ಅಭಿಪ್ರಾಯ / ಸಲಹೆಗಳು

ಸಂಚಾರಿ ಪೊಲೀಸ ಠಾಣೆ-02 :- ದಿನಾಂಕ: 11-03-2023 ರಂದು ಬೆಳಿಗ್ಗೆ 7.30 ಗಂಟೆಗೆ ಶ್ರೀಮತಿ ಮಹಾನಂದ ಗಂಡ ಪ್ರಕಾಶ ಬತ್ತಲೆ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಗಣೀಕಿಕೃತ ಮಾಡಿಸಿದ ದೂರು ಅರ್ಜಿಯನ್ನು ಹಾಜರಪಡಿಸಿದ್ದರ ಸಾರಂಶವೆನೆಂದರೆ  ನನ್ನ ಗಂಡ ಪ್ರಕಾಶ ಇವರು ಲಾರಿ ಡ್ರೈವರ ಕೆಲಸ ಮಾಡಿಕೊಂಡು ಇದ್ದರು. ದಿನಾಂಕ: 10-03-2023 ರಂದು ಬೆಳಿಗ್ಗೆ ನನ್ನ ಗಂಡ ಪ್ರಕಾಶ ಇವರು ಲಾರಿ ಡ್ರೈವರ ಕೆಲಸಕ್ಕೆ ಹೋಗುತ್ತೇನೆ ಅಂತಾ ಮನೆಯಿಂದ ಹೋದರು. ರಾತ್ರಿ ನಾನು ಮನೆಯಲ್ಲಿರುವಾಗ ನನ್ನ ಗಂಡ ಪ್ರಕಾಶ ಇವರು ನನಗೆ ಪೋನ ಮಾಡಿ ನಾನು ಮತ್ತು ನನ್ನ ಗೆಳೆಯರಾದ ಮಲ್ಲಿಕಾರ್ಜುನ, ಅಂಬರೀಶ ಮೂರು ಜನರು ಶಹಾಬಾದ ಕ್ರಾಸ ಹತ್ತೀರ ಇರುವ ಹೊಟೇಲಕ್ಕೆ ಮಲ್ಲಿಕಾರ್ಜುನ ಇತನು ಚಲಾಯಿಸುತ್ತೀರುವ ಮೋಟಾರ ಸೈಕಲ ಮೇಲೆ ನಾವಿಬ್ಬರೂ ಕುಳಿತು ಸೇಡಂ ರಿಂಗ ರೋಡ ಕಡೆಯಿಂದ ಹೋಗುತ್ತಿದ್ದೆವೆ ಅಂತಾ ತಿಳಿಸಿದರು. ರಾತ್ರಿ ನನ್ನ ಗಂಡನಿಗೆ ಪರಿಚದವರಾದ ಕಾಳನೂರ ಗ್ರಾಮದ ಬಸವರಾಜ ಇವರು ಪೋನ ಮಾಡಿ ತಿಳಿಸಿದ್ದೆನೆಂದರೆ ರಾತ್ರಿ 9-15 ಗಂಟೆ ಸುಮಾರಿಗೆ ನಾನು ಮತ್ತು ನಮ್ಮೂರಿನ ಸಿದ್ದಲಿಂಗ ತಂದೆ ಬಸವಣಪ್ಪ ಇಬ್ಬರೂ ಶಹಾಬಾದ ಕ್ರಾಸ ಹತ್ತೀರ ಬರುವ ಸರ್ವಿಸಿಂಗ್ ಸೆಂಟರ ಸಮೀಪ ರೋಡ ಪಕ್ಕದಲ್ಲಿ ನಮ್ಮ ಕೆಲಸದ ಸಂಬಂದ ಇರುವಾಗ ನಿಮ್ಮ ಗಂಡ ಪ್ರಕಾಶ ಮತ್ತು ಅವರ ಗೆಳೆಯ ಅಂಬರೀಶ ಇಬ್ಬರೂ ಮಲ್ಲಿಕಾರ್ಜುನ ಇತನು ಚಲಾಯಿಸುತ್ತೀರುವ ಮೋಟಾರ ಸೈಕಲ ನಂಬರ ಕೆಎ-32/ಹೆಚ್,ಡಿ-5562 ನೇದ್ದರ ಹಿಂದುಗಡೆ ಕುಳಿತು ಸೇಡಂ ರಿಂಗ ರೋಡ ಕಡೆಯಿಂದ ಶಹಬಾದ ಕ್ರಾಸ ಕಡೆಗೆ ಹೋಗುವಾಗ ಮಲ್ಲಿಕಾರ್ಜುನ ಇತನು ಮೋಟಾರ ಸೈಕಲನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗುತ್ತಿದ್ದನ್ನು ಆತನಂತೆ ಮೋಟಾರ ಸೈಕಲ ನಂಬರ ಕೆಎ-32/ಇಸಿ-7302 ನೇದ್ದರ ಸವಾರ ಕೂಡಾ ಶಹಾಬಾದ ಕ್ರಾಸ ಕಡೆಯಿಂದ ಸೇಡಂ ರಿಂಗ ರೋಡ ಕಡೆಗೆ ಹೋಗುವ ಕುರಿತು ತನ್ನ ಮೋಟಾರ ಸೈಕಲನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಶಹಾಬಾದ ಕ್ರಾಸ ಸಮೀಪ ಇರುವ ಸರ್ವಿಸಿಂಗ್ ಸೆಂಟರ ಎದುರು ರೋಡ ಮೇಲೆ ಒಂದಕ್ಕೊಂದು ಎದುರಿನಿಂದ ಡಿಕ್ಕಿಪಡಿಸಿ ಅಪಘಾತ ಮಾಡಿದಾಗ ನಾವು ಅವರ ಹತ್ತೀರ ಹೋಗಿ ನಿಮ್ಮ ಗಂಡನಿಗೆ ಎಬ್ಬಿಸಿ ರೋಡ ಪಕ್ಕದಲ್ಲಿ ಮಲಗಿಸಿದೆವು. ಮತ್ತು ಅಂಬರೀಶ ಹಾಗೂ ಮಲ್ಲಿಕಾರ್ಜುನ ರವರನ್ನು ಹಾಗೂ ಮೋಟಾರ ಸೈಕಲ ನಂಬರ ಕೆಎ-32/ಇಸಿ-7302 ನೇದ್ದರ ಸವಾರನಿಗೂ ಕೂಡಾ ಎಬ್ಬಿಸಿ ರೋಡ ಪಕ್ಕದಲ್ಲಿ ಕೂಡಿಸಿದೆವು. ನಿಮ್ಮ ಗಂಡನಿಗೆ ನೋಡಲು ಆತನ ಬಲ ಹಣೆಯ ಮೇಲೆ ಬಲ ಹುಬ್ಬಿಗೆ ಭಾರಿ ರಕ್ತಗಾಯ ಬಲ ಕಣ್ಣಿಗೆ ಭಾರಿ ಗುಪ್ತಪೆಟ್ಟು ಆಗಿತ್ತು. ಅಂಬರೀಶ, ಮಲ್ಲಿಕಾರ್ಜುನರವರಿಗೂ ಪೆಟ್ಟು ಬಿದ್ದಿತ್ತು. ಹಾಗೂ ಮೋಟಾರ ಸೈಕಲ ನಂಬರ ಕೆಎ-32/ಇಸಿ-7302 ನೇದ್ದರ ಸವಾರನ ಹೆಸರು ತುಕ್ಕಪ್ಪಾ ತಂದೆ ಶಿವಮನೆಪ್ಪಾ ಅಂತಾ ಗೋತ್ತಾಯಿತು ಆತನಿಗೂ ಭಾರಿ ಪೆಟ್ಟು ಬಿದ್ದಿರುತ್ತದೆ. ಸದರಿ ಸ್ಥಳಕ್ಕೆ ಅಂಬುಲೇನ್ಸ ವಾಹನ ಬಂದಾಗ ಮಲ್ಲಿಕಾರ್ಜುನ ಇತನು ಉಪಚಾರ ಕುರಿತು ಹೋಗುತ್ತೇನೆ ಅಂತಾ ಹೋದನು. ನಿಮ್ಮ ಗಂಡ ಪ್ರಕಾಶ ಹಾಗೂ ಅಂಬರೀಶ ಮತ್ತು ತುಕ್ಕಪ್ಪಾ ರವರ ಉಪಚಾರ ಕುರಿತು ಖಾಸಗಿ ಮಣೂರ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತೇವೆ ಅಂತಾ ತಿಳಿಸಿದ್ದರಿಂದ ನಾನು ಮಣೂರ ಆಸ್ಪತ್ರೆಗೆ ಹೋಗಿ ನನ್ನ ಗಂಡನಿಗೆ ನೋಡಲು ಅವರ ಬಲ ಹಣೆಯ ಮೇಲೆ ಬಲ ಹುಬ್ಬಿಗೆ ಭಾರಿ ರಕ್ತಗಾಯ ಬಲ ಕಣ್ಣಿಗೆ ಭಾರಿ ಗುಪ್ತಪೆಟ್ಟು ಎದೆಗೆ ಕಂದುಗಾಯ ಬಲಗೈ ಮುಂಗೈ ಹತ್ತೀರ ಭಾರಿ ರಕ್ತಗಾಯ, ಬಲಗೈ ಹಸ್ತದ ಹಿಂದುಗಡೆ ರಕ್ತಗಾಯ ಬಲಗಾಲು ತೊಡೆಗೆ ರಕ್ತಗಾಯ, ಬಲಗಾಲು ಮೊಳಕಾಲಿಗೆ ತರಚಿದಗಾಯ ಬಲಗಾಲು ಪಾದದ ಮೇಲ್ಬಾಗದಲ್ಲಿ ರಕ್ತಗಾಯ ಬಲಗಾಲು ರಿಸ್ಟ ಹತ್ತೀರ ರಕ್ತಗಾಯವಾಗಿತ್ತು. ಬೇಹೂಸ ಇದ್ದು ಉಪಚಾರ ಪಡೆಯುತ್ತಿದ್ದರು. ಅಂಬರೀಶ ಮತ್ತು ತುಕ್ಕಪ್ಪಾ ಇವರು ಉಪಚಾರ ಪಡೆಯುತ್ತಿದ್ದರು. ದಿನಾಂಕ: 11-03-2023 ರಂದು 1-10 ಎ.ಎಮ ಸುಮಾರಿಗೆ ನನ್ನ ಗಂಡ ಉಪಚಾರ ಪಡೆಯುತ್ತಾ ರಸ್ತೆ ಅಪಘಾತದಲ್ಲಿ ಆದ ಭಾರಿಗಾಯದ ಉಪಚಾರ ಫಲಕಾರಿಯಾಗದೆ ಮಣೂರ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆ. ಇಬ್ಬರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಫಿರ್ಯಾದಿ ಕೊಟ್ಟ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ವಿಶ್ವವಿದ್ಯಾಲಯ ಪೊಲೀಸ ಠಾಣೆ :- ದಿನಾಂಕ: 10-03-2023 ರಂದು ಎಂದಿನಂತೆ ರಾತ್ರಿ 08:00 ಪಿ.ಎಮ್ ರಿಂದ ಬೆಳಿಗ್ಗೆ 06:00 ಎ.ಎಮ್ ಮಧ್ಯದ ಅವಧಿಯಲ್ಲಿ ಫಿರ್ಯಾದಿ ಮನೆಯ ಮುಂದೆ ಅಮೀನಾ ಲೇಔಟ ಫಾರ್ಮ ಗ್ರೀನ ಗಾರ್ಡನ್ ಹತ್ತಿರ ಹಾಗರಗಾ ರೋಡ ಕಲಬುರಗಿ ನೇದ್ದರಲ್ಲಿ ನಿಲ್ಲಿಸಿದ ಮೊಟಾರ ಸೈಕಲ ನಂ. ಕೆ.ಎ.03 ಕೆ.ಹೆಚ್-0379 ಅ.ಕಿ 45,000/-ರೂ ನೇದ್ದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸಂಚಾರಿ ಪೊಲೀಸ ಠಾಣೆ-02 :- ದಿನಾಂಕ: 11-03-2023 ರಂದು ಸಾಯಂಕಾಲ 5:15 ಗಂಟೆಗೆ ಖಾಸಗಿ ಕ್ಯೂಪಿ ಆಸ್ಪತ್ರೆ ಸಿಬ್ಬಂದಿಯವರು ಠಾಣೆಗೆ ಫೋನ ಮಾಡಿ ಅಬ್ದೂಲ ಅಜೀಜ್ ಪಟೇಲ್ ಇವರು ರಸ್ತೆ ಅಪಘಾತ ಹೊಂದಿ ಉಪಚಾರ ಕುರಿತು ಬಂದು ಸೇರಿಕೆ ಆಗಿರುತ್ತಾರೆ ಅಂತಾ ತಿಳಿಸಿದ್ದರಿಂದ ನಾನು ಆಸ್ಪತ್ರೆಗೆ ಭೇಟಿಕೊಟ್ಟು ಗಾಯಾಳು