ಅಭಿಪ್ರಾಯ / ಸಲಹೆಗಳು

ಸ್ಟೇಷನ್‌ ಬಜಾರ ಪೊಲೀಸ ಠಾಣೆ :- ನಾನು ಸ್ಟೇಷನ್ ಬಜಾರ ಪೊಲೀಸ್ ಠಾಣೆಯಲ್ಲಿ ಮುಖ್ಯ ಪೊಲೀಸ್ ಪೇದೆ ಅಂತ ಕರ್ತವ್ಯ ನಿರ್ವಹಿಸಿಕೊಂಡು ಇರುತ್ತೆನೆ. ಹೀಗಿದ್ದು ದಿನಾಂಕ:10/02/2023 ರಂದು ರಾತ್ರಿ 11:40 ಗಂಟೆ ಸುಮಾರಿಗೆ ನಾನು ಠಾಣಾ ದಿನಚರಿ ಕರ್ತವ್ಯದ ಮೇಲೆ ಮತ್ತು ಮಲ್ಲಣ್ಣ ಪಿಸಿ 301 ರವರು ಠಾಣಾ ಪಹರೆ ಕರ್ತವ್ಯದ ಮೇಲೆ ಇರುತ್ತೆವೆ. ಇದೇ ವೇಳೆಗೆ ಪ್ರದೀಪಕುಮಾರ ಮತ್ತು ಉಮಾಕಾಂತ ಇಬ್ಬರು ವಕೀಲರು ಹಾಗೂ ಇವರೊಂದಿಗೆ ಇನ್ನು 3 ಜನರು ಠಾಣೆಗೆ ಬಂದು ಆಗ ಪ್ರದೀಪಕುಮಾರ ರವರು ನಾವು ಸುಭಾನ ಹೊಟಲನಲ್ಲಿ ಊಟದ ಸಲುವಾಗಿ ನಮಗೂ ಮತ್ತು ಹೊಟಲ್ ಮಾಲಿಕರಿಗೂ ತಂಟೆ ತಕರಾರು ಆಗಿದ್ದು, ನಮಗೆ ಈ ಪರಿಸ್ಥಿತಿ ಬಂದರೆ, ಸಾಮಾನ್ಯ ಜನರಿಗೆ ಯಾವ ಪರೀಸ್ಥಿತಿ ಬರುತ್ತದೆ ಅಂತ ಏರು ಧ್ವನಿಯಲ್ಲಿ ಮಾತನಾಡುತ್ತಿದ್ದರು. ಆಗ ನಾನು ಮತ್ತು ಪಹರೆ ಕರ್ತವ್ಯದ ಮೇಲೆ ಇದ್ದ ಮಲ್ಲಣ್ಣ ಪಿಸಿ 301 ಇಬ್ಬರು ಕೂಡಿ ಸಮಾಧಾನ ಪಡಿಸಿ ನೀರು ಕುಡಿಯಲು ಹೇಳಿ ಅವರಿಗೆ ಒಂದು ಬಿಳಿ ಹಾಳೆ ನೀಡಿ ನೀವು ವಕೀರು ಇದ್ದಿರಿ ಲಿಖಿತ ರೂಪದಲ್ಲಿ ದೂರು ನೀಡಲು ತಿಳಿಸಿದ್ದು ಇರುತ್ತದೆ.   ಆಗ ಪ್ರದೀಪಕುಮಾರ ಇವರು ನಾವು ಜಿಲ್ಲಾ ಸತ್ರ ನ್ಯಾಯಾಲಯದಲ್ಲಿದ್ದು ನಮಗಿರುವ ಅಧಿಕಾರ ನಿಮಗೆ ಗೊತ್ತಿಲ್ಲ ಅಂತ ಮತ್ತೆ ಮತ್ತೆ ಏರು ಧ್ವನಿಯಲ್ಲಿ ಚೀರಾಡುತ್ತಿದ್ದನು. ಇದೇ ಸಮಯದಲ್ಲಿ ಅವರ ಜೋತೆಯಲ್ಲಿ ಇದ್ದ ಉಮಾಕಾಂತ ಎಂಬುವವರು ನಾವು ಅಡ್ವೊಕೇಟಗಳು ನಮಗೆ ಇವರು ಈ ರೀತಿ ಮಾಡಿದ್ದರೆ ಇವರು ಯಾವ ರೀತಿ ನ್ಯಾಯ ಕೊಡುತ್ತಾರೆ ಅಂತ ಏಕ ವಚನದಲ್ಲಿ ನಮ್ಮ ಮೇಲೆ ಚೀರಾಡುತ್ತಿದ್ದು, ನಾವು ಅವನನ್ನು ಅಣ್ಣ ತಮ್ಮ ಅಂತ ಮರ್ಯಾದೆಯಿಂದ ನಾವು ನಿಮಗೆ ಬಿಳಿ ಹಾಳೆ ನೀಡಿದ್ದು, ಅರ್ಜಿ ಕೊಟ್ಟರೆ ಕ್ರಮ ಕೈಕೊಳ್ಳುವದಾಗಿ ತಿಳಿಸಿದ್ದು, ಆದರೂ ಅವರು ಚೀರಾಡುತ್ತಾ ಅಲ್ಲಿ ನಮಗೆ ಯಾರೋ ಇಬ್ಬರು ಪೊಲೀಸರು ಕೂಡಾ ನಮ್ಮನ್ನು ಸಮಯವಾಗಿದೆ ಅಂತ ಕಳುಹಿಸಿದ್ದು ಇರುತ್ತದೆ. ಅವರು ಕೂಡಾ ಹೊಟಲ್ದವರ ಪರವಾಗಿದ್ದು, ಆ ಪೊಲೀಸರ ಮೇಲೆ ಮತ್ತು ಹೊಟಲ್ನವರು ಮೇಲೆ ಕ್ರಮಕೈಕೊಳ್ಳಲು ಬಾಯಿ ಮುಖಾಂತರ ಚೀರಾಡುತ್ತಾ ಬಾಯಿ ಜೋರು ಮಾಡುತ್ತಾ ಇರುತ್ತಾರೆ. ಆಗ ನಾವು ಅವರನ್ನು ಸಮಾಧಾನದಿಂದ ನೀವು ನಿಮ್ಮ ದೂರನ್ನು ಲಿಖೀತ ರೂಪದಲ್ಲಿ ನೀಡಿದರೆ ನಾವು ಖಂಡಿತ ಕ್ರಮ ಕೈಕೊಳ್ಳುತ್ತೆವೆ ಅಂತ ತಿಳಿಸುತ್ತಾ ಇರುವಾಗಲೆ, ಪ್ರದೀಪ ಎಂಬುವವರು ನನ್ನ ಎದುರುಗಡೆ ಕುಳಿತಿದ್ದ ಠಾಣೆಯ ಪಹರೆ ಕರ್ತವ್ಯದ ಮೇಲಿದ್ದ ಮಲ್ಲಣ್ಣ ಪಿಸಿ 301 ರವರ ಸಮವಸ್ತ್ರವನ್ನು ಹಿಡಿದು ಏಳೆಯುತ್ತಿದ್ದು, ಕುತ್ತಿಗೆ ಪಟ್ಟಿ ಹಿಡಿದು ಎಳೆದಾಡಿದ್ದು ಇರುತ್ತದೆ. ಆಗ ನಾನು ಅವರನ್ನು ನೀವು ವಕೀಲರು ಅಂತ ಹೇಳಿ ಅನಕ್ಷರಸ್ಥರ ರೀತಿ ವರ್ತನೆ ಮಾಡುವದು ಸರಿಯಲ್ಲ ಅಂತ ಅಂದಾಗ, ಉಮಾಕಾಂತ ಎಂಬುವವರು ಚೀರಾಡುತ್ತಾ ಪ್ರದೀಪಕುಮಾರನಿಗೆ ನೀನು ಇವರ ವಿರುದ್ದ ಅರ್ಜಿ ಕೊಡು ಇವರಿಗೆ ಬಿಡುವದು ಬೇಡ, ನೀನು ಕೊಡುವ ಅರ್ಜಿ  ಮೇಲಿಂದ ಕ್ರಮ ಕೈಕೊಳ್ಳಲಿ ಅಂತ ಠಾಣೆಯಲ್ಲಿ ಚೀರಾಡುತ್ತಿದ್ದು, ನನಗೆ ನಿನ್ನ ಹೆಸರೇನು ಅಂತ ಕೇಳಿ ಇವರ ಮೇಲೂ ದೂರು ಕೊಡು ಅಂತ ಚೀರಾಡುವದು ಮಾಡುತ್ತಿದ್ದನು. ಆಗ ಪ್ರದೀಪಕುಮಾರ ಇತನು ನಮ್ಮಿಬ್ಬರ ಹೆಸರು ಕೇಳಿ ನಿಮ್ಮನ್ನು ಬಿಡುವದಿಲ್ಲ ನಿಮ್ಮ ಹೆಸರು ಕೂಡಾ ಅರ್ಜಿಯಲ್ಲಿ ಸೇರಿಸುತ್ತೆನೆ. ನಾವು ಠಾಣೆಗೆ ಬಂದು ದೂರು ನೀಡಿದರೆ ನೀವು ನಮ್ಮಂತಹ ವಕೀಲರ ಮೇಲೆ ನೀವು ಚೀರಾಡುವದು ಮಾಡುತ್ತಿದ್ದಿರಿ ಅಂತ ಅಂದು ನಿಮ್ಮನ್ನು ಬೀಡುವದಿಲ್ಲ ಅಂತ ಬೆದರಿಕೆ ಹಾಕಿ ಚೀರಾಡುತ್ತಿದ್ದನು. ಆಗ ಅವರ ಜೋತೆಯಲ್ಲಿದ್ದ,  ಇನ್ನು 3 ಜನರು ಕೂಡಾ, ವಕೀಲರು ಅಂತ ಹೇಳಿ ಈ ರೀತಿ ನೀವು ಮಾತನಾಡಬಾರದು ಅಂತ ಅವರು ಕೂಡಾ ಏರು ದ್ವನಿಯಲ್ಲಿ ಚೀರಾಡಿರುತ್ತಾರೆ. ಆಗ ರಾತ್ರಿ ಗಸ್ತು ಸುಪರವೈಜಿಂಗ್ ಕರ್ತವ್ಯದ ಮೇಲಿದ್ದ ಅಶೋಕ ನಗರ ಪೊಲೀಸ್ ಠಾಣೆಯ ಪಿಐ ಸಾಹೇಬರು ಠಾಣೆಯ ಕೆಳಗೆ ಬಂದಿದ್ದು, ಪಹರೆ ಕರ್ತವ್ಯದಲಿದ್ದ ಮಲ್ಲಣ್ಣ ಪಿಸಿ 301 ರವರು ಪಹರೆ ಪುಸ್ತಕ ತೆಗೆದುಕೊಂಡು ಕೆಳಗೆ ಹೋದಾಗ ಪುನಃ ವಕೀಲರು ಮೇಲೆ ಚೀರಾಡುವ ಶಬ್ದ ಕೇಳಿ ಮೇಲೆ ಬಂದು, ವಿಚಾರಿಸಿ ನೀವು ಠಾಣೆಗೆ ಬಂದು ನಿಮ್ಮದು ಏನಾದರು ದೂರು ಇದ್ದರೆ ಲಿಖಿತ ರೂಪದಲ್ಲಿ ಕೊಡಿ ಅಂತ ಹೇಳಿರುತ್ತಾರೆ. ಆಗ ಅಯುತು ಅಂತ ಹೇಳಿ ಹೋಗಿ, ಪುನಃ ಬಂದು ಹೊಟಲನವರ ಮೇಲೆ ಕ್ರಮ ನೀವು ಕ್ರಮ ಕೈಕೊಳ್ಳಬೇಕು ಅಂತ ಹೇಳಿ ಚೀರಾಡಿ ಹೋಗಿರುತ್ತಾರೆ.  ಈ ಘಟನೆ ಬಗ್ಗೆ ನಾನು ಸಿಬ್ಬಂದಿಯವರ ಜೋತೆ ಚರ್ಚಿಸಿ ಇಂದು ತಡವಾಗಿ ಬಂದು ದೂರು ಸಲ್ಲಿಸಿದ್ದು ಇರುತ್ತದೆ.  ಕಾರಣ ದಿನಾಂಕ:10/02/2023 ರಂದು ರಾತ್ರಿ 11:40 ಗಂಟೆ ಸುಮಾರಿಗೆ  ಠಾಣೆಗೆ ಬಂದು ನಮ್ಮ  ಕರ್ತವ್ಯಕ್ಕೆ ಅಡೆ-ತಡೆ ಮಾಡಿ ಜೀವದ ಬೇದರಿಕೆ ಹಾಕಿದ ಪ್ರದೀಪಕುಮಾರ, ಉಮಾಕಾಂತ ಮತ್ತು ಅವರೊಂದಿಗೆ ಇದ್ದ ಇನ್ನು 3 ಜನ ವಕೀಲರ ವಿರುದ್ದ ಕಾನೂನು ರೀತಿ ಕ್ರಮ ಕೈಕೊಳ್ಳಲು ಮಾನ್ಯರವರಲ್ಲಿ ವಿನಂತಿ  ಅಂತ ನೀಡಿದ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸಂಚಾರಿ ಪೊಲೀಸ್‌ ಠಾಣೆ -2 :- ದಿನಾಂಕ 12/02/2023 