ಅಭಿಪ್ರಾಯ / ಸಲಹೆಗಳು

ಫರಹತಾಬಾದ ಪೊಲೀಸ ಠಾಣೆ :-  ದಿನಾಂಕ:11-12-2022 ರಂದು 2:00 ಪಿಎಮ್ ಕ್ಕೆ ಜಿಜಿಹೆಚ್ ಕಲಬುರಗಿಯಲ್ಲಿ ಶ್ರೀ ದುಂಡಯ್ಯಸ್ವಾಮಿ ತಂ/ಗುರುಪಾದಯ್ಯ ಸ್ಥಾವರಮಠ ಸಾ||ಹಾಗರಗುಂಡಗಿ ರವರು ನೀಡಿದ ಹೇಳಿಕೆ ಫಿರ್ಯಾದಿಯ ಸಾರಾಂಶವೇನೆಂದರೆ, ದಿನಾಂಕ:11-12-2022 ರಂದು ಬೆಳೆಗ್ಗೆ 9:30 ಗಂಟೆಯ ಸುಮಾರಿಗೆ ನಾನು ಶರಣಬಸವೇಶ್ವರ ಗುಡಿಗೆ ಹೋಗಿ ಮರಳಿ ಮನೆಗೆ ಬರುತ್ತಿರುವಾಗ ದಾಸೋಹದವರ ಅಂಗಡಿಯ ಮುಂದೆ ರಸ್ತೆಯ ಮೇಲೆ ತೋಸೀಪ್ ತಂದೆ ಅಕ್ಬರ ಟಪ್ಪಾ ಸಾ||ಹಾಗರಗುಂಡಗಿ ಈತನು ನನಗೆ ತಡೆದು ನಿಲ್ಲಿಸಿ, ನೀನು ನನ್ನ ತಾಯಿಯೊಂದಿಗೆ ಸಲುಗೆಯಿಂದ ನಡೆದುಕೊಳ್ಳುತ್ತಿಯಾ ರಂಡಿ ಮಗನೆ ಅಂದವನೆ ಕೊಲೆ ಮಾಡುವ ಉದ್ದೇಶದಿಂದ ತನ್ನ ಕೈಯಲ್ಲಿದ್ದ ಚಾಕುವಿನಿಂದ ನನ್ನ ಹೊಟ್ಟೆಯಲ್ಲಿ ಚುಚ್ಚಲು ಬಂದಾಗ ನಾನು ತಪ್ಪಿಸಿಕೊಂಡು ಎಡಕ್ಕೆ ತಿರುಗಿದಾಗ ಆ ಚಾಕು ನನ್ನ ಬೆನ್ನಿನ ಬಲಭಾಗಕ್ಕೆ ಚುಚ್ಚಿ ರಕ್ತ ಶ್ರಾವ ಆಗುತ್ತಿದ್ದಾಗ, ತೋಸೀಪನು ಪುನಃ ನನಗೆ ಚಾಕುವಿನಿಂದ ಚುಚ್ಚಲು ಬಂದಾಗ ಅಂಗಡಿಯ ಹತ್ತಿರ ಕುಳಿತಿದ್ದ 1) ಗುಸನಪ್ಪ ತಂದೆ ಚಂದಪ್ಪ ಮ್ಯಾಕೇರಿ 2) ಮಹಾದೇವಪ್ಪ ತಂದೆ ಸೀತಪ್ಪ ಸೀರಸಗಿ ರವರು ನನಗೆ ತೋಸಿಪ ಚಾಕುವಿನಿಂದ ಚುಚ್ಚವುದರಿಂದ ಬಿಡಿಸಿರುತ್ತಾರೆ. ಆಗ ತೋಸಿಪನು ಈ ಸಾರಿ ಉಳಿದುಕೊಂಡಿ ಸೂಳೆಮಗನೆ ನೀನಗೆ ಜೀವಸಹಿತ ಬಿಡುವುದಿಲ್ಲ ಅಂತ ಜೀವದ ಬೆದರಿಕೆ ಹಾಕಿ ಕೈಯಲ್ಲಿ ಚಾಕು ಹಿಡಿದುಕೊಂಡು ಹೋಗಿರುತ್ತಾನೆ. ನನ್ನ ಬೆನ್ನಿಗೆ ಭಾರಿ ರಕ್ತಗಾಯವಾಗಿದ್ದರಿಂದ ಮನೆಯಲ್ಲಿದ್ದ ನನ್ನ ಮಗ ಶರಣಯ್ಯ ಈತನು ನನಗೆ ಚಿಕಿತ್ಸೆ ಕುರಿತು ಖಾಸಗಿ ಜೀಪನಲ್ಲಿ ಹಾಕಿಕೊಂಡು ಜಿಜಿಹೆಚ್ ತಂದು ಸೇರಿಕೆ ಮಾಡಿರುತ್ತಾನೆ. ಕಾರಣ ತೋಸಿಫ್ ತಂ/ಅಕ್ಬರ ಟಪ್ಪ ಈತನು ತನ್ನ ತಾಯಿಯೊಂದಿಗೆ ನಾನು ಸಲುಗೆಯಿಂದ ಮಾತನಾಡಿದ್ದೇನೆಂದು