Feedback / Suggestions

 ಸಿ.ಇ.ಎನ್‌. ಪೊಲೀಸ್‌ ಠಾಣೆ :- ದಿನಾಂಕ:11/07/2022 ರಂದು 18:00 ಗಂಟೆಗೆ ಶ್ರೀ ದೇವಿಂದ್ರಪ್ಪಾ ತಂದೆ ಗುಂಡಪ್ಪಾ ಮುಳಕೇರಿ ವಯ: 49 ವರ್ಷ ಜಾತಿ: ಲಿಂಗಾಯತ ಉ: ಮುಖ್ಯ ಪೇದೆ ನಂ-21ಸಾ: ಸೈಬರ್ ಅರ್ಥಿಕ ಮತ್ತು ಮಾದಕ ವಸ್ತುಗಳ ಅಪರಾಧ ಪೊಲೀಸ್ ಠಾಣೆ ಕಲಬುರಗಿ ನಗರ. ಮೊ.ನಂ. 9900573944 ರವರು ನೀಡಿದ ವರದಿ ಸಾರಾಂಶವೆನೆಂದರೆ,  ದಿನಾಂಕ: 09/03/2022 ರಂದು 1800 ಗಂಟೆಗೆ ಮಾನ್ಯ ಪೊಲೀಸ್ ಮಹಾನಿರ್ದೇಶಕರ ಕಛೇರಿ ಸಿ,ಐ,ಡಿ ವಿಶೇಷ ಘಟಕಗಳು ಮತ್ತು ಅರ್ಥಿಕ ಅಪರಾಧಗಳು, ವಿಭಾಗ ರವರ ಪತ್ರ ಸಂಖ್ಯೆ: 01/ಸೈಬರ್ಟಿಪ್ಲೈನ್/ಸಿಸಿಪಿಡಬ್ಯ್ಲೂಸಿ/ಸಿಐಡಿ/2019 ದಿನಾಂಕ: 04/07/2022 ಇದ್ದು ಅಂಚೆಯ ಮೂಲಕ ಒಂದು ಪತ್ರ ಮತ್ತು ಸಿ,ಡಿ ವಸೂಲಾಗಿದ್ದು.  ಮಾನ್ಯ ಪೊಲೀಸ್ ಉಪಾ-ಅಧೀಕ್ಷಕರು ಸಿ,ಟಿ,ಮತ್ತುಆರ್ ವಿಭಾಗ ಸಿ,ಐ,ಡಿ ಬೆಂಗಳೂರು ರವರ ಪತ್ರದ ಸಾರಾಂಶವೆನೆಂದರೆ, ಕೇಂದ್ರ ಸರಕಾರವು ಕಾಣೆಯಾದ ಮತ್ತು ಶೋಷಿತ ಮಕ್ಕಳ ಕೇಂದ್ರವನ್ನು National center for missing and exploited children  ದಿನಾಂಕ: 26/04/2019 ರಂದು ಸ್ಥಾಪಿಸಿರುತ್ತದೆ. ಈ ಶೋಷಿತ ಮಕ್ಕಳ ಬಗ್ಗೆ ಮಾಹಿತಿ ಒಳಗೊಂಡಿರುವ Cyber Tip Line Report  ಸಿ,ಡಿಯನ್ನು ಎನ್,ಸಿ,ಆರ್,ಬಿ ರವರು ಅಂಚೆಯ ಮೂಲಕ ಪಡೆದುಕೊಂಡಿದ್ದು ಸದರಿ ಸೈಬರ್ ಟೀಪ್ ಲೈನಲ್ಲಿ ನೋಂದಣಿಯಾಗಿರುವ ದೂರುಗಳನ್ನು ಪರಿಶಿಲಿಸಿ ವಿಚಾರಣೆ ಕೈಗೊಂಡು ದೂರನ್ನು ಸಂಭಂದಪಟ್ಟ ಸರಹದ್ದಿನ ಪೊಲೀಸ್ ಅಧಿಕಾರಿಗಳು ದಾಖಲಿಸಿಕೊಂಡು ತನಿಖೆ/ವಿಚಾರಣೆ ಕೈಗೊಳ್ಳುವ ಪ್ರಕ್ರೀಯ ಚಾಲತಿಯಲ್ಲಿರುತ್ತದೆ. ಅದರಂತೆ Cyber Tip Line  ನಲ್ಲಿ ಕರ್ನಾಟಕ  ರಾಜ್ಯಕ್ಕೆ ಸಂಭಂದಿಸಿದ ದೂರುಗಳನ್ನು ಸಿ,ಡಿಯಲ್ಲಿ ನೀಡಿದ್ದು ಅವುಗಳನ್ನು ಪರಿಶೀಲಿಸಿ ವಿಲೆವಾರಿ ಮಾಡುವ ಬಗ್ಗೆ ಹಾಗೂ ಸೂಕ್ತ ಕ್ರಮ ಕೈಗೊಳ್ಳವ ಬಗ್ಗೆ ಎಸ್,ಪಿ, ಸಿ,ಟಿ, ಮತ್ತು ಆರ್ ವಿಭಾಗ ಸಿ,ಐ,ಡಿ ಬೆಂಗಳೂರವರನ್ನು ನೊಡಲ್ ಅಧಿಕಾರಿಯನ್ನಾಗಿ ನೇಮಕ ಮಾಡಲಾಗಿರುತ್ತದೆ.   