ರಂದು  ಸಾಯಂಕಾಲ 5:00 ಗಂಟೆಗೆ ಶ್ರೀ. ಮೆಹೆಬೂಬ ತಂದೆ ಮೈನೊದ್ದಿನ ವಯಃ 38 ವರ್ಷ ಸಾಃ ಖಾನಬೌಡಿ ನಯಾಮೊಹಲ್ಲಾ ಆಳಂದ ಜಿಲ್ಲಾಃ ಕಲಬುರಗಿ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ಫಿರ್ಯಾದಿ ಅರ್ಜಿ ಹಾಜರು ಪಡಿಸಿದ್ದು ಸಾರಂಶವೆನೆಂದರೆ, ಫಿರ್ಯಾದಿ ಮೆಹೆಬೂಬ ಇವರು ದಿನಾಂಕ 05/02/2023 ರಂದು ರಾತ್ರಿ 7:30 ಗಂಟೆ ಸುಮಾರಿಗೆ ಮುಸ್ಲಿಂ ಸಂಘ ತಾಜ ನಗರ ಕಲಬುರಗಿಯ ತಮ್ಮ ಮಾವನ ಮನೆಗೆ ಹೋಗಿ ಮರಳಿ ಬರುವಾಗ ಮೋಟರ ಸೈಕಲ ನಂ. ಕೆಎ 36 ಯು 7471 ನೇದ್ದರ ಸವಾರನು ವೇಗದಿಂದ ನಡೆಯಿಸಿಕೊಂಡು ಬಂದು ಡಿಕ್ಕಿ ಹೊಡೆದ ಪರಿಣಾಮ ತನ್ನ ಎಡಗೈ ಮುರದಿರುತ್ತದೆ ಮತ್ತು ಬಲಗಾಲಿಗೆ ಗಾಯವಾಗಿರುತ್ತದೆ. ಘಟನೆಯನ್ನು ಖಾಜಾಪಾಷಾ ಎಂಬುವರು ನೋಡಿರುತ್ತಾರೆ. ಅಪಘಾತ ಪಡಿಸಿದ ಸವಾರನು ಆಸ್ಪತ್ರೆಯ ಖರ್ಚು ವೆಚ್ಚ ಕೊಡುವುದಾಗಿ ತಿಳಿಸಿ ನಂತರ ಹಣವನ್ನು ಕೊಡದೆ ಇರುವ ಕಾರಣ ವಿಳಂಬವಾಗಿ ಮುಂದಿನ ಕ್ರಮ ಕೈಗೊಳ್ಳುವ ಕುರಿತು ಫಿರ್ಯಾದಿಯನ್ನು ಸಲ್ಲಿಸಲಾಗಿದೆ ಅಂತಾ ಇತ್ಯಾದಿ ಅಂತಾ ಕೊಟ್ಟ ಫಿರ್ಯಾದಿ ಅರ್ಜಿ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಚೌಕ ಪೊಲೀಸ ಠಾಣೆ :-  ದಿನಾಂಕ:12.02.2023 ರಂದು ಬೆಳಿಗ್ಗೆ 12.00 ಗಂಟೆಗೆ ಫಿರ್ಯಾದಿದಾರರಾದ ಶ್ರೀ ರಾಜಕುಮಾರ ತಂದೆ ವಿಠಲ ಪೂಜಾರಿ ವ:45ವರ್ಷ ಉ:ಮುನೀಮ ಕೆಲಸ ಜ್ಯಾ:ಕುರುಬ ಸಾ:ಮಹಾದೇವ ದೇವಸ್ಥಾನ ಹತ್ತಿರ ಭವಾನಿ ನಗರ ಕಲಬುರಗಿ ಹಾ.