ಅಭಿಪ್ರಾಯ / ಸಲಹೆಗಳು

ಚೌಕ ಪೊಲೀಸ್‌ ಠಾಣೆ:-  ದಿನಾಂಕ: 12-04-2022  ರಂದು ರಾತ್ರಿ ೨೦.೩೦ ಪಿ.ಎಂ.ಕ್ಕೆ ಪ್ರಕರಣದ ಫಿರ್ಯಾದಿ ನಾನು ಶ್ರೀ ಶಾಂತಕುಮಾರ ತಂದೆ ಬಸವಣ್ಣಪ್ಪಾ ಬೀಲಗುಂದಿ ವ:೫೬ ವರ್ಷ ಉ:ವ್ಯಾಪಾರ ಜಾ:ಲಿಂಗಾಯತ ಸಾ:ಮನೆ ನಂ.೪-೩೧೧ ಎಸ್.ಬಿ ಬೀಲಗುಂದಿ ಹೌಸ ಬಸವಣ್ಣ ಗುಡಿ ಎದುರುಗಡೆ ಮಕ್ತಂಪೂರ ಕಲಬುರಗಿಯ ನಿವಾಸಿಯಾಗಿದ್ದು ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ ಸದರಿ ಮೇಲೆ ಹೇಳಿರುವ ವಿಷಯಕ್ಕೆ ಸಂಬಂಧಿಸಿದಂತೆ ದಿನಾಂಕ:೧೧.೦೪.೨೦೨೨ ರಂದು ದಿನನಿತ್ಯ ಯಾವ ರೀತಿಯಾಗಿ ಅಂಗಡಿ ಬಂದ್ ಮಾಡಿ ಹೋಗಿರುತ್ತೇವೆಯೋ ಅದೇ ಪ್ರಕಾರವಾಗಿ ದಿನಾಂಕ:೧೧.೦೪.೨೦೨೨ ರಂದು ಸಾಯಂಕಾಲ ೯.೦೦ ಗಂಟೆ ಸಮಯಕ್ಕೆ ಸದರಿ ನಮ್ಮ ಅಂಗಡಿಯನ್ನು ಅಂಗಡಿ ಸಂಖ್ಯೆ.೮-೨೨೧, ೮-೨೨೧/೧, ೮-೨೧೪, ೮-೨೧೪/೧ ರ ಎಸ್.ಬಸವರಾಜ ಸೈಕಲ ಅಂಗಡಿಯನ್ನು ಬಂದ್ ಮಾಡಿಕೊಂಡು ಹೋಗಿರುತ್ತೇನೆ. ಸದರಿ ವಿಷಯಕ್ಕೆ ಸಂಬಂಧಿಸಿದಂತೆ ದಿನರಾತ್ರಿ ಅದೇ ದಿನ ರಾತ್ರಿ ೧೦.೧೫ಕ್ಕೆ ನಮ್ಮ ಸೈಕಲ ಅಂಗಡಿಗೆ ಆಕಸ್ಮಿಕವಾಗಿ ಶಾರ್ಟ ಸರ್ಕ್ಯೂಟದಿಂದ ಬೆಂಕಿ ಹತ್ತಿಕೊಂಡಿದೆ ಎಂದು ಸುದ್ದಿ  ತಿಳಿದ  ತಕ್ಷಣವೇ ೧೦.೪೫ ನಿಮಿಷಕ್ಕೆ ನಾನು ಅಂಗಡಿಗೆ ಹೋಗಿರುತ್ತೇನೆ. ಅದೇ ಸಂದರ್ಭದಲ್ಲಿ ಬೆಂಕಿ ಹತ್ತಿಕೊಂಡು ಧಗ ಧಗನೇ ಊರಿಯುತ್ತಿರುವುದನ್ನು ಕಂಡು ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದು ಇರುತ್ತದೆ.  ಹಾಗೂ ಸಂಬಂಧಪಟ್ಟ ಚೌಕ ಪೊಲೀಸ ಠಾಣೆಗೂ ಕೂಡಾ ಕರೆ ಮಾಡಿ ತಿಳಿಸಿದ್ದು ೧೧.೧೫ ನಿಮಿಷಯಕ್ಕೆ ಅಗ್ನಿಶಾಮಕ ದಳದವರು ಹಾಗೂ ಚೌಕ ಪೊಲೀಸ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯವರು ಬಂದು ಸುಮಾರು ೧೧.೧೫ ನಿಮಿಷದಿಂದ ಬೆಳಗ್ಗಿನ ಜಾವಾ ೩.೪೫ ನಿಮಿಷದವರೆಗೆ ಸದರಿ ನಮ್ಮ ಅಂಗಡಿಯಗೆ ಹತ್ತಿರ ಬೆಂಕಿಯನ್ನು ಆರಿಸಲು ಹರ ಸಾಹಸವೇ ಮಾಡಿರುತ್ತಾರೆ. ಕೊನೆಗೆ ಬೆಂಕಿಯನ್ನು ಆರಿಸಿದ ಮೇಲೆ ನಾವು ನಮ್ಮ ಅಂಗಡಿಯನ್ನು ಸಂಪೂರ್ಣವಾಗಿ ನೋಡಿದರೆ ನಮ್ಮ ಅಂಗಡಿಯ ಒಂದನೇ ಹಂತ ಮತ್ತು ಎರಡನೇ ಹಂತದಲ್ಲಿರುವ ಸೈಕಲಗಳು ಹಾಗೂ ಅದಕ್ಕೆ ಸಂಬಂಧಿಸಿದ ಎಲ್ಲಾ ಸಾಮಗ್ರಿಗಳು ಸುಟ್ಟು ಕರಕಲ್ಲಾಗಿ ಹೋಗಿರುತ್ತವೆ. ಹಾಗೂ ಒಂದನೇ ಮತ್ತು ಎರಡನೇ ಅಂತಸ್ಥಿನ ಮೇಲ್ಛಾವಣಿ ಪರದೆ ಹಾಗೂ ಗೋಡೆಯು ಬೆಂಕಿಯ ಅನಾಹುತದಿಂದ ಬಿರುಕು ಬಿಚ್ಚಿ ಅದರ ಸ್ಥಿತಿಯನ್ನು ಕಳೆದುಕೊಂಡಿರುತ್ತವೆ. ಅದಲ್ಲದೇ ಸದರಿ ಅಂಗಡಿಯ ಮೂರನೇ ಮಹಡಿಯಲ್ಲಿರುವ ಟೀನ್ ಶೇಡ್ಡು ಕೂಡಾ ಸುಟ್ಟು ಹೋಗಿರುತ್ತವೆ. ಮತ್ತು ನೆಲಮಹಡಿಯಲ್ಲಿರುವಂತಹ ಡಿಸ್ಪ್ಲೈ ಸೈಕಲಗಳು ಸದರಿ ಬೆಂಕಿ ಅನಾಹುತದ ಶಾಕ್ ನಿಂದ ಮತ್ತು ಹೊಗೆಯಿಂದ ಮಾರಾಟಕ್ಕೆ ಯೋಗ್ಯವಲ್ಲದ ವಸ್ತುಗಳಾಗಿರುತ್ತವೆ. ಸದರಿ ಬೆಂಕಿ ಅನಾಹುತದಿಂದ ನನಗೆ ತುಂಬಾ ಹಾನಿಯಾಗಿರುತ್ತದೆ. ಅದರ ವಿವರ ಹಾಗೂ ಮುಖಬೆಲೆ ಈ ಕೆಳಗಿನಂತಿರುತ್ತದೆ.

