ಅಭಿಪ್ರಾಯ / ಸಲಹೆಗಳು

ಎಂ.ಬಿ.ನಗರ ಪೊಲೀಸ ಠಾಣೆ :-ಇಂದು ದಿನಾಂಕ ೧೧/೦೯/೨೦೨೧ ರಂದು ೧೧.೩೦ ಎ.ಎಂ. ಕ್ಕೆ ನಾನು ಠಾಣೆಯಲ್ಲಿದ್ದಾಗ ಪರ‍್ಯಾದಿ ಶ್ರೀ ಚಂದ್ರಾರೆಡ್ಡಿ ತಂದೆ ಶಂಕರರೆಡ್ಡಿ ಪಾಟೀಲ ವ||೫೮ ಜಾ|| ರೆಡ್ಡಿ ಉ|| ರಾಷ್ಟ್ರಿಯ ಹೆದ್ದಾರಿ ಯಾದಗಿರ ಕಛೇರಿಯಲ್ಲಿ ಸಹಾಯಕ ಕರ‍್ಯನಿವರ್ಾಹಕ ಇಂಜಿನಿಯರ ಕೆಲಸ ಸಾ||ಮ.ನಂ ೨-೯೧೦-೬೭/೧೫/೧, ಓಕಳಿ ಕ್ಯಾಂಪ ಸೇಡಂ ರಸ್ತೆ, ಕಲಬುರಗಿ ನಗರ, ಪೊ.ನಂ. 9480647795  ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಟೈಪ ಮಾಡಿಸಿದ  ದೂರು ಸಲ್ಲಿಸಿದ್ದು ಸದರಿ ದೂರಿನ ಸಂಕ್ಷಿಪ್ತ ಸಾರಾಂಶವೆನೆಂದರೆ,  ನಾನು ಮತ್ತು ನಮ್ಮ ಕುಟುಂಬ ಸುಮಾರು ೧೨ ರ‍್ಷಗಳಿಂದ ನಾವುಗಳು ಸ್ವಂತ ಮನೆ ಮಾಡಿಕೊಂಡು ಸದರಿ ವಿಳಾಸದಲ್ಲಿ ವಾಸವಾಗಿರುತ್ತೆವೆ. ನಾನು ಸುಮಾರು ೧ ತಿಂಗಳಿಂದ ರಾಷ್ಟ್ರಿಯ ಹೆದ್ದಾರ ಯಾದಗಿರಿ ಕಛೇರಿಯಲ್ಲಿ ಸಹಾಯಕ ಕರ‍್ಯನರ‍್ವಾಹಕ ಇಂಜಿನಿಯರ ಕೆಲಸ ಮಾಡಿಕೊಂಡು ಇರುತ್ತೇನೆ, ನನಗೆ ಒಂದು ಗಂಡು ಮತ್ತು ಒಂದು ಹೆಣ್ಣು ಮಗಳಿದ್ದು, ಗಂಡು ಮಗನು ಸುಮಾರು ೬ ರ‍್ಷಗಳಿಂದ ಯು.ಎಸ್.ಎ ದಲ್ಲಿ ಸಾಪ್ಟವೇರ ಇಂಜಿನಿಯರಿಂಗ ಅಂತಾ ಕೆಲಸ ಮಾಡಿಕೊಂಡು ಇರುತ್ತಾನೆ. ಮಗಳು ೧ ತಿಂಗಳಿಂದೆ ಹೆಚ್ಚಿನ ವಿಧ್ಯಾಭ್ಯಾಸಕ್ಕಾಗಿ ಯು.ಎಸ್.