ವ:ಭೂಪಾಲತೆಗ್ಗನೂರ ತಾ:ಜಿ:ಕಲಬುರಗಿ ಆಗಿದ್ದು ತಮ್ಮಲ್ಲಿ ದೂರು ಸಲ್ಲಿಸುವದೇನೆಂದರೆ, ಕಲಬುರಗಿ ನಗರದ ಗಂಜನಲ್ಲಿರುವ  ಭವಾನಿ ಟ್ರೇಡಿಂಗ  ಕಂಪನಿಯಲ್ಲಿ  ಮುನೀಮ  ಕೆಲಸ ಮಾಡಿಕೊಂಡು ಹೆಂಡತಿ ಮಕ್ಕಳೊಂದಿಗೆ ವಾಸವಾಗಿರುತ್ತೇನೆ. ಹೀಗಿದ್ದು ದಿನಾಂಕ:11/02/2023 ರಂದು ಸಾಯಂಕಾಲ 06.00 ಗಂಟೆಗೆ ಮನೆಗೆ ಕೀಲಿ ಹಾಕಿಕೊಂಡು ನನ್ನ ಹೆಂಡತಿ ಮತ್ತು 03 ಮಕ್ಕಳು ನನ್ನ ಸಹೋದರನಾದ ಶ್ರೀ ಶಿವಪ್ಪ ಇವರಿಗೆ  ಆರಾಮ ಇಲ್ಲದ ಪ್ರಯುಕ್ತ ನನ್ನ ಸ್ವಂತ ಊರಾದ ಭೂಪಾಲತೆಗ್ಗನೂರಕ್ಕೆ ಹೋಗಿರುತ್ತಾರೆ ನಂತರ ನಾನು ರಾತ್ರಿ 09.00ಗಂಟೆಗೆ ಮನೆಗೆ ಬಂದು ನೋಡಿದಾಗ ನನ್ನ ಹೆಂಡತಿ ಮತ್ತು 03 ಮಕ್ಕಳು ಊರಿಗೆ ಹೋಗಿದ್ದು ಮತ್ತು ನನ್ನ ಹಿರಿಯ ಮಗನಾದ ವೀರೇಶ ಇತನು ತನ್ನ ಗೆಳೆಯನ ಮನೆಗೆ ಹೋಗಿದ್ದರಿಂದ ನಾನು ಸಹ ಮನೆಗೆ ಕೀಲಿ ಹಾಕಿಕೊಂಡು ಊರಿಗೆ ಹೋಗಿರುತ್ತೇನೆ. ಇಂದು ದಿನಾಂಕ:12/02/2023 ರಂದು ಬೆಳಿಗ್ಗೆ 05:30 ಗಂಟೆ ನನ್ನ ಹಿರಿಯ ಮಗನಾದ ವಿರೇಶ ಇತನು ಮನೆಗೆ ಹೋದಾಗ ಮನೆಯ ಬಾಗಿಲು ಮುರಿದಿದ್ದು ಅಲ್ಲದೇ ಮನೆಯಲ್ಲಿ ಸಾಮಾನುಗಳು ಚಲ್ಲಾಪಿಲ್ಲಿಯಾಗಿ ಬಿದ್ದಿದ್ದನ್ನು ಕಂಡು ಗಾಬರಿಗೊಂಡು ಮನೆ ಕಳ್ಳತನವಾಗಿದೆ ಅಂತ ನನಗೆ ಫೋನ ಮಾಡಿ ತಿಳಿಸಿದ ಮೇರೆಗೆ ನಾನು ಸಹ ನನ್ನ ಸಂಬಂಧಿಕರಾದ ಶ್ರೀ ಜಗನ್ನಾಥ ತಂದೆ ಭೀಮಶಾ ಲಾಡಂತಿ ಮತ್ತು ಶ್ರೀ ಕಲ್ಯಾಣಿ ತಂದೆ ಹಣಮಂತ ಇವರಿಗೆ ಫೋನ ಮಾಡಿ ಮನೆ ಕಳ್ಳತನವಾದ ಬಗ್ಗೆ ತಿಳಿಸಿ ನೀವು ಬರಬೇಕು ಅಂತ ಹೇಳಿ ನಾನು ಮತ್ತು ನನ್ನ ಹೆಂಡತಿ ಇಬ್ಬರೂ ನಮ್ಮೂರಿನಿಂದ  ಮುಂಜಾನೆ 06.00 ಗಂಟೆಗೆ ಮನೆಗೆ ಬಂದಾಗ ಅದೇ ವೇಳೆಯಲ್ಲಿ  ಶ್ರೀ ಜಗನ್ನಾಥ ಮತ್ತು ಶ್ರೀ ಕಲ್ಯಾಣಿ ರವರು ಬಂದಿದ್ದು,ನಾವೇಲ್ಲರೂ ಸೇರಿ ಮನೆಯ ಒಳಗೆ ಹೋಗಿ ನೋಡಲಾಗಿ ಮನೆಯಲ್ಲಿ ಸಾಮಾನುಗಳು ಚಲ್ಲಾಪಿಲ್ಲಿಯಾಗಿ ಬಿದ್ದಿದ್ದು ಮತ್ತು ಅಲಮಾರಿ ತೆರೆದಿದ್ದು,ಸದರಿ ಅಲಮಾರಿಯಲ್ಲಿಟ್ಟಿದ 1) ಬಂಗಾರದ 3 ಗ್ರಾಂ ನ ಕಿವಿಯ ಓಲೆಯ ಚೈನ ಅ.