣೆಯಿಂದ ಹೊರಟು ಮೊಹನ್ ಬಾರ ಮರೆಯಲ್ಲಿ ನಿಂತು ಸಾಯಂಕಾಲ 4:15 ಗಂಟೆ ಸುಮಾರಿಗೆ ನೋಡಲು ನವರಂಗ ಹೊಟಲ್ ಮುಂದೆ ರಸ್ತೆಯ ಮೇಲೆ ಸಾರವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಕುಳಿತು ರಸ್ತೆಯ ಮೇಲೆ ಹೋಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಕೊಡುವದಾಗಿ ಹೇಳುತ್ತಾ ನಂಬರಗಳನ್ನು ಬರೆದುಕೊಂಡು ಒಂದು ಚೀಟಿಯು ಜನರಿಗೆ ಕೊಟ್ಟು ಇನ್ನೊಂದು ಚೀಟಿಯ ಮೇಲೆ ಮಟಕಾ ನಂಬರಗಳನ್ನು ಬರೆದುಕೊಡುತ್ತಿರುದನ್ನು ನೋಡಿ ಪಂಚರನ್ನು ತೊರಿಸಿ ಖಚಿತ ಪಡಿಸಿಕೊಸಿಕೊಂಡು ಸಿಬ್ಬಂದಿಯ ಸಹಾಯದಿಂದ ಪಂಚರ ಸಮಕ್ಷಮದಲ್ಲಿ ಏಕಕಾಲಕ್ಕೆ ದಾಳಿ ಮಾಡಲು ಮಟಕಾ ನಂಬರಗಳನ್ನು ಬರೆಸುವವರು ಓಡಿ ಹೋಗಿದ್ದು, ಮಟಕಾ ನಂಬರಗಳನ್ನು ಬರೆದುಕೊಳ್ಳುತ್ತಿದ್ದ ವ್ಯಕ್ತಿಯನ್ನು ಹಿಡಿದು ಅಂಗ ಶೋಧನೆ ಮಾಡಿ ಹೆಸರು ಮತ್ತು  ವಿಳಾಸ ಕೇಳಲಾಗಿ.1) ಮಹ್ಮದ ಗೌಸ ತಂದೆ ಮಹ್ಮದ ಹುಸೇನ ವಯ|| 31 ವರ್ಷ || ಖಾಸಗಿ ಕೆಲಸ ಸಾ|| ಗಾಲೀಬ ಕಾಲೋನಿ ಎಮ್,ಎಸ್,ಕೆ ಮಿಲ್ ಹತ್ತಿರ ಕಲಬುರಗಿ, ಇತನಿಗೆ ಚೆಕ್ ಮಾಡಲು ಕೃತ್ಯದಲ್ಲಿ ಬಾಗಿಯಾದ 1) ನಗದು ಹಣ 20,000/- ರೂಗಳು, 2) ಒಂದು ಮಟಕಾ ನಂಬರಗಳನ್ನು ಬರೆದ ಚೀಟಿ ಅ.ಕಿ:00/- 3) ಒಂದು ಬಾಲ್ ಪೆನ್ ಅ.ಕಿ:00/- ರೂಗಳು 4) ಒಂದು ವಿವೋ ಕಂಪನಿಯ ಮೊಬೈಲನಿಂದ 9980362787 ನೇದ್ದರಿಂದ ಅಶ್ರಾಫ್-2 ಮೊಬೈಲ್ ನಂ. 9036933414 ನೇದ್ದಕ್ಕೆ ಮಟಕಾ ನಂಬರ ಮತ್ತು ಅದರ ಮುಂದೆ ಹಣ ಹಚ್ಚಿದ ಬಗ್ಗೆ ಟೈಪ್ ಮಾಡಿದ ವಾಟ್ಸಪ್ ಮೇಸೆಜವುಳ್ಳ ಮೊಬೈಲ್ ಫೋನ ಅ:ಕಿ: 2000/- ರೂ.ಗಳು ದೊರಕಿದ್ದು ಇರುತ್ತದೆ. ಮಟಕಾ ನಂಬರ ಬರೆದುಕೊಂಡು ಕೊಡುವ ಬಗ್ಗೆ ವಿಚಾರಿಸಲಾಗಿ ಮೊಬೈಲ್ ನಂ. 9036933414 ಮತ್ತು 9945209463 ನ್ನು ಬಳಕೆ ಮಾಡುವ ಅಶ್ರಾಫ್ ಸಾ|| ಎಮ್,ಎಸ್,ಕೆ ಮಿಲ್ ಫಾಟಕ್ ಹತ್ತಿರ ಕಲಬುರಗಿ ಎನ್ನುವ ವ್ಯಕ್ತಿಗೆ ಕೊಡುವದಾಗಿ ತಿಳಿಸಿರುತ್ತಾನೆ. ಈ ಬಗ್ಗೆ ಜಪ್ತಿ ಪಂಚನಾಮೆಯನ್ನು ದಿನಾಂಕ:-12.09.2022 ರಂದು 4:15 ಪಿ.ಎಮ್ ದಿಂದ 5:15 ಪಿಎಮ್ ವರೆಗೆ ಸ್ಥಳದಲ್ಲಿ ಕುಳಿತು ಪಂಚರ ಸಮಕ್ಷಮದಲ್ಲಿ ಪಂಚನಾಮೆಯನ್ನು ಬರೆದು ಮುಗಿಸಿ ಕೇಸಿನ ಮುಂದಿನ ಪುರಾವೆಗಾಗಿ ನಗದು ಹಣ ಮತ್ತು ಮಟಕಾ ಚೀಟಿ, ಬಾಲ್ ಪೆನ್, ಒಂದು ವಿವೋ ಕಂಪನಿಯ ಮೊಬೈಲ ಫೋನನ್ನು ವಶಕ್ಕೆ ತೆಗೆದುಕೊಂಡು ಕಾಗದ ಕವರನಲ್ಲಿ ಹಾಕಿ ಪಂಚರ ಸಹಿ ಮಾಡಿದ ಚೀಟಿಯನ್ನ ಅಂಟಿಸಿ ತಾಬೆಗೆ ತೆಗೆದುಕೊಂಡು ಮುಂದಿನ ಕ್ರಮ ಕುರಿತು ಮುದ್ದೆಮಾಲು, ಜಪ್ತಿ ಪಂಚನಾಮೆಯೊಂದಿಗೆ ಆರೋಪಿತನನ್ನು ಠಾಣೆಗೆ ತಂದು ಜ್ಞಾಪನಾ ಪತ್ರವನ್ನು ನೀಡಿದ್ದು ಸದರಿ ಜ್ಞಾಪನಾ ಪತ್ರ ಮತ್ತು ಜಪ್ತಿ ಪಂಚನಾಮೆಯ ಸಾರಾಂಶ್  ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ವಿಶ್ವವಿದ್ಯಾಲಯ ಪೊಲೀಸ್‌ ಠಾಣೆ :- ದಿನಾಂಕ: ೨೪.೦೮.೨೦೨೨ ರಂದು ೧೦:೦೦ ಎ.ಎಮ ದಿಂದ ೧೧:೦೦ ಎ.ಎಮ ಮದ್ಯದ  ಅವಧಿ ü ಪರ‍್ಯಾದಿಯು ತನ್ನ ಮೋಟ ಸೈಕಲ ನಂ: ಕೆಎ ೩೨ ಇಪಿ ೦೧೯೪ ಅ:ಕಿ: ೩೫,೦೦೦/- ನೇದ್ದನ್ನು ನಾಗನಹಳ್ಳಿ ಕ್ರಾಸ್ ಹತ್ತಿರ ನಿಲ್ಲಿಸಿದ್ದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಢು ಹೋಗಿರುತ್ತಾರೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

Last Updated: 22-09-2022 03:01 PM Updated By: ADMIN


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : Kalaburagi City Police
Designed, Developed and Hosted by: Center for e-Governance - Web Portal, Government of Karnataka © 2024, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080