ಅಭಿಪ್ರಾಯ / ಸಲಹೆಗಳು

ಸಂಚಾರಿ ಪೊಲೀಸ ಠಾಣೆ-02 :- ದಿನಾಂಕ: 11-03-2023 ರಂದು ಸಾಯಂಕಾಲ 06:15 ಗಂಟೆಗೆ ಅಬ್ದುಲ ರೆಹಮಾನ ಪಟೇಲ ತಂದೆ ಇರ್ಷಾದ ಅಹ್ಮದ ಪಟೇಲ ವಯ: ೨೫ ವರ್ಷ, ಉ: ಖಾಸಗಿ ಕೆಲಸ ಸಾ: ಶಮಶ ಮಜೀದ ಹತ್ತೀರ ಮಿಸ್ಬಾ ನಗರ ರಿಂಗ ರೋಡ ಕಲಬುರಗಿ ಇವರು ಕ್ಯೂ.ಪಿ ಆಸ್ಪತ್ರೆಯಲ್ಲಿ ಒಂದು ಕನ್ನಡಲ್ಲಿ ಟೈಪ್ ಮಾಡಿದ ದೂರು ಅರ್ಜಿಯನ್ನು ಹಾಜರಪಡಿಸಿದ್ದು ಅರ್ಜಿಯ ಸಾರಂಶವೆನೆಂದರೆ, ನನ್ನ ತಂದೆ ತಾಯಿಯವರಿಗೆ ನಾವಿಬ್ಬರೂ ಗಂಡು ಮಕ್ಕಳಿದ್ದು ನನ್ನ ತಮ್ಮ ಅಬ್ದುಲ ಅಜೀಜ ಪಟೇಲ ಇತನು ವಿದ್ಯಾಬ್ಯಾಸ ಮಾಡಿಕೊಂಡು ಇರುತ್ತಾನೆ. ದಿನಾಂಕ : 11-03-2023 ರಂದು ಮದ್ಯಾಹ್ನ ನಾನು ಮನೆಯಲ್ಲಿರುವಾಗ ನನ್ನ ತಮ್ಮ ಅಬ್ದುಲ ಅಜೀಜ ಪಟೇಲ ಇತನು ಕೇಂದ್ರ ಬಸ್ಸ ನಿಲ್ದಾಣ ಹತ್ತೀರ ತನ್ನ ಗೆಳೆಯರಿಗೆ ಭೇಟಿಯಾಗಿ ಬರುತ್ತೆನೆ ಅಂತಾ ಮೋಟಾರ ಸೈಕಲ ನಂಬರ ಕೆಎ-32/ಇಜೆಡ್-3989 ನೇದ್ದನ್ನು ಚಲಾಯಿಸಿಕೊಂಡು ಹೋದನು. ಮದ್ಯಾಹ್ನ ನನ್ನ ಗೆಳೆಯ ಶೇಖ ಆಶೀಪ ತಂದೆ ಶೇಖ ಮಹಿಬೂಬ ಇವರು ನನಗೆ ಪೋನ ಮಾಡಿ ನಾನು ಮತ್ತು ನನ್ನ ಗೆಳೆಯ ಸಯ್ಯದ ಮೊಯೀನ ಫೈಸಲ ತಂದೆ ಸಯ್ಯದ ಅಫಜಲ ಹುಸೇನ ಇಬ್ಬರೂ ಹೀರಾಪೂರ ಕ್ರಾಸ ಮತ್ತು ಆಳಂದ ಸರ್ಕಲ ಮದ್ಯದಲ್ಲಿ ಬರುವ ಕ್ಯೂ.ಪಿ. ಆಸ್ಪತ್ರೆ ಹತ್ತೀರ ಇರುವಾಗ ಹೀರಾಪೂರ ಕ್ರಾಸ ಕಡೆಯಿಂದ ಒಂದು ಸಿಟಿ ಬಸ್ಸ ಬಂದು ಪ್ರಯಾಣಿಕರನ್ನು ಇಳಿಸುವ ಸಂಬಂದ ಕ್ಯೂ.ಪಿ ಆಸ್ಪತ್ರೆ ಎದುರುಗಡೆ ನಿಲ್ಲಿಸಿದಾಗ ನಿಮ್ಮ ತಮ್ಮ ಅಬ್ದುಲ ಅಜೀಜ ಪಟೇಲ ಇತನು ಹೀರಾಪೂರ ರಿಂಗ ರೋಡ ಕಡೆಯಿಂದ ನಿಮ್ಮ ಮನೆಯ ಕಡೆಗೆ ಹೋಗುವ ಕುರಿತು ತನ್ನ ಮೋಟಾರ ಸೈಕಲ ಚಲಾಯಿಸಿಕೊಂಡು ಬಂದು ಕ್ಯೂ.