ಅಭಿಪ್ರಾಯ / ಸಲಹೆಗಳು

ಸಂಚಾರಿ ಪೊಲೀಸ ಠಾಣೆ -2 :-  ದಿನಾಂಕ 11/09/2022 ರಂದು 11:00 ಎ.ಎಮ್ ಕ್ಕೆ  ಯಲ್ಲಪ್ಪಾ ತಂದೆ ರಾಮಣ್ಣಾ ಕುಂಬಾರ ವಯ: 36ವರ್ಷ ಜಾ:ಕುಂಬಾರ ಉ: ಕೂಲಿಕೆಲಸ ಸಾ: ಯಳವಾರ ತಾ: ಜೇವರ್ಗಿ ಜಿ:ಕಲಬುರಗಿ ಇವರು ಒಂದು ಕನ್ನಡದಲ್ಲಿ ಟೈಪ ಮಾಡಿ ಎಡಗೈ ಹೆಬ್ಬೆರಳು ಒತ್ತಿದ  ಫೀರ್ಯಾದಿ ಅರ್ಜಿಯನ್ನು ಜಗನ್ನಾಥ ತಂದೆ ಶಾಂತಪ್ಪಾ ಕುಂಬಾರ ಇವರು ಠಾಣೆಗೆ ಹಾಜರಾಗಿ ಹಾಜರು ಪಡಿಸಿದ್ದು ಸಾರಂಶವೆನೆಂದರೆ,  ನಿನ್ನೆ ದಿನಾಂಕ 09/09/2022 ರಂದು ಸಾಯಂಕಾಲ ನಾನು ಮತ್ತು ನಮ್ಮ ಕಂಪನಿಯ ವಾಹನ ಚಾಲಕ ವಿರೇಶ್ ತಂದೆ ಪ್ರಭು ಮರತ ಇಬ್ಬರು ಸೇರಿ ನಮ್ಮ ಕಂಪನೀಯ ಚಿಪ್ಸ್ ಡಿಲೇವರಿ ಕೊಡಲು ಪಿಕಪ್ ವಾಹನ ನಂ.ಕೆಎ-32 ಎಎ-1256 ನೇದ್ದರಲ್ಲಿ ಹುಮನಾಬಾದಗೆ ಹೋಗಿ ಡಿಲೇವರಿ ಕೊಟ್ಟು ಮರಳಿ ಕಲಬುರಗಿ ಕಡೆಗೆ ಬರುವಾಗ ವಿರೇಶ ಮರತ ಈತನು ನನಗೆ ತನ್ನ ಪಕ್ಕದಲ್ಲಿ ಕೂಡಿಸಿಕೊಂಡು ವಾಹನವನ್ನು ಅತಿವೇಗವಾಗಿ ಮತ್ತು ಅಲಕ್ಷ್ಯತನದಿಂದ ಚಲಾಯಿಸುತಿದ್ದನು ಆಗ ನಾನು ಆತನಿಗೆ ನಿಧಾವನಾಗಿ ಚಲಾಯಿಸಲು ಹೇಳಿದರು ಸಹ ಆತನು ನನ್ನ ಮಾತು ಕೇಳದೆ ಅದೇವೇಗದಲ್ಲಿ ಚಲಾಯಿಸುತಿದ್ದನು ಹಾಗೂ  ಒಂದು ಲಾರಿ ಚಾಲಕನು ಅವರಾದ ಗ್ರಾಮ ದಾಟಿ ಹಿಲ್ಟೌಟ್ ಗಾರ್ಡನ ಹತ್ತೀರ ಇರುವ ಹೊಡ್ಡಿಗೆ ಸಾರ್ವಜನಿಕ ಸಂಚಾರಕ್ಕೆ ಅಡೆತಡೆಯಾಗುವ ರೀತಿಯಲ್ಲಿ ಯಾವೂದೇ ಮುನ್ಸೂಚನೆ ಇಲ್ಲದೆ ಇಂಡಿಕೇಟರ ಹಾಕದೆ ರೇಡಿಯಂ ಹಚ್ಚದೆ ರಸ್ತೇಯ ಮೇಲೆ ನಿಲ್ಲಿಸಿದ್ದು ಅಷ್ಟರಲ್ಲಿ ನಮ್ಮ ವಾಹನಚಾಲಕ ವಿರೇಶ ಈತನು ರಾತ್ರಿ 11-30 ಗಂಟೆ ಸುಮಾರಿಗೆ ಸದರಿ ಸಾರ್ವಜನಿಕ ಸಂಚಾರಕ್ಕೆ ಅಡೆತಡೆಯಾಗುವ ರೀತಿಯಲ್ಲಿ ನಿಲ್ಲಿಸಿದ್ದ ಲಾರಿಯಹಿಂದುಗಡೆ ಬಲಭಾಗಕ್ಕೆ ಡಿಕ್ಕಿಪಡಿಸಿದನು. ಆಗ ಅದನ್ನು ನೋಡಿದ ಅಲ್ಲಿಯೇ ಹೋಗುತಿದ್ದ ಪ್ರವೀಣ ತಂದೆ ರಾಮರಾವ ಪಾಟೀಲ ಹಾಗೂ ಅಯ್ಯುಬ್ ತಂದೆ ಅಬ್ದುಲ್ ರಶೀದ್ ಇವರು ಬಂದಿ ನನಗೆ ಪಿಕಪ್ ವಾಹನದಿಂದ ಹೊರಗೆ ತೆಗೆದು ಮೋಬೈಲ್ ಬೆಳಕಿನಲ್ಲಿ ನೋಡಲು ಸದರ ಘಟನೆಯಿಂದ  ನನಗೆ ಎಡಗಡೆ ಹಾಗೂ ಎಡಕಣ್ಣಿನ ಹತ್ತಿರ ಭಾರಿ ರಕ್ತಗಾಯ, ಎಡಗಾಲಿನ ಸೊಂಟದ ಜೊಯಿಂಟ್ ಹತ್ತೀರ ಭಾರಿ ಒಳಪೆಟ್ಟು ಮತ್ತು ಎಡಗಾಲಿನ ಕಪಗಂಡ ಹತ್ತೀರ ಭಾರಿರಕ್ತಗಾಯ ಹಾಗೂ ಒಳಪೆಟ್ಟು ಆಗಿದ್ದು ನಮ್ಮ ವಾಹನ ಚಾಲಕ ವೀರೆಶ ಈತನಿಗೆ ನೋಡಲು ಅಲ್ಲಲ್ಲಿ ಸಣ್ಣಪುಟ್ಟ ಗಾಯ ಮತ್ತು ನಮ್ಮ ವಾಹನದ ಎದುರಿನ ಭಾಗ ಜಖಂ ಗೊಂಡಿದ್ದು ಯಾವೂದೆ ಮುನ್ಸೂಚನೆ ಇಲ್ಲದೆ, ಇಂಡಿಕೇಟರ ಹಾಕದೆ., ಸಾರ್ವನಿಕ ಸಂಚಾರಕ್ಕೆ ಅಡೆತಡೆ ಆಗುವ ರೀತಿಯಲ್ಲಿ ನಿಲ್ಲಿಸಿದ್ದ ಲಾರಿ ನಂ. ನೋಡಲು ಕೆಎ-28 ಬಿ-2750 ನೇದ್ದು ಇದ್ದು ಅದರ ಚಾಲಕನಿಗೆ ನೋಡಲು ಆತನು ನಮ್ಮ ಕಡೆಗೆ ನೋಡುತ್ತಾ ಅಲ್ಲಿಂದ ಓಡಿ ಹೋಗಿರುತ್ತಾನೆ. ಆತನಿಗೆ ನೋಡಿರುತ್ತೇನೆ. ಮುಂದೆ ನೋಡಿದಲ್ಲಿ ಗುರುತಿಸುತ್ತೇನೆ. ಸದರ ವಿಷಯ ಗೊತ್ತಾಗಿ ಸ್ಥಳಕ್ಕೆ ಅಂಬುಲೆನ್ಸ್ ವಾಹನ ಬಂದಿದ್ದು ಪ್ರವೀಣ ಪಾಟೀಲ ಹಾಗೂ ಅಯ್ಯುಬ್ ಸೇರಿ ನನಗೆ ಹಾಗೂ ವಿರೇಶನಿಗೆ  ಅದರಲ್ಲಿ ಹಾಕಿಕೊಂಡು ಉಪ ಚಾರ ಕುರಿತು ಕ್ಯೂ.ಪಿ. ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು ಇರುತ್ತದೆ. ವಿರೇಶ್ ಈತನು ಆಸ್ಪತ್ರೆಗೆ ತೋರಿಸಿಕೊಂಡಿರುವದಿಲ್ಲ ನಾನು ನನ್ನ ಚಿಕಿತ್ಸೆಯಲ್ಲಿ ಇದ್ದು ನಮ್ಮ ಮನೆಯವರೊಂದಿಗೆ ವಿಚಾರಿಸಿ ಇಂದು ದೂರು ನೀಡಲು ತಸಡವಾಗಿರುತ್ತದೆ. ಕಾರಣ ಗೂಡ್ಸ್ ಪಿಕಪ್ ವಾಹನ ನಂ.ಕೆಎ-32 ಎಎ-1256 ನೇದ್ದರ ಚಾಲಕ ವಿರೇಶ್ ಹಾಗೂ  ಲಾರಿ  ನಂ. ಕೆಎ-28 ಬಿ-2750  ನೇದ್ದವುಗಳ ಚಾಲಕರ  ಮೇಲೆ ಕಾನೂನು ಕ್ರಮ  ಕೈಕೊಳ್ಳಬೇಕೆಂದು ಕೊಟ್ಟ ಫಿರ್ಯಾದಿ ಅರ್ಜಿ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ. 

 

 

ಫರಹತಾಬಾದ ಪೊಲೀಸ ಠಾಣೆ :-  ದಿನಾಂಕ:09-09-2022 ರಂದು ಕಾರಾಗೃಹದ ಮುಖ್ಯ ಗೋಡೆಯ ಸಂಖ್ಯೆ 2 ರ ರಾತ್ರಿ ಪಹರೆಯ ಭದ್ರತೆಯನ್ನು ನಿರ್ವಹಿಸಲು ಈ ಸಂಸ್ಥೆಯ ಸಿಬ್ಬಂದಿಗಳಾದ ಶ್ರೀ ಅರುಣಾ ಬಾಳೋಜಿ, ವಾರ್ಡರ್ ಮತ್ತು ರಾತ್ರಿ ಸಾಮಾನ್ಯ ಉಸ್ತುವಾರಿಯಾಗಿ ಕರ್ತವ್ಯ ನಿರ್ವಹಿಸಲು ಶ್ರೀ ದಿಲೀಪಕುಮಾರ ಹಂಗರಗಿ, ಹೆಡ್ ವಾರ್ಡರ್ ಇವರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು.   ಅದರಂತೆ ದಿನಾಂಕ: 09-09-2022 ರಂದು ಕಾರಾಗೃಹದ ಮುಖ್ಯ ಗೋಡೆ ಸಂಖ್ಯೆ 2 ರ ರಾತ್ರಿ ಸಮಯ 11-35 ಗಂಟೆಗೆ ಬ್ಯಾರಕ್ ಸಂಖ್ಯೆ: 8 ರ ಹೊರ ಗೋಡೆಯ ಹತ್ತಿರ ಕರ್ತವ್ಯ ನಿರತ ಪಹರೆ ಸಿಬ್ಬಂದಿಯಾದ ಶ್ರೀ ಅರುಣಾ ಬಾಳೋಜಿ, ವಾರ್ಡರ್ ಇವರು ಸುತ್ತುವರಿ ವೇಳೆಯಲ್ಲಿ ಕಾರಾಗೃಹದ ಮುಖ್ಯ ಗೋಡೆ ಸಂಖ್ಯೆ 2 ರ ಹೊರ ಭಾಗದಿಂದ ಬಾಹ್ಯ ವ್ಯಕ್ತಿಗಳು ಯಾವುದೇ ವಸ್ತುಗಳನ್ನು ಎಸೆದಿರುವ ಬಗ್ಗೆ ಶಬ್ದವು ಬಂದಿದ್ದು, ಅದನ್ನು ಪರಿಶೀಲಿಸಲು ಕಾರಾಗೃಹದ ಸಾಮಾನ್ಯ ಉಸ್ತುವಾರಿಯಾದ ಶ್ರೀ ದಿಲೀಪಕುಮಾರ ಹಂಗರಗಿ, ಹೆಡ್ ವಾರ್ಡರ್ ಮತ್ತು ಪಹರೆ ಸಿಬ್ಬಂದಿಯಾದ ಕು|| ಅರುಣಾ ಬಾಳೋಜಿ, ವಾರ್ಡರ್ ಇವರು ಸೇರಿಕೊಂಡು ಬ್ಯಾಟರಿ ಬೆಳಕಿನಲ್ಲಿ ತಪಾಸಣೆ ಮಾಡುವ ವೇಳೆಯಲ್ಲಿ ಪ್ಲಾಸ್ಟಿಕ್ ಸುತ್ತಿರುವ 03 ಸಂಖ್ಯೆ ಕವರ್ಗಳನ್ನು ಪಹರೆ ಸಿಬ್ಬಂದಿ ಮತ್ತು ಸಾಮಾನ್ಯ ಉಸ್ತುವಾರಿ ಸಿಬ್ಬಂದಿಯವರು ದಿನಾಂಕ:10-09-2022 ರಂದು ಬೆಳಿಗ್ಗೆ ಸಮಯ 7-00 ಗಂಟೆಗೆ ಕಾರಾಗೃಹ ಬಂದಿಗಳ ಬೀಗ ಮುದ್ರೆಯ ತೆರೆಯುವ ಸಮಯದಲ್ಲಿ ಸದರಿ ಪ್ಲಾಸ್ಟಿಕ್ ಕವರ್ನಲ್ಲಿರುವ ವಸ್ತುಗಳು ನಿಷೇಧಿತ ವಸ್ತುಗಳಿರುಬಹುದೆಂದು ಅನುಮಾನಸ್ಪದವಾಗಿ ಕಂಡು ಬಂದಿರುವುದರಿಂದ ಅವುಗಳನ್ನು ಸಹಾಯಕ ಅಧೀಕ್ಷಕರ ವಶಕ್ಕೆ ಒಪ್ಪಿಸಿರುತ್ತಾರೆ. ಮುಂದುವರೆದು ದಿನಾಂಕ: 09-09-2022 ರಂದು ಕಾರಾಗೃಹದ ಮುಖ್ಯ ಕಾಂಪೌಂಡ್ ಗೋಡೆಯ ಹೊರಗೆ ಕೆ.ಎಸ್.ಐ.ಎಸ್.ಎಫ್ ಸಿಬ್ಬಂದಿಗಳನ್ನು ರಾತ್ರಿಯ ಪಹರೆಯ ಕರ್ತವ್ಯಕ್ಕೆ ನೇಮಿಸಲಾಗಿದ್ದರೂ ಸಹ ಕಾರಾಗೃಹದ ಮುಖ್ಯ ಕಾಂಪೌಂಡ್ ಹೊರ ಭಾಗದಿಂದ 3 ಸಂಖ್ಯೆಯ ಪ್ಲಾಸ್ಟಿಕ್ ಸುತ್ತಿದ ಕವರ್ ಎಸೆದಿದ್ದು, ಅದರಲ್ಲಿ 04 ಸಂಖ್ಯೆಯ ಮೊಬೈಲ್ ಫೋನ್ಗಳು ಮತ್ತು 2 ಸಂಖ್ಯೆಯ ಚಾರ್ಜರಗಳು ಇರುತ್ತವೆ. ಮೊಬೈಲ್ ಫೋನ್ ಹಾಗೂ ಚಾರ್ಜರಗಳು ಯಾರ ಹೆಸರಿನಲ್ಲಿದೆ? ಜೈಲಿನೊಳಗೆ ಯಾರಿಗೆ ಸರಬರಾಜು ಮಾಡಲು ಪ್ರಯತ್ನಿಸಲಾಗಿದೆಂಬುದರ ಬಗ್ಗೆ ಪತ್ತೆ ಹಚ್ಚಿ ಸಂಬಂಧಪಟ್ಟವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿದೆ.

ಕಾರಾಗೃಹದಲ್ಲಿ ದೊರೆತ್ತಿರುವ 03 ಸಂಖ್ಯೆ ಪ್ಲಾಸ್ಟಿಕ್ ಸುತ್ತಿರುವ ಕವರ್ನಲ್ಲಿರುವ ನಿಷೇಧಿತ ವಸ್ತುಗಳು ಈ ಕೆಳಗಿನಂತಿದೆ.

