ಅಭಿಪ್ರಾಯ / ಸಲಹೆಗಳು

ಸಂಚಾರಿ ಪೊಲೀಸ್‌ ಠಾಣೆ-1 :- ದಿನಾಂಕ 12/07/2022 ರಂದು ರಾತ್ರಿ 8:30 ಗಂಟೆಗೆ ಶ್ರೀ. ಅಮೀತ ತಂದೆ ಸುಗಪ್ಪಾ ಹುಣಸಗಿ ವಯಃ 21 ವರ್ಷ ಜಾತಿಃ ಲಿಂಗಾಯತ ಕುಂಬಾರ ಉಃ ಬಿ.ಎ ವಿಧ್ಯಾರ್ಥಿ ಸಾಃ ಪುಷ್ಕರ ಪ್ಲಾಸಾ ಶೇಟ್ಟಿ ಟಾಕೀಸ್ ಹಿಂದುಗಡೆ ಆಳಂದ ರೋಡ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಹೇಳಿಕೆ ಫಿರ್ಯಾದಿ ನೀಡಿದ್ದು ಸಾರಂಶವೆನೆಂದರೆ,      ನಾನು ಪಿ.ಡಿ.ಎ ಇಂಜನಿಯರಿಂಗ ಕಾಲೇಜದಲ್ಲಿ ಬಿ.ಇ 6 ನೇ ಸೇಮ್ನಲ್ಲಿ ಓದಿಕೊಂಡಿರುತ್ತಾನೆ. ಅದರಂತೆ ನನ್ನ ಗೆಳೆಯ ಅಭಿಷೇಕ ತಂದೆ ಅರುಣಕುಮಾರ ಪಾಟೀಲ ಈತನು ಕೂಡಾ ನನ್ನ ಜೊತೆಯಲ್ಲಿಯೆ ಬಿ.ಇ ವಿಧ್ಯಾಭ್ಯಾಸ ಮಾಡಿಕೊಂಡಿರುತ್ತಾನೆ. ಹೀಗಿದ್ದು, ನಿನ್ನೆ ದಿನಾಂಕ 11/07/2022 ರಂದು ನಾನು ಮತ್ತು ನನ್ನ ಗೆಳೆಯ ಅಭಿಷೇಕ ಪಾಟೀಲ ಇಬ್ಬರೂ ಕೂಡಿಕೊಂಡು ಸ್ಟೇಷನ ಬಜಾರ ಏರಿಯಾದಲ್ಲಿ ನಮ್ಮ ಪಿ.ಡಿ.ಎ ಕಾಲೇಜಿನ ಹಾಸ್ಟಲ ಇರುವುದರಿಂದ ಗೆಳೆಯರನ್ನು ಓದುವ ವಿಷಯದಲ್ಲಿ ಬೇಟಿಯಾಗುವ ಕುರಿತು ಅಭಿಷೇಕ ಇವರಿಗೆ ಸಂಬಂಧಪಟ್ಟ ಕಾರ ನಂ. ಕೆಎ 56 ಎಮ್ 9333 ಇದನ್ನು ತೆಗೆದುಕೊಂಡು ಅಲ್ಲಿಗೆ ಹೋಗಿ ತಡರಾತ್ರಿವರೆಗೆ ವಿದ್ಯಾಭ್ಯಾಸದ ಬಗ್ಗೆ ಚರ್ಚಿಸಿ ಮರಳಿಮನೆಗೆ ಹೋಗಬೇಕೆಂದು ಮಧ್ಯರಾತ್ರಿ ಇಂದು ದಿನಾಂಕ 12/07/2022 ರಂದು ಸ್ಟೇಷನ ಏರಿಯಾದಿಂದ ಆನಂದ ಹೊಟೇಲ ರಸ್ತೆ ಮುಖಾಂತರವಾಗಿ ಹೋಗುತ್ತಿರುವಾಗ ರಾತ್ರಿ 1:10 ಗಂಟೆ ಸುಮಾರಿಗೆ ಎನ್.ವಿ ಕಾಲೇಜ ಎದುರುಗಡೆ ಬರುವಾಗ ಅಭಿಷೇಕ ಈತನು ಕಾರನ್ನು ನಡೆಯಿಸಿಕೊಂಡು ಬರುವಾಗ ರೋಡಿನ ಬದಿಗೆ ಎರಡು ಮೋಟರ ಸೈಕಲ ನಿಂತಿರುವುದರಿಂದ ಅಭಿಷೇಕನು ಒಮ್ಮೇಲೆ ಕಾರನ್ನು ಸೈಡಿಗೆ ತೆಗೆದುಕೊಳ್ಳುವಾಗ ನಿಯಂತ್ರಣ ತಪ್ಪಿ ರೋಡಿನ ಮಧ್ಯದಲ್ಲಿರುವ ರೋಡ ಡಿವೈಡರಿಗೆ ಆಕಸ್ಮಿಕವಾಗಿ ಡಿಕ್ಕಿಯಾಗಿ ಹಾಗೆ ಡಿವೈಡರದ ಮೇಲೆ ಇರುವ ಕೆ.ಇ.ಬಿ ಕಬ್ಬಿಣದ ಕಂಬಕ್ಕೆ ಹಾನಿಯಾಗಿ ಮುರಿದು ಬಿದ್ದಿದ್ದು, ಅಲ್ಲದೆ ಕಾರು ಜಖಂಗೊಂಡಿದ್ದು ಇದರಿಂದ ನನಗೆ ಅಂತಹ ಗಾಯಗಳು ಆಗಲಿಲ್ಲಾ. ಅಭಿಷೇಕನಿಗೆ ಬಲತುಟಿಯ ಹತ್ತಿರ ತರಚಿದಗಾಯಗಳಾಗಿದ್ದು, ರೋಡಿನಿಂದ ಹೋಗುತ್ತಿರುವ ಒಬ್ಬರು ಸಹಾಯ ಮಾಡಿದ್ದು, ಅವರ ಹೆಸರು ಶಾಂತವೀರ ತಂದೆ ಮಲ್ಲಿನಾಥ ಪಾಟೀಲ ಅಂತಾ ಗೊತ್ತಾಯಿತು. ಮುಂದೆ ಅಭಿಷೇಕನಿಗೆ ಉಪಚಾರಕ್ಕಾಗಿ ಯುನೈಟೆಡ ಆಸ್ಪತ್ರೆಗೆ ಸೇರಿಕೆ ಮಾಡಿರುತ್ತೆನೆ. ಈ ವಿಷಯದಲ್ಲಿ ಮುಂದಿನ ಕ್ರಮ ಕೈಗೊಳ್ಳಬೇಕೆಂದು, ನನ್ನ ಪರೀಕ್ಷೆ ಮುಗಿಸಿಕೊಂಡು ವಿಳಂಬವಾಗಿ ಬಂದು ಹೇಳಿಕೆ ನೀಡಿರುತ್ತೆನೆ ಅಂತಾ ಕೊಟ್ಟ ಹೇಳಿಕೆ ಫಿರ್ಯಾದಿ ಸಾರಂಶದ ಮೇಲಿಂದ ಗುನ್ನೆದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಇತ್ತೀಚಿನ ನವೀಕರಣ​ : 17-07-2022 08:20 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080