ಅಭಿಪ್ರಾಯ / ಸಲಹೆಗಳು

 ಸಬ್ ಅರ್ಬನ್ ಪೊಲೀಸ್ ಠಾಣೆ:-  ದಿನಾಂಕ ೧೧.೦೫.೨೦೨೨ ರಂದು ೧೧:೩೦ಪಿ.ಎಮ್.ಕ್ಕೆ ಪಿರ್ಯಾದಿ ಶ್ರೀ ಲೋಕೇಶ ತಂದೆ ಮುನ್ನ ರಾಠೋಡ ವ|| ೩೯ ವರ್ಷ ಜಾ|| ಲಮ್ಮಾಣಿ ಉ|| ಇಟ್ಟಂಗಿ ಭಟ್ಟಿ ಮಾಲೀಕ ಸಾ|| ಚನ್ನವೀರ ನಗರ ಫಿಲ್ಟರ್ ಬಿಡ್ ಹತ್ತಿರ  ಕಲಬುರಗಿ  ಇವರು ಠಾಣೆಗೆ ಹಾಜರಾಗಿ ದೂರು ಸಲ್ಲಿಸಿದ್ದ ಸಾರಾಂಶವೇನೆಂದರೆ, ಫಿರ್ಯಾದಿ ತನ್ನ ಟಾಟಾ ಕಂಪನಿ ಟಿಪ್ಪರ ನಂ ಕೆ.ಎ. ೩೨ ಬಿ ೭೯೮೮ ಅ.ಕಿ. ೭,೦೦,೦೦೦/- ರೂಪಾಯಿ  ನೇದ್ದನ್ನು ತನ್ನ ಚಾಲಕ ಜಗನ್ನಾಥ ಈತನೊಂದಿಗೆ ಕೆಲಸ ಮುಗಿಸಿಕೊಂಡು ದಿನಾಂಕ ೦೭.೦೫.೨೦೨೨ ರಂದು ೦೬:೦೦ ಪಿ.ಎಮ್.ಕ್ಕೆ ವಿಶ್ವನಾಥ ಇವರ ಇಟ್ಟಂಗಿ ಭಟ್ಟಿಯ ಹತ್ತಿರ ಸುಲ್ತಾನಪೂರ ರೋಡ ಕಲಬುರಗಿ ಹತ್ತಿರ ಹಚ್ಚಿ ದಿನಾಂಕ ೦೯.೦೫.೨೦೨೨ ರಂದು ೦೭:೦೦ ಎ.ಎಮ್. ಸುಮಾರಿಗೆ ಬಂದು ನೋಡಲು ಸದರಿ ಟಿಪ್ಪರ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ಕಲಬುರಗಿ ನಗರ ಮತ್ತು ಪಕ್ಕದ ರಾಜ್ಯಗಳಲ್ಲಿ ಹುಡುಕಾಡಿ ಇಂದು ತಡಮಾಡಿ ದೂರು ಅರ್ಜಿ ಕೊಟ್ಟಿದ್ದರ ಸಾರಾಂಶದ ಮೇಲಿಂದ ಗುನ್ನೆ ದಾಖಲಿಸಿಕೊಂಡ ಬಗ್ಗೆ ವರದಿ.

 ಚೌಕ ಪೊಲೀಸ್ ಠಾಣೆ :- ದಿನಾಂಕ: 11-05-2022 ರಂದು ಸಾಯಂಕಾಲ ೧೮.೦೦ ಗಂಟೆಗೆ ಶ್ರೀ ರಾಜಶೇಖರ ವ್ಹಿ. ಹಳಗೋದಿ ಪಿ.ಐ. ಚೌಕ ಪೊಲೀಸ್ ಠಾಣೆ ಕಲಬುರಗಿ ರವರು ಅಂದರ ಬಾಹರ ಇಸ್ಪೇಟ ಜೂಜಾಟದಲ್ಲಿ ನಿರತರಾದ ೦೭ ಜನ  ಆರೋಪಿತರನ್ನು ಒಂದು ಜಪ್ತಿ ಪಂಚನಾಮೆ ಹಾಗು ಮುದ್ದೆ ಮಾಲಿನೊಂದಿಗೆ ಠಾಣೆಗೆ ಹಾಜರಾಗಿ ಸರ್ಕಾರಿ ತರ್ಪೆ ದೂರು ಕೊಟ್ಟಿದ್ದರ ಸಾರಾಂಶವೆನೆಂದೆರೆ, ನಾನು ರಾಜಶೇಖರ.ವಿ.ಹಳಗೋದಿ ಪಿಐ ಚೌಕ ಪೊಲೀಸ್ ಠಾಣೆ ಕಲಬುರಗಿ ಸರಕಾರಿ ತರ್ಪೆ ಯಾಗಿ ಈ ಜ್ಞಾಪನ ಪತ್ರದ ಮೂಲಕ ದೂರು ವರದಿ ಸಲ್ಲಿಸುವದೆನೆಂದರೆ ಇಂದು ದಿನಾಂಕ:೧೧.೦೫.೨೦೨೨ ರಂದು ಸಾಯಂಕಾಲ ೧೬.೦೦ ಗಂಟೆಗೆ ಠಾಣಾ ವ್ಯಾಪ್ತಿಯ ಪೆಟ್ರೋಲಿಂಗ್ ಕರ್ತವ್ಯ ಮಾಡುತ್ತಾ ಠಾಣಾ ವ್ಯಾಪ್ತಿಯ ನಗರೇಶ್ವರ ಶಾಲೆಯ ಹತ್ತಿರ ಇದ್ದಾಗ ಖಚಿತ ಬಾತ್ಮಿ ಬಂದಿದ್ದೇನೆಂದರೆ ಠಾಣಾ ವ್ಯಾಪ್ತಿಯ ಕಲಬುರಗಿ ನಗರದ ಆಟೋ ನಗರ ಲಾರಿ ತಂಗುದಾಣದ ಗುಮ್ಮಜ ಹತ್ತಿರ ಇರುವ ಖುಲ್ಲಾ ಬಯಲು ಜಾಗೆಯಲ್ಲಿ ಕೆಲವು ಜನರು ಹಣವನ್ನು  ಪಣಕ್ಕೆ ಹಚ್ಚಿ ಅಂದರ ಬಹಾರ ಎಂಬ ದೈವಲೀಲೆ (ನಶೀಬಿನ) ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದಿದ್ದರಿಂದ ನಾನು ಸದರಿ ವಿಷಯವನ್ನು ತಮಗೆ ಈಗಾಗಲೇ ಫೋನ ಮುಖಾಂತರ ತಿಳಿಸಿ ಮಾನ್ಯ ನ್ಯಾಯಾಲಯದಿಂದ ದಾಳಿ ಮಾಡಿ ಕ್ರಮಕೈಕೊಳ್ಳುವ ಕುರಿತು ಅನುಮತಿ ಪಡೆಯಲು ತಿಳಿಸಿದ್ದು ಇರುತ್ತದೆ. ನಂತರ ನಾನು ಸದರಿ ವಿಷಯವನ್ನು ನಮ್ಮ ಮೇಲಾಧಿಕಾರಿಗೆ ಮಾಹಿತಿ ತಿಳಿಸಿ ಅವರ ಮಾರ್ಗದರ್ಶನದಂತೆ ನಮ್ಮ ಠಾಣೆಯ ಸಿಬ್ಬಂದಿಯವರಾದ ೧) ಶ್ರೀ ಸಿದ್ರಾಮಯ್ಯ ಹೆಚಸಿ ೨೨೬  ೨) ಶ್ರೀ  ಉಮೇಶ ಪಿಸಿ ೧೧೧ ೩) ಶ್ರೀ ಅಶೋಕ ಪಿಸಿ ೧೦ ೪) ನಾಗೇಂದ್ರ ಪಿಸಿ ೭೯ ಇವರನ್ನು ನಗರೇಶ್ವರ ಶಾಲೆಯ ಹತ್ತಿರ ಕರೆಯಿಸಿದ್ದು ಮತ್ತು ಇಬ್ಬರು ಪಂಚರಾದ ೧)ಶ್ರೀ ಶರಣಪ್ಪ ತಂದೆ ಮಲ್ಕಪ್ಪ ಮಾಡಬೂಳಕರ ವ:೪೧ ವರ್ಷ ಉ:ಇಟ್ಟಂಗಿ ಭಟ್ಟಿಯಲ್ಲಿ ಕೆಲಸ ಜಾತಿ:ಪ.ಜಾತಿ (ಹೊಲೆಯ) ಸಾ:ವಿಷ್ಣು ನಗರ ಫೀಲ್ಟರ ಬೇಡ ಕಲಬುರಗಿ ೨) ಶ್ರೀ ದೇವಿಂದ್ರ ತಂದೆ ಜಗನಾಥ ಅಟ್ಟೂರಕರ ವ:೨೦ ರ‍್ಷ ಉ:ಟೈಯರ ಪಂಕ್ಚರ ಅಂಗಡಿಯಲ್ಲಿ ಕೆಲಸ ಜಾತಿ:ಪ.ಜಾತಿ. (ಮಾದಿಗ) ಸಾ:ವಿಷ್ಣು ನಗರ ಫೀಲ್ಟರ ಬೇಡ ಕಲಬುರಗಿ ಇವರಿಗೂ ಸಹ ನಗರೇಶ್ವರ ಶಾಲೆಯ ಹತ್ತಿರ ೧೬.೧೫ ಗಂಟೆಗೆ ಬರಮಾಡಿಕೊಂಡು ಬಾತ್ಮಿಯಂತೆ ದಾಳಿ ಮಾಡಿ ಕ್ರಮ ಕೈಕೊಳ್ಳುವ ಕುರಿತು ಪಂಚರಿಗೆ ಮೇಲಿನ ವಿಷಯ ತಿಳಿ ಹೇಳಿ ನಂತರ ನಾವು ಮಾಡುವ ದಾಳಿಯ ಕಾಲಕ್ಕೆ ಹಾಜರಿದ್ದು ಪಂಚನಾಮೆ ಬರೆಯಿಸಿಕೊಡಲು ಕೇಳಿಕೊಂಡು ಅವರು ಒಪ್ಪಿಕೊಂಡ ನಂತರ ನಾವೆಲ್ಲರೂ ಕೂಡಿಕೊಂಡು ನಮ್ಮ ನಮ್ಮ ವಾಹನಗಳ ಮೇಲೆ ಕುಳಿತು ೧೬.೩೦ ಗಂಟೆಗೆ ಜೂಜಾಟ ನಡೆಯುತ್ತಿದೆ ಎಂದು ಮಾಹಿತಿ ಬಂದ ಸ್ಥಳದ ಹತ್ತಿರ ೧೬.೪೦ ಗಂಟೆಗೆ ಹೋಗಿ ಅಲ್ಲಿ ಗುಮ್ಮಜದ ಕಟ್ಟಡದ ಮರೆಯಲ್ಲಿ ನಮ್ಮ ದ್ವಿಚಕ್ರ ವಾಹನಗಳನ್ನು ನಿಲ್ಲಿಸಿ ಸ್ವಲ್ಪ ಮುಂದೆ ನಡೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲು ಆಟೋ ನಗರ ಲಾರಿ ತಂಗುದಾಣದ ಗುಮ್ಮಜ ಹತ್ತಿರ ಇರುವ ಖುಲ್ಲಾ ಬಯಲು ಜಾಗೆಯಲ್ಲಿ ೦೭ ಜನರು ಗುಂಪಾಗಿ ಕುಳಿತುಕೊಂಡು ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಎಂಬ ದೈವಲೀಲೆಯ ಇಸ್ಪೀಟ ಜೂಜಾಟ ಆಡುತ್ತಿರುವದನ್ನು ಖಚಿತಪಡಿಸಿಕೊಂಡು ಪಂಚರ ಸಮಕ್ಷಮ ನಾನು ಮತ್ತು ಸಿಬ್ಬಂದಿಯವರು ಕೂಡಿಕೊಂಡು ಇಸ್ಪೀಟ ಜೂಜಾಟ ನಿರತ ಜನರ ಮೇಲೆ ಸಾಯಂಕಾಲ ೧೬.೪೫ ಗಂಟೆಗೆ ದಾಳಿ ಮಾಡಿ ೦೭ ಜನ ಇಸ್ಪೀಟ ಜೂಜಾಟದಲ್ಲಿ ತೊಡಗಿದ್ದ ಆಸಾಮಿಗಳನ್ನು ಹಿಡಿದುಕೊಂಡು ಒಬ್ಬೊಬ್ಬರಂತೆ ಅವರ ಹೆಸರು ವಿಳಾಸ ವಿಚಾರಿಸಲು ಮೊದಲನೆಯವನು ತನ್ನ ಹೆಸರು ೧) ಅರವಿಂದ ತಂದೆ ಶಂಕರರಾವ ಚಿಕ್ಕನಾಗಾಂವ ವಯ:೩೪ ರ‍್ಷ ಜಾ:ಲಿಂಗಾಯತ ಉ:ಲಾರಿಚಾಲಕ ಸಾ:ಸಂತೋಷ ಕಾಲೋನಿ ದೇವಿನಗರ ಕಲಬುರಗಿ ಅಂತಾ ತಿಳಿಸಿದನು ಸದರಿಯವನ ಅಂಗ ಶೋಧನೆ ಮಾಡಲು ಸದರಿಯವನ ಹತ್ತಿರ ೧೩೦೦/- ರೂ ನಗದು ಹಣ ಹಾಗೂ ೧೮ ಇಸ್ಪೇಟ ಎಲೆಗಳು ದೊರೆತಿದ್ದು ೨) ಬಸವರಾಜ ತಂದೆ ಈರಣಪ್ಪಾ ವಿಶ್ವರ‍್ಮ ವಯ:೫೨ ವರ್ಷ ಜಾ:ವಿಶ್ವರ‍್ಮ ಉ:ಲಾರಿ ಡ್ರೈವರ  ಸಾ: ಗೋಳಾಚೌಕ ಮೋಮಿನಪೂರ ಕಲಬುರಗಿ ಅಂತಾ ತಿಳಿಸಿದ್ದು ಸದರಿಯವನ ಅಂಗ ಶೋಧನೆ ಮಾಡಲು ಸದರಿಯವನ ಹತ್ತಿರ ೧೮೦೦/- ರೂ ನಗದು ಹಣ, ೧೨ ಇಸ್ಪೇಟ ಎಲೆಗಳು ದೊರೆತಿದ್ದು ೩) ಸಂಬಾಜಿ ತಂದೆ ಯಾದವರಾವ ಘಾಟಗೆ ವಯ:೬೦ ವರ್ಷ ಜಾ:ಮರಾಠಾ ಉ:ಲಾರಿಚಾಲಕ ಸಾ:ರೇವಣಸಿದ್ದೇಶ್ವರ ಕಾಲೋನಿ (ಆರ.ಎಸ ಕಾಲೋನಿ) ಕಲಬುರಗಿ ಅಂತಾ ತಿಳಿಸಿದನು ಸದರಿಯವನ ಅಂಗ ಶೋಧನೆ ಮಾಡಲು ಸದರಿಯವನ ಹತ್ತಿರ ೨೨೦೦/- ರೂ ನಗದು ಹಣ ದೊರೆತಿದ್ದು ೪) ದತ್ತು ತಂದೆ ಮಲ್ಲೇಶಪ್ಪಾ ಧನ್ನೂರ ವಯ:೫೧  ವರ್ಷ ಜಾ:ಕುರುಬ  ಉ:ಲಾರಿಚಾಲಕ ಸಾ:ಶಿವಾಜಿ ನಗರ ಕಲಬುರಗಿ ಅಂತಾ ತಿಳಿಸಿದನು ಸದರಿಯವನ ಅಂಗ ಶೋಧನೆ ಮಾಡಲು ಸದರಿಯವನ ಹತ್ತಿರ ೧೧೦೦/- ರೂ ನಗದು ಹಣ ದೊರೆತಿದ್ದು ೫) ಗುಂಡಪ್ಪಾ ತಂದೆ ನಿಂಗಪ್ಪಾ ಬಿರಾದರ ವಯ:೫೨ ವರ್ಷ ಜಾ:ಲಿಂಗಾಯತ ಉ:ಲಾರಿಚಾಲಕ ಸಾ:ಸಾಗರ ಸಿಟಿ ವೈಷ್ಣವಿ ದೇವಿ ದೇವಸ್ಥಾನದ ಹತ್ತಿರ ಕಲಬುರಗಿ ಅಂತಾ ತಿಳಿಸಿದನು ಸದರಿಯವನ ಅಂಗ ಶೋಧನೆ ಮಾಡಲು ಸದರಿಯವನ ಹತ್ತಿರ ೨೪೦೦/- ರೂ ನಗದು ಹಣ ದೊರೆತಿದ್ದು ೬) ರೇವಣಸಿದ್ದಪ್ಪಾ ತಂದೆ ಮಲ್ಲಕಾಜಪ್ಪಾ ವಾಲಿ ವಯ:೪೧ ವರ್ಷ ಜಾ:ಲಿಂಗಾಯತ ಉ:ಲಾರಿ ಕ್ಲೀನರ ಸಾ:ರೇವಣಸಿದ್ದೇಶ್ವರ ಕಾಲೋನಿ (ಆರ.ಎಸ ಕಾಲೋನಿ) ಕಲಬುರಗಿ ಅಂತಾ ತಿಳಿಸಿದನು ಸದರಿಯವನ ಅಂಗ ಶೋಧನೆ ಮಾಡಲು ಸದರಿಯವನ ಹತ್ತಿರ ೧೫೦೦/- ರೂ ನಗದು ಹಣ ದೊರೆತಿದ್ದು ೭) ಬಾಪು @ ಕಲ್ಲಪ್ಪಾ ತಂದೆ ರಾಮ ಮಾನೆ ವಯ:೩೪ ವರ್ಷ ಜಾ:ಮರಾಠಾ ಉ:ಕ್ಲೀನರ ಕೆಲಸ ಸಾ:ರಾಮನಗರ ಕಲಬುರಗಿ ಅಂತಾ ತಿಳಿಸಿದನು ಸದರಿಯವನ ಅಂಗ ಶೋಧನೆ ಮಾಡಲು ಸದರಿಯವನ ಹತ್ತಿರ ೧೬೦೦/- ರೂ ನಗದು ಹಣ ದೊರೆತಿದ್ದು ಹಾಗೂ ಜೂಜಾಟ ನಡೆದ ಕಣದ ಸ್ಥಳದಲ್ಲಿ ನಗದು ಹಣ ೫೫೧೦/-ರೂಪಾಯಿ, ೨೨ ಎಲೆಗಳು ಹೀಗೆ ಒಟ್ಟು ೧೭೪೧೦/- ನಗದು ಹಣ ಮತ್ತು ೫೨ ಇಸ್ಪೇಟ ಎಲೆಗಳು ದೊರೆತಿದ್ದು, ಪಂಚರ ಸಮಕ್ಷಮ ದಿನಾಂಕ:೧೧.೦೫.೨೦೨೨ ರಂದು ಸಾಯಂಕಾಲ ೧೬.೪೫ ಗಂಟೆಯಿಂದ ೧೭.೪೫ ಗಂಟೆಯ ಅವಧಿಯಲ್ಲಿ ಗುನ್ನೆ ಸ್ಥಳದಲ್ಲಿ ಕುಳಿತು ಜಪ್ತಿ ಪಂಚನಾಮೆ ಬರೆದುಕೊಂಡು ನಂತರ ಮುದ್ದೆಮಾಲಿಗೆ ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ ಕೇಸಿನ ಮುಂದಿನ ಪುರಾವೆಗಾಗಿ ನನ್ನ ತಾಬಾಕ್ಕೆ ತೆಗೆದುಕೊಂಡೆನು. ನಂತರ ಜಪ್ತಿ ಪಂಚನಾಮೆ, ಮುದ್ದೇಮಾಲು ಹಾಗೂ ೦೭ ಜನ ಆರೋಪಿತರೊಂದಿಗೆ  ಠಾಣೆಗೆ ೧೮.