೧)  ಒಟ್ಟು ಸ್ಟಾಕ್ ೫೬ ಲಕ್ಷ ರೂಪಾಯಿಗಳ ಮೌಲ್ಯಉಳ್ಳದಾಗಿರುತ್ತದೆ.

೨)           ಬಿಲ್ಡಿಂಗ್ ವ್ಯಾಲ್ಯುವೇಷನ್ ೬೦ ಲಕ್ಷ ರೂಪಾಯಿಗಳ ಮೌಲ್ಯಉಳ್ಳದಾಗಿರುತ್ತದೆ.

೩)           ಕಂಟೇಕ್ಟ್ಸ ೪ ಲಕ್ಷ ರೂಪಾಯಿ ಮೌಲ್ಯಉಳ್ಳದಾಗಿರುತ್ತದೆ.

೪)           ಲೀಗಲ್ ಲಾಯಬಿಲಿಟಿ ೮ ಲಕ್ಷ ಮೌಲ್ಯಉಳ್ಳದಾಗಿರುತ್ತದೆ.

 

      ಹೀಗೆಂದು ಸದರಿ ಅರ್ಜಿಯಲ್ಲಿ ಒಟ್ಟು ೧ ಕೋಟಿ ೨೮ ಲಕ್ಷ ರೂಪಾಯಿಗಳ ಸಾಮಗ್ರಿಗಳು ನಾಶವಾಗಿರುತ್ತವೆಂದು ತಮ್ಮ ದಯಾಪರ ಮಾಹಿತಿಗಾಗಿ ತಿಳಿಯಬಯಸುತ್ತಾ ಈ ನನ್ನ ದೂರು ಅರ್ಜಿಯನ್ನು ಸ್ವೀಕರಿ ಎಫ್.ಐ.ಆರ್ ದಾಖಲಿಸಬೇಕೆಂದು ಹಾಗೂ ಸಂಬಂಧಪಟ್ಟ ಇಲಾಖೆಗಳಿಗೆ ಸದರಿ ವಿಷಯ ಕುರಿತು ತನಿಖೆ ಮಾಡಲು ಆದೇಶಿಸಬೇಕೆಂದು ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ ಅಂತಾ ವಗೈರೆ ಕೊಟ್ಟ ಲಿಖಿತ ಫಿರ್ಯಾಧಿಯ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 19-04-2022 04:19 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080