ಎ ಗೆ ಹೋಗಿರುತ್ತಾಳೆ, ಮನೆಯಲ್ಲಿ ನಾನು ಮತ್ತು ನನ್ನ ಹೆಂಡತಿಯಾದ ಶ್ರೀಮತಿ ಕವಿತಾ ಪಾಟೀಲ ಇಬ್ಬರೂ ಮನೆಯಲ್ಲಿರುತ್ತೇವೆ. ಹೀಗಿದ್ದು ನಿನ್ನೆ ದಿನಾಂಕ ೧೦/೦೯/೨೦೨೧ ರಂದು ಗಣೇಶ ಚತರ‍್ತಿ ಇದ್ದ ಪ್ರಯುಕ್ತ ಮನೆಯಲ್ಲಿ ಮಣ್ಣಿನ ಗಣಪತಿ ತಂದು ಹಾಲಿನಲ್ಲಿ ಕೂಡಿಸಿದ್ದು ಇರುತ್ತದೆ. ಈ ಸಮಯದಲ್ಲಿ ಪೂಜಾ ಸಲುವಾಗಿ ಬೇಳ್ಳಿಯ ಸಾಮಾನುಗಳನ್ನು ಗಣಪತಿಯ ಪೂಜಾಸಮಯದಲ್ಲಿ ಉಪಯೋಗಿಸಿ ಅಲ್ಲಿಯೇ ಬಿಟ್ಟಿದ್ದು ಇರುತ್ತದೆ. ಅದೆ ರೀತಿ ಮನೆಯ ಪೂಜಾರೂಮಿನಲ್ಲಿ ಬೇಳ್ಳಿಯ ಪೂಜಾ ಸಾಮನುಗಳು, ಬೇಳ್ಳಿಯ ಗಣಪತಿ ವಿಗ್ರಹ, ಬೇಳ್ಳಿಯ ಲಕ್ಷ್ಮಿ ವಿಗ್ರಹ ಮತ್ತು ಬೇಳ್ಳಿಯ ಶ್ರೀ ವೆಂಕಟರಮಣ ವಿಗ್ರಹಗಳು ಜಗಲಿಯ ಮೇಲೆ ಇರುತ್ತವೆ. ಹೀಗಿದ್ದು ನಿನ್ನೆ ದಿನಾಂಕ ೧೦/೦೯/೨೦೨೧ ಗಣಪತಿ ಪೂಜಾ ಮುಗಿಸಿ ರಾತ್ರಿ ೧೧.೦೦ ಗಂಟೆಯ ಸುಮಾರಿಗೆ ಎಲ್ಲರೂ ಊಟ ಮಾಡಿಕೊಂಡು ಮನೆಯ ಮೆನ್ ಡೋರಗೆ ಇನ್ನರ ಲಾಕ ಮತ್ತು ಕಿಡಕಿಗಳನ್ನು ಹಾಕಿ ಮಲಗಿಕೊಂಡಿದ್ದು ಇರುತ್ತದೆ. ನನಗೆ ಡೈಯಾಬಿಟಕ ಇದ್ದ ಪ್ರಯುಕ್ತ ನಾನು ರಾತ್ರಿ ೨-೩ ಸಲ ಬಾತರೂಮಿಗೆ ಹೋಗಿಬರುವದು ಮಾಡುತ್ತೇನೆ. ಹೀಗಿದ್ದು ದಿನಾಂಕ ೧೧/೦೯/೨೦೨೧ ರಂದು ಬೆಳಗಿನ ಜಾವ ೦೨.೦೦ ಗಂಟೆಯ ಸುಮಾರಿಗೆ ನಾನು ಬಾತರೂಮಿಗೆ ಹೋಗಿ ಬಂದು ಮತ್ತೆ ಮಲಗಿಕೊಂಡಿರುತ್ತೇನೆ. ಮತ್ತೆ ಬೆಳೆಗ್ಗೆ ೦೪.೦೦ ಗಂಟೆಗೆ ಬಾತ ರೂಮಿಗೆ ಹೋಗುವದಕ್ಕಾಗಿ ಎದ್ದಾಗ ನಮ್ಮ ಬೆಡರೂಮಿನ ಬಾಗಿಲು ತೆರೆಯದಿದ್ದಾಗ ನಾನು ಬಾಗಿಲು ಜೋರಾಗಿ ಎಳೆದಾಗ ಬಾಗಿಲಿಗೆ ಬೆಡಶಿಟನಿಂದ ಕಟ್ಟಿದ್ದು ಗೊತ್ತಾಯಿತ್ತು ನಂತರ ನಾನು ಮತ್ತು ನನ್ನ ಹೆಂಡತಿಯಾದ ಶ್ರಿಮತಿ ಕವಿತಾ ಇಬ್ಬರೂ ಕೂಡಿ ಮತ್ತೆ ಜೋರಾಗಿ ಎಳೇದಾಗ ಬೆಡಶಿಟ ಬಿಚ್ಚಿ ಬಾಗಿಲು ತೆರೆದಿದ್ದು ನನಗೆ ಯಾರೋ ಕಳ್ಳರ ಕೈಚಳಕ ಇರಬಹುದು ಅಂತಾ ಅನುಮಾನ ಬಂದು ಹಾಲನಲ್ಲಿ ಬಂದು ನೋಡಲಾಗಿ ಹಾಲಿನಲ್ಲಿ ಗಣಪತಿ ಕೂಡಿಸಿದ ಜಾಗದಲ್ಲಿ ಬೇಳ್ಳಿಯ ಪೂಜಾ ಸಾಮಾನುಗಳು ಮತ್ತು ಪೂಜಾರೂಮಿನಲ್ಲಿರುವ ಬೇಳ್ಳಿಯ ದೇವರ ವಿಗ್ರಹಗಳು ಮತ್ತು ಬೇಳ್ಳಿಯ ಪೂಜಾಸಾಮಾನುಗಳು ಕಾಣಲಿಲ್ಲಾ ನಂತರ ನಮ್ಮ ಮನೆಯ ಇನ್ನೋಂದು ಬೆಡರೂಮಿಗೆ ಬಂದು ನೋಡಲಾಗಿ ಬೆಡರೂಮಿನ ಕಿಡಕಿಯ ಕಬ್ಬಿಣದ ಗ್ರೀಲ ಸ್ಕ್ರೂ ತೆಗೆದು ಬಿಚ್ಚಿದ್ದು ಮತ್ತು ಆಲಮಾರಿಯನ್ನು ತೆರೆದಿದ್ದು ಸಾಮಾನುಗಳು ಚೆಲ್ಲಾಪಿಲ್ಲೆಯಾಗಿ ಬಿದ್ದಿರುವದನ್ನು ಕಂಡುಬಂದಿರುತ್ತದೆ. ನಾವುಗಳು ಗಾಬರಿಯಾಗಿ ಬೆಡ್ರೂಮಿನ ಒಳಗಡೆ ಹೋಗಿ ನೋಡಲಾಗಿ ಯಾರೋ ಕಳ್ಳರು ಬಂದು ನಮ್ಮ ಮನೆಯ ಕಿಡಕಿಯ  ಗ್ರ‍್ರಿಲ್ ಸ್ಕ್ರೂ ತೆಗೆದು ಮನೆಯ ಬೆಡ್ ರೂಮಿನ ಒಳಗಡೆ ಬಂದು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಂಶಯ ಬಂದ ನಂತರ ನಾವುಗಳು ನಮ್ಮ ಮನೆಯಲ್ಲಿ ಕಳ್ಳತನ ವಾಗಿರುವ ಸಾಮನುಗಳನ್ನು ನೋಡಿ ಪರಿಶೀಲನೆ ಮಾಡಿ ನೋಡಲಾಗಿ ಬೆಡ್ ರೂಮನಲ್ಲಿಟ್ಟ ಅಲಮಾರಿ, ಹಾಲಿನಲ್ಲಿ ಗಣಪತಿ ಪೂಜಾಗೆ ಮತ್ತು ಪೂಜಾ ರೂಮಿನಲ್ಲಿಟ್ಟ ಬೇಳ್ಳಿ ಸಾಮಾನುಗಳು ಅವುಗಳು ೧)೧೦ ಗ್ರಾಮ ಬಂಗಾರದ ಎರಡು ಜ್ಯೋತೆ ಕಿವಿ ಯೋಲೆಗಳು ಅಂ.ಕಿ. ೪೦೦೦೦/-, ೨) ಒಂದು ಬೆಳ್ಳಿಯ ವೆಂಕಟರಮಣ ವಿಗ್ರಹ ೨೫೦ ಗ್ರಾಮ ಅಂ.