ಕೊಲೆ ಮಾಡುವ ಉದ್ದೇಶದಿಂದ, ಚಾಕುವಿನಿಂದ ಚುಚ್ಚಿ ರಕ್ತಗಾಯಪಡಿಸಿದವನ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತ ನೀಡಿದ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸಂಚಾರಿ ಪೊಲೀಸ ಠಾಣೆ -1 :- ದಿನಾಂಕ 11-12-2022 ರಂದು ಬೆಳಿಗ್ಗೆ 11-00 ಗಂಟೆಗೆ ಖಾಸಗಿ ಯುನೈಟೆಡ ಆಸ್ಪತ್ರೆಯ ಸಿಬ್ಬಂದಿಯವರು ಠಾಣೆಗೆ ಪೋನ ಮಾಡಿ ಪದ್ಮಣ್ಣಾ ಇವರು ರಸ್ತೆ ಅಪಘಾತ ಹೊಂದಿ ಉಪಚಾರ ಕುರಿತು ಬಂದು ಸೇರಿಕೆಯಾಗಿರುತ್ತಾರೆ ಅಂತಾ ತಿಳಿಸಿದ್ದರಿಂದ ನಾನು ಆಸ್ಪತ್ರೆಗೆ ಭೆಟಿಕೊಟ್ಟು ಗಾಯಾಳು ಶ್ರೀ ಪದ್ಮಣ್ಣಾ ಇವರನ್ನು ವಿಚಾರಿಸಲು ಅವರು ಕೊಟ್ಟ ಹೇಳಿಕೆ  ಸಾರಂಶವೆನೆಂದರೆ ದಿನಾಂಕ 10-12-2022 ರಂದು ರಾತ್ರಿ 9-30 ಗಂಟೆ ಸುಮಾರಿಗೆ ನಾನು ಕಲಬುರಗಿಯಲ್ಲಿ ಗಾದಾ ಟ್ರೆಡಿಂಗ ಕಂಫನಿ ಅಂಗಡಿಯಲ್ಲಿ ಹಮಾಲಿ ಕೆಲಸ ಮಾಡಿಅಂಗಡಿ ಬಂದ ಆದ ಮೇಲೆ ವಾಪಸ್ಸ ಕಲಬುರಗಿಯಿಂದ ಹೊನ್ನ ಕಿರಣಗಿ ಗ್ರಾಮಕ್ಕೆ ಹೋಗುವ ಕುರಿತು ನನ್ನ ಮೋಟಾರ ಸೈಕಲ ನಂಬರ ಕೆಎ-32/ಇಸಿ-2606 ನೇದ್ದನ್ನು ಚಲಾಯಿಸಿಕೊಂಡು ಕಲಬುರಗಿ ರಾಮ ಮಂದಿರ ಸರ್ಕಲ ಮುಖಾಂತರವಾಗಿ ಹೋಗುತ್ತಿರುವಾಗ ರಾಷ್ಟ್ರೀಯ ಹೆದ್ದಾರಿ-50 ರ ಮೇಲೆ ಬರುವ ಸಿರನೂರ ಗ್ರಾಮದ ಹತ್ತೀರ ರೋಡ ಮೇಲೆ ಕಾರ ನಂಬರ ಕೆಎ-22/ಎನ್-2653 ನೇದ್ದರ ಚಾಲಕ ಚಿದಾನಂದ ಇತನು ನನ್ನ ಮೋಟಾರ ಸೈಕಲ ಹಿಂದಿನಿಂದ ತನ್ನ ಕಾರನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಮೋಟಾರ ಸೈಕಲಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿ ನನಗೆ ಭಾರಿಗಾಯಗೊಳಿಸಿದ್ದು ಆತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಫಿರ್ಯಾದಿ ಹೇಳಿಕೆ ಸಾರಂಶ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.  

