ಅಭಿಪ್ರಾಯ / ಸಲಹೆಗಳು

ಸಂಚಾರಿ ಪೊಲೀಸ್‌ ಠಾಣೆ-2 :- ದಿನಾಂಕ 12/01/2023 ರಂದು 04:45 ಪಿ.ಎಮ್ ಕ್ಕೆ ಶ್ರೀ ಜನಾರ್ಧನ ತಂದೆ ವಸಂತರಾವ್ ಉಪ್ಪಲ್ಲಿ ಸಾ; ಪ್ರಶಾಂತ ನಗರ [ಎ] ಶಹಾಬಾದ ರೋಡ ಕಲಬುರಗಿ, ಇವರು ಪೊಲೀಸ್ ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಟೈಪ್ ಮಾಡಿದ ಫಿರ್ಯಾದಿ ಅರ್ಜಿಯನ್ನು ಹಾಜರು ಪಡಿಸಿದ್ದುಸಾರಂಶವೆನೆಂದರೆ, ದಿನಾಂಕ 08/01/2023 ರಂದು ಫಿರ್ಯಾಧಿ ಮಗನಾದ ಜಯಸೂರ್ಯ ಕುರುಡನಾಗಿದ್ದು ಮನೆ ಮುಂದೆ ಓಡಾಡುವಾಗ ಬೆಳಿಗ್ಗೆ 10:30 ಗಂಟೆಗೆ ಒಂದು  ಮೋಟಾರ ಸೈಕಲ ನಂ KA-32 ED-2938  ನೇದ್ದರ ಸವಾರ ಶ್ರೀಧರ ಈತನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾಧಿ ಮಗನಾದ ಜಯಸೂರ್ಯ ಈತನಿಗೆ ಭಾರಿಗಾಯಗೊಳಿಸಿ ತನ್ನ ಮೋಟಾರ ಸೈಕಲ ಸಮೇತ ಓಡಿ ಹೋಗಿದ್ದು ಇರುತ್ತದೆ, ಕಾರಣ ಮೋಟಾರ ಸೈಕಲ ನಂ  KA-32 ED-2938  ನೇದ್ದರ ಸವಾರ ಶ್ರೀಧರ ಈತನ ವಿರುದ್ದ ಕಾನೂನು ಕ್ರಮ ಕೈಕೊಳ್ಳಬೇಕು ಎಂದು ಫಿರ್ಯಾದಿ ಕೊಟ್ಟ ಅರ್ಜಿಯ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಚೌಕ ಪೊಲೀಸ್‌ ಠಾಣೆ :- ದಿನಾಂಕ: 12/01/2023 ರಂದು ಮಧ್ಯಾಹ್ನ 12:35 ಗಂಟೆ ಸುಮಾರಿಗೆ  ನಮ್ಮ ದೊಡ್ಡಪ್ಪ ಕಾಶಿನಾಥ ಇವರು ನಮಗೆ ಸಂಬಂಧಿಸಿದ ಸ್ಟೇ ಇದ್ದ  ಒಂದು ಶೆಟರ ಕೀಲಿ ಮುರಿದು ಒಳಗಡೆ ಹೋಗಿದ್ದನ್ನು ನೋಡಿ ನಾನು ಅವರಿಗೆ ನಮ್ಮ ಶೆಟರ ಅಂಗಡಿ ಕೀಲಿ ಯಾಕೇ ಮುರಿದ್ದೀರಿ ಅಂತಾ ಕೇಳಿದಾಗ ಕಾಶಿನಾಥ ಇವರು ನನಗೆ ಕೋರ್ಟನಲ್ಲಿ ಹೆಸರಿನಂತೆ ಆರ್ಡರ ಆಗಿರುತ್ತದೆ ಎಂದು ಹೇಳಿದರು. ಆಗ ನಾನು ಅವರಿಗೆ ಇನ್ನೂ ನ್ಯಾಯಾಲಯದ ವಿಚಾರಣೆಯಲ್ಲಿ  ಇರುತ್ತದೆ. ಮತ್ತು ಯಾರು ಹೋಗದಂತೆ ಸ್ಟೇ ಇರುತ್ತದೆ ಅಂತಾ ಹೇಳಿದಾಗ ಕಾಶಿನಾಥ ಇವರು ನನಗೆ ಇಲ್ಲಿಂದ ಹೊರೆಗೆ ಹೋಗು ಅಂತಾ ಹೇಳಿದಾಗ ನಾನು, ಶೆಟರನಿಂದ ಹೊರಕ್ಕೆ ಹೋಗುವಾಗ ಕಾಶಿನಾಥ ಇವರು ನನಗೆ ಭೋಸಡಿ ಮಗನೇ ಎಂದು ಅವಾಚ್ಯವಾಗಿ ಬೈದು ತಡೆದು ನಿಲ್ಲಿಸಿ ಎದೆಯ ಮೇಲಿನ ಅಂಗಿ ಹಿಡಿದು ಎಳೆದಾಡಿ ಕೈ ಮುಷ್ಟಿ ಮಾಡಿ ನನ್ನ ಎದೆಯ ಮೇಲೆ ಹೊಡೆದು  ಗುಪ್ತಗಾಯಗೊಳಿಸಿದರು. ಮತ್ತು ಕಾಶಿನಾಥ ಇವರು ತಮ್ಮ ಉಗುರುನಿಂದ  ನನ್ನ ಬಲಗೈ ಕಿರುಬೆರಳಿಗೆ, ಉಂಗುರು ಬೆರಳಿಗೆ, ಮಧ್ಯ ಬೆರಳಿಗೆ, ಬಲಕೆನ್ನೆಗೆ ಚೂರಿ ರಕ್ತಗಾಯಗೊಳಿಸಿದರು. ಮತ್ತು ಇಲ್ಲಿಂದ ಹೋಗದಿದ್ದರೆ ನಿನಗೆ ಮತ್ತು ನಿಮ್ಮ ತಾಯಿ ತಂದೆಗೆ  ಜೀವ ಸಹಿತ ಬಿಡುವುದಿಲ್ಲಾ ಎಂದು ಜೀವ ಭಯ ಹಾಕಿದರು. ಈ ಘಟನೆ ನಮ್ಮ ತಾಯಿ ಲಲಿತಾಭವಾನಿ ಮತ್ತು ತಂದೆ ಶರಣಭಾನು ತಂದೆ ನಾರಾಯಣರಾವ ಘಂಟೋಜಿ ಇವರುಗಳು ನೋಡಿರುತ್ತಾರೆ. ಕಾರಣ ನನಗೆ ತಡೆದು ನಿಲ್ಲಿಸಿ ಅವಾಚ್ಯ ಬೈದು ಕೈಯಿಂದ ಹೊಡೆದು ಉಗುರುನಿಂದ ಚೂರಿನ  ಕಾಶಿನಾಥ ತಂದೆ ನಾರಾಯಣರಾವ ಘಂಟೋಜಿ ಸಾ; ಮನೆ ನಂಬರ ೮-೪೯೬/೨ ಪ್ಲೋರ ಘಂಟೋಜಿ ಬಿಲ್ಡಂಗ ಪೋರ್ಟ ರೋಡ ಸುಪರ ಮಾರ್ಕೆಟ ಕಲಬುರಗಿ ಇವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಎಂದು ಫಿರ್ಯಾದಿ ಕೊಟ್ಟ ಅರ್ಜಿ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಸ್ಟೇಷನ್‌ ಬಜಾರ ಪೊಲೀಸ್‌ ಠಾಣೆ :- ದಿನಾಂಕ:11/01/2023 ರಂದು ಸಂಜೆ  04:30 ಗಂಟೆಯಲ್ಲಿ ನನ್ನ ವಾಹನವನ್ನು ತೆಗೆದುಕೊಂಡು ಬಂದು ಕೆ.ಕೆ.ಆರ್.ಡಿ.