ಅಭಿಪ್ರಾಯ / ಸಲಹೆಗಳು

ಮಹಿಳಾ ಪೊಲೀಸ ಠಾಣೆ:- ಇಂದು ದಿನಾಂಕ ೧೦.೦೮.೨೦೨೧ ರಂದು ಸಾಯಂಕಾಲ ೭ ಗಂಟೆಗೆ ಫರ‍್ಯಾದಿ ಕು|| ಭಾವನಾ ತಂದೆ ಬಸವರಾಜ ಕಾಂಬಳೆ ವಯಾ|| ೧೭ ವರ್ಷ ಜಾ|| ಪ.ಜಾತಿ ಸಾ: ಸಂಜೀವ ನಗರ, ಕಲಬುರಗಿ ಇವರು ಠಾಣೆಗೆ ಹಾಜರಾಗಿ ದೂರು ಸಲ್ಲಿಸಿದ್ದು, ಸದರಿ ದೂರಿನ ಸಾರಾಂಶ ಏನೆಂದರೆ, ನಾನು ಸದ್ಯ ಶ್ರೀ ವೀರತಪಸ್ವಿ ಚನ್ನವೀರ ಶಿವಾಚಾರ್ಯ ಹಿರಿಯ ಪ್ರಾಥಮಿಕ ಶಾಲೆ, ವಕ್ಕಲಗೇರಾ, ಕಲಬುರಗಿಯಲ್ಲಿ ಎಸ್.ಎಸ್.ಎಲ್.ಸಿ. ಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದೇನೆ. ಪ್ರಭಾಕರ ತಂದೆ ರಮೇಶ ಇತನು ನನ್ನ ತಾಯಿ ತವರು ಮನೆಯಾದ ತಾಂಬಾಳ, ತಾ: ನೀಲಂಗಾ, ಜಿ: ಲಾತೂರ ಇತನು ಇಲ್ಲಿಯ ನಿವಾಸಿಯಾಗಿದ್ದು, ಸದರಿ ನಾವು ತಾಂಬಾಳಕ್ಕೆ ಹೋಗಿ-ಬರುವುದು ಮಾಡುತ್ತಿದ್ದಾಗ ಇತನ ಪರಿಚಯವಾಗಿದ್ದು, ಅವನು ಪದೇ ಪದೇ ಶಾಲೆಗೆ ಬಂದು, ನನಗೆ ಮಾನಸಿಕವಾಗಿ ಹಿಂಸೆ ನೀಡಿ, ನನಗೆ ಪ್ರೀತಿ ಮಾಡು ಎಂದು ಒತ್ತಾಯಿಸುತ್ತಿದ್ದನು. ಮತ್ತು ನನ್ನ ತಂದೆ ತಾಯಿ ಇರದ ಸಂದರ್ಭ ನೋಡಿ, ಮನೆಗೆ ಬಂದು, ನನ್ನöನ್ನು ಒತ್ತಾಯದಿಂದ ಪ್ರೀತಿ ಮಾಡು, ಇಲ್ಲದಿದ್ದರೇ, ನಿನ್ನ ತಮ್ಮ, ತಂಗಿ ಹಾಗೂ ನಿನ್ನನ್ನು ಕೊಲೆ ಮಾಡುತ್ತೇನೆ ಎಂದು ಜೀವ ಬೆದರಿಕೆ ಹಾಕುವುದು ಮಾಡಲು ಪ್ರಾರಂಭ ಮಾಡಿದನು. ನಂತರದ ದಿನಗಳಲ್ಲಿ ಪ್ರಭಾಕರನು ನನ್ನ ತಂದೆ-ತಾಯಿ ಮನೆಯಲ್ಲಿರದ ಸಂದರ್ಭದಲ್ಲಿ ನಮ್ಮ ಮನೆಗೆ ಬಂದು, ಅಂಜಿಕೆ ಹಾಕಿ, ನನ್ನ ಸಂಗಡ ಜಬರದಸ್ತಿ ಮಾಡಿ, ಹಟಸಂಭೋಗ ಮಾಡಲು ಬಂದಾಗ ನಾನು ಇನ್ನು ಚಿಕ್ಕ ವಯಸ್ಸಿನವಳು ಇರುತ್ತೇನೆ. ನನ್ನ ಜೊತೆ ನೀನು ಈ ರೀತಿ ಅಸಹ್ಯವಾಗಿ ಮಾಡುವುದು ಸರಿ ಇರುವದಿಲ್ಲಾ ಅಂತಾ ಹೇಳಿದರೂ ಕೂಡಾ ಅವನು ಬಿಡದೇ ದಿನಾಂಕ ೨೪.೦೩.೨೦೧೯ ರಂದು ರಾತ್ರಿ ೧೦ ಗಂಟೆ ಸುಮಾರಿಗೆ ನನ್ನ ಜೊತೆ ಜಬರಿ ಸಂಭೋಗ ಮಾಡಿರುತ್ತಾನೆ. ಅಲ್ಲಿಂದ ಅವನು ನನಗೆ ಜೀವ ಭಯ ಹಾಕುತ್ತಾ ನನ್ನ ಜೊತೆ ಜಬರಿ ಸಂಭೋಗ ಮಾಡುತ್ತಾ ಬಂದಿರುತ್ತಾನೆ.  