1.1 ಸಂಖ್ಯೆ ಸ್ಯಾಮ್ಸಾಂಗ್ ಮೊಬೈಲ್ ಫೋನ್ & ಬ್ಯಾಟರಿ

 IMEI  No. 1. 354468/08/907058/6

 1. 354469/08/907058/4

 2. 1 ಸಂಖ್ಯೆ LAVA ಮೊಬೈಲ್ ಫೋನ್ & ಬ್ಯಾಟರಿ IMEI  No. 1. 351546118939062

 3.   351546118939070

 4. 1 ಸಂಖ್ಯೆ LAVA ಮೊಬೈಲ್ ಫೋನ್ & ಬ್ಯಾಟರಿ IMEI  No. 1. 353686211264493

 5. 353686211264501

 6. 1 ಸಂಖ್ಯೆ HERO ಮೊಬೈಲ್ ಫೋನ್ & ಬ್ಯಾಟರಿ IMEI  No. 1. 352716805226854

 7. 352716805226862

 8. 02 ಸಂಖ್ಯೆ ಮೊಬೈಲ್ ಚಾರ್ಜರಗಳು

  ಆದುದರಿಂದ ಕರ್ನಾಟಕ ಕಾರಾಗೃಹಗಳ ನಿಯಮಗಳು 1974 ರ ನಿಯಮ 42 (3) ರ ಪ್ರಕಾರ ಮೊಬೈಲ್ ಫೋನ್ ಮತ್ತು ಅದಕ್ಕೆ ಸಂಬಂಧಿಸಿದ ಉಪಕರಣಗಳು ನಿಷೇಧಿತ ವಸ್ತುಗಳು ಎಂಬುದಾಗಿ ಘೋಷಿಸಿರುವುದರಿಂದ ಸದರಿ ನಿಷೇಧಿತ ವಸ್ತುಗಳನ್ನು ತಮ್ಮ ವಶಕ್ಕೆ ಪಡೆದು ಕನರ್ಾಟಕ ಕಾರಾಗೃಹಗಳ (ತಿದ್ದುಪಡಿ) ಅಧಿನಿಯಮ-2022 ರ ಕಲಂ 42 ಹಾಗೂ ಭಾ,ದ.ಸಂ. ಕಲಂ ಗಳಡಿಯಲ್ಲಿ ದೂರು ದಾಖಲಿಸಿಕೊಂಡು ತನಿಖೆ ಮಾಡಿ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿದೆ. ಇದರೊಂದಿಗೆ ತಪಾಸಣೆ ವೇಳೆಯಲ್ಲಿ ದೊರೆತ್ತಿರುವ 04 ಸಂಖ್ಯೆ ಮೊಬೈಲ್ ಫೋನ್ಗಳು ಮತ್ತು 02 ಸಂಖ್ಯೆ ಚಾರ್ಜರಗಳನ್ನು ಶ್ರೀ ಮಹೇಶ್ ಕಟ್ಟಿಮನಿ, ವಾರ್ಡರ್ ರವರ ಹಸ್ತ ಈ ಪತ್ರದೊಂದಿಗೆ ಕಳಹಿಸಿಕೊಡಲಾಗಿದೆ. ಮುಂದುವರೆದು ದಿನಾಂಕ:09-09-2022 ರಂದು ರಾತ್ರಿ ಕರ್ತವ್ಯಕ್ಕೆ ನೇಮಿಸಿದ ಸಿಬ್ಬಂದಿಗಳು ದಿನಾಂಕ:10-09-2022 ರಂದು ಬೀಗ ಮುದ್ರೆ ತೆರೆಯುವ ವೇಳೆಯಲ್ಲಿ ನಿಷೇಧಿತ ವಸ್ತುಗಳು ದೊರೆತ್ತಿರುವ ವರದಿ ನೀಡಿದ್ದು, ಮೇಲಾಧಿಕಾರಿಗಳ ಅನುಮತಿ ಪಡೆಯುವಲ್ಲಿ, ಸದರಿ ವಸ್ತುಗಳನ್ನು ಪರಿಶೀಲಿಸಲು ಹಾಗೂ ಸಿಬ್ಬಂದಿಗಳ ಹೇಳಿಕೆ ಪಡೆಯಲು ವಿಳಂಬವಾಗಿದ್ದು, ಈ ಹಿನ್ನಲೆಯಲ್ಲಿ ದಿನಾಂಕ:11-09-2022 ರಂದು ಪ್ರಕರಣ ದಾಖಲಿಸಲಾಗುತ್ತಿದೆಂಬ ಮಾಹಿತಿಯನ್ನು ನೀಡಿದೆ ಅಂತಾ ಇತ್ಯಾದಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ. 

 

ಸಂಚಾರಿ ಪೊಲೀಸ ಠಾಣೆ -1 :- ದಿನಾಂಕ 11.09.2022 ರಂದು ಮದ್ಯಾಹ್ನ 2-45 ಗಂಟೆಗೆ ಖಾಸಗಿ ಎ.ಎಸ.ಎಮ್ ಆಸ್ಪತ್ರೆಯ ಸಿಬ್ಬಂದಿಯವರು ಠಾಣೆಗೆ ಪೋನ ಮಾಡಿ ರಿಹಾನ ಇತನು ರಸ್ತೆ ಅಪಘತ ಹೊಂದಿ ಉಪಚಾರ ಕುರಿತು ಬಂದು ಸೇರಿಕೆಯಾಗಿರುತ್ತಾರೆ ಅಂತಾ ತಿಳಿಸಿದ್ದರಿಂದ ನಾನು ಆಸ್ಪತ್ರೆಗೆ ಬೇಟಿಕೊಟ್ಟು ಗಾಯಾಳು ರಿಹಾನ ಇವರನ್ನು ವಿಚಾರಿಸಲು ಸದರಿಯವರು ಮಾತನಾಡಿ ಹೇಳಿಕೆ ನಿಡುವ ಸ್ಥಿತಿಯಲ್ಲಿ ಇರದ ಕಾರಣ ಅವರ ಜೊತೆಯಲ್ಲಿದ್ದ ಅವರ ತಂದೆಯಾದ ಮಹಿಬೂಬ ಶೇಖ ಇವರನ್ನು ವಿಚಾರಿಸಲು ಅವರು ಕೊಟ್ಟ ಹೇಳಿಕೆ ಸಾರಂಶವೆನೆಂದರೆ ದಿನಾಂಕ: 10-09-2022 ರಂದು ಮದ್ಯಾಹ್ನ 2-30 ಗಂಟೆ ಸುಮಾರಿಗೆ ನನ್ನ ಮಗ ರಿಹಾನ ಇತನು ಗೋವಾ ಹೊಟೇಲ ಹತ್ತೀರ ಇರುವ ತನ್ನ ಗೆಳಯರ ಹತ್ತೀರ ಹೋಗುವ ಕುರಿತು ತನ್ನ ಗೆಳೆಯರ ಮೋಟಾರ ಸೈಕಲ ನಂಬರ ಕೆಎ-32/ಇಇ-3762 ನೇದ್ದನ್ನು ಜಗತ ಸರ್ಕಲ ಕಡೆಯಿಂದ ಗೋವಾ ಹೊಟೆಲ ಕ್ರಾಸ ಕಡೆಗೆ ಚಲಾಯಿಸಿಕೊಂಡು ಹೋಗುವಾಗ ದಾರಿ ಮದ್ಯ ಯಲ್ಲಮ್ಮಾ ಟೆಂಪಲ ಹತ್ತೀರ ರೋಡ ಮೇಲೆ ಯಾವುದೋ ಒಂದು ಕಾರ ಚಾಲಕನು ಗೋವಾ ಹೊಟೇಲ ಕಡೆಯಿಂದ ಜಗತ ಸರ್ಕಲ ಕಡೆಗೆ ಹೋಗುವ ಕುರಿತು ತನ್ನ ಕಾರನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಮಗನ ಮೋಟಾರ ಸೈಕಲಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿ ನನ್ನ ಮಗನಿಗೆ ಭಾರಿಗಾಯಗೊಳಿಸಿ ತನ್ನ ವಾಹನ ಸಮೇತ ಓಡಿ ಹೋಗಿದ್ದು ಆತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಫಿರ್ಯಾದಿ ದೂರು ಹೇಳಿಕೆ ಸಾರಂಶ  ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ವಿಶ್ವವಿದ್ಯಾಲಯ ಪೊಲೀಸ್‌ ಠಾಣೆ :- ದಿನಾಂಕ: ೦೮-೦೯-೨೦೨೨ ರಂದು ೨.೦೦ ಪಿ.ಎಮ್   ದಿಂದ ೪.೦೦ ಪಿ.ಎಮ್  ಅವಧಿ ü ಪರ‍್ಯಾದಿಯು  ಕಲಬುರಗಿ ನಗರ ರಾಮಮಂದಿರ ಸರ್ಕಲ್ ಸರ್ವಜ್ಞೆ ಕಾಲೇಜಿಗೆ ಹೋಗಿ ಮದ್ಯಾಹ್ನ ೨:೦೦ ಗಂಟೆಗೆ ಕಾಲೇಜಿನ ಆವರಣದಲ್ಲಿ ನನ್ನ ಹಿರೋಹೊಂಡಾ ಸ್ಪ್ಲೇಂಡರ್‌ ಪ್ಲಸ್ ಮೊಟಾರ ಸೈಕಲ ನಂ ಕೆಎ-೩೨/ಇಎಲ್೯೫೪೦ ಅ.ಕಿ ೩೦,೦೦೦/-ರೂ ನೇದ್ದು ಹ್ಯಾಂಡ ಲಾಕ್ ಹಾಕಿ ನಿಲ್ಲಿಸಿ, ಮರಳಿ ಬಂದು ನೋಡಲು ಯಾರೋ ಕಳ್ಳರು ಮೊ.