ಅದರಂತೆ Cyber Tip Line Report ನಂ: 90053592 ದೂರನ್ನು ಸ್ವೀಕರಿಸಿದ್ದು ಸದರಿ ದೂರಿನ ಪ್ರಾಥಮಿಕ ವಿಚಾರಣೆಯನ್ನು ಕೈಗೊಂಡಿದ್ದು ಆರೋಪಿತನ ವಿಳಾಸವು  ಈ ಕೆಳಕಂಡ ವಿಳಾಸದಲ್ಲಿ ಪತ್ತೆಯಾಗಿದ್ದು ಸದರಿ ವಿಳಾಸಗಳು ತಮ್ಮ ಸದರಹದ್ದಿಯ ವ್ಯಾಪ್ತಿಗೆ ಒಳಪಡುವುದಾಗಿ ಮಾಹಿತಿ ಲಭ್ಯವಾಗಿರುತ್ತದೆ. Name: BHIMARAY S/O BASAPPA ADD: H-NO-E-11-3249,NR COLONY ROAD,GANGA NAGAR BRAHMPUR,KALABURGI, NEAR HANUMAN TEMPLE,KALABURGI-585103 PHONE NO:7337715022. ಅಂತಾ ಇದ್ದು. ಆದರಿಂದ ಮೇಲ್ಕಂಡ ದೂರುಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಸಲುವಾಗಿ ವಗರ್ಾಯಿಸಲಾಗುತ್ತಿದ್ದು ತಾವುಗಳು ಕೂಡಲೇ, ತಮ್ಮ ವ್ಯಾಪ್ತಿಯಲ್ಲಿ ಪ್ರಕರಣ (ಎಫ್,ಐ,ಆರ್) ದಾಖಲಿಸಿ ತನಿಖೆ ಕೈಗೊಳ್ಳಲು ಸೂಚಿಸಲಾಗಿರುತ್ತದೆ. ಅದರಂತೆ ಇಂದು ದಿನಾಂಕ: 11/07/2022 ರಂದು ಮಾನ್ಯ ಪೊಲೀಸ್ ಅಧೀಕ್ಷಕರು ಸಿ,ಟಿ,ಮತ್ತುಆರ್ ವಿಭಾಗ ಸಿ,ಐ,ಡಿ ಬೆಂಗಳೂರು ರವರಿಂದ ಸ್ವೀಕರಿಸಿದ Cyber Tip Line  ಸಿ,ಡಿಯನ್ನು Cyber Tip Line Report  ನಂ: 90053592ನೇದ್ದನ್ನು ಪರಿಶಿಲಿಸಿ ನೋಡಲಾಗಿ (ದಿನಾಂಕ:05/10/2021ರಂದು 08:28:50ಗಖಿಅ) ದಿನಾಂಕ: 05/10/2021 ರಂದು 13:58 ಗಂಟೆಗೆ(ಐಟಿಸಿ) ಇಬ್ಬರು ಅಪ್ರಾಪ್ತ ಬಾಲಕಿಯರು ತಮ್ಮ ತಮ್ಮ ಗುಪ್ತಾಂಗಗಳನ್ನು ಅಸಹ್ಯಕರ ರೀತಿಯಲ್ಲಿ ಪ್ರದರ್ಶನ ಮಾಡುತ್ತಿರುವ ದೃಷ್ಯಾವಳಿಯ  1 ನಿಮೀಷ 18 ಸೆಕೆಂಡಿನ ವಿಡಿಯೋ ಇದ್ದು ಮತ್ತು ಆರೋಪಿಯ ಐ,ಪಿ, ವಿಳಾಸ ಇತರೆ ಮಾಹಿತಿ ಒಳಗೊಂಡಿದ್ದು ಇರುತ್ತದೆ. ಸದರಿ ದೂರಿನ ಬಗ್ಗೆ ಇಂದು ದಿನಾಂಕ: 11/07/2022 ರಂದು ಸಿ,ಡಿಯಲ್ಲಿ ಮಾಹಿತಿಯನ್ನು ದೃಡ ಪಡಿಸಿಕೊಂಡು ಆರೋಪಿ ಭೀಮರಾಯ ತಂದೆ ಬಸಪ್ಪ ಸಾ: ಮನೆ ನಂ: ಇ-11-3249, ಎನ್,ಆರ್ ಕಾಲೋನಿ, ಹನುಮಾನ ಗುಡಿ ಹತ್ತಿರ, ಗಂಗಾ ನಗರ, ಬ್ರಹ್ಮಪೂರ ಕಲಬುರಗಿ -585103 PHONE NO: 7337715022 ಎಂಬ ವಿಳಾಸವು ಕಲಬುರಗಿ ನಗರದ ಎನ್,ಆರ್ ಕಾಲೋನಿಯಲ್ಲಿ ಇದ್ದ ಬಗ್ಗೆ ಬಾತ್ಮಿದಾರರಿಂದ ಸಹ ದೃಡ ಪಡಿಸಿಕೊಂಡು ಸದರಿ ಆರೋಪಿತನ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ವಿನಂತಿ. ಅಂತಾ ಇದ್ದ ವರದಿ ಸಾರಾಂಶದ ಮೇರಗೆ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಸಬ್‌ ಅರ್ಬನ್‌ ಪೊಲೀಸ್‌ ಠಾಣೆ ;- ದಿನಾಂಕ 11-07-2022  ರಂದು  ಫಿರ್ಯಾಧಿದಾರರು ಸಲ್ಲಿಸಿದ ದೂರು ಏನೆಂದರೆ ಕೆಎ ೩೨ ಎಕ್ಸ್ ೩೭೩೭ ಹೀರೋ ಹೊಂಡಾ ಸ್ಪ್ಲೆಂಡರ್‌  ಬೈಕ್‌ನ್ನು ನಮ್ಮ ಮನೆಯ ಹತ್ತಿರ ದಿನಾಂಕ ೨೫/೦೬/೨೦೨೨ ರಂದು ನಿಲ್ಲಿಸಿದ್ದು ಬೆಳಿಗ್ಗೆ ೫:೩೦ ಎಎಮ್ ಕ್ಕೆ ನಾನು ನೋಡಲು ನಾನು ನಿಲ್ಲಿಸಿದ್ದ ಜಾಗದಲ್ಲಿ ನನ್ನ ಬೈಕ್ ಇರುವುದಿಲ್ಲ ನಾನು ಎಲ್ಲಾ ಕಡೆ ನೋಡಲು ಅದು ಪತ್ತೆಯಾಗಿರುವುದಿಲ್ಲ ಅದನ್ನು ಹುಡುಕಿಕೊಡುವ ಬಗ್ಗೆ ದೂರು ಬಂದಿದ್ದು ಮೇರೆಗೆ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

Last Updated: 17-07-2022 07:55 PM Updated By: ADMIN


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : Kalaburagi City Police
Designed, Developed and Hosted by: Center for e-Governance - Web Portal, Government of Karnataka © 2024, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080