ಅಭಿಪ್ರಾಯ / ಸಲಹೆಗಳು

ಮಹಿಳಾ ಪೊಲೀಸ್ ಠಾಣೆ:-  ಇಂದು ದಿನಾಂಕ ೧೨.೦೮.೨೦೨೧ ರಂದು ರಾತ್ರಿ ೮-೩೦ ಗಂಟೆಗೆ ಫರ‍್ಯಾದಿ ಕವಿತಾ ಗಂಡ ಅಶೋಕ ವಯಾ|| ೩೯ ವರ್ಷ ಜಾ|| ಪ.ಜಾತಿ ಸಾ|| ಸಂಗೋಳಗಿ(ಸಿ) ತಾ|| ಜಿ|| ಕಲಬುರಗಿ ಹಾ.ವ. ಆಶ್ರಯ ಕಾಲೋನಿ, ಫಿಲ್ಟರಬೆಡ್ ಕಲಬುರಗಿ ಇವರು ಠಾಣೆಗೆ ಹಾಜರಾಗಿ ದೂರು ಸಲ್ಲಿಸಿದ್ದು, ಸದರಿ ದೂರಿನ ಸಾರಾಂಶ ಏನೆಂದರೆ, ನನ್ನ ಮಗಳಾದ ಅಕ್ಷತಾ ವಯಾ|| ೧೭ ವರ್ಷ ಇದ್ದು,  ಚಂದನ ತಂದೆ ಕೃಷ್ಣಾ ನಾಯಕ ಸಾ|| ಬೈಲಾಪೂರ ತಾಂಡಾ ತಾ|| ಶಹಪೂರ ಜಿ|| ಯಾದಗಿರಿ ಇತನು ನನ್ನ ಮಗಳು ಅಕ್ಷತಾ ಇವಳನ್ನು ಪರಿಚಯ ಮಾಡಿಕೊಂಡು ಈಗ ೨-೩ ತಿಂಗಳುಗಳಿಂದ ಅವಳೊಂದಿಗೆ ಮಾತಾಡುವುದು, ಅವಳಿಗೆ ನೋಡಲು ನಮ್ಮ ಮನೆಯ ಕಡೆ ಬರುವುದು ಮಾಡುತ್ತಾ ಬಂದಿರುತ್ತಾನೆ.     ದಿನಾಂಕ ೦೬.೦೭.೨೦೨೧ ರಂದು ಬೆಳಿಗ್ಗೆ ೧೦ ಗಂಟೆ ಸುಮಾರಿಗೆ ನನ್ನ ಮಗಳು ಅಕ್ಷತಾ ಕಾಣೆಯಾಗಿದ್ದು, ಅವಳಿಗೆ ನಾವು ಎಲ್ಲಾ ಕಡೆ ಹುಡುಕಾಡಿದ್ದು, ಅವಳು ಸಿಕ್ಕಿರುವದಿಲ್ಲಾ.ದಿನಾಂಕ ೧೮.೦೭.೨೦೨೧ ರಂದು ಸಾಯಂಕಾಲ ನನ್ನ ಮಗಳು ಅಕ್ಷತಾ ಇವಳು ಮರಳಿ ಮನೆಗೆ ಬಂದಿರುತ್ತಾಳೆ. ಆಗ ನಾನು ಮತ್ತು ನನ್ನ ಗಂಡ ಅವಳಿಗೆ ವಿಚಾರಣೆ ಮಾಡಿದಾಗ ಅವಳು ನಮಗೆ ತಿಳಿಸಿದ್ದೇನೆಂದರೆ, ದಿನಾಂಕ ೧೫.೦೪.೨೦೨೧ ರಂದು ಮಧ್ಯಾಹ್ನ ೧೨ ಗಂಟೆ ಸುಮಾರಿಗೆ ನಾನು ಒಬ್ಬಳೆ ಮನೆಯಲ್ಲಿ ಇದ್ದಾಗ ಚಂದನ ನಾಯಕ ಇತನು ಮನೆಗೆ ಬಂದು ನಾನು ನಿನ್ನ ಜೊತೆಯಲ್ಲಿ ಮದುವೆ ಮಾಡಿಕೊಳ್ಳುತ್ತೇನೆ ಅಂತಾ ನನ್ನ ಜೊತೆ ಜಬರಿ ಸಂಭೋಗ ಮಾಡಲು ಬಂದಾಗ ನಾನು ಬೇಡ ಅಂತಾ ಹೇಳಿದರು ಕೂಡಾ ಅವನು ನನಗೆ ಜಬರದಸ್ತಿಯಿಂದ ಕೆಳಗೆ ಹಾಕಿ ಜಬರಿ ಸಂಭೋಗ ಮಾಡಿ, ನೀನು ಈ ವಿಷಯ ಯಾರಿಗಾದರೂ ಹೇಳಿದರೆ ನಿನಗೆ ಜೀವ ಸಹಿತ ಬಿಡುವದಿಲ್ಲಾ ಅಂತಾ ಬೆದರಿಕೆ ಹಾಕಿ ಹೋದನು, ಅಂದಿನಿಂದ ಅವನು ಆಗಾಗ ನಮ್ಮ ಮನೆಗೆ ಬಂದು ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ನನ್ನ ಜೊತೆ ಜಬರಿ ಸಂಭೋಗ ಮಾಡುತ್ತಾ ಬಂದಿರುತ್ತಾನೆ. ದಿನಾಂಕ ೦೬.೦೭.೨೦೨೧ ರಂದು ಬೆಳಿಗ್ಗೆ ೧೧ ಗಂಟೆಗೆ ನಾನು ಅಂಗಡಿಗೆ ಹೋಗುತ್ತಿರುವಾಗ ಚಂದನ ಇತನು ನನಗೆ ನೀನು ನನ್ನ ಜೊತೆಯಲ್ಲಿ ಬರದೇ ಇದ್ದಲ್ಲಿ, ನಾನು ನಿನಗೆ ಜೀವ ಸಹಿತ ಬಿಡುವದಿಲ್ಲಾ, ನೀನು ಚೀರಾಡಿದರೆ ನಿಗೆ ಇಲ್ಲಿಯೆ ಖಲಾಸ್ ಮಾಡಿ ಹಾಕುತ್ತೇನೆ ಅಂತಾ ಬೆದರಿಸಿ, ತನ್ನ ಜೊತೆಯಲ್ಲಿ ಕಲಬುರಗಿ ನಗರದ ರಾಮತೀರ್ಥ ಮಂದಿರಕ್ಕೆ ಕರೆದುಕೊಂಡು ಹೋಗಿ, ದೇವರ ಮುಂದೆ ಇದೇ ಮಂಗಳಸೂತ್ರ ಅಂತಾ ಅರಿಶಿನ ಬೊಟ್ಟು ಇರುವ ಒಂದು ದಾರವನ್ನು ನನ್ನ ಕೊರಳಿಗೆ ಕಟ್ಟಿರುತ್ತಾನೆ. ಅಂತಾ ನನ್ನ ಮಗಳು ಹೇಳಿ ಅಳಲು ಶುರು ಮಾಡಿರುತ್ತಾಳೆ. ಕಾರಣ ಚಂದನ ನಾಯಕ ಇತನ ಮೇಲೆ ಕಾನೂನು ರೀತಿಯ ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಸಂಚಾರಿ ಪೊಲೀಸ್ ಠಾಣೆ-೨ :- ಇಂದು ದಿನಾಂಕ ೧೨/೦೮/೨೦೨೧ ರಂದು ರಾತ್ರಿ ೮:೦೦ ಗಂಟೆಗೆ ಶ್ರೀ. ಗುರುದತ್ತ ತಂದೆ ಮುರುಳಿಧರ ಕರದಾಳ ವಯಃ ೪೪ ವರ್ಷ ಜಾತಿಃ ಮುನ್ನುರ ರೆಡ್ಡಿ ಉಃ ಪ್ರಾಥಮಿಕ ಶೀಕ್ಷಕರು ಸಾಃ ಕರದಾಳ ತಾಃ ಚಿತ್ತಾಪೂರ ಹಾ.ವಃ ಸುಭಾಷ ಚೌಕ ಬ್ರಹ್ಮಪೂರ ಕಲಬುರಗಿ ಇವರು ಠಾಣೆಗೆ ಪೊಲೀಸ್ ಠಾಣೆಗೆ ಹಾಜರಾಗಿ ಹೇಳಿಕೆ ಫರ‍್ಯಾದಿ ನೀಡಿದ್ದು ಸಾರಂಶವೆನೆಂಧರೆ, ನಾನು ಚಿತ್ತಾಪೂರ ತಾಲೂಕಿನ ಯಾಗಾಪೂರ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಸಹ ಶೀಕ್ಷಕ ಅಂತಾ ಕೆಲಸ ಮಾಡಿಕೊಂಡಿರುತ್ತೆನೆ. ನಮ್ಮ ದೊಡ್ಡಪ್ಪಾ ಮುರುಳಿಧರ ಇವರಿಗೆ ಮಕ್ಕಳಿಲ್ಲದೆ ಇರುವುದರಿಂದ ನನ್ನನ್ನು ಅವರ ಉಡಿಯಲ್ಲಿ ಹಾಕಿದ್ದು, ನಮ್ಮ ತಂದೆ ಸುರ‍್ಶನ, ತಾಯಿ ಸುಮಂಗಲಾ ಇವರಿಗೆ ನಾವು ೫ ಜನ ಗಂಡು ಮಕ್ಕಳಿರುತ್ತೆವೆ. ಇವರಲ್ಲಿ ರಘುನಾಥ ವಯಃ ೪೨ ರ‍್ಷ ಈತನು ರಾವೂರ ಗ್ರಾಮದ ಸಚ್ಚಿದಾನಂದ ಪಿ.ಯು.ಸಿ ಕಾಲೇಜಿನಲ್ಲಿ ಉಪನ್ಯಾಸಕರು ಅಂತಾ ಕೆಲಸ ಮಾಡಿಕೊಂಡಿದ್ದನು. ತಮ್ಮನಿಗೆ ಸುನೀತಾ ಎಂಬ ಮೊದಲನೆ ಹೆಂಡತಿ ಇದ್ದು, ಮೊದಲನೆ ಹೆಂಡತಿ ಹೊಟ್ಟೆಯಿಂದ ಸುಮಾ ಮತ್ತು ರಿಷಭ ಎಂಬ ಎರಡು ಮಕ್ಕಳಿದ್ದು, ಸುನೀತಾ ಇವಳು ಅನಾರೋಗ್ಯದಿಂದ ತೀರಿಕೊಂಡ ನಂತರ ಅಂಬಿಕಾ ಎಂಬುವಳಿಗೆ ಲಗ್ನವಾಗಿದ್ದು ಇರುತ್ತದೆ. ತಮ್ಮ ರಘುನಾಥನು ದಿನಾಲೂ ರಾವೂರಕ್ಕೆ ತನ್ನ ಟಿ.ವಿ.ಎಸ್ ಜುಪಿಟರ್ ಮೋಟರ ಸೈಕಲ ನಂ. ಕೆಎ ೩೨ ಇ.ವಿ ೬೦೩೯ ನೇದ್ದರ ಮೇಲೆ ಕಾಲೇಜಿಗೆ ಹೋಗಿ ಬರುತ್ತಿರುತ್ತಾನೆ. ಹೀಗಿದ್ದು, ಇಂದು ದಿನಾಂಕ ೧೨/೦೮/೨೦೨೧ ರಂದು ಸಾಯಂಕಾಲ ೪:೦೦ ಗಂಟೆ ಸುಮಾರಿಗೆ ನಮ್ಮ ಪರಿಚಯದ ಶರಣು ತಂದೆ ಚನ್ನಬಸಪ್ಪಾ ಬೊಮ್ಮನಳ್ಳಿ ಎಂಬುವರು ನನಗೆ ಫೋನ್ ಮಾಡಿ ಮಾಹಿತಿ ತಿಳಿಸಿದ್ದೆನೆಂದರೆ, ಈಗ ತಾನೆ ೩:೪೫ ಗಂಟೆ ಸುಮಾರಿಗೆ ರಂಘನಾಥ ಕರದಾಳ ಈತನು ತನ್ನ ಟಿ.ವಿ.ಎಸ್ ಜುಪಿಟರ್ ಮೋಟರ ಸೈಕಲ ನಂ. ಕೆಎ ೩೨ ಇ.ವಿ ೬೦೩೯ ನೇದ್ದರ ಮೇಲೆ ಶಹಾಬಾದ ರಿಂಗರೋಡ ಕಡೆಯಿಂದ ನಾಗನಹಳ್ಳಿ ರಿಂಗರೋಡ ಕಡೆಗೆ ತನ್ನ ಮೋಟರ ಸೈಕಲ ಮೇಲೆ ಹೋಗುವಾಗ ಹಿಂದುಗಡೆ ರೋಡಿನಿಂದ ಒಂದು ಟಿಪ್ಪರ ನಂ. ಕೆಎ ೩೨ ಸಿ ೭೯೮೨ ನೇದ್ದರ ಚಾಲಕನು ಭಾರಿ ಅತೀವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು, ರಘುನಾಥ ಇವರ ಮೋಟರ ಸೈಕಲದ ಸೈಡಿನ ಹಿಂಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅವರ ತಲೆಗೆ, ಬಲಗಡೆ ಮೆಲಕಿಗೆ, ಎದೆಯ ಭಾಗಕ್ಕೆ, ಭುಜದ ಭಾಗಕ್ಕೆ ಹಾಗು ಕಾಲು ಕೈಗಳಿಗೆ ಗಾಯವಾಗಿ ಬೆಹೋಶ ಸ್ಧಿತಿಯಲ್ಲಿ ಬಿದ್ದಿರುತ್ತಾರೆ. ಟಿಪ್ಪರ ಚಾಲಕನು ಟಿಪ್ಪರನ್ನು ಬಿಟ್ಟು ಓಡಿ ಹೋಗಿರುತ್ತಾನೆ. ಆತನಿಗೆ ನೊಡಿರುತ್ತೆನೆ. ರಘುನಾಥನನ್ನು ಅಂಬುಲೇನ್ಸದಲ್ಲಿ ಹಾಕಿಕೊಂಡು ಆರ್.ಟಿ.ಓ ಆಫೀಸದ ಹತ್ತೀರ ಇರುವ ಎ.ಎಸ್.ಎಮ್ ಆಸ್ಪತ್ರೆಗೆ ತೆಗೆದುಕೊಂಡು ಬರುತ್ತಿರುತ್ತೆನೆ. ಬೇಗನೆ ರ‍್ರಿ ಅಂತಾ ತಿಳಿಸಿದಕ್ಕೆ ನಾನು ಗಾಬರಿಗೊಂಡು ಮಗಳಾದ ಸುಮಾ ಮತ್ತು ಅತ್ತಿಗೆ ಅಂಬಿಕಾ ಇವಳೊಂದಿಗೆ ಎ.ಎಸ್.ಎಮ್ ಆಸ್ಪತ್ರೆಗೆ ಹೋಗಿ ನೋಡಲಾಗಿ ತಮ್ಮ ರಘುನಾಥನು ಬಲಗಡೆ ಮೆಲಕಿಗೆ ರಕ್ತಗಾಯ, ತಲೆಗೆ ಗುಪ್ತಗಾಯ, ಬಲಭುಜಕ್ಕೆ, ಬಲ ಎದೆಗೆ ಹಾಗು ಸೈಡಿಗೆ ತರಚಿದಗಾಯ, ಬಲಗೈಗೆ ಹಾಗು ಬಲಗಾಲಿಗೆ ಮತ್ತು ಎಡಗಾಲಿಗೆ ತರಚಿದಗಾಯವಾಗಿದ್ದು, ಮಾತನಾಡಿದರೆ ಮಾತನಾಡಲಿಲ್ಲಾ. ನಾವು ಆಸ್ಪತ್ರೆಯಲ್ಲಿಯೆ ಇದ್ದಾಗ ಶರಣು ಬೊಮ್ಮನಳ್ಳಿ ಈತನಿಗೆ ವಿಚಾರಿಸಲು ಈ ಮೇಲಿನ ಘಟನೆಯನ್ನೆ ತಿಳಿಸಿದನು. ಆಸ್ಪತ್ರೆಯಲ್ಲಿ ರಘುನಾಥನು ಉಪಚಾರ ಪಡೆಯುತ್ತಿರುವಾಗ ರಾತ್ರಿ ೭:೦೦ ಗಂಟೆಗೆ ಮೃತ ಪಟ್ಟಿರುತ್ತಾನೆ. ಕಾರಣ ನನ್ನ ತಮ್ಮ ರಘುನಾಥ ಕರದಾಳ ಈತನು ತನ್ನ ಟಿ.ವಿ.ಎಸ್ ಜುಪಿಟರ್ ಮೋಟರ ಸೈಕಲ ನಂ. ಕೆಎ ೩೨ ಇ.ವಿ ೬೦೩೯ ನೇದ್ದರ ಮೇಲೆ ತನ್ನ ಕಾಲೇಜಿಗೆ ಹೋಗಿ ಕೆಲಸ ಮುಗಿಸಿಕೊಂಡು ಮರಳಿ ರಿಂಗರೋಡ ಮುಖಾಂತರವಾಗಿ ನಾಗನಹಳ್ಳಿನ ಓವರ ಬ್ರಿಡ್ಜಿನ ಮೇಲೆ ಹೋಗುವಾಗ ಮಧ್ಯಾಹ್ನ ೩:೪೫ ಗಂಟೆ ಸುಮಾರಿಗೆ ಹಿಂದಿನಿಂದ ಟಿಪ್ಪರ ನಂ. ಕೆಎ ೩೨ ಸಿ ೭೯೮೨ ನೇದ್ದರ ಚಾಲಕನು ಅತಿವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿ ತಮ್ಮನ ಮೋಟರ ಸೈಕಲಗೆ ಹಿಂದಿನಿಂದ ಮೋಟರ ಸೈಕಲ ಸೈಡಿಗೆ ಡಿಕ್ಕಿ ಹೊಡೆದ ಪರಿಣಾಮ ಈ ಮೇಲಿನ ಘಟನೆ ಜರುಗಿದ್ದು, ಇದಕ್ಕೆ ಕಾರಣನಾದ ಟಿಪ್ಪರ ಚಾಲಕನನ್ನು ಪತ್ತೆ ಮಾಡಿ ಆತನ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಅಂತಾ ಫರ‍್ಯಾದಿ ಹೇಳಿಕೆ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.   

    ಗ್ರಾಮೀಣ ಪೊಲೀಸ್ ಠಾಣೆ :- ಇಂದು ದಿನಾಂಕ ೧೨.೦೮.೨೦೨೧ ರಂದು ೦೩:೦೦ ಪಿ.ಎಮ್.ಕ್ಕೆ ಪಿರ್ಯಾದಿ ಶ್ರೀ ರಿಯಾಜ ತಂದೆ ಇಬ್ರಾಹಿಂ ಗೌರಿ ವ|| ೨೯ ವರ್ಷ ಜಾ|| ಮುಸ್ಲೀಮ ಉ|| ಟಿಪ್ಪರ ಮಾಲೀಕ ಸಾ|| ಅಬ್ದುಲ್ ಕಲಾಮ ಆಜಾದ ಶಾಲೆ ಹತ್ತಿರ ಫಿರ್ದೋಸ್ ಕಾಲನಿ ಕಲಬುರಗಿ   ಇವರು ಠಾಣೆಗೆ ಹಾಜರಾಗಿ ದೂರು ಸಲ್ಲಿಸಿದ್ದ ಸಾರಾಂಶವೇನೆಂದರೆ, ಫಿರ್ಯಾದಿ ತನ್ನ ಟಾಟಾ ಕಂಪನಿ ಟಿಪ್ಪರ ನಂ. ಕೆ.ಎ. ೦೩ ಎ.ಡಿ. ೬೦೦೯ ಅ.ಕಿ. ೭,೦೦,೦೦೦/- ರೂ ನೇದ್ದನ್ನು ತನ್ನ ಚಾಲಕ ಯೂನೂಸ್ ಪಟೇಲ ಈತನೊಂದಿಗೆ ಕೆಲಸ ಮುಗಿಸಿಕೊಂಡು ದಿನಾಂಕ ೦೫.೦೮.೨೦೨೧ ರಂದು ೦೨:೦೦ ಪಿ.ಎಮ್.ಕ್ಕೆ ರೂಸವಾಲಾ ಪೆಟ್ರೋಲ್ ಪಂಪ ಹತ್ತಿರ ಟಿಪ್ಪು ಸುಲ್ತಾ ಕಾಲೇಜ ಸಮೀಪ ಹಚ್ಚಿ ದಿನಾಂಕ ೦೭.೦೮.೨೦೨೧ ರಂದು ೦೯:೦೦ ಎ.ಎಮ್. ಸುಮಾರಿಗೆ ಬಂದು ನೋಡಲು ಸದರಿ ಟಿಪ್ಪರ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ಕಲಬುರಗಿ ನಗರ ಮತ್ತು ಪಕ್ಕದ ರಾಜ್ಯಗಳಲ್ಲಿ ಹುಡುಕಾಡಿ ಇಂದು ತಡಮಾಡಿ ದೂರು ಅರ್ಜಿ ಕೊಟ್ಟಿದ್ದರ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 16-08-2021 11:20 AM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080