ಕಿ 14,000/- 2) ಬಂಗಾರದ 5 ಗ್ರಾಂ ಹೆಣ್ಣು ಮಕ್ಕಳ ಝುಮಕಿ ಅ.ಕಿ.24,000/-ರೂ 3)  ಬಂಗಾರದ 5ಗ್ರಾಂ ನ  ಸುತ್ತುಂಗುರ ಅ.ಕಿ 29,400/-ರೂ, ಹೀಗೆ ಒಟ್ಟು 13 ಗ್ರಾಂ ಬಂಗಾರದ ಆಭರಣಗಳು ಎಲ್ಲವೂ ಸೇರಿ ಒಟ್ಟು 67,400 /- ರೂಗಳ ಕಿಮ್ಮತ್ತಿನ ಬೆಲೆ ಬಾಳುವ ಬಂಗಾರದ ಆಭರಣಗಳು ಮತ್ತು ನಗದು ಹಣ 45,000/-ರೂ  ಎಲ್ಲವೂ ಸೇರಿ ಒಟ್ಟು 1,12,400/-ರೂ ನೇದ್ದವುಗಳನ್ನು ಕಳ್ಳತನಮಾಡಿಕೊಂಡು ಹೋಗಿರುತ್ತಾರೆಂದು ಕಂಡು ಬಂದಿರುತ್ತದೆ. ಈ ಘಟನೆಯ ದಿನಾಂಕ: 11/02/2023 ರಂದು ರಾತ್ರಿ 09.00 ಗಂಟೆಯಿಂದ  ದಿನಾಂಕ:12/02/2023 ರಂದು ಮುಂಜಾನೆ 05.30 ಗಂಟೆಯ ಮಧ್ಯದಲ್ಲಿ ಅವಧಿಯಲ್ಲಿ ನಾವು ಯಾರೂ ಮನೆಯಲ್ಲಿ ಇಲ್ಲದ ಸಮಯದಲ್ಲಿ ಯಾರೋ ಕಳ್ಳರು ನನ್ನ ಮನೆಯ ಬಾಗಿಲು ಮತ್ತು ಅಲಮಾರಿಯ ಕೀಲಿ ಮುರಿದು ಅಲಮಾರಿಯಲ್ಲಿಟ್ಟಿದ್ದ  ಈ ಮೇಲ್ಕಂಡ ಬಂಗಾರದ ಆಭರಣ ಮತ್ತು ನಗದು ಹಣ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಾರಣ ಮನೆಯ ಬಾಗಿಲು ಮುರಿದು ಒಳಗಡೆ ಪ್ರವೇಶಮಾಡಿ ಅಲಮಾರಿಯ  ಕೀಲಿ ಮುರಿದು ಅಲಮಾರಿಯಲ್ಲಿಟ್ಟಿದ ಹಣ ಮತ್ತು ಬಂಗಾರ ಆಭರಣಗಳು ಕಳ್ಳತನ ಮಾಡಿಕೊಂಡು ಹೋದ ಕಳ್ಳರನ್ನು ಪತ್ತೆ ಹಚ್ಚಿ ಅವರ ಮೇಲೆ ಕಾನೂನು ಕ್ರಮ ಜರುಗಿಸಿ ಕಳುವಾದ ಹಣ ಮತ್ತು ಬಂಗಾರ ಸಾಮಾನುಗಳು ಮರಳಿಸಿ ಕೊಡಬೇಕೆಂದು ಕೊಟ್ಟ ಇತ್ಯಾದಿ ದೂರಿನ ಸಾರಾಂಶ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 13-02-2023 12:34 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080