ಕಿ. ೧೨೫೦೦/- ೩) ಒಂದು ಬೆಳ್ಳಿಯ ಗಣಪತಿ ವಿಗ್ರಹ ೩೦೦ ಗ್ರಾಮ ಅಂ.ಕಿ. ೧೫೦೦೦/- ೪) ಒಂದು ಬೆಳ್ಳಿಯ ಲಕ್ಷ್ಮಿ ವಿಗ್ರಹ ೨೫೦ ಗ್ರಾಮ ಅಂ.ಕಿ. ೧೨೫೦೦/-, ೫) ೧೦೦೦ ಗ್ರಾಮ ಬೆಳ್ಳಿಯ ಎರಡು ದೊಡ್ಡ ಪೂಜಾ ಸಮೆಗಳು ಅಂ.ಕಿ. ೫೦೦೦೦/-,೬) ೫೦ ಗ್ರಾಮ ಬೆಳ್ಳಿಯ ಎರಡು ಸಣ್ಣ ಪೂಜಾ ಸಮೆಗಳು ಅಂ.ಕಿ. ೨೫೦೦/-, ೭) ೪೦ ಗ್ರಾಮ ಬೆಳ್ಳಿಯ ಎರಡು ದೀಪಗಳು ಅಂ.ಕಿ. ೨೦೦೦/- ೮) ೮೦೦ ಗ್ರಾಮ ಬೆಳ್ಳಿಯ ಎರಡು ಪ್ಲೆಟಗಳು ಅಂ.ಕಿ. ೪೦,೦೦೦/-, ೯) ೩೦೦ ಗ್ರಾಮ ಬೆಳ್ಳಿಯ ಎರಡು ಆರತಿ ಪ್ಲೆಟಗಳು ಅಂ.ಕಿ. ೧೫೦೦೦/-, ೧೦) ೨೦ ಗ್ರಾಮ ಬೆಳ್ಳಿಯ ಒಂದು ಅಗರಬತ್ತಿ ಹಚ್ಚುವ ಚಿಮನಿ ಅಂ.ಕಿ. ೧೦೦೦/-, ೧೧) ೨೦ ಗ್ರಾಮ ಬೆಳ್ಳಿಯ ಒಂದು ಕಪರ್ೂರ ಬೆಳಗುವ ಸಮೆ ಅಂ.ಕಿ. ೧೦೦೦/-, ೧೨) ೨೦೦ ಗ್ರಾಮ ಬೆಳ್ಳಿಯ ಮೂರು ದೊಡ್ಡ ಬಟ್ಟಲುಗಳು ಅಂ.ಕಿ. ೧೦೦೦೦/-,೧೩) ೪೦ ಗ್ರಾಮ ಬೆಳ್ಳಿಯ ಎರಡು ಅರಿಶಿಣ-ಕುಂಕಮ ಬರಣಿಗಳು ಅಂ.ಕಿ. ೨೦೦೦/-, ೧೪) ೧೦೦ ಗ್ರಾಮ ಬೆಳ್ಳಿಯ ಒಂದು ಕಿಲಿ ಬೆಂಚ ಅಂ.ಕಿ. ೫೦೦೦/-, ೧೫) ಒಂದು ೨೫೦ ಗ್ರಾಮ ಬೆಳ್ಳಿ ಗಂಟೆ ಅಂ.ಕಿ. ೧೨೫೦೦/- ಹೀಗೆ  ವಿವಿದ  ಬಂಗಾರದ ಆಭರಣಗಳು ಒಟ್ಟು ಸೇರಿ ೧೦ ಗ್ರಾಂ. ಬಂಗಾರದ ಅ.ಕಿ. ೪೦,೦೦೦/- ರೂ ಹಾಗೂ ವಿವಿದ ಬೆಳ್ಳಿಯ ಸಾಮಾನುಗಳು ೩೬೨೦ ಗ್ರಾಂ  ಅಂ.