ಸೈ ನ್ನು ಕಳ್ಳತನ ಮಾಡಿಕೊಂಢು ‌ ಹೋಗಿರುತ್ತಾರೆ ಅಂತಾ ಫಿರ್ಯಾದಿ ಹೇಳಿಕೆ ಸಾರಂಶ  ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಸಬ್‌ ಅರ್ಬನ್‌ ಪೊಲೀಸ್‌ ಠಾಣೆ :- ದಿನಾಂಕ ೧೧-೦೯-೨೦೨೨ ರಂದು ಸರಕಾರಿ ತರಫೆ ಫರ‍್ಯಾದಿಠಾಣೆಗೆ ಹಾಜರಾಗಿ ನೀಡಿದ ಫರ‍್ಯಾದಿಯೇನೆಂದರೆ ರಾಣೇಶ್ಪೀರ್ ದರ್ಗದ ಹತ್ತಿರ ಸದರಿ ಆರೋಪಿತರು ಸಾರ್ವಜನಿಕ ವಿತರಣಾ ವ್ಯವಸ್ಥೆಗೆ ಸೇರಿದ  ಸಿಲಿಂಡರ್‌ಗಳಿಗೆ ಅನದಿಕೃತವಾಗಿ ತುಂಬುತ್ತಿದ್ದಾಗ ಇಬ್ಬರು ಪಂಚರ ಸಮಕ್ಷಮದಲ್ಲಿ ವಶಡಿಸಿಕೊಂಡು ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಅಶೋಕ ನಗರ ಪೊಲೀಸ ಠಾಣೆ :-  ದಿನಾಂಕ:11.09.2022 ರಂದು 07:30 ಪಿ.ಎಂ. ಸುಮಾರಿಗೆ ಫಿರ್ಯಾದಿ ಶ್ರೀ ಈಶ್ವರ ಹೆಚ್.ಸಿ-209 ಇವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿ ಅರ್ಜಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ನಾನು ಕಳೆದ 3 ವರ್ಷಗಳಿಂದ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಸಿ.ಹೆಚ್.ಸಿ ಅಂತ ಕರ್ತವ್ಯ ನಿರ್ವಹಿಸಿಕೊಂಡು ಬಂದಿರುತ್ತೇನೆ. ನಾನು ಸದ್ಯ ಠಾಣಾ ವ್ಯಾಪ್ತಿಯಲ್ಲಿ ಚಿತಾ ಕರ್ತವ್ಯ ನಿರ್ವಹಿಸುತ್ತಾ ಠಾಣಾ ವ್ಯಾಪ್ತಿಯ ಬೀಟಗಳಲ್ಲಿ ಗಸ್ತು ಕರ್ತವ್ಯ ನಿರ್ವಹಿಸುತ್ತಿರುತ್ತೇನೆ. ಹೀಗಿದ್ದು ಇಂದು ದಿನಾಂಕ:11.09.2022 ರಂದು ಎಂದಿನಂತೆ ಸಾಯಂಕಾಲ 05:00 ಗಂಟೆಯಿಂದ ಠಾಣಾ ವ್ಯಾಪ್ತಿಯಲ್ಲಿ ಗಸ್ತು ತಿರುಗುತ್ತಾ ಹೋದಾಗ ಕೇಂದ್ರ ಬಸ್ ನಿಲ್ದಾಣದ ಹತ್ತಿರ ಇರುವ ತ್ರಿಶೂಲ್ ಬಾರ ಹತ್ತಿರ 4-5 ಜನರು ಮದ್ಯ ಸೇವನೆ ಮಾಡಿ ಬಾರ ಮುಂದುಗಡೆ ಜಗಳ ಮಾಡುತ್ತಾ ಸಾರ್ವಜನಿಕ ಶಾಂತತೆಗೆ ಭಂಗವುಂಟು ಮಾಡುತ್ತಿರುತ್ತಾರೆ ಅಂತ ಬಾತ್ಮಿ ಬಂದ ಮೆರೆಗೆ ನಾನು 06:30 ಗಂಟೆ ಸುಮಾರಿಗೆ ಸದರಿ ಘಟನಾ ಸ್ಥಳದ ಹತ್ತಿರ ಹೋಗಿ ಜಗಳವಾಡುತ್ತಿದ್ದ ಜನರಿಗೆ ನೀವು ಮದ್ಯ ಪಾನಮಾಡಿ ಏಕೆ ಈ ರೀತಿ ಸಾರ್ವಜನಿಕ ಸ್ಥಳದಲ್ಲಿ ಜಗಳ ಮಾಡಿಕೊಳ್ಳುತ್ತಿರುತ್ತಿರಿ ಅಂತ ತಿಳಿ ಹೇಳಿ ಕಳುಹಿಸುತ್ತಿದ್ದಾಗ ಅದರಲ್ಲಿದ್ದ ಒಬ್ಬ ವ್ಯಕ್ತಿ ನನ್ನ ಮಾತು ಕೇಳದೆ ವಿನಾ ಕಾರಣ ನನಗೆ ಅವಾಚ್ಯ ಶಬ್ದಳಿಂದ ಬೈಯುತ್ತಿದ್ದಾಗ, ನಾನು ಸರ್ಕಾರಿ ಕರ್ತವ್ಯದ ಮೇಲೆ ಇದ್ದು ಸಾರ್ವಜನಿಕರಿಂದ ಮಾಹಿತಿ ಬಂದ ಮೇರೆಗೆ ಇಲ್ಲಿಗೆ ಬಂದಿರುತ್ತೇನೆ. ನಾನು ಪೊಲೀಸ್ ಸಮವಸ್ತ್ರದಲ್ಲಿದ್ದು ನನ್ನ ಕರ್ತವ್ಯ ನಿರ್ವಹಿಸುತ್ತಿದ್ದೆನೆ ಅಂತ ಹೇಳುತ್ತಿದ್ದರು ಸಹ ಅವನು ನನಗೆ ಅವಾಚ್ಯವಾಗಿ ಏ ಭೋಸಡಿ ಮಗನೆ ನಮಗೆ ಏನು ಹೇಳಲು ಬರುತ್ತಿಯಾ ಅಂತ ಅನ್ನುತ್ತಾ ಬಾರ ಮುಂದುಗಡೆಯಿಂದ ಸಾರ್ವಜನಿಕ ರಸ್ತೆಯ ಮೇಲೆ ಬಂದು ತನ್ನ ತಲೆಯಿಂದ ನನ್ನ ಮೂಗಿಗೆ ಗುದ್ದಿದ್ದರಿಂದ ನನ್ನ ಮೂಗಿನಿಂದ ರಕ್ತ ಸುರಿಯಲು ಪ್ರಾರಂಭಿಸಿರುತ್ತದೆ. ನಂತರ ನಾನು ಅವನಿಗೆ ಹಿಡಿದು ಕೊಳ್ಳಲು ಪ್ರಯತ್ನಿಸುತ್ತಿದ್ಧಾಗ ಅವನು ತನ್ನ ಕೈಯಿಂದ ನನ್ನ ಮುಖಕ್ಕೆ, ಹೊಟ್ಟೆಗೆ ಮತ್ತು ಬೆನ್ನಿಗೆ ಹೊಡೆದಿರುತ್ತಾನೆ. ಅಷ್ಟರಲ್ಲಿ ಕನಕ ಬಾರನಲ್ಲಿ ಮ್ಯಾನೇಜರ ಕೆಲಸ ಮಾಡುವ ಸುರೇಶ ಮತ್ತು ಅವನೊಂದಿಗೆ ಅದೆ ಬಾರನಲ್ಲಿ ವೇಟರ ಕೆಲಸ ಮಾಡುವ ಇನ್ನಿಬ್ಬರು ಮತ್ತು ನಮ್ಮ ಠಾಣೆಯ ಸಿಬ್ಬಂದಿ ಶ್ರೀ ಚಿಕ್ಕಪ್ಪಾ ಜಾಧವ ಹೆಚ್.