ಪಿ ಆಸ್ಪತ್ರೆ ಎದುರುಗಡೆ ನಿಲ್ಲಿಸಿದ ಸಿಟಿ ಬಸ್ಸಿನ ನಂಬರ ಕೆಎ-36/ಎಫ್-602 ನೇದ್ದರ ಹಿಂದುಗಡೆ ಟಚ್ ಮಾಡಿ ತನ್ನ ಮೋಟಾರ ಸೈಕಲದೊಂದಿಗೆ ಕೆಳಗಡೆ ರೋಡ ಮೇಲೆ ಬಿದ್ದಾಗ ಬಸ್ಸ ನಂಬರ ಕೆಎ-32/ಎಫ್-2470 ನೇದ್ದರ ಚಾಲಕ ಹೀರಾಪೂರ ರಿಂಗ ರೋಡ ಕಡೆಯಿಂದ ಆಳಂದ ಕಡೆಗೆ ಹೋಗುವ ಕುರಿತು ತನ್ನ ಬಸ್ಸನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಿಮ್ಮ ತಮ್ಮನ್ನಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿರುತ್ತಾನೆ. ಸದರಿ ಘಟನೆ ಜರುಗಿದಾಗ ಮದ್ಯಾಹ್ನ ಅಂದಾಜು ೧-೦೦ ಗಂಟೆ ಸಮಯವಾಗಿತ್ತು. ನಿಮ್ಮ ತಮ್ಮನಿಗೆ ಭಾರಿ ಪೆಟ್ಟು ಬಿದ್ದಿರುತ್ತದೆ. ಆತನಿಗೆ ಕ್ಯೂ.ಪಿ ಆಸ್ಪತ್ರೆಗೆ ತಗೆದುಕೊಂಡು ಬಂದಿರುತ್ತೇವೆ ಅಂತಾ ತಿಳಿಸಿದ್ದರಿಂದ ನಾನು ಅಪಘಾತ ಸ್ಥಳವು ಸಮೀಪ ಇರುವದರಿಂದ ಅಲ್ಲಿಗೆ ಹೋಗಿ ನೋಡಲು ನನ್ನ ತಮ್ಮನಿಗೆ ಅಪಘಾತ ಪಡಿಸಿದ ಬಸ್ಸ ನಂಬರ ಕೆಎ-32/ಎಫ್-2470 ನೇದ್ದು ಇದ್ದಿತ್ತು. ಸಿಟಿ ಬಸ್ಸ ಕೂಡಾ ಇದ್ದು ಅದರ ನಂಬರ ಕೆಎ-36/ಎಫ್-602 ಇದ್ದಿತ್ತು. ನಮ್ಮ ಮೋಟಾರ ಸೈಕಲ ನಂಬರ ಕೆಎ-32/ಇಜೆಡ್-3989 ಕೂಡಾ ಇದ್ದಿತ್ತು. ಅಪಘಾತ ಪಡಿಸಿದ ಬಸ್ಸ ಚಾಲಕನ ಹೆಸರು ಗುರುನಾಥ ಅಂತಾ ಸಿಟಿ ಬಸ್ಸ ಚಾಲಕನ ಹೆಸರು ಚಂದ್ರಕಾಂತ ಅಂತಾ ಕಂಡೆಕ್ಟರ ಹೆಸರು ಅಶೋಕ ಅಂತಾ ಗೋತ್ತಾಯಿತು. ನಾನು ಕ್ಯೂ.ಪಿ ಆಸ್ಪತ್ರೆ ಒಳಗಡೆ ಹೋಗಿ ನನ್ನ ತಮ್ಮನಿಗೆ ನೋಡಲು ಆತನ ಬಲ ತೋಡೆಗೆ ಭಾರಿ ರಕ್ತಗಾಯ ಎಡಗಾಲು ಮೊಳಕಾಲಿಗೆ ಭಾರಿ ರಕ್ತಗಾಯ ಹಾಗೂ ಬಲಗಾಲು ರಿಸ್ಟ ಹತ್ತೀರ ರಕ್ತಗಾಯವಾಗಿತ್ತು ಆತನು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ. ಅಪಘಾತ ಮಾಡಿ ಆತನಿಗೆ ಭಾರಿಗಾಯಗೊಳಿಸಿದ್ದು ಆತನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ವಿನಂತಿ ಇರುತ್ತದೆ. ಅಂತಾ ಕೊಟ್ಟ ದೂರಿನ ಮೇಲಿಂದ ಠಾಣಾ ಗುನ್ನೆ ನಂ ೮೦/೨೦೨೩ ಕಲಂ ೨೭೯, ೩೩೮ ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಾಗಿದ್ದು ಇರುತ್ತದೆ, ಸದರಿ ಪ್ರಕರಣದಲ್ಲಿ ಫಿರ್ಯಾದಿಯ ತಮ್ಮ ಗಾಯಾಳು ಅಬ್ದೂಲ ಅಜೀಜ್ ಪಟೇಲ್ ತಂದೆ ಇರ್ಷಾದ ಅಹ್ಮದ ಪಟೇಲ್ ಈತನು ಕ್ಯೂಪಿ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದಾಗ ಆತನ ಪರಸ್ಥಿತಿಯು ಗಂಭಿರವಾಗಿ ರಸ್ತೆ ಅಪಘಾತದಲ್ಲಿ ಆದ ಭಾರಿಗಾಯದ ಬಾದೆಯು ಗುಣಮುಖವಾಗದೆ ಇಂದು ದಿನಾಂಕ-೧೨/೦೩/೨೦೨೩ ರಂದು ಮಧ್ಯರಾತ್ರಿ ೦೦:೩೦ ಎ.ಎಂಕ್ಕೆ ಕ್ಯೂಪಿ ಆಸ್ಪತ್ರೆಯಲ್ಲಿ ಮೃತ ಪಟ್ಟಿರುತ್ತಾನೆ ಕಾರಣ ಈ ಬಗ್ಗೆ ಫಿರ್ಯಾದಿಯ ಹೇಳಿಕೆ ಪಡೆದುಕೊಂಡು ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಫರಹತಾಬಾದ ಪೊಲೀಸ ಠಾಣೆ :- ದಿನಾಂಕ: 12-03-2023 ರಂದು ರಾತ್ರಿ 11:00 ಗಂಟೆಗೆ ಫಿರ್ಯಾಧಿ ಕೆ. ಗಾದಿಲಿಂಗಪ್ಪಾ ತಂದೆ ಕೆ. ಈರಣ್ಣಾ ತೆಲಗೂರು ವಯ:೩೮ ವರ್ಷ ಉ: ಖಾಸಗಿ ಕೆಲಸ ಸಾ: ಬಂಡಿಹಟ್ಟಿ ಕೌಲಬಜಾರ ಬಳ್ಳಾರಿ ಹಾ:ವ: ಆನಂದ ನಗರ ಹಳೇ ಆರ್ ಟಿ ಓ ಆಫೀಸ್ ಹತ್ತಿರ ಕಲಬುರಗಿ ಇವರು ಠಾಣೆಗೆ ಹಾಜರಾಗಿ ದೂರು ಸಲ್ಲಿಸಿದ್ದರ ಸಾರಾಂಶವೇನೆಂದರೆ, ದಿನಾಂಕ: 12-03-2023 ರಂದು ಸಾಯಂಕಾಲ 05:00 ಗಂಟೆಯ ಸುಮಾರಿಗೆ ಜೇವರ್ಗಿ ತಾಲೂಕಿನ ಸೊನ್ನ ಗ್ರಾಮದಲ್ಲಿದ್ದ ನನಗೆ ಪರಿಚಯದ ಯಲ್ಲಮ್ಮಾ ಎಂಬುವವಳಿಗೆ ಬೇಟಿಯಾಗುವ ಕುರಿತು ನಾನು ಕಲಬುರಗಿದಿಂದ ಸೊನ್ನ ಗ್ರಾಮಕ್ಕೆ ನನ್ನ ಮೋಟಾರ ಸೈಕಲ ನಂ: ಕೆಎ-32/ಇಝೆಡ್-0062 ನೆದ್ದರ ಮೇಲೆ ಹೋಗಿ ಅಲ್ಲಿ ಯಲ್ಲಮ್ಮಾ ಇವಳಿಗೆ ಬೇಟಿಯಾಗಿ ಮರಳಿ ಕಲಬುರಗಿಗೆ ರಾಷ್ಟ್ರೀಯ ಹೆದ್ದಾರಿ 150 ನೆದ್ದರ ಮೇಲೆ ರಾತ್ರಿ ೮.