ಕಿ ೧,೮೧,೦೦೦/- ಹೀಗೆ ಬಂಗಾರ ಮತ್ತು ಬೆಳ್ಳಿಯ ಆಭರಣ ಹಾಗೂ ಪೂಜಾ ಸಾಮಾನುಗಳು ಒಟ್ಟು ಸೇರಿ ೨,೨೧,೦೦೦/- ಬೆಲೆ ಬಾಳವ ವಸ್ತುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ನಮ್ಮ ಬಂಗಾರದ ಮತ್ತು ಬೇಳ್ಳಿಯ ಸಾಮಾನುಗಳು ಹಳೆಯದಾಗಿದ್ದು ಅವುಗಳು ಕಾಣಿಕೆಯ ರೂಪದಲ್ಲಿ ಬಂದಿರುವದರಿಂದ ಯಾವುದೇ ರಸಿದಿ ಇರುವದಿಲ್ಲಾ. ಕಾರಣ ದಿನಾಂಕ ೧೧/೦೯/೨೦೨೧ ರಂದು ಬೆಳಗಿನ ಜಾವ ಸುಮಾರು ೦೨.೦೦ ಗಂಟೆಯಿಂದ ಬೆಳಗಿನ ಜಾವ ಸುಮಾರು ೦೪.೦೦ ಗಂಟೆಯ ಅವಧಿಯಲ್ಲಿ ಯಾರೋ ಕಳ್ಳರು ಮನೆಯ ಕಿಡಕಿಯ ಗ್ರ‍್ರಿಲ್ ಸ್ಕ್ರೂ  ತೆಗೆದು ಮನೆಯ ಒಳಗಡೆ ಪ್ರವೇಶ ಮಾಡಿ ಮನೆಯ ಬೆಡ್ ರೂಮನಲ್ಲಿಟ್ಟ ಕಿಲಿ ತೆಗೆದುಕೊಂಡು ಅಲಮಾರಿಯ ಬೀಗ ತೆರೆದು ಅಲಮಾರಿಯಲ್ಲಿನ  ವಿವಿಧ ಬಂಗಾರದ ಆಭರಣಗಳು ಮತ್ತು ಹಾಲಿನಲ್ಲಿ ಗಣಪತಿ ಮರ‍್ತಿ ಬಳಿ ಇರುವ ಬೆಳ್ಳಿಯ ಪೂಜಾ ಸಾಮಾನುಗಳು ಮತ್ತು ಪೂಜಾ ರೂಮಿನಲ್ಲಿರುವ ದೆವರ ವಿಗ್ರಹಗಳು, ಪೂಜಾಸಾಮಾನುಗಳು ಸೇರಿ ಒಟ್ಟು೨,೨೧,೦೦೦ /- ರೂ ಬೆಲೆ ಬಾಳುವ ವಸ್ತುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಮಾನ್ಯರವರು ಕಳ್ಳತನವಾದ ಮಾಲನ್ನು ಪತ್ತೆ ಮಾಡಿ ಕಳ್ಳತನ ಮಾಡಿದ ಕಳ್ಳರ ವಿರುದ್ದ ಸೂಕ್ತ ಕಾನೂನು ರೀತಿ ಕ್ರಮ ಜರೂಗಿಸಲು ವಿನಂತಿ ಅದೆ. ನಾನು ಮನೆಯಲ್ಲಿ ಅಲಮಾರಿ ಚೆಕ್ ಮಾಡಿ ಕಳ್ಳತನವಾದ ಬಗ್ಗೆ ಮನೆಯಲ್ಲಿ ವಿಚಾರಮಾಡಿ ಠಾಣೆಗೆ ಬಂದು ದೂರು ನೀಡಲು ತಡವಾಗಿರುತ್ತದೆ. ಅಂತಾ ನೀಡಿರುವ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 22-09-2021 01:19 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080