ಅಭಿಪ್ರಾಯ / ಸಲಹೆಗಳು

ಸಂಚಾರಿ ಪೊಲೀಸ್‌ ಠಾಣೆ -2 :-  ದಿನಾಂಕ 11/11/2022 ರಂದು ಬೆಳಿಗ್ಗೆ 06:30 ಗಂಟೆಗೆ ಶ್ರೀ. ಸಂಗಮನಾಥ ತಂದೆ ಕಲ್ಯಾಣಿ ಕಾಂಬಳೆ ವ; 34 ವರ್ಷ ಜಾ; ಪ.ಜಾ [ಮಾದಿಗಾ] ಉ; ಗೌಂಡಿ ಕೆಲಸ ಸಾ; ರಾಮತೀರ್ಥೀ ನಗರ ಆಳಂದ ಚಕ್ ಪೋಸ್ಟ್ ಹತ್ತಿರ ಕಲಬುರಗಿ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಹೇಳಿಕೆ ಫಿರ್ಯಾದಿಯನ್ನು ನೀಡಿದ್ದು ಸಾರಂಶವೆನೆಂದರೆ, ನಿನ್ನೆ ದಿನಾಂಕ 10/11/2022 ರಂದು ನನ್ನ ತಮ್ಮ ದತ್ತಾತ್ರೇಯ ಹಾಗೂ ಇನ್ನೊಬ್ಬ ಗೌಂಡಿ ಬಸವರಾಜ ತಂದೆ ಅಣ್ಣಾರಾಯ ಇಬ್ಬರೂ ಕೂಡಿಕೊಂಡು ಕಲಬುರಗಿಯಿಂದ ಬಂದರವಾಡಾ ಗ್ರಾಮದಲ್ಲಿ ದತ್ತಾತ್ರೇಯ ಈತನ ಹೆಂಡತ್ತಿಯ ತಂದೆಯವರ ಮನೆ ಕಟ್ಟುವ ಕುರಿತು ಮೋಟಾರ ಸೈಕಲ ನಂ ಕೆಎ-32 ಇ.ಜೆ-3029 ನೇದ್ದರ ಮೇಲೆ ಹೋಗಿದ್ದು ಕೆಲಸ ಮುಗಿಸಿಕೊಂಡು ಮರಳಿ ಕಲಬುರಗಿಗೆ ಬರುವಾಗ ರಾತ್ರಿ 07:30 ಗಂಟೆ ಸುಮಾರಿಗೆ ರಿಂಗ್ ರೋಡಿನ ಕ್ಯೂ.ಪಿ ಆಸ್ಪತ್ರೆಯ ಸ್ವಲ್ಪ ಮುಂದುಗಡೆ ಇರುವ ಕಲ್ಯಾಣ ಮಂಟಪ ಎದುರುಗಡೆ ತಮ್ಮನು ತನ್ನ ಮೋಟಾರ ಸೈಕಲನ್ನು ನಡೆಸುತ್ತಾ ಹಿಂದೆ ಬಸವರಾಜ ಕಣ್ಣಿ ಈತನಿಗೆ ಕೂಡಿಕೊಂಡು ಅತಿವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಹೋಗುವಾಗ ರೋಡಿನ ಮೇಲೆ ಇರುವ ಒಂದು ಕಲ್ಲಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರೂ ಮೋಟಾರ ಸೈಕಲ ಸಮೇತ ರೋಡಿಗೆ ಬಿದಿದ್ದರಿಂದ ತಮ್ಮನ ತೆಲೆಯ ಹಿಂದುಗಡೆ ಭಾರಿಗಾಯವಾಗಿ ಬುಗಟಿ ಬಂದಿದ್ದು ಬಾಯಿ ಹತ್ತಿರ ರಕ್ತಗಾಯ ಮತ್ತು ಕಾಲಕೈಗೆ ರಕ್ತದ ಗಾಯವಾಗಿದ್ದು ಮತ್ತು  ಬಸವರಾಜನಿಗೆ ಸಣ್ಣಪುಟ್ಟ ಗಾಯವಾಗಿದ್ದು ಘಟನೆಯನ್ನು ಕಂಡಿರುವ ಕುಮಾರ ತಂದೆ ನರಸಪ್ಪಾ ಇಟ್ಟಕರ್ ಈತನು ನೋಡಿ ನನಗೆ ಮಾಹಿತಿ ತಿಳಿಸಿದ್ದು ಕೊಡಲೇ ನಾನು ಗಾಬರಿಗೊಂಡು ನಮ್ಮ ಅತ್ತಿಗೆ ರೇಷ್ಮಾ ಇವಳೋಂದಿಗೆ ಹೋಗುವಷ್ಟರಲ್ಲಿ ತಮ್ಮನಿಗೆ ಕ್ಯೂ.ಪಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು ಆತನಿಗೆ ಮಾತನಾಡಿಸಿದರೆ ಮಾತನಾಡಲಿಲ್ಲಾ ಮುಂದೆ ಅಲ್ಲೆ ಉಪಚಾರ ಪಡೆಯುತ್ತಿರುವಾಗ ರಾತ್ರಿ 11:30 ಗಂಟೆ ಸುಮಾರಿಗೆ ತಮ್ಮ ದತ್ತಾತ್ರೇಯ ಮೃತ ಪಟ್ಟಿರುತ್ತಾನೆ, ಅಲ್ಲೆ ಇರುವ ಬಸವರಾಜ ಇವನಿಗೆ ನೋಡಲಾಗಿ ಗುಪ್ತಗಾಯಗಳಾಗಿದ್ದು ಆಸ್ಪತ್ರೆಗೆ ತೋರಿಸಿಕೊಂಡಿರುವುದಿಲ್ಲಾ ಮತ್ತು ಮೇಲಿನ ವಿಷಯವನೆ ತಿಳಿಸಿರುತ್ತಾನೆ, ಕಾರಣ ಈ ಘಟನೆಗೆ ಸಂಭಂದ ಪಟ್ಟಂತೆ ಕಾನೂನು ಪ್ರಕಾರ ಕ್ರಮ  ಕೈಗೊಳ್ಳಬೇಕು ಅಂತಾ ಕೊಟ್ಟ ಫಿರ್ಯಾದಿ ಹೇಳಿಕೆ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಸ್ಟೇಷನ್‌ ಬಜಾರ ಪೊಲೀಸ್‌ ಠಾಣೆ :-  ದಿನಾಂಕ:11/11/2022 ರಂದು ಸಂಜೆ 5:15 ಗಂಟೆಗೆ ಫಿರ್ಯಾದಿ ಶ್ರೀಮತಿ ಮಾಲಾಶ್ರೀ ತಂದೆ ರಾಜು ಪಾಟೀಲ್ ಸಾ:ಲಕ್ಷ್ಮೀ ನಗರ ಕಲಬುರಗಿ ಇವರು ಪೊಲೀಸ್ ಠಾಣೆಗೆ ಬಂದು ನೀಡಿದ ದೂರು ಅರ್ಜಿಯ ಸಾರಾಂಶವೇನಂದರೆ, ದಿನಾಂಕ:09/11/2022 ರಂದು ಮದ್ಯಾಹ್ನ 3:00 ಗಂಟೆ ಸುಮಾರಿಗೆ ನಾನು ನ್ಯಾಯಾಲಯದಲ್ಲಿ ನನ್ನ ಒಂದು ಪ್ರಕರಣ ಬಾಕಿ ಇರುವದರಿಂದ ಕುಟುಂಬ ನ್ಯಾಯಾಲಯದ ಆವರಣದಲ್ಲಿ ಕುಳಿತುಕೊಂಡಾಗ ಅಲ್ಲಿ ನನ್ನ ವಿಚ್ಛೇದಿತ ಪತಿ ಬಂದು ಕೊರಳಲ್ಲಿನ ತಾಳಿ ಮತ್ತು ಕಾಲುಂಗುರ ತೆಗೆ ಎಂದು ರಂಡಿ ಭೋಸುಡಿ ಅಂತ ಅವಾಚ್ಯ ಶಬ್ದಗಳಿಂದ ಬೈದು ಬೂಟು ಬಿಚ್ಚಿ ಕಾಲಿನಿಂದ ನನ್ನ ತಲೆಗೆ ಮುಖದ ಮೇಲೆ ಎರಡನೆ ಸಲ ಹೋಡೆಯುತ್ತಿರುವಾಗ ಅಲ್ಲೆ ನ್ಯಾಯಾಲಯದ ವಿಚಾರಣೆಗೆ ಬಂದಂತವರು ಕೋರ್ಟಿನ ಸಿಬ್ಬಂದಿ ವರ್ಗದವರು ಮತ್ತು ಕಕ್ಷಿದಾರರು ಬಂದು ಬಿಡಿಸಿದರು, ಇಲ್ಲದಿದ್ದರೆ ಇನ್ನು ನನಗೆ ಹೊಡೆಯುತ್ತಿದ್ದ ನ್ಯಾಯಾಲಯದ ಆವರಣದಲ್ಲಿ ನನ್ನ ಮೇಲೆ ಹಲ್ಲೆ ಮಾಡಿ ಕೋರ್ಟ ಹೊರಗೆ ಬಾ ನೋಡಿಕೊಳ್ಳುತ್ತೇನೆ ನಾನು ಕಡಗಂಚಿಯವನಾಗಿದ್ದು ನೀನು ತಾಳಿ ತೆಗೆಯುವವರೆಗೆ ನಾನು ನಿನಗೆ ಯಾವುದೇ ಮೇಂಟೆನೆನ್ಸ ಕೊಡುವುದಿಲ್ಲ ಮತ್ತು ನಿನ್ನನ್ನು ಮುಗಿಸಿಯೇ ಬಿಡುತ್ತೇನೆ ಎಂದು ಜೀವ ಬೆದರಿಕೆ ಹಾಕಿರುತ್ತಾನೆ ಅಂತ ಇತ್ಯಾದಿಯಾಗಿ ಸಲ್ಲಿಸಿದ್ದ ದೂರು ಅರ್ಜಿಯ ಸಾರಾಂಶವು ಅಸಂಜ್ಞೆಯ ಅಪರಾದ ಕಲಂ: 323 355 504 506 ಐಪಿಸಿ ನೇದ್ದರ ಪ್ರಕಾರ  ಆಗುತ್ತಿದ್ದರಿದಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲು ಮಾನ್ಯ ನ್ಯಾಯಾಲಯಕ್ಕೆ ಅನುಮತಿಗಾಗಿ ಪತ್ರದ ಮೂಲಕ ಕೋರಿಕೊಂಡು ಅನುಮತಿ ಪಡೆದು ಸಂಜೆ 6:00 ಗಂಟೆಗೆ ದೂರು ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಸಬ್‌ ಅರ್ಬನ್‌ ಪೊಲೀಸ್‌ ಠಾಣೆ :- ದಿನಾಂಕಃ-೧೧-೧೧-೨೦೨೨ ರಂದು ಸರಕಾರಿ ತರಫೆ ಫಿರ್ಯಾದಿಯು ಠಾಣೆಗೆ ಹಾಜಾರಾಗಿ ನೀಡಿದ ಫಿರ್ಯಾದಿಯೇನೆಂದರೆ ಸದರಿಯವರು ಏರಿಯಾದಲ್ಲಿ ಪೆಟ್ರೋಲಿಂಗ್ ಕರ್ತವ್ಯದಲ್ಲಿದ್ದಾಗ ಒಬ್ಬ ವ್ಯಕ್ತಿಯು ಸಾರ್ವಜನಿಕ ಸ್ಥಳದಲ್ಲಿ ೧ ರೂ ೮೦ ಗೆಲ್ಲಿರಿ ಅಂತಾ ಮಟಕಾ ಬರೆದುಕೊಳ್ಳುತ್ತಿದ್ದಾನೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ದಾಳಿ ಮಾಡಿಲಾಗಿ ಸದರಿ ಆರೋಪಿತನು ಮತ್ತು ಮುದ್ದೆ ಮಾಲನ್ನು ವಶಕ್ಕೆ ಪಡೆದುಕೊಂಡು ಸದರಿ ಆರೋಪಿತನ ವಿರುದ್ದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 23-11-2022 04:22 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080