ಅಭಿಪ್ರಾಯ / ಸಲಹೆಗಳು

ಎಂ.ಬಿ.ನಗರ ಪೊಲೀಸ್‌ ಠಾಣೆ :- ಫಿರ್ಯಾಧಿದಾರರು ಇಂದು ದಿನಾಂಕ 11-08-2022  ರಂದು ಮದ್ಯಾಹ್ನ ೦೧-೦೦ ಗಂಟೆಗೆ ಏರಿಯಾದಲ್ಲಿ ಇದ್ದಾಗ, ಸೇಡಂ ರೊಡಿಗೆ ಇರುವ ಮಹೇಂದ್ರ ಶೋರೂಮ್ ಹಿಂದುಗಡೆ ಇರುವ ಹಳೆ ಕಟ್ಟಡದ ರೂಂನಲ್ಲಿ ಅಕ್ರಮವಾಗಿ ಗ್ಯಾಸ ಸಿಲಿಂಡರಗಳನ್ನು ಸಂಗ್ರಹಿಸಿಕೊಂಡು ಯಾವುದೇ ಲೈಸನ್ಸ ಇಲ್ಲದೇ ಅಡುಗಿಗೆ ಉಪಯೋಗಿಸುವ ಸಿಲಿಂಡರಗಳನ್ನು ಆಟೋರಿಕ್ಷಾಗಳಿಗೆ ತುಂಬುತ್ತಿದ್ದಾರೆಂದು ಬಂದು ಬಾತ್ಮಿ ಬಂದ ಮೇರೆಗೆ    ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಮುದ್ದೆಮಾಲು ಮತ್ತು ಆರೋಪಿತರನ್ನು ಠಾಣೆಗೆ ತಂದು ಪ್ರಕರಣ ದಾಖಲಿಸಿಕೊಂಡ ಬಗ್ಗೆ ವರದಿ.

 

ಸ್ಟೇಷನ್‌ ಬಜಾರ ಪೊಲೀಸ ಠಾಣೆ :- ದಿನಾಂಕ:05-08-2022  ರಂದು ರಾತ್ರಿ ೧೦-೦೦ ಗಂಟೆಯಲ್ಲಿ ನಾನು ವಾಸವಾಗಿರುವ ಮನೆಯ ಮುಂದೆ ನನ್ನ HERO HONDA SPLENDOR PLUS REG NO KA-32 EU-3839- VALUVE-20000/- ವಾಹನವನ್ನು ನಿಲ್ಲಿಸಿ. ನಾನು ಮನೆಯ ಒಳಗಡೆ ಹೋಗಿ ಮಲಿಕೊಂಡಿರುತ್ತೇನೆ. ನಂತರ ದಿನಾಂಕ: ೦೬-೦೮-೨೦೨೨ ರಂದು ಬೆಳಿಗ್ಗೆ ೦೬-೦೦ ಗಂಟೆಗೆ ಮನೆಯ ಒಳಗಡೆಯಿಂದ ಎದ್ದು ಹೊರಗಡೆ ಬಂದು ನೋಡಿದಾಗ ನನ್ನ ವಾಹನ ಇರಲಿಲ್ಲ.ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂದು ಫಿರ್ಯಾದಿ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸಂಚಾರಿ ಪೊಲೀಸ್‌ ಠಾಣೆ -2 :-  ದಿನಾಂಕ -11-08-2022  ರಂದು ೫:೦೦ ಪಿ.ಎಮ್ ಕ್ಕೆ ಶ್ರೀ ಗುಲಾಮ ಜಿಲಾನಿ ತಂದೆ ಗುಲಾಮ ಮರ‍್ತೂಜಾ ವ; ೪೨ ವರ್ಷ ಜಾ; ಮುಸ್ಲಿಂ ಉ; ಖಾಸಗಿ ಕೆಲಸ ಸಾ; ಶಹಾ ಜಿಲಾನಿ ದರ್ಗಾ ಮದೀನಾ ಕಾಲೋನಿ ಎಮ್.ಎಸ್.