ಬಿ ಕಛೇರಿಯ ಪಾರ್ಕಿಂಗ್ ಸ್ಥಳದಲ್ಲಿ ನನ್ನ HERO SPLENDOR PLUS BS III REG NO KA-32EE-4137, CHASISNO-MBLHA10AMD9J10405, ENG NO- HA10EJD9J13191 COLOUR – BLACK, MODEL—2013, VALUVE-20000/- ದ್ವಿ ಚಕ್ರ ನಿಲ್ಲಿಸಿ, ನನ್ನ ವೈಯಕ್ತಿಕ ಕೆಲಸಕ್ಕಾಗಿ ನಾನು ಕೆ.ಕೆ.ಆರ್.ಡಿ.ಬಿ ಕಛೇರಿಯ ಒಳಗಡೆ ಹೋಗಿರುತ್ತೇನೆ. ನಂತರ ಸಂಜೆ 05:00 ಗಂಟೆಗೆ ವಾಪಸ್ಸು ಬಂದು ನೋಡಿದಾಗ ಸದರಿ ಸ್ಥಳದಲ್ಲಿ ನಿಲ್ಲಿಸಿದ್ದ ನನ್ನ ವಾಹನ ಇರಲಿಲ್ಲ. ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂದು ಪೀರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸ್ಟೇಷನ್‌ ಬಜಾರ ಪೊಲೀಸ್‌ ಠಾಣೆ :- ದಿನಾಂಕ: 12/01/2023 ರಂದು ರಾತ್ರಿ 8:00 ಗಂಟೆಗೆ ಜೀಮ್ಸ್  ಆಸ್ಪತ್ರೆಯಿಂದ ಈ ಮೊದಲು ಅಸಾಲ್ಟ್ ಅಂತ ಎಮ್ ಎಲ್ ಸಿ ವಸುಲಾಗಿದ್ದರ ಮೇರೆಗೆ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಫಿರ್ಯಾದಿ ಶ್ರೀ ನಾಗಪ್ಪಾ ತಂದೆ ಸಂಗಣ್ಣಾ ಸಿಂಗೆ ವಯ|| 30 ವರ್ಷ ಜಾ|| ಎಸ್,ಸಿ ಉ|| ಕೂಲಿಕೆಲಸ ಸಾ|| ದುದನಿ ತಾ|| ಅಕ್ಕಲಕೋಟ (ಎಮ್.ಹೆಚ್) ಈತನಿಗೆ ವಿಚಾರಿಸಲು ಯೋಚನೆ ಮಾಡಿ ನಂತರ ದೂರು ಕೊಡುವುದಾಗಿ ತಿಳಿಸಿದ್ದ ಮೇರೆಗೆ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಫಿರ್ಯಾದಿಗೆ ವಿಚಾರಣೆ ಮಾಡಿ ಹೇಳಿಕೆ ಪಡೆದುಕೊಂಡು ಮರಳಿ ಠಾಣೆಗೆ   ರಾತ್ರಿ 9:15 ಗಂಟೆಗೆ ಬಂದಿದ್ದು, ಫಿರ್ಯಾದಿ ಹೇಳಿಕೆಯ ಸಾರಾಂಶವೇನೆಂದರೆ, ನಾನು ಇಗ ಸುಮಾರು 4 ವರ್ಷಗಳಿಂದ ದುದನಿಯ ಕಲಬುರಗಿ ನಗರಕ್ಕೆ ಕೂಲಿಕೆಲಸಕ್ಕಾಗಿ ದಿನಾಲೂ ಬಂದು ಹೋಗುವುದು