ಅಬ್ದೂಲ ಅಜೀಜ್ ಪಟೇಲ್ ಈತನಿಗೆ ವಿಚಾರಿಸಲು ಅವರು ಉಪಚಾರದಲ್ಲಿದ್ದು, ಅವರ ಜೊತೆಯಲ್ಲಿದ್ದ ಅವರ ಅಣ್ಣ ಅಬ್ದೂಲ ರಹೆಮಾನ ಪಟೇಲ್ ಇವರನ್ನು ವಿಚಾರಿಸಲು ಸದರಿಯವರು ಸಾಯಂಕಾಲ 6.00 ಗಂಟೆಗೆ ಕನ್ನಡಲದಲ್ಲಿ ಟೈಪ ಮಾಡಿಸಿದ ದೂರು ಅರ್ಜಿಯನ್ನು ಹಾಜರುಪಡಿಸಿದ್ದರ ಸಾರಾಂಶವೆನೆಂದರೆ, ನನ್ನ ತಂದೆ ತಾಯಿಯವರಿಗೆ ನಾವಿಬ್ಬರೂ ಗಂಡು ಮಕ್ಕಳಿದ್ದು ನನ್ನ ತಮ್ಮ ಅಬ್ದುಲ ಅಜೀಜ ಪಟೇಲ ಇತನು ವಿದ್ಯಾಬ್ಯಾಸ ಮಾಡಿಕೊಂಡು ಇರುತ್ತಾನೆ. ದಿನಾಂಕ: 11-03-2023 ರಂದು ಮದ್ಯಾಹ್ನ ನಾನು ಮನೆಯಲ್ಲಿರುವಾಗ ನನ್ನ ತಮ್ಮ ಅಬ್ದುಲ ಅಜೀಜ ಪಟೇಲ ಇತನು ಕೇಂದ್ರ ಬಸ್ಸ ನಿಲ್ದಾಣ ಹತ್ತೀರ ತನ್ನ ಗೆಳೆಯರಿಗೆ ಭೇಟಿಯಾಗಿ ಬರುತ್ತೆನೆ ಅಂತಾ ಮೋಟಾರ ಸೈಕಲ ನಂಬರ ಕೆಎ-32/ಇಜೆಡ್-3989 ನೇದ್ದನ್ನು ಚಲಾಯಿಸಿಕೊಂಡು ಹೋದನು. ಮದ್ಯಾಹ್ನ ನನ್ನ ಗೆಳೆಯ ಶೇಖ ಆಶೀಪ ತಂದೆ ಶೇಖ ಮಹಿಬೂಬ ಇವರು ನನಗೆ ಪೋನ ಮಾಡಿ ನಾನು ಮತ್ತು ನನ್ನ ಗೆಳೆಯ ಸಯ್ಯದ ಮೊಯೀನ ಫೈಸಲ ತಂದೆ ಸಯ್ಯದ ಅಫಜಲ ಹುಸೇನ ಇಬ್ಬರೂ ಹೀರಾಪೂರ ಕ್ರಾಸ ಮತ್ತು ಆಳಂದ ಸರ್ಕಲ ಮದ್ಯದಲ್ಲಿ ಬರುವ ಕ್ಯೂ.ಪಿ. ಆಸ್ಪತ್ರೆ ಹತ್ತೀರ ಇರುವಾಗ ಹೀರಾಪೂರ ಕ್ರಾಸ ಕಡೆಯಿಂದ ಒಂದು ಸಿಟಿ ಬಸ್ಸ ಬಂದು ಪ್ರಯಾಣಿಕರನ್ನು ಇಳಿಸುವ ಸಂಬಂದ ಕ್ಯೂ.ಪಿ ಆಸ್ಪತ್ರೆ ಎದುರುಗಡೆ ನಿಲ್ಲಿಸಿದಾಗ ನಿಮ್ಮ ತಂದೆ ಅಬ್ದುಲ ಅಜೀಜ ಪಟೇಲ ಇತನು ಹೀರಾಪೂರ ರಿಂಗ ರೋಡ ಕಡೆಯಿಂದ ನಿಮ್ಮ ಮನೆಯ ಕಡೆಗೆ ಹೋಗುವ ಕುರಿತು ತನ್ನ ಮೋಟಾರ ಸೈಕಲ ಚಲಾಯಿಸಿಕೊಂಡು ಬಂದು ಕ್ಯೂ.