೦೦ ಗಂಟೆಗೆ ಬಂದು ಜ್ಞಾಪನಾ ಪತ್ರ ತಯ್ಯಾರಿಸಿ ಮುಂದಿನ ಕ್ರಮಕ್ಕಾಗಿ ಹಾಜರ ಪಡಿಸುತ್ತಿದ್ದು ಸದರಿ ೦೭ ಜನ ಆರೋಪಿತರ ವಿರುದ್ದ ಕಲಂ ೮೭ ಕೆಪಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲು ಸೂಚಿಸಲಾಗಿದೆ ಎಂದು ಕೊಟ್ಟ ಜ್ಞಾಪನಾ ಪತ್ರ ಮತ್ತು ಜಪ್ತಿ ಪಂಚನಾಮೆ ಆಧಾರದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ವಿಶ್ವವಿದ್ಯಾಲಯ ಪೊಲೀಸ ಠಾಣೆ :- ದಿನಾಂಕ 11-05-2022 ರಂದು ೮:೪೫ ಪಿ.ಎಮ್ ಕ್ಕೆ ಫಿರ್ಯಾದಿದಾರರಾದ ಶ್ರೀ ಶಿವರಾಜ ತಂದೆ ಶಾಮರಾಯ ಪೂಜಾರಿ, ವಯ: ೪೬ ವರ್ಷ, ಉ: ಒಕ್ಕಲುತನ, ಜಾತಿ:ಕುರುಬ, ಸಾ: ಕೋಟನೂರ (ಡಿ) ತಾ:ಜಿ: ಕಲಬುರಗಿ ರವರು ಠಾಣೆಗೆ ಹಾಜರಾಗಿ ದೂರು ನೀಡಿದ ಸಾರಾಂಶವೆನೆಂದರೆ, ನಮ್ಮ ಮನೆಯಲ್ಲಿ ನಾನು ಮತ್ತು ನನ್ನ ಹೆಂಡತಿಯಾದ ಜ್ಯೋತಿ, ಮಕ್ಕಳಾದ ಪ್ರತಾಪ್, ಪ್ರಜ್ವಲ್, ಪಲ್ಲವಿ ಮೂವರು ಮಕ್ಕಳೊಂದಿಗೆ ಎಲ್ಲರೂ ನಮ್ಮ ಮನೆಯಲ್ಲಿ ಇದ್ದುಕೊಂಡು ವಾಸವಾಗಿರುತ್ತೇವೆ.  ದಿನಾಂಕ ೦೨.೦೫.೨೦೨೨ ರಂದು ರಾತ್ರಿ ೧೧:೦೦ ಗಂಟೆ ಸುಮಾರಿಗೆ ನಾನು ಮತ್ತು ನನ್ನ ಹೆಂಡತಿ, ಮಕ್ಕಳು ಎಲ್ಲರೂ ಬೇಸಿಗೆ ಇದ್ದುದ್ದರಿಂದ ಮನೆ ಕೀಲಿ ಹಾಕಿಕೊಂಡು ನಮ್ಮ ಮನೆಯ ಮೇಲೆ ಛತ್ತಿನ ಮೇಲೆ ಮಲಗಿಕೊಂಡಿದ್ದು ಇರುತ್ತದೆ. ನಂತರ ದಿನಾಂಕ ೦೩.೦೫.೨೦೨೨ ರಂದು ಬೇಳಿಗ್ಗೆ ೬:೦೦ ಗಂಟೆ ಸುಮಾರಿಗೆ ಎದ್ದು ಕೆಳಗೆ ಬಂದು ನೋಡಲಾಗಿ ನಮ್ಮ ಮನೆಯ ಮುಖ್ಯ ಬಾಗಿಲ ಕೀಲಿ ಮುರಿದಿದ್ದು ಕಂಡು ಗಾಬರಿಗೊಂಡು ಒಳಗೆ ಹೋಗಿ ನೋಡಲು ನಮ್ಮ ಮನೆಯ ಬೆಡ್ ರೂಮಿನಲ್ಲಿದ್ದ ಟ್ರಜರಿ ಮುರಿದಿದ್ದು ಟ್ರಜರಿಯಲ್ಲಿಟ್ಟಿದ್ದ ಬಂಗಾರದ ಸಾಮಾನುಗಳಾದ ೧) ೨೫ ಗ್ರಾಂ ಎರಡೆಳೆಯ ಬಂಗಾರದ ಸರ ಅ.ಕಿ-೬೨,೫೦೦/-ರೂ, ೨) ೧೦ ಗ್ರಾಂ ಬಂಗಾರದ ಲಾಕೀಟ್ ಅ.