ಮಾಡುತ್ತಿರುತ್ತೆನೆ. ನಾನು ಮತ್ತು ನನ್ನ ಅಣ್ಣನಾದ ದತ್ತ ಇಬ್ಬರದು ಇಗ ಸುಮಾರು 12 ವರ್ಷಗಳ ಹಿಂದೆ ಮದುವೆಯಾಗಿದ್ದು ನನ್ನ ಮತ್ತು ನನ್ನ ಅಣ್ಣನ ಹೆಂಡತಿಯ ಗ್ರಾಮ ಕುಡಕಿ ಗ್ರಾಮವಾಗಿದ್ದು, ಇಗ 4 ವರ್ಷಗಳ ಹಿಂದೆ ನನ್ನ ಅಣ್ಣನ ಹೆಂಡತಿ ಗಂಡನೊಂದಿಗೆ ಜಗಳವಾಡಿ ತನ್ನ ತವರು ಮನೆಯಾದ ಡಬರಾಬಾದ (ಹಾ.ವ) ಯಲ್ಲಿ ತಂದೆ-ತಾಯಿಯೊಂದಿಗೆ ವಾಸವಾಗಿರುತ್ತಾಳೆ. ನನ್ನ ಅಣ್ಣನಿಗೆ ಒಬ್ಬಳು 5 ವರ್ಷದ ಹೆಣ್ಣು ಮಗಳಿದ್ದು ಡಬರಾಬಾದ ನಲ್ಲಿರುವ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಾ ಇರುತ್ತಾಳೆ. ನಾನು ಮತ್ತು ನನ್ನ ತಾಯಿಯಾದ ಮಲ್ಕಮ್ಮಾ ಇಬ್ಬರು ಕುಡಿ ನನ್ನ ಕಾಕಿಯಾದ ಗುಂಡಮ್ಮಾ ಇವಳು ಸುಲ್ತಾನಪೂರದಲ್ಲಿರುವುದರಿಂದ ಅಲ್ಲಿಗೆ ಹೋಗಿ ಮಾತಾಡಿ ನನ್ನ ಅಣ್ಣನ ಹೆಂಡತಿ ಅಂಬಿಕಾ ಮತ್ತು ಅವಳ ಮಗಳಿಗೆ ಮಾತಾಡಿಸಿಕೊಂಡು ಬರೋಣ ಅಂತಾ ಡಬರಾಬಾದಕ್ಕೆ ಹೊಗಿ ನನ್ನ ಅಣ್ಣನ ಮಗಳು ಶಾಲೆಗೆ ಹೊಗಿರುವ ವಿಷಯ ತಿಳಿದು ಶಾಲೆಗೆ ಹೊಗಿ ನಾವು ಮಾತನಾಡಿಸಿ ಮರಳಿ ನಮ್ಮ ಊರಿಗೆ ಹೋಗಿರುತ್ತೆವೆ. ಹೀಗಿದ್ದು ದಿನಾಂಕ: 10.01.2023 ರಂದು ನಾನು ಎಂದಿನಂತೆ ಕೆಲಸಕ್ಕಾಗಿ ಕಲಬುರಗಿ ನಗರದ ರೈಲ್ವೇ ಸ್ಟೇಷನ ಹತ್ತಿರದ ಸಿಟಿ ಬಸ್ ಸ್ಟ್ಯಾಂಡ ಹತ್ತಿರ ಕೂಲಿಕೆಲಸಕ್ಕಾಗಿ ಕಾಯುತ್ತಾ ನಿಂತಾಗ ಬೆಳಿಗ್ಗೆ 11.30 ಗಂಟೆ ಸುಮಾರಿಗೆ ನನ್ನ ಅತ್ತಿಗೆಯ ತಂದೆಯಾದ ಶಿವಪುತ್ರ ಇತನು ನನಗೆ ಬಂದು ಮಾತನಾಡಿಸಿ ನಂತರ ಆತನ ಮಗನಾದ ಬಸವರಾಜ ಹಾಗೂ ಆತನೊಂದಿಗೆ ಇನ್ನು ಇಬ್ಬರು ಬಂದು ನಿನ್ನೊಂದಿಗೆ ಮಾತನಾಡವುದಿದೆ ನಮ್ಮೊಂದಿಗೆ ನಡೆ ಅಂತಾ ಬಂದಾಗ ನಾನು ಬರುವುದಿಲ್ಲಾ ಎಂದು ಎಷ್ಟು