ಅಭಿಪ್ರಾಯ / ಸಲಹೆಗಳು

ಚೌಕ ಪೊಲೀಸ್ ಠಾಣೆ:-  ದಿನಾಂಕ: 12-03-2022 ರಂದು  ಮಧ್ಯಾಹ್ನ ೩-೩೦ ಗಂಟೆಗೆ  ಫರ‍್ಯಾದಿದಾರನಾದ ಶ್ರೀ ಸೈಯ್ಯದ ಫೈಜಾನ ಹುಸೇನಿ ತಂದೆ ಸೈಯ್ಯದ ಜಾಫರ ಹುಸೇನಿ ವ:೨೦ ವರ್ಷ ಉ: ವಿದ್ಯಾರ್ಥಿ  ಜಾತಿ ಮುಸ್ಲಿಂ ಸಾ; ಶೇಖ ರೋಜಾ ಖಾದ್ರಿ ಚೌಕ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕೀಕೃತ ಮಾಡಿಸಿದ ಫಿರ್ಯಾದಿ ಅರ್ಜಿಯನ್ನು ಹಾಜರ ಪಡಿಸಿದ್ದು ಸದರಿ ಫಿರ್ಯಾದಿ ಅರ್ಜಿಯ ಸಾರಾಂಶವೆನೆಂದರೆ , ದಿನಾಂಕ ೧೦/೦೩/೨೦೨೨ ರಂದು ರಾತ್ರಿ ೧೧-೦೦ ಗಂಟೆ ಸುಮಾರಿಗೆ ನನ್ನ ತಮ್ಮಂದಿರರಾದ ಹಸನೈನ ಜುನೈದಿ ಮತ್ತು ಅರಮಾನ ಜುನೈದಿ ಇವರಿಬ್ಬರು ನಮ್ಮ ಹತ್ತಿರ ಇರುವ ಮುಜಮಿಲ್ಲ ಜುನೈದಿ ಮತ್ತು ಸೋಹೋಲ ಜುನೈದಿ, ಕಫೀಲ ಜುನೈದಿ ಇವರುಗಳ ಮನೆಯ ಮುಂದಿನ ಹಾಯ್ದು ಹೋಗುತ್ತಿದ್ದಾಗ ನನ್ನ ತಮ್ಮ ಹಸನೈನ ಜುನೈದಿ ಮತ್ತು ಅರಮಾನ ಜುನೈದಿ ಇಬ್ಬರಿಗೂ  ಈ ಮೇಲಿನ ಜನರು ಹಮಾರೇಕೋ ದೇಖಕೇ ಕೈಂವ ಘೂರ ರಹೈ ಸಾಲೋ ಅಂತಾ ಬೈದಿರುತ್ತಾರೆ ಎಂದು ಮನೆಗೆ ಬಂದು ನನಗೆ ತಿಳಿಸಿದಾಗ ನಾನು ಮತ್ತು ನನ್ನ ತಮ್ಮ  ಹಸನೈನ ಜುನೈದಿ ಮತ್ತು ಅರಮಾನ ಜುನೈದಿ ಹಾಗೂ ಸೈಯ್ಯದಾ ಆಸ್ಮಮಾ ಎಲ್ಲರು ಕೂಡಿಕೊಂಡು ಮುಜಮಿಲ್ಲ ಜುನೈದಿ ಮನೆ ಹತ್ತಿರ ಹೋಗಿ ಅವರಲ್ಲಿ ನಾನು ಮೂವರಿಗೆ ನಮ್ಮ ತಮ್ಮಂದಿರರಿಗೆ ಯಾಕೇ ಬೈದಿರುತ್ತೀರಿ ಅಂತಾ ಕೇಳಿದಾಗ ಮುಜಮಿಲ್ಲ ಜುನೈದಿ, ಸೋಹೇಲ ಜುನೈದಿ, ಕಫೀಲ ಜುನೈದಿ ನಸಿರೋದ್ದಿನ @ ಫಾಜೀಲ್ ಜುನೈದಿ ನಾಲ್ಕು ಜನರು  ನನಗೆ ಮೈಮೇಲೆ ಹೊಡೆಯಲು ಬಂದಾಗ ಅವರಿಗೆ ಅಂಜಿ ಮನೆಯ ಕಡೆಗೆ ಹೋಗುತ್ತಿದ್ದಾಗ ಮೂವರು ಹೋಗುತ್ತಿದ್ದ ನನಗೆ ತಡೆದು ನಿಲ್ಲಿಸಿ, ನನಗೆ ಚಿನಾಲಕೇ ಹಮಾರ ಘರತಕ ಪೋಚನೇ ಆಯೇತಿ ಸಾಲೇ ಅಂತಾ ಬೈಯ್ಯುತ್ತಾ ಮುಜಮಿಲ್ಲ ಕೈ ಮುಷ್ಟಿ ಮಾಡಿ ನನ್ನ ಬಲ ಪಕ್ಕೆಗೆ ಹೊಡೆದನು. ಸೋಹೇಲ ಇತನು ನನ್ನ ಬಲ ಎದೆಯ ಮೇಲೆ ಹೊಡೆದು ಚೂರಿ ರಕ್ತಗಾಯ ಮಾಡಿದನು. ಕಫೀಲ ಇತನು ಕೂಡ ನನ್ನ ಎಡ ಎದೆಯ ಮೇಲೆ ಹೊಡೆದು ಚೂರಿ ರಕ್ತಗಾಯ ಮಾಡಿದನು. ಈ ಜಗಳಾ ಬಿಡಸಲು ತಮ್ಮ ತಾಯಿಗೆ ನಸಿರೋದ್ದಿನ @ ಫಾಜೀಲ್ ಇತನು ಚಿನಾಲ, ರಾಂಡ ಎಂದು ಹೊಲಸು ಹೊಲಸು ಬೈದಿರುತ್ತಾನೆ.  