 

 

ಸಂಚಾರಿ ಪೊಲೀಸ ಠಾಣೆ -2 :- ದಿನಾಂಕ 11/12/2022 ರಂದು ಸಾಯಂಕಾಲ 06:00 ಗಂಟೆ ಸುಮಾರಿಗೆ ನರಸಿಂಗ ತಂದೆ ಕಿಶನ ಪವಾರ ಸಾಃ ಧರ್ಮಾಪೂರ ತಾಂಡಾ ಇವರು ಖುದ್ದಾಗಿ ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಟೈಪ್ ಮಾಡಿದ ಫಿರ್ಯಾದಿ ಅರ್ಜಿ ಹಾಜರು ಪಡಿಸಿದ್ದು ಸದರಿ ಅರ್ಜಿಯ ಸಾರಂಶವೆನೆಂದರೆ, ದಿನಾಂಕ 05/12/2022 ರಂದು ರಾತ್ರಿ ಬಹಿರ್ದೆಸೆಗೆ ಹೋಗುವ ಕುರಿತು ಫಿರ್ಯಾದಿ ಹಾಗು ಅವರ ಸೋದರ ಮಾವನ ಮಗ ಜಗದೇವ ರಾಠೋಡ ಇಬ್ಬರೂ ಸೇರಿ ರೇವಣಸಿದ್ದ ಜಾಪೂರ ಇವರ ಹೊಲದ ಹತ್ತೀರ ರಸ್ತೆಯ ಬದಿಯಿಂದ ಹೋಗುವಾಗ ರಾತ್ರಿ 8:15 ಗಂಟೆ ಸುಮಾರಿಗೆ ಸ್ಪ್ಲೆಂಡರ ಮೋಟರ ಸೈಕಲ ಸವಾರ ಸೈಯದ ಇಮ್ರಾನ ರಜವಿ ಈತನು ಕಲಬುರಗಿ ಕಡೆಯಿಂದ ಶಹಾಬಾದ ಕಡೆಗೆ ಹೋಗುವ ಕುರಿತು ತನ್ನ ಮೋಟರ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಗೆ ಹಿಂದುಗಡೆಯಿಂದ ಡಿಕ್ಕಿ ಪಡಿಸಿ ಭಾರಿಗಾಯಗೊಳಿಸಿದನು. ಫಿರ್ಯಾದಿ ಆರೋಪಿಯ ಮೋಟರ ಸೈಕಲ ನಂಬರ ನೋಡಲು ಆಗಿರುವುದಿಲ್ಲಾ. ಕಾರಣ ಸದರಿ ಮೋಟರ ಸೈಕಲ ಸವಾರನ ಮೇಲೆ ಕಾನೂನು ಪ್ರಕಾರ ಕ್ರಮ ಕೈಕೊಳ್ಳಬೇಕೆಂದು ಅಂತಾ ಇತ್ಯಾದಿ ಕೊಟ್ಟ ಫಿರ್ಯಾಧಿ ಅರ್ಜಿ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.  

 

 

ಸಬ್‌ ಅರ್ಬನ್‌ ಪೊಲೀಸ ಠಾಣೆ :- ದಿನಾಂಕಃ-01-12-2022  ರಂದು ಬೆಳಗ್ಗೆ ೯.೩೦  ಗಂಟೆಗೆ  ಆಳಂದ ಚೆಕ್ ಪೋಸ್ಟ ಹತ್ತಿರ ತಮ್ಮ ಪ್ಯಾಶನ್ ಪ್ರೋ ಬೈಕ್ KA 32 EQ 3972 ಅನ್ನು ನಿಲ್ಲಿಸಿ ತಮ್ಮ ಕೆಲಸದ ನಿಮಿತ್ತ  ಹೋಗಿದ್ದು ನಂತರ ಮದ್ಯಾಹ್ನ ೨.೦೦ ಗಂಟೆಗೆ ಬಂದು ನೋಡಲು  ಯಾರೋ ಕಳ್ಳರು ತಮ್ಮ ಕಳುವು ಮಾಡಿದ್ದು ನಾವು ಎಲ್ಲಾಕಡೆ ಹುಡುಕಾರಿದರು ಅದು ನಮಗೆ ಎಲ್ಲಿಯೂ ದೊರೆತಿರುವುದಿಲ್ಲಾ ಸದರಿ ನಮ್ಮ ವಾಹನವನ್ನು ಹುಡುಕಿಕೊಡಬೇಕೆಂದು ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಂಶ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.  

 

ಇತ್ತೀಚಿನ ನವೀಕರಣ​ : 12-12-2022 04:12 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080