ಹೇಳಿದರೂ ಕೇಳದೆ ಒತ್ತಾಯ ಪೂರ್ವಕವಾಗಿ ದ್ವೀ-ಚಕ್ರದ ವಾಹನ ಮೇಲೆ ಕರೆದುಕೊಂಡು ಡಬರಾಬಾದ ಶಾಲೆಗೆ ಕರೆದುಕೊಂಡು ಹೋಗಿ ಅಲ್ಲಿನ ಶಿಕ್ಷಕಿಯೊಂದಿಗೆ ಮಾತಾಡಿ ನನ್ನ ಮೊಮ್ಮಗಳಿಗೆ ಮಾತನಾಡಿಸಿರುತ್ತಾರೋ ಹೇಗೆ ಅಂತಾ ಶಿಕ್ಷಕಿಗೆ ಕೇಳಿದಾಗ ಅವರು ಹೌದು ಬಂದು ಮಾತನಾಡಿಸಿ ಹೊಗಿರುತ್ತಾರೆ ಅಂತಾ ಅಂದರು. ಆಗ ನಂತರ ಡಬರಾಬಾದ ಆಚೆ ಊರು ಹೊರಗೆ ರೈಲ್ವೆ ಪಟ್ರಿ ಸಮೀಪ ಗಿಡದ ಕೆಳಗೆ ನನಗೆ ಕೂಡಿಸಿ ಸಾಯಂಕಾಲ 6 ಗಂಟೆಯವರೆಗೆ ಕೂಡಿಸಿ ಇಸ್ಪೇಟ್ ಆಡ ಆಡುತ್ತಾ (5 ಜನರು) ಕುಳಿತರು ಹಾಗೂ ನನ್ನ ತಾಯಿಗೆ ಫೋನ ಮಾಡಿ ನನ್ನ ತಾಯಿಗೆ ಮತ್ತು ನನ್ನ ಅಣ್ಣನಾದ ದತ್ತಾ ಇವರಿಗೆ ಇಲ್ಲಿಗೆ ಬಾ ಅಂತಾ ತಿಳಿಸಿದರು. ನೀವು ಡಬರಾಬಾದಕ್ಕೆ ಬಂದರೆ ಮಾತ್ರ ನಿನ್ನ ಮಗನಾದ ನಾಗಪ್ಪನಿಗೆ ಬಿಡುತ್ತೆವೆ ಅಂತಾ ಹೇಳಿದರು ನಂತರ ನನಗೆ ಕಲಬುರಗಿ ನಗರದ ರಾಮಮಂದೀರ ಹತ್ತಿರ ವೈನಶಾಪಗೆ ಕರೆದುಕೊಂಡು ಬಂದು ಬಸವರಾಜ ಹಾಗೂ ಆತನೊಂದಿಗೆ ಇನ್ನೂ 4-5 ಜನರು ಎಲ್ಲರೂ ವೈನಶಾಪನಲ್ಲಿ ಮದ್ಯ ಸೇವಿಸಿ ನನಗೂ ಕೂಡಾ ಜಬರದಸ್ತಿಯಿಂದ ಮದ್ಯಪಾನ ಕುಡಿಸಿ ನಂತರ ರಾತ್ರಿ 8 ಗಂಟೆಯ ಸುಮಾರಿಗೆ ಡಬರಾಬಾದದ ಬಸವರಾಜ ಇತನ ಮನೆಗೆ ಕರೆದುಕೊಂಡು ಹೋಗಿ ಬಸವರಾಜ ಇತನೊಂದಿಗೆ ಬಂದಿದ್ದ ಒಬ್ಬ ವ್ಯಕ್ತಿ (ಹೆಸರು ಗೊತ್ತಿಲ್ಲಾ) ಕೈಯಿಂದ ನನ್ನ ಬಾಯಿಯ ಮೇಲೆ ಹೊಡೆದನು. ನಂತರ ಎಲ್ಲರೂ ಇತನಿಗೆ ಇಲ್ಲಿ ಹೊಡೆದರೆ ಜನರಿಗೆ ಗೊತ್ತಾಗುತ್ತದೆ ಅಂತಾ ಅಂದು ಜೇವರಗಿ ರಸ್ತೆಯ ಖುಲ್ಲಾ ಜಾಗೆಯಲ್ಲಿ ಕರೆದುಕೊಂಡು ಹೋಗಿ ಎಲ್ಲರೂ 5 ಜನ ಸೇರಿ ಕೈಯಿಂದ, ಬಡಿಗೆಯಿಂದ ಮೈತುಂಬಾ ಕಾಲಿನ ಮೇಲೆ, ತೊಡೆ ಮೇಲೆ, ಬೆನ್ನು ಮೇಲೆ, ಕೈ-ಕಾಲಿನ ಮೇಲೆ ಹೊಡೆದು ಗುಪ್ತಗಾಯಪಡಿಸಿದ್ದು, ಹಾಗೂ ಇನ್ನೊಮ್ಮೆ ನನ್ನ ಅಕ್ಕನ ಮಗಳಿಗೆ ಮಾತನಾಡಲು ನಮ್ಮ ಊರಿಗೆ ಬಂದರೆ ನಿಮ್ಮೆಲ್ಲರಿಗೂ ಹೊಡೆಯುತ್ತೆವೆ ಅಂತ ಅವಾಚ್ಯವಾಗಿ ಬೈದು ಪುನಃ ಡಬರಾಬಾದಕ್ಕೆ ರಾತ್ರಿ 12 ಗಂಟೆ ಸುಮಾರಿಗೆ ಮನೆಗೆ ಕರೆದುಕೊಂಡು ಹೋಗಿ ಬಸವರಾಜ ಇತನ ಮನೆಯಲ್ಲಿಯೇ ಕೂಡಿಸಿ ಮರುದಿನ ದಿನಾಂಕ: 11/01/2023 ರಂದು ಬೆಳಿಗ್ಗೆ ಸ್ನಾನ ಮಾಡು ಅಂತಾ ಅಲ್ಲಿಯೇ ಸ್ನಾನ ಮಾಡಿಸಿ ಬೇರೆ ಬಟ್ಟೆ ನೀಡಿ ಪಟ್ಟಣಕರ್ ಕ್ಲಿನೀಕ್ ಜಫ್ರಾಬಾದಕ್ಕೆ ಕರೆದುಕೊಂಡು ಹೋಗಿ ಉಪಚಾರ ಮಾಡಿಸಿ ಪುನಃ ಬಸವರಾಜ ಇತನ ಮನೆಗೆ ಕರೆದುಕೊಂಡು ಹೋಗಿ ಸಾಯಂಕಾಲ 6 ಗಂಟೆಯವರೆಗೆ ಇಟ್ಟು ನಂತರ ಸಾಯಂಕಾಲ 6.30 ಗಂಟೆಗೆ ಕಲಬುರಗಿಯ ರೈಲ್ವೇ ಸ್ಟೇಷನ ಹತ್ತಿರ ನನ್ನ ಅತ್ತಿಗೆ ಅಂಬಿಕಾ, ಅಂಬಿಕಾ ತಾಯಿಯಾದ ಮಡೆವ್ವಾ ಹಾಗೂ ಅವಳ ಸೊಸೆ(ಬಸವರಾಜ ಇತನ ಹೆಂಡತಿ) ಕೂಡಿ ತಂದು ನನ್ನ ತಾಯಿಗೆ ತಂದು ಒಪ್ಪಿಸಿದ್ದು ನಾನು ಉಪಚಾರ ಕುರಿತು ನನ್ನ ತಾಯಿಯು ಕಲಬುರಗಿ ಸರ್ಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತಾರೆ. ಕಾರಣ ನನಗೆ ಜಬರದಸ್ತಿಯಿಂದ ಕರೆದುಕೊಂಡು ಹೋಗಿ, ಕೂಡಿ ಹಾಕಿ, ಅವಾಚ್ಯವಾಗಿ ಬೈದು, ಕೈಯಿಂದ, ಕಟ್ಟಿಗೆಯಿಂದ ಹೊಡೆದು ಗುಪ್ತಗಾಯಪಡಿಸಿದ ಮೇಲ್ಕಂಡರವರ ವಿರುದ್ದ ಕಾನೂನು ಕ್ರಮ ಕೈಗೋಳ್ಳಬೇಕು ಎಂದು ಫಿರ್ಯಾದಿ ಕೊಟ್ಟ ಹೇಳಿಕೆಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

 

 