ಪಿ ಆಸ್ಪತ್ರೆ ಎದುರುಗಡೆ ನಿಲ್ಲಿಸಿದ ಸಿಟಿ ಬಸ್ಸಿ ನಂಬರ ಕೆಎ-36/ಎಫ್-602 ನೇದ್ದರ ಹಿಂದುಗಡೆ ಟಚ್ ಮಾಡಿ ತನ್ನ ಮೋಟಾರ ಸೈಕಲದೊಂದಿಗೆ ಕೆಳಗಡೆ ರೋಡ ಮೇಲೆ ಬಿದ್ದಾಗ ಬಸ್ಸ ನಂಬರ ಕೆಎ-32/ಎಫ್-2470 ನೇದ್ದರ ಚಾಲಕ ಹೀರಾಪೂರ ರಿಂಗ ರೋಡ ಕಡೆಯಿಂದ ಆಳಂದ ಕಡೆಗೆ ಹೋಗುವ ಕುರಿತು ತನ್ನ ಬಸ್ಸನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಿಮ್ಮ ತಮ್ಮನ್ನಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿರುತ್ತಾನೆ. ಸದರಿ ಘಟನೆ ಜರುಗಿದಾಗ ಮದ್ಯಾಹ್ನ ಅಂದಾಜು 1-00 ಗಂಟೆ ಸಮಯವಾಗಿತ್ತು. ನಿಮ್ಮ ತಮ್ಮನಿಗೆ ಭಾರಿ ಪೆಟ್ಟು ಬಿದ್ದಿರುತ್ತದೆ. ಆತನಿಗೆ ಕ್ಯೂ.ಪಿ ಆಸ್ಪತ್ರೆಗೆ ತಗೆದುಕೊಂಡು ಬಂದಿರುತ್ತೇವೆ ಅಂತಾ ತಿಳಿಸಿದ್ದರಿಂದ ನಾನು ಅಪಘಾತ ಸ್ಥಳವು ಸಮೀಪ ಇರುವದರಿಂದ ಅಲ್ಲಿಗೆ ಹೋಗಿ ನೋಡಲು ನನ್ನ ತಮ್ಮನಿಗೆ ಅಪಘಾತ ಪಡಿಸಿದ ಬಸ್ಸ ನಂಬರ ಕೆಎ-32/ಎಫ್-2470 ನೇದ್ದು ಇದ್ದಿತ್ತು. ಸಿಟಿ ಬಸ್ಸ ಕೂಡಾ ಇದ್ದು ಅದರ ನಂಬರ ಕೆಎ-36/ಎಫ್-602 ಇದ್ದಿತ್ತು. ನಮ್ಮ ಮೋಟಾರ ಸೈಕಲ ನಂಬರ ಕೆಎ-32/ಇಜೆಡ್-3989 ಕೂಡಾ ಇದ್ದಿತ್ತು. ಅಪಘಾತ ಪಡಿಸಿದ ಬಸ್ಸ ಚಾಲಕನ ಹೆಸರು ಗುರುನಾಥ ಅಂತಾ ಸಿಟಿ ಬಸ್ಸ ಚಾಲಕನ ಹೆಸರು ಚಂದ್ರಕಾಂತ ಅಂತಾ ಕಂಡೆಕ್ಟರ ಹೆಸರು ಅಶೋಕ ಅಂತಾ ಗೋತ್ತಾಯಿತು. ನಾನು ಕ್ಯೂ.ಪಿ ಆಸ್ಪತ್ರೆ ಒಳಗಡೆ ಹೋಗಿ ನನ್ನ ತಮ್ಮನಿಗೆ ನೋಡಲು ಆತನ ಬಲ ತೋಡೆಗೆ ಭಾರಿ ರಕ್ತಗಾಯ ಎಡಗಾಲು ಮೊಳಕಾಲಿಗೆ ಭಾರಿ ರಕ್ತಗಾಯ ಹಾಗೂ ಬಲಗಾಲು ರಿಸ್ಟ ಹತ್ತೀರ ರಕ್ತಗಾಯವಾಗಿತ್ತು ಆತನು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ. ಅಪಘಾತ ಮಾಡಿ ಆತನಿಗೆ ಭಾರಿಗಾಯಗೊಳಿಸಿದ್ದವನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಫಿರ್ಯಾದಿ ಕೊಟ್ಟ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 12-03-2023 12:15 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080