ಕಿ-೨೫೦೦೦/-ರೂ, ೩) ೧೦ ಬಂಗಾರದ ಸುತ್ತುಂಗುರ ಅ.ಕಿ-೫೦,೦೦೦/-ರೂ, ೪) ೧೦ ಬಂಗಾರದ ಜೀರಾಮಣಿ ಅ.ಕಿ-೫೦,೦೦೦/-ರೂ, ೫) ೫ ಬಂಗಾರದ ಜೀರಾಮಣಿ ಅ.ಕಿ-೨೫೦೦೦/-ರೂ, ೬) ೫ ಗ್ರಾಂ ಬಂಗಾರದ ಜುಮುಕಿ ಅ.ಕಿ-೨೫೦೦೦/-ರೂ, ೭) ೫ ಗ್ರಾಂ ಬಂಗಾರದ ಜುಮುಕಿ ಅ.ಕಿ-೨೫೦೦೦/-ರೂ ಮತ್ತು ನಗದು ಹಣ ೨,೩೦,೦೦೦/-ರೂ, ೭೦ ಗ್ರಾಂ ಬಂಗಾರದ ಆಭರಣಗಳು ಮತ್ತು ನಗದು ಹಣ ೨,೩೦,೦೦೦/- ರೂ ಸೇರಿ ಹೀಗೇ ಒಟ್ಟು  ೪,೯೨,೫೦೦/- ರೂ ನೇದ್ದವುಗಳು ಯಾರೋ ಕಳ್ಳರು  ನಮ್ಮ ಮನೆಯ ಮುಖ್ಯ ಬಾಗಿಲ ಕೀಲಿ ಮುರಿದು ಮನೆ ಒಳಗೆ ಪ್ರವೇಶ ಮಾಡಿ ಮನೆಯಲ್ಲಿ ಬೆಡ್ ರೂಮಿನಲ್ಲಿದ್ದ ಟ್ರಜರಿ ಮುರಿದು ಅದರಲ್ಲಿದ್ದ ಈ ಮೇಲಿನ ಬಂಗಾರದ ಸಾಮಾನುಗಳು ಮತ್ತು ನಗದು ಹಣ ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ.ಸದರಿ ಘಟನೆಯು ದಿನಾಂಕ ೦೨.೦೫.೨೦೨೨ ರಂದು ೧೧:೦೦ ಪಿ.ಎಮ್ ದಿಂದ ದಿನಾಂಕ ೦೩.೦೫.೨೦೨೨ ರಂದು ೬:೦೦ ಎ.ಎಮ್ ದ ಮದ್ಯದ ಅವಧಿಯಲ್ಲಿ ನಮ್ಮ ಮನೆಯ ಮುಖ್ಯ ಬಾಗಿಲ ಕೀಲಿ ಕೊಂಡಿ ಮುರಿದು ಮನೆಯೊಳಗೆ ಪ್ರವೇಶ ಮಾಡಿ ಮನೆಯಲ್ಲಿ ಈ ಮೇಲಿನ ಬಂಗಾರ ಮತ್ತು ನಗದು ಹಣ ಕಳ್ಳತನ ಮಾಡಿಕೊಂಡು ಹೋಗಿದ್ದು ಕಾರಣ ಕಳ್ಳತನವಾದ ಬಂಗಾರ, ಮತ್ತು ನಗದು ಹಣ ಪತ್ತೆ ಮಾಡಿ, ಕಳ್ಳತನ ಮಾಡಿದ ಕಳ್ಳರನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಬೇಕು ವಿನಂತಿ ಅಂತಾ ಇತ್ಯಾದಿ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

 

ಇತ್ತೀಚಿನ ನವೀಕರಣ​ : 24-05-2022 02:31 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080