ಸಂಚಾರಿ ಪೊಲೀಸ್‌ ಠಾಣೆ-2 :- ದಿನಾಂಕ: 12/01/2023 ರಂದು 07:15 ಪಿ.ಎಮ್ ಕ್ಕೆ ಶ್ರೀ. ಮಹ್ಮದ ರಫೀಕ್ ತಂದೆ ದಸ್ತಗಿರ ಸಾಬ ಮೆವಡಿ ವಯ: 50 ವರ್ಷ ಜಾ: ಮುಸ್ಲಿಂ ಉ: ಒಕ್ಕಲತನ ಸಾ: ಅವರಾದ [ಬಿ] ತಾ:ಜಿ: ಕಲಬುರಗಿ ಇವರು ಠಾಣೆಗೆ ಹಾಜರಾಗಿ ಫಿರ್ಯಾದಿ ಅರ್ಜಿ ಸಲ್ಲಿಸಿದ್ದು ಸಾರಂಶವೆನೆಂದರೆ, ನಮ್ಮೂರಿನಲ್ಲಿ ಶ್ರೀ ವೀರಭದ್ರೇಶ್ವರ ಜಾತ್ರೆಯು ಇರುವುದರಿಂದ ಜಾತ್ರೆಯ ಪರವಾನಿಗೆ ಪಡೆದುಕೊಳ್ಳುವ ಕುರಿತು ದಿನಾಂಕ-04/01/2023 ರಂದು ಮದ್ಯಾಹ್ನ 01-00 ಗಂಟೆಗೆ ನಾನು ನನ್ನ ಮೋಟಾರ ಸೈಕಲ ಮೇಲೆ ನಾಗರಾಜ ಶಿಲವಂತನಿಗೆ ಹಾಗೂ ಜಗನ್ನಾಥ ಹರಸೂರ ಇವರು ತಮ್ಮ ಮೋಟಾರ ಸೈಕಲ ನಂ ಕೆಎ-32 ಇ.ಯು-9873 ಇದರ ಮೇಲೆ, ಸೋಮನಾಥ ತಂದೆ ರೇವಣಸಿದ್ದಪ್ಪಾ ಇವರು ತಮ್ಮ ಸೈನ್ ಮೋಟಾರ ಸೈಕಲ ನಂ ಕೆಎ-03 ಹೆಚ್.ಎಫ್-1093 ಇವರ ಮೇಲೆ ನಮ್ಮೂರಿನಿಂದ ಕಲಬುರಗಿ ಕಡೆಗೆ ಎಸ್.ಬಿ ಪಾಟೀಲ ಸವಳ ಕಾರ್ಖಾನೆ ಎದುರುಗಡೆ ಇಟ್ಟಂಗಿ ಭಟ್ಟಿ ಹತ್ತಿರ ಮದ್ಯಾಹ್ನ 01:30 ಗಂಟೆ ಸುಮಾರಿಗೆ ಬರುತ್ತಿರುವಾಗ ನಮ್ಮ ಮುಂದೆ ಇರುವ ಸೋಮನಾಥ ಹತ್ತಿಕಣ್ಣಿ ಈತನು ಒಮ್ಮಿಂದೊಮಿಲೆ ಅತಿವೇಗದಿಂದ ಮತ್ತು ಅಲಕ್ಷತನದಿಂದ ನಡೆಸಿದವನೆ ಜಗನ್ನಾಥ ಹರಸೂರ ಇವರ ಮೋಟಾರ ಸೈಕಲಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರೂ ಮೋಟಾರ ಸೈಕಲ ಮೇಲೆ ಬಿದಿದ್ದು ಜಗನ್ನಾಥ ಹರಸೂರ ಈತನ ಬೆನ್ನಿನ ನಡುವಿನ ಮುಖ್ಯ ಮೊಳೆ ಬೆಂಡಾಗಿ ಭಾರಿಗಾಯವಾಗಿ ಸರಿಯಾಗಿ ಕುಡಲು ಬರಲಿಲ್ಲಾ ಮತ್ತು ಬಲಗೈ ಮೋಳಕೈಗೆ ರಕ್ತಗಾಯವಾಗಿದ್ದು, ಸೋಮನಾಥನಿಗೂ ಕೂಡಾ ಅಲಲ್ಲಿ ಗುಪ್ತಗಾಯವಾಗಿದ್ದು ಮುಂದೆ ನಾವು ಜಗನಾಥ ಹರಸೂರ ಇವರಿಗೆ ಉಪಚಾರ ಕುರಿತು ಡಾ|| ವಿನಯ ಪಾಟೀಲ ಇವರ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದೇವು ನಂತರ 02 ದಿವಸ ಬಿಟ್ಟು