೧೦ ಗಂಟೆಯ ಸುಮಾರಿಗೆ ಸಿರನೂರ ಗ್ರಾಮದ ಹತ್ತಿರವಿರುವ ಬ್ರೀಜ್ ಹತ್ತಿರ ಕಲಬುರಗಿ ಕಡೆಗೆ ನನ್ನ ಮೋಟಾರ ಸೈಕಲ ನಂ: ಕೆಎ-32/ಇಝೆಡ್-0062 ನೆದ್ದರ ಮೇಲೆ ಬರುವಾಗ ನನ್ನ ಹಿಂದಿನಿಂದ ಎರಡು ಮೋಟಾರ ಸೈಕಲಗಳ ಮೇಲೆ 5 ಜನರು ಕೂಡಿಕೊಂಡು ಬಂದು ನನಗೆ ಅಡ್ಡಗಟ್ಟಿ ನಿಲ್ಲಿಸಿ ನನಗೆ ಹೆಲಮೆಟ ತೆಗೆ ಅಂತಾ ಅಂದಾಗ ನಾನು ಯಾಕೇ ಅಣ್ಣ ನೀವು ನನ್ನ ಮುಂದೆ ಬಂದಿದ್ದಿರಿ ಅನ್ನುತ್ತಿದ್ದಾಗ ಅವರೇ ನನ್ನ ತಲೆಯ ಮೇಲಿದ್ದ ಹೆಲಮೆಟ್ ತೆಗೆದು ಅದೇ ಹೆಲ್ಮೆಟದಿಂದ ನನ್ನ ತಲೆಗೆ ಎರಡು ಭಾರಿ ಹೊಡೆದನು. ಅದರಲ್ಲಿ ಒಬ್ಬನು ನನ್ನ ಹತ್ತಿರವಿದ್ದ ಬ್ಯಾಗ ಕಸಿದುಕೊಂಡನು, ಇನ್ನೊಬ್ಬನು ನನ್ನ ಮೋಟಾರ ಸೈಕಲನ್ನು ಕಸಿದುಕೊಂಡು ಅವರೆಲ್ಲರೂ ಅಲ್ಲಿಂದ ಕಲಬುರಗಿ ಕಡೆಗೆ ಹೋದರು. ಅವರು ಕಸಿದುಕೊಂಡು ಹೋದ ನನ್ನ ಬ್ಯಾಗನಲ್ಲಿ ನನ್ನ ಪರ್ಸಯಿದ್ದು ಅದರಲ್ಲಿ ನಗದು ಹಣ 1000/- ರೂ, ಹಾಗೂ ಸ್ಯಾಮಸಂಗ್ ಕಂಪನಿಯ ಮೊಬೈಲ್ ನಂ: 9538354419 ನೆದ್ದು ಸಹ ಇದ್ದಿರುತ್ತವೆ. ಸದರಿ 5 ಜನರು ಕನ್ನಡ ಭಾಷೆ ಮಾತನ್ನಾಡುತ್ತಿದ್ದು, ಅವರು ಸುಮಾರು ೨೦-೨೫ ವಯಸ್ಸಿನವರಿರುತ್ತಾರೆ ಅವರಿಗೆ ನೋಡಿದಲ್ಲಿ ಗುರುತಿಸುತ್ತೆನೆ. ಕಾರಣ ನನಗೆ ಅಡ್ಡಗಟ್ಟಿ ನಿಲ್ಲಿಸಿ ನನ್ನ ಮೋಟಾರ ಸೈಕಲ,ನಗದು ಹಣ, ಪರ್ಸ, ಬ್ಯಾಗ ಹಾಗೂ ಹೆಲಮೆಟಗಳನ್ನು ಕಸಿದುಕೊಂಡ ಹೋದ ೫ ಜನರ ವಿರುದ್ದ ಸೂಕ್ತ ಕಾನೂನು ಕ್ರಮ ಜರೂಗಿಸಬೇಕೆಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ  ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸಂಚಾರಿ ಪೊಲೀಸ ಠಾಣೆ-02 :- ದಿನಾಂಕ: 12-03-2023 ರಂದು ಸಾಯಂಕಾಲ 5.15 ಗಂಟೆಗೆ ಖಾಸಗಿ ಯುನೈಟೆಡ್ ಆಸ್ಪತ್ರೆ ಸಿಬ್ಬಂದಿಯವರು ಠಾಣೆಗೆ ಫೋನ ಮಾಡಿ ಜಾಲಾಬಾಯಿ ಇವರು ರಸ್ತೆ ಅಪಘಾತ ಹೊಂದಿ ಉಪಚಾರ ಕುರಿತು ಬಂದು ಸೇರಿಕೆ ಆಗಿರುತ್ತಾರೆ ಅಂತಾ ತಿಳಿಸಿದ್ದರಿಂದ ನಾನು ಆಸ್ಪತ್ರೆಗೆ ಭೇಟಿಕೊಟ್ಟು ಗಾಯಾಳುವಿಗೆ ವಿಚಾರಿಸಲು ಸದರಿಯವರು ಬೇಹುಷ ಇರುವುದರಿಂದ  ಅವರ ಜೋತೆಯಲ್ಲಿದ್ದ ಅವರ ಮೊಮ್ಮಗ ಶಿವಕುಮಾರ ಇವರನ್ನುವಿಚಾರಿಸಲು ಸದರಿಯವರು ಸಾಯಂಕಾಲ 6.15 ಗಂಟೆಗೆ ದೂರು ಅರ್ಜಿಯನ್ನು ಹಾಜರುಪಡಿಸಿದ್ದರ ಸಾರಾಂಶವೆನೆಂದರೆ, ಇಂದು ಶ್ರೀ ಶರಣಬಸವೇಶ್ವರ ಜಾತ್ರೆ ಇದ್ದುದ್ದರಿಂದ ನಾನು ನಮ್ಮೂರಿನಿಂದ ಪ್ರಶಾಂತ ನಗರ ಬಿ ದಲ್ಲಿರುವ ನನ್ನ ಸಹೋದರ ಮಾವಾ ಲಕ್ಷ್ಮಣ ಇವರ ಮನೆಗೆ ಬಂದಿರುತ್ತೇನೆ. ಪಸ್ತಾಪುರ ತಾಂಡಾದಿಂದ ನನ್ನ ಅಜ್ಜಿ ಜಾಲಾಬಾಯಿ ಗಂಡ ಶಂಕರ ಹಾಗೂ ನನ್ನ ಚಿಕ್ಕಮ್ಮ ಕವಿತಾಬಾಯಿ ಗಂಡ ಯಶ್ವಂತ ರಾಠೋಡ್ ಇವಳು ರುಮ್ಮನಗೂಡ್ ತಾಂಡಾದಿಂದ ಅವರು ಕೂಡ ನನ್ನ ಸೋದರ ಮಾವನ ಮನೆಗೆ ಬಂದಿದ್ದರು. ದಿನಾಂಕಃ 12-03-2023 ರಂದು ಸಾಯಂಕಾಲ ಶರಣಬಸವೇಶ್ವರ ಜಾತ್ರೆಯ ತೇರಿಗೆ ಆಟೋರೀಕ್ಷಾ ಮೂಲಕ ಹೋಗುವ ಕುರಿತು ನನ್ನ ಸೋದರ ಮಾವನ ಮನೆಯಿಂದ ನಾನು & ನನ್ನ ಅಜ್ಜಿ ಜಾಲಾಬಾಯಿ ಹಾಗೂ ನನ್ನ ಚಿಕ್ಕಮ್ಮ ಕವಿತಾಬಾಯಿ & ಸೋದರ ಮಾವನ ಮಗ ಕಿರಣ ಎಲ್ಲರೂ ಕೂಡಿಕೊಂಡು ಶಹಾಬಾದ ರಿಂಗರೋಡಿನ ಹತ್ತೀರ ನಿಲ್ಲುವ ಆಟೋ ಹತ್ತೀರ ನಾನು 4 ಜನರು ನಡೆದುಕೊಂಡು ಹೋಗುತ್ತೀರುವಾಗ ಶಹಾಬಾದ ರಿಂಗರೋಡ ಹತ್ತಿರ ರೋಡಿನ ಮೇಲೆ ಒಬ್ಬ ಮೋ.ಸೈಕಲ ಸವಾರನು ಸೇಡಂ ರಿಂಗರೋಡ್ ಕಡೆಯಿಂದ ನಾಗನಹಳ್ಳಿ ರಿಂಗರೋಡ ಕಡೆಗೆ ಹೋಗುವ ಕುರಿತು ತನ್ನ ಮೋ.ಸೈಕಲನ್ನು ಅತಿವೇಗದಿಂದ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ನಡೆಯಿಸಿಕೊಂಡು ಬಂದು ನಮ್ಮ ಜೊತೆಯಲ್ಲಿದ್ದ ಅಜ್ಜಿ ಜಾಲಾಬಾಯಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿದನು. ನನ್ನ ಅಜ್ಜಿ ಪುಟಿದು