ಸಿ-210 ಇವರುಗಳು ಬರುತ್ತಿದ್ದಂತೆ ಅವನು ಅಲ್ಲಿಂದ ಓಡಿ ಹೋಗಿರುತ್ತಾನೆ. ನನಗೆ ಅವಾಚ್ಯವಾಗಿ ಬೈದು ಹೊಡೆಬಡೆ ಮಾಡಿದವನ ಹೆಸರು ಅಶ್ಫಾಕ್ ಶೇಕ ಸಾ|| ಎಂ.ಎಸ್.ಕೆ. ಮಿಲ್ ಕಲಬುರಗಿ ಅಂತ ಗೊತ್ತಾಗಿರುತ್ತದೆ. ನಂತರ ನಾನು ಉಪಚಾರಕ್ಕಾಗಿ ಆಸ್ಪತ್ರೆಗೆ ಹೋಗಿ ಉಪಚಾರ ಪಡೆದುಕೊಂಡು ಬಂದಿರುತ್ತೇನೆ.ನಾನು ನನ್ನ ಸರ್ಕಾರಿ ಕರ್ತವ್ಯದ ಮೇಲೆ ಇದ್ದಾಗ ವಿನಾಕಾರಣ ನನಗೆ ಅವಾಚ್ಯವಾಗಿ ಬೈದು ಹಲ್ಲೆಮಾಡಿ ಹೊಡೆಬಡೆ ಮಾಡಿರುವ ಅಶ್ಫಾಕ್ ಶೇಕ ಇತನ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತ ಇತ್ಯಾದಿಯಾಗಿದ್ದ ಫಿರ್ಯಾದಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಬ್ರಹ್ಮಪೂರ ಪೊಲೀಸ ಠಾಣೆ :-  ದಿನಾಂಕ ೧೧/೦೯/೨೦೨೨    ರಂದು ರಾತ್ರಿ ೨೧-೧೫ ಪಿ.ಎಂ ಕ್ಕೆ     ಸರಕಾರಿ ತರ್ಪೇ ಪಿರ್ಯಾದಿದಾರರಾಗಿ  ಶ್ರೀ ಯಶ್ವಂತರಾವ ಹೆಚ್.ಸಿ ೪೦ ಬ್ರಹ್ಮಪೂರ ಪೊಲೀಸ್ ಠಾಣೆ ಕಲಬುರಗಿ  ಇವರು ಲಿಖಿತ ದೂರು ಅರ್ಜಿ ಸಲ್ಲಿಸಿದ ಸಾರಾಂಶವೆನೆಂದರೆ, ದಿನಾಂಕ ೦೯/೦೯/೨೦೨೨ ರಂದು ಗಣೇಶ ವಿಸರ್ಜನೆ ಕಾರ್ಯಕ್ರಮ ಇದ್ದು, ಸದರಿ ಕಾರ್ಯಕ್ರಮದ ಬಂದೋಬಸ್ತ ಕುರಿತು ನನಗೂ  ಮತ್ತು ನಮ್ಮ ಸಿಬ್ಬಂದಿಯವರಾದ ಶೃತಿ. ಮ.ಪಿ.ಸಿ ೪೯೨, ಹಾಗೂ ಸಿ.ಸಿ.ಆರ್.ಬಿ ಘಟಕದ ಮತ್ತು ಇತರೇ ಪೊಲೀಸ್ ಠಾಣೆಯ ಸಿಬ್ಬಂದಿಯವರೊಂದಿಗೆ ಸಾಯಂಕಾಲ ೬-೦೦ ಗಂಟೆಯ ಸುಮಾರಿಗೆ ಕರ್ತವ್ಯ ನಿರ್ವಹಿಸುತ್ತಿರುವಾಗ ಕಲಬುರಗಿ ನಗರದ ವಿವಿಧ ಕಡೆಯಿಂದ ಕೂಡಿಸಿದ ಗಣಪಗಳನ್ನು ಮಹಿಬಾಸ್ ಮಜೀದ್ ಮುಖಾಂತರ ಮೆರವಣಿಗೆ ಮಾಡಿಕೊಂಡು ವಿಸರ್ಜನೆಗಾಗಿ ಅಪ್ಪಾ ಕೆರೆಯ ಕಡೆಗೆ  ಗಣೇಶ ಮೂರ್ತಿಗಳನ್ನು ತೆಗೆದುಕೊಂಡು ಹೋಗುತ್ತಿದ್ದರು. ಹಾಗೆಯೇ ನಾವು ಕರ್ತವ್ಯ ನಿರ್ವಹಿಸುತ್ತಿರುವಾಗ ದಿನಾಂಕ ೧೦/೦೯/೨೦೨೨ ರಂದು ಮದ್ಯರಾತ್ರಿ  ೨-೦೦ ಗಂಟೆಯ ಸುಮಾರಿಗೆ  ಭೋವಿ ಸಮಾಜ ಗಣೇಶ ಮಂಡಳಿ   ಹಳೇ ಭೋವಿಗಲ್ಲಿ ಸರಾಫ ಬಜಾರ ಕಲಬುರಗಿ ರವರು ತಮ್ಮ ಎರಿಯಾದಲ್ಲಿ ಕೂಡಿಸಿರುವ ಗಣೇಶ ಮೂರ್ತಿಯನ್ನು ಡಿ.