ನಂತರ ಒಂದು ದಿವಸ ನಾನು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾಗ, ನನ್ನ ತಂದೆ-ತಾಯಿವರು ಆ ಸಮಯದಲ್ಲಿ ಬಂದಿರುತ್ತಾರೆ. ನಂತರ ಏತಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಿ ಎಂದು ಕೇಳಿದಾಗ,  ಸದರಿ ನನ್ನ ನಡುವೆ ಹಾಗೂ ಪ್ರಭಾಕರ ನಡುವೆ ಆದ ಎಲ್ಲಾ ವಿಷಯವನ್ನು ಅವರ ಮುಂದೆ ಹೇಳಿದಾಗ, ನನ್ನ ತಂದೆ ತಾಯಿ ಪ್ರಭಾಕರನ ಊರಿಗೆ ಹೋಗಿ, ಪ್ರಭಾಕರನ ತಂದೆಯಾದ ರಮೇಶ, ತಾಯಿಯಾದ ಸುಮನ್‌ಬಾಯಿ ಇವರಿಗೆ ಸದರಿ ವಿಷಯಗಳನ್ನು ತಿಳಿಸಿದಾಗ, ಅವನ ತಂದೆತಾಯಿ ಮಗನಾದ ಪ್ರಬಾಕರ ಇತನಿಗೆ ಇವಳ ಜೊತೆ ದೈಹಿಕ ಸಂಪರ್ಕ ಮುಂದುವರೆಸಿ ಈ ಸೂಳೆ ಮಕ್ಕಳಿಗೆ ಬುದ್ದಿ ಕಲಿಸು ಅಂತಾ ಅವಾಚ್ಯ ಶಬ್ದಗಳಿಂದ ಬೈದು ಕಳುಹಿಸಿರುತ್ತಾರೆ.   ಇದಾದ ನಂತರ ದಿನಾಂಕ ೨೮.೦೬.೨೦೨೧ ರಂದು ರಾತ್ರಿ ೧೧ ಗಂಟೆಗೆ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಮತ್ತೆ ನನ್ನ ಮನೆಗೆ ಬಂದು, ಮತ್ತೆ ದೈಹಿಕ ಸಂಪರ್ಕ ಮಾಡಿ ಕೊಲೆ ಮಾಡುವದಾಗಿ ಪ್ರಭಾಕರ ಇತನು ಬೆದರಿಕೆ ಹಾಕಿದ್ದರಿಂದ ತಡವಾಗಿ ಇಂದು ನಾನು ನನ್ನ ತಂದೆತಾಯಿಯವರೊಂದಿಗೆ ಪೋಲಿಸ್ ಠಾಣೆಗೆ ಬಂದಿದ್ದು, ನನ್ನ ಜೊತೆ ಜಬರಿ ಸಂಭೋಗ ಮಾಡಿದಂತಹ ಪ್ರಭಾಕರ ಇತನ ಮೇಲೆ ಕಾನೂನು ಕ್ರಮ ಕೈಗೊಂಡು ಹಾಗೂ ಅವನ ತಂದೆ ತಾಯಿಯವರು ಪ್ರಚೋದನೆ ಕೊಟ್ಟ ಸಲುವಾಗಿ ಇವರ ಮೇಲೆ ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಎಂ.ಬಿ.ನಗರ ಪೊಲೀಸ ಠಾಣೆ :- ಇಂದು ದಿನಾಂಕ ೧೦/೦೮/೨೦೨೧ ರಂದು ೧೬:೩೦  ಪಿ.ಎಂ ಕ್ಕೆ ಮಾನ್ಯ ೦೨ ನೇ ಹೆಚ್ಚುವರಿ ಜಿಲ್ಲಾ& ಸತ್ರ ನ್ಯಾಯಾಲಯ ಕಲಬುರಗಿ ರವರ ಆದೇಶ ಸಂಖ್ಯೆ. ಓo.ಆಅಏ/ಅಖಐ/೬೭೪೪/೨೦೨೧ ದಿನಾಂಕ:೨೨.೦೭.೨೦೨೧ ನೇದ್ದರ ಮೇರೆಗೆ  ಪಿಸಿ.ನಂ. ೧/೨೦೨೧ ನೆದ್ದರ ಪರ‍್ಯಾದಿಯನ್ನು ಕರ‍್ಟ್ ಸಿಬ್ಬಂದಿಯವರಾದ ಹೆಚ್.ಸಿ-೧೭೩ ರವರು ಹಾಜರು ಪಡಿಸಿದ್ದನ್ನು ವಸೂಲು ಮಾಡಿಕೊಂಡು ಸದರ ದೂರಿನ ಸಾರಾಂಶದ ಮೇಲಿಂದ ಎಂ.ಬಿ.ನಗರ ಪೊಲೀಸ ಠಾಣೆ ಗುನ್ನೆ ನಂ.೬೭/೨೦೨೧ ಕಲಂ. ಕಲಂ. 323, 324,504.506 ಐಪಿಸಿ ಮತ್ತು 3(G), 3(p), 3(R), 3Z (a) (A), SC/ST 1989 Act  ನೆದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 12-08-2021 06:25 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080