ಆದರೂ ನಮ್ಮ ತಾಯಿ ನನಗೆ ಹೊಡೆಯುವುದನ್ನು ನೋಡಿ  ಜಗಳಾ ನೋಡಿ ಬಿಡಿಸಿಕೊಂಡಿರುತ್ತಾಳೆ.  ನಂತರ ನಾಲ್ಕು  ಜನರು ನನಗೆ ಮತ್ತು ಕುಟುಂಬದವರಿಗೆ ಇನ್ನೊಮ್ಮೆ ನಮ್ಮ ಮನೆ ತನಕ ಬಂದರೆ ಜೀವ ಸಹಿತ ಬಿಡುವುದಿಲ್ಲಾ ಎಂದು ಬೆದರಿಕೆ ಹಾಕಿ ಹೋದರು. ತದನಂತರ ನಾನು ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿ ಬಂದು ಸೇರಿಕೆ ಆದೆನು. ಆ ದಿನ ಪೊಲೀಸರು ಬಂದಾಗ ನಂತರ ವಿಚಾರಿಸಿಕೊಂಡು ಠಾಣೆಗೆ ಬಂದು ದೂರು ಕೊಡುವುದಾಗಿ ತಿಳಿಸಿರುತ್ತೇನೆ. ಇಂದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿ ಠಾಣೆಗೆ ಬಂದು ದೂರು ಕೊಟ್ಟಿರುತ್ತೇನೆ.  ಕಾರಣ ನನಗೆ ತಡೆದು ನಿಲ್ಲಿಸಿ ಕೈಯಿಂದ ಹೊಡೆ ಬಡೆ ಮಾಡಿ ಜೀವ ಭಯ ಹಾಕಿದ ೧)ಮುಜಮಿಲ್ಲ ಜುನೈದಿ ತಂದೆ ಖಲೀಲ ಜುನೈದಿ  ೨) ಸೋಹೇಲ ಜುನೈದಿ ತಂದೆ ಖಲೀಲ ಜುನೈದಿ ೩)ಕಫೀಲ ಜುನೈದಿ ತಂದೆ ಖಲೀಲ ಜುನೈದಿ ೪)ನಸಿರೋದ್ದಿನ @ ಫಾಜೀಲ್ ಜುನೈದಿ ತಂದೆ ಖಲೀಕ ಜುನೈದಿ   ಸಾ; ಎಲ್ಲರೂ ಶೇಖ ರೋಜಾ ಖಾದ್ರಿ ಚೌಕ ಕಲಬುರಗಿ ಇವರುಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಕೋರಿಕೆ ಎಂದು ಕೊಟ್ಟ ದೂರಿನ ಆಧಾರದ ಮೇಲಿಂದ  ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಮಹಿಳಾ ಪೊಲೀಸ ಠಾಣೆ :- ದಿನಾಂಕ 25-02-2022  ರಂದು ಅರ್ಜಿದಾರರಾದ ಶ್ರೀಮತಿ ಕವಿತಾ ಗಂಡ ಕಿರಣಕುಮಾರ ಭಾಗೋಡಿ ವಯಾ|| ೩೬ ವರ್ಷ ಉ|| ಖಾಸಗಿ ಕೆಲಸ ಸಾ|| ಹೀರಾಪೂರ ತಾ|| ಜಿ|| ಕಲಬುರಗಿ  ಇವರು ಠಾಣೆಗೆ ಹಾಜರಾಗಿ ದೂರು ಅರ್ಜಿ ಸಲ್ಲಿಸಿದ್ದು, ಸದರಿ ದೂರು ಅರ್ಜಿ ಸ್ವೀಕರಿಸಿಕೊಂಡು ಅರ್ಜಿದಾರರು ಮತ್ತು ಎದುರು ಅರ್ಜಿದಾರರಿಗೆ ಆಪ್ತಸಮಾಲೋಚನೆ ಕೈಕೊಂಡಿದ್ದು, ಆಪ್ತಸಮಾಲೋಚನೆ ಫಲಪ್ರದವಾಗದೇ, ಅರ್ಜಿದಾರರಾದ ಕವಿತಾ ಇವರು ಇಂದು ದಿನಾಂಕ 12-03-2022 ರಂದು ಸಾಯಂಕಾಲ ೭ ಗಂಟೆಗೆ ಠಾಣೆಗೆ ಹಾಜರಾಗಿ ಪ್ರಕರಣ ದಾಖಲಿಸುವಂತೆ ಕೋರಿಕೊಂಡಿದ್ದು, ಸದರಿ ಅರ್ಜಿ ಸಾರಾಂಶ ಏನೆಂದರೆ, ಕಿರಣಕುಮಾರ ತಂದೆ ಶಿವಶರಣಪ್ಪಾ ಭಾಗೋಡಿ ಸಾ|| ಆರ್.ಟಿ.ಓ ಕ್ರಾಸ್ ಹತ್ತಿರ ಕಲಬುರಗಿ ಇವರ ಜೊತೆಯಲ್ಲಿ ೨೦೧೯ ನೇ ಸಾಲಿನಲ್ಲಿ ನನ್ನ ಮದುವೆಯಾಗಿದ್ದು, ಮದುವೆ ಕಾಲಕ್ಕೆ ನನ್ನ ಗಂಡನ ಮನೆಯವರ ಒತ್ತಾಯದಂತೆ ೨.೫ ತೊಲೆ ಬಂಗಾರ ಮತ್ತು ೧.೫ ಲಕ್ಷ ರೂಪಾಯಿ ಬೆಲೆ ಬಾಳುವ ಸಾಮಾನುಗಳನ್ನು ಕೊಟ್ಟಿದ್ದು ಇರುತ್ತದೆ. ಮದುವೆಯಾದ ೨ ತಿಂಗಳ ನಂತರ ದಿನಾಂಕ ೧೦.೦೮.೨೦೧೯ ರಂದು ನನಗೆ ವರದಕ್ಷಿಣೆ ಕಿರುಕುಳ ನೀಡುತ್ತಾ ಬಂದಿದ್ದು, ನನ್ನ ಗಂಡ ನನ್ನ ಮೇಲೆ ಸಂಶಯ ಮಾಡಿ ರಂಡಿ ಬೋಸಡಿ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಮಾನಸಿಕ ಹಿಂಸೆ ನೀಡುತ್ತಾ ಬಂದಿರುತ್ತಾರೆ. ದಿನಾಂಕ ೨೪.೦೧.೨೦೨೨ ರಂದು ಬೆಳಿಗ್ಗೆ ೧೨ ಗಂಟೆಗೆ ನ್ನನ ಗಂಡ ನನ್ನ ಜೊತೆ ಜಗಳ ಮಾಡಿ ಹೊಡೆಬಡೆ ಮಾಡಿರುತ್ತಾನೆ. ನನ್ನ ಅತ್ತೆ ಲಲಿತಾಬಾಯಿ, ನಾದಿನಿ ಶೃತಿ ಗಂಡ ರಾಜಕುಮಾರ ಮತ್ತು ಜ್ಯೋತಿ ಗಂಡ ವಿಜಯಕುಮಾರ ಇವರೆಲ್ಲಾ ಸಪೋರ್ಟ ಮಾಡುತ್ತಾರೆ. ದಿನಾಂಕ ೧೫.೦೨.೨೦೨೨ ರಂದು ಬೆಳಿಗ್ಗೆ ೧೧ ಗಂಟೆಗೆ ಮನೆಗೆ ಬಂದು ಜಗಳ ಮಾಡಿ ಕೊಲೆ ಮಾಡುವದಾಗಿ ಜೀವ ಬೆದರಿಕೆ ಹಾಕಿರುತ್ತಾನೆ. ಕಾರಣ ನನಗೆ ವರದಕ್ಷಿಣೆ ಕಿರುಕುಳ ನೀಡುತ್ತಾ ಇರುವ ನನ್ನ ಗಂಡ, ಅತ್ತೆ, ನಾದಿನಿಯರ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಇತ್ತೀಚಿನ ನವೀಕರಣ​ : 24-03-2022 12:43 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080