ಕೆ ಮಿಲ್ ಕಲಬುರಗಿ ಇವರು ಕನ್ನಡದಲ್ಲಿ ಟೈಪ ಮಾಡಿದ ಫಿರ್ಯಾದಿ ಅರ್ಜಿಯನ್ನು ತಂದು ಹಾಜರು ಪಡಿಸಿದ್ದು ಸಾರಂಶವೆನೆಂದರೆ, ನಿನ್ನೆ ದಿನಾಂಕ-೧೦/೦೮/೨೦೨೨ ರಂದು ಬೆಳಿಗ್ಗೆ ನಾನು ಮನೆಯಲ್ಲಿರುವಾಗ ನಮ್ಮ ಪರಿಚಯದ ಸೈಯದ ಏಜಾಜ ಅಲಿ ತಂದೆ ಸೈಯದ ಅಲಿ ಇವರು ನನಗೆ ಪೋನ್ ಮಾಡಿ ನಾನು   ವೈಯಕ್ತಿಕ ಕೆಲಸದ ಕುರಿತು ಕೆ.ಸಿ.ಟಿ ಕಾಲೇಜ ಕಡೆಯಿಂದ ಹಾಗರಗಾ ಕ್ರಾಸ್ ಕಡೆಗೆ ಹೋಗುವಾಗ ಪೀರ ಬಂಗಾಲಿ ಗ್ರೌಂಡ್ ದಾಟಿ ಹಾಗರಗಾ ಕ್ರಾಸ್ ರಸ್ತೆಯ ಮೇಲೆ ಹೋಗುವಾಗ ಬೆಳಿಗ್ಗೆ ೦೯:೩೦ ಗಂಟೆ ಸುಮಾರಿಗೆ ಒಬ್ಬ ಮೋಟಾರ ಸೈಕಲ ಸವಾರನು ತನ್ನ ಮೋಟರ ಸೈಕಲ ಮೇಲೆ ಹಿಂದುಗಡೆ ಒಬ್ಬ ವೈಕ್ತಿಗೆ ಕೂಡಿಸಿಕೊಂಡು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಮೋಟಾರ ಸೈಕಲಗೆ ಓವರ ಟೇಕ್ ಮಾಡಿ ಎಡಬಲ ಕಟ್ ಹೊಡೆಯುತ್ತಾ ಹೋಗಿ ರಸ್ತೆಯ ಮೇಲೆ ಬಿದ್ದರು. ಅದನ್ನು ನೋಡಿ ಅಲ್ಲಿ ಇದ್ದ ಜನರು ಹಾಗೂ ನಾನು ಅಲ್ಲಿ ಹೋಗಿ ಸದರಿ ವೈಕ್ತಿಗಳಿಗೆ ಎಬ್ಬಿಸಿ ನೋಡಲು ಮೋಟಾರ ಸೈಕಲ ಸವಾರನು ನಿಮ್ಮ ಮಾವ ಗುಲಾಮ ಅಬ್ಬಾಸ್ ಇದ್ದು ಹಿಂದೆ ಕುಳಿತ ವೈಕ್ತಿ ನಿಮ್ಮ ಅಣ್ಣ ಗುಲಾಮ ಯಜದಾನಿ ಇದ್ದು ಸದರ ಘಟನೆಯಿಂದ ನಿಮ್ಮ ಮಾವನಿಗೆ ಯಾವುದೇ ಗಾಯಗಳು ಕಂಡು ಬಂದಿರುವುದಿಲ್ಲಾ. ನಿಮ್ಮ ಅಣ್ಣನಿಗೆ ತೆಲೆಯ ಹಿಂದುಗಡೆ ರಕ್ತಗಾಯ ಹಾಗೂ ಕೈಕಾಲುಗಳಿಗೆ ತರಚಿದ ಗಾಯಗಳಾಗಿದ್ದು ನಿಮ್ಮ ಮಾವ ಚಲಾಯಿಸಿಕೊಂಡ ಮೋಟಾರ ಸೈಕಲ ನಂ ನೋಡಲು ಕೆಎ-೩೨ ಇ.ಆರ್-೮೨೨೪ ನೇದ್ದು ಇದ್ದು ಸದರ ವಿಷಯ ಗೋತ್ತಾಗಿ ಒಂದು ಅಂಬುಲೈನ್ಸ್ ವಾಹನ ಬಂದಿದ್ದು ನಾನು ನಿಮ್ಮ ಅಣ್ಣನಿಗೆ ಉಪಚಾರ ಕುರಿತು ಅದರಲ್ಲಿ ಕೂಡಿಸಿಕೊಂಡು   ಮಣ್ಣೂರ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದು ನೀವು ಬರಬೇಕೆಂದು ತಿಳಿಸಿದ ಮೇರೆಗೆ ನಾನು ಮಣ್ಣೂರ ಆಸ್ಪತ್ರೆಗೆ ಹೋಗಿ ನೋಡಲು ನಮ್ಮ ಅಣ್ಣನಾದ ಗುಲಾಮ ಯಜದಾನಿ ಇವರಿಗೆ ಸೈಯದ ಏಜಾಜ ಅಲಿ ಹೇಳಿರುವ ಹಾಗೆ ಗಾಯಗಳಾಗಿದ್ದು ಅವರು ಮಾತನಾಡುತ್ತಾ ಮದ್ಯಾಹ್ನ ಏಕಾಏಕಿ ಮಾತನಾಡುವುದನ್ನು ನಿಲ್ಲಿಸಿದ್ದು ವೈದ್ಯರು ಅವರಿಗೆ ಶಸ್ತ್ರ ಚಿಕಿತ್ಸೆ ಮಾಡ ಬೇಕೆಂದು ತಿಳಿಸಿದಾಗ ನಿನ್ನೆ ಶಸ್ತ್ರ ಚಿಕಿತ್ಸೆ ಮಾಡಿಸಿದ್ದು. ನಾನು ನಮ್ಮ ಅಣ್ಣನ ಚಿಕಿತ್ಸೆಯಲ್ಲಿದ್ದು, ಅಪಘಾತ ಪಡಿಸಿದವನು ನಮ್ಮ ಮಾವನೆ ಆಗಿರುವುದರಿಂದ ನಮ್ಮ ಮನೆಯವರೊಂದಿಗೆ ವಿಚಾರಿಸಿ ಇಂದು ದೂರು ನೀಡಲು ತಡವಾಗಿರುತ್ತದೆ. ಕಾರಣ ಸದರಿ ಮೋಟರ ಸೈಕಲ ನಂ. ಕೆಎ ೩೨ ಇ.ಆರ್-೮೨೨೪ ನೇದ್ದರ ಸವಾರ ಗುಲಾಮ ಅಬ್ಬಾಸ ಸವಾರನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೊಟ್ಟು ಫಿರ್ಯಾದಿ ಅರ್ಜಿ ಸಾರಂಶದ ಮೇಲಿಂದ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸಂಚಾರಿ ಪೊಲೀಸ್‌ ಠಾಣೆ -2 :-  ದಿನಾಂಕ 11-08-2022  ರಂದು ೧೧:೩೦ ಎ.ಎಮ್ ಕ್ಕೆ ಕುರಾಳ ಆಸ್ಪತ್ರೆಯಿಂದ ಶ್ರೀಮತಿ ಶೋಭಾವತಿ ಗಂಡ ರಾಜೆಂದ್ರಕುಮಾರ ಗಾರಂಪಳ್ಳಿ ವಯಃ ೫೦ ವರ್ಷ ಸಾಃ ಆರ್ಯನ್ ಸ್ಕೂಲ ಎದುರುಗಡೆ ದರಿಯಾಪೂರ ಜಿಡಿಎ ಲೇಔಟ ಕಲಬುರಗಿ ಇವರ ಆರ್.ಟಿ.ಎ ಎಮ್.ಎಲ್.ಸಿ ಮಾಹಿತಿ ಬಂದ ಮೇರೆಗೆ ನಾನು ಕುರಾಳ ಆಸ್ಪತ್ರೆಗೆ ಭೇಟಿ ನೀಡಿ ಎಮ್.ಎಲ್.ಸಿ ಪತ್ರ ವಸೂಲ ಮಾಡಿಕೊಂಡು ಗಾಯಾಳು ಶೋಭಾವತಿ ಇವರಿಗೆ ವಿಚಾರಿಸಲು ಅವರು ನಾನು ಪ್ರೌಢಶಾಲೆಯ ಪಿಟಿ ಟೀಚರ ಅಂತಾ ಚಿಟಗುಂಪಾ ತಾಲೂಕಿನ ಕೊಡಂಬಲ ಪ್ರೌಢಶಾಲೆಯಲ್ಲಿ ಕೆಲಸ ಮಾಡುತ್ತಿದ್ದು, ನಾನು ನಿನ್ನೆ ದಿನಾಂಕ ೧೦/೦೮/೨೦೨೨ ರಂದು ಬೆಳಿಗ್ಗೆ ನನ್ನ ಕರ್ತವ್ಯ ಕುರಿತು ನಮ್ಮ ಮನೆಯಿಂದ ಕೊಡಂಬಲಗೆ ಹೋಗಿ ರ‍್ತವ್ಯ ಮುಗಿಸಿಕೊಂಡು ಮರಳಿ ಸಾಯಂಕಾಲ ಕಲಬುರಗಿಗೆ ಬಂದು ಸುಪರ ಮರ‍್ಕೆಟನಲ್ಲಿ ಗೃಹ ಬಳಕೆ ವಸ್ತುಗಳನ್ನು ಖರೀದಿ ಮಾಡಿಕೊಂಡು ಒಂದು ಅಟೋ ರೀಕ್ಷಾ ಸಲುವಾಗಿ ಚೌಕ ಸರ್ಕಲನಲ್ಲಿ ರಸ್ತೆಯ ಬದಿಯಲ್ಲಿ ನಿಂತಿದಾಗ ಸಾಯಂಕಾಲ ೬:೪೫ ಗಂಟೆ ಸುಮಾರಿಗೆ ಕಾರ ನಂ. ಕೆಎ ೦೧ ಎಮ್.ಟಿ ೮೦೦೦ ನೇದ್ದರ ಚಾಲಕನು ಹುಮ್ನಾಬಾದ ಬೇಸದಿಂದ ಜನತಾ ಬಜಾರ ಕ್ರಾಸ್ ಕಡೆಗೆ ಹೋಗುವ ಕುರಿತು ತನ್ನ ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಬದಿಯಲ್ಲಿ ನಿಂತಿದ ನನಗೆ ಡಿಕ್ಕಿ ಪಡಿಸಿ ರಸ್ತೆಯ ಮೇಲೆ ಬಿಳಿಸಿ ನನ್ನ ಕಾಲಿನ ಎರಡು ಪಾದಗಳ ಮೇಲಿಂದ ಕಾರನ್ನು ಚಲಾಯಿಸಿಕೊಂಡು ಜನತಾ ಬಜಾರ ಕಡೆಗೆ ಓಡಿ ಹೋಗಿದ್ದು, ಆತನಿಗೆ ನೋಡಿರುತ್ತೆನೆ. ಮುಂದೆ ನೋಡಿದಲ್ಲಿ ಗರ‍್ತಿಸುತ್ತೆನೆ. ಸದರ ಘಟನೆಯಿಂದ ನನ್ನ ಎರಡು ಕಾಲುಗಳ ಮೊಳಕಾಲುಗಳಿಗೆ ತರಚಿದಗಾಯ ಹಾಗು ಪಾದದ ಮೇಲ್ಭಾಗದಲ್ಲಿ ತರಚಿದಗಾಯ ಹಾಗು ಭಾರಿ ಒಳಪೆಟ್ಟಾಗಿದ್ದು, ನಾನು ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆಗೆ ಹೋಗಿ ಹೆಚ್ಚಿನ ಉಪಚಾರ ಕುರಿತು ನಿನ್ನೆ ರಾತ್ರಿ ೧೧:೦೦ ಗಂಟೆ ಸುಮಾರಿಗೆ ಕುರಾಳ ಆಸ್ಪತ್ರೆಗೆ ಬಂದು ಸೇರಿಕೆಯಾಗಿದ್ದು, ನಾನು ಚಿಕಿತ್ಸೆಯಲ್ಲಿದ್ದು ದೂರು ನೀಡಲು ತಡವಾಗಿರುತ್ತದೆ. ನನಗೆ ಅಪಘಾತ ಪಡಿಸಿ ಓಡಿ ಹೋದ ಸದರಿ ಕಾರ ನಂ. ಕೆಎ ೦೧ ಎಮ್.ಟಿ ೮೦೦೦ ನೇದ್ದರ ಚಾಲಕನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೊಟ್ಟ ಫಿರ್ಯಾದಿ ಹೇಳಿಕೆ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 29-08-2022 05:38 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080