ಅವರಿಗೆ ಮನೆಗೆ ಕರೆತಂದು ನಂತರ ಅವರಿಗೆ ವಿಪರಿತ ನೋವು ಆಗುತ್ತಿರುವುದರಿಂದ ದಿನಾಂಕ-09/01/2023 ರಂದು ಹೈದ್ರಾಬಾದಿನ ಯಶೋಧಾ ಆಸ್ಪತ್ರೆಯಲ್ಲಿ ಅವರನ್ನು ನಾನು ಅವರ ಹೆಂಡತಿ ಲಕ್ಷ್ಮಿ ಕೂಡಿಕೊಂಡು ಸೇರಿಕೆ ಮಾಡಿರುತ್ತೇವೆ, ಈಗ ಅವರಿಗೆ ಬೆನ್ನಿನ ಮೋಳೆಯ ಆಪರೇಶನ ಆಗಿ ಒಳರೋಗಿಯಾಗಿ ಉಪಚಾರ ಪಡೆಯುತ್ತಿದ್ದು ಅವರು ನನಗೆ ಈ ವಿಷಯದಲ್ಲಿ ಪೊಲೀಸ್ ಠಾಣೆಗೆ ಹೋಗಿ ಕೇಸು ಕೊಡಲು ತಿಳಿಸದಕ್ಕೆ ಈಗ ತಡ ಮಾಡಿ ಬಂದು ಈ ವಿಷಯದಲ್ಲಿ ಸೋಮನಾಥ ಈತನ ಮೇಲೆ ಕಾನೂನು ಪ್ರಕಾರ ಕ್ರಮ ಕೈಕೊಳ್ಳಬೇಕೆಂದು ಎಂದು ಫೀರ್ಯಾದಿ ಕೊಟ್ಟ ಅರ್ಜಿ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

 

 

ವಿಶ್ವವಿದ್ಯಾಲಯ ಪೊಲೀಸ್‌ ಠಾಣೆ :- ದಿನಾಂಕ: 11/01/2023 ರಂದು ಸಾಯಂಕಾಲ 05:30 ಗಂಟೆ ಸುಮಾರಿಗೆ ಸದರಿ ಆರೋಪಿಯು ಫಿರ್ಯಾದಿ ಮನೆಯ ಬಾಗಿಲ ಹತ್ತಿರ ನಿಂತಿದ್ದ ಫಿರ್ಯಾದಿ ಬಟ್ಟೆ ಒಗೆಯುವಾಗ ಬಟ್ಟೆ ಒಗೆಯುವಾಗ ಗೌಸ್ ಈತನು ನಮ್ಮ ಮನೆಯೊಳಗೆ ಹೋಗಿ ಮನೆಯಲ್ಲಿದ್ದ ೧) 3 ಗ್ರಾಂ ಬಂಗಾರದ ಉಂಗುರ ಅ.ಕಿ-15,000/-ರೂ, ೨) 7 ಗ್ರಾಂ ಬಂಗಾರದ ಒಂದು ಜೊತೆ ಕಿವಿಯೊಲೆ ಅ.ಕಿ-35,000/-ರೂ, ೩) ಒಂದು ರೆಡಮಿ ಮೊಬೈಲ್ ಅ.ಕಿ-10,000/-ರೂ, ೪) ರೊಕ್ಕ ಹಾಕಿದ ಚಿಲ್ಲರೆ ಹಣ ಅಂದಾಜು 1000/-ರೂ ನೇದ್ದವುಗಳನ್ನು ಕಳ್ಳತನ ಮಾಢಿಕೊಂಡು ಹೋಗಿರುತ್ತಾನೆ ಅಂತಾ ಫಿರ್ಯಾದಿ ಬಂದು ದೂರು ನೀಡಿದ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಇತ್ತೀಚಿನ ನವೀಕರಣ​ : 14-01-2023 12:46 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080