ಕೆಳಗಡೆ ಬಿದ್ದಾಗ ಅವಳ ಜೊತೆಯಲ್ಲಿದ್ದ ನಾನು & ಚಿಕ್ಕಮ್ಮ, ಕಿರಣ ಮೂವರು ಕೂಡಿಕೊಂಡು ಅಜ್ಜಿಗೆ ಎಬ್ಬಿಸಿ ರೋಡಿನ ಪಕ್ಕದಲ್ಲಿ ಕೂಡಿಸಿದ್ದು, ಅಜ್ಜಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿದ ಮೋ.ಸೈಕಲ್ ಸವಾರನು ಸಹಃ ತನ್ನ  ಮೋ.ಸೈಕಲನೊಂದಿಗೆ ಕೆಳಗೆ ಬಿದ್ದು ನಂತರ ಎದ್ದು ತನ್ನ ಮೋ.ಸೈಕಲ್ ಹತ್ತಿರ ನಿಂತಿದ್ದ, ಆತನ ಮೋ.ಸೈಕಲ ನಂಬರ ನೋಡಲು ಕೆಎ 32 ಇಎನ್ 9258 ಇದ್ದಿತ್ತು. ಸದರಿ ಘಟನೆ ಜರುಗಿದಾಗ ಸಾಯಂಕಾಲ ಅಂದಾಜು 4.00 ಗಂಟೆ ಆಗಿರಬಹುದು. ಈ ಘಟನೆಯಿಂದ ನನ್ನ ಅಜ್ಜಿಯ ತಲೆಗೆ ಬಾರಿ ಗುಪ್ತಪೆಟ್ಟಾಗಿ, ಬಲಕಿವಿಯಿಂದ ರಕ್ತ ಸೋರುತ್ತೀತು & ಬಲ ಬುಜಕ್ಕೆ ಭಾರಿ ಗುಪ್ತಪೆಟ್ಟು ಬಿದ್ದು ತ್ರಾಸ್ ಆಗುತ್ತಿದ್ದರಿಂದ ನನ್ನ ಅಜ್ಜಿಗೆ ನಾವೇಲ್ಲರೂ & ಅಪಘಾತ ಮಾಡಿದ ಮೋ.ಸೈಕಲ ಸವಾರ ಸೇರಿಕೊಂಡು ಒಂದು ಆಟೋದಲ್ಲಿ ಕೂಡಿಸಿಕೊಂಡು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಪಘಾತ ಮಾಡಿದ ಮೋ.ಸೈಕಲ ಸವಾರನು ನಮಗೆ ಹೇಳದೆ ಕೇಳದೆ ಅಲ್ಲಿಂದ ಹೋದನು. ಸರ್ಕಾರಿ ಆಸ್ಪತ್ರೆಯಿಂದ ನನ್ನ ಅಜ್ಜಿಯ ಉಪಚಾರ ಕುರಿತು ಒಂದು ಆಂಬ್ಯಲೇನ್ಸ್ ವಾಹನದಲ್ಲಿ ಖಾಸಗಿ ಯುನೈಟೆಡ್ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತೇವೆ. ನನ್ನ ಅಜ್ಜಿ ಬೇಹುಷ ಇರುತ್ತಾಳೆ. ನನ್ನ ಅಜ್ಜಿಗೆ ಅಪಘಾತ ಮಾಡಿದ  ಮೋ.ಸೈಕಲ ಸವಾರನ ಹೆಸರು ಗೋತ್ತಾಗಿರುವುದಿಲ್ಲಾ. ಆತನಿಗೆ ನೋಡಿದ್ದು ಮುಂದೆ ನೋಡಿದಲ್ಲಿ ಗುರುತ್ತಿಸುತ್ತೇನೆ. ಕಾರಣ ನಡೆದುಕೊಂಡು ಹೋಗುತ್ತಿರುವ ನನ್ನ ಅಜ್ಜಿ ಜಾಲಾಬಾಯಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ಅವಳಿಗೆ ಭಾರಿಗಾಯಗೊಳಿಸಿ, ಮೋ.ಸೈಕಲ್ ಅಲ್ಲಿಯೆ ಬಿಟ್ಟು ಓಡಿ ಹೋಗಿದ್ದು ಆತನ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕೆಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ವಿಶ್ವವಿದ್ಯಾಲಯ ಪೊಲೀಸ ಠಾಣೆ :- ದಿನಾಂಕ: 11-03-2023 ರಂದು ಸದರಿ ಆರೋಪಿತರು ಫಿರ್ಯಾದಿಗೆ ತಮ್ಮ ಏರಿಯಾ ಆದ ಅಮನ ನಗರದಲ್ಲಿ ಎಮ್.ಎಲ್.ಎ ರವರು ಪಂಕ್ಷನ ಮಾಡುತ್ತಿ ಮತ್ತು ಈ ಹಿಂದೆ ಜಮೀನು ತಕರಾರು ಸಂಬಂಧ ನ್ಯಾ ಪಂಚಾಯತಿ ಬಂದು ಬಗೆಹರಿಸುತ್ತಿ ನಮ್ಮ ಏರಿಯದಲ್ಲಿ ಬಂದು ಬಹಳ ನಡೆದಾದ ನಿಂದು ಅಂತಾ ಅಂದವರೇ ಸದರಿಯವರು ಕೊಡಲಿ ಕಾವಿನಿಂದ ಹೊಡೆದು ಭಾರಿ ಗಾಯ ಪಡಿಸಿ ಅವಾಚ್ಯ ವಾಗಿ ಬೈದು ಜೀವದ ಬೇದರಿಕೆ ಹಾಕಿದ್ದಾರೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ವಿಶ್ವವಿದ್ಯಾಲಯ ಪೊಲೀಸ ಠಾಣೆ :- ದಿನಾಂಕ: 12-03-2023 ರಂದು ಮುಂಜಾನೆ 07:00 ಗಂಟೆ ಸುಮಾರಿಗೆ ನಮ್ಮ ಅಳಿಯನಾದ ಸಂಪತಕುಮಾರ ತಂದೆ ಸ್ಯಾದರಕ್ ಹುಗ್ಗಿ ಸಾ: ನವಣಿ ಲೇಔಟ ಕಲಬುರಗಿ ಇತನು ಸರಾಯಿ ಕುಡಿದು ಬಂದು ವಿನಾ ಕಾರಣ ಹಣ ಕೊಡು ಅಂತಾ ಅವಾಚ್ಯವಾಗಿ ಬೈದು ಚಾಕು ತೋರಿಸಿ ಜೀವ ಬೈಯ ಹಾಕಿ ಹೋಗಿದ್ದಾನೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ವಿಶ್ವವಿದ್ಯಾಲಯ ಪೊಲೀಸ ಠಾಣೆ :- ದಿನಾಂಕ: 25-01-2023 ರಂದು ಬೆಳ್ಳಿಗೆ 06:15 ಗಂಟೆಯಿಂದ  ಸಾಯಾಂಕಾಲ 05:೦೦ ಗಂಟೆಯ ಮಧ್ಯದ ಅವಧಿಯಲ್ಲಿ ರಾಮಮಂದಿರ ಸರ್ಕಲ ಸಮೀಪ ಮರಗಮ್ಮ ಗುಡಿ ಹತ್ತಿರ ಮುಂದೆ ನಿಲ್ಲಿಸಿದ ಮೊ.ಸೈ ನಂ. ಕೆ.ಎ-32/ಇಟಿ 8541 ಅ.ಕಿ 35,000/-ರೂ ನೇದ್ದನ್ನ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 13-03-2023 11:33 AM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080