ಜೆ. ಹಚ್ಚಿಕೊಂಡು ಮರೆವಣಿಗೆ ಮೂಲಕ ತೆಗೆದುಕೊಂಡು ಬಂದು ಸುಪರ್ ಮಾರ್ಕೇಟ್‌ದ ಮಹೆಬಾಸ್ ಮಜೀದ್ ಹತ್ತಿರ ಬರುತ್ತಿದ್ದಂತೆ  ಭೋವಿ ಸಮಾಜ ಗಣೇಶ ಮಂಡಳಿಯವರಾದ ತುಕಾರಾಮ ಮಹೇಂದ್ರಕರ್ ಅಧ್ಯಕ್ಷಕರು, ಅಂಬ್ರೇಶ ಭೋವಿ ಉಪಾದ್ಯಕ್ಷರು, ಇತರರು ಕೂಡಿಕೊಂಡು  ಒಂದು ಸಮುದಾಯದ ಮತೀಯ ಭಾವನೆಗೆ ಆಘಾತ ಉಂಟು ಮಾಡುವ ಉದ್ದೇಶದಿಂದ “ ಇದರ್ ಊಟಿ ಜೋ ಆಂಕ್, ತುಮಾರಿ ಚಮಕೆಗಿ ತಲವಾರ ಹಮಾರಿ, ಖೂನ್ ಸೆ ಇಸ್ ಧರತಿಕೋ ಹಮ್ ನಹಲಾದೆಂಗೆ ಹಮ್ ತುಮಕೋ ತುಮಾರೆ ಔಕಾತ್ ದಿಖಾದೆಂಗೆ ಅಗರ್ ಆಸ್ತಾ ಅಪಮಾನಿತ ಹೋಗಿ ತೋ ಫೀರ್ ಏಕ್ ಅಯೋದ್ಯಾ ಹೋಗಿ ರಾಮಕೆ ಖಾತಿರ್ ಅಪನಾ ಸಿಸ್ ಕಟಾದೆಂಗೆ ಹಮ್ ತುಮಕೋ ತುಮಾರಿ ಔಕಾತ್ ಬತಾದೆಂಗೆ ವೈಸೆತೋ ಕೋಯಿ ಬಹಿರ್ ನಹಿ ಹೈ ಲಡೆತೋ ತುಮಾರಿ ಖೈರ್ ನಹಿ ಹೈ ಹರ್ ಮಿನಾರ್ ಪರ ಕೇಸರಿಯಾ ಲಹೆರಾದೆಂಗೆ ಹಮ್ ತುಮಕೋ ತುಮಾರಿ  ಔಕಾಧ ಬತಾದೆಂಗೆ”  ಅಂತಾ ಡಿ,ಜೆಯಲ್ಲಿ ಪ್ರಚೋದನಾಕಾರಿ ಹಾಡು ಹಚ್ಚಿಕೊಂಡು ಮೆರವಣಿಗೆ ಮಾಡುತ್ತಾ ಹೋಗುತ್ತಿದ್ದರು.  ದ್ವನಿ ವರ್ಧಕದ ಲೈಸನ್ಸ ಅವಧಿ ಮುಗಿದಿದರು ಸಹ ನಿಗದಿ ಪಡಿಸಿದ ಮೀತಿಗಿಂತ ಹೆಚ್ಚಿನ ಅಭ್ಭರದ ದ್ವನಿ ವರ್ಧಕ ಹಚ್ಚಿ ಸಾರ್ವಜನಿಕರಿಗೆ ತೊಂದರೆ ಆಗುವ ರೀತಿಯಲ್ಲಿ ಡಿಜೆ ಸೌಂಡ್ ಸಿಸ್ಟಮ್ ಮೂಲಕ ಜೋರಾಗಿ ಹಾಡುಗಳನ್ನು ಹಚ್ಚಿ ಮೆರವಣಿಗೆ ಮಾಡಿ ನಿಯಮಗಳನ್ನು,  ಸರಕಾರದ ಆದೇಶವನ್ನು ಉಲ್ಲಂಘನೆ ಮಾಡಿರುತ್ತಾರೆ. ಕರ್ತವ್ಯದ ಮೇಲಿದ್ದ ನಾನು ಹಾಗೂ ಇತರೇ ಸಿಬ್ಬಂದಿಯವರು ಆಯೋಜಕರಿಗೆ ನಿಯಮ ಉಲ್ಲಂಘನೆ ಮಾಡಬೇಡಿರಿ ಅಂತಾ ತಿಳಿಸಿದ್ದಾಗಿಯೂ ಅವರು ನಮ್ಮ ಮಾತನ್ನು ಕೇಳದೆ ಅದೇ ರೀತಿ ಹಾಡುಗಳನ್ನು ಜೋರಾಗಿ ಹಚ್ಚಿಕೊಂಡು ಹೋಗಿರುತ್ತಾರೆ.    ಈ ಮೇಲ್ಕಾಣಿಸಿದ ಗಣೇಶ ಮಂಡಳಿಯವರಾದ ಭೋವಿ ಸಮಾಜ ಗಣೇಶ ಮಂಡಳಿ   ಹಳೇ ಭೋವಿಗಲ್ಲಿ ಸರಾಫ ಬಜಾರ ಕಲಬುರಗಿ ರವರು ಹಾಗೂ ರಾಜ್ ಡಿ.ಜೆ ಸೌಂಡ್ ಸಿಸ್ಟಮ್ ಸೋಲಾಪೂರ ನೇದ್ದರ ಮಾಲಿಕನಾದ ಸಲೀಮ ಹಾಗೂ ಇತರರು ಕೂಡಿಕೊಂಡು ಉದ್ದೇಶ ಪೂರ್ವಕವಾಗಿ ಒಂದು ಸಮುದಾಯದ ಪ್ರಾರ್ಥನಾ ಸ್ಥಳದ ಹತ್ತಿರ ಬಂದಾಗ ಆ ಸಮುದಾಯದ ಮತೀಯ ಭಾವನಗೆ ಆಘಾತ ಉಂಟು ಮಾಡುವ ಉದ್ದೇಶದಿಂದ ಪ್ರಚೋದನಾಕಾರಿ ಹಾಡುಗಳನ್ನು ಹಚ್ಚಿಕೊಂಡು ಮೆರವಣಿಗೆ ಮಾಡಿ ಕಾನೂನು ಉಲ್ಲಂಘನೆ ಮಾಡಿದ್ದು, ಈ ಘಟನೆಯು ೨-೦೦ ಎ.ಎಂ ದಿಂದ ೨-೩೦ ಎ.ಎಂ ಮದ್ಯದ ಅವಧಿಯಲ್ಲಿ ಜರುಗಿರುತ್ತದೆ. ಸದರಿಯವರ  ವಿರುದ್ದ ಕಾನೂನು ಕಾನೂನು ಕ್ರಮ ಜರುಗಿಸಬೇಕು  ಅಂತಾ ಕೊಟ್ಟ ಲಿಖಿತ ವರದಿ   ಅರ್ಜಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಇತ್ತೀಚಿನ